Search
  • Follow NativePlanet
Share
» »ಮದುವೆಗೆ ಮುಂಚೆ ಮಾಡಬೇಕಾದ ಟ್ರೆಕ್ಕುಗಳು

ಮದುವೆಗೆ ಮುಂಚೆ ಮಾಡಬೇಕಾದ ಟ್ರೆಕ್ಕುಗಳು

By Vijay

ಅರೆ...ಇದೇನಪ್ಪಾ..ಟ್ರೆಕ್ ಅಥವಾ ಚಾರಣಗಳನ್ನು ಯಾವಾಗ ಬೇಕಾದರೂ ಮಾಡಬಹುದಲ್ಲವೆ? ಮದುವೆಗೆ ಮುಂಚೆ ಎಂದರೆ ಏನರ್ಥ ಎಂಬ ಗೊಂದಲ ಊಂಟಾಗಿರಲೇಬೇಕಲ್ಲವೆ... ನಿಮಗೆ. ಹೌದು ಕೆಲವು ಚಾರಣಗಳೆ ಹಾಗೆ. ಕಾರಣ ಇವುಗಳಲ್ಲಿ ಒಳಪಟ್ಟಿರುವ ಸಾಹಸಮಯ ಅಂಶಗಳು, ಜಾಗರೂಕತೆಯಿಂದ ಸಾಗಬೇಕಾದ ಹಾಗೂ ಯೋಜನಾಬದ್ಧ ಕ್ರಮಗಳು, ಸಾಕಷ್ಟು ಮಾನಸಿಕ ಹಾಗೂ ದೈಹಿಕ ಸಾಮರ್ಥ್ಯ.

ರೆಡ್ ಬಸ್ ಕೂಪನ್ನುಗಳು : ಬಸ್ ಟಿಕೆಟುಗಳ ಮೇಲೆ ನೇರ 40% ರಷ್ಟು ಕಡಿತ

ಅಂದರೆ, ಮದುವೆಯಾದ ಮೇಲೆ ಇವು ಯಾವುವು ಇಲ್ಲವೆಂದೇನಿಲ್ಲ. ಆದರೆ ಸಾಮಾನ್ಯವಾಗಿ ಮದುವೆಯ ಬಳಿಕ ಗಂಡ, ಹೆಂಡತಿಯರ ಜವಾಬ್ದಾರಿ ಏರುತ್ತದೆ. ಪ್ರವಾಸ, ಪ್ರಯಾಣಗಳನ್ನು ಮಾಡುವಾಗ ಅದರಲ್ಲೂ ವಿಶೇಷವಾಗಿ ಟ್ರೆಕ್ ಮಾಡುವಾಗ ಸಾಧ್ಯವಾದಷ್ಟು ಅಪಾಯಕಾರಿಯಾಗಿರದ ಟ್ರೆಕ್ ಮಾಡಲು ಗಂಡಾಗಲಿ, ಹೆಣ್ಣಾಗಲಿ ಬಯಸುತ್ತಾರೆ.

ವಿಶೇಷ ಲೇಖನ : ಈ ರಸ್ತೆ ಪ್ರವಾಸಗಳಿಗೆ ಗಟ್ಟಿ ಗುಂಡಿಗೆ ಇರಲೇಬೇಕು

ಹೆಣ್ಣು ಸಹ ಸಾಹಸಪ್ರಧಾನ ಚಟುವಟಿಕೆಗಳನ್ನು ಮಾಡುತ್ತಾಳಾದರೂ ಸಾಮಾನ್ಯವಾಗಿ ಇಂತಹ ಚಟುವಟಿಕೆಗಳಲ್ಲಿ ಗಂಡು ಮೊದಲಿನಿಂದಲೂ ಮುಂದು. ಕಾರಣ ಗಂಡಿಗೆ ತುಸು ಹೆಚ್ಚಾಗಿರುವ ದೈಹಿಕ ಸಾಮರ್ಥ್ಯ ಅಷ್ಟೆ. ಆದರೆ ಮದುವೆಯ ಬಳಿಕ ಗಂಡಿನ ಹೆಗಲ ಮೇಲೆ ಆರ್ಥಿಕ (ಇಲ್ಲಿ ಹೆಣ್ಣಿಗೂ ಕೂಡ ಜವಾಬ್ದಾರಿ ಇದ್ದೆ ಇರುತ್ತದೆ.) ಜವಾಬ್ದಾರಿ ಬಿಳುವುದರಿಂದ ಕೆಲವು ಅಪಾಯಕಾರಿ ಎನ್ನಬಹುದಾದ ಟ್ರೆಕ್ ಗಳನ್ನು ಮಾಡಲು ಗಂಡಾಗಲಿ, ಹೆಣ್ಣಾಗಲಿ ಹಿಂದೇಟು ಹಾಕುತ್ತಾರೆ. ಭಾರತದಲ್ಲಿ ಇಂತಹ ಕೆಲವು ಅಪಾಯಕಾರಿ ಎನ್ನಬಹುದಾದ ಟ್ರೆಕ್ ಮಾರ್ಗಗಳಿದ್ದು ಇವುಗಳನ್ನು ಮಾಡಲು ಜೀವವನ್ನೆ ಪಣಕ್ಕಿಡಬೇಕಾಗುತ್ತದೆ.

ಇಲ್ಲಿ ಅಪಾಯಕಾರಿ ಎಂದಾಗ ಖಂಡಿತ ಅಪಾಯ ಕಟ್ಟಿಟ್ಟ ಬುತ್ತಿ ಎಂದು ತಿಳಿಯಬೇಕಾಗಿಲ್ಲ. ಆದರೆ ಸರಿಯಾದ ಮುಂಜಾಗೃತೆ ವಹಿಸದೆ, ಯೋಜನೆಯನ್ನು ರೂಪಿಸದೆ ಮನಸ್ಸಿಗೆ ಬೇಕೆಂದ ಹಾಗೆ ಟ್ರೆಕ್ ಕೈಗೊಂಡರೆ ಸಾವಿನ ದವಡೆಯ ಹತ್ತಿರವೆ ಹೋದ ಹಾಗೆ. ಪ್ರಸ್ತುತ ಲೇಖನದ ಮೂಲಕ ಅಂತಹ ಕೆಲವು ಅದ್ಭುತ ಹಾಗೂ ಅಪಾಯಕಾರಿ ಟ್ರೆಕ್ಕುಗಳ ಕುರಿತು ತಿಳಿಯಿರಿ.

ಸವಾಲೆಸೆಯುವ ಟ್ರೆಕ್ಕುಗಳು:

ಸವಾಲೆಸೆಯುವ ಟ್ರೆಕ್ಕುಗಳು:

ಕಲಿಂದಿಖಾಲ್ ಟ್ರೆಕ್ : ಭಾರತದ ಹಿಮಾಲಯ ಪರ್ವತ ಪ್ರದೇಶಗಳಾದ ಹಿಮಾಚಲ, ಉತ್ತರಾಖಂಡ ಹಾಗೂ ಜಮ್ಮು ಮತ್ತು ಕಾಶ್ಮೀರ ರಾಜ್ಯಗಳು ಕೆಲವು ಸಾಹಸಪ್ರಧಾನವಾದ ಚಾರಣ ಮಾರ್ಗಗಳಿಗೆ ಹೆಸರುವಾಸಿಯಾಗಿವೆ. ಕಲಿಂದಿಖಾಲ್ ಟ್ರೆಕ್ ಒಂದು ಸವಾಲೆಸೆಯುವ ಹಾಗೂ ಅಪಾಯಕಾರಿಯಾದ ಟ್ರೆಕ್ ಎಂದೆ ಹೇಳಬಹುದು. ಈ ಚಾರಣವನ್ನು "ಚಾರಣಗಳ ಅಪ್ಪ" ಎಂದೂ ಸಹ ಸಂಭೋದಿಸುತ್ತಾರೆಂದರೆ ತಿಳಿಯಬಹುದು ಯಾವ ರೀತಿಯ ಸವಾಲನ್ನು ಇದು ಚಾರಣಿಗರಿಗೆ ಹಾಕುತ್ತದೆ ಎಂದು.

ಚಿತ್ರಕೃಪೆ: Sharada Prasad CS

ಸವಾಲೆಸೆಯುವ ಟ್ರೆಕ್ಕುಗಳು:

ಸವಾಲೆಸೆಯುವ ಟ್ರೆಕ್ಕುಗಳು:

ಉತ್ತರಾಖಂಡ ರಾಜ್ಯದ ಗಡ್ವಾಲ್ ಹಿಮಾಲಯ ಪ್ರದೇಶದಲ್ಲಿ ಈ ಚಾರಣ ಮಾರ್ಗವಿದ್ದು ಒಟ್ಟಾರೆ 99 ಕಿ.ಮೀ ಗಳಷ್ಟು ಉದ್ದವನ್ನು ಇದು ಹೊಂದಿದೆ. ಗಂಗೋತ್ರಿಯಿಂದ ಪ್ರಾರಂಭವಾಗುವ ಈ ಚಾರಣವು ಬದರಿನಾಥ ಕಣಿವೆಯಲ್ಲಿ ಅಂತ್ಯಗೊಳ್ಳುತ್ತದೆ.

ಚಿತ್ರಕೃಪೆ: Sharada Prasad CS

ಸವಾಲೆಸೆಯುವ ಟ್ರೆಕ್ಕುಗಳು:

ಸವಾಲೆಸೆಯುವ ಟ್ರೆಕ್ಕುಗಳು:

ಸಮುದ್ರ ಮಟ್ಟದಿಂದ 6000 ಮೀ ಅಂದರೆ ಸುಮಾರು 20000 ಅಡಿಗಳಷ್ಟು ಎತ್ತರದಲ್ಲಿ ನೆಲೆಸಿರುವ ಈ ಮಾರ್ಗವು ಅತ್ಯದ್ಭುತ ಪ್ರಾಕೃತಿಕ ರೋಮಾಂಚನದಿಂದ ತುಂಬಿ ಹೋಗಿದೆ. ವಿಪರೀತವಾದ ಹವಾಮಾನ, ಮೈಕೊರೆಯುವ ಚಳಿ, ಆಮ್ಲಜನಕದ ಕೊರತೆ, ಅಂಕುಡೊಂಕಾದ ಹಿಮಚ್ಛಾದಿತ ಭೂಮಿಗಳು, ಆಳವಾದ ಪ್ರಪಾತಗಳು ಈ ಮಾರ್ಗವನ್ನು ಸಾಹಸಮಯ ಹಾಗೂ ಅಪಾಯಕಾರಿಯನ್ನಾಗಿ ಮಾಡಲಾಗಿದೆ.

ಚಿತ್ರಕೃಪೆ: Sharada Prasad CS

ಸವಾಲೆಸೆಯುವ ಟ್ರೆಕ್ಕುಗಳು:

ಸವಾಲೆಸೆಯುವ ಟ್ರೆಕ್ಕುಗಳು:

ಇಲ್ಲಿ ಅಪಾಯಕಾರಿ ಎಂದರೆ ಈ ಚಾರಣದಲ್ಲಿ ಸರಿಯಾಗಿ ಒಗ್ಗಿಕೊಳ್ಳದೆ, ಪಾಲೈಸಬೇಕಾದ ನಿಯಮಗಳನ್ನು ಗಾಳಿಯಲ್ಲಿ ತೂರಿ ಬಿಟ್ಟರೆ ಅಪಾಯ ಖಂಡಿತ. ಏಕೆಂದರೆ ಮೇಲೆತ್ತರಕ್ಕೆ ಸಾಗುವಾಗ ಸಾಕಷ್ಟು ಸಮತೋಲನ ಕಳೆದುಕೊಳ್ಳುವಂತಹ ಪ್ರಸಂಗಗಳು ಎದುರಾಗುತ್ತವೆ. ಹಿಮದಲ್ಲಿ ಕಾಲುಗಳು ಹುದುಗಿ ಹೋಗಬಹುದು. ಅಸ್ತಮಾ, ಶ್ವಾಸಕೋಶಗಳ ತೊಂದರೆಯಿದ್ದರೆ ಎತ್ತರದ ಪ್ರದೇಶದಲ್ಲಿ ಉಸಿರುಗಟ್ಟಿ ಬಿಡಬಹುದು. ಅಲ್ಲಲ್ಲಿ ಎದುರಾಗುವ ನಿಂತ ನೀರುಗಳಲ್ಲಿ ವಿಷಕಾರಿ ಜೀವಜಂತುಗಳಿದ್ದು ತಿಳಿಯದೆ ಅದರಲ್ಲಿ ಇಳಿದಾಗ ಅಪಾಯ ಎದುರಾಗಬಹುದು.

ಚಿತ್ರಕೃಪೆ: Sharada Prasad CS

ಸವಾಲೆಸೆಯುವ ಟ್ರೆಕ್ಕುಗಳು:

ಸವಾಲೆಸೆಯುವ ಟ್ರೆಕ್ಕುಗಳು:

ಒಂದು ಸಂಗತಿಯೆಂದರೆ ಈ ಚಾರಣ ಮಾರ್ಗವು ಖಂಡಿತವಾಗಿಯೂ ಪ್ರಾರಂಭಿಕ ಹಂತದ ಚಾರಣಿಗರಿಗಲ್ಲವೆ ಅಲ್ಲ. ಪರಿಣಿತ ಚಾರಣಿಗರೂ ಸಹ ಈ ಚಾರಣ ಮಾಡಲು ಸಾಕಷ್ಟು ಪರಿತಪಿಸುತ್ತಾರೆ. ಸಾಕಷ್ಟು ದೈಹಿಕ ಹಾಗೂ ಮಾನಸಿಕ ಸಾಮರ್ಥ್ಯ, ಯೋಜನಾಬದ್ಧ ಪೂರ್ವ ಸಿದ್ಧತೆ, ತುರ್ತುಚಿಕಿತ್ಸಾ ಉಪಕರಗಳು ಹೀಗೆ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟು ಶ್ರಮಪಡುತ್ತ ಚಾರಣ ಮಾಡಬೇಕು. ಆದರೆ ಇಲ್ಲಿ ಚಾರಣಿಗರು ಎಷ್ಟು ಕಷ್ಟ ಪಡುತ್ತಾರೊ ಪ್ರಕೃತಿಯು ಅವರಿಗೆ ಅದರ ಎರಡರಷ್ಟು ಸಂತೋಷ ಕರುಣಿಸುವುದರಲ್ಲಿ ಸಂಶಯವೇ ಇಲ್ಲ. ಬಹುತೇಕ ಇತರೆ ಯಾರೂ ತಮ್ಮ ಜೀವಮಾನದಲ್ಲಿಯೆ ಕಾಣಲಾಗದಂತಹ ಪ್ರಕೃತಿಯ ಚಿತ್ರಗಳು, ಅನುಭವಗಳು, ಭವ್ಯತೆಯು ಒಂದು ರೀತಿಯ ಸಾರ್ಥಕತೆಯನ್ನುಂಟು ಮಾಡುತ್ತವೆ.

ಚಿತ್ರಕೃಪೆ: Sharada Prasad CS

ಸವಾಲೆಸೆಯುವ ಟ್ರೆಕ್ಕುಗಳು:

ಸವಾಲೆಸೆಯುವ ಟ್ರೆಕ್ಕುಗಳು:

ಆಡೆನ್ಸ್ ಕೋಲ್ ಟ್ರೆಕ್ : ವಿಶ್ವದ ಅಪಾಯಕಾರಿ ಚಾರಣಗಳ ಪೈಕಿ ಇದೂ ಸಹ ಒಂದು. ಅತ್ಯಂತ ವಿಪರೀತವಾದ ಹವಾಮಾನ, ಅಕ್ಷರಶಃ ಮೈಯನ್ನು ಗರಗಸದ ಹಾಗೆ ಕೊರೆಯುವ ಚಳಿ, ಕನಿಷ್ಠ ಮಟ್ಟಕ್ಕಿಂತಲೂ ಕೆಳಗೆ ಕುಸಿದಿರುವ ತಾಪಮಾನ, ಮೊನಚಾದ, ಅಂಕುಡೊಂಕಾದ ಹಿಮದಿಂದ ಕೂಡಿದ ಬೆಟ್ಟ ಪರ್ವತಗಳು, ಆಮ್ಲಜನಕದ ಕೊರತೆ, ಊಟ ತಿಂಡಿಗಳ ಕೊರತೆ, ನಿರ್ಜನ ಪ್ರದೇಶ, ಆಯ ತಪ್ಪಿ ಬಿದ್ದರೂ ಕೊಚ್ಚಿ ಹೋಗುವಂತೆ ಮಾಡುವ ರಭಸದಿ ಹರಿಯುವ ನದಿ ಇವೆಲ್ಲವೂ ಈ ಚಾರಣದ ವಿಶಿಷ್ಟತೆ.

ಚಿತ್ರಕೃಪೆ: Barry Silver

ಸವಾಲೆಸೆಯುವ ಟ್ರೆಕ್ಕುಗಳು:

ಸವಾಲೆಸೆಯುವ ಟ್ರೆಕ್ಕುಗಳು:

ಈ ಚಾರಣ ಮಾರ್ಗವು ಗಂಗೋತ್ರಿಯನ್ನು ಕೇದಾರನಾಥದೊಂದಿಗೆ ಬೆಸೆಯುತ್ತದೆ. ಗಂಗೋತ್ರಿಯಿಂದ ಪ್ರಾರಂಭವಾಗಿ ಕೇದಾರ ಕಣಿವೆಯಲ್ಲಿ ಅಂತ್ಯಗೊಳ್ಳುತ್ತದೆ. ಚಾರಣ ಮಾಡುವಾಗ ಅಲ್ಲಲ್ಲಿ ನ್ದಿ ತೊರೆಗಳು ಎದುರಾಗಿ ಸ್ಥಳೀಯವಾಗಿ ದೊರೆಯುವ ಕಟ್ಟಿಗೆಗಳನ್ನು ಬಳಸಿಯೆ ಸೇತುವೆಗಳನ್ನು ನಿರ್ಮಾಣ ಮಾಡಿಕೊಂಡು ದಾಟಿ ಮುಂದೆ ಸಾಗಬೇಕಾಗಬಹುದು. ಇಂತಹ ಸಮಯದಲ್ಲಿ ಸಾಕಷ್ಟು ಜಾಗರೂಕತೆವಹಿಸಿ ಮುಂದೆ ಸಾಗಬೇಕು.

ಚಿತ್ರಕೃಪೆ: Barry Silver

ಸವಾಲೆಸೆಯುವ ಟ್ರೆಕ್ಕುಗಳು:

ಸವಾಲೆಸೆಯುವ ಟ್ರೆಕ್ಕುಗಳು:

ಜೆ ಬಿ ಆಡೆನ್ ಎಂಬ ಬ್ರಿಟೀಷ್ ಭೂ ಸರ್ವೇಕ್ಷಣಾ ಅಧಿಕಾರಿಯು ಭಿಲಾಂಗನಾ ಕಣಿವೆಯಿಂದ ಹಾಗೂ ರುದ್ರಗೈರಾ ಶಿಖರವನ್ನು ತಲುಪುವ ಮಾರ್ಗವನ್ನು 1939 ರಲ್ಲಿ ಕಂಡುಹಿಡಿದನು. ಅದೆ ಮಾರ್ಗವನ್ನು ಇಂದು ಅವನ ಗೌರವಾರ್ಥವಾಗಿ ಆಡೆನ್ ಕೋಲ್ ಮಾರ್ಗ ಎನ್ನಲಾಗಿದ್ದು ಇದು ಗಂಗೋತ್ರಿಯನ್ನು ಕೇದಾರನಾಥದೊಂದಿಗೂ ಸಹ ಬೆಸೆಯುತ್ತದೆ.

ಚಿತ್ರಕೃಪೆ: Anirban Biswas

ಸವಾಲೆಸೆಯುವ ಟ್ರೆಕ್ಕುಗಳು:

ಸವಾಲೆಸೆಯುವ ಟ್ರೆಕ್ಕುಗಳು:

ಲಡಾಖ್ - ಝನ್ಸ್ಕಾರ್ ಟ್ರೆಕ್ : ಹಿಮಾಲಯದ ಪರ್ವತ ಪ್ರದೇಶಗಳಲ್ಲಿ ಸಾಗುವುದೆ ರೋಮಾಂಚನವಾಗಿರುವಾಗ ಅದರಲ್ಲಿ ಹಿಮಗಟ್ಟಿದ ನದಿಯ ಮೂಲಕ ಟ್ರೆಕ್ ಮಾಡಿದರೆ ಹೇಗಿರಬೇಡ. ಅಲ್ಲವೆ ಇಂತಹ ಒಂದು ಅನುಭವ ಈ ಮಾರ್ಗದಲ್ಲಿ ಪಡೆಯಬಹುದು.

ಚಿತ್ರಕೃಪೆ: Todd vanGoethem

ಸವಾಲೆಸೆಯುವ ಟ್ರೆಕ್ಕುಗಳು:

ಸವಾಲೆಸೆಯುವ ಟ್ರೆಕ್ಕುಗಳು:

ಅತಿಯಾದ ಚಳಿ, ಹಿಮಗಟ್ಟಿದ ನದಿ, ಅಲ್ಪೈನ್ ಗಿಡ ಮರಗಳ ಕಾಡು, ಹಿಮ ಪ್ರಾಣಿಗಳು, ಕೇವಲ ಪ್ರಕೃತಿಯ ಭವ್ಯತೆ, ರಮ್ಯತೆ ಹಾಗೂ ಗಾಂಭೀರ್ಯತೆ. ಜನಸಾಗರದಿಂದ ಬಲು ದೂರ. ಕನಸಿನ ಲೋಕವೆಂಬ ಭ್ರಮೆ. ಆ ಭ್ರಮೆಯಲ್ಲಿ ಎಚ್ಚರ ತಪ್ಪಿದರೆ ಸ್ವರ್ಗ ನರಕಗಳ ದರ್ಶನ. ಹೀಗೆ ಒಂದು ಭಯ ಮಿಶ್ರಿತ ರೋಮಾಂಚನದ ಅನುಭೂತಿಯನ್ನು ಇದು ಕರುಣಿಸುತ್ತದೆ.

ಚಿತ್ರಕೃಪೆ: McKay Savage

ಸವಾಲೆಸೆಯುವ ಟ್ರೆಕ್ಕುಗಳು:

ಸವಾಲೆಸೆಯುವ ಟ್ರೆಕ್ಕುಗಳು:

ಈ ಚಾರಣ ಮಾರ್ಗವು ಲೇಹ್ ಲಡಾಖ್ ಪ್ರದೇಶದ ಚಿಲ್ಲಿಂಗ್ ಹಳ್ಳಿಯನ್ನು ಝನ್ಸ್ಕಾರ್ ಕಣಿವೆಯ ಅದೆ ಹಳ್ಳಿಯೊಂದಿಗೆ ಬೆಸೆಯುವ ಚಾರಣ ಮಾರ್ಗವಾಗಿದ್ದು ಒಟ್ಟಾರೆಯಾಗಿ 75 ಕಿ.ಮೀ ಗಳಷ್ಟು ದೂರವನ್ನು ಹೊಂದಿದೆ. ಸಾಕಷ್ಟು ಮೊನಚಾದ ಪರ್ವತಗಳನ್ನು ಒಳಗೊಂಡಿರುವ ಈ ಮಾರ್ಗದಲ್ಲಿ ಎಚ್ಚರಿಕೆಯಿಂದ ಹೆಜ್ಜೆಯಿಡುತ್ತ ಮುಂದೆ ಸಾಗಬೇಕಾಗಿರುವುದು ಹಾಗೂ ಗುಂಪಿನಲ್ಲಿಯೆ ಇರಬೇಕಾದುದು ಬಹು ಅವಶ್ಯಕವಾಗಿದೆ.

ಚಿತ್ರಕೃಪೆ: Karunakar Rayker

ಸವಾಲೆಸೆಯುವ ಟ್ರೆಕ್ಕುಗಳು:

ಸವಾಲೆಸೆಯುವ ಟ್ರೆಕ್ಕುಗಳು:

ನವಂಬರ್ ಹಾಗೂ ಮಾರ್ಚ್ ಮಧ್ಯದಲ್ಲಿ ಜಮ್ಮು ಮತ್ತು ಕಾಶ್ಮೀರ ರಾಜ್ಯದ ಲಡಾಖ್ ಪ್ರದೇಶದ ಕೆಲವು ಹಳ್ಳಿಗಳು ಸಂಪೂರ್ಣವಾಗಿ ಸಂಪರ್ಕವನ್ನು ಕಳೆದುಕೊಳ್ಳುತ್ತವೆ. ಈ ಸಮಯದಲ್ಲಿ ಹಿಮಗಟ್ಟೀದ ಝನ್ಸ್ಕಾರ್ ನದಿಯ ಮೇಲೆ ಟ್ರೆಕ್ ಮಾಡುತ್ತ ಹಳ್ಳಿಯನ್ನು ತಲುಪಬಹುದಾಗಿದೆ. ಇದೊಂದು ಅತ್ಯಂತ ಸಾಹಸಮಯ ಹಾಗೂ ಅಪಾಯಕಾರಿಯಾದ ಟ್ರೆಕ್ ಎಂದೆ ಹೇಳಬಹುದು. ಇದನ್ನು ಚದರ್ ಝನ್ಸ್ಕಾರ್ ಟ್ರೆಕ್ ಎಂದು ಕರೆಯುತ್ತಾರೆ.

ಚಿತ್ರಕೃಪೆ: Pradeep Kumbhashi

ಸವಾಲೆಸೆಯುವ ಟ್ರೆಕ್ಕುಗಳು:

ಸವಾಲೆಸೆಯುವ ಟ್ರೆಕ್ಕುಗಳು:

ಝನ್ಸ್ಕಾರ್ ನದಿಯು ಹಿಮಗಟ್ಟಿರುವ ಸಂದರ್ಭದಲ್ಲಿ ಅದರ ಮೇಲೆ ಜಾಗರೂಕತೆಯಿಂದ ಟ್ರೆಕ್ ಮಾಡುವುದು ಅವಶ್ಯಕವಾಗಿದ್ದು, ಈ ಚಾರಣದಲ್ಲಿ ಹಲವಾರು ಬಾರಿ ಭಾಗಿಯಾದವರ ಮಾರ್ಗದರ್ಶನವಿದ್ದರೆ ಬಲು ಒಳಿತು. ಹಿಮಗಟ್ಟಿದ ಗಟ್ಟಿಯಾದ ಪದರಗಳ ಮೇಲೆ ಅದರಲ್ಲೂ ವಿಶೇಷವಾಗಿ ದಂಡೆಯಗುಂಟ ಮುಂದೆ ಸಾಗಬೇಕಾಗುತ್ತದೆ.

ಚಿತ್ರಕೃಪೆ: Pradeep Kumbhashi

ಸವಾಲೆಸೆಯುವ ಟ್ರೆಕ್ಕುಗಳು:

ಸವಾಲೆಸೆಯುವ ಟ್ರೆಕ್ಕುಗಳು:

ಚಳಿಗಾಲದಲ್ಲಿ ಸಂಪೂರ್ಣವಾಗಿ ಹಿಮಗಟ್ಟಿದ ಝನ್ಸ್ಕಾರ್ ನದಿಯ ಒಂದು ಸುಂದರ ನೋಟ.

ಚಿತ್ರಕೃಪೆ: Pradeep Kumbhashi

ಸವಾಲೆಸೆಯುವ ಟ್ರೆಕ್ಕುಗಳು:

ಸವಾಲೆಸೆಯುವ ಟ್ರೆಕ್ಕುಗಳು:

ಪಿನ್ - ಪಾರ್ವತಿ ಟ್ರೆಕ್ : ಹಿಮಾಚಲ ಪ್ರದೇಶ ರಾಜ್ಯದ ಕುಲ್ಲು ಹಾಗೂ ಸ್ಪಿತಿಯನ್ನು ಕಣಿವೆಯನ್ನು ಬೆಸೆಯುವ ಈ ಚಾರಣ ಮಾರ್ಗವು ಕಠಿಣವಾದ ಹಾಗೂ ಅಪಾಯಕಾರಿಯಾದ ಚಾರಣ ಮಾರ್ಗವಾಗಿದೆ. ಮೂಲತಃ ಈ ಚಾರಣ ಮಾರ್ಗವು ನೂರು ಕೀ.ಮೀ ಗಳಷ್ಟು ಉದ್ದವಿದ್ದು ಕುಲ್ಲು ಜಿಲ್ಲೆಯ ಪಾರ್ವತಿ ಕಣಿವೆಯನ್ನು ಸ್ಪಿತಿಯಲ್ಲಿರುವ ಪಿನ್ ಕಣಿವೆಯೊಂದಿಗೆ ಬೆಸೆಯುವುದರಿಂದ ಇದಕ್ಕೆ ಪಿನ್ - ಪಾರ್ವತಿ ಟ್ರೆಕ್ ಎಂದು ಕರೆಯಲಾಗುತ್ತದೆ. ಕುಲ್ಲುನಲ್ಲಿರುವ ಅದ್ಭುತ ಪಾರ್ವತಿ ಕಣಿವೆ.

ಚಿತ್ರಕೃಪೆ: RuckSackKruemel

ಸವಾಲೆಸೆಯುವ ಟ್ರೆಕ್ಕುಗಳು:

ಸವಾಲೆಸೆಯುವ ಟ್ರೆಕ್ಕುಗಳು:

ಈ ಚಾರಣವನ್ನು ಮಾಡಲು ಅಥವಾ ಕೈಗೊಳ್ಳಲು ಜುಲೈನಿಂದ ಸೆಪ್ಟಂಬರ್ ವರೆಗಿನ ಅವಧಿಯು ಆದರ್ಶಮಯವಾಗಿದೆ. ಆದರೂ ಈ ಚಾರಣವು ಸಾಕಷ್ಟು ಕ್ಲಿಷ್ಟಕರವಾದ ಅಡೆ ತಡೆಗಳನ್ನು ಒಡ್ಡುತ್ತದೆ. ದೂರ ನೋಡಿದಷ್ಟೂ ವಿಶಾಲವಾಗಿ ಮೈದಾನ, ಬದಿಗಳಲ್ಲಿ ಮೊನಚಾಗಿ ಚಾಚಿರುವ ಬೃಹತ್ ಗಾತ್ರದ ಭಯಾನಕ ಪರ್ವತಗಳು, ನಿರ್ಜನ ಪ್ರದೇಶ...ಕೊರೆಯುವ ಚಳಿ, ವಿಪರಿತವಾಗಿ ವರ್ತಿಸುವ ಹವಾಮಾನ ಹೀಗೆ ಸಾಕಷ್ಟು ಸವಾಲನ್ನು ಸ್ವೀಕರಿಸಬೇಕಾಗುತ್ತದೆ.

ಚಿತ್ರಕೃಪೆ: Senia L

ಸವಾಲೆಸೆಯುವ ಟ್ರೆಕ್ಕುಗಳು:

ಸವಾಲೆಸೆಯುವ ಟ್ರೆಕ್ಕುಗಳು:

ಅಲ್ಲದೆ, ಕೆಲವು ಪ್ರಸಂಗಗಳಲ್ಲಿ ನೀರಿನ ಹರಿವು ಎದುರಾಗುತ್ತವೆ. ಇಂತಹ ಸಂದರ್ಭದಲ್ಲಿ ಸಾಮಾನ್ಯವಾಗಿ ಕಂಡುಬರುವಂತಹ ಸೇತುವೆಗಳನ್ನು ಅಪೇಕ್ಷಿಸುವಂತಿಲ್ಲ. ಪ್ರಾಕೃತಿಕವಾಗಿಯೆ ದೊರೆಯುವ ಮರದ ದಿಬ್ಬಗಳಿಂದಲೋ...ಬೇರು ನಾರುಗಳಿಂದಲೋ ಸ್ಥಳೀಯವಾಗಿ ನಿರ್ಮಿಸಲಾದ ಸೇತುವೆ ಥರದ ರಚನೆಗಳ ಮೇಲೆಯೆ ಮುಂಚಿತವಾಗಿ ಸೂಕ್ಷ್ಮವಾಗಿ ಪರೀಕ್ಷಿಸಿ ಜಾಗರೂಕತೆಯಿಂದ ಸಾಗಬೇಕಾಗುತ್ತದೆ.

ಚಿತ್ರಕೃಪೆ: Senia L

ಸವಾಲೆಸೆಯುವ ಟ್ರೆಕ್ಕುಗಳು:

ಸವಾಲೆಸೆಯುವ ಟ್ರೆಕ್ಕುಗಳು:

ನಮಿಕ್ ಗ್ಲೇಸಿಯರ್ ಟ್ರೆಕ್ : ಇದು ಅಷ್ಟೊಂದಾಗಿ ಅನ್ವೇಷಿಸಲಾರದ ಚಾರಣ ಮಾರ್ಗವಾಗಿದೆ. ಆದರೆ ಈ ರೋಮಾಂಚಕ ಚಾರಣ ಮಾರ್ಗವು ಅದ್ಭುತ ಪ್ರದೇಶಗಳಿಂದ ಸಾಗುವುದರಿಂದ ಮೈಯಲ್ಲೆಲ್ಲ ವಿದ್ಯುತ್ ಸಂಚಾರದ ಅನುಭವವಾಗುತ್ತದೆ. ಉತ್ತರಾಖಂಡದ ಧಲ್ದೌಕ್ ನಿಂದ ನಮಿಕ್ ಗ್ಲೇಸಿಯರ್ ವರೆಗೆ ಈ ಚಾರಣ ಮಾರ್ಗವಿದೆ. ಸಾಕಷ್ಟು ವಿಪರೀತ ಹವಾಮಾನದಿಂದ ಕೂಡಿರುವ ಈ ಚಾರಣವು ಕೊನೆಯದಾಗಿ ನಮಿಕ್ ಗ್ಲೇಸಿಯರ್ ಗೆ ತಲುಪುವಂತೆ ಮಾಡುತ್ತದೆ. ಈ ಹಿಮನದಿಯು ಮೈಜುಮ್ಮೆನ್ನಿಸುವಂತಹ ನಂದಾ ದೇವಿ, ನಂದಾ ಕೋಟ ಹಾಗೂ ತ್ರಿಶೂಲಿ ಪರ್ವತಗಳಿಂದ ಸುತ್ತುವರೆದಿದ್ದು ಒಂದು ಅದ್ಭುತ ಹಾಗೂ ಎಂದಿಗೂ ಮರೆಯಲಾಗದ ನೋಟವನ್ನು ಕರುಣಿಸುತ್ತದೆ. ನಂದಾ ದೇವಿ ಪರ್ವತ.

ಚಿತ್ರಕೃಪೆ: Anirban Biswas

ಸವಾಲೆಸೆಯುವ ಟ್ರೆಕ್ಕುಗಳು:

ಸವಾಲೆಸೆಯುವ ಟ್ರೆಕ್ಕುಗಳು:

ಶಿವಲಿಂಗ್ ಟ್ರೆಕ್ : ಉತ್ತರಾಖಂಡ ರಾಜ್ಯದ ಗಡ್ವಾಲ್ ಹಿಮಾಲಯ ಪ್ರದೇಶದಲ್ಲಿ ಕಂಡುಬರುವ ಗಂಗೋತ್ರಿ ಶಿಖರಗಳ ಸಮೂಹದಲ್ಲಿ ತಪೋವನ ಎಂಬ ಹೆಸರಿನ ಸ್ಥಳವಿದೆ. ಇಲ್ಲಿ ಕಂಡುಬರುವ ಒಂದು ಅದ್ಭುತವಾದ ಹಿಮಪರ್ವತವೆ ಶಿವಲಿಂಗ. ಇಲ್ಲಿಗೆ ತಲುಪುವ ಈ ಚಾರಣವೂ ಸಹ ಸಾಕಷ್ಟು ಸವಾಲೆಸೆಯುವಂತಿದೆ.

ಚಿತ್ರಕೃಪೆ: Prathyush Thota

ಸವಾಲೆಸೆಯುವ ಟ್ರೆಕ್ಕುಗಳು:

ಸವಾಲೆಸೆಯುವ ಟ್ರೆಕ್ಕುಗಳು:

ಗಂಗೋತ್ರಿಯಿಂದ ಪ್ರಾರಂಭವಾಗುವ ಈ ಚಾರಣವು ತಪೋವನದ ಮೂಲಕ ಸಾಗುತ್ತ ಶಿವಲಿಂಗವನ್ನು ತಲುಪುತ್ತದೆ. ಶಿವಲಿಂಗ ಪರ್ವತವನ್ನು ಬ್ರಿಟೀಷರು "ಭಾರತದ ಮ್ಯಾಟರ್ ಹಾರ್ನ್" ಎಂದು ಕರೆಯುತ್ತಿದ್ದರು. ಕಾರಣ ಸ್ವಿಟ್ಜರ್ ಲ್ಯಾಂಡ್ ಹಾಗೂ ಇಟಲಿ ದೇಶಗಳ ಗಡಿಯಲ್ಲಿರುವ ಮ್ಯಾಟರ್ ಹಾರ್ನ್ ಎಂಬ ಅದ್ಭುತ ಹಿಮಪರ್ವತದೊಂದಿಗಿರುವ ಇದರ ಸಾಮ್ಯತೆ.

ಚಿತ್ರಕೃಪೆ: Anirban Biswas

ಸವಾಲೆಸೆಯುವ ಟ್ರೆಕ್ಕುಗಳು:

ಸವಾಲೆಸೆಯುವ ಟ್ರೆಕ್ಕುಗಳು:

ಖಾಟ್ಲಿಂಗ್ - ಸಹಸ್ರತಲ್ : ಭಿಲಾಂಗನಾ ನದಿಯ ಮೂಲವಾಗಿರುವ ಖಾಟ್ಲಿಂಗ್ ಹಿಮನದಿಗೆ ಚಾರಣವು ಅದ್ಭುತವಾದ ಪರಿಸರದಿಂದ ಕೂಡಿದೆ ಹಾಗೂ ಸಾಕಷ್ಟು ಕಠಿಣವಾಗಿದೆ. ಈ ಚಾರಣ ಮಾರ್ಗದಲ್ಲಿ ಸಾಕಷ್ಟು ಕೆರೆಗಳು, ಬಯಲು ಭೂಮಿ ಹಾಗೂ ಹಿಮಚ್ಛಾದಿತ ಪರ್ವತಗಳನ್ನು ದಾಟಬೇಕಾಗುತ್ತದೆ. ಅಲ್ಲಲ್ಲಿ ಸಿಗುವ ಕೆಲವು ಹರಿಯುವ ನದಿಗಳ ಮೇಲೆ ಅಡ್ಡಲಾಗಿ ಹಾಕಲಾಗಿರುವ ಕೆಲವೆ ಕ್ಲೆಅವು ಕಬ್ಬಿಣ ಅಥವಾ ಕಟ್ಟಿಗೆ ತುಂಡುಗಳ ಮೇಲೆ ಸಾಗುತ್ತ ನಡೆಯಬೇಕು.

ಚಿತ್ರಕೃಪೆ: Senia L

ಸವಾಲೆಸೆಯುವ ಟ್ರೆಕ್ಕುಗಳು:

ಸವಾಲೆಸೆಯುವ ಟ್ರೆಕ್ಕುಗಳು:

ದಮ್ದಾರ್ ಕಂಡಿ ಪಾಸ್ : ಈ ಚಾರಣವು ಖಂಡಿತ ನೀವು ಜೀವಮಾನದಲ್ಲೆ ಮರೆಯುವಂತಿಲ್ಲ ಮಾಡಿದರೆ ಮಾತ್ರ. ಸುಂದರವಾಗಿಯೂ ಅಷ್ಟೆ ಕಠಿಣವಾಗಿಯೂ ಈ ಚಾರಣ ಮಾರ್ಗವಿದೆ. ಉತ್ತರಕಾಶಿಯಿಂದ ಮೂರ್ನಾಲ್ಕು ಘಂಟೆಗಳಷ್ಟು ದೂರದಲ್ಲಿರುವ ಝಾಲಾದಿಂದ ಈ ಚಾರಣ ಪ್ರಾರಂಭವಾಗಿ ದಟ್ಟಾರಣ್ಯದ ಮೂಲಕ ಸಾಗಿ ನಂತರ ಅತಿ ಮೊನಚಾದ ಏರಿಕೆಯಿಂದ ಕೂಡಿದ್ದು ಭಯ ಮೂಡಿಸುವಂತಿರುತ್ತದೆ. ಏರಿದ ಮೇಲೆ ಮತ್ತೆ ಕಾಲಾ ನಾಗ್ ಎಂಬ ಸ್ಥಳಕ್ಕೆ ಇಳಿಮುಖವಾಗಿ ಸಾಗಬೇಕು. ಸಾಂದರ್ಭಿಕ ಚಿತ್ರ. ಚಿತ್ರ ಸಾಂದರ್ಭಿಕವಾದರೂ ನೈಜ ಸ್ಥಿತಿಯೂ ಹೆಚ್ಚು ಕಮ್ಮಿ ಇದೆ ರೀತಿಯಲ್ಲಿರುತ್ತದೆ.

ಚಿತ್ರಕೃಪೆ: Donald Macauley

ಸವಾಲೆಸೆಯುವ ಟ್ರೆಕ್ಕುಗಳು:

ಸವಾಲೆಸೆಯುವ ಟ್ರೆಕ್ಕುಗಳು:

ಕೇದಾರನಾಥ ಟ್ರೆಕ್ : ಮತ್ತೊಂದು ಕಠಿಣವಾದ ಟ್ರೆಕ್ ಇದು. ಮೇ - ಜೂನ್ ಹಾಗೂ ಸೆಪ್ಟಂಬರ್ - ಅಕ್ಟೋಬರ್ ಸಮಯವು ಇದಕ್ಕೆ ಸೂಕ್ತವಾಗಿದೆ. ಕೇದಾರನಾಥ ಪರ್ವತದ ಮೇಲಿರುವ ಹಾಗೂ ಮಂದಾಕಿನಿ ನದಿಯ ತಟದಲ್ಲಿ ನೆಲೆಸಿರುವ ಶಿವನ ನೆಲೆಯು ಈ ಚಾರಣದ ಮುಖ್ಯ ಆಕರ್ಷಣೆಯಾಗಿದೆ. ಅಲ್ಲದೆ ಇದರ ಸುತ್ತಮುತ್ತಲಿನ ತಾಣಗಳೂ ಸಹ ಅದ್ಭುತವಾದ ಟ್ರೆಕ್ ಅನುಭವ ನೀಡುತ್ತದಾದರೂ ವಿಪರಿತ ಹವಾಮಾನ, ಆಮ್ಲಜನಕದ ಕೊರತೆ ಈ ಟ್ರೆಕ್ ಅನ್ನು ಒಂದು ಅಪಾಯಕಾರಿಯನ್ನಾಗಿ ಮಾಡಿದೆ. ಆದರೂ ಸಾಕಷ್ಟು ಶಿವನ ಭಕ್ತಾದಿಗಳು ದೇಶದ ಹಲವು ಭಾಗಗಳಿಂದ ಇಲ್ಲಿಗೆ ಬರುತ್ತಾರೆ. ಸಾಂದರ್ಭಿಕ ಚಿತ್ರ.

ಚಿತ್ರಕೃಪೆ: Donald Macauley

ಸವಾಲೆಸೆಯುವ ಟ್ರೆಕ್ಕುಗಳು:

ಸವಾಲೆಸೆಯುವ ಟ್ರೆಕ್ಕುಗಳು:

ಕುಮಾರಪರ್ವತ ಟ್ರೆಕ್ : ಹಿಮಾಲಯ ಭಾಗಗಳ ಟ್ರೆಕ್ ಗಳಿಗೆ ಹೋಲಿಸಿದರೆ ಇವು ಸಾಮಾನ್ಯವಾಗಿ ಕಂಡರೂ ದಕ್ಷಿಣ ಭಾರತದ ಸಾಕಷ್ಟು ಕಠಿಣವಾದ ಟ್ರೆಕ್ ಗಳಲ್ಲಿ ಇದೂ ಸಹ ಒಂದು. ಈ ಟ್ರೆಕ್ ಅನ್ನು ಸೋಮವಾರಪೇಟೆ ಅಥವಾ ಕುಕ್ಕೆ ಸುಬ್ರಹ್ಮಣ್ಯದಿಂದ ಮಾಡಬಹುದು. ಸಾಕಷ್ಟು ಜನ ಕುಕ್ಕುಯಿಂದ ಹೊರಡಲು ಬಯಸುತ್ತಾರೆ. ಕಾರಣ ದಟ್ಟಾರಣ್ಯ, ನೀರಿನ ತೊರೆಗಳು, ಅಲ್ಲಲ್ಲಿ ಮೊನಚಾದ ಬೆಟ್ಟಗಳು, ಇಳಿಯುವಿಕೆ ಮತ್ತೆ ಏರುವಿಕೆ ಹೀಗೆ ಹಲವು ಬಗೆಯ ನಡೆಗಳನ್ನು ನಡೆಯಬಹುದು.

ಚಿತ್ರಕೃಪೆ: solarisgirl

ಸವಾಲೆಸೆಯುವ ಟ್ರೆಕ್ಕುಗಳು:

ಸವಾಲೆಸೆಯುವ ಟ್ರೆಕ್ಕುಗಳು:

ಸಾವನದುರ್ಗ ಬೆಟ್ಟ : ಬೆಂಗಳೂರಿನಿಂದ ಮಾಗಡಿ ಹಾಗೂ ನಾಯಕನಪಾಳ್ಯದ ಮೂಲಕ ಸಾವನದುರ್ಗ ತಲುಪಬಹುದು. ಇದು ನೋಡಲು ಸರಳವಾಗಿ ಕಂಡರೂ ಮೇಲ್ಭಾಗದ ಕೆಲವು ಆಯಕಟ್ಟಿನ ಸ್ಥಳಗಳಲ್ಲಿ ಅತ್ಯಂತ ಮೊನಚಾದ ಏರುಗಳಿದ್ದು ಎಚ್ಚರಿಕೆಯಿಂದ ಹತ್ತಬೇಕಾಗಿರುವುದು ಬಹಳ ಅವಶ್ಯಕ. ಸ್ವಲ್ಪ ಅಜಾಗರೂಕತೆ ತೋರಿದರೂ ಯಮನ ದರ್ಶನ ಖಂಡಿತ.

ಚಿತ್ರಕೃಪೆ: PlaneMad

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X