Search
  • Follow NativePlanet
Share
» »ಧಾರ್ಮಿಕ, ಸಾ೦ಸ್ಕೃತಿಕ, ಹಾಗೂ ಪ್ರಕೃತಿ ವೈಭವಗಳ ತ್ರಿವೇಣಿ ಸ೦ಗಮ - "ನಾಮ್ಚಿ"

ಧಾರ್ಮಿಕ, ಸಾ೦ಸ್ಕೃತಿಕ, ಹಾಗೂ ಪ್ರಕೃತಿ ವೈಭವಗಳ ತ್ರಿವೇಣಿ ಸ೦ಗಮ - "ನಾಮ್ಚಿ"

"ನಾಮ್ಚಿ" ಈ ಪದದ ಭಾವಾನುವಾದವು "ಮುಗಿಲೆತ್ತರ" ಎ೦ದಾಗಿದ್ದು, ನಾಮ್ಚಿಯ ಬೌಗೋಳಿಕ ಔನ್ನತ್ಯಕ್ಕೆ ಧನ್ಯವಾದಗಳನ್ನರ್ಪಿಸಲೇಬೇಕೆ೦ದೆನಿಸುತ್ತದೆ. ಬನ್ನಿ ಇದರ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ತಿಳಿದುಕೊಳ್ಳೋಣ.

By Gururaja Achar

ಸಮುದ್ರಪಾತಳಿಯಿ೦ದ 5500 ಅಡಿಗಳಷ್ಟು ಎತ್ತರದಲ್ಲಿರುವ ನಾಮ್ಚಿಯು ಸಿಕ್ಕಿ೦ ರಾಜ್ಯದ ಸಾ೦ಸ್ಕೃತಿಕ ರಾಜಧಾನಿಯೆ೦ದೇ ಪರಿಗಣಿತವಾಗಿದೆ ಹಾಗೂ ಸಿಕ್ಕಿ೦ ರಾಜ್ಯದಲ್ಲಿಯೇ ಅತ್ಯ೦ತ ವೇಗವಾಗಿ ಅಭಿವೃದ್ಧಿಗೊಳ್ಳುತ್ತಿರುವ ಸ್ಥಳಗಳ ಪೈಕಿ ಒ೦ದಾಗಿರುತ್ತದೆ. ಸಿಕ್ಕಿ೦ ರಾಜ್ಯದ ಧಾರ್ಮಿಕ ಹಾಗೂ ಸಾ೦ಸ್ಕೃತಿಕ ಪ್ರವಾಸೋದ್ಯಮದ ಕೇ೦ದ್ರಸ್ಥಾನವಾಗಿ ರೂಪುಗೊಳ್ಳುವ ನಿಟ್ಟಿನಲ್ಲಿ ನಾಮ್ಚಿಯು ಸರ್ವತೋಮುಖ ಅಭಿವೃದ್ಧಿಯನ್ನು ಸಾಧಿಸಿದೆ.

"ನಾಮ್ಚಿ " ಈ ಪದದ ಭಾವಾನುವಾದವು "ಮುಗಿಲೆತ್ತರ" ಎ೦ದಾಗಿದ್ದು, ನಾಮ್ಚಿಯ ಬೌಗೋಳಿಕ ಔನ್ನತ್ಯಕ್ಕೆ ನ್ಯವಾದಗಳನ್ನರ್ಪಿಸಲೇಬೇಕೆ೦ದೆನಿಸುತ್ತದೆ. ನಾಮ್ಚಿಯು ಸಿಕ್ಕಿ೦ ರಾಜ್ಯದ ದಕ್ಷಿಣ ಭಾಗದ ಜಿಲ್ಲೆಗಳ ಜಧಾನಿಯಾಗಿರುತ್ತದೆ. ನಾಮ್ಚಿಯಲ್ಲಿ ಪ್ರವಾಸಿಗರು ಚಾರ್ಧಾಮ್ ನ ಪ್ರತಿರೂಪವನ್ನು ಸ೦ದರ್ಶಿಸಬಹುದು ಹಾಗೂ ಗುರು ಪದ್ಮಸ೦ಭವ ಅವರ ಅತೀ ಎತ್ತರದ
ಪ್ರತಿಮೆಯನ್ನೂ ಕಾಣಬಹುದು.

ನಾಮ್ಚಿಯು ಕಣ್ಮನ ಸೆಳೆಯುವ ಪ್ರಕೃತಿಯ ಮಡಿಲಿನಲ್ಲಿರುವ ಸ್ಥಳವಾಗಿದ್ದು, ನಾಮ್ಚಿಯಿ೦ ಕಾ೦ಚೆನ್ಜು೦ಗಾ ಶ್ರೇಣಿಗಳ ಉನ್ಮತ್ತಗೊಳಿಸುವ ನೋಟ ಹಾಗೂ ರಾ೦ಗಿಟ್ ಕಣಿವೆಯ ನಯನಮನೋಹರ
ದೃಶ್ಯವನ್ನು ಸವಿಯಬಹುದು.

ನಮ್ಚಿಗೆ ಭೇಟಿ ನೀಡಲು ಅತೀ ಪ್ರಶಸ್ತವಾದ ಕಾಲಾವಧಿ:

ನಮ್ಚಿಗೆ ಭೇಟಿ ನೀಡಲು ಅತೀ ಪ್ರಶಸ್ತವಾದ ಕಾಲಾವಧಿ:

ನಾಮ್ಚಿಯು ವರ್ಷವಿಡೀ ಭೇಟಿ ನೀಡಬಹುದಾದ ಸಿಕ್ಕಿ೦ ರಾಜ್ಯಕ್ಕೆ ಸೇರಿರುವ ಪ್ರವಾಸೀ ತಾಣವಾಗಿದೆ. ಆದಾಗ್ಯೂ, ಪ್ರವಾಸಿಗರು ಮಾರ್ಚ್ ತಿ೦ಗಳಿನಿ೦ದ ಅಕ್ಟೋಬರ್ ತಿ೦ಗಳುಗಳ ಅವಧಿಯಲ್ಲಿ ಗರಿಷ್ಟ ಸ೦ಖ್ಯೆಯಲ್ಲಿ ನಮ್ಚಿಗೆ ಭೇಟಿ ನೀಡುತ್ತಾರೆ.

PC : Abhihshek Paul
ನಾಮ್ಚಿಯ ಕುರಿತು ಮತ್ತಷ್ಟು ಮಾಹಿತಿ:

ನಾಮ್ಚಿಯ ಕುರಿತು ಮತ್ತಷ್ಟು ಮಾಹಿತಿ:

ನಾಮ್ಚಿಯು ಧಾರ್ಮಿಕ ಕೇ೦ದ್ರ ಹಾಗೂ ಜೊತೆಗೆ ಪ್ರಾಕೃತಿಕ ವಿಸ್ಮಯ ಮತ್ತು ಸಮೃದ್ಧ ಜೀವವೈವಿಧ್ಯಗಳ ಸ೦ಗಮಸ್ಥಾನವಾಗಿದ್ದು, ಪ್ರವಾಸಿಗರ ನಿರ೦ತರವಾಗಿ ಕೈಬೀಸಿ ಕರೆಯುವ ಸ್ಥಳವಾಗಿದೆ.

PC : kinzong bhutia

ನಾಮ್ಚಿಯ ಬಗ್ಗೆ ಇನ್ನಷ್ಟು ಮಾಹಿತಿ..

ನಾಮ್ಚಿಯ ಬಗ್ಗೆ ಇನ್ನಷ್ಟು ಮಾಹಿತಿ..

ಇದರೊ೦ದಿಗೆ ನಾಮ್ಚಿಯ ಮತ್ತೊ೦ದು ಪ್ರಮುಖ ಆಕರ್ಷಣೆಯೆ೦ದರೆ ರಾ೦ಗಿಟ್
ಕಣಿವೆ ಹಾಗೂ ಜಗತ್ತಿನ ಮೂರನೆಯ ಅತೀ ಎತ್ತರವಾದ ಕಾ೦ಚೆನ್ಜು೦ಗಾ ಪರ್ವತ ಶ್ರೇಣಿಗಳ ಸಾಟಿಯಿಲ್ಲದ, ಅದ್ಭುತ ದೃಶ್ಯಾವಳಿಗಳಾಗಿರುತ್ತವೆ. ಈ ಪ್ರಾಕೃತಿಕ ವಿಸ್ಮಯಗಳಿಗೆ ಮತ್ತೊ೦ದು ಆಕರ್ಷಕ ಸೇರ್ಪಡೆ ಯಾವುದೆ೦ದರೆ ಅದು ನಾಮ್ಚಿಯ ಜನಪದ.

PC : Stefan Krasowski

ನಾಮ್ಚಿಯ ಬಗ್ಗೆ ಇನ್ನಷ್ಟು ಮಾಹಿತಿ..

ನಾಮ್ಚಿಯ ಬಗ್ಗೆ ಇನ್ನಷ್ಟು ಮಾಹಿತಿ..

ಇಲ್ಲಿನ ಸ್ಥಳೀಯರ ಸಾಮಾನ್ಯ ನ೦ಬಿಕೆಯೊ೦ದರ ಪ್ರಕಾರ ನಾಮ್ಚಿಯಲ್ಲಿ ಪೆಂಡೆ ಒಂಗ್ಮೊ ಎ೦ಬ ಹೆಸರಿನ ಕುತ೦ತ್ರಿ ರಾಜಕುಮಾರಿಯ ಪ್ರೇತಾತ್ಮವು ಆಗಾಗ್ಗೆ ಇ೦ದಿಗೂ ಕಾಣಿಸಿಕೊಳ್ಳುತ್ತದೆ. ಈ ರಾಜಕುಮಾರಿಯು ಪ್ರಾಚೀನ ಸಿಕ್ಕಿ೦ ನ ಸನ್ಯಾಸಿಯೋರ್ವನಿಗೆ ಚೊಗ್ಯಲ್ ವಿಷವುಣಿಸಿ ಕೊಲೆಗೈಯ್ಯಲು ಯತ್ನಿಸಿದ ಅಪರಾಧಕ್ಕಾಗಿ ಆಕೆಯು ನ್ಯಾಯಾಲಯಕ್ಕೆ ಹಾಜರುಗೊಳಿಸಲ್ಪಟ್ಟಿದ್ದಳು.

PC : Stefan Krasowski

ಸ್ಥಳೀಯ ನ೦ಬಿಕೆಯ ಪ್ರಕಾರ, ಪದ್ಮಸ೦ಭವ ಗುರುಗಳ ಪ್ರತಿಮೆಗೆ

ಸ್ಥಳೀಯ ನ೦ಬಿಕೆಯ ಪ್ರಕಾರ, ಪದ್ಮಸ೦ಭವ ಗುರುಗಳ ಪ್ರತಿಮೆಗೆ

ಪ್ರಸಿದ್ಧವಾಗಿರುವ ಸಂದೃಪ್ಸೆ ಗಿರಿಯು ಒ೦ದು ಸುಪ್ತ ಜ್ವಾಲಾಮುಖಿಯಾಗಿರುತ್ತದೆ.
ಜ್ವಾಲಾಮುಖಿಯನ್ನು ಹೀಗೆ ಸುಪ್ತ ಸ್ಥಿತಿಯಲ್ಲಿರಿಸಲು ಕಾರಣೀಭೂತವಾಗಿರುವ ಬೌದ್ಧ ಸನ್ಯಾಸಿಗಳ ಪ್ರಾರ್ಥನೆಗಳಿಗೆ ಕೃತಜ್ಞರಾಗಿರಬೇಕಾಗುತ್ತದೆ. ಈ ಬೌದ್ಧ ಸನ್ಯಾಸಿಗಳು ಚಾರಣದ ಮೂಲಕ ಪ್ರತಿದಿನವೂ ಈ ಗಿರಿಯನ್ನು ತಲುಪಿ ಅಲ್ಲಿ ಧ್ಯಾನಮಗ್ನರಾಗುತ್ತಾರೆ.

PC : Stefan Krasowski

ಮತ್ತೊ೦ದು ಸ್ಥಳೀಯ ನ೦ಬಿಕೆಯ ಪ್ರಕಾರ..

ಮತ್ತೊ೦ದು ಸ್ಥಳೀಯ ನ೦ಬಿಕೆಯ ಪ್ರಕಾರ..

ರ೦ಗೀಟ್ ನದಿಯ ದಡದಲ್ಲಿ ಸಿಕಿಪ್ ಎ೦ಬ ಸ್ಥಳವಿದ್ದು, ಮೀನು ಹಿಡಿಯುವ ಹವ್ಯಾಸಿಗಳನ್ನು ಈ ಸ್ಥಳವು ಆಕರ್ಷಿಸುತ್ತದೆ. ಮಾತ್ರವಲ್ಲದೇ, ನಾಮ್ಚಿಯಿ೦ದ ಆರ೦ಭಿಸಿ ಟೆನ್ ಡಾ೦ಗ್ ನ ತನಕ ಸಾಗುವ ಚಾರಣ ಮಾರ್ಗಕ್ಕೆ ಸಿಕಿಪ್, ಮೂಲಾಶ್ರಯ ತಾಣವೆ೦ದು ಪರಿಗಣಿತವಾಗಿದೆ.
ಪರ್ವತಶ್ರೇಣಿಗಳ ಅಪ್ಯಾಯಮಾನವಾದ ಪ್ರಾಕೃತಿಕ ಸೌ೦ದರ್ಯಕ್ಕೆ ಟೆನ್ ಡಾ೦ಗ್ ಗಿರಿಪ್ರದೇಶವು ಜನಪ್ರಿಯವಾಗಿದೆ.

PC : genobz

ಸಂದೃಪ್ಸೆ

ಸಂದೃಪ್ಸೆ

ಭೂತಿಯಾ ಭಾಷೆಯಲ್ಲಿ ಹೇಳುವುದಾದರೆ ಸಂದೃಪ್ಸೆ ಎ೦ಬ ಪದದ ಭಾವಾನುವಾದವು "ಇಷ್ಟಾರ್ಥಗಳನ್ನು ಈಡೇರಿಸುವ ಗಿರಿ" ಎ೦ದಾಗುತ್ತದೆ. ಗುರು ಪದ್ಮಸ೦ಭವರ ಅದ್ವಿತೀಯವಾದ, ವಿಸ್ಮಯಕಾರಿ, ಹಾಗೂ ಬೃಹದಾಕಾರದ ಪ್ರತಿಮೆಗೆ ಸಂದೃಪ್ಸೆ ಗಿರಿಯು ಆಶ್ರಯತಾಣವಾಗಿದೆ.

PC : chitta.crb

ಸಂದೃಪ್ಸೆ

ಸಂದೃಪ್ಸೆ

ಗುರು ಪದ್ಮಸ೦ಭವರ ಪ್ರತಿಮೆಯು 135 ಅಡಿಗಳಷ್ಟು ಎತ್ತರವಿರುವ ಭವ್ಯವಾದ ಮೂರ್ತಿಯಾಗಿದೆ. ಜಗತ್ತಿನಲ್ಲಿಯೇ ಗುರು ಪದ್ಮಸ೦ಭವರ ಅತೀ ಎತ್ತರದ ಪ್ರತಿಮೆಯು ಇದಾಗಿರುತ್ತದೆ.
ಇಸವಿ 1997 ರ ಅಕ್ಟೋಬರ್ ತಿ೦ಗಳಿನಲ್ಲಿ ಪರಮಪೂಜ್ಯರಾದ ದಲಾಯಿ ಲಾಮಾ ಅವರು ಈ ಪ್ರತಿಮೆಯ ನಿರ್ಮಾಣಕ್ಕೆ ಅಡಿಗಲ್ಲನ್ನು ಹಾಕಿದ ಬಳಿಕ, ಈ ಪ್ರತಿಮೆಯ ನಿರ್ಮಾಣವು ಇಸವಿ 2004 ರಲ್ಲಿ ಪೂರ್ಣಗೊ೦ಡಿತು.

PC : dhillan chandramowli

ಚಾರ್ ಧಾಮ್

ಚಾರ್ ಧಾಮ್

ಯಾತ್ರಾರ್ಥಿಗಳ ಪಾಲಿಗೆ ಸಾಟಿಯಿಲ್ಲದ ಇಲ್ಲಿನ ಆಕರ್ಷಣೆ ಯಾವುದೆ೦ದರೆ ಅದು ಚಾರ್ ಧಾಮ್ ಸ೦ಕೀರ್ಣವಾಗಿರುತ್ತದೆ. ಈ ಕೇ೦ದ್ರಸ್ಥಾನದಲ್ಲಿ ಬದರೀನಾಥ, ಪುರಿ ಜಗನ್ನಾಥ, ದ್ವಾರಕೆಯ ದ್ವಾರಕಾಧೀಶ, ಹಾಗೂ ರಾಮೇಶ್ವರ೦ ದೇವಾಲಯಗಳ ತದ್ರೂಪು ದೇವಾಲಯಗಳಿವೆ. ಸೊಲೊಫೋಕ್ ಗಿರಿಯ
ಮೇಲೆ ಕುಳಿತ ಭ೦ಗಿಯಲ್ಲಿರುವ ಭಗವಾನ್ ಶಿವನ 87 ಅಡಿಗಳಷ್ಟು ಎತ್ತರದ ಮೂರ್ತಿಯ ಕೆಳಗಡೆ ಚಾರ್ ಧಾಮ್ ಇದೆ.

PC : Ankit Darsi

ಟೆಮಿ ಚಹಾ ತೋಟ

ಟೆಮಿ ಚಹಾ ತೋಟ

ಸಿಕ್ಕಿ೦ ರಾಜ್ಯದಲ್ಲಿರುವ ಏಕೈಕ ಚಹಾ ತೋಟವೆ೦ದರೆ ಅದು ಟೆಮಿ ಚಹಾ ತೋಟ. ನೂರಾ ಎಪ್ಪತ್ತೇಳು ಎಕರೆಗಳಷ್ಟು ವಿಸ್ತಾರವಾದ ಪ್ರದೇಶದಲ್ಲಿ ಹರಡಿಕೊ೦ಡಿರುವ ಈ ಚಹಾ ತೋಟವು ಮೈಮನ ಸೂರೆಗೊಳ್ಳುವ, ಸ್ವರ್ಗವೇ ಧರೆಗಿಳಿದಿದೆಯೆ೦ದೆನಿಸುವ, ರೋಚಕವಾದ ಪ್ರಾಕೃತಿಕ ದೃಶ್ಯವೈಭವವನ್ನು ಸವಿಯುವುದಕ್ಕೆ ಅವಕಾಶವನ್ನೀಯುತ್ತದೆ.

PC : Abhijit Kar Gupta

ಟೆಮಿ ಚಹಾ ತೋಟ

ಟೆಮಿ ಚಹಾ ತೋಟ

ಸಿಕ್ಕಿ೦ ರಾಜ್ಯದಿ೦ದ ಅ೦ತರಾಷ್ಟ್ರೀಯ ಮಾರುಕಟ್ಟೆಗಳಿಗೆ, ಉತ್ಕೃಷ್ಟ ಗುಣಮಟ್ಟವುಳ್ಳ, ಉತ್ತಮ ದರ್ಜೆಯ ಚಹಾವನ್ನು ಒದಗಿಸುವ ಏಕೈಕ ಚಹಾ ತೋಟವು ಟೆಮಿ ಚಹಾ ತೋಟವಾಗಿರುತ್ತದೆ.

PC : Martin Kosír

ಟೆನ್ಡಾ೦ಗ್ ಗಿರಿ

ಟೆನ್ಡಾ೦ಗ್ ಗಿರಿ

ತೌಲನಿಕವಾಗಿ ಚಿಕ್ಕದಾದ, ಸಮತಟ್ಟಾದ ಈ ಗಿರಿಯು 8530 ಅಡಿಗಳಷ್ಟು ಎತ್ತರದಲ್ಲಿದ್ದು, ದಟ್ಟವಾದ ಹಚ್ಚಹಸುರು ಅರಣ್ಯಪ್ರದೇಶದಿ೦ದ ಆವೃತವಾಗಿದೆ. ಬೌದ್ಧ ಲಾಮಾಗಳು ವಿಶ್ರಮಿಸುವುದಕ್ಕಾಗಿ ಸೂಕ್ತವೆನಿಸಿರುವ ಸ್ಥಳವು ಈ ಟೆನ್ ಡಾ೦ಗ್ ಗಿರಿಯಾಗಿರುತ್ತದೆ. ಈ ಗಿರಿಪರ್ವತದ ಪಕೃತಿವೈಭವದ ಮಡಿಲಿನಲ್ಲಿ ಲಾಮಾಗಳು ಧ್ಯಾನಾಸ್ಥರಾಗಿದ್ದುಕೊ೦ಡು ಹಲವಾರು
ವರ್ಷಗಳ ಕಾಲ ಕಳೆದಿದ್ದಾರೆ೦ದು ನ೦ಬಲಾಗಿದೆ.

PC : Atulkini

ಟೆನ್ಡಾ೦ಗ್ ಗಿರಿ

ಟೆನ್ಡಾ೦ಗ್ ಗಿರಿ

ದ೦ತಕಥೆಗಳ ಪ್ರಕಾರ, ಟೆನ್ಡಾ೦ಗ್ ಗಿರಿಪ್ರದೇಶವು ಲೆಪ್ಚಾ ಜನಾ೦ಗವನ್ನು ಪ್ರವಾಹದಿ೦ದ ಕೊಚ್ಚಿಹೋಗದ೦ತೆ ರಕ್ಷಿಸಿತ್ತು. ಆ ಸವಿನೆನಪಿಗಾಗಿ ಇ೦ದಿಗೂ ಕೂಡಾ ಲೆಪ್ಚಾ ಜನಾ೦ಗೀಯರು,ತಮ್ಮ ಸಮುದಾಯವನ್ನು ರಕ್ಷಿಸಿದ್ದಕ್ಕಾಗಿ ಟೆನ್ ಡಾ೦ಗ್ ಗಿರಿಪ್ರದೇಶಕ್ಕೆ ಆಗಮಿಸಿ, ಈ ಗಿರಿಶಿಖರಕ್ಕೆ ತಮ್ಮ ಗೌರವವನ್ನು ಸಲ್ಲಿಸುತ್ತಾರೆ.

PC : Anja Disseldorp

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X