Search
  • Follow NativePlanet
Share
» »ಬೃಹದೇಶ್ವರ ದೇವಸ್ಥಾನ : ಭಾರತದ ಶ್ರೀಮಂತ ವಾಸ್ತುಶಿಲ್ಪ

ಬೃಹದೇಶ್ವರ ದೇವಸ್ಥಾನ : ಭಾರತದ ಶ್ರೀಮಂತ ವಾಸ್ತುಶಿಲ್ಪ

By Vijay

ವಾಸ್ತು ಶಿಲ್ಪ ಕಲೆಯ ಬೀಡಾಗಿರುವ ನಮ್ಮ ನಾಡು ಅನೇಕಾನೇಕ ಭವ್ಯವಾದ ವಾಸ್ತುಶಿಲ್ಪ ಕಲೆ ಹೊತ್ತ ಸಾವಿರಾರು ರಚನೆಗಳನ್ನು ಹೊಂದಿದೆ. ಅಂದಿನ ಕಾಲದ ಕುಶಲ ಕರ್ಮಿಗಳ, ಶಿಲ್ಪಿಗಳ ಅಗಾಧ ಕೌಶಲ್ಯತೆಯನ್ನು ಇಂದಿಗೂ ಕೂಡ ನಾವು ಕಾಣುವಂತಾಗಿರುವುದು ನಮ್ಮ ಅದೃಷ್ಟವೆ ಸರಿ. ಸೂಕ್ಷ್ಮ ಹಾಗು ಸುಂದರ ವಾಸ್ತು ಶಿಲ್ಪದ ದೃಷ್ಟಿಯಿಂದ ಪಟ್ಟಿಯನ್ನು ತಯಾರಿಸುತ್ತಾ ಹೋದರೆ ಆ ಪಟ್ಟಿಗೆ ಕೊನೆಯನ್ನು ಕಾಣಿಸುವುದು ತುಸು ಕಷ್ಟವೆ ಹೌದು. ಏಕೆಂದರೆ ಅಂಥ ಸಾಕಷ್ಟು ರಚನೆಗಳು ನಮ್ಮಲ್ಲಿ ದೊರೆಯುತ್ತವೆ.

ಇನ್ನೂ ವಾಸ್ತು ಶಿಲ್ಪ ಕಲೆಯ ದೃಷ್ಟಿಯಿಂದ ಹಿಂದೂ ದೇವಾಲಯಗಳನ್ನು ಗಮನಿಸುವಾಗ ಅಗ್ರಗಣ್ಯ ದೇವಸ್ಥಾನಗಳ ಪೈಕಿ ಒಂದಾಗಿ ನಿಲ್ಲುತ್ತದೆ ತಂಜಾವೂರಿನ ಬೃಹದೇಶ್ವರ ದೇವಸ್ಥಾನ. ಯುನೆಸ್ಕೊದಿಂದ ವಿಶ್ವ ಪಾರಂಪರಿಕ ತಾಣದ ಮಾನ್ಯತೆ ಪಡೆದಿರುವ ಈ ದೇವಸ್ಥಾನವು ಇರುವುದು ದೇವಾಲಯಗಳ ರಾಜ್ಯ ತಮಿಳುನಾಡಿನ ತಂಜಾವೂರು ಪಟ್ಟಣದಲ್ಲಿ. ಚೋಳ ಸಾಮ್ರಾಜ್ಯದ ದೊರೆ ಒಂದನೇಯ ರಾಜ ರಾಜ ಚೋಳನಿಂದ 1010 ರಲ್ಲಿ ನಿರ್ಮಿಸಲಾದ ಈ ದೇವಾಲಯ 2010 ಕ್ಕೆ ತನ್ನ ಸಾವಿರ ವರ್ಷಗಳನ್ನು ಪೂರ್ಣಗೊಳಿಸಿದೆ.

ಶ್ರೇಷ್ಠ ವಾಸ್ತು ಶಿಲ್ಪ ಕಲೆಯನ್ನು ಹೊಂದಿರುವ ಈ ದೇವಸ್ಥಾನದ ಕುರಿತು ಕಿರು ಮಾಹಿತಿ ಸ್ಲೈಡುಗಳ ಮೂಲಕ ತಿಳಿಯಿರಿ.

ಬೃಹದೇಶ್ವರ ದೇವಾಲಯ:

ಬೃಹದೇಶ್ವರ ದೇವಾಲಯ:

ತಂಜಾವೂರು ಪಟ್ಟಣದ ಮಧ್ಯದಲ್ಲಿ ಪ್ರಶಾಂತವಾಗಿ ನೆಲೆಸಿದ್ದು ಗಮನ ಸೆಳೆವ ಬೃಹದೇಶ್ವರ ದೇವಸ್ಥಾನ.

ಚಿತ್ರಕೃಪೆ: Fraboof

ಬೃಹದೇಶ್ವರ ದೇವಾಲಯ:

ಬೃಹದೇಶ್ವರ ದೇವಾಲಯ:

ಭಾರತದಲ್ಲಿ ಕಂಡುಬರುವ ದೊಡ್ಡ ದೇವಾಲಯಗಳ ಪೈಕಿ ಒಂದಾಗಿರುವ ಈ ದೇವಸ್ಥಾನವು ಸುಮಾರು 16 ನೇಯ ಶತಮಾನದಲ್ಲಿ ನಿರ್ಮಿಸಿದರೆನ್ನಲಾಗುವ ಕೋಟೆಯ ಗೋಡೆಗಳಿಂದ ಸುತ್ತು ವರೆದಿದೆ.

ಚಿತ್ರಕೃಪೆ: Thamizhpparithi Maari

ಬೃಹದೇಶ್ವರ ದೇವಾಲಯ:

ಬೃಹದೇಶ್ವರ ದೇವಾಲಯ:

ದೇವಸ್ಥಾನದ ವಿಶೇಷತೆಯೆಂದರೆ ಇದರ ಕಳಶವನ್ನು ಒಂದೆ ಕಲ್ಲಿನಲ್ಲಿ ಕೆತ್ತಲಾಗಿದ್ದು 80 ಟನ್ ಗಳಷ್ಟು ಭಾರ ಹೊಂದಿದೆ.

ಚಿತ್ರಕೃಪೆ: Abhikanil

ಬೃಹದೇಶ್ವರ ದೇವಾಲಯ:

ಬೃಹದೇಶ್ವರ ದೇವಾಲಯ:

ಅಲ್ಲದೆ ದೇವಸ್ಥಾನದ ಪ್ರವೇಶ ದ್ವಾರದಲ್ಲಿ ಮೂಲ ದೇವರಿಗೆ ಅಭಿಮುಖವಾಗಿ ಒಂದೆ ಕಲ್ಲಿನಲ್ಲಿ ಕೆತ್ತಲಾದ ನಂದಿಯ ವಿಗ್ರಹವನ್ನು ಕಾಣಬಹುದು. ಈ ಪ್ರತಿಮೆಯು16 ಅಡಿ ಉದ್ದ ಹಾಗು 13 ಅಡಿಗಳಷ್ಟು ಎತ್ತರವಿದೆ.

ಚಿತ್ರಕೃಪೆ: Jparande

ಬೃಹದೇಶ್ವರ ದೇವಾಲಯ:

ಬೃಹದೇಶ್ವರ ದೇವಾಲಯ:

ಸಂಪೂರ್ಣ ದೇವಾಲಯವನ್ನು ಗ್ರಾನೈಟ್ ಕಲ್ಲಿನಿಂದ ನಿರ್ಮಿಸಲಾಗಿದೆ. ಈ ತಾಣದಿಂದ 60 ಕಿ.ಮೀ ದೂರವಿರುವ ತಿರುಚಿರಾಪಳ್ಳಿ ಬಳಿಯಿರುವ ಸ್ಥಳದಿಂದ ಗ್ರಾನೈಟ್ ಕಲ್ಲುಗಳನ್ನು ಬಳಸಲಾಗಿದೆ.

ಚಿತ್ರಕೃಪೆ: Raj

ಬೃಹದೇಶ್ವರ ದೇವಾಲಯ:

ಬೃಹದೇಶ್ವರ ದೇವಾಲಯ:

1002 ರಲ್ಲಿ ಈ ದೇವಸ್ಥಾನದ ಅಡಿಪಾಯವನ್ನು ಚೋಳ ಸಾಮ್ರಾಜ್ಯದ ಅನಭಿಶಕ್ತ ದೊರೆಯಾದ ಅರುಣ್ ಮೋೞಿ ವರ್ಮನ್ (ಮೊದಲನೇಯ ರಾಜರಾಜ ಚೋಳ) ಹಾಕಿ ಚೋಳ ಅಸ್ತಿತ್ವದ ದೇವಾಲಯಗಳ ಯೋಜನೆಗೆ ಚಾಲನೆ ನೀಡಿದನು.

ಚಿತ್ರಕೃಪೆ: Arjun Duvvuru

ಬೃಹದೇಶ್ವರ ದೇವಾಲಯ:

ಬೃಹದೇಶ್ವರ ದೇವಾಲಯ:

ಮೊದಲನೇಯ ರಾಜ ರಾಜ ಚೋಳನು ತಾನು ಕಂಡ ಕನಸಿನಲ್ಲಿ ದೇವಾಲಯವ ನಿರ್ಮಿಸುವಂತೆ ನಿರ್ದೇಶನವನ್ನು ಪಡೆದು ಅದರ ಕುರುಹಾಗಿ ಈ ದೇವಾಲಯ ನಿರ್ಮಿಸಿದ. ಇದರ ನಂತರ ಮುಂದಿನ ಎರಡು ಶತಮಾನಗಳವರೆಗೆ ಅನೇಕ ದೇವಸ್ಥಾನಗಳು ಚೋಳರಿಂದ ನಿರ್ಮಿಸಲ್ಪಟ್ಟವು. ಇವು ಚೋಳರ ಶಕ್ತಿ, ಕಲಾಶ್ರೀಮಂತಿಕೆ ಹಾಗು ಅಧಿಕಾರವನ್ನು ಅನಾವರಣಗೊಳಿಸುತ್ತದೆ.


ಚಿತ್ರಕೃಪೆ: Parvathy

ಬೃಹದೇಶ್ವರ ದೇವಾಲಯ:

ಬೃಹದೇಶ್ವರ ದೇವಾಲಯ:

ಬೃಹದೇಶ್ವರ ದೇವಾಲಯವನ್ನು ಮೂಲವಾಗಿ ರಾಜ ದೇವಾಲಯದಂತೆ ನಿರ್ಮಿಸಲಾಗಿದ್ದು ರಾಜನ ಮುಂದಾಲೋಚನೆಯ ಶಕ್ತಿ ಹಾಗು ಜಗತ್ತಿನೊಡೆಯನೊಡನೆ ಅವನಿಗಿದ್ದ ಭಕ್ತಿಯನ್ನು ಸಾರಿ ಹೇಳುತ್ತದೆ.

ಚಿತ್ರಕೃಪೆ: Vinayaraj

ಬೃಹದೇಶ್ವರ ದೇವಾಲಯ:

ಬೃಹದೇಶ್ವರ ದೇವಾಲಯ:

ರಾಜನಿಗೆ ಸನ್ಮಾನಿಸುವ ಅನೇಕ ಆಚರಣೆಗಳು ಈ ದೇವಾಲಯದಲ್ಲಿ ಜರುಗುತ್ತಿದ್ದವು. ದೇವಾಲಯ ನಿರ್ಮಾಣವು ಸಂಪೂರ್ಣವಾಗಿ ದ್ರಾವಿಡ ಶೈಲಿಯಲ್ಲಾಗಿದೆ.

ಚಿತ್ರಕೃಪೆ: Vinayaraj

ಬೃಹದೇಶ್ವರ ದೇವಾಲಯ:

ಬೃಹದೇಶ್ವರ ದೇವಾಲಯ:

ರಾಜರಾಜ ಚೋಳನು ಶ್ರೀಲಂಕಾದಲ್ಲಿ ರಾಜ್ಯಭಾರ ಮಾಡುತ್ತಿದ್ದಾಗ ಈ ರೀತಿಯಾಗಿ ಒಂದು ಬೃಹತ್ ದೇವಾಲಯದ ನಿರ್ಮಾಣ ಮಾಡುವ ಪ್ರೇರಣೆಯಾಗಿ ಅದರ ಫಲವಾಗಿ ಈ ದೇವಾಲಯದ ನಿರ್ಮಾಣವಾಗಿದೆ.

ಚಿತ್ರಕೃಪೆ: Vinayaraj

ಬೃಹದೇಶ್ವರ ದೇವಾಲಯ:

ಬೃಹದೇಶ್ವರ ದೇವಾಲಯ:

ದೇವಾಲಯದಲ್ಲಿ ದೊರಕಿದ ಶಾಸನದ ಪ್ರಕಾರ ಈ ದೇವಸ್ಥಾನದ ನಿರ್ಮಾಣ ಕಾಮಗಾರಿಯ ಜವಾಬ್ದಾರಿಯನ್ನು ಕುಂಜರ ಮಲ್ಲನ್ ರಾಜರಾಜ ಪೆರುಂದಚ್ಚನ್ ವಹಿಸಿದ್ದನು.

ಚಿತ್ರಕೃಪೆ: Portvp

ಬೃಹದೇಶ್ವರ ದೇವಾಲಯ:

ಬೃಹದೇಶ್ವರ ದೇವಾಲಯ:

ಈ ದೇವಸ್ಥಾನವು ಪುರಾತನ ವಾಸ್ತುಶಾಸ್ತ್ರ ಹಾಗು ಆಗಮ ಶಾಸ್ತ್ರಗಳ ಬುನಾದಿಯ ಮೇಲೆ ನಿರ್ಮಾಣವಾಗಿದೆ.

ಚಿತ್ರಕೃಪೆ: Anushamutyala

ಬೃಹದೇಶ್ವರ ದೇವಾಲಯ:

ಬೃಹದೇಶ್ವರ ದೇವಾಲಯ:

ಸಂಪೂರ್ಣವಾಗಿ ಗ್ರಾನೈಟ್ ನಲ್ಲಿ ನಿರ್ಮಿಸಲಾದ ಮೊದಲ ದೇವಸ್ಥಾನ ಇದಾಗಿದ್ದು, ಪೂರ್ಣಗೊಳ್ಳಲು ಐದು ವರ್ಷ ಬೇಕಾಯಿತು.

ಚಿತ್ರಕೃಪೆ: Portvp

ಬೃಹದೇಶ್ವರ ದೇವಾಲಯ:

ಬೃಹದೇಶ್ವರ ದೇವಾಲಯ:

ದೇವಸ್ಥಾನದ ಅಡಿಪಾಯವು ಭೂಮಟ್ಟದಿಂದ 16 ಅಡಿಗಳಷ್ಟು ಎತ್ತರವಿದ್ದು, ಅದರ ಮೇಲೆ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ.

ಚಿತ್ರಕೃಪೆ: Vsvs2233

ಬೃಹದೇಶ್ವರ ದೇವಾಲಯ:

ಬೃಹದೇಶ್ವರ ದೇವಾಲಯ:

ದೇವಸ್ಥಾನದ ಗೋಪುರವು ಸುಮಾರು 80 ಟನ್ ಗಳಷ್ಟು ಭಾರವಿದ್ದು, ಒಂದೆ ಕಲ್ಲಿನಲ್ಲಿ ಇದನ್ನು ಕೆತ್ತಲಾಗಿದೆ. ಈ ರೀತಿಯ ಭಾರವನ್ನು ಅಂದಿನ ಕಾಲದಲ್ಲಿ ಮೇಲಕ್ಕೆ ಹೊತ್ತೊಯ್ದು ಕೂಡಿಸಿರುವುದು ಒಂದು ಸೋಜಿಗದ ಸಂಗತಿಯೆ.

ಚಿತ್ರಕೃಪೆ: PRADHEEP J V

ಬೃಹದೇಶ್ವರ ದೇವಾಲಯ:

ಬೃಹದೇಶ್ವರ ದೇವಾಲಯ:

ಈ ದೇವಸ್ಥಾನದ ಮೂಲ ವಿಗ್ರಹವು ಶಿವ ಲಿಂಗವಾಗಿದ್ದು 3.7 ಮೀಟರುಗಳಷ್ಟು ಎತ್ತರ ಹೊಂದಿದೆ.


ಚಿತ್ರಕೃಪೆ: Bernard Gagnon

ಬೃಹದೇಶ್ವರ ದೇವಾಲಯ:

ಬೃಹದೇಶ್ವರ ದೇವಾಲಯ:

ದೇವಾಲಯದ ಹೊರ ಗೋಡೆಗಳಲ್ಲಿ ಭರತನಾಟ್ಯ ಮಾಡುತ್ತಿರುವ 81 ಕಲಾಕೃತಿಗಳನ್ನು ಕಾಣಬಹುದು.

ಚಿತ್ರಕೃಪೆ: Pagu

ಬೃಹದೇಶ್ವರ ದೇವಾಲಯ:

ಬೃಹದೇಶ್ವರ ದೇವಾಲಯ:

ಈ ದೇವಸ್ಥಾನದಲ್ಲಿ ವಿವಿಧ ದೇವರುಗಳ ದೇಗುಲಗಳನ್ನೂ ಸಹ ಕಾಣಬಹುದಾಗಿದ್ದು ಅವುಗಳನ್ನು ಈ ಕ್ಷೇತ್ರವನ್ನು ಆಳಿದ ಆಯಾ ಕಾಲದ ರಾಜರುಗಳಿಂದ ನಿರ್ಮಿಸಲಾಗಿದೆ.

ಚಿತ್ರಕೃಪೆ: Aruna

ಬೃಹದೇಶ್ವರ ದೇವಾಲಯ:

ಬೃಹದೇಶ್ವರ ದೇವಾಲಯ:

13 ನೇಯ ಶತಮಾನದಲ್ಲಿ ಪಾಂಡ್ಯರು ದೇವತೆಗಳ ಕಲಾಕೃತಿಗಳನ್ನು ಸೇರಿಸಿದ್ದರೆ, ಸುಬ್ರಹ್ಮಣ್ಯ ಸ್ವಾಮಿಯ ದೇಗುಲವನ್ನು ವಿಜಯನಗರದ ಆಡಳಿತಗಾರರು ಪರಿಚಯಿಸಿದರು. ನಂತರ ಮರಾಠರು ಗಣಪತಿಯ ದೇಗುಲವನ್ನು ಸೇರಿಸಿದರು.

ಚಿತ್ರಕೃಪೆ: Junykwilfred

ಬೃಹದೇಶ್ವರ ದೇವಾಲಯ:

ಬೃಹದೇಶ್ವರ ದೇವಾಲಯ:

ಕೋಟೆಯ ರೀತಿಯಲ್ಲಿ ನಿರ್ಮಿಸಲಾದ ಈ ದೇವಸ್ಥಾನವು ನದಿಯ ತಟದಲ್ಲಿ ಸ್ಥಿತವಿದ್ದು, ನಿರ್ಮಿಸುವಾಗ ನದಿಯ ನೀರನ್ನು ಬಳಸಲಾಗುತ್ತಿತ್ತು.

ಚಿತ್ರಕೃಪೆ: Thamizhpparithi Maari

ಬೃಹದೇಶ್ವರ ದೇವಾಲಯ:

ಬೃಹದೇಶ್ವರ ದೇವಾಲಯ:

ಈ ದೇವಸ್ಥಾನ ಸಂಕೀರ್ಣದಲ್ಲಿರುವ ಬಹುತೇಕ ರಚನೆಗಳು ಅಕ್ಷೀಯವಾಗಿ ನಿರ್ಮಿಸಲ್ಪಟ್ಟಿವೆ. ಮುಖ್ಯ ದೇವಾಲಯವನ್ನು ಐದು ಅಂತಸ್ತುಗಳ ಗೋಪುರದ ಅಕ್ಷದ ಮೂಲಕ ಇಲ್ಲವೆ ಪ್ರತ್ಯೇಕವಾದ ಗೋಪುರದ ಮೂಲಕ ಚೌಕಾಂಗಣಕ್ಕೆ ಪ್ರವೇಶಿಸಿ ತಲುಪಬಹುದಾಗಿದೆ.


ಚಿತ್ರಕೃಪೆ: vishwaant avk

ಬೃಹದೇಶ್ವರ ದೇವಾಲಯ:

ಬೃಹದೇಶ್ವರ ದೇವಾಲಯ:

ಈ ದೇವಸ್ಥಾನವಿರುವ ತಂಜಾವೂರು ಪಟ್ಟಣವನ್ನು ರೈಲು, ರಸ್ತೆ ಹಾಗು ವಿಮಾನಗಳ ಮೂಲಕ ಸುಲಭವಾಗಿ ತಲುಪಬಹುದಾಗಿದೆ. ಚೆನ್ನೈ, ಕುಂಭಕೋಣಂ, ಕೋಯಮತ್ತೂರು, ಈರೋಡ್ ಮುಂತಾದ ಸ್ಥಳಗಳಿಂದ ಸರ್ಕಾರಿ ಬಸ್ಸುಗಳು ದೊರೆಯುತ್ತವೆ. ತಂಜಾವೂರು ತನ್ನದೆ ಆದ ಜಂಕ್ಷನ್ ರೈಲು ನಿಲ್ದಾಣವನ್ನು ಹೊಂದಿದ್ದು ರಾಜ್ಯದ ಪ್ರಮುಖ ನಗರಗಳಿಂದ ಇಲ್ಲಿಗೆ ರೈಲಿನ ಸಂಚಾರವಿದೆ. ಹತ್ತಿರದ ವಾಯು ನಿಲ್ದಾಣವೆಂದರೆ ತಿರುಚಿರಾಪಳ್ಳಿ. ಇದು ಕೇವಲ 65 ಕಿ.ಮೀ ದೂರದಲ್ಲಿದೆ.

ಚಿತ್ರಕೃಪೆ: Portvp

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X