Search
  • Follow NativePlanet
Share
» »ದೇವಿಕಾಪುರಂ : ಕೃಷ್ಣದೇವರಾಯನ ಜನ್ಮಸ್ಥಳ?

ದೇವಿಕಾಪುರಂ : ಕೃಷ್ಣದೇವರಾಯನ ಜನ್ಮಸ್ಥಳ?

ತಮಿಳುನಾಡಿನ ತಿರುವಣ್ಣಾಮಲೈ ಜಿಲ್ಲೆಯಲ್ಲಿರುವ ದೇವಿಕಾಪುರಂ ಸಾಕಷ್ಟು ಪ್ರಸಿದ್ಧವಾದ ಧಾರ್ಮಿಕ ಕ್ಷೇತ್ರವಾಗಿದ್ದು ಬೃಹದಾಂಬಿಕೆಯ ದೇವಾಲಯದಿಂದಾಗಿ ಪ್ರಸಿದ್ಧಿ ಪಡೆದಿದೆ

By Vijay

ವಿಜಯನಗರದ ಪ್ರಸಿದ್ಧ ದೊರೆಯಾದ ಕೃಷ್ಣದೇವರಾಯನ ಜನ್ಮ ಸ್ಥಳ ಇದಾಗಿದೆ ಎಂದು ಕೆಲವು ಇತಿಹಾಸಕಾರರ ಪ್ರಕಾರ ನಂಬಲಾಗುತ್ತದೆ. ಈ ಪಟ್ಟಣದ ಹೆಸರು ದೇವಿಯ ಮೇಲಿರುವುದರಿಂದ ಇದು ಸಾಕಷ್ಟು ಪಾವಿತ್ರ್ಯತೆ ಹೊಂದಿರುವ ಸ್ಥಳವಾಗಿದೆ ಎಂದು ನಂಬಲಾಗುತ್ತದೆ.

ಇಲ್ಲಿ ಸಾಕಷ್ಟು ಐತಿಹಾಸಿಕ ಶ್ರೀಮಂತಿಕೆಯನ್ನು ಕಾಣಬಹುದು. ಊರಿನಲ್ಲಿರುವ ದೇವಿ ಬೃಹದಾಂಬಿಕೆಯ ದೇವಾಲಯ ಸಾಕಷ್ಟು ಮಹತ್ವ ಪಡೆದಿದೆ. ಇನ್ನೂ ಆ ತಾಯಿಯ ಪತಿಯಾದ ಈಶ್ವರನು ಊರಿನ ಪಕ್ಕದ ಗುಡ್ಡದ ಮೇಲೆ ನೆಲೆಸಿದ್ದು ಕನಕಗಿರೀಶ್ವರ, ಪೊನ್ಮಲೈ ನಾಥರ್ ಎಂದೆಲ್ಲ ಪೂಜಿಸಲ್ಪಡುತ್ತಾನೆ.

ದೇವಿಕಾಪುರಂ : ಕೃಷ್ಣದೇವರಾಯನ ಜನ್ಮಸ್ಥಳ?

ಚಿತ್ರಕೃಪೆ: Balu 606902

ಇದು ಧಾರ್ಮಿಕವಾಗಿ ಎಷ್ಟು ಮಹತ್ವ ಪಡೆದಿದೆ ಎಂದರೆ ತಿರುವಣ್ಣಮಲೈನ ನಂತರ ಎರಡನೇಯ ಸ್ಥಾನದಲ್ಲಿದೆ. ಹಬ್ಬ ಹರಿ ದಿನಗಳಲ್ಲಿ ಅಪಾರವಾದ ಜನಸ್ತೋಮ ಇಲ್ಲಿ ನೆರೆದಿರುತ್ತದೆ. ವಿಶೇಷವಾಗಿ ಬೆಟ್ಟದ ಮೇಲಿರುವ ದೇವಾಲಯವು ಸಾಕಷ್ಟು ಪುರತನವಾಗಿದ್ದು ಸಾವಿರ ವರ್ಷಗಳ ಇತಿಹಾಸ ಹೊಂದಿದೆ ಎನ್ನಲಾಗುತ್ತದೆ.

ಇಲ್ಲಿನ ದೇವಾಲಯವು ಸಾಕಷ್ಟು ಎತ್ತರವಾದ ಗೋಪುರ ಹೊಂದಿದ್ದು ಆಕರ್ಷಕವಾಗಿ ಕಂಡುಬರುತ್ತದೆ. ಈ ದೇವಾಲಯದ ನಂತರ ಬೆಟ್ಟದ ಮೇಲೆ ಮತ್ತೊಂದು ದೇವಾಲಯ ರಚನೆ ಇರುವುದನ್ನು ಕಾಣಬಹುದು. ಐತಿಹಾಸಿಕವಾಗಿ ಚೋಳರ ಒಬ್ಬ ದೊರೆ ಈ ಸ್ಥಳದಿಂದಲೆ ತನ್ನ ದೇವಾಲಯ ನಿರ್ಮಿಸುವ ಕಾರ್ಯಕ್ಕೆ ಚಾಲನೆ ನೀಡಿದ್ದನೆನ್ನಲಾಗಿದೆ.

ದೇವಿಕಾಪುರಂ : ಕೃಷ್ಣದೇವರಾಯನ ಜನ್ಮಸ್ಥಳ?

ಚಿತ್ರಕೃಪೆ: Balu 606902

ಸ್ಥಳ ಪುರಾಣದಂತೆ ಕೃಷ್ಣನ ತಾಯಿಯಾದ ದೇವಕಿಯು ಇಲ್ಲಿನ ಕನಕಗಿರೀಶ್ವರನನ್ನು ಪ್ರಾರ್ಥಿಸಿದ ನಂತರವೆ ಕೃಷ್ಣನ ಜನನವಾಯಿತೆನ್ನಲಾಗಿದೆ. ಆ ಕಾರಣವಾಗಿ ಈ ಸ್ಥಳಕ್ಕೆ ದೇವಿಕಾಪುರಂ ಎಂಬ ಹೆಸರು ಬಂದಿತೆನ್ನಲಾಗಿದೆ. ಇಲ್ಲಿ ಶ್ರೀನಿವಾಸ ಮೂರ್ತಿಯ ದೇವಾಲಯವೂ ಕಂಡುಬರುತ್ತದೆ.

ಆ ಕಾರಣವಾಗಿ ಇದನ್ನು ನಾರಾಯಣವನಂ ಕ್ಷೇತ್ರ ಎಂತಲೂ ಕರೆಯಲಾಗುತ್ತದೆ. ಒಟ್ಟಾರೆಯಾಗಿ ಈ ಕ್ಷೇತ್ರವು ವಿಷ್ಣು ಹಾಗೂ ಶಿವನ ದಿವ್ಯ ನೆಲೆಯಿರುವ ವಿಶೇಷ ಕ್ಷೇತ್ರವಾಗಿ ಸಾಕಷ್ಟು ಭಕ್ತಾದಿಗಳನ್ನು ಆಕರ್ಷಿಸುತ್ತದೆ. ಶಿವನ ಮಡದಿಯಾದ ಪೆರಿನಾಯಕಿಯ ದೇವಾಲಯ ಇಲ್ಲಿನ ವಿಶೇಷತೆ.

ದೇವಿಕಾಪುರಂ : ಕೃಷ್ಣದೇವರಾಯನ ಜನ್ಮಸ್ಥಳ?

ಚಿತ್ರಕೃಪೆ: Balu 606902

ಬೃಹದಾಂಬಿಕೆ ಎಂತಲೂ ಕರೆಯಲ್ಪಡುವ ಈ ದೇವಿ ದೇವಾಲಯ ನಾಲ್ಕು ಎಕರೆಗಳ ವಿಶಾಲವಾದ ಪ್ರದೇಶದಲ್ಲಿ ಹರಡಿದ್ದು ಅದ್ಭುತವಾಗಿ ನಿರ್ಮಿತವಾಗಿದೆ. ಸಾಕಷ್ಟು ಪುರಾತನವಾದ ಆದರೆ ಅತ್ಯಾಕರ್ಷಕವಾದ ಕೆತ್ತನೆಗಳು ಇಲ್ಲಿವೆ. ಪ್ರಸಿದ್ಧ ನವನಾರಿಕುಂಜರಂ ಶಿಲ್ಪಕಲೆಯು ಇಲ್ಲಿ ಕಂಡುಬರುತ್ತದೆ.

ಅರುಣಾಚಲೇಶ್ವರ ನೆಲೆಸಿರುವ ತಿರುವಣ್ಣಾಮಲೈ

ಆರಣಿ ತಾಲೂಕಿನಲ್ಲಿರುವ ದೇವಿಕಾಪುರಂ ಪಟ್ಟಣವು ತಮಿಳುನಾಡಿನ ತಿರುವಣ್ಣಾಮಲೈ ಜಿಲ್ಲೆಯಲ್ಲಿದೆ. ಚೆನ್ನೈ ಮಹಾನಗರದಿಂದ 150 ಕಿ.ಮೀ ಹಾಗೂ ವೇಲೂರಿನಿಂದ ಸುಮಾರು 60 ಕಿ.ಮೀ ಗಳಷ್ಟು ದೂರದಲ್ಲಿ ನೆಲೆಸಿರುವ ದೇವಿಕಾಪುರಂಗೆ ತೆರಳುವುದು ಸುಲಭವಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X