ಡೋಣ ಬನ್ನಿ ಸುಂದರ ವೆಲ್ಲೊರನ್ನು!
ಹುಡುಕಿ
 
ಹುಡುಕಿ
 

ಕೈಮುಗಿದು ಪಾದವಿಡು, ದೇವರಮನೆ ಇದು!

Written by:
Updated: Wednesday, February 22, 2017, 16:15 [IST]
Share this on your social network:
   Facebook Twitter Google+ Pin it  Comments

ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯು ಬಲು ಸೊಗಸಾದ ಪ್ರವಾಸಿ ಜಿಲ್ಲೆಯಾಗಿದೆ. ಹಚ್ಚಹಸಿರಿನಿಂದ ಕೂಡಿದ ದಟ್ಟವಾದ ಕಾಡುಗಳಿಂದ ಕಂಗೊಳಿಸುವ ಈ ಜಿಲ್ಲೆಯಲ್ಲಿ ನೋಡಲು ಒಂದಕ್ಕಿಂತ ಒಂದು ಮಿಗಿಲಾದ ಪ್ರವಾಸಿ ತಾಣಗಳಿವೆ. ಹೆಸರಿನಲ್ಲಿ ಚಿಕ್ಕ ಪದವನ್ನು ಹೊಂದಿದ್ದರೂ ಪ್ರಾಕೃತಿಕ ಸಂಪತ್ತಿನಿಂದ ಬಲು ದೊಡ್ಡದಾಗಿರುವ ಜಿಲ್ಲೆಯೆ ಆಗಿದೆ ಚಿಕ್ಕಮಗಳೂರು.

ಇನ್ನೂ ಚಿಕ್ಕಮಗಳೂರಿನಿಂದ ದಕ್ಷಿಣ ಕನ್ನಡಕ್ಕೆ ಹೊರಡುವ ಮಾರ್ಗದ ಕುರಿತು ವಿವರಿಸಲು ಪದಗಳೆ ಸಿಗುವುದಿಲ್ಲ. ಅಷ್ಟೊಂದು ಭವ್ಯವಾದ ಮಾರ್ಗ ಇದಾಗಿದ್ದು ಮಳೆಗಾಲದ ನಂತರ ಸಮಯ ಹಾಗೂ ಚಳಿಗಾಲವು ಈ ಮಾರ್ಗದಲ್ಲಿ ಅನನ್ಯವಾದ ಅನುಭವವನ್ನು ಕರುಣಿಸುತ್ತವೆ. ಏಕೆಂದರೆ ಚಾರ್ಮಡಿ ಘಾಟ್ ಪ್ರದೇಶ ಇದಾಗಿದ್ದು ಅತ್ಯದ್ಭುತ ಪರ್ವತಗಿರಿಗಳು, ಪ್ರಪಾತಗಳು, ಕಾಡುಗಳು, ಪ್ರಶಾಂತತೆ ಮೈಮನವನ್ನೆಲ್ಲ ಪುಳಕಿತಗೊಳಿಸುತ್ತವೆ.

ಚಿಕ್ಕಮಗಳೂರಿನ ಸ್ಥಳಗಳ ಬಗ್ಗೆ ಓದಲು ಇಲ್ಲಿ ಕ್ಲಿಕ್ ಮಾಡಿ!

ಪೆರ್ಣಂಕಿಲ ಎಂಬ ದೈವ ಭೂಮಿ!

ಇನ್ನೂ ಧಾರ್ಮಿಕವಾಗಿಯೂ ಈ ಜಿಲ್ಲೆಯಲ್ಲಿ ಹಲವು ಪವಿತ್ರ ಹಾಗೂ ಪ್ರಸಿದ್ದ ದೇವಾಲಯ ಕ್ಷೇತ್ರಗಳಿವೆ. ಕೆಲವು ಸಾಕಷ್ಟು ಜನಪ್ರೀಯತೆ ಪಡೆದಿದ್ದರೆ ಇನ್ನೂ ಕೆಲವು ಎಲೆಮರೆಯ ಕಾಯಿಯಂತೆ ಏಕಾಂತವಾಗಿ ನೆಲೆಸಿದ್ದು ಭೇಟಿ ನೀಡುವ ಪ್ರವಾಸಿಗರನ್ನು ಬಲು ಪ್ರೀತಿ ಹಾಗೂ ಆದರಗಳಿಂದ ಬರಮಾಡಿಕೊಳ್ಳುತ್ತವೆ. ಪ್ರಸ್ತುತ ಲೇಖನದಲ್ಲಿ ಅಂಥದ್ದೆ ಒಂದು ಕ್ಷೇತ್ರ ಕುರಿತು ತಿಳಿಸಲಾಗಿದೆ. ಇದು ನಿಜಕ್ಕೂ ದೇವರೆ ನೆಲೆಸಿರುವ ಮನೆಯೆಂತೆಯೆ ಇದೆ.

ಅಪಾರ ಸೌಂದರ್ಯ

ನಿತ್ಯಹರಿದ್ವರ್ಣದಿಂದ ಸಂಪದ್ಭರಿತವಾದ ಪಶ್ಚಿಮಘಟ್ಟಗಳ ತಂಪಾದ ಭೂಸಿರಿಯಲಿ ನೆಲೆಗೊಂಡಿರುವ ಶ್ರೀಕ್ಷೇತ್ರವಿದು. ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯಲ್ಲಿ ಬರುವ ಈ ಕ್ಷೇತ್ರ ನೋಡಲು ಎಷ್ಟು ನಯನಮನೋಹರವಾಗಿದೆಯೊ ಅಷ್ಟೆ ಕುತೂಹಲ ಕೆರಳಿಸುವ ತಾಣವಾಗಿಯೂ ಗಮನಸೆಳೆಯುತ್ತದೆ.

ಚಿತ್ರಕೃಪೆ: SachinRM

 

ಕೀರ್ತಿ ದೊಡ್ಡದು

ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದೆಂಬಂತೆ ಈ ಚಿಕ್ಕ ಗ್ರಾಮವು ಚಿಕ್ಕದಾಗಿರಬಹುದು ಆದರೆ ಇಲ್ಲಿರುವ ದೇವಾಲಯದ ಹಿರಿಮೆ, ಅದಕ್ಕೆ ಹೊಂದಿಕೊಂಡಂತೆ ಪ್ರಚಲಿತದಲ್ಲಿರುವ ದಂತಕಥೆ ಹಾಗೂ ಇದರ ಸುತ್ತಮುತ್ತಲು ಕಂಡುಬರುವ ಕೆಲವು ರೋಚಕ ಪ್ರವಾಸಿ ಆಕರ್ಷಣೆಗಳು, ಎಲ್ಲಕ್ಕೂ ಮಿಗಿಲಾಗಿ ಇಲ್ಲಿನ ಸೃಷ್ಟಿ ಸೌಂದರ್ಯ ಈ ಕ್ಷೇತ್ರವನ್ನು ಪ್ರವಾಸಿ ದೃಷ್ಟಿಯಿಂದ ಬಲು ದೊಡ್ಡದಾಗಿ ಮಾಡುತ್ತದೆ.

ಚಿಕ್ಕಮಗಳೂರಿನ ಅಮೃತೇಶ್ವರ ದೇವಾಲಯ!

ಚಿತ್ರಕೃಪೆ: Harsha K R

 

ಶ್ರೀಮಂತ ಪ್ರಕೃತಿ

ಪಶ್ಚಿಮಘಟ್ಟಗಳ ಶ್ರೀಮಂತಮಯ ಜೀವಸಂಕುಲ, ಅತ್ಯದ್ಭುತ ಸೃಷ್ಟಿ ಸೌಂದರ್ಯವನ್ನು ನಗರದ ಗದ್ದಲದಿಂದ ಬಲೂ ದೂರ ತೆರಳಿ ಆಸ್ವಾದಿಸಬೇಕೆಂದಿದ್ದರೆ ಈ ಕ್ಷೇತ್ರಕ್ಕೊಮ್ಮೆ ಭೇಟಿ ನೀಡಿ. ಈ ತಾಣವು ಅಷ್ಟೊಂದು ಹೆಸರುವಾಸಿಯಾಗಿರದ ಕಾರಣ ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆಯು ಸಾಮಾನ್ಯವಾಗಿ ಕಡಿಮೆ ಇರುವುದರಿಂದ ನೀವು ಸಾಕಷ್ಟು ಏಕಾಂತತೆಯ ಅನುಭವವನ್ನು ಪಡೆಯಬಹುದು.

ಪಶ್ಚಿಮಘಟ್ಟಗಳ ಬಗ್ಗೆ ಹೆಚ್ಚಿನ ಮಾಹಿತಿಗಾಗಿ

ಚಿತ್ರಕೃಪೆ: Harsha K R

 

ಮಹತ್ವ ಪಡೆದಿದೆ

ಕೇವಲ ಪ್ರಾಕೃತಿಕ ತಾಣ ಮಾತ್ರವಾಗಿಯಲ್ಲದೆ ಈ ಕ್ಷೇತ್ರವು ಪ್ರಮುಖವಾಗಿ ತನ್ನಲ್ಲಿರುವ ದೇವಾಲಯದಿಂದಾಗಿ ಸುತ್ತಮುತ್ತಲು ಪ್ರಸಿದ್ಧಿ ಪಡೆದಿದೆ. ಶಿವನಿಗೆ ಮುಡಿಪಾದ ಕಾಳಭೈರವನ ದೇವಾಲಯವಿರುವ ಈ ಕ್ಷೇತ್ರದ ಹೆಸರೆ ದೇವರಮನೆ. ಹೆಸರಿಗೆ ತಕ್ಕ ಹಾಗೆ ನಿಶ್ಕಲ್ಮಶವಾದ ವಾತಾವರಣದಿಂದ ಕೂಡಿರುವ ಈ ಕ್ಷೇತ್ರವು ತನ್ನ ಪ್ರಶಾಂತತೆಯಿಂದ ದೈವಿಕ ಪ್ರಭಾವವನ್ನು ಪಸರಿಸುತ್ತದೆ.

ಚಿತ್ರಕೃಪೆ: Harsha K R

 

ಅಪರೂಪ

ಇಲ್ಲಿರುವ ಕಾಲಭೈರವೇಶ್ವರ/ಕಾಳಭೈರವೇಶ್ವರನ ದೇವಾಲಯವು ನೋಡಲು ಆಕರ್ಷಕವಾಗಿದ್ದು ನಕ್ಷತ್ರಾಕಾರದಲ್ಲಿ ನಿರ್ಮಿಸಲ್ಪಟ್ಟಿದೆ. ಈ ಭಾಗದಲ್ಲಿ ಈ ರೀತಿಯ ರಚನೆಗಳು ಬಲು ಅಪರೂಪವೆಂದೆ ಹೇಳಬಹುದು. ಹಾಗಾಗಿ ಇದು ತನ್ನದೆ ಆದ ವಿಶಿಷ್ಟತೆಯನ್ನು ಹೊಂದಿದೆ. ಇಂದಿಗೂ ಈ ಪ್ರಾಚೀನ ದೇವಾಲಯದ ಮೂಲ ನಿರ್ಮಾತೃಗಾರರು ಯಾರೆಂದು ತಿಳಿದುಬಂದಿಲ್ಲ.

ಚಿತ್ರಕೃಪೆ: Vidyakumargv

ನಿಖರವಾಗಿ ತಿಳಿದಿಲ್ಲ

ಆದಾಗ್ಯೂ ಇತಿಹಾಸಕಾರರ ಪ್ರಕಾರ, ಇದು ಹೊಯ್ಸಳ ರಚನೆ, ಚೋಳರ ರಚನೆ ಅಥವಾ ವೇಣೂರು ರಾಜರ ರಚನೆಯಾಗಿರಬಹುದೆಂಬ ಅಭಿಪ್ರಾಯಗಳಿವೆ. ಅಲ್ಲದೆ ಇಲ್ಲಿ ದೊರೆತಿರುವ ಕನ್ನಡದ ಶಾಸನವೊಂದರಲ್ಲಿ ಕೇವಲ "ವೆಂಕಣ್ಣನ ನಮಸ್ಕಾರ" ಎಂದಿರುವುದನ್ನು ಮಾತ್ರ ಕಾಣಬಹುದು. ನೀವು ಪ್ರಕೃತಿ ಆರಾಧಕರ ಜೊತೆ ಜೊತೆ ಧಾರ್ಮಿಕತೆಯಲ್ಲಿ ಆಸಕ್ತಿಯುಳ್ಳವರಾಗಿದ್ದರೆ, ದೇವರಮನೆಗೆ ಭೇಟಿ ನೀಡಲೇಬೇಕು.

ಚಿತ್ರಕೃಪೆ: www.devaramane.org

 

ನಂದಿಯನ್ನು ಕರೆಯುತ್ತಾನೆ

ಹಿಂದೆ ಒಮ್ಮೆ ಶಿವನು ನಂದಿಯನ್ನು ಕರೆದು ಭೂಲೋಕಕ್ಕೆ ತೆರಳಿ ಅಲ್ಲಿನ ಸ್ಥಿತಿಗತಿಗಳನ್ನು ನೋದಿಕೊಂಡು ಬಾ ಎಂದು ಹೇಳುವ ಮೂಲಕ ಪರೀಕ್ಷೆಗೆ ಒಡ್ಡುತ್ತಾನೆ. ಹೀಗೆ ಭೂಲೋಕಕ್ಕೆ ಬಂದ ನಂದಿಯು ಎಲ್ಲೆಡೆ ಬರ, ಹಾಹಾಕಾರ, ಹಸಿವೆ, ಅನಾರೋಗ್ಯಗಳು ತಾಂಡವಾಡುತ್ತಿರುವುದನ್ನು ಕಂಡು ಬೇಸರಗೊಳ್ಳುತ್ತಾನೆ. ಸತ್ಯವನ್ನು ಹೇಳುವುದರಿಂದ ತನ್ನ ಒಡೆಯನಿಗೆ ದುಖವಾಗಬಹುದೆಂದು ದುಖಿತನಾಗುತ್ತಾನೆ. ಸಾಂದರ್ಭಿಕ ಚಿತ್ರ.

ಚಿತ್ರಕೃಪೆ: Jagadeeswarann99

 

ಸುಳ್ಳು ಹೇಳಿದ ನಂದಿ

ಹಾಗಾಗಿ ನಿಷ್ಠಾವಂತನಾದ ನಂದಿಯು ಕೈಲಾಸಕ್ಕೆ ಮರಳಿ ಭೂಲೋಕದಲ್ಲಿ ಎಲ್ಲವೂ ಸೌಖ್ಯವಾಗಿದೆ ಎಂತಲೂ, ಮನುಷ್ಯರು ಸುಖದಿಂದ ಬಾಳುತ್ತಿರುವವರೆಂತಲೂ ಸುಳ್ಳು ಹೇಳುತ್ತಾನೆ. ಇದರಿಂದ ಶಿವನಿಗೆ ಕೋಪ ಉಂಟಾಗಿ ನಂದಿಗೆ ಭೂಲೋಕಕ್ಕೆ ಹೋಗಿ ಮನುಷ್ಯರ ಅದರಲ್ಲೂ ವಿಶೇಷವಾಗಿ ಉಳುಮೆಯಲ್ಲಿ ಸಹಾಯ ಮಾಡುವಂತಾಗಲಿ ಎಂದು ಶಿಕ್ಷೆ ವಿಧಿಸುತ್ತಾನೆ.

ಚಿತ್ರಕೃಪೆ: Eldiaar

 

ಬಂದು ನೆಲೆಸುತ್ತಾನೆ

ಆದರೆ ನಂದಿಯು ಶಿವನ ಮೇಲಿರುವ ಅಪಾರ ಪ್ರೀತಿಯ ಕಾರಣ ಹೀಗೆ ಮಾಡಿರುವ ವಿಷಯ ತಿಳಿದು ನಂದಿಗೆ ಪವಿತ್ರತೆಯ ಸಂಕೇತವಾಗಲಿ ಎಂದು ಹರಸುತ್ತಾನೆ ಹಾಗೂ ತಾನೂ ಸ್ವತಃ ಕಾಳಭೈರವನಾಗಿ ನಂದಿಯ ಬಳಿ ಬಂದು ನೆಲೆಸುತ್ತಾನೆ. ಹೀಗಾಗಿ ಆ ಕಾಳಭೈರವನೆ ದೇವರಮನೆಯಲ್ಲಿ ಬಂದು ನೆಲೆಸಿದ್ದಾನೆಂಬ ಪ್ರತೀತಿಯಿದೆ.

ಚಿತ್ರಕೃಪೆ: Dinesh Valke

 

 

ಬಲ್ಲಾಳನ ಗವಿ

ದೇವರಮನೆ ಅನ್ವೇಷಿಸಲು ಹೇಳಿಮಾಡಿಸಿದಂತಹ ತಾಣವಾಗಿದ್ದು ಸಾಕಷ್ಟು ರೋಮಾಂಚನದ ಅನುಭವ ನೀಡುತ್ತದೆ. ಈ ಕ್ಷೇತ್ರದ ಸುತ್ತಲಿರುವ ಭಯಾನಕ ಕಾಡಿನಲ್ಲಿ ಬಲ್ಲಾಳನ ಗವಿ ಎಂಬ ಕೌತುಕಮಯ ಗುಹೆಯೊಂದಿದೆ. ಸಾಕಷ್ಟು ನಿಗೂಢತೆಯನ್ನು ಹೊಂದಿರುವ ಈ ಗುಹೆಯ ಒಳಗೆ ತೆರಳಲು ಮೆಟ್ಟಿಲುಗಳು ಇವೆಯಾದರೂ ಇದರ ಉದ್ದದ ಕುರಿತು ನಿಖರ ಮಾಹಿತಿಯಿಲ್ಲ. ಕಾರಣ ಇದರಲ್ಲಿ ಇಂದಿಗೂ ಯಾರು ತೆರಳುವ ಸಾಹಸ ಮಾಡಿಲ್ಲವಂತೆ! ಸಾಂದರ್ಭಿಕ ಚಿತ್ರ.

ಚಿತ್ರಕೃಪೆ: Jersz

 

ಗುರುತುಗಳಿವೆ!

"ಕಾಟಿಮೆಟ್ಟಿದ ಕಲ್ಲು" ಇಲ್ಲಿನ ಬೆಟ್ಟದಲ್ಲಿ ಕಂಡುಬರುವ ಇನ್ನೊಂದು ಆಕರ್ಷಣೆ. ವಿಜ್ಞಾನದ ಪ್ರಕಾರ, ಸಹಸ್ರಾರು ವರ್ಷಗಳ ಹಿಂದೆ ಕಲ್ಲು ಅಥವಾ ಶಿಲೆ ಸಾಕಷ್ಟು ಮೃದುವಾಗಿತ್ತೆಂದು ತಿಳಿದುಬರುತ್ತದೆ. ಅದಕ್ಕೆ ಪೂರಕವೆಂಬಂತೆ ಇಲ್ಲಿರುವ ಕಲ್ಲಿನ ಮೇಲೆ ಕರುವೊಂದು ಮಂಡಿಯೂರು ಕುಳಿತಿರುವ ಗುರುತುಗಳು ಒಡಮೂಡಿವೆಯಂತೆ! ದೇವರಮನೆ ಗುಡ್ಡ.

ಚಿತ್ರಕೃಪೆ: Vidyakumargv

 

ನೆಲೆಸಿದೆ

ದೇವರಮನೆ ಕ್ಷೇತ್ರವು ಚಾರ್ಮಡಿ ಘಾಟಿನ ಅದ್ಭುತವಾದ ತೋಳುಗಳಲ್ಲಿ ನೆಲೆಸಿರುವ ಸುಂದರ ಕ್ಷೇತ್ರವಾಗಿದ್ದು ಎಲ್ಲೆಡೆ ಹಸಿರಿನಿಂದ ಕೂಡಿದೆ. ಅಲ್ಲದೆ ಇದರ ಸಾಮಿಪ್ಯದಲ್ಲಿ ಹಲವು ರಿಸಾರ್ಟುಗಳು ಹಾಗೂ ಹೋಂ ಸ್ಟೇಗಳಿದ್ದು ಪ್ರವಾಸಿಗರಿಗೆ ತಂಗಲು ಅಷ್ಟೊಂದು ಕಿರಿಕಿರಿಯಾಗಲಾರದು.

ಚಿತ್ರಕೃಪೆ: Abhijit Shylanath

 

ಲಾಡ್ಜುಗಳು

ರೊಬುಸ್ಟಾ ವ್ಯಾಲಿ ಸ್ಟೇ ಇನ್ನ್, ಗ್ರೀನ್ ಪಾರ್ಕ್, ಫ್ಲೇಮ್ ಬ್ಯಾಕ್ ಲಾಡ್ಜ್ ನಂತಹ ಹಲವು ರಿಸಾರ್ಟುಗಳು ಮೂಡಿಗೆರೆಯಿಂದ ಗುತ್ತಿ ಹಳ್ಳಿಯ ದೇವರಮನೆ ಕ್ಷೇತ್ರಕ್ಕೆ ತೆರಳುವ ಮಾರ್ಗದಲ್ಲಿ ನೆಲೆಸಿದ್ದು ಪ್ರಕೃತಿಯೊಡನೆ ಅತಿ ನಿಕಟವಾಗಿ ಬೆರೆಯಬಹುದಾದಂತಹ ಅವಕಾಶಗಳನ್ನು ನೀಡುತ್ತವೆ.

ಚಿತ್ರಕೃಪೆ: Harsha K R

 

ಎಷ್ಟು ದೂರ?

ದೇವರಮನೆಯು ಚಿಕ್ಕಮಗಳೂರಿನ ಮೂಡಿಗೆರೆಯಿಂದ ಕೇವಲ 22 ಕಿ.ಮೀ ಗಳಷ್ಟು ದೂರದಲ್ಲಿದ್ದು ತೆರಳಲು ಬಸ್ಸುಗಳು ದೊರೆಯುತ್ತವೆ. ಅಲ್ಲದೆ ಮೂಡಿಗೆರೆ ಒಂದು ಪಟ್ಟಣ ಕೇಂದ್ರವಾಗಿದ್ದು ಅಲ್ಲಿಂದ ಬಾಡಿಗೆ ಕಾರುಗಳ ಮೂಲಕವಾಗಿಯೂ ದೇವರಮನೆಯನ್ನು ಸುಲಭವಾಗಿ ತಲುಪಬಹುದು. ಬೆಂಗಳೂರಿನಿಂದ ದೇವರಮನೆಯು 275 ಕಿ.ಮೀ ದೂರವಿದೆ. ಮೂಡಿಗೆರೆಯು ಬೆಂಗಳೂರಿನಿಂದ 254 ಕಿ.ಮೀ ಗಲಷ್ಟು ದೂರವಿದ್ದು ತೆರಳಲು ಬೆಂಗಳೂರಿನಿಂದ ಸರ್ಕಾರಿ ಹಾಗೂ ಖಾಸಗಿ ಬಸ್ಸುಗಳೆರಡೂ ಲಭ್ಯವಿದೆ.

ಚಿತ್ರಕೃಪೆ: Jo N

 

English summary

Devaramane : A Truly God's abode!

Devaramane is a village in Mudigere taluka, Chikkamagalur district in the state of Karnataka, India. The village is renowned for its Kalabhairaveshwara temple.
Please Wait while comments are loading...