Search
  • Follow NativePlanet
Share
» »ನಿಬ್ಬೆರಗಾಗಿಸುವ ವಿವಿಧ ಪಕ್ಷಿಗಳ ರಾಷ್ಟ್ರೀಯ "ಸ್ವರ್ಗ"

ನಿಬ್ಬೆರಗಾಗಿಸುವ ವಿವಿಧ ಪಕ್ಷಿಗಳ ರಾಷ್ಟ್ರೀಯ "ಸ್ವರ್ಗ"

By Vijay

ನಿರ್ಮಲ ವಾತಾವರಣ, ಸ್ವಚ್ಛ ಪರಿಸರ, ಎಲ್ಲೆಲ್ಲೂ ಹಸಿರು ಮರಗಳ ತೋಪುಗಳು, ಅಲ್ಲಲ್ಲಿ ಹಳ್ಳ ಕೊಳ್ಳಗಳು, ನಗರದ ಗೌಜುಗದ್ದಲಗಳ ಗೈರು, ಇವೆಲ್ಲವುದರ ನಡುವೆ ಚಿಲಿಪಿಲಿ ಎಂದು ಇಂಪಾಗಿ ಗುಂಯ್ ಗುಡುತ್ತಿರುವ ವಿವಿಧ ಬಣ್ಣ ಚಿತ್ತಾರಗಳ ಹಲವು ಹಕ್ಕಿಗಳ ಸಹಜವಾದ ಹಾರಾಟ, ಇಷ್ಟು ಸಾಕು..ಬಳಲಿ ಬೆಂಡಾದ ಮನಕೆ ನೆಮ್ಮದಿಯ, ಆನಂದದ ಅನುಭವ ಕರುಣಿಸಲು. ಹೌದು, ವಿರಾಮ ಕಾಲದಲ್ಲಿ ಬಗೆ ಬಗೆಯ ಹಕ್ಕಿಗಳನ್ನು ನೋಡುವುದು, ಚಿತ್ರಗಳಲ್ಲಿ ಸೆರೆ ಹಿಡಿಯುವುದು ಒಂದು ಉಲ್ಲಾಸಮಯ ಅನುಭವ ನೀಡುತ್ತದೆ.

ನಮ್ಮಲ್ಲಿ ಬಹುತೇಕರಿಗೆ ಸಾಮಾನ್ಯ ಹಕ್ಕಿಗಳ ಪರಿಚಯವಿದ್ದರೂ ಕೆಲವು ಅಪರೂಪದ, ಆಸಕ್ತಿಭರಿತ ವಿಶೀಷ್ಟ ಹಕ್ಕಿಗಳ ಕುರಿತು ತಿಳಿದಿರುವುದೆ ಇಲ್ಲ. ಇದೆ ರೀತಿ ಭಾರತದಲ್ಲಿ ಕಂಡುಬರುವ ಕೆಲವು ಉದ್ಯಾನಗಳು ಕೆಲವೊಂದು ವಿಶೀಷ್ಟ ರೀತಿಯ ಹಕ್ಕಿಗಳಿಗೆ ಆಶ್ರಯವಾಗಿರುವುದು ಹಲವರಿಗೆ ಗೊತ್ತಿರಲಿಕ್ಕಿಲ್ಲ. ರಾಜಸ್ಥಾನ ರಾಜ್ಯದಲ್ಲಿರುವ ಕೇವಲಾದೇವ್ (Keoladeo) ರಾಷ್ಟ್ರೀಯ ಉದ್ಯಾನವು ಅಂತಹ ಒಂದು ಅದ್ಭುತ ಹಕ್ಕಿಗಳನ್ನು ಕಾಣಬಹುದಾದ ವೈಭವಯುತ ತಾಣವಾಗಿದೆ. ಹಕ್ಕಿಗಳ ವೀಕ್ಷಣೆಯ ದೃಷ್ಟಿಯಿಂದ ಇದು ಭಾರತದಲ್ಲಿ ಮಾತ್ರವಲ್ಲದೆ ಏಷಿಯಾ ಖಂಡದಲ್ಲೆ ಗಮ್ಯ ಪ್ರವಾಸಿ ತಾಣವಾಗಿದೆ.

ದೇಶ, ವಿದೇಶದ ಎಲ್ಲೆಡೆಯಿಂದ ಈ ಪ್ರವಾಸಿ ರಾಷ್ಟ್ರೀಯ ಉದ್ಯಾನಕ್ಕೆ ಪಕ್ಷಿ ಪ್ರಿಯ ಪ್ರವಾಸಿಗರು, ಛಾಯಾಗ್ರಾಹಕರು ಆಗಮಿಸುತ್ತಿರುತ್ತಾರೆ. ಹಿಂದೆ ಭರತ್‍ಪುರ್ ಮಹಾರಾಜಾ ಸೂರಜ್ ಮಲ್ ಎಂಬುವವರ ಬಾತುಗಳ ಬೇಟೆ ತಾಣವಾಗಿ ಮೀಸಲಾಗಿದ್ದ ಈ ತಾಣವು ಇಂದು ಹಕ್ಕಿಗಳಿಗೆ ಸ್ವರ್ಗವಾಗಿದ್ದು ಅಭಯಧಾಮವಾಗಿದೆ. ವರ್ಷಪೂರ್ತಿ ಪ್ರವಾಸಿಗರಿಗೆ ತೆರೆದಿರುವ ಈ ರಾಷ್ಟ್ರೀಯ ಉದ್ಯಾನದೊಳಗೆ ವಿದೇಶಿಯರು 200 ರೂ ಹಾಗು ಭಾರತೀಯರು 25 ರೂ ಶುಲ್ಕ ಕೊಟ್ಟು ಪ್ರವೇಶಿಸಬೇಕು. ಈ ಲೇಖನದ ಮೂಲಕ ಇಲ್ಲಿ ಕಂಡು ಬರುವ ಕೆಲವು ವಿಶೀಷ್ಟ ಹಕ್ಕಿಗಳ ಪ್ರವಾಸ ಮಾಡೋಣ.

ಪರ್ಪಲ್ ಸನ್‍ಬರ್ಡ್:

ಪರ್ಪಲ್ ಸನ್‍ಬರ್ಡ್:

ಇದೊಂದು ಪುಟ್ಟ ಹಕ್ಕಿಯಾಗಿದೆ. ಇತರೆ ಸನ್‍ಬರ್ಡ್ ಹಕ್ಕಿಗಳಂತೆ ಇವು ಕೂಡ ಮಕರಂದವನ್ನು ತಿಂದು ಬದುಕುತ್ತವೆ.

ಚಿತ್ರಕೃಪೆ: K Hari Krishnan

ಪಟ್ಟಿ ತಲೆಯುಳ್ಳ ಹೆಬ್ಬಾತು:

ಪಟ್ಟಿ ತಲೆಯುಳ್ಳ ಹೆಬ್ಬಾತು:

ಹೆಚ್ಚಾಗಿ ಚಳಿಗಾಲದ ಸಮಯದಲ್ಲಿ ಕಂಡು ಬರುವ ಈ ಹೆಬ್ಬಾತುಗಳು ಭೂಮಟ್ಟದಲ್ಲೆ ಗೂಡುಗಳನ್ನು ಕಟ್ಟಿ ಸಂತಾನೋತ್ಪಟ್ಟಿ ಮಾಡುತ್ತವೆ.

ಚಿತ್ರಕೃಪೆ: Diliff

ಸಾರಸ್ ಕ್ರೇನ್ ಪಕ್ಷಿ:

ಸಾರಸ್ ಕ್ರೇನ್ ಪಕ್ಷಿ:

ಕೇವಲಾದೇವ್ ರಾಷ್ಟ್ರೀಯ ಉದ್ಯಾನದಲ್ಲಿ ಕಂಡುಬರುವ ಒಂದು ಅದ್ಭುತ ಪಕ್ಷಿ ಸಾರಸ್ ಕ್ರೇನ್. ನಿಂತಾಗ ಇದರ ಎತ್ತರ ಸುಮಾರು 1.8 ಮೀ ಗಳವರೆಗಿರುತ್ತದೆ.

ಚಿತ್ರಕೃಪೆ: J.M.Garg

ರುಡ್ಡಿ ಶೆಲ್ಡಕ್:

ರುಡ್ಡಿ ಶೆಲ್ಡಕ್:

ಈ ಬಾತುಗಳು ಮುಖ್ಯವಾಗಿ ವಲಸೆ ಹೋಗುವ ಪಕ್ಷಿ ಜಾತಿಗೆ ಸೇರಿದ್ದು, ಸಂತಾನೋತ್ಪತ್ತಿಯ ಅಂಗವಾಗಿ ಚಳಿಗಾಲದ ಸಮಯದಲ್ಲಿ ಭಾರತ ಉಪಖಂಡದಲ್ಲಿ ಕಂಡು ಬರುತ್ತವೆ. ನೋಡಲು ಸೊಗಸಾಗಿ ಕಂಡುಬರುವ ಈ ಬಾತುಗಳನ್ನು ಈ ರಾಷ್ಟ್ರೀಯ ಉದ್ಯಾನದಲ್ಲಿ, ಚಳಿಗಾಲದ ಸಮಯದಲ್ಲಿ ಕಾಣಬಹುದು.

ಚಿತ್ರಕೃಪೆ: Bulan Chakraborty

ಇಂಡಿಯನ್ ಪೀ ಫೋವ್ಲ್:

ಇಂಡಿಯನ್ ಪೀ ಫೋವ್ಲ್:

ಭಾರತದ ರಾಷ್ಟ್ರೀಯ ಪಕ್ಷಿಯಾದ ನವಿಲು ಕೂಡ ಸಾಮಾನ್ಯವಾಗಿ ಇಲ್ಲಿ ಕಂಡುಬರುವ ಒಂದು ಪಕ್ಷಿಯಾಗಿದೆ.

ಚಿತ್ರಕೃಪೆ: Ranjithkumar.i

ಬಿಳಿ ತಲೆಯಿರುವ ಬಾತು:

ಬಿಳಿ ತಲೆಯಿರುವ ಬಾತು:

ಆಕಾರದಲ್ಲಿ ಕೊಂಚ ದೊಡ್ಡದಾಗಿರುವ ಬಿಳಿ ಬಣ್ಣದ ತಲೆಯನ್ನು ಹೊಂದಿರುವ ಈ ಬಾತು ಕೇವಲಾದೇವ್ ರಾಷ್ಟ್ರೀಯ ಉದ್ಯಾನದಲ್ಲಿ ಕಂಡು ಬರುವ ಒಂದು ಹಕ್ಕಿ. ಹಾರುವುದಕ್ಕಿಂತ ಹೆಚ್ಚಾಗಿ ಈಜಾಡಲು ಬಯಸುವ ಈ ಬಾತು ಹಕ್ಕಿಗಳು ನೀರಿನಾಳದಲ್ಲಿ ಸರಾಗವಾಗಿ ವಿಹರಿಸಬಲ್ಲವು.

ಚಿತ್ರಕೃಪೆ: MissTanyaLove

ಗ್ರೇಟರ್ ಸ್ಕೌಪ್:

ಗ್ರೇಟರ್ ಸ್ಕೌಪ್:

ವಿರಳವಾಗಿರುವ ಈ ಹಕ್ಕಿಗಳು ಈ ರಾಷ್ಟ್ರೀಯ ಉದ್ಯಾನದಲ್ಲಿ ನಿರ್ದಿಷ್ಟ ಸಮಯದಲ್ಲಿ ಕಂಡುಬರುತ್ತವೆ. ದೊಡ್ಡದಾದ ನೀಲಿ ಬಣ್ಣದ ಕೊಕ್ಕು ಹೊಂದಿರುವುದರಿಂದ ಇದನ್ನು "ಬ್ಲೂ ಬಿಲ್" ಎಂದು ಕೂಡ ಕರೆಯಲಾಗುತ್ತದೆ.

ಚಿತ್ರಕೃಪೆ: Calibas

ಬ್ಲ್ಯಾಕ್ ಫ್ರ್ಯಾಂಕೋಲಿನ್:

ಬ್ಲ್ಯಾಕ್ ಫ್ರ್ಯಾಂಕೋಲಿನ್:

ಗ್ಯಾಲಿಫಾರ್ಮರ್ಸ್ ಕ್ರಮಾಂಕದ ಈ ಹಕ್ಕಿಯು ಫೇಸಿಯಾನಯ್ಡೆ ಜಾತಿಗೆ ಸೇರಿದ ಹಕ್ಕಿಯಾಗಿದೆ. ಇದು ಹರ್ಯಾಣದ ರಜ್ಯ ಪಕ್ಷಿಯ ಮಾನ್ಯತೆಯನ್ನು ಪಡೆದಿದೆ.

ಚಿತ್ರಕೃಪೆ: Tony Hisgett

ಕಾಮನ್ ಕ್ವೇಲ್:

ಕಾಮನ್ ಕ್ವೇಲ್:

ಇದೊಂದು ಪುಟ್ಟ ಹಕ್ಕಿಯಾಗಿದ್ದು ಈ ರಾಷ್ಟ್ರೀಯ ಉದ್ಯಾನದಲ್ಲಿ ಕಂಡುಬರುತ್ತದೆ. ಹುಳುಗಳು, ಕಾಳುಗಳನ್ನು ತಿಂದು ಬದುಕುವ ಈ ಹಕ್ಕಿಯು ಗಾತ್ರದಲ್ಲಿ ಏಳರಿಂದ ಒಂಬತ್ತು ಇಂಚುಗಳಷ್ಟಿದ್ದು 90 ರಿಂದ 130 ಗ್ರಾಂವರೆಗೆ ತೂಗುತ್ತದೆ.

ಚಿತ್ರಕೃಪೆ: Guérin Nicolas

ಜಂಗಲ್ ಬುಷ್ ಕ್ವೇಲ್:

ಜಂಗಲ್ ಬುಷ್ ಕ್ವೇಲ್:

ಆವಾಗಾವಾಗ ಕಾಣ ಸಿಗುವ ಈ ಹಕ್ಕಿಯು ನೋಡಲು ಚಿಕ್ಕದಾಗಿದ್ದು ಹೆಚ್ಚಾಗಿ ಕಾಳುಗಳನ್ನೆ ತಿಂದು ಬದುಕುತ್ತದೆ.

ಚಿತ್ರಕೃಪೆ: Niranjan Sant

ಲೆಸ್ಸರ್ ವ್ಹಿಸ್ಟ್ಲಿಂಗ್ ಡಕ್:

ಲೆಸ್ಸರ್ ವ್ಹಿಸ್ಟ್ಲಿಂಗ್ ಡಕ್:

ವ್ಹಿಸ್ಟ್ಲಿಂಗ್ ಡಕ್ ಜಾತಿಗೆ ಸೇರಿದ ಈ ಬಾತು ಆಕಾರ ಹಾಗು ಗಾತ್ರದಲ್ಲಿ ಚಿಕ್ಕದಾಗಿರುತ್ತದೆ. ರಾಷ್ಟ್ರೀಯ ಉದ್ಯಾನದೊಳಗಿರುವ ಕೆರೆ ತೊರೆಗಳ ಜೌಗು ಪ್ರದೇಶದಲ್ಲಿ ಈ ಬಾತುಗಳನ್ನು ಗಮನಿಸಬಹುದು.

ಚಿತ್ರಕೃಪೆ: Olaf Oliviero Riemer

ಕಾಟನ್ ಪಿಗ್ಮಿ:

ಕಾಟನ್ ಪಿಗ್ಮಿ:

ಇವು ಚಿಕ್ಕ ಬಾತುಗಳಾಗಿದ್ದು ಹೆಚ್ಚು ಮರಗಳ ಎತ್ತರ ಭಾಗದಲ್ಲಿ ವಾಸಿಸುವಂತಹಗಳಾಗಿವೆ. ತಾಜಾ ನೀರಿನ ಕೆರೆಗಳ ಆಸುಪಾಸಿನಲ್ಲಿರುವ ಮರಗಳ ರೆಂಬೆಯಲ್ಲಿ ರಂಧ್ರ ಕೊರೆದು ಮೊಟ್ಟಗಳನ್ನಿಡುತ್ತವೆ.

ಚಿತ್ರಕೃಪೆ: J.M.Garg

ಗೆರೆಗಳುಳ್ಳ ಬಟನ್ ಕ್ವೇಲ್:

ಗೆರೆಗಳುಳ್ಳ ಬಟನ್ ಕ್ವೇಲ್:

ಚಿಕ್ಕ ಹಕ್ಕಿಗಳ ಕುಟುಂಬದಲ್ಲೊಂದಾಗಿರುವ ಈ ಹಕ್ಕಿಯು ಸಾಮಾನ್ಯವಾಗಿ ಭಾರತ, ಇಂಡೊನೇಷಿಯಾ ಹಾಗು ಚೀನಾ ದೇಶಗಳಲ್ಲಿ ಕಂಡುಬರುತ್ತದೆ. ಈ ರಾಷ್ಟ್ರೀಯ ಉದ್ಯಾನದಲ್ಲಿ ನಿರಾಯಾಸವಾಗಿ ಇವುಗಳನ್ನು ವೀಕ್ಷಿಸಬಹುದು.

ಚಿತ್ರಕೃಪೆ: Savithri Singh

ಹಳದಿ ತಲೆಪುಚ್ಚದ ವುಡ್‍ಪೆಕ್ಕರ್:

ಹಳದಿ ತಲೆಪುಚ್ಚದ ವುಡ್‍ಪೆಕ್ಕರ್:

ಈ ಹಕ್ಕಿಯು ಭಾರತದಲ್ಲಿ ಕಂಡುಬರುವ ಪೈಡ್ ವುಡ್‍ಪೆಕ್ಕರ್ ಜಾತಿಗೆ ಸೇರಿದ ಹಕ್ಕಿಯಾಗಿದೆ. ತಲೆಯ ಮೇಲೆ ಕಿರೀಟದಂತೆ ಹಳದಿ ಹಾಗು ಕೆಂಪು ಮಿಶ್ರಿತ ಬಣ್ಣದ ಪುಚ್ಚಗಳನ್ನು ಇದು ಹೊಂದಿರುತ್ತದೆ.

ಚಿತ್ರಕೃಪೆ: Sumeet Moghe

ಬ್ಯಾಕ್ ರಂಪ್ಡ್ ಫ್ಲೇಮ್ ಬ್ಯಾಕ್:

ಬ್ಯಾಕ್ ರಂಪ್ಡ್ ಫ್ಲೇಮ್ ಬ್ಯಾಕ್:

ಲೆಸ್ಸರ್ ಗೋಲ್ಡನ್ ಬ್ಯಾಕ್ಡ್ ವುಡ್‍ಪೆಕ್ಕರ್ ಎಂತಲೂ ಕರೆಯಲ್ಪಡುವ ಈ ಹಕ್ಕಿಯು ಸಾಮಾನ್ಯವಾಗಿ ಭಾರತ ಉಪಖಂಡದಲ್ಲೆಲ್ಲ ಕಂಡು ಬರುತ್ತದೆ.

ಚಿತ್ರಕೃಪೆ: Sajanjs

ಚಿಕ್ಕ ಹಸಿರು ಬಾರ್ಬೆಟ್:

ಚಿಕ್ಕ ಹಸಿರು ಬಾರ್ಬೆಟ್:

ಸಾಮಾನ್ಯವಾಗಿ ಈ ಪುಟ್ಟ ಹಕ್ಕಿಯು ದಕ್ಷಿಣ ಭಾರತದಲ್ಲಿ ಕಂಡುಬರುತ್ತದಾದರೂ ಈ ರಾಷ್ಟ್ರೀಯ ಉದ್ಯಾನದಲ್ಲೂ ಇವುಗಳನ್ನು ಕಾಣಬಹುದಾಗಿದೆ.

ಚಿತ್ರಕೃಪೆ: Shyamal

ಭಾರತೀಯ ಬೂದು ಬಣ್ಣದ ಹಾರ್ನ್‍ಬಿಲ್:

ಭಾರತೀಯ ಬೂದು ಬಣ್ಣದ ಹಾರ್ನ್‍ಬಿಲ್:

ಇದೊಂದು ಮಧ್ಯಮ ಗಾತ್ರದ ಹಕ್ಕಿಯಾಗಿದ್ದು ಸುಮಾರು 61 ಸೆ.ಮೀ ಗಳವರೆಗೆ ಉದ್ದವಿರುತ್ತದೆ.

ಚಿತ್ರಕೃಪೆ: J.M.Garg

ಬೀ ಈಟರ್:

ಬೀ ಈಟರ್:

ಈ ರಾಷ್ಟ್ರೀಯ ಉದ್ಯಾನದಲ್ಲಿ ಸಾಮಾನ್ಯವಾಗಿ ಎಲ್ಲೆಲ್ಲೂ ಕಂಡುಬರುವ ನೊಣ, ಜೇನು ನೋಣಗಳನ್ನು ತಿಂದು ಬದುಕುವ ಪುಟ್ಟ ಹಕ್ಕಿ ಇದಾಗಿದೆ.

ಚಿತ್ರಕೃಪೆ: Koshy Koshy

ಬಾರ್ನ್ ಗೂಬೆ:

ಬಾರ್ನ್ ಗೂಬೆ:

ಈ ರಾಷ್ಟ್ರೀಯ ಉದ್ಯಾನದಲ್ಲಿ ಕಂಡುಬರುವ ಒಂದು ಸಾಮಾನ್ಯ ಗೂಬೆ.

ಚಿತ್ರಕೃಪೆ: Tutoke

ಯುರೇಷಿಯನ್ ಹದ್ದು ಗೂಬೆ:

ಯುರೇಷಿಯನ್ ಹದ್ದು ಗೂಬೆ:

ಯುರೇಷಿಯಾ ಹಾಗು ಯುರೋಪ್ ಖಂಡಗಳಲ್ಲಿ ಕಂಡುಬರುವ ಈ ಗೂಬೆಯನ್ನು ಭಾರತದಲ್ಲಿ "ಇಂಡಿಯನ್ ಗ್ರೇಟ್ ಹಾರ್ನ್ಡ್ ಔಲ್" ಎಂದು ಕರೆಯಲಾಗುತ್ತದೆ.

ಚಿತ್ರಕೃಪೆ: Achim Raschka

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X