Search
  • Follow NativePlanet
Share
» »ಕುಣ್ಣೂರು ಎಂಬ ಗಿರಿಧಾಮಗಳ ಕಣ್ಮಣಿ

ಕುಣ್ಣೂರು ಎಂಬ ಗಿರಿಧಾಮಗಳ ಕಣ್ಮಣಿ

ತಮಿಳುನಾಡು ರಾಜ್ಯದ ನೀಲ್ಗಿರಿ ಜಿಲ್ಲೆಯ ಊಟಿಯ ಬಳಿ ಸ್ಥಿತವಿರುವ ಕುಣ್ಣೂರು ಎಂಬ ನೀಲ್ಗಿರಿ ಜಿಲ್ಲೆಯ ಎರಡನೆಯ ದೊಡ್ಡ ಗಿರಿಧಾಮ ಭೇಟಿ ನೀಡುವ ಪ್ರತಿಯೊಬ್ಬ ಸಂದರ್ಶನಕಾರನಿಗೆ ಅಥವಾ ಪ್ರವಾಸಿಗನಿಗೆ ಮನಸ್ಸು ಪುಳಕಿತಗೊಳ್ಳುವ ಬಾಲ್ಯದ ಮುಗ್ಧತೆ, ಅಚ್ಚರಿಯನ್ನೊಳಗೊಂಡ ನೆನಪುಗಳನ್ನು ತರುತ್ತದೆ.

ಕುಣ್ಣೂರು ಕುರಿತು ಸಮಗ್ರವಾಗಿ ತಿಳಿಯಿರಿ

ವಿಸ್ಮಯಭರಿತ ಈ ಗಿರಿಧಾಮ, ವಿಶ್ವ ಪ್ರಸಿದ್ಧ ಉದಕಮಂಡಲ (ಊಟಿ) ಹಿಲ್ ಸ್ಟೇಶನ್ ಗೆ ಸಮೀಪದಲ್ಲಿದೆ. ಸಮುದ್ರ ಮಟ್ಟದಿಂದ ಸುಮಾರು 1850 ಮೀ. ಎತ್ತರದಲ್ಲಿರುವ ಪುಟ್ಟ ಪಟ್ಟಣದ ಒಟ್ಟಾರೆ ಪರಿಸರ ಪ್ರವಾಸಿಗರನ್ನು ಆಕರ್ಷಿಸಿ ತನ್ನತ್ತ ಒಲಿಸಿಕೊಳ್ಳುವುದರಲ್ಲಿ ಸಂಶಯವೇ ಇಲ್ಲ.

ಕುಣ್ಣೂರಿನಲ್ಲಿರುವ ಹೋಟೆಲುಗಳು

ಈ ಸುಂದರ ಗಿರಿಧಾಮವು ಸದಾ ಪ್ರವಾಸಿಗರ ಸ್ವಾಗತಕ್ಕೆ ಸಜ್ಜಾಗಿ ನಿಂತಿರುವಂತೆ ಆಕ್ರ್ಷಿಸುತ್ತದೆ. ಒಮ್ಮೊಮ್ಮೆ ಬಹು ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡಿದಾಗ ಆ ಸ್ಂದರ್ಭದಲ್ಲಿ ಆಗುವ ಏಷ್ಟೆ ಸದ್ದು ಗದ್ದಲದ ನಡುವೆಯೂ, ಈ ಸ್ಥಳವು ಪ್ರಶಾಂತವಾದ ಹಾಗು ನಿರಾತಂಕವಾದ ವಾತಾವರಣವನ್ನು ಕರುಣಿಸುತ್ತದೆ. ಆದ್ದರಿಂದ ಈ ಸ್ಥಳವನ್ನು ಎಂದೂ ಮಲಗದ ಕಣಿವೆ ಎಂದೂ ಸಹ ವರ್ಣಿಸಿದ್ದಾರೆ.

ಚುಂಬಕ ಗಿರಿಧಾಮ ಕುಣ್ಣೂರು:

ಚುಂಬಕ ಗಿರಿಧಾಮ ಕುಣ್ಣೂರು:

ನೀಲ್ಗಿರಿ ಬೆಟ್ಟದ ರೈಲು ಪ್ರವಾಸದ ಸಂದರ್ಭದಲ್ಲಿ ಕುಣ್ಣೂರು ಗಿರಿಧಾಮಕ್ಕೆ ಭೇಟಿ ನೀಡದೆ ಹೋದರೆ ನಿಮ್ಮ ಪ್ರವಾಸ ಪರಿಪೂರ್ಣಗೊಳ್ಳುವುದಿಲ್ಲ. ರೈಲು ಮಾರ್ಗವು ಮೆಟ್ಟುಪಾಳಯಮ್ ನಿಂದ ಶುರುವಾಗಿ, ಬೆಟ್ಟದ ಮೇಲೆ ಏರಿ ಕುಣ್ಣೂರ್ ತಲುಪಿ ನಂತರ ಇದೇ ಮಾರ್ಗವು ಊಟಿಗೆ ಮುಂದುವರೆಯುತ್ತದೆ.

ಚಿತ್ರಕೃಪೆ: Antony Grossy

ಚುಂಬಕ ಗಿರಿಧಾಮ ಕುಣ್ಣೂರು:

ಚುಂಬಕ ಗಿರಿಧಾಮ ಕುಣ್ಣೂರು:

ಮಾರ್ಗ ಮಧ್ಯದಲ್ಲಿ ಕಾಣಲು ಸಿಗುವ ಸೊಗಸಾದ ದೃಶ್ಯಾವಳಿಗಳು, ಪ್ರಕೃತಿಯ ಭವ್ಯತೆ ಪ್ರಯಾಣಿಕರನ್ನು ಮಂತ್ರಮುಗ್ಧರನ್ನಾಗಿ ಮಾಡುವಲ್ಲಿ ಸಂಶಯವೇ ಇಲ್ಲ.

ಚಿತ್ರಕೃಪೆ: editor CrazyYatra

ಚುಂಬಕ ಗಿರಿಧಾಮ ಕುಣ್ಣೂರು:

ಚುಂಬಕ ಗಿರಿಧಾಮ ಕುಣ್ಣೂರು:

ಕುಣ್ಣೂರಿನಲ್ಲಿ ಮುಖ್ಯವಾಗಿ ಪ್ರವಾಸಿಗರು ಸಿಮ್ಸ್ ಪಾರ್ಕ್, ಡಾಲ್ಫಿನ್ ನೋಸ್, ದ್ರೂಗ್ ಕೋಟೆ, ಲ್ಯಾಂಬ್ಸ್ ರಾಕ್, ಹಿಡನ್ ವ್ಯಾಲಿ, ಕ್ಯಾತರೀನ್ ಫಾಲ್ಸ್, ಸೇಂಟ್ ಜಾರ್ಜ್ ಚರ್ಚ್ ನಂತಹ ಪ್ರವಾಸಿ ಆಕರ್ಷಣೆಗಳಿಗೆ ಭೇಟಿ ನೀಡಬಹುದು.

ಚಿತ್ರಕೃಪೆ: Balaji.B

ಚುಂಬಕ ಗಿರಿಧಾಮ ಕುಣ್ಣೂರು:

ಚುಂಬಕ ಗಿರಿಧಾಮ ಕುಣ್ಣೂರು:

ಕುಣ್ಣೂರಿನ ಆರ್ಥಿಕ ವ್ಯವಸ್ಥೆ ಬಹುತೇಕ ಚಹಾ ವ್ಯಾಪಾರದ ಮೇಲೆ ನಿಂತಿದೆ. ಇಲ್ಲಿನ ಬಹುತೇಕ ಮಂದಿ ಚಹಾದ ಬೇಸಾಯ ಹಾಗು ಅದರ ವ್ಯಾಪಾರವನ್ನು ತಮ್ಮ ಜೀವನಾಧಾರವನ್ನಾಗಿ ಮಾಡಿಕೊಂಡಿದ್ದಾರೆ.

ಚಿತ್ರಕೃಪೆ: Jon Connell

ಚುಂಬಕ ಗಿರಿಧಾಮ ಕುಣ್ಣೂರು:

ಚುಂಬಕ ಗಿರಿಧಾಮ ಕುಣ್ಣೂರು:

ನೀಲ್ಗಿರಿ ಮತ್ತು ಕುಣ್ಣೂರಿನ ಮತ್ತೊಂದು ವೈಶಿಷ್ಟ್ಯವೆಂದರೆ, ಮನೆಯಲ್ಲಿ ತಯಾರಾಗುವ ಚಾಕಲೇಟ್ ಗಳು. ಕುಣ್ಣೂರಿನ ಪ್ರತಿಯೊಂದು ಬೀದಿಯಲ್ಲಿ, ಗಲ್ಲಿಗಳಲ್ಲಿ, ಹೋಮ್ ಮೇಡ್ ಚಾಕಲೇಟ್ ಗಳು ದೊರೆಯುತ್ತವೆ. ಇದನ್ನು ಮಿಸ್ ಮಾಡಲೇಬಾರದು.

ಚಿತ್ರಕೃಪೆ: Thangaraj Kumaravel

ಚುಂಬಕ ಗಿರಿಧಾಮ ಕುಣ್ಣೂರು:

ಚುಂಬಕ ಗಿರಿಧಾಮ ಕುಣ್ಣೂರು:

ಕುಣ್ಣೂರು, ತೋಟಗಾರಿಕೆಗೆ ಮತ್ತು ಹೂ ಬಿಡುವ ಸಸ್ಯಗಳ ಕೃಷಿ (ಫ್ಲಾರಿಕಲ್ಚರ್) ಕೈಗಾರಿಕೋದ್ಯಮಕ್ಕೆ ಪ್ರಸಿದ್ಧಿ ಪಡೆದಿದೆ. ವಿವಿಧ ಬಗೆಯ ಅಪರೂಪದ ಆರ್ಕಿಡ್ ಮತ್ತು ಇತರ ಜಾತಿಯ ಹೂ ಬಿಡುವ ಸಸ್ಯಗಳನ್ನು ಬೆಳೆಸಿ, ಕುಣ್ಣೂರಿನ ಕೃಷಿ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತದೆ. ಇಲ್ಲಿ ದೊರೆಯುವ ವೈವಿಧ್ಯಮಯ ಹೂವುಗಳು ವಿಶ್ವದಾದ್ಯಂತ ಎಲ್ಲೂ ದೊರೆಯದಿರುವ ಕಾರಣದಿಂದಾಗಿ, ಒಂದು ಒಳ್ಳೆಯ ಅನುಭವ ನಿಮಗಾಗಬಹುದು.

ಚಿತ್ರಕೃಪೆ: Thangaraj Kumaravel

ಚುಂಬಕ ಗಿರಿಧಾಮ ಕುಣ್ಣೂರು:

ಚುಂಬಕ ಗಿರಿಧಾಮ ಕುಣ್ಣೂರು:

ಕುಣ್ಣೂರಿನಲ್ಲಿ ಬಲು ಅಪರೂಪದ ವೈವಿಧ್ಯಮಯ ಸಸ್ಯ ರಾಶಿ, ಹೂವುಗಳು ಹಾಗೂ ಅಂದ ಚೆಂದದ, ಬಣ್ಣ ಬಣ್ಣದ ಪುಟ್ಟ ಪುಟ್ಟ ಪಕ್ಷಿಗಳನ್ನು ನೋಡಿದಾಗ ಒಂದು ಕ್ಷಣ ನೀವೆಲ್ಲವನ್ನು ಮರೆತಿದ್ದೀರಾ ಎಂದು ಭಾಸವಾಗುತ್ತದೆ. ಇದೆ ಪ್ರಕೃತಿ ಸೌಂದರ್ಯವು ಮನುಜನಿಗೆ ಮಾಡುವ ಮೋಡಿ.

ಚಿತ್ರಕೃಪೆ: Antony Grossy

ಚುಂಬಕ ಗಿರಿಧಾಮ ಕುಣ್ಣೂರು:

ಚುಂಬಕ ಗಿರಿಧಾಮ ಕುಣ್ಣೂರು:

ನೀಲ್ಗಿರಿಗೆ ಭೇಟಿ ಕೊಡುವ ಪ್ರತಿಯೊಬ್ಬ ಪ್ರವಾಸಿಗನು ಮೌಂಟೆನ್ ರೈಲು ಮಾರ್ಗವಾಗಿ ಮೊದಲಿ ಕುಣ್ಣೂರಿಗೆ ಭೇಟಿ ನೀಡಿ ಅಲ್ಲಿನ ಅಂದ ಚೆಂದವನ್ನು ಸವಿದು ನಂತರ ಊಟಿಯೆಡೆ ಪ್ರಯಾಣ ಬೆಳೆಸುತ್ತಾರೆ.

ಚಿತ್ರಕೃಪೆ: David Brossard

ಚುಂಬಕ ಗಿರಿಧಾಮ ಕುಣ್ಣೂರು:

ಚುಂಬಕ ಗಿರಿಧಾಮ ಕುಣ್ಣೂರು:

ಕುಣ್ಣೂರು ಒಂದು ಗಿರಿಧಾಮ ಪ್ರದೇಶವಾಗಿದ್ದು ಉತ್ತಮ ಹವಾಮಾನಕ್ಕೆ ಹೆಸರುವಾಸಿಯಾಗಿದೆ. ಚಳಿಗಾಲದಲ್ಲಿ ಹೆಚ್ಚು ಚಳಿಯಿದ್ದು, ಬೇಸಿಗೆಯಲ್ಲಿ ಉಷ್ಣಾಂಶ ಹಿತಕರವಾಗಿರುತ್ತದೆ. ಮುಂಗಾರಿನಲ್ಲಿ ಹೆಚ್ಚು ಮಳೆಯಾಗುವುದರಿಂದ ಕುಣ್ಣೂರು ಪ್ರವಾಸ ತುಸು ಕಷ್ಟಕರ. ಆದರೂ ಮಳೆಗಾಲದ ತಾಜಾ ಹಸಿರಿನ ಪರಿಸರ ಬಯಸುವವರು ಸಾಕಷ್ಟು ಜಾಗರೂಕತೆಯಿಂದ ಅದ್ಭುತವಾದ ಪ್ರವಾಸ ಮಾಡಬಹುದು.

ಚಿತ್ರಕೃಪೆ: Akhilesh Ravishankar

ಚುಂಬಕ ಗಿರಿಧಾಮ ಕುಣ್ಣೂರು:

ಚುಂಬಕ ಗಿರಿಧಾಮ ಕುಣ್ಣೂರು:

ಕುಣ್ಣೂರನ್ನು ಸುಲಭವಾಗಿ ತಲುಪಬಹುದು. ಇಲ್ಲಿಗೆ ತಲುಪಲು ಹತ್ತಿರವಿರುವ ಪ್ರಮುಖ ನಗರವೆಂದರೆ ಕೋಯಮತ್ತೂರು. ಮೊದಲಿಗೆ ಕೋಯಮತ್ತೂರನ್ನು ತಲುಪಿ ಅಲ್ಲಿಂದ ಮೆಟ್ಟುಪಾಳಯಮ್ ಗೆ ತೆರಳಬೇಕು. ಇದು ಕೇವಲ38 ಕಿ.ಮೀ ಗಳಷ್ಟು ದೂರದಲ್ಲಿದೆ. ನಂತರ ನೀಲಗಿರಿ ಬೆಟ್ಟದ ರೇಲ್ವೆ ಮಾರ್ಗವಾಗಿ ಕುಣ್ಣೂರಿಗೆ ತಲುಪಬಹುದು. ಇಲ್ಲವಾದರೆ, ಕೋಯಮತ್ತೂರಿನ ಗಾಂಧಿಪುರಮ್ ಬಸ್ಸು ನಿಲ್ದಾಣದಿಂದ ಊಟಿಗೆ ಹೋಗುವ ನೇರ ಬಸ್ ಹತ್ತಿ ಕುಣ್ಣೂರಲ್ಲಿ ಇಳಿಯಬಹುದು. ಕುಣ್ಣೂರಿನಲ್ಲಿರುವ ಸುಂದರ ಸಿಮ್ಸ್ ಪಾರ್ಕಿನ ಒಂದು ಚಿತ್ರ.

ಚಿತ್ರಕೃಪೆ: Thangaraj Kumaravel

ಚುಂಬಕ ಗಿರಿಧಾಮ ಕುಣ್ಣೂರು:

ಚುಂಬಕ ಗಿರಿಧಾಮ ಕುಣ್ಣೂರು:

ಕೊಯಮತ್ತೂರ್ ನಿಂದ ಕುಣ್ಣೂರ್ ಗೆ ಸುಮಾರು ಮೂರುವರೆ ಗಂಟೆಗಳ ಕಾಲದ ಪ್ರಯಾಣದ ಅವಧಿ ಇರುತ್ತದೆ. ದಾರಿಯುದ್ದಕ್ಕೂ ನಿಸರ್ಗದತ್ತ ಸೌಂದರ್ಯ, ಅಲ್ಲಲ್ಲಿ ಪ್ರವಾಸಿ ತಾಣಗಳು, ಚಹಾ ತೋಟಗಳು, ಹಿತಕರವಾದ ವಾತಾವರಣ ಹವ್ಯಾಸಿ ಪ್ರವಾಸಿಗರಿಗೆ, ಮಧುಚಂದ್ರ ಆಚರಿಸುವ ದಂಪತಿಗಳಿಗೆ, ಸ್ವರ್ಗವು ಧರೆಗಿಳಿದ ಹಾಗೆ ಗೋಚರಿಸುತ್ತವೆ.

ಚಿತ್ರಕೃಪೆ: Challiyan

ಚುಂಬಕ ಗಿರಿಧಾಮ ಕುಣ್ಣೂರು:

ಚುಂಬಕ ಗಿರಿಧಾಮ ಕುಣ್ಣೂರು:

ಸಿಮ್ ಪಾರ್ಕ್ ಕುಣ್ಣೂರಿನಲ್ಲಿರುವ ಗುರುತರವಾದ ಆಕರ್ಷಣೆ. 12 ಹೆಕ್ಟೇರುಗಳಷ್ಟು ವಿಶಾಲವಾದ ಪ್ರದೇಶದಲ್ಲಿ ಈ ಜೈವಿಕ ಸಸ್ಯೋದ್ಯಾನ ವಿಸ್ತೃತವಾಗಿ ಹರಡಿದೆ. ಈ ಸಸ್ಯೋದ್ಯಾನದಲ್ಲಿ 1000 ಕ್ಕೂ ಅಧಿಕ ಬಗೆಯ ವವಿಧ್ಯಮಯ ಸಸ್ಯಗಳಿರುವುದನ್ನು ಕಾಣಬಹುದು.

ಚಿತ್ರಕೃಪೆ: Gauri Wur Sem

ಚುಂಬಕ ಗಿರಿಧಾಮ ಕುಣ್ಣೂರು:

ಚುಂಬಕ ಗಿರಿಧಾಮ ಕುಣ್ಣೂರು:

ಈ ಸಹಜ ಸುಂದರ ಪ್ರಕೃತಿ ಉದ್ಯಾನವು ವಿಶಿಷ್ಟವಾದ ಹವಾಮಾನ ಗುಣಲಕ್ಷಣಗಳನ್ನು ಹೊಂದಿದ್ದು ಹೂ ಬಿಡುವ ಸಸ್ಯಗಳಿಗೆ ಹೇಳಿ ಮಾಡಿಸಿದಂತಹ ವಾತಾವರಣವನ್ನು ಹೊಂದಿದೆ. ಅಂತೆಯೆ ಇಲ್ಲಿಗೆ ವೈವಿಧ್ಯಮಯ ಹೂವುಗಳನ್ನು ನೋಡಲಾದರೂ ಭೇಟಿ ನೀಡ ಬೇಕು.

ಚಿತ್ರಕೃಪೆ: Thangaraj Kumaravel

ಚುಂಬಕ ಗಿರಿಧಾಮ ಕುಣ್ಣೂರು:

ಚುಂಬಕ ಗಿರಿಧಾಮ ಕುಣ್ಣೂರು:

ಸಿಮ್ ಉದ್ಯಾನದ ಕೆಲ ಸುಂದರ, ಮನಸೂರೆಗೊಳ್ಳುವ ಪುಷ್ಪಗಳು.

ಚಿತ್ರಕೃಪೆ: Nagesh Jayaraman

ಚುಂಬಕ ಗಿರಿಧಾಮ ಕುಣ್ಣೂರು:

ಚುಂಬಕ ಗಿರಿಧಾಮ ಕುಣ್ಣೂರು:

ಸಿಮ್ ಉದ್ಯಾನದ ಕೆಲ ಸುಂದರ, ಮನಸೂರೆಗೊಳ್ಳುವ ಪುಷ್ಪಗಳು.

ಚಿತ್ರಕೃಪೆ: Thangaraj Kumaravel

ಚುಂಬಕ ಗಿರಿಧಾಮ ಕುಣ್ಣೂರು:

ಚುಂಬಕ ಗಿರಿಧಾಮ ಕುಣ್ಣೂರು:

ಸಿಮ್ ಉದ್ಯಾನದ ಕೆಲ ಸುಂದರ, ಮನಸೂರೆಗೊಳ್ಳುವ ಪುಷ್ಪಗಳು.

ಚಿತ್ರಕೃಪೆ: Thangaraj Kumaravel

ಚುಂಬಕ ಗಿರಿಧಾಮ ಕುಣ್ಣೂರು:

ಚುಂಬಕ ಗಿರಿಧಾಮ ಕುಣ್ಣೂರು:

ಸಿಮ್ ಉದ್ಯಾನದ ಕೆಲ ಸುಂದರ, ಮನಸೂರೆಗೊಳ್ಳುವ ಪುಷ್ಪಗಳು.

ಚಿತ್ರಕೃಪೆ: Antony Grossy

ಚುಂಬಕ ಗಿರಿಧಾಮ ಕುಣ್ಣೂರು:

ಚುಂಬಕ ಗಿರಿಧಾಮ ಕುಣ್ಣೂರು:

ಸಿಮ್ ಉದ್ಯಾನದ ಕೆಲ ಸುಂದರ, ಮನಸೂರೆಗೊಳ್ಳುವ ಪುಷ್ಪಗಳು.

ಚಿತ್ರಕೃಪೆ: Thangaraj Kumaravel

ಚುಂಬಕ ಗಿರಿಧಾಮ ಕುಣ್ಣೂರು:

ಚುಂಬಕ ಗಿರಿಧಾಮ ಕುಣ್ಣೂರು:

ಸಿಮ್ ಉದ್ಯಾನದ ಕೆಲ ಸುಂದರ, ಮನಸೂರೆಗೊಳ್ಳುವ ಪುಷ್ಪಗಳು.

ಚಿತ್ರಕೃಪೆ: Thangaraj Kumaravel

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X