Search
  • Follow NativePlanet
Share
» »ಯಶಸ್ಸಿಗೆ ರೂವಾರಿ ದಸರೆಯ ಶಿಸ್ತಿನ ತಯಾರಿ

ಯಶಸ್ಸಿಗೆ ರೂವಾರಿ ದಸರೆಯ ಶಿಸ್ತಿನ ತಯಾರಿ

By Vijay

ಸೆಪ್ಟಂಬರ್ ಸಮಯ ಬಂತೆಂದರೆ ಸಾಕು ನಾಡಿನ ಜನತೆಗೆ ಅಪಾರವಾದ ಸಂತಸ ಉಂಟಾಗುತ್ತದೆ. ಮಕ್ಕಳಿಂದ ಹಿಡಿದು ಹಿರಿಯರವರೆಗೆ ಎಲ್ಲರಿಗೂ ಕುತೂಹಲ ಹೆಚ್ಚಾಗ ತೊಡಗುತ್ತದೆ. ಚಳಿಗಾಲದ ರಜೆಯ ಮೋಜು ಮಕ್ಕಳಿಗೆ ಒಂದೆಡೆಯಾದರೆ, ಶ್ರೀಮಂತಮಯ ಹಬ್ಬಗಳ ಥಳುಕು ಬಳುಕು ಇನ್ನೊಂದೆಡೆ ವಯಸ್ಕರ ಮನದಲ್ಲಿ ಚಿಗುರತೊಡಗುತ್ತವೆ.

ಹೌದು ದಸರೆಯ ಹಬ್ಬದ ಮಹತ್ವವೆ ಹಾಗೆ. ನಮ್ಮ ರಾಜ್ಯದ "ನಾಡ ಹಬ್ಬ" ವಾದ ದಸರಾ ಸಮೀಪಿಸಿದರೆ ಎಲ್ಲರ ಕಣ್ಣು ಬೀಳುವುದು ನಮ್ಮ ನಾಡಿನ ಸಾಂಸ್ಕೃತಿಕ ರಾಜಧಾನಿ ಎಂಬ ಹೆಗ್ಗಳಿಕೆ ಹೊಂದಿರುವ ಮೈಸೂರಿನ ಮೇಲೆ. ಮೈಸೂರು ದಸರಾ ಸಿಕ್ಕಾಪಟ್ಟೆ ಅಬ್ಬರ ಎಂದು ಹೇಳಿದರೆ ತಪ್ಪಾಗಲಿಕ್ಕಿಲ್ಲ. ಪ್ರಪಂಚದಲ್ಲೆ ಮೈಸೂರು ದಸರಾ ಪ್ರಖ್ಯಾತಿಯನ್ನು ಗಳಿಸಿದೆ.

ಮೈಸೂರು ದಸರಾ ನೋಡಲು ಬಲು ಚೆಂದ ಅಂತ ಎಲ್ಲರಿಗೂ ಗೊತ್ತು. ಜಂಬು ಸವಾರಿಯಿಂದ ಹಿಡಿದು, ವಿವಿಧ ಕಲೆಗಳು, ಸಾಹಸಮಯ ಕ್ರೀಡೆಗಳವರೆಗೂ ಹಲವಾರು ಚಟುವಟಿಕೆಗಳು ಒಂದೊಂದಾಗಿ ಅನಾವರಣಗೊಳ್ಳುತ್ತವೆ ಹಾಗು ನೆರೆದವರ ಮನ ತಣಿಸುತ್ತವೆ.

ಆದರೆ ಮೈಸೂರು ದಸರಾ ಹಬ್ಬವು ಯಾವೇಲ್ಲ ತಯಾರಿಗಳೊಂದಿಗೆ ಸಜ್ಜಾಗುತ್ತದೆ, ಏನೇಲ್ಲ ಸಿದ್ಧತೆಗಳನ್ನು ಎಷ್ಟು ದಿನಗಳ ಮುಂಚೆಯೆ ಪ್ರಾಂಭಿಸಲಾಗುತ್ತದೆ, ಹಬ್ಬದ ಅವಿಭಾಜ್ಯ ಹಾಗೂ ಮಹತ್ತರ ಅಂಗವಾದ ಆನೆಗಳ ತರಬೇತಿ ಕಾರ್ಯಕ್ರಮ ಹೇಗಿರುತ್ತದೆ ಎಂಬುದರ ಕುರಿತು ಬಹಳ ಜನರಿಗೆ ಗೊತ್ತಿರಲಿಕ್ಕಿಲ್ಲ. ಈ ಸಕಲ ಸಿದ್ಧತೆಗಳನ್ನು ಕಣ್ಣಾರೆ ನೋಡುವುದು ಕೂಡ ಕಣ್ಣಿಗೆ ಹಬ್ಬ ಉಂಟುಮಾಡುತ್ತದೆ.

ಮೈಸೂರು ದಸರಾ ತಯಾರಿ:

ಮೈಸೂರು ದಸರಾ ತಯಾರಿ:

ಆನೆಗಳು ಮೈಸೂರು ದಸರಾ ಹಬ್ಬದ ಪ್ರಮುಖ ಭಾಗವಾಗಿವೆ. ಇವುಗಳಿಲ್ಲದಿದ್ದರೆ ಹಬ್ಬದ ಕಳೆಯೆ ಗುಂದುತ್ತದೆ. ವಿಜಯ ದಶಮಿಯ ದಿನ ನಡೆಯುವ ಆನೆಗಳ ಮೆರವಣಿಗೆ ಹಬ್ಬದ ಅತಿ ಪ್ರಮುಖ ಹಾಗೂ ಜನಪ್ರಿಯ ಕಾರ್ಯಕ್ರಮವಾಗಿದೆ.

ಮೈಸೂರು ದಸರಾ ತಯಾರಿ:

ಮೈಸೂರು ದಸರಾ ತಯಾರಿ:


ಮೆರವಣಿಗೆಯಲ್ಲಿರುವ ಆನೆಗಳ ಗುಂಪಿಗೆ ಒಂದು ನಾಯಕ ಆನೆ ಇರುತ್ತದೆ. ಈ ನಾಯಕನ ಬೆನ್ನ ಮೇಲೆಯೆ ಚಾಮುಂಡೇಶ್ವರಿಯ ವಿಗ್ರಹ ಪ್ರತಿಷ್ಠಾಪಿಸಲಾಗಿರುವ ಚಿನ್ನದ ಅಂಬಾರಿಯನ್ನು ಇರಿಸಲಾಗಿರುತ್ತದೆ.

ಮೈಸೂರು ದಸರಾ ತಯಾರಿ:

ಮೈಸೂರು ದಸರಾ ತಯಾರಿ:

ಸಾಮಾನ್ಯವಾಗಿ ಈ ಆನೆಗಳನ್ನು ಹಬ್ಬದ ಒಂದು ತಿಂಗಳ ಮುಂಚೆಯೆ ಮೈಸೂರಿಗೆ ಕರೆತರಲಾಗುತ್ತದೆ. ಈ ಗಜಪಡೆಯ ಆಗಮನದಿಂದಲೆ ಮೈಸೂರು ದಸರಾ ಹಬ್ಬದ ಪ್ರಾರಂಭಿಕ ಚಟುವಟಿಕೆ ಅಧಿಕೃತವಾಗಿ ಆರಂಭಗೊಳ್ಳುತ್ತದೆ.

ಮೈಸೂರು ದಸರಾ ತಯಾರಿ:

ಮೈಸೂರು ದಸರಾ ತಯಾರಿ:

ನಂತರ ಒಂದು ತಿಂಗಳವರೆಗೆ ಈ ಆನೆಗಳು ಮೆರವಣಿಗೆಯ ತರಬೇತಿಗೆ ಒಳಪಡುತ್ತವೆ. ಪ್ರತಿ ಆನೆಗೂ ಒಬ್ಬ ಮಾವುತನಿದ್ದು ಆತ ಅವುಗಳ ಉಸ್ತುವಾರಿಯನ್ನು ವಹಿಸಿರುತ್ತಾನೆ.

ಮೈಸೂರು ದಸರಾ ತಯಾರಿ:

ಮೈಸೂರು ದಸರಾ ತಯಾರಿ:

ಆನೆಗಳನ್ನು ನಾಗರಹೊಳೆ ರಾಷ್ಟ್ರೀಯ ಉದ್ಯಾನದಿಂದ ಟ್ರಕ್ಕುಗಳಲ್ಲಿ ಕರೆತರಲಾಗುತ್ತದೆ. ಕೆಲವೊಮ್ಮೆ ನಡೆದು ಬಂದ ಉದಾಹರಣೆಯೂ ಇದೆ.

ಮೈಸೂರು ದಸರಾ ತಯಾರಿ:

ಮೈಸೂರು ದಸರಾ ತಯಾರಿ:

ಮೈಸೂರಿಗೆ ಬರುವ ಹಾದಿಯಲ್ಲಿ ಸಾಕಷ್ಟು ಜನರು ಈ ಆನೆಗಳನ್ನು ಭೇಟಿ ಮಾಡಿ, ಶುಭ ಹಾರೈಸುವುದು ಸಾಮಾನ್ಯವಾಗಿರುತ್ತದೆ.

ಮೈಸೂರು ದಸರಾ ತಯಾರಿ:

ಮೈಸೂರು ದಸರಾ ತಯಾರಿ:

ಈ ರೀತಿಯಾಗಿ ಆನೆಗಳ ಗುಂಪು ಹುಣಸೂರು ತಾಲೂಕಿನ ವೀರಣ್ಣ ಹೊಸಹಳ್ಳಿ ಕಾಡಿನ ಪರೀಶಿಲನಾ ಕೇಂದ್ರಕ್ಕೆ (ಚೆಕ್‍ಪೊಸ್ಟ್) ಬಂದ ಮೇಲೆ ಪ್ರತಿ ಆನೆಗಳನ್ನು ಆ ತಾಲೂಕಿನ ಜಿಲ್ಲೆಯ ಮಂತ್ರಿಗಳು ಹಾಗೂ ಇತರೆ ಅಧಿಕಾರಿಗಳು ಆತ್ಮೀಯ ಸ್ವಾಗತ ಕೋರಿ ಬರಮಾಡಿಕೊಳ್ಳುತ್ತಾರೆ.

ಮೈಸೂರು ದಸರಾ ತಯಾರಿ:

ಮೈಸೂರು ದಸರಾ ತಯಾರಿ:

ಈ ಬರಮಾಡಿಕೊಳ್ಳುವ ಸಂದರ್ಭವೂ ಕೂಡ ಆಕರ್ಷಕ ಕಳೆಯಿಂದ ತುಂಬಿರುತ್ತದೆ. ಸುತ್ತಮುತ್ತಲಿನ ಹಳ್ಳಿಗಳ ಜನರು ಜನಪದ ಗೀತೆ ಹಾಡುತ್ತ, ಕುಣಿಯುತ್ತ ಅತಿ ಆದರ ಸಂತೋಷಗಳಿಂದ ಆನೆಗಳನ್ನು ಬರಮಾಡಿಕೊಳ್ಳುತ್ತಾರೆ. ಇದು ವರ್ಷಕ್ಕೊಮ್ಮೆ ಮಾತ್ರ ಲಭಿಸುವ ಅಪರೂಪದ ದೃಶ್ಯವಾಗಿಬಿಡುತ್ತದೆ.

ಮೈಸೂರು ದಸರಾ ತಯಾರಿ:

ಮೈಸೂರು ದಸರಾ ತಯಾರಿ:

ಶಿಬಿರದಲ್ಲಿದ್ದಾಗ ರಾಗಿ ಮುದ್ದೆಗಳನ್ನು ಸವಿಯುವ ಈ ಆನೆಗಳು ಮೈಸೂರಿಗೆ ಬಂದಾಗಿನಿಂದ ಜಂಬು ಸವಾರಿಯ ಕೊನೆಯವರೆಗೆ ರಾಜವೈಭವದ ಭೋಜನ ಸವಿಯುತ್ತವೆ. ಹಸಿರು ಕಾಳುಗಳು, ಬೆಲ್ಲ, ಕಡಲೆ ಬೀಜ, ಕಬ್ಬು, ಮೇವು, ಬಾಳೆ ಎಲೆಗಳು, ಬೇಯಿಸಿದ ಅನ್ನ ರುಚಿಗೆ ತಕ್ಕ ಉಪ್ಪು ಹೀಗೆ ಹತ್ತು ಹಲವು ಖಾದ್ಯಗಳನ್ನು ಮನಸೋ ಇಚ್ಛೆ ಆನೆಗಳು ಸವಿಯುತ್ತವೆ.

ಮೈಸೂರು ದಸರಾ ತಯಾರಿ:

ಮೈಸೂರು ದಸರಾ ತಯಾರಿ:

ದಸರಾ ಹಬ್ಬಕ್ಕೆ ಹೆಚ್ಚಾಗಿ ದುಬಾರೆ, ನಾಗರಹೊಳೆ, ಬಂಡಿಪುರ, ಭೀಮೇಶ್ವರಿ, ವೀರನಹೊಸಹಳ್ಳಿ, ಮೂಲೆಹೊಳೆ, ಕೆ.ಗುಡಿ ಮುಂತಾದ ಕಡೆ ಇರುವ ಶಿಬಿರಗಳಲ್ಲಿರುವ ಆನೆಗಳನ್ನೆ ಬಳಸಲಾಗುತ್ತಾದರೂ ಇತರೆ ದಷ್ಟ ಪುಷ್ಟವಾದ ಆನೆಗಳನ್ನೂ ಸಹ ಹಿಡಿಯಲಾಗುತ್ತದೆ. ನಂತರ ಇವುಗಳಿಗೆ ಸೂಕ್ತ ತರಬೇತಿ ನೀಡಿ ದಸರೆಯ ನಂತರ ಮತ್ತೆ ಕಾಡಿಗೆ ಬಿಡಲಾಗುತ್ತದೆ.

ಮೈಸೂರು ದಸರಾ ತಯಾರಿ:

ಮೈಸೂರು ದಸರಾ ತಯಾರಿ:

ಇನ್ನು ಆನೆಗಳಿಗೂ ಸಹ ಅರ್ಜುನ, ದ್ರೋಣ, ಬಲರಾಮ, ಕಾಂತಿ, ಭರತ, ಶ್ರೀರಾಮ, ಅಭಿಮನ್ಯು ಹೀಗೆ ಪೌರಾಣಿಕ ಹೆಸರುಗಳನ್ನು ಇಡಲಾಗುತ್ತದೆ. ಈ ಆನೆಗಳಲ್ಲಿ ಅತ್ಯಂತ ಬಲಶಾಲಿಯಾದ ಆನೆಯ ಮೇಲೆ ಸೂಕ್ತ ತರಬೇತಿಯ ನಂತರ ಜಂಬೂ ಸವಾರಿಯ ಸಮಯದಲ್ಲಿ ಚಿನ್ನದ ಅಂಬಾರಿಯನ್ನು ಹೊರಿಸಲಾಗುತ್ತದೆ.

ಮೈಸೂರು ದಸರಾ ತಯಾರಿ:

ಮೈಸೂರು ದಸರಾ ತಯಾರಿ:

ಇನ್ನು ಮೈಸೂರು ನಗರದಲ್ಲಿ ದಸರಾ ಹಬ್ಬದ ಪ್ರಯುಕ್ತ ತಯಾರಿಗಳು ಹಬ್ಬದ ಹಲವು ದಿನಗಳ ಮುಂಚೆಯೆ ಪ್ರಾರಂಭಗೊಳ್ಳುತ್ತವೆ. ಸರ್ಕಾರದ ವತಿಯಿಂದ ಆಯಾ ವರ್ಷದ ದಸರಾ ಹಬ್ಬದ ಪೂರ್ವಭಾವಿಕೆಯನ್ನು ಹೊರತರಲಾಗುತ್ತದೆ. ಸಕಲ ಕಾರ್ಯಕ್ರಮಗಳ ವೇಳಾ ಪಟ್ಟಿ, ಉತ್ಸವದ ಲೊಗೊ ಮುಂತಾದವುಗಳು ಅನಾವರಣಗೊಳ್ಳುತ್ತವೆ.

ಮೈಸೂರು ದಸರಾ ತಯಾರಿ:

ಮೈಸೂರು ದಸರಾ ತಯಾರಿ:

ದಸರಾ ಹಬ್ಬದ ತಯಾರಿ ನೋಡಲು ಮೈಸೂರಿಗೆ ಹೊರಡುವುದು ಒಂದು ಸಂತಸಮಯ ಹಾಗೂ ವಿಶೇಷ ಅನುಭವ. ಏಕೆಂದರೆ ಇಂತಹ ದೃಶ್ಯಗಳು ಹಬ್ಬದ ಪ್ರಾರಂಭದ ನಂತರ ಸಿಗುವುದೂ ಇಲ್ಲ ಮತ್ತು ಜನದಟ್ಟನೆಯು ತುಂಬಾ ಇರುತ್ತದೆ.

ಮೈಸೂರು ದಸರಾ ತಯಾರಿ:

ಮೈಸೂರು ದಸರಾ ತಯಾರಿ:

ದಸರೆಯ ತಯಾರಿನ ಸಂಭ್ರಮದಲ್ಲಿ ನಳನಳಿಸುತ್ತಿರುವ ಮೈಸೂರು ನಗರ.

ಮೈಸೂರು ದಸರಾ ತಯಾರಿ:

ಮೈಸೂರು ದಸರಾ ತಯಾರಿ:

ದಸರೆಯ ತಯಾರಿನ ಸಂಭ್ರಮದಲ್ಲಿ ನಳನಳಿಸುತ್ತಿರುವ ಮೈಸೂರು ನಗರ.

ಮೈಸೂರು ದಸರಾ ತಯಾರಿ:

ಮೈಸೂರು ದಸರಾ ತಯಾರಿ:

ದಸರೆಯ ತಯಾರಿನ ಸಂಭ್ರಮದಲ್ಲಿ ನಳನಳಿಸುತ್ತಿರುವ ಮೈಸೂರು ನಗರ.

ಮೈಸೂರು ದಸರಾ ತಯಾರಿ:

ಮೈಸೂರು ದಸರಾ ತಯಾರಿ:

ದಸರೆಯ ತಯಾರಿನ ಸಂಭ್ರಮದಲ್ಲಿ ನಳನಳಿಸುತ್ತಿರುವ ಮೈಸೂರು ನಗರ.

ಮೈಸೂರು ದಸರಾ ತಯಾರಿ:

ಮೈಸೂರು ದಸರಾ ತಯಾರಿ:

ದಸರೆಯ ತಯಾರಿನ ಸಂಭ್ರಮದಲ್ಲಿ ನಳನಳಿಸುತ್ತಿರುವ ಮೈಸೂರು ನಗರ.

ಮೈಸೂರು ದಸರಾ ತಯಾರಿ:

ಮೈಸೂರು ದಸರಾ ತಯಾರಿ:

ದಸರೆಯ ತಯಾರಿನ ಸಂಭ್ರಮದಲ್ಲಿ ನಳನಳಿಸುತ್ತಿರುವ ಮೈಸೂರು ನಗರ.

ಮೈಸೂರು ದಸರಾ ತಯಾರಿ:

ಮೈಸೂರು ದಸರಾ ತಯಾರಿ:

ದಸರೆಯ ತಯಾರಿನ ಸಂಭ್ರಮದಲ್ಲಿ ನಳನಳಿಸುತ್ತಿರುವ ಮೈಸೂರು ನಗರ.

ಮೈಸೂರು ದಸರಾ ತಯಾರಿ:

ಮೈಸೂರು ದಸರಾ ತಯಾರಿ:

ದಸರೆಯ ತಯಾರಿನ ಸಂಭ್ರಮದಲ್ಲಿ ನಳನಳಿಸುತ್ತಿರುವ ಮೈಸೂರು ನಗರ.

ಮೈಸೂರು ದಸರಾ ತಯಾರಿ:

ಮೈಸೂರು ದಸರಾ ತಯಾರಿ:

ದಸರೆಯ ತಯಾರಿನ ಸಂಭ್ರಮದಲ್ಲಿ ನಳನಳಿಸುತ್ತಿರುವ ಮೈಸೂರು ನಗರ.

ಮೈಸೂರು ದಸರಾ ತಯಾರಿ:

ಮೈಸೂರು ದಸರಾ ತಯಾರಿ:

ದಸರೆಯ ತಯಾರಿನ ಸಂಭ್ರಮದಲ್ಲಿ ನಳನಳಿಸುತ್ತಿರುವ ಮೈಸೂರು ನಗರ.

ಮೈಸೂರು ದಸರಾ ತಯಾರಿ:

ಮೈಸೂರು ದಸರಾ ತಯಾರಿ:

ದಸರೆಯ ತಯಾರಿನ ಸಂಭ್ರಮದಲ್ಲಿ ನಳನಳಿಸುತ್ತಿರುವ ಮೈಸೂರು ನಗರ.

ಮೈಸೂರು ದಸರಾ ತಯಾರಿ:

ಮೈಸೂರು ದಸರಾ ತಯಾರಿ:

ದಸರೆಯ ತಯಾರಿನ ಸಂಭ್ರಮದಲ್ಲಿ ನಳನಳಿಸುತ್ತಿರುವ ಮೈಸೂರು ನಗರ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X