Search
  • Follow NativePlanet
Share
» »ಹಿಮಾಚಲದಂಚಿನಲ್ಲಿರುವ ಲಾಮಾ ಭೂಮಿ

ಹಿಮಾಚಲದಂಚಿನಲ್ಲಿರುವ ಲಾಮಾ ಭೂಮಿ

By Vijay

ಹಿಮಾಚಲ ಪ್ರದೇಶ ರಾಜ್ಯವು ತನ್ನ ಪ್ರಕೃತಿ ಸೌಂದರ್ಯ ಅದರಲ್ಲೂ ವಿಶೇಷವಾಗಿ ದೇವದಾರು ಮರಗಳ ದಟ್ಟನೆಯ ಕಾಡುಗಳು, ಹಿಮಚ್ಛಾದಿತ ಪರ್ವತಗಳ ವಿಹಂಗಮ ನೋಟ, ತಾಜಾ ನೀರಿನ ಶುದ್ಧ ನದಿಗಳು, ವೈವಿಧ್ಯಮಯ ಜೀವ ಸಂಕುಲ, ಬಣ್ಣ ಬಣ್ಣದ ವಿಶಿಷ್ಟ ಪಕ್ಷಿಗಳು, ಹಸಿರಿನಿಂದಾವೃತವಾದ ಅಂಕು ಡೊಂಕಾದ ಸುಂದರ ಭೂಪ್ರದೇಶಗಳು, ಘಾಟ್ ರಸ್ತೆಗಳು ಮುಂತಾದವುಗಳಿಂದ ಕಂಗೊಳಿಸುತ್ತದೆ.

ಹಿಮಾಲಯ ಪರ್ವತಗಳ ಕೆಳ ಸ್ತರದಲ್ಲಿ ನೆಲೆಸಿರುವ ಹಿಮಾಚಲ ಪ್ರದೇಶ ರಾಜ್ಯವು ತನ್ನದೆ ಆದ ವಿಶಿಷ್ಟ ಸಂಸ್ಕೃತಿ ಹೊಂದಿದ್ದು, ಪ್ರವಾಸಿ ದೃಷ್ಟಿಯಿಂದ ಬಲು ಖ್ಯಾತಿ ಪಡೆದ ರಾಜ್ಯವಾಗಿದೆ. [ಹಿಮಾಚಲ ಪ್ರದೇಶ ರಾಜ್ಯದ ಸ್ಥಳಗಳು] ಪ್ರಸ್ತುತ ಲೇಖನವು ಈ ರಾಜ್ಯದಲ್ಲಿರುವ ಒಂದು ಪ್ರಮುಖ ಪ್ರದೇಶವಾದ ಧರ್ಮಶಾಲಾದ ಕುರಿತು ತಿಳಿಸುತ್ತದೆ. ಧರ್ಮಶಾಲೆಯು ಪ್ರವಾಸಿ ಪ್ರಖ್ಯಾತಿಯ ತಾಣವಾಗಿದ್ದು ರಾಜ್ಯದ ಕಂಗ್ರಾ ಜಿಲ್ಲೆಯಲ್ಲಿದೆ.

ಹೋಟೆಲ್ ಬುಕ್ ಮಾಡಿ - 50% ರಷ್ಟು ಕಡಿತ ಪಡೆಯಿರಿ, ತ್ವರೆ ಮಾಡಿ!

ಧರ್ಮಶಾಲೆಯ ಕುರಿತು ಆಸಕ್ತಿಕರ ವಿಷಯವೆಂದರೆ ಗಡಿಪಾರಾಗಿರುವ ಟಿಬೆಟ್ ಸರ್ಕಾರದ ಆಡಳಿತವು ಕಾರ್ಯ ನಿರ್ವಹಿಸುತ್ತಿರುವುದು ಇಲ್ಲಿಂದಲೆ ಎನ್ನುವುದು. ಅಲ್ಲದೆ ಇಲ್ಲಿನ ಮ್ಯಾಕ್ ಲಿಯೋಡ್ ಗಂಜ್ ನಲ್ಲಿ ಬೌದ್ಧ ಧರ್ಮ ಗುರುಗಳಾದ ದಲೈ ಲಾಮಾ ಅವರ ನಿವಾಸವಿರುವುದನ್ನು ಕಾಣಬಹುದಾಗಿದೆ. ಆದ್ದರಿಂದ ಈ ಸ್ಥಳವನ್ನು "ಲಾಮಾಗಳ ಭೂಮಿ" ಎಂದೂ ಸಂಭೋದಿಸಲಾಗುತ್ತದೆ.

ಧರ್ಮಶಾಲಾ:

ಧರ್ಮಶಾಲಾ:

ಧರ್ಮಶಾಲೆಯು ಕಂಗ್ರಾ ಕಣಿವೆಯ [ರುದ್ರ ರಮಣೀಯ ಕಂಗ್ರಾ ಕೋಟೆ] ಮೇಲ್ಭಾಗದಲ್ಲಿ ನಿರ್ಮಾಣಗೊಂಡಿದೆ. ಧರ್ಮಶಾಲೆಯ ಸುತ್ತ ಮುತ್ತಲು ರಮಣೀಯವಾದ ಪರ್ವತ ಶ್ರೇಣಿಗಳು ದಟ್ಟವಾಗಿ ಬೆಳೆದು ನಿಂತಿರುವ ಮರಗಳ ಕಾಡು ಪ್ರದೇಶಗಳನ್ನು ಕಾಣಬಹುದಾಗಿದೆ.

ಚಿತ್ರಕೃಪೆ: Lisa Tully

ಧರ್ಮಶಾಲಾ:

ಧರ್ಮಶಾಲಾ:

ಇಲ್ಲಿನ ಕಾಡು ಪ್ರದೇಶಗಳಲ್ಲಿ ಪ್ರಮುಖವಾಗಿ ದೇವದಾರು ಮರಗಳನ್ನು ನೋಡಬಹುದು. ದೇವದಾರು ಮರಗಳು ಒಂದು ವಿಶಿಷ್ಟ ರೀತಿಯ ಮರಗಳಾಗಿದ್ದು ಯಾವಾಗಲೂ ಹಸಿರಿನಿಂದ ಕಂಗೊಳಿಸುತ್ತವೆ. ಇವು ಇತರೆ ಮರಗಳಂತೆ ಅಗಲವಾದ ಕೊಂಬೆ ರೆಂಬೆಗಳನ್ನು ಹೊಂದಿರದೆ ಎತ್ತರವಾಗಿ ಬೆಳೆಯುತ್ತವೆ. ಸಾಮಾನ್ಯವಾಗಿ ಇವುಗಳ ಎತ್ತರ 130 ರಿಂದ 150 ಅಡಿಗಳಷ್ಟು.

ಚಿತ್ರಕೃಪೆ: Paul Evans

ಧರ್ಮಶಾಲಾ:

ಧರ್ಮಶಾಲಾ:

ಧರ್ಮಶಾಲೆಯು ಮ್ಯಾಕ್ ಲಿಯೋಡ್ ಗಂಜ್, ಧರ್ಮಕೋಟ್, ಬಗ್ಸುನಾಥ, ನಡ್ಡಿ, ಫಾರ್ಸಿತ್ ಗಂಜ್, ಕೊತ್ವಾಲಿ ಬಜಾರ್ (ಪ್ರದೇಶದ ಮುಖ್ಯ ಮಾರುಕಟ್ಟೆ), ಕಚೇರಿ ಅಡ್ಡಾ (ವಿವಿಧ ಆಡಳಿತಾತ್ಮಕ ಕಚೇರಿಗಳಿರುವ ಸ್ಥಳ), ದರಿ, ರಾಮನಗರ, ಸಿಧ್ಪುರ್ ಮುಂತಾದ ಉಪನಗರಗಳನ್ನು ಹೊಂದಿದೆ.

ಚಿತ್ರಕೃಪೆ: Incredible India!

ಧರ್ಮಶಾಲಾ:

ಧರ್ಮಶಾಲಾ:

ಧರ್ಮಶಾಲೆಯ ಮೇಲ್ಭಾಗದಲ್ಲಿ ನೆಲೆಸಿರುವ ಮ್ಯಾಕ್ ಲಿಯೋಡ್ ಗಂಜ್ ಜನಪ್ರೀಯ ಹಾಗೂ ಹೆಸರುವಾಸಿಯಾದ ಸ್ಥಳವಾಗಿದೆ. ಇಲ್ಲಿ ಬೌದ್ಧ ಧರ್ಮ ಗುರುಗಳಾದ ದಲೈ ಲಾಮಾ ಅವರ ನಿವಾಸವಿರುವುದೆ ಇದಕ್ಕೆ ಪ್ರಮುಖ ಕಾರಣ. ಅಲ್ಲದೆ ಇಲ್ಲಿನ ವಾತಾವರಣವು ಅಹ್ಲಾದಕರವಾಗಿದ್ದು ಹಿತಕರವಾದ ಅನುಭವ ನೀಡುತ್ತದೆ.

ಚಿತ್ರಕೃಪೆ: sanyam sharma

ಧರ್ಮಶಾಲಾ:

ಧರ್ಮಶಾಲಾ:

ಟಿಬೆಟ್ ದೇಶವು ಭಾವನಾತ್ಮಕವಾಗಿ ಧರ್ಮಶಾಲೆಯಲ್ಲೆ ನೆಲೆಸಿದೆ ಎಂದು ಹೇಳಬಹುದು. ಗಡಿಪಾರಾದ ಟಿಬೆಟ್ ದೇಶದ ಸಂಸ್ಕೃತಿಯನ್ನು ಧರ್ಮಶಾಲೆಯಲ್ಲಿ ಕಾಣಬಹುದಾಗಿದೆ. ಅಂತೆಯೆ ಇಲ್ಲಿ ಆಕರ್ಷಕವಾಗಿ ನಿರ್ಮಿಸಲಾಗಿರುವ ಹಲವು ಬೌದ್ಧ ದೇವಾಲಯಗಳನ್ನು ಕಾಣಬಹುದಾಗಿದೆ.

ಚಿತ್ರಕೃಪೆ: DarkPrincess2k12

ಧರ್ಮಶಾಲಾ:

ಧರ್ಮಶಾಲಾ:

ಐತಿಹಾಸಿಕವಾಗಿ ಹಿಂದೆ ಧರ್ಮಶಾಲಾ ಹಾಗೂ ಸುತ್ತಮುತ್ತಲಿನ ಪ್ರದೇಶಗಳು ಕಟೋಚ ಸಾಮ್ರಾಜ್ಯದ ಅರಸ್ರಿಂದ ಆಳಲ್ಪಟ್ಟಿದ್ದವು. ಕಟೋಚ ರಾಜವಂಶವು ಇಂದಿಗೂ ಬದುಕಿರುವ ಜಗತ್ತಿನ ಪುರಾತನ ರಾಜವಂಶಗಳಲ್ಲಿ ಒಂದಾಗಿದೆ. ಕಟೋಚ ಸಾಮ್ರಾಜ್ಯದ ಕುರಿತು ಮಹಾಭಾರತದಲ್ಲೂ ಸಹ ಉಲ್ಲೇಖವಿದೆ. ಈ ವಂಶದ ರಾಜರು ದೂರ್ಯೋಧನನ ಪರವಾಗಿ ಯುದ್ಧ ಮಾಡಿದ್ದರು. [ರಾಮಾಯಣ ಮಹಾಭಾರತದ ಸ್ಥಳಗಳು]

ಚಿತ್ರಕೃಪೆ: sanyam sharma

ಧರ್ಮಶಾಲಾ:

ಧರ್ಮಶಾಲಾ:

ಧರ್ಮಶಾಲೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪ್ರಮುಖವಾಗಿ ನೆಲೆಸಿರುವವರು ಗಡ್ಡಿ ಜನಾಂಗದವರು. ಹಿಂದೂ ಧರ್ಮದವರಾದ ಇವರು ಬಹುವಾಗಿ ಅಲೆಮಾರಿ ವಂಶದವರು. ಅಲೆಮಾರಿ ವಂಶದವರಾಗಿದ್ದುದರಿಂದ ಸಾಕಷ್ಟು ಗಡ್ಡಿ ಜನರು ಬ್ರಿಟೀಷ್ ಆಡಳಿತದ ಸಮಯದಲ್ಲಿ ಗುರ್ಖಾ ಹಾಗೂ ಇತರೆ ಜನಗಳು ಬಂದು ನೆಲೆನಿಂತಿದ್ದರ ಪರಿಣಾಮ ತಮ್ಮ ಭೂಮಿಗಳನ್ನು ಕಳೆದುಕೊಂಡರು.

ಚಿತ್ರಕೃಪೆ: Jonathaneo

ಧರ್ಮಶಾಲಾ:

ಧರ್ಮಶಾಲಾ:

1905 ರಲ್ಲಿ ಉಂಟಾದ ಕಂಗ್ರಾ ಪ್ರಬಲ ಭೂಕಂಪನದಲ್ಲಿ ಸಾಕಷ್ಟು ಸಾವು ನೋವುಗಳು ಸಂಭವಿಸಿ ಧರ್ಮಾಶಾಲೆಯ ಬಹುತೇಕವಾಗಿ ಹಾನಿಗೊಳಗಾಗಿತ್ತು. ನಂತರ ಇಲ್ಲಿ ನೆಲೆಸಿದ್ದ ಗುರ್ಖಾ ಜನರ ಕಡು ಪರಿಶ್ರಮದಿಂದ ಮತ್ತೆ ನೂತನ ಧರ್ಮಶಾಲೆಯ ನೀರ್ಮಾಣವಾಯಿತೆಂದು ಹೇಳಬಹುದು.

ಚಿತ್ರಕೃಪೆ: Sunil MS

ಧರ್ಮಶಾಲಾ:

ಧರ್ಮಶಾಲಾ:

ಇಲ್ಲಿನ ಗುರ್ಖಾ ಜನರ ಭಾರತ ದೇಶಕ್ಕೆ ಅಪಾರವಾಗಿದೆ. ಕೇವಲ ದೇಶದ ಸೈನ್ಯಕ್ಕೆ ಇವರ ಕೊಡುಗೆ ಸೀಮಿತವಾಗಿರದೆ, ಸ್ವಾತಂತ್ರ್ಯ ಹೋರಾಟಗಾರರೂ ಹೌದು. ನೇತಾಜಿ ಸುಭಾಸ್ ಚಂದ್ರ ಬೋಸ್ ಅವರ ಇಂಡಿಯನ್ ನ್ಯಾಷನಲ್ ಆರ್ಮಿಯಲ್ಲಿ ಸೇರ್ಪಡೆಗೊಂಡಿದ್ದರು ಗುರ್ಖಾಗಳು.

ಚಿತ್ರಕೃಪೆ: Ekabhishek

ಧರ್ಮಶಾಲಾ:

ಧರ್ಮಶಾಲಾ:

ಟಿಬೆಟ್ ದೇಶದ ಅವನತಿಯ ನಂತರ ಅಲ್ಲಿನ ಸಾಕಷ್ಟು ಜನರು ಇಂದು ಧರ್ಮಶಾಲೆಯಲ್ಲಿ ನೆಲೆಸಿದ್ದಾರೆ. ಇವರಿಂದ ಹಲವಾರು ಬೌದ್ಧ ಮಠಗಳು, ದೇವಾಲಯಗಳು, ಶಾಲೆಗಳ ನಿರ್ಮಾಣವಾಗಿದೆ. ಒಮ್ಮೊಮ್ಮೆ ಈ ಪ್ರದೇಶವನ್ನು ಲಿಟಲ್ ಲಾಸಾ ಎಂದೂ ಸಹ ಕರೆಯಲಾಗುತ್ತದೆ. ಲಾಸಾ ಟಿಬೆಟ್ ದೇಶದ ರಾಜಧಾನಿಯ ಹೆಸರು.

ಚಿತ್ರಕೃಪೆ: Ekabhishek

ಧರ್ಮಶಾಲಾ:

ಧರ್ಮಶಾಲಾ:

ಈ ಸ್ಥಳಕ್ಕೆ ಭೇಟಿ ನೀಡಿದಾಗ ಮೆಕ್ ಲಿಯೋಡ್ ಗಂಜ್ ಮಾರುಕಟ್ಟೆಯಲ್ಲಿ ಸುಂದರವಾದ ಟಿಬೆಟಿಯನ್ ಕರಕುಶಲ ವಸ್ತುಗಳು, ಉಡುಪುಗಳು, ಮತ್ತು ಇನ್ನೂ ಅನೇಕ ವಸ್ತುಗಳೂ ಸೇರಿದಂತೆ ಸ್ಥಳೀಯ ಚಿರಸ್ಮರಣೀಯ ವಸ್ತುಗಳನ್ನು ಖರೀದಿಸಬಹುದು.

ಚಿತ್ರಕೃಪೆ: Rédacteur Tibet

ಧರ್ಮಶಾಲಾ:

ಧರ್ಮಶಾಲಾ:

ಈ ಪ್ರದೇಶಗಳಲ್ಲಿ ಹಲವಾರು ಚರ್ಚ್ ಗಳು, ದೇವಾಲಯಗಳು, ಮಸೀದಿಗಳು ಮತ್ತು ಧಾರ್ಮಿಕ ಮಂದಿರಗಳನ್ನು ಕಾಣಬಹುದು. ಅಲ್ಲದೇ ಅನೇಕ ಹಳೆಯ ದೇವಸ್ಥಾನಗಳಾದ ಜ್ವಾಲಾಮುಖಿ ದೇವಸ್ಥಾನ, ಬ್ರಿಜೇಶ್ವರಿ ದೇವಾಲಯ ಮತ್ತು ಚಾಮುಂಡ ದೇವಾಲಯಗಳು ದೊಡ್ಡ ಪ್ರಮಾಣದಲ್ಲಿ ಪ್ರವಾಸಿಗರನ್ನು ಆಕರ್ಷಿಸುತ್ತವೆ.

ಚಿತ್ರಕೃಪೆ: Gili Chupak

ಧರ್ಮಶಾಲಾ:

ಧರ್ಮಶಾಲಾ:

ಇತರ ಪ್ರಮುಖ ಪ್ರವಾಸಿ ತಾಣಗಳೆಂದರೆ ಕಾಂಗ್ರಾ ಆರ್ಟ್ ಮ್ಯೂಸಿಯಂ, ಸೇಂಟ್ ಜಾನ್ ಚರ್ಚ್, ಮತ್ತು ಯುದ್ಧ ಸ್ಮಾರಕ ಮೊದಲಾದವುಗಳು. ಇವುಗಳ ಜೊತೆಗೆ, ಕೋಟ್ವಾಲಿ ಬಜಾರ್, ಇಲ್ಲಿನ ಒಂದು ಪ್ರಖ್ಯಾತ ಶಾಪಿಂಗ್ ಕೇಂದ್ರವಾಗಿದ್ದು ಅನೇಕ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಇವಿಷ್ಟೇ ಅಲ್ಲದೇ ಚಹಾ ತೋಟಗಳು, ಪೈನ್ (ಪೀತದಾರು) ಅರಣ್ಯಗಳು ಮತ್ತು ದೇವದಾರು ಮರಗಳು ಧರ್ಮಶಾಲಾದ ಮತ್ತಷ್ಟು ಆಕರ್ಷಣೆಗಳೆನಿಸಿವೆ.

ಚಿತ್ರಕೃಪೆ: Rédacteur Tibet

ಧರ್ಮಶಾಲಾ:

ಧರ್ಮಶಾಲಾ:

ಕಾಂಗ್ರಾ ಕಣಿವೆಯಲ್ಲಿರುವ ಗಗ್ಗಲ್ ವಿಮಾನ ನಿಲ್ದಾಣ ಧರ್ಮಶಾಲಾದಿಂದ ಸುಮಾರು 15 ಕಿಮೀ ದೂರದಲ್ಲಿದ್ದು, ಧರ್ಮಶಾಲಾಕ್ಕೆ ಹತ್ತಿರದ ವಾಯುನೆಲೆ ಎನಿಸಿದೆ. ಧರ್ಮಶಾಲಾದಿಂದ 85 ಕೀ.ಮಿ ಅಂತರದಲ್ಲಿರುವ ಪಠಾನ್ಕೋಟ್ ರೈಲು ನಿಲ್ದಾಣವು ಪ್ರಯಾಣಿಕರಿಗೆ ಇನ್ನೊಂದು ಹತ್ತಿರದ ನಿಲ್ದಾಣವಾಗಿದೆ. ಈ ನಿಲ್ದಾಣವು ಭಾರತದ ಎಲ್ಲಾ ಪ್ರಮುಖ ಪಟ್ಟಣಗಳನ್ನು ಈ ಮೂಲಕ ಸಂಪರ್ಕಿಸುತ್ತದೆ.

ಧರ್ಮಶಾಲಾ:

ಧರ್ಮಶಾಲಾ:

ಧರ್ಮಶಾಲಾದಲ್ಲಿರುವ ದಾಲ್ ಸರೋವರ. ಸ್ಥಳೀಯರಿಂದ ಈ ಸರೋವರವು ಪವಿತ್ರವಾದ ಸರೋವರವೆಂದು ಪೂಜಿಸಲ್ಪಡುತ್ತದೆ.

ಚಿತ್ರಕೃಪೆ: Sunil MS

ಧರ್ಮಶಾಲಾ:

ಧರ್ಮಶಾಲಾ:

ಧರ್ಮಶಾಲಾದ ಸೌಂದರ್ಯ ಅನಾವರಣಗೊಳಿಸುವ ಸುಂದರ ಚಿತ್ರಗಳು.

ಚಿತ್ರಕೃಪೆ: Sunil MS

ಧರ್ಮಶಾಲಾ:

ಧರ್ಮಶಾಲಾ:

ಧರ್ಮಶಾಲಾದ ಸೌಂದರ್ಯ ಅನಾವರಣಗೊಳಿಸುವ ಸುಂದರ ಚಿತ್ರಗಳು.

ಚಿತ್ರಕೃಪೆ: Sunil MS

ಧರ್ಮಶಾಲಾ:

ಧರ್ಮಶಾಲಾ:

ಧರ್ಮಶಾಲಾದ ಸೌಂದರ್ಯ ಅನಾವರಣಗೊಳಿಸುವ ಸುಂದರ ಚಿತ್ರಗಳು.

ಚಿತ್ರಕೃಪೆ: Sunil MS

ಧರ್ಮಶಾಲಾ:

ಧರ್ಮಶಾಲಾ:

ಧರ್ಮಶಾಲಾದ ಸೌಂದರ್ಯ ಅನಾವರಣಗೊಳಿಸುವ ಸುಂದರ ಚಿತ್ರಗಳು.

ಚಿತ್ರಕೃಪೆ: Sunil MS

ಧರ್ಮಶಾಲಾ:

ಧರ್ಮಶಾಲಾ:

ಧರ್ಮಶಾಲಾದ ಸೌಂದರ್ಯ ಅನಾವರಣಗೊಳಿಸುವ ಸುಂದರ ಚಿತ್ರಗಳು.

ಚಿತ್ರಕೃಪೆ: Sunil MS

ಧರ್ಮಶಾಲಾ:

ಧರ್ಮಶಾಲಾ:

ಧರ್ಮಶಾಲಾದ ಸೌಂದರ್ಯ ಅನಾವರಣಗೊಳಿಸುವ ಸುಂದರ ಚಿತ್ರಗಳು. ಭಗ್ಸು ಜಲಪಾತ.

ಚಿತ್ರಕೃಪೆ: Ekabhishek

ಧರ್ಮಶಾಲಾ:

ಧರ್ಮಶಾಲಾ:

ಧರ್ಮಶಾಲಾದ ಸೌಂದರ್ಯ ಅನಾವರಣಗೊಳಿಸುವ ಸುಂದರ ಚಿತ್ರಗಳು.

ಚಿತ್ರಕೃಪೆ: sanyam sharma

ಧರ್ಮಶಾಲಾ:

ಧರ್ಮಶಾಲಾ:

ಧರ್ಮಶಾಲಾದ ಸೌಂದರ್ಯ ಅನಾವರಣಗೊಳಿಸುವ ಸುಂದರ ಚಿತ್ರಗಳು.

ಚಿತ್ರಕೃಪೆ: Ekabhishek

ಧರ್ಮಶಾಲಾ:

ಧರ್ಮಶಾಲಾ:

ಧರ್ಮಶಾಲಾದ ಸೌಂದರ್ಯ ಅನಾವರಣಗೊಳಿಸುವ ಸುಂದರ ಚಿತ್ರಗಳು.

ಚಿತ್ರಕೃಪೆ: Dave Kleinschmidt

ಧರ್ಮಶಾಲಾ:

ಧರ್ಮಶಾಲಾ:

ಧರ್ಮಶಾಲಾದ ಸೌಂದರ್ಯ ಅನಾವರಣಗೊಳಿಸುವ ಸುಂದರ ಚಿತ್ರಗಳು.

ಚಿತ್ರಕೃಪೆ: Jpatokal

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X