Search
  • Follow NativePlanet
Share
» »ಉತ್ಸಾಹವನ್ನು ಮೆಟ್ಟಿ ನಿಲ್ಲುವ ಬಿಳಿಗಿರಿರಂಗನ ಬೆಟ್ಟ

ಉತ್ಸಾಹವನ್ನು ಮೆಟ್ಟಿ ನಿಲ್ಲುವ ಬಿಳಿಗಿರಿರಂಗನ ಬೆಟ್ಟ

By Vijay

ಬಿಳಿಗಿರಿ ರಂಗಯ್ಯ......ನೀನೇ ಹೇಳಯ್ಯ....ಎಂಬ ಶರಪಂಜರದ ಗೀತೆಯನ್ನು ಕೇಳಿದಾಗ ಈಗಲೂ ಮೈಮನವೆಲ್ಲ ಪುಳಕಿತಗೊಳ್ಳುತ್ತದೆ. ಅದರಂತೆ ಬಿಳಿಗಿರಿ ರಂಗನ ಬೆಟ್ಟದ ಪರಿಸರವೂ ಅಷ್ಟೆ, ಭೇಟಿ ನೀಡಿದ ತಕ್ಷಣವೆ ಅದರ ಅಂದ ಚೆಂದವು ಮನದಲ್ಲಿ ತುಂಬಿ ಬಿಡುತ್ತದೆ. ಕರ್ನಾಟಕದ ಚಾಮರಾಜನಗರ ಜಿಲ್ಲೆಯಲ್ಲಿರುವ ಈ ಬೆಟ್ಟ ತಾಣಕ್ಕೆ ವರ್ಷಪೂರ್ತಿ ಭೇಟಿ ನೀಡಬಹುದಾಗಿದ್ದರೂ ಜೂನ್ ನಿಂದ ನವಂಬರ್ ಸಮಯ ಆದರ್ಶಮಯವಾದುದು ಎಂದು ಹೇಳಬಹುದಾಗಿದೆ.

ಮೈಸೂರಿನಿಂದ ಸುಮಾರು 80 ಕಿ.ಮೀ ದೂರವಿರುವ ಈ ಸ್ಥಳ ತಮಿಳುನಾಡಿನ ಈರೋಡ್ ಜಿಲ್ಲೆಯೊಂದಿಗೆ ತನ್ನ ಗಡಿಯನ್ನು ಹಂಚಿಕೊಂಡಿದೆ. ಅಲ್ಲದೆ ಈ ಸ್ಥಳವು ರಕ್ಷಿತ ಅರಣ್ಯ ಪ್ರದೇಶವಾಗಿದ್ದು, ಬಿಳಿಗಿರಿ ರಂಗಸ್ವಾಮಿ ಅಭಯಾರಣ್ಯವನ್ನು ಇಲ್ಲಿ ಕಾಣಬಹುದು. ಕರ್ನಾಟಕ ಅರಣ್ಯ ಇಲಾಖೆಯ ಸುಪರ್ದಿಯಲ್ಲಿರುವ ಈ ಸ್ಥಳವನ್ನು ಡಿಸೆಂಬರ್ 2010 ರಲ್ಲಿ ಹುಲಿ ಮೀಸಲು ಪ್ರದೇಶವನ್ನಾಗಿ ಘೋಷಿಸಲಾಗಿದೆ.

ಬಿಳಿಗಿರಿರಂಗನ ಬೆಟ್ಟ:

ಬಿಳಿಗಿರಿರಂಗನ ಬೆಟ್ಟ:

ಬಿಳಿಗಿರಿರಂಗನ ಬೆಟ್ಟ ಶ್ರೇಣಿಯು ಮೂಲವಾಗಿ ಚಾಮರಾಜನಗರ ಜಿಲ್ಲೆಯ ಯಳಂದೂರು ಮತ್ತು ಕೊಳ್ಳೆಗಾಲ ತಾಲೂಕಿನಲ್ಲಿ ಚಾಚಿವೆ. ಅಲ್ಲದೆ ಸತ್ಯಮಂಗಲಂ ಅಭಯಾರಣ್ಯ ಹಾಗೂ ತಮಿಳುನಾಡಿನ ಈರೋಡ್ ಜಿಲ್ಲೆಗೆ ಹತ್ತಿರವಾಗಿವೆ.

ಚಿತ್ರಕೃಪೆ: ☻☺

ಬಿಳಿಗಿರಿರಂಗನ ಬೆಟ್ಟ:

ಬಿಳಿಗಿರಿರಂಗನ ಬೆಟ್ಟ:

ಮೈಸೂರು ಪಟ್ಟಣದಿಂದ 90 ಕಿ.ಮೀ ದೂರವಿರುವ ಬಿ ಆರ್ ಬೆಟ್ಟ, ಬೆಂಗಳೂರಿನಿಂದ ಸುಮಾರು 254 ಕಿ.ಮೀ ಗಳಷ್ಟು ದೂರದಲ್ಲಿದೆ. ಕರ್ನಾಟಕದಿಂದ ಯಳಂದೂರು ಅಥವಾ ಕೊಳ್ಳೆಗಾಲಗಳ ಮೂಲಕ ಈ ಸ್ಥಳಕ್ಕೆ ತೆರಳಬಹುದಾಗಿದೆ.

ಚಿತ್ರಕೃಪೆ: ☻☺

ಬಿಳಿಗಿರಿರಂಗನ ಬೆಟ್ಟ:

ಬಿಳಿಗಿರಿರಂಗನ ಬೆಟ್ಟ:

ಪಶ್ಚಿಮ ಘಟ್ಟದ ಪೂರ್ವ ತುದಿಯಲ್ಲಿ ನೆಲೆಸಿರುವ ಈ ಬೆಟ್ಟ ಶ್ರೇಣಿಯು ವೈವಿಧ್ಯಮಯ ಪ್ರಾಣಿ ಸಂಪತ್ತು ಹಾಗೂ ಸಸ್ಯ ಸಂಪತ್ತಿನಿಂದ ಕೂಡಿದ್ದು, ದಟ್ಟವಾದ ಗಿಡ ಮರಗಳು ಪ್ರದೇಶಕ್ಕೆ ಹಸಿರು ಹಾಸಿಗೆಯನ್ನು ಹೊದಿಸಿದ ಹಾಗೆ ಮಾಡಿವೆ.

ಚಿತ್ರಕೃಪೆ: ☻☺

ಬಿಳಿಗಿರಿರಂಗನ ಬೆಟ್ಟ:

ಬಿಳಿಗಿರಿರಂಗನ ಬೆಟ್ಟ:

ಸುಮಾರು 540 ಚ.ಕಿ.ಮೀ ವಿಸ್ತೀರ್ಣವುಳ್ಳ ಬಿಳಿಗಿರಿ ರಕ್ಷಿತಾರಣ್ಯವು ಕರ್ನಾಟಕ ಅರಣ್ಯ ಇಲಾಖೆಯಿಂದ ನಿರ್ವಹಿಸಲ್ಪಡುತ್ತಿದ್ದು, ರಾಜ್ಯದಲ್ಲಿ ಕಂಡುಬರುವ ಪ್ರವಾಸಿ ಆಕರ್ಷಣೆಯಿರುವ ಅರಣ್ಯಗಳ ಪೈಕಿ ಒಂದಾಗಿದೆ. ಅಂತೆಯೆ ವರ್ಷಪೂರ್ತಿ ಹಲವು ಪ್ರವಾಸಿಗರನ್ನು ಈ ಪ್ರದೇಶದಲ್ಲಿ ಕಾಣಬಹುದಾಗಿದೆ.

ಚಿತ್ರಕೃಪೆ: gkrishna63

ಬಿಳಿಗಿರಿರಂಗನ ಬೆಟ್ಟ:

ಬಿಳಿಗಿರಿರಂಗನ ಬೆಟ್ಟ:

ಮತ್ತೊಂದು ತಿಳಿಯಬೇಕಾದ ಅಂಶವೆಂದರೆ ಈ ಪ್ರದೇಶಕ್ಕೆ ಬಿಳಿಗಿರಿ ಎಂಬ ಹೆಸರು ಏಕೆ ಬಂತು ಎಂಬುದರ ಕುರಿತು. ಇಲ್ಲಿರುವ ರಂಗನಾಥನ ದೇವಸ್ಥಾನದ ಸುತ್ತಮುತ್ತಲಿನ ಬೆಟ್ಟಗಳಲ್ಲಿ ಬಿಳಿ ವರ್ಣದ ಕಲ್ಲು ಬಂಡೆಗಳು ಹೆಚ್ಚಾಗಿರುವುದರಿಂದ ಇದಕ್ಕೆ ಬಿಳಿಗಿರಿ ಅಂದರೆ ಬಿಳಿಬೆಟ್ಟ ಎಂಬ ಹೆಸರು ಬಂದಿತು.

ಚಿತ್ರಕೃಪೆ: ☻☺

ಬಿಳಿಗಿರಿರಂಗನ ಬೆಟ್ಟ:

ಬಿಳಿಗಿರಿರಂಗನ ಬೆಟ್ಟ:

ಅಲ್ಲದೆ, ವಿಷ್ಣುವಿನ ಅವತಾರವಾದ ಶ್ರೀ ರಂಗನಾಥ ಸ್ವಾಮಿಯು ಇಲ್ಲಿ ನೆಲೆಸಿರುವುದರಿಂದ ಇದಕ್ಕೆ ಬಿಳಿಗಿರಿ ರಂಗನ ಬೆಟ್ಟ ಎಂಬ ಹೆಸರು ಬಂದಿತೆಂದು ಹೇಳಲಾಗಿದೆ.

ಚಿತ್ರಕೃಪೆ: Shveta

ಬಿಳಿಗಿರಿರಂಗನ ಬೆಟ್ಟ:

ಬಿಳಿಗಿರಿರಂಗನ ಬೆಟ್ಟ:

ಬಿ ಆರ್ ಬೆಟ್ಟ ಕೇವಲ ಅರಣ್ಯ ಪ್ರದೇಶದಿಂದ ಮಾತ್ರವಲ್ಲದೆ ಬಹು ಮುಖ್ಯವಾಗಿ ಇಲ್ಲಿ ನೆಲೆಸಿರುವ ವೆಂಕಟೇಶ್ವರ/ರಂಗನಾಥ ಸ್ವಾಮಿಯ ದೇಗುಲದಿಂದಾಗಿ ಹೆಚ್ಚು ಹೆಸರುವಾಸಿಯಾಗಿದೆ. ಸ್ಥಳೀಯರಿಂದ ಬಿಳಿಗಿರಿ ರಂಗನೆಂದೆ ಕರೆಯಲ್ಪಡುವ ದೇಗುಲದ ಮುಖ್ಯ ವಿಗ್ರಹವು ಒಂದು ರೀತಿಯ ಅನನ್ಯವಾದ ಭಂಗಿಯಲ್ಲಿ ನಿಂತಿರುವುದನ್ನು ಕಾಣಬಹುದು.

ಚಿತ್ರಕೃಪೆ: ☻☺

ಬಿಳಿಗಿರಿರಂಗನ ಬೆಟ್ಟ:

ಬಿಳಿಗಿರಿರಂಗನ ಬೆಟ್ಟ:

ಪ್ರತಿ ವರ್ಷ ವೈಶಾಖ ಮಾಸ ಅಂದರೆ ಏಪ್ರಿಲ್ ಸಮಯದಲ್ಲಿ ಇಲ್ಲಿ ರಥೋತ್ಸವವನ್ನು ಅತಿ ವಿಜೃಂಭಣೆಯಿಂದ ನೆರವೇರಿಸಲಾಗುತ್ತದೆ. ಸ್ಥಳಿಯ ಸೋಲಿಗ ಸಮುದಾಯದವರು ಶ್ರೀರಂಗನಾಥನಿಗೆ ಎರಡು ವರ್ಷಕ್ಕೊಮ್ಮೆ ಒಂದು ಅಡಿ ಒಂಭತ್ತು ಅಂಗುಲಗಳಷ್ಟು ಆಕಾರದ ಚರ್ಮದ ಪಾದರಕ್ಷೆಗಳನ್ನು ಕಾಣಿಕೆಯಾಗಿ ಅರ್ಪಿಸುತ್ತಾರೆ.

ಚಿತ್ರಕೃಪೆ: ☻☺

ಬಿಳಿಗಿರಿರಂಗನ ಬೆಟ್ಟ:

ಬಿಳಿಗಿರಿರಂಗನ ಬೆಟ್ಟ:

ದೇವಸ್ಥಾನದಲ್ಲಿ ರಂಗನಾಥನ ವಿಗ್ರಹವು ತನ್ನ ಮಡದಿಯಾದ ರಂಗನಾಯಕಿಯೊಂದಿಗೆ ಆಕರ್ಷಕವಾದ ಭಂಗಿಯಲ್ಲಿ ನಿಂತಿರುವುದನ್ನು ಕಾಣಬಹುದು. ಪ್ರತಿ ಶುಕ್ರವಾರದಂದು ಪ್ರಮುಖ ಪೂಜಾರ್ತಿ, ಅರ್ಚನೆಗಳು ಇಲ್ಲಿ ನಡೆಯುವುದನ್ನು ಕಾಣಬಹುದು.

ಚಿತ್ರಕೃಪೆ: ☻☺

ಬಿಳಿಗಿರಿರಂಗನ ಬೆಟ್ಟ:

ಬಿಳಿಗಿರಿರಂಗನ ಬೆಟ್ಟ:

ಸ್ಥಳೀಯ ಸೋಲಿಗರ ಪಾಲಿಗೆ ಅತ್ಯಂತ ಪವಿತ್ರವಾದ ದೊಡ್ಡಸಂಪಿಗೆ ಮರವನ್ನು ಇಲ್ಲಿ ಕಾಣಬಹುದು. ಅಲ್ಲದೆ ಸಾಕಷ್ಟು ಸಂಪಿಗೆ ಮರಗಳು ಇಲ್ಲಿ ಕಂಡುಬರುತ್ತವೆ. ಕಾವೇರಿಯ ಉಪನದಿಯಾದ ಭಾರ್ಗವಿ ನದಿಯ ದಡದ ಮೇಲೆ ಸುಮಾರು 2000 ವರ್ಷಗಳಷ್ಟು ಹಳೆಯದಾದ ಸುಮಾರು 40 ಮೀ ಗಳಷ್ಟು ಎತ್ತರದ ದೊಡ್ಡ ಸಂಪಿಗೆ ಮರವೊಂದನ್ನು ಇಂದಿಗೂ ಕಾಣಬಹುದಾಗಿದೆ. ಸೋಲಿಗರಿಂದ ಇದು ಪೂಜಿಸಲ್ಪಡುತ್ತದೆ.

ಚಿತ್ರಕೃಪೆ: muscicapa

ಬಿಳಿಗಿರಿರಂಗನ ಬೆಟ್ಟ:

ಬಿಳಿಗಿರಿರಂಗನ ಬೆಟ್ಟ:

ಬಿ ಆರ್ ಬೆಟ್ಟಕ್ಕೆ ಭೇಟಿ ನೀಡುವ ಪ್ರತಿ ಪ್ರವಾಸಿಗನು ಟ್ರೆಕ್/ಚಾರಣ ಮಾಡುತ್ತ ಈ ದೊಡ್ಡ ಸಂಪಿಗೆ ಮರ ತಾಣಕ್ಕೆ ಭೇಟಿ ನೀಡಲು ಬಯಸೆ ಬಯಸುತ್ತಾನೆ. ಅಲ್ಲದೆ ಚಾರಣ ಮಾಡುವಾಗ ಅರಣ್ಯದ ನೈಜ ಸೌಂದರ್ಯವು ಮನಸ್ಸಿನ ಒತ್ತಡವನ್ನು ಕಡಿಮೆ ಮಾಡಿ ಉತ್ಸಾಹವನ್ನು ಇಮ್ಮಡಿಗೊಳಿಸುತ್ತದೆ.

ಚಿತ್ರಕೃಪೆ: muscicapa

ಬಿಳಿಗಿರಿರಂಗನ ಬೆಟ್ಟ:

ಬಿಳಿಗಿರಿರಂಗನ ಬೆಟ್ಟ:

ಸಾಕಷ್ಟು ಬಗೆಯ ಔಷಧೀಯ ಸಸ್ಯಗಳು, ಸ್ಥಳೀಯ ಜೀವ ಸಂಪತ್ತು, ವೈವಿಧ್ಯಮಯ ಗಿಡ ಮರಗಳನ್ನು ಈ ಪ್ರದೇಶದಲ್ಲಿ ಕಾಣಬಹುದಾಗಿದೆ.

ಚಿತ್ರಕೃಪೆ: gkrishna63

ಬಿಳಿಗಿರಿರಂಗನ ಬೆಟ್ಟ:

ಬಿಳಿಗಿರಿರಂಗನ ಬೆಟ್ಟ:

ಬಿ ಆರ್ ಹಿಲ್ಸ್ ಪೂರ್ವ ಹಾಗೂ ಪಶ್ಚಿಮ ಘಟ್ಟಗಳ ನಡುವಿನ ಕೊಂಡಿಯಾಗಿದ್ದು ಎರಡೂ ಪ್ರದೇಶಗಳ ವಿವಿಧ ಪ್ರಾಣಿ ಪಕ್ಷಿಗಳ ಅದಲು ಬದಲು ಸಂಚಾರದ ತಾಣವಾಗಿದೆ. ಅಂತೆಯೆ ವಿಶಿಷ್ಟವಾದ ಜೀವ ಸಂಪತ್ತಿಗೂ ಈ ಕಾಡು ಪ್ರದೇಶ ಸಾಕ್ಷಿಯಾಗಿದೆ.

ಚಿತ್ರಕೃಪೆ: ☻☺

ಬಿಳಿಗಿರಿರಂಗನ ಬೆಟ್ಟ:

ಬಿಳಿಗಿರಿರಂಗನ ಬೆಟ್ಟ:

ಇನ್ನು, ಬಿ ಆರ್ ಹಿಲ್ಸ್ ಗೆ ತಲುಪಲು ಹತ್ತಿರದ ರೈಲು ನಿಲ್ದಾಣವೆಂದರೆ ಚಾಮರಾಜನಗರ. ಇಲ್ಲಿಂದ ಬಿಳಿಗಿರಿ ಬೆಟ್ಟ ಕೇವಲ 40 ಕಿ.ಮೀ ದೂರವಿದೆ, ಅಲ್ಲದೆ ಚಾಮರಾಜನಗರಕ್ಕೆ ತೆರಳಲು ಮೈಸೂರಿನಿಂದ ಸಾಕಷ್ಟು ರೈಲುಗಳು ಲಭ್ಯವಿದೆ.

ಚಿತ್ರಕೃಪೆ: ☻☺

ಬಿಳಿಗಿರಿರಂಗನ ಬೆಟ್ಟ:

ಬಿಳಿಗಿರಿರಂಗನ ಬೆಟ್ಟ:

ಬಸ್ ಮೂಲಕ ಪ್ರಯಾಣಿಸುವ ಇಚ್ಛೆಯಿದ್ದಲ್ಲಿ ಮೊದಲಿಗೆ ಕೊಳ್ಳೆಗಾಲಕ್ಕೆ ತೆರಳೆಬೇಕು. ಮೈಸೂರು ಹಾಗೂ ಬೆಂಗಳೂರಿನಿಂದ ಕೊಳ್ಳೆಗಾಲಕ್ಕೆ ಸಾಕಷ್ಟು ಬಸ್ಸುಗಳು ಲಭ್ಯವಿದೆ. ಕೊಳ್ಳೆಗಾಲದಿಂದ ಬಿಳಿಗಿರಿ ರಂಗನ ಬೆಟ್ಟ ಕೇವಲ 20 ನಿಮೀಷಗಳ ಪ್ರಯಾಣಾವಧಿಯಷ್ಟು ದೂರದಲ್ಲಿದೆ.

ಚಿತ್ರಕೃಪೆ: gkrishna63

ಬಿಳಿಗಿರಿರಂಗನ ಬೆಟ್ಟ:

ಬಿಳಿಗಿರಿರಂಗನ ಬೆಟ್ಟ:

ಬಿಳಿಗಿರಿರಂಗನ ಬೆಟ್ಟದ ಕೆಲ ಆಕರ್ಷಕ ಚಿತ್ರಗಳು.

ಚಿತ್ರಕೃಪೆ: ☻☺

ಬಿಳಿಗಿರಿರಂಗನ ಬೆಟ್ಟ:

ಬಿಳಿಗಿರಿರಂಗನ ಬೆಟ್ಟ:

ಬಿಳಿಗಿರಿರಂಗನ ಬೆಟ್ಟದ ಕೆಲ ಆಕರ್ಷಕ ಚಿತ್ರಗಳು.

ಚಿತ್ರಕೃಪೆ: ☻☺

ಬಿಳಿಗಿರಿರಂಗನ ಬೆಟ್ಟ:

ಬಿಳಿಗಿರಿರಂಗನ ಬೆಟ್ಟ:

ಬಿಳಿಗಿರಿರಂಗನ ಬೆಟ್ಟದ ಕೆಲ ಆಕರ್ಷಕ ಚಿತ್ರಗಳು.

ಚಿತ್ರಕೃಪೆ: ☻☺

ಬಿಳಿಗಿರಿರಂಗನ ಬೆಟ್ಟ:

ಬಿಳಿಗಿರಿರಂಗನ ಬೆಟ್ಟ:

ಬಿಳಿಗಿರಿರಂಗನ ಬೆಟ್ಟದ ಕೆಲ ಆಕರ್ಷಕ ಚಿತ್ರಗಳು.

ಚಿತ್ರಕೃಪೆ: ☻☺

ಬಿಳಿಗಿರಿರಂಗನ ಬೆಟ್ಟ:

ಬಿಳಿಗಿರಿರಂಗನ ಬೆಟ್ಟ:

ಬಿಳಿಗಿರಿರಂಗನ ಬೆಟ್ಟದ ಕೆಲ ಆಕರ್ಷಕ ಚಿತ್ರಗಳು.

ಚಿತ್ರಕೃಪೆ: ☻☺

ಬಿಳಿಗಿರಿರಂಗನ ಬೆಟ್ಟ:

ಬಿಳಿಗಿರಿರಂಗನ ಬೆಟ್ಟ:

ಬಿಳಿಗಿರಿರಂಗನ ಬೆಟ್ಟದ ಕೆಲ ಆಕರ್ಷಕ ಚಿತ್ರಗಳು.

ಚಿತ್ರಕೃಪೆ: ☻☺

ಬಿಳಿಗಿರಿರಂಗನ ಬೆಟ್ಟ:

ಬಿಳಿಗಿರಿರಂಗನ ಬೆಟ್ಟ:

ಬಿಳಿಗಿರಿರಂಗನ ಬೆಟ್ಟದ ಕೆಲ ಆಕರ್ಷಕ ಚಿತ್ರಗಳು.

ಚಿತ್ರಕೃಪೆ: shrikant rao

ಬಿಳಿಗಿರಿರಂಗನ ಬೆಟ್ಟ:

ಬಿಳಿಗಿರಿರಂಗನ ಬೆಟ್ಟ:

ಬಿಳಿಗಿರಿರಂಗನ ಬೆಟ್ಟದ ಕೆಲ ಆಕರ್ಷಕ ಚಿತ್ರಗಳು.

ಚಿತ್ರಕೃಪೆ: ☻☺

ಬಿಳಿಗಿರಿರಂಗನ ಬೆಟ್ಟ:

ಬಿಳಿಗಿರಿರಂಗನ ಬೆಟ್ಟ:

ಬಿಳಿಗಿರಿರಂಗನ ಬೆಟ್ಟದ ಕೆಲ ಆಕರ್ಷಕ ಚಿತ್ರಗಳು.

ಚಿತ್ರಕೃಪೆ: shrikant rao

ಬಿಳಿಗಿರಿರಂಗನ ಬೆಟ್ಟ:

ಬಿಳಿಗಿರಿರಂಗನ ಬೆಟ್ಟ:

ಬಿಳಿಗಿರಿರಂಗನ ಬೆಟ್ಟದ ಕೆಲ ಆಕರ್ಷಕ ಚಿತ್ರಗಳು.

ಚಿತ್ರಕೃಪೆ: shrikant rao

ಬಿಳಿಗಿರಿರಂಗನ ಬೆಟ್ಟ:

ಬಿಳಿಗಿರಿರಂಗನ ಬೆಟ್ಟ:

ಬಿಳಿಗಿರಿರಂಗನ ಬೆಟ್ಟದ ಕೆಲ ಆಕರ್ಷಕ ಚಿತ್ರಗಳು.

ಚಿತ್ರಕೃಪೆ: shrikant rao

ಬಿಳಿಗಿರಿರಂಗನ ಬೆಟ್ಟ:

ಬಿಳಿಗಿರಿರಂಗನ ಬೆಟ್ಟ:

ಬಿಳಿಗಿರಿರಂಗನ ಬೆಟ್ಟದ ಕೆಲ ಆಕರ್ಷಕ ಚಿತ್ರಗಳು.

ಚಿತ್ರಕೃಪೆ: Ganesh Raghunathan

ಬಿಳಿಗಿರಿರಂಗನ ಬೆಟ್ಟ:

ಬಿಳಿಗಿರಿರಂಗನ ಬೆಟ್ಟ:

ಬಿಳಿಗಿರಿರಂಗನ ಬೆಟ್ಟದ ಕೆಲ ಆಕರ್ಷಕ ಚಿತ್ರಗಳು.

ಚಿತ್ರಕೃಪೆ: Ganesh Raghunathan

ಬಿಳಿಗಿರಿರಂಗನ ಬೆಟ್ಟ:

ಬಿಳಿಗಿರಿರಂಗನ ಬೆಟ್ಟ:

ಬಿಳಿಗಿರಿರಂಗನ ಬೆಟ್ಟದ ಕೆಲ ಆಕರ್ಷಕ ಚಿತ್ರಗಳು.

ಚಿತ್ರಕೃಪೆ: Ganesh Raghunathan

ಬಿಳಿಗಿರಿರಂಗನ ಬೆಟ್ಟ:

ಬಿಳಿಗಿರಿರಂಗನ ಬೆಟ್ಟ:

ಬಿಳಿಗಿರಿರಂಗನ ಬೆಟ್ಟದ ಕೆಲ ಆಕರ್ಷಕ ಚಿತ್ರಗಳು.

ಚಿತ್ರಕೃಪೆ: Ganesh Raghunathan

ಬಿಳಿಗಿರಿರಂಗನ ಬೆಟ್ಟ:

ಬಿಳಿಗಿರಿರಂಗನ ಬೆಟ್ಟ:

ಬಿಳಿಗಿರಿರಂಗನ ಬೆಟ್ಟದ ಕೆಲ ಆಕರ್ಷಕ ಚಿತ್ರಗಳು.

ಚಿತ್ರಕೃಪೆ: Ganesh Raghunathan

ಬಿಳಿಗಿರಿರಂಗನ ಬೆಟ್ಟ:

ಬಿಳಿಗಿರಿರಂಗನ ಬೆಟ್ಟ:

ಬಿಳಿಗಿರಿರಂಗನ ಬೆಟ್ಟದ ಕೆಲ ಆಕರ್ಷಕ ಚಿತ್ರಗಳು.

ಚಿತ್ರಕೃಪೆ: ☻☺

ಬಿಳಿಗಿರಿರಂಗನ ಬೆಟ್ಟ:

ಬಿಳಿಗಿರಿರಂಗನ ಬೆಟ್ಟ:

ಬಿಳಿಗಿರಿರಂಗನ ಬೆಟ್ಟದ ಕೆಲ ಆಕರ್ಷಕ ಚಿತ್ರಗಳು.

ಚಿತ್ರಕೃಪೆ: ☻☺

ಬಿಳಿಗಿರಿರಂಗನ ಬೆಟ್ಟ:

ಬಿಳಿಗಿರಿರಂಗನ ಬೆಟ್ಟ:

ಬಿಳಿಗಿರಿರಂಗನ ಬೆಟ್ಟದ ಕೆಲ ಆಕರ್ಷಕ ಚಿತ್ರಗಳು.

ಚಿತ್ರಕೃಪೆ: ☻☺

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X