Search
  • Follow NativePlanet
Share
» »ಶಾಪಗ್ರಸ್ತ ಹಾಗೂ ಭಯಾನಕ ದೇವಾಲಯ: ಕಿರಾಡು

ಶಾಪಗ್ರಸ್ತ ಹಾಗೂ ಭಯಾನಕ ದೇವಾಲಯ: ಕಿರಾಡು

ಕಿರಾಡುವಿನ ದೇವಾಲಯಗಳು ರಾಜಸ್ಥಾನದ ಅತ್ಯಂತ ನಿಗೂಢ ದೇವಾಲಯ. ಈ ದೇವಾಲಯವು ಶಾಪಗ್ರಸ್ತ ರೋಚಕ ಕಥೆಯನ್ನು ಆಧರಿಸಿದೆ. ಇಲ್ಲಿನ ಮಂಡಪಗಳು ಮಾನವರು. ಈ ಮಾನವರಿಗೆ ಶಾಪವನ್ನು ನೀಡಿದ್ದರಿಂದ ಕಿರಾಡುವಿನಲ್ಲಿ ಕಲ್ಲಾಗಿದ್ದಾರೆ ಎಂಬುದು ಇಲ್ಲಿನ ರೋಚಕ ಕಥ

ಕಿರಾಡುವಿನ ದೇವಾಲಯಗಳು ರಾಜಸ್ಥಾನದ ಅತ್ಯಂತ ನಿಗೂಢ ದೇವಾಲಯ. ಈ ದೇವಾಲಯವು ಶಾಪಗ್ರಸ್ತ ರೋಚಕ ಕಥೆಯನ್ನು ಆಧರಿಸಿದೆ. ರಾಜಸ್ಥಾನ ಬರ್‍ಮರ್ ಜಿಲ್ಲೆಯ ಮರುಭೂಮಿಯಲ್ಲಿ ಕಿರಾಡು ದೇವಾಲಯವಿದೆ. ಇಲ್ಲಿ ಹಲವಾರು ದೇವಾಲಯಗಳನ್ನು ಕಾಣಬಹುದು ಅವುಗಳಲ್ಲಿ ಮುಖ್ಯವಾದುದು ಎಂದರೆ 5 ದೇಗುಲ. ಸೋಮೆಶ್ವರ ದೇವಾಲಯವು ಮಾಹಾ ಶಿವನಿಗೆ ಎಂದೇ ನಿರ್ಮಿಸಿರುವ ದೇವಾಲಯ. ಶಿವನ ಈ ದೇಗುಲವನ್ನು 11 ರಿಂದ 12ನೇ ಶತಮಾನದಲ್ಲಿ ನಿರ್ಮಿಸಲಾಗಿದೆ. ಚಾಳುಕ್ಯರು ನಿರ್ಮಿಸಿದ ಈ ದೇವಾಲಯವು ಇದರ ವಾಸ್ತು ಶಿಲ್ಪ ದಿಂದ ಕಂಗೊಳಿಸುತ್ತಿದೆ. ಈ ಕಿರಾಡು ದೇವಾಲಯವನ್ನು ಹಿಂದೆ ಕಿರಾಡ್ ಕೋಟ್ ಎಂದು ಕರೆಯುತ್ತಿದ್ದರಂತೆ. ಈ ದೇವಾಲಯಕ್ಕೆ ಹಲವಾರು ಪ್ರವಾಸಿಗರು ಭೇಟಿ ನೀಡುತ್ತಿರುತ್ತಾರೆ. ಈ ಕಿರಾಡು ಸ್ಥಳವು ಸಂಜೆಯಾಗುತ್ತಿದ್ದಂತೆ ಭಯಾನಕ ಅವರಿಸುವ ನಿಗೂಢ ತಾಣವಾಗಿದೆ. ಪ್ರಸ್ತುತ ಲೇಖನದಲ್ಲಿ ಮರುಭೂಮಿಯಲ್ಲಿ ಸ್ಥಾಪಿಸಲಾಗಿರುವ ಕಿರಾಡು ದೇವಾಲಯದ ನಿಗೂಢತೆಯ ಬಗ್ಗೆ ತಿಳಿಯೋಣ.

ಭಾರತದ ಇತಿಹಾಸ

ಭಾರತದ ಇತಿಹಾಸ

ಈ ಕಿರಾಡು ಶಿವನ ದೇವಾಲಯವು ಒಂದು ಶಾಪಗ್ರಸ್ತವಾದ ದೇವಾಲಯವಾಗಿದೆ. ಹಲವಾರು ಶಾಪಗ್ರಸ್ತ ದೇಗುಲಗಳ ಪೈಕಿ ಈ ದೇವಾಲಯ ಒಂದಾಗಿದೆ.
PC:Through Hemant's

ಭಯಾನಕ ಕಥೆ

ಭಯಾನಕ ಕಥೆ

ಈ ಕಿರಾಡು ದೇವಾಲಯವು ಭಯನಾಕವಾದ ಕಥೆಯನ್ನು ಆಧಾರಿಸಿದೆ. ಹಾಗೇಯೆ ಇದೊಂದು ಅತ್ಯಂತ ನಿಗೂಢವಾದ ಸ್ಥಳವಾಗಿದೆ. ಇಂದಿಗೂ ಇದಕ್ಕೆ ಉತ್ತರ ಕಂಡು ಹಿಡಿಯಲು ಸಾಧ್ಯವಾಗಿಲ್ಲ.
PC:Arvind Khanna

ಕಿರಾಡು ರಹಸ್ಯ

ಕಿರಾಡು ರಹಸ್ಯ

ಈ ಕಿರಾಡು ದೇವಾಲಯವು ಮುರುಭೂಮಿಯಲ್ಲಿದ್ದು ಶಾಪಗ್ರಸ್ಥವಾದ ಮಾನವರು ಈ ರೀತಿ ದೇವಾಲಯವಾಗಿದ್ದಾರೆ ಎಂಬ ಪ್ರತೀತಿ ಇದೆ.
PC:mnojjat1990

ವಾಸ್ತು ಶಿಲ್ಪ

ವಾಸ್ತು ಶಿಲ್ಪ

ಈ ದೇವಾಲಯವು ಭಾರತದ ವಾಸ್ತು ಶಿಲ್ಪದಿಂದ ಕಂಗೊಳಿಸುತ್ತಿದೆ. ಈ ಕಿರಾಡು ದೇವಾಲಯವನ್ನು ನೋಡುವುದೇ ಒಂದು ಸೊಬಗು.
PC:Boudhi Tree

ಮರುಭೂಮಿ

ಮರುಭೂಮಿ

ಈ ದೇವಾಲಯದ ಮತ್ತೊಂದು ವೈಶಿಷ್ಟತೆಯೆಂದರೆ ಮರುಭೂಮಿಯಲ್ಲಿ ಈ ದೇವಾಲಯವಿರುವುದು ಎಂದೂ ಕಾಣಲಾಗದ ಮರುಭೂಮಿಯ ದೇಗುಲವನ್ನು ನೀವು ಇಲ್ಲಿ ಕಾಣಬಹುದಾಗಿದೆ.
PC:Boudhi Tree

ಶಿಲ್ಪಗಳು

ಶಿಲ್ಪಗಳು

ಈ ದೇವಾಲಯಕ್ಕೆ ಹಲವಾರು ಪ್ರವಾಸಿಗರು ಭೇಟಿ ನೀಡುತ್ತಿರುತ್ತಾರೆ. ಚೋಳರ ಕಾಲದ ಶಿಲ್ಪದ ಸೂಕ್ಷ್ಮವಾದ ಕೆತ್ತನೆ ಪ್ರತಿಯೊಬ್ಬರಿಗೊ ಆಕರ್ಷಿಸುತ್ತದೆ.

PC:Manfred Sommer

ಸೋಮೆಶ್ವರ ಅರಸ

ಸೋಮೆಶ್ವರ ಅರಸ

ಇತಿಹಾಸದ ಪ್ರಕಾರ ಕಿರಾಡುವನ್ನು ಕಿರಾಡ್ ಕೋಟ್ ಎಂದು ಕರೆಯಲಾಗುತ್ತಿತ್ತು. ಇಲ್ಲಿ ರಜಪುತರ ದೊರೆ ಸೋಮೆಶ್ವರ ಕಿರಾಡ್ ಪ್ರದೇಶವನ್ನು 6 ನೇ ಶತಮಾನದಲ್ಲಿ ಅಳ್ವಿಕೆ ಮಾಡಿದ್ದರಿಂದ ಈ ಅರಸನು ಇಟ್ಟಿದ ಹೆಸರು ಕಿರಾಡು ಆಗಿದೆ.
PC:~aDeSe~

ಶಿವ ಹಾಗೂ ವಿಷ್ಟು ದೇವಾಲಯ

ಶಿವ ಹಾಗೂ ವಿಷ್ಟು ದೇವಾಲಯ

ಈ ಕಿರಾಡುವಿನಲ್ಲಿ ಶಿವನ ಹಾಗೂ ಮಹಾ ವಿಷ್ಣುವಿನ ದೇವಾಲಯವನ್ನು ಇಲ್ಲಿ ಕಾಣಬಹುದು.
PC:~aDeSe~

ವಿದೇಶಿ ಅಕ್ರಮಣ

ವಿದೇಶಿ ಅಕ್ರಮಣ

ಸೋಮೇಶ್ವರ ಅರಸನು ವಿದೇಶಿಯ ಅಕ್ರಮಣದಿಂದ ಭಯಗೊಂಡಿದ್ದನು. ತನ್ನ ಅಮೂಲ್ಯವಾದ ಸಂಪತ್ತನ್ನು ಒಂದು ಸುಂದರವಾದ ಬೆಟ್ಟದ ಮೇಲೆ ಒಬ್ಬ ಗುಹೆಯಲ್ಲಿದ್ದ ಋಷಿಗೆ ಅಮಂತ್ರಿಸಿ ಸಂಪತ್ತನ್ನು ಸಂರಕ್ಷಿಸುವಂತೆ ತಿಳಿಸಿದನು.
PC:~aDeSe~

ಋಷಿವರ್ಯ

ಋಷಿವರ್ಯ

ಋಷಿಯು ರಾಜನ ಸಂಪತ್ತನು ತರಲು ಆತನ ಶಿಷ್ಯನನ್ನು ಕಳುಹಿಸಿದನು. ಈ ಸಂಪತ್ತುನ್ನು ಶಿಷ್ಯನು ನೋಡಿಕೊಳ್ಳುತ್ತಿದ್ದನು.
PC:Boudhi Tree

ರೋಗಗ್ರಸ್ತ ಶಿಷ್ಯ

ರೋಗಗ್ರಸ್ತ ಶಿಷ್ಯ

ಋಷಿಯ ಶಿಷ್ಯ ಒಂದು ದಿನ ರೋಗದಿಂದ ಬಳುತ್ತಿದ್ದ. ಆತನ ಪತ್ನಿ ಋಷಿಯ ಸಮೀಪ ಬಂದು ತನಗೆ ಸಂಪತ್ತಿನ ಅವಶ್ಯಕತೆಯನ್ನು ವಿವರಿಸಿಳು ಆಗ ಋಷಿವರ್ಯ ನೀಡಲಿಲ್ಲ.
PC:Boudhi Tree

ಶಾಪ

ಶಾಪ

ನೊಂದ ಪತ್ನಿ ಈ ಸಾಮ್ರಾಜ್ಯದ ಜನರು ಕಲ್ಲಾಗಲಿ, ಇಲ್ಲಿ ಯಾವ ಮಾನವನು ಜನಿಸಬಾರದು ಎಂದು ಶಾಪವನ್ನು ನೀಡಿದಳು. ಈ ಮಾನವರಿಗೆ ಶಾಪವನ್ನು ನೀಡಿದ್ದರಿಂದ ಕಿರಾಡುವಿನಲ್ಲಿ ಕಲ್ಲಾಗಿದ್ದಾರೆ ಎಂಬುದು ಇಲ್ಲಿನ ರೋಚಕ ಕಥೆಯಾಗಿದೆ.
PC:~aDeSe~

ಸಾಮ್ರಾಜ್ಯ ಅವನತಿ

ಸಾಮ್ರಾಜ್ಯ ಅವನತಿ

ಶಾಪಗ್ರಸ್ತಗೊಂಡ ಈ ಸಾಮ್ರಾಜ್ಯವು ಪೂರ್ಣವಾಗಿ ಅವನತಿ ಹೊಂದಿತು ಎಂಬುದು ಈ ಕಿರಾಡುವಿನ ಇತಿಹಾಸದ ಕಥೆಯಾಗಿದೆ.
PC:Boudhi Tree

ಭಯಂಕರ ಸ್ಥಳ

ಭಯಂಕರ ಸ್ಥಳ

ಸಂಜೆ 6 ಆಗುತ್ತಿದ್ದಂತೆ ಎಲ್ಲಾ ಪ್ರವಾಸಿಗರು ಆ ಸ್ಥಳದಲ್ಲಿ ಇರಬಾರದು. ಸಂಜೆಯಾದಗಲು ಈ ಸ್ಥಳದಲ್ಲೇ ಇದ್ದರೆ ಮಹಿಳೆಯು ಶಾಪವನ್ನು ನೀಡುತ್ತಾಳೆ ಎಂಬುವುದಾಗಿದೆ.
PC:Boudhi Tree

ಕಿರಾಡು

ಕಿರಾಡು

ಸಂಜೆ 6 ಗಂಟೆಯ ಮೇಲೆ ಈ ಸ್ಥಳದಲ್ಲೇ ಇದ್ದರೆ ಶಾಪ ನೀಡಿದ ಮಹಿಳೆ ಕರೆಯುತ್ತಾಳೆ. ಹಿಂದಿರುಗಿ ನೋಡಿದರೆ ಕಲ್ಲಾಗಿ ಪರಿವರ್ತನೆಗೊಳ್ಳುತ್ತಾರೆ ಎಂಬ ನಿಗೂಢವಿದೆ.
PC:Arvind Khanna

ವೈಜ್ಞಾನಿಕ ಅಂಶ

ವೈಜ್ಞಾನಿಕ ಅಂಶ

ಇದು ಸತ್ಯವೋ ಸುಳ್ಳೊ ಎಂದು ಇಂದಿಗೂ ಯಾರು ಪರಿಕ್ಷೇಯನ್ನು ಮಾಡಿಲ್ಲ. ಸೂರ್ಯಾಸ್ತವಾದ ನಂತರ ಈ ಕಿರಾಡು ಸ್ಥಳದಲ್ಲಿರಲು ಯಾರು ಧೈರ್ಯ ಮಾಡುವುದಿಲ್ಲವಂತೆ.
PC:mnojjat1990

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X