Search
  • Follow NativePlanet
Share
» »ಮೈಮರೆಸುವ ವಿಶಿಷ್ಟ ಚಿನ್ನಾರ್ ವನ್ಯಜೀವಿ ಧಾಮ

ಮೈಮರೆಸುವ ವಿಶಿಷ್ಟ ಚಿನ್ನಾರ್ ವನ್ಯಜೀವಿ ಧಾಮ

By Vijay

ಮೈಪುಳಕಿತಗೊಳಿಸುವ, ಸ್ವಚ್ಛ ಹಸಿರಿನಿಂದ ಕಂಗೊಳಿಸುವ ದಟ್ಟ ಅರಣ್ಯಗಳಿಂದ ಭೂಷಿತವಾಗಿರುವ ಕೇರಳ ರಾಜ್ಯವು ಅಪಾರ ಸಂಖ್ಯೆಯಲ್ಲಿ ಪ್ರವಾಸಿಗರನ್ನು ತನ್ನೆಡೆ ಆಕರ್ಷಿಸುತ್ತದೆ. ಕಾಂಕ್ರೀಟ್ ಕಟ್ಟಡಗಳ ಕಾಡುಗಳಿಂದ ಭರ್ತಿಯಾಗಿರುವ ಇಂದಿನ ಮಹಾನಗರಗಳು ಹಾಗೂ ಅದರಲ್ಲಿ ವಾಸಿಸುವ ಜನರಿಗೆ ನೈಸರ್ಗಿಕ ವಾತಾವರಣ ಸಿಗುವುದೇ ಅಪರೂಪ.

ಟ್ರಾವಲ್ ಗುರು ಮೂಲಕ ಹೋಟೆಲ್ ಬುಕ್ಕಿಂಗ್ ಮೇಲೆ 40% ರಷ್ಟು ಕಡಿತ

ಅದಕ್ಕೆಂತಲೆ ಸಮಯ ಸಿಕ್ಕಾಗಲೆಲ್ಲ, ನಗರದ ಜನರು ಪ್ರಕೃತಿಯ ಸೊಬಗನ್ನರಸುತ್ತ ಪ್ರವಾಸ ಹೊರಡುವುದು ಇಂದು ಕಾಣಬಹುದಾದ ಸಾಮಾನ್ಯ ಸಂಗತಿ. ಹೆಚ್ಚಾಗಿ ಮನುಷ್ಯನು ಪ್ರಕೃತಿಯ ತಾಣದಲ್ಲಿರಲು ಅದರೊಂದಿಗೆ ಬೆಸೆಯಲು ಒಳಗೊಳಗೆ ಹಂಬಲಿಸುತ್ತಿರುತ್ತಾನೆ. ಅಂತೆಯೆ ಯಾರಿಗಾದರೂ ಸರಿ ಗುಡ್ಡ, ಬೆಟ್ಟ, ಕಾಡು, ಜಲಪಾತಗಳಿರುವ ಸ್ಥಳಗಳಿಗೆ ಭೇಟಿ ನೀಡುವುದೆಂದರೆ ಆಗುವ ಆನಂದ ಅಷ್ಟಿಷ್ಟಲ್ಲ.

ವಿಶೇಷ ಲೇಖನ : ಕೇರಳದ ಮೋಡಿ ಮಾಡುವ ಕಾಡುಗಳು

ಇಂದಿನ ಈ ಲೇಖನದಲ್ಲಿ ಕೇರಳದ ಒಂದು ವಿಶಿಷ್ಟ ಹಾಗೂ ನೈಸರ್ಗಿಕ ಸೊಬಗಿನಿಂದ ಕೂಡಿದ ಒಂದು ಸುಂದರ ವನ್ಯಜೀವಿ ಧಾಮದ ಕುರಿತು ಪ್ರಸ್ತಾಪಿಸಲಾಗಿದೆ. ಈ ವನ್ಯಜೀವಿ ಧಾಮವು ರಾಜ್ಯದ ಇಡುಕ್ಕಿ ಜಿಲ್ಲೆಯ ದೇವಿಕುಲಂ ತಾಲೂಕಿನ ಮರಯೂರು ಎಂಬ ಗ್ರಾಮದ ಬಳಿ ಸ್ಥಿತವಿದೆ. ಇದೊಂದು ರಕ್ಷಿತ ಅರಣ್ಯವಾಗಿದ್ದು ಪ್ರವಾಸಿಗರನ್ನು ಸದಾ ಆಕರ್ಷಿಸುತ್ತದೆ. ಇದೆ ಚಿನ್ನಾರ್ ವನ್ಯಜೀವಿ ಧಾಮ.

ಹೆಚ್ಚಿನ ಓದಿಗೆ : ಕರ್ನಾಟಕದ ಪ್ರಮುಖ ವನ್ಯಜೀವಿಧಾಮಗಳು ಪೀಚಾವರಂ ಕಾಡಿನ ವೈಶಿಷ್ಟ್ಯ

ಚಿನ್ನಾರ್ ವನ್ಯಜೀವಿಧಾಮ:

ಚಿನ್ನಾರ್ ವನ್ಯಜೀವಿಧಾಮ:

ಎರವಿಕುಲಂ ರಾಷ್ಟ್ರೀಯ ಉದ್ಯಾನದ ಸುಪರ್ದಿಯಲ್ಲಿರುವ ಈ ವನ್ಯಜೀವಿ ಧಾಮವು ಉತ್ತರಕ್ಕೆ ಇಂದಿರಾಗಾಂಧಿ ರಾಷ್ಟ್ರೀಯ ಉದ್ಯಾನ ಹಾಗೂ ಪೂರ್ವಕ್ಕೆ ಕೊಡೈಕೆನಾಲ್ ರಾಷ್ಟ್ರೀಯ ಉದ್ಯಾನಗಳಿಂದ ಸುತ್ತುವರೆದಿದೆ.

ಚಿತ್ರಕೃಪೆ: Kerala Tourism

ಚಿನ್ನಾರ್ ವನ್ಯಜೀವಿಧಾಮ:

ಚಿನ್ನಾರ್ ವನ್ಯಜೀವಿಧಾಮ:

ಈ ವನ್ಯಜೀವಿಧಾಮವನ್ನೂ ಹಿಡಿದು ಒಟ್ಟಾರೆಯಾಗಿ ತಮಿಳುನಾಡು-ಕೇರಳ ಗಡಿಯಲ್ಲಿರುವ ಒಟ್ಟು 1,187 ಚ.ಕಿ.ಮೀ ಅರಣ್ಯ ಪ್ರದೇಶವು ರಕ್ಷಿತ ಪ್ರದೇಶವಾಗಿದ್ದು, ಯುನೆಸ್ಕೊದಿಂದ ವಿಶ್ವ ಪಾರಂಪರಿಕ ತಾಣದ ಸ್ಥಾನಮಾನ ಪಡೆಯುವ ಹಂತದಲ್ಲಿದೆ.

ಚಿತ್ರಕೃಪೆ: Marcus334

ಚಿನ್ನಾರ್ ವನ್ಯಜೀವಿಧಾಮ:

ಚಿನ್ನಾರ್ ವನ್ಯಜೀವಿಧಾಮ:

ರಾಜ್ಯ ಹೆದ್ದಾರಿ ಸಂಖ್ಯೆ 17 (ಮುನ್ನಾರ್-ಉಡುಮಾಲ್ಪೇಟ್) ಚಿನ್ನಾರ್ ವನ್ಯಜೀವಿ ಧಾಮದ ಮಧ್ಯದಲ್ಲಿ ಸುಮಾರು 17 ಕಿ.ಮೀಗಳಷ್ಟು ಉದ್ದ ಹಾಯ್ದು ಹೋಗಿದ್ದು ಈ ಧಾಮವನ್ನು ಎರಡು ಸಮಭಾಗಗಳಲ್ಲಿ ವಿಭಜಿಸುತ್ತದೆ.

ಚಿತ್ರಕೃಪೆ: Kerala Tourism

ಚಿನ್ನಾರ್ ವನ್ಯಜೀವಿಧಾಮ:

ಚಿನ್ನಾರ್ ವನ್ಯಜೀವಿಧಾಮ:

ಇದೊಂದು ಮಳೆ ನೆರಳಿನ ಪ್ರದೇಶವಾಗಿದ್ದು, ಇತರೆ ವನ್ಯಜೀವಿ ಧಾಮಗಳಂತೆ ಇಲ್ಲಿ ಮಳೆಯು ಸಾಕಷ್ಟು ಪ್ರಮಾಣದಲ್ಲಿ ಬಿಳುವುದಿಲ್ಲ. ವಾರ್ಷಿಕವಾಗಿ 500 ಎಂಎಂ ಮಳೆಯು ಕೇವಲ ಸರಾಸರಿ 48 ದಿನಗಳವರೆಗೆ ಮಾತ್ರವೆ ಬಿಳುತ್ತದೆ. ಅಂದರೂ ಇದು ಹಸಿರಿನ ಸಿರಿಯಿಂದ ಕಂಗೊಳಿಸುವುದೆ ಇದರ ವೈಶಿಷ್ಟ್ಯ.

ಚಿತ್ರಕೃಪೆ: Dhruvaraj S

ಚಿನ್ನಾರ್ ವನ್ಯಜೀವಿಧಾಮ:

ಚಿನ್ನಾರ್ ವನ್ಯಜೀವಿಧಾಮ:

ಇನ್ನೂ ಧಾಮದ ಸಮುದ್ರ ಮಟ್ಟದಿಂದ ಎತ್ತರವು ಚಿನ್ನಾರ್ ನದಿಯ ಬಳಿ 400 ಮೀ ಗಳಾಗಿದ್ದರೆ ಇನ್ನೊಂದು ಬದಿಯಲ್ಲಿರುವ ಕುಮರಿಕಲ್ ಶಿಕರವು 2,522 ಮೀ ಗಳಷ್ಟು ಎತ್ತರದಲ್ಲಿದೆ. ಕುಮರಿಕಲ್ ಅಲ್ಲದೆ ಈ ಧಾಮದಲ್ಲಿ ನಂದಲಾ ಶಿಖರ, ಕೊಟ್ಟಕೊಂಬು ಶಿಖರ, ವೆಲ್ಲೈಕಾಲ್ ಬೆಟ್ಟ ಹಾಗೂ ವಿರಿಯುಟ್ಟೂ ಬೆಟ್ಟಗಳನ್ನೂ ಸಹ ಕಾಣಬಹುದು.

ಚಿತ್ರಕೃಪೆ: nishad kaippally

ಚಿನ್ನಾರ್ ವನ್ಯಜೀವಿಧಾಮ:

ಚಿನ್ನಾರ್ ವನ್ಯಜೀವಿಧಾಮ:

ಬುಡಕಟ್ಟು ಜನಾಂಗಗಳಿಂದಲೂ ಸಹ ಶ್ರೀಮಂತವಾಗಿರುವ ಈ ವನ್ಯಜೀವಿಧಾಮವು ಶ್ರೀಮಂತ ಜೈವಿಕ ಸಂಪತ್ತಿಗೆ ಆಶ್ರಯ ತಾಣವಾಗಿದೆ. ವೈವಿಧ್ಯಮಯ ಜೀವ ಜಂತುಗಳನ್ನು ಈ ಧಾಮದಲ್ಲಿ ಕಾಣಬಹುದು.

ಚಿತ್ರಕೃಪೆ: N. A. Naseer

ಚಿನ್ನಾರ್ ವನ್ಯಜೀವಿಧಾಮ:

ಚಿನ್ನಾರ್ ವನ್ಯಜೀವಿಧಾಮ:

ಸುಮಾರು 11 ಬಗೆಯ ಬುಡಕಟ್ಟು ಜನಾಂಗಗಳು ಹಾಗೂ ಬಗೆ ಬಗೆಯ ಆಚರಣೆಗಳು ಈ ಅಭಯಾರಣ್ಯದ ತುಂಬೆಲ್ಲ ಕಾಣಬಹುದು. ಅಲ್ಲದೆ ಪುರಾತನ ಕಾಲದಲ್ಲಿದ್ದ ದೊಡ್ಡ ಸಮಾಧಿ ಸ್ಥಳಗಳೆನ್ನಬಹುದಾದ ಡಾಲ್ಮೆನ್ ಗಳನ್ನು ಇಲ್ಲಿ ಕಾಣಬಹುದು.

ಚಿತ್ರಕೃಪೆ: Naseer Ommer

ಚಿನ್ನಾರ್ ವನ್ಯಜೀವಿಧಾಮ:

ಚಿನ್ನಾರ್ ವನ್ಯಜೀವಿಧಾಮ:

ಅಪರೂಪದ ಔಷಧೀಯ ಸಸ್ಯಗಳು, ನಕ್ಷತ್ರ ಕವಚದ ಆಮೆಗಳು, ದೊಡ್ಡ ಅಳಿಲುಗಳು ಹೀಗೆ ಕೆಲ ಅಪರೂಪದ ಪ್ರಾಣಿ ಪಕ್ಷಿಗಳನ್ನು ಈ ಧಾಮದಲ್ಲಿ ಕಾಣಬಹುದಾಗಿದೆ.

ಚಿತ್ರಕೃಪೆ: Ajith U

ಚಿನ್ನಾರ್ ವನ್ಯಜೀವಿಧಾಮ:

ಚಿನ್ನಾರ್ ವನ್ಯಜೀವಿಧಾಮ:

ಪ್ರವಾಸಿಗರ ಅನುಕೂಲಕ್ಕೆಂದು ವಸತಿ ಗೃಹ ಹಾಗೂ ಉಪಹಾರಗೃಹವೂ ಸಹ ಈ ವನ್ಯಜೀವಿ ಧಾಮದಲ್ಲಿದ್ದು, ಟ್ರೆಕ್ಕಿಂಗ್ ನಂತಹ ಚಟುವಟಿಕೆಗಳು (ಮಾರ್ಗದರ್ಶಿ ಸಹಿತ) ಇಲ್ಲಿ ಲಭ್ಯವಿದೆ. ಟ್ರೆಕ್ಕಿಂಗ್ ಈ ಧಾಮದ ಪ್ರಮುಖ ಆಕರ್ಷಣೆಯಾಗಿದ್ದು ಚಿನ್ನಾರ್ ನದಿಯ ಮೂಲಕ ಸಾಗುವುದೆ ಒಂದು ಅದ್ಭುತ ಅನುಭವ ದೊರಕಿಸುತ್ತದೆ.

ಚಿತ್ರಕೃಪೆ: nishad kaippally

ಚಿನ್ನಾರ್ ವನ್ಯಜೀವಿಧಾಮ:

ಚಿನ್ನಾರ್ ವನ್ಯಜೀವಿಧಾಮ:

ಚಿನ್ನಾರ್ ಮತ್ತು ಪಂಬಾರ್ ನದಿಗಳು ಈ ಧಾಮದಲ್ಲಿ ಹರಿದಿದ್ದು, ನೀರಿನ ಪ್ರಮುಖ ಮೂಲಗಳಾಗಿವೆ. ಕುಮರಿಕಲ್ ಬೆಟ್ಟದಲ್ಲಿ ಉಗಮಗೊಳ್ಳುವ ಚಿನ್ನಾರ್ ನದಿಯು ಈ ವನ್ಯಜೀವಿಧಾಮದಲ್ಲಿ ಸುಮಾರು 18 ಕಿ.ಮೀ ಗಳಷ್ಟು ಹರಿದಿದ್ದು ನಂತರ ತಮಿಳುನಾಡು ರಾಜ್ಯ ಪ್ರವೇಶಿಸಿ ಅಲ್ಲಿ ಅಮರಾವತಿ ಎಂಬ ಹೆಸರಿನಿಂದ ಮುಂದುವರೆಯುತ್ತದೆ. ಪಂಬಾರ್ ನದಿ.

ಚಿನ್ನಾರ್ ವನ್ಯಜೀವಿಧಾಮ:

ಚಿನ್ನಾರ್ ವನ್ಯಜೀವಿಧಾಮ:

ಆನೈಮುಡಿ ಬೆಟ್ಟ ಶ್ರೆಣಿಗಳಲ್ಲಿ ಹುಟ್ಟುವ ಪಂಬಾರ್ ನದಿಯು ಹರಿಯುತ್ತ ಎರವಿಕುಲಂ ರಾಷ್ಟ್ರೀಯ ಉದ್ಯಾನ ಪ್ರವೇಶಿಸಿ ನಂತರ ಶೋಲಾ ಅರಣ್ಯದ ಹಾಗೂ ಕೆಲ ಸ್ಥಳೀಯ ನೀರಿನ ತೊರೆಗಳ ಜೊತೆಗೂಡಿ ನಂತರ ಚಿನ್ನಾರ್ ವನ್ಯಜೀವಿಧಾಮವನ್ನು ಪ್ರವೇಶಿಸುತ್ತದೆ. ಇದು ಕೊಟ್ಟಾರ್ ಎಂಬಲ್ಲಿ ಚಿನ್ನಾರ್ ನದಿಯನ್ನು ಸೇರುತ್ತದೆ.

ಚಿತ್ರಕೃಪೆ: Jbmarshal27

ಚಿನ್ನಾರ್ ವನ್ಯಜೀವಿಧಾಮ:

ಚಿನ್ನಾರ್ ವನ್ಯಜೀವಿಧಾಮ:

ಚಿನ್ನಾರ್ ವನ್ಯಜೀವಿ ಧಾಮದಲ್ಲಿರುವ ಮತ್ತೊಂದು ನಯನ ಮನೋಹರ ಸ್ಥಳವೆ ತೂವನಂ ಜಲಪಾತ ತಾಣ. ಪಂಬಾರ್ ನದಿಯಿಂದ ರೂಪಗೊಳ್ಳುವ ಈ ಜಲಪಾತವು ನೋಡಲು ಅದ್ಭುತವಾಗಿ ಕಾಣುತ್ತದೆ.

ಚಿತ್ರಕೃಪೆ: Ajith U

ಚಿನ್ನಾರ್ ವನ್ಯಜೀವಿಧಾಮ:

ಚಿನ್ನಾರ್ ವನ್ಯಜೀವಿಧಾಮ:

ಇಲ್ಲಿ ಸಮಗ್ರವಾಗಿ ನಡೆಸಿದ ಅಧ್ಯಯನದ ಪ್ರಕಾರ, 34 ಬಗೆಯ ಸಸ್ತನಿಗಳು, 50 ರಿಂದ 60 ಆನೆಗಳು, 245 ಬಗೆಯ ಪಕ್ಷಿಗಳು, 52 ಬಗೆಯ ಸರಿಸೃಪಗಳು, 29 ಬಗೆಯ ಹಾವುಗಳು, 42 ಬಗೆಯ ಮೀನುಗಳು, 22 ಬಗೆಯ ಉಭಯವಾಸಿಗಳು ಹಾಗೂ 156 ಬಗೆಯ ಚಿಟ್ಟೆಗಳು ವಾಸಿಸುತ್ತವೆ.

ಚಿತ್ರಕೃಪೆ: Dhruvaraj S

ಚಿನ್ನಾರ್ ವನ್ಯಜೀವಿಧಾಮ:

ಚಿನ್ನಾರ್ ವನ್ಯಜೀವಿಧಾಮ:

ಜೈವಿಕ ಪರಿಸರ ಪ್ರವಾಸೋದ್ಯಮಕ್ಕೆ ಉದಾಹರಣೆಯಾಗಿರುವ ಈ ಧಾಮದಲ್ಲಿ ಅಪರೂಪದ ಔಷಧೀಯ ಸಸ್ಯಗಳನ್ನೂ ಸಹ ಕಾಣಬಹುದು. ಮರಯೂರಿನ ಏಕೈಕ ಚಂದನವನವೂ ಸಹ ಈ ಧಾಮದ ಬಳಿಯಿದೆ. ಅಲ್ಲದೆ ಅನೇಕ ಜಾತಿಯ ಮರ ಗಿಡಗಳನ್ನು ಈ ಅಭಯಾರಣ್ಯದಲ್ಲಿ ಕಾಣಬಹುದಾಗಿದೆ.

ಚಿತ್ರಕೃಪೆ: Anilkumar Patro

ಚಿನ್ನಾರ್ ವನ್ಯಜೀವಿಧಾಮ:

ಚಿನ್ನಾರ್ ವನ್ಯಜೀವಿಧಾಮ:

ಕೊನೆಯದಾಗಿ ಹೇಳಬೇಕೆಂದರೆ ಈ ಧಾಮದಲ್ಲಿ ತಿ ಪ್ರಮುಖವಾಗಿ ಮೂರು ಚಟುವಟಿಕೆಗಳನ್ನು ಆಸ್ವಾದಿಸಬಹುದು. ಅಪರೂಪದ ದೊಡ್ಡ ಗಾತ್ರದ ಅಳಿಲುಗಳನ್ನು ನೋಡುವುದು, ಟ್ರೆಕ್ ಮೂಲಕ ತೂವನಂ ಜಲಪಾತಕ್ಕೆ ಭೇಟಿ ನೀಡುವುದು ಹಾಗೂ ವೀಕ್ಷಣಾ ಗೋಪುರವೇರಿ ಧಾಮದ ಸಂಪೂರ್ಣ ವಿಹಂಗಮ ನೋಟ ಹಾಗೂ ಪಕ್ಕದ ತಮಿಳುನಾಡಿನ ರಮಣೀಯ ಬೆಟ್ಟ ಶ್ರೇಣಿಗಳನ್ನು ನೋಡುವುದು.

ಚಿತ್ರಕೃಪೆ: Dhruvaraj S

ಚಿನ್ನಾರ್ ವನ್ಯಜೀವಿಧಾಮ:

ಚಿನ್ನಾರ್ ವನ್ಯಜೀವಿಧಾಮ:

ಚಿನ್ನಾರ್ ಇಡುಕ್ಕಿ ಜಿಲ್ಲೆಯಲ್ಲಿದ್ದು, ಪ್ರಖ್ಯಾತ ಪ್ರವಾಸಿ ತಾಣ ಮುನ್ನಾರ್ ನ ಉತ್ತರಕ್ಕೆ ಕೇವಲ 60 ಕಿ.ಮೀ ಗಳಷ್ಟು ದೂರದಲ್ಲಿದೆ. ಮುನ್ನಾರ್ - ಉಡುಮಾಲ್ಪೇಟ್ ರಸ್ತೆಯ ಮೇಲೆ ಸಾಗುತ್ತ ಈಲ್ಲಿಗೆ ಪ್ರವೇಶಿಸಬಹುದು. ಇದಕ್ಕೆ ಹತ್ತಿರದಲ್ಲಿರುವ ರೈಲು ನಿಲ್ದಾಣ ಎರ್ನಾಕುಲಂ (180 ಕಿ.ಮೀ).

ಚಿತ್ರಕೃಪೆ: Marcus334

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X