Search
  • Follow NativePlanet
Share
» »ಭಾರತದ ಪ್ರಮುಖ ಮತ್ತು ಜಂಕ್ಷನ್ ರೈಲು ನಿಲ್ದಾಣಗಳು

ಭಾರತದ ಪ್ರಮುಖ ಮತ್ತು ಜಂಕ್ಷನ್ ರೈಲು ನಿಲ್ದಾಣಗಳು

By Vijay

ಇಂದು ಭಾರತ ದೇಶದ ಪ್ರಮುಖ ಸಂಚಾರ ಮಾಧ್ಯಮ ರೈಲು. ಬಡತನದ ರೇಖೆಯಲ್ಲಿರುವವರಿಂದ ಹಿಡಿದು ಶ್ರೀಮಂತಿಕೆಯ ಹಾಸಿಗೆಯಲ್ಲಿದ್ದವರೂ ಕೂಡ ಇಷ್ಟಪಡುವುದು ರೈಲು. ಇತರೆ ಸಂಚಾರಿ ಮಾಧ್ಯಮಗಳಿಗೆ ಹೋಲಿಸಿದಾಗ ರೈಲು ಪ್ರಯಾಣವು ಅಗ್ಗವಾಗಿರುವುದಲ್ಲದೆ, ಅತಿ ದೂರದ ಪ್ರಯಾಣವನ್ನೂ ಸಹ ಹೊಂದಿದೆ.

ಭಾರತದಂತಹ ಬೃಹತ್ ರಾಷ್ಟ್ರದಲ್ಲಿ ಕಾಶ್ಮೀರದಿಂದ ಹಿಡಿದು ಕನ್ಯಾಕುಮಾರಿಯವರೆಗೆ ಪಯಣಿಸುವುದು ಸುಲಭದ ಕೆಲಸವಂತೂ ಅಲ್ಲವೆ ಅಲ್ಲ. ರಸ್ತೆಯ ಮುಖಾಂತರ ಚಲಿಸಬೇಕೆಂದರೂ ಶಕ್ತಿ ಹಾಗು ಸಮಯ ವ್ಯಯವಾಗುವುದು ಖಂಡಿತ ಅಲ್ಲದೆ ಸಾಕಷ್ಟು ಹಣವು ಖರ್ಚಾಗುತ್ತದೆ . ಇನ್ನು ವಿಮಾನ ಪ್ರಯಾಣ ಎಲ್ಲರಿಗೂ ನಿಲುಕುವ ಮಾಧ್ಯಮವೇನಲ್ಲ.

ಇಂತಹ ಸಂದರ್ಭದಲ್ಲಿ ಯೋಗ್ಯ ಹಾಗೂ ಅನುಕೂಲಕರವೆಂದರೆ ರೈಲು ಪ್ರಯಾಣ ಮಾತ್ರ. ಆದ್ದರಿಂದಲೆ ಇಂದು ಜಗತ್ತಿನ ಅತಿ ದೊಡ್ಡ ರೈಲು ಜಾಲಗಳ ಪೈಕಿ ಭಾರತೀಯ ರೈಲು ಸಹ ಒಂದಾಗಿದೆ. ಏನಿಲ್ಲವೆಂದರೂ ಪ್ರತಿ ದಿನ 30 ಮಿಲಿಯನ್ ಗಿಂತಲೂ ಹೆಚ್ಚು ಜನರು ರೈಲುಗಳಲ್ಲಿ ಪ್ರಯಾಣಿಸುತ್ತಾರೆಂದರೆ ನೀವೆ ತಿಳಿಯಿರಿ ಎಷ್ಟೊಂದು ದೊಡ್ಡದಾದ ರೈಲು ಜಾಲವನ್ನು ಭಾರತ ಹೊಂದಿದೆ ಎಂದು.

ಈ ರೀತಿಯ ಅಗಾಧವಾದ ರೈಲು ಜಾಲವನ್ನು ಸುಲಲಿತವಾಗಿ ನಿಭಾಯಿಸಲೆಂದೆ ಭಾರತದಲ್ಲಿ ಸಾಕಷ್ಟು ಕಡೆ ಜಂಕ್ಷನ್ ರೈಲು ನಿಲ್ದಾಣಗಳನ್ನೂ ಸಹ ಮಾಡಲಾಗಿದೆ. ಜಂಕ್ಷನ್ ರೈಲು ನಿಲ್ದಾಣ ಮೂಲತಃ ಒಂದು ಸಾಮಾನ್ಯ ರೈಲು ನಿಲ್ದಾಣದ ರೀತಿಯಲ್ಲೆ ಇರುತ್ತದೆ. ಆದರೆ ಇಲ್ಲಿಂದ ಒಂದಕ್ಕಿಂತ ಹೆಚ್ಚು ಪಟ್ಟಣಗಳಿಗೆ ನೇರವಾದ ಸಂಪರ್ಕವಿರುತ್ತದೆ.

ಹಾಗೆ ನೋಡಿದರೆ ಭಾರತದಲ್ಲಿ ನೂರಾರು ಜಂಕ್ಷನ್ ರೈಲು ನಿಲ್ದಾಣಗಳಿವೆ ಆದರೆ ಪ್ರಸ್ತುತ ಲೇಖನದಲ್ಲಿ ಕೆಲ ಬೃಹತ್ ಹಾಗೂ ಮಹತ್ವವಾದ ಜಂಕ್ಷನ್ ರೈಲು ನಿಲ್ದಾಣಗಳ ಕುರಿತು ಮಾತ್ರವೆ ತಿಳಿಸಲಾಗಿದೆ.

ಇವುಗಳನ್ನೂ ಸಹ ಓದಿ:

ಭಾರತದಲ್ಲಿರುವ ಎತ್ತರದ ಕಟ್ಟಡಗಳು

ಎತ್ತರದ ಗೋಪುರಗಳು ಹಾಗು ವಿಮಾನಗಳು

ಪ್ರಮುಖ ರೈಲು ನಿಲ್ದಾಣಗಳು:

ಪ್ರಮುಖ ರೈಲು ನಿಲ್ದಾಣಗಳು:

ಮುಂಬೈನ ಛತ್ರಪತಿ ಶಿವಾಜಿ ಟರ್ಮಿನಸ್ ರೈಲು ನಿಲ್ದಾಣ ದೇಶದ ಪ್ರಮುಖ ನಿಲ್ದಾಣಗಳ ಪೈಕಿ ಒಂದಾಗಿದೆ. ಹಿಂದೆ ವಿಕ್ಟೋರಿಯಾ ತರ್ಮಿನಸ್ ಎಂದು ಕರೆಯಲ್ಪಡುತ್ತಿದ್ದ ಈ ನಿಲ್ದಾಣವನ್ನು ಯುನೆಸ್ಕೊ ವಿಶ್ವಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಸೇರಿಸಿರುವುದು ನಮಗೆಲ್ಲ ಹೆಮ್ಮೆಯ ವಿಷಯ. ವಿಕ್ಟೋರಿಯನ್ ಗೋಥಿಕ್ ಶೈಲಿಯ ವಾಸ್ತುಶಿಲ್ಪವಿರುವ ಕಟ್ಟಡವು ನೋಡಿದಾಗ ಮನಸೆಳೆಯುತ್ತದೆ.

ಚಿತ್ರಕೃಪೆ: UrbanWanderer

ಪ್ರಮುಖ ರೈಲು ನಿಲ್ದಾಣಗಳು:

ಪ್ರಮುಖ ರೈಲು ನಿಲ್ದಾಣಗಳು:

ಹೌರಾ ರೈಲು ನಿಲ್ದಾಣ ಒಂದು ದೇಶದಲ್ಲೆ ಬೃಹತ್ ಜಂಕ್ಷನ್ ರೈಲು ನಿಲ್ದಾಣವಾಗಿದ್ದು ಭಾರತದ ಅತಿ ಹಳೆಯ ಜಂಕ್ಷನ್ ರೈಲು ನಿಲ್ದಾಣವೂ ಸಹ ಹೌದು. ಒಟ್ಟಾರೆಯಾಗಿ 23 ಅಂಕಣಗಳು ಇಲ್ಲಿರುವುದರಿಂದ ಅತಿ ಹೆಚ್ಚಿನ ಸಂಖ್ಯೆಯಲ್ಲಿ ರೈಲುಗಳನ್ನು ಇದು ನಿಯಂತ್ರಿಸುತ್ತದೆ.

ಚಿತ್ರಕೃಪೆ: Lovedimpy

ಪ್ರಮುಖ ರೈಲು ನಿಲ್ದಾಣಗಳು:

ಪ್ರಮುಖ ರೈಲು ನಿಲ್ದಾಣಗಳು:

ಉತ್ತರ ಪ್ರದೇಶ ರಾಜ್ಯದ ಕಾನ್ಪೂರ್ ಕೇಂದ್ರ ರೈಲು ನಿಲ್ದಾಣ ಭಾರತದ ಗುರುತರವಾದ ರೈಲು ನಿಲ್ದಾಣಗಳ ಪೈಕಿ ಒಂದು. ಹೌರಾ - ದೆಹಲಿ ಮಾರ್ಗದಲ್ಲಿರುವ ಕಾನ್ಪೂರ್ ಜಂಕ್ಷನ್ ನಿಲ್ದಾಣವು ಸಾಕಷ್ಟು ಚಟುವಟಿಕೆಯುಕ್ತ ರೈಲು ನಿಲ್ದಾಣವಾಗಿದೆ.

ಚಿತ್ರಕೃಪೆ: Smeet Chowdhury

ಪ್ರಮುಖ ರೈಲು ನಿಲ್ದಾಣಗಳು:

ಪ್ರಮುಖ ರೈಲು ನಿಲ್ದಾಣಗಳು:

ಈಶಾನ್ಯ ರೈಲು ವಿಭಾಗಕ್ಕೆ ಸೇರಿದ ಒಟ್ಟು ಹತ್ತು ಅಂಕಣಗಳ (ಪ್ಲ್ಯಾಟ್ ಫಾರ್ಮ್)ಬೆಂಗಳೂರು ಕೇಂದ್ರ ರೈಲು ನಿಲ್ದಾಣವೂ ಸಹ ಪ್ರಮುಖವಾದ ರೈಲು ಜಂಕ್ಷನ್ ಗಳಲ್ಲಿ ಒಂದಾಗಿದೆ. ಒಟ್ಟಾರೆಯಾಗಿ ಈ ನಿಲ್ದಾಣದಲ್ಲಿ ಏನಿಲ್ಲವೆಂದರು ಪ್ರತಿ ದಿನ 88 ರೈಲುಗಳು ಹಾದು ಹೋಗುತ್ತವೆ.

ಚಿತ್ರಕೃಪೆ: Ramesh NG

ಪ್ರಮುಖ ರೈಲು ನಿಲ್ದಾಣಗಳು:

ಪ್ರಮುಖ ರೈಲು ನಿಲ್ದಾಣಗಳು:

ಚೆನ್ನೈ ಕೇಂದ್ರ ರೈಲು ನಿಲ್ದಾಣ ಚೆನ್ನೈ ನಗರದಲ್ಲಿರುವ ಪ್ರಮುಖ ರೈಲು ನಿಲ್ದಾಣವಾಗಿದೆ. ದಕ್ಷಿಣ ಭಾರತದ ಪ್ರಮುಖ ರೈಲು ನಿಲ್ದಾಣವೂ ಆಗಿರುವ ಚೆನ್ನೈ ಕೇಂದ್ರ ರೈಲು ನಿಲ್ದಾಣವು ಉತ್ತರ ಭಾರತದ ಬಹುತೇಕ ಪ್ರಮುಖ ಪ್ರದೇಶಗಳೊಂದಿಗೆ ಸಂಪರ್ಕ ಸಾಧಿಸುತ್ತದೆ.

ಚಿತ್ರಕೃಪೆ: PlaneMad

ಪ್ರಮುಖ ರೈಲು ನಿಲ್ದಾಣಗಳು:

ಪ್ರಮುಖ ರೈಲು ನಿಲ್ದಾಣಗಳು:

ಉತ್ತರ ಪ್ರದೇಶದ ರಾಜಧಾನಿ ಲಖನೌ ಜಂಕ್ಷನ್ ಕೂಡ ಭಾರತದ ಗುರುತರವಾದ ರೈಲು ನಿಲ್ದಾಣವಾಗಿದೆ. ಉತ್ತರ ಹಾಗೂ ಈಶಾನ್ಯ ವಿಭಾಗದ ರೈಲುಗಳಿಗೆ ಸೇವೆಯನ್ನು ಒದಗಿಸುವ ಈ ನಿಲ್ದಾಣವು ಭಾರತದ ಹಲವು ಪ್ರಮುಖ ನಗರಗಳೊಂದಿಗೆ ಸಂಪರ್ತ್ಕ ಹೊಂದಿದೆ.

ಚಿತ್ರಕೃಪೆ: Aleksandr Zykov

ಪ್ರಮುಖ ರೈಲು ನಿಲ್ದಾಣಗಳು:

ಪ್ರಮುಖ ರೈಲು ನಿಲ್ದಾಣಗಳು:

ತಮಿಳುನಾಡಿನ ತಿರುಚಿರಾಪಳ್ಳಿಯ ರೈಲು ನಿಲ್ದಾಣವೂ ಸಹ ಪ್ರಮುಖವಾದ ರೈಲು ನಿಲ್ದಾಣವಾಗಿದೆ. ಈ ಜಂಕ್ಷನ್ ನಿಲ್ದಾಣವು ತಮಿಳುನಾಡಿನ ಕೇಂದ್ರ ಭಾಗವನ್ನು ಉತ್ತರ ಭಾರತದ ಹಲವು ರಾಜ್ಯಗಳು, ಕರ್ನಾಟಕ, ಕೇರಳ, ಆಂಧ್ರ ಹಾಗೂ ಮಹಾರಾಷ್ಟ್ರ ರಾಜ್ಯಗಳೊಂದಿಗೆ ಬೆಸೆಯುತ್ತದೆ.

ಚಿತ್ರಕೃಪೆ: Railwayliker

ಪ್ರಮುಖ ರೈಲು ನಿಲ್ದಾಣಗಳು:

ಪ್ರಮುಖ ರೈಲು ನಿಲ್ದಾಣಗಳು:

ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳ ಜಂಟಿ ರಾಜಧಾನಿಯಾದ ಹೈದರಾಬಾದ್ ನಗರದ ಮೂರು ಮಹತ್ತರ ರೈಲು ನಿಲ್ದಾಣಗಳಲ್ಲಿ ಒಂದಾಗಿರುವ ಕಾಚೀಗುಡಾ ರೈಲು ನಿಲ್ದಾಣವು ಭಾರತದ ಪ್ರಮುಖ ರೈಲು ನಿಲ್ದಾಣಗಳ ಪೈಕಿ ಒಂದಾಗಿದೆ.

ಚಿತ್ರಕೃಪೆ: Randhirreddy

ಪ್ರಮುಖ ರೈಲು ನಿಲ್ದಾಣಗಳು:

ಪ್ರಮುಖ ರೈಲು ನಿಲ್ದಾಣಗಳು:

ಆಂಧ್ರಪ್ರದೇಶದ ವಿಶಾಖಪಟ್ಟಣ/ವೈಜಾಗ್ ದಲ್ಲಿರುವ ರೈಲು ನಿಲ್ದಾಣವು ಭಾರತದ ಪ್ರಮುಖ ರೈಲು ನಿಲ್ದಾಣಗಳ ಪೈಕಿ ಒಂದಾಗಿದೆ. ಪೂರ್ವ ಕರಾವಳಿ ರೈಲು ಅಥವಾ ಈಸ್ಟ್ ಕೋಸ್ಟ್ ರೈಲ್ವೆ ವಿಭಾಗಕ್ಕೆ ಸೇರಿರುವ ಈ ನಿಲ್ದಾಣವು ದೇಶದ ಸಾಕಷ್ಟು ಭಾಗಗಳೊಂದಿಗೆ ಉತ್ತಮವಾದ ಸಂಪರ್ಕವನ್ನು ಹೊಂದಿದೆ. ಇದೊಂದು ಟರ್ಮಿನಲ್/ಕೊನೆಯ ರೈಲು ನಿಲ್ದಾಣವಾಗಿದೆ. ಅಂದರೆ ಬರುವ ಎಲ್ಲ ರೈಲುಗಳು ಮತ್ತೆ ತಿರುಗಿ ಇಲ್ಲಿಂದ ಹೊರಡಬೇಕು.

ಚಿತ್ರಕೃಪೆ: vijay chennupati

ಪ್ರಮುಖ ರೈಲು ನಿಲ್ದಾಣಗಳು:

ಪ್ರಮುಖ ರೈಲು ನಿಲ್ದಾಣಗಳು:

ಮಧ್ಯ ಪ್ರದೇಶದ ಪ್ರಮುಖ ಪಟ್ಟಣವಾದ ಇಂದೋರ್ ನಲ್ಲಿರುವ ರೈಲು ನಿಲ್ದಾಣವು ಭಾರತದ ಪ್ರಮುಖ ರೈಲು ಜಂಕ್ಷನ್ ನಿಲ್ದಾಣಗಳ ಪೈಕಿ ಒಂದಾಗಿದೆ.

ಚಿತ್ರಕೃಪೆ: Smeet Chowdhury

ಪ್ರಮುಖ ರೈಲು ನಿಲ್ದಾಣಗಳು:

ಪ್ರಮುಖ ರೈಲು ನಿಲ್ದಾಣಗಳು:

ಮಧ್ಯ ಪ್ರದೇಶದ ರಾಜಧಾನಿಯಾದ ಭೊಪಾಲ್ ಪಟ್ಟಣದಲ್ಲಿರುವ ರೈಲು ನಿಲ್ದಾಣವು ಭಾರತದ ಪ್ರಮುಖ ರೈಲು ನಿಲ್ದಾಣಗಳ ಪೈಕಿ ಒಂದಾಗಿದೆ.

ಚಿತ್ರಕೃಪೆ: Jayanta

ಪ್ರಮುಖ ರೈಲು ನಿಲ್ದಾಣಗಳು:

ಪ್ರಮುಖ ರೈಲು ನಿಲ್ದಾಣಗಳು:

ಕರ್ನಾಟಕದ ಉತ್ತರ ಭಾಗದಲ್ಲಿರುವ ಹುಬ್ಬಳ್ಳಿ ರೈಲು ಜಂಕ್ಷನ್ ಕೂಡ ಭಾರತದ ಪ್ರಮುಖ ರೈಲು ನಿಲ್ದಾಣಗಳ ಪೈಕಿ ಒಂದಾಗಿದೆ. ನೈರುತ್ಯ ರೈಲು ವಿಭಾಗಕ್ಕೆ ಒಳಪಡುವ ಈ ನಿಲ್ದಾಣವು ದೇಶದ ಪ್ರಮುಖ ನಗರಗಳೊಂದಿಗೆ ಸಂಪರ್ಕ ಬೆಸೆಯುತ್ತದೆ.

ಚಿತ್ರಕೃಪೆ: Goudar

ಪ್ರಮುಖ ರೈಲು ನಿಲ್ದಾಣಗಳು:

ಪ್ರಮುಖ ರೈಲು ನಿಲ್ದಾಣಗಳು:

ಗುಂತಕಲ್ ದಕ್ಷಿಣ ಭಾರತದ ಮತ್ತೊಂದು ಪ್ರಮುಖ ಜಂಕ್ಷನ್ ರೈಲು ನಿಲ್ದಾಣವಾಗಿದೆ. ಉತ್ತರ ಭಾರತದ ತಮಿಳುನಾಡು ಹಾಗೂ ಕರ್ನಾಟಕಗಳೊಂದಿಗೆ ನೇರವಾದ ಸಂಪರ್ಕವನ್ನು ಹೊಂದಿದೆ.

ಚಿತ್ರಕೃಪೆ: Jpullokaran

ಪ್ರಮುಖ ರೈಲು ನಿಲ್ದಾಣಗಳು:

ಪ್ರಮುಖ ರೈಲು ನಿಲ್ದಾಣಗಳು:

ಗುಜರಾತ್ ರಾಜ್ಯದ ಪ್ರಮುಖ ವಾಣಿಜ್ಯ ಕೇಂದ್ರ ಪಟ್ಟಣವಾದ ಅಹ್ಮದಾಬಾದ್ ರೈಲು ನಿಲ್ದಾಣವು ಭಾರತದ ಪ್ರಮುಖ ರೈಲು ನಿಲ್ದಾಣಗಳ ಪೈಕಿ ಒಂದಾಗಿದೆ. ಪಶ್ಚಿಮ ರೈಲ್ವೆ ವಿಭಾಗದಲ್ಲಿ ಬರುವ ಈ ನಿಲ್ದಾಣವು ಭಾರತದ ಪ್ರಮುಖ ನಗರಗಳೊಂದಿಗೆ ಸಂಪರ್ಕ ಬೆಸೆಯುತ್ತದೆ.

ಚಿತ್ರಕೃಪೆ: FabSubeject

ಪ್ರಮುಖ ರೈಲು ನಿಲ್ದಾಣಗಳು:

ಪ್ರಮುಖ ರೈಲು ನಿಲ್ದಾಣಗಳು:

ಬಿಹಾರ ರಾಜ್ಯದ ಪಾಟ್ನಾ ರೈಲು ನಿಲ್ದಾಣವು ಭಾರತದ ಪ್ರಮುಖ ನಿಲ್ದಾಣಗಳ ಪೈಕಿ ಒಂದಾಗಿದೆ. ಈ ಜಂಕ್ಷನ್ ನಿಲ್ದಾಣವು ಐದು ಮಾರ್ಗಗಳನ್ನು ಹೊಂದಿದೆ.

ಚಿತ್ರಕೃಪೆ: Ahmad5.farah

ಪ್ರಮುಖ ರೈಲು ನಿಲ್ದಾಣಗಳು:

ಪ್ರಮುಖ ರೈಲು ನಿಲ್ದಾಣಗಳು:

ಐದು ಮಾರ್ಗಗಳನ್ನು ಹೊಂದಿರುವ ಆಂಧ್ರಪ್ರದೇಶದ ವಿಜಯವಾಡಾ ಜಂಕ್ಷನ್ ರೈಲು ನಿಲ್ದಾಣವು ಭಾರತದ ಪ್ರಮುಖ ರೈಲು ನಿಲ್ದಾಣಗಳ ಪೈಕಿ ಒಂದಾಗಿದೆ. ದಕ್ಷಿಣ ಕೇಂದ್ರ ರೈಲ್ವೆ ವಿಭಾಗದಲ್ಲಿ ಬರುವ ಈ ನಿಲ್ದಾಣವು ಪ್ರತಿನಿತ್ಯವೂ ಚಟುವಟಿಕೆಯಿಂದ ಕೂಡಿರುತ್ತದೆ.

ಚಿತ್ರಕೃಪೆ: MyVijayawada

ಪ್ರಮುಖ ರೈಲು ನಿಲ್ದಾಣಗಳು:

ಪ್ರಮುಖ ರೈಲು ನಿಲ್ದಾಣಗಳು:

ಮಧ್ಯ ಪ್ರದೇಶ ರಾಜ್ಯದ ಗ್ವಾಲೀಯರ್ ಪಟ್ಟಣವು ಐದು ರೈಲು ಮಾರ್ಗಗಳನ್ನು ಹೊಂದಿರುವ ಜಂಕ್ಷನ್ ರೈಲು ನಿಲ್ದಾಣವಾಗಿದ್ದು ಭಾರತದ ಪ್ರಮುಖ ನಗರಗಳೊಂದಿಗೆ ಸಂಪರ್ಕ ಸಾಧಿಸುತ್ತದೆ.

ಚಿತ್ರಕೃಪೆ: GDYA

ಪ್ರಮುಖ ರೈಲು ನಿಲ್ದಾಣಗಳು:

ಪ್ರಮುಖ ರೈಲು ನಿಲ್ದಾಣಗಳು:

ವಡೋದರಾ/ಬರೋಡಾ ಗುಜರಾತ್ ರಾಜ್ಯದ ಒಂದು ಐತಿಹಾಸಿಕ ಪ್ರಸಿದ್ಧ ಪಟ್ಟಣವಾಗಿರುವುದು ಅಲ್ಲದೆ ಇಲ್ಲಿನ ರೈಲು ನಿಲ್ದಾಣವೂ ಸಹ ದೇಶದ ಪ್ರಮುಖ ರೈಲು ನಿಲ್ದಾಣಗಳ ಪೈಕಿ ಒಂದಾಗಿದೆ.

ಚಿತ್ರಕೃಪೆ: World8115

ಪ್ರಮುಖ ರೈಲು ನಿಲ್ದಾಣಗಳು:

ಪ್ರಮುಖ ರೈಲು ನಿಲ್ದಾಣಗಳು:

ಸಿಯಾಲದಾಹ್ ಪಶ್ಚಿಮ ಬಂಗಾಳ ರಾಜ್ಯದ ಕೊಲ್ಕತ್ತಾದಲ್ಲಿರುವ ಪ್ರಮುಖ ಮೂರು ಪ್ರಮುಖ ರೈಲು ನಿಲ್ದಾಣಗಳ ಪೈಕಿ ಒಂದಾಗಿರುವುದು ಅಲ್ಲದೆ ದೇಶದ ಪ್ರಮುಖ ರೈಲು ನಿಲ್ದಾಣಗಳ ಪೈಕಿಯೂ ಸಹ ಒಂದಾಗಿದೆ.

ಚಿತ್ರಕೃಪೆ: Biswarup Ganguly

ಪ್ರಮುಖ ರೈಲು ನಿಲ್ದಾಣಗಳು:

ಪ್ರಮುಖ ರೈಲು ನಿಲ್ದಾಣಗಳು:

ರೇವಾರಿ ಹರ್ಯಾಣ ರಾಜ್ಯದಲ್ಲಿರುವ ಆರು ಮಾರ್ಗಗಳ ಪ್ರಮುಖ ರೈಲು ನಿಲ್ದಾಣವಾಗಿದೆ. ಭಾರತದ ಎಲ್ಲ ಭಾಗಗಳಿಗೂ ಉತ್ತಮವಾದ ಸಂಪರ್ಕವನ್ನು ಬೆಸೆಯುತ್ತದೆ.

ಚಿತ್ರಕೃಪೆ: SAGAR PRADHAN

ಪ್ರಮುಖ ರೈಲು ನಿಲ್ದಾಣಗಳು:

ಪ್ರಮುಖ ರೈಲು ನಿಲ್ದಾಣಗಳು:

ಪಶ್ಚಿಮ ರೈಲ್ವೆ ವಿಭಾಗಕ್ಕೆ ಬರುವ ಆರು ಮಾರ್ಗಗಳುಳ್ಳ ಸಾಬರಮತಿ ರೈಲು ನಿಲ್ದಾಣವು ಗುಜರಾತ್ ರಾಜ್ಯದ ಪ್ರಮುಖ ರೈಲು ನಿಲ್ದಾಣಗಳ ಪೈಕಿಯೂ ಸಹ ಒಂದಾಗಿದೆ. ಪ್ರಖ್ಯಾತ ಅಹ್ಮದಾಬಾದ್ ಮುಖ್ಯ ರೈಲು ನಿಲ್ದಾಣದಿಂದ ಕೇವಲ ಆರು ಕಿ.ಮೀ ದೂರದಲ್ಲಿದೆ.

ಚಿತ್ರಕೃಪೆ: Abhinav Phangcho Choudhury

ಪ್ರಮುಖ ರೈಲು ನಿಲ್ದಾಣಗಳು:

ಪ್ರಮುಖ ರೈಲು ನಿಲ್ದಾಣಗಳು:

ತಮಿಳುನಾಡಿನ ತಿರುನೆಲ್ವೇಲಿ ಜಂಕ್ಷನ್ ರೈಲು ನಿಲ್ದಾಣವು ದೇಶದ ಪ್ರಮುಖ ರೈಲು ನಿಲ್ದಾಣಗಳ ಪೈಕಿ ಒಂದಾಗಿದೆ.

ಚಿತ್ರಕೃಪೆ: Theni.M.Subramani

ಪ್ರಮುಖ ರೈಲು ನಿಲ್ದಾಣಗಳು:

ಪ್ರಮುಖ ರೈಲು ನಿಲ್ದಾಣಗಳು:

ಮಂಗಳೂರು ಜಂಕ್ಷನ್ ಕರ್ನಾಟಕದ ಪ್ರಮುಖ ರೈಲು ನಿಲ್ದಾಣಗಳ ಪೈಕಿ ಒಂದಾಗಿದೆ. ಕೇರಳ ಹಾಗೂ ಮಹಾರಾಷ್ಟ್ರಕ್ಕೆ ಉತ್ತಮವಾದ ಸಂಪರ್ಕವನ್ನು ಹೊಂದಿದೆ.

ಚಿತ್ರಕೃಪೆ: Cyndy Sims Parr

ಪ್ರಮುಖ ರೈಲು ನಿಲ್ದಾಣಗಳು:

ಪ್ರಮುಖ ರೈಲು ನಿಲ್ದಾಣಗಳು:

ಉತ್ತರ ಪ್ರದೇಶದ ಪ್ರಖ್ಯಾತ ಧಾರ್ಮಿಕ ಕ್ಷೇತ್ರವಾದ ಅಲಹಾಬಾದ್ ಜಂಕ್ಷನ್ ರೈಲು ನಿಲ್ದಾಣವು ದೇಶದ ಪ್ರಮುಖ ರೈಲು ನಿಲ್ದಾಣಗಳ ಪೈಕಿ ಒಂದಾಗಿದೆ.

ಚಿತ್ರಕೃಪೆ: Maxwrath

ಪ್ರಮುಖ ರೈಲು ನಿಲ್ದಾಣಗಳು:

ಪ್ರಮುಖ ರೈಲು ನಿಲ್ದಾಣಗಳು:

ನಾಲ್ಕು ಮಾರ್ಗಗಳುಳ್ಳ ಬಿಹಾರ ರಾಜ್ಯದ ಗಯಾ ಜಂಕ್ಷನ್ ರೈಲು ನಿಲ್ದಾಣವು ದೇಶದ ಪ್ರಮುಖ ರೈಲು ನಿಲ್ದಾಣಗಳ ಪೈಕಿ ಒಂದಾಗಿದೆ.

ಚಿತ್ರಕೃಪೆ: Kinshuk Sunil

ಪ್ರಮುಖ ರೈಲು ನಿಲ್ದಾಣಗಳು:

ಪ್ರಮುಖ ರೈಲು ನಿಲ್ದಾಣಗಳು:

ನವದೆಹಲಿ ಜಂಕ್ಷನ್ ರೈಲು ನಿಲ್ದಾಣವು ದೇಶದ ಪ್ರಮುಖ ರೈಲು ನಿಲ್ದಾಣವಾಗಿದೆ. ಭಾರತದ ಎಲ್ಲ ಭಾಗಗಳಿಂದಲೂ ಈ ನಿಲ್ದಾಣಕ್ಕೆ ಸಮ್ಪರ್ಕವಿರುವುದರಿಂದ ಸಾಕಷ್ಟು ಜನರ ಓಡಾಟ ಈ ನಿಲ್ದಾಣದಲ್ಲಿರುತ್ತದೆ.

ಚಿತ್ರಕೃಪೆ: Bruno Corpet

ಪ್ರಮುಖ ರೈಲು ನಿಲ್ದಾಣಗಳು:

ಪ್ರಮುಖ ರೈಲು ನಿಲ್ದಾಣಗಳು:

ಉತ್ತರ ಪ್ರದೇಶದ ಗೋರಖಪುರ್ ಜಂಕ್ಷನ್ ರೈಲು ನಿಲ್ದಾಣವು ದೇಶದ ಅತಿ ಪ್ರಮುಖ ರೈಲು ನಿಲ್ದಾಣಗಳ ಪೈಕಿ ಒಂದಾಗಿದೆ. ಅಲ್ಲದೆ ಜಗತ್ತಿನಲ್ಲೆ ಅತಿ ಉದ್ದನೇಯ ಪ್ಲಾಟ್ ಫಾರ್ಮ್ ಹೊಂದಿರುವ ರೈಲು ನಿಲ್ದಾಣವೂ ಸಹ ಇದ ಆಗಿದೆ.

ಚಿತ್ರಕೃಪೆ: Macro Eye

ಪ್ರಮುಖ ರೈಲು ನಿಲ್ದಾಣಗಳು:

ಪ್ರಮುಖ ರೈಲು ನಿಲ್ದಾಣಗಳು:

ಉತ್ತರ ಪ್ರದೇಶ ರಾಜ್ಯದ ಬುಂದೇಲ್ಖಂಡ್ ಪ್ರದೇಶದಲ್ಲಿರುವ ಝಾನ್ಸಿ ನಾಲ್ಕು ಮಾರ್ಗಗಳುಳ್ಳ ಜಂಕ್ಷನ್ ರೈಲು ನಿಲ್ದಾಣವಾಗಿದೆ. ದೇಶದ ಬಹುತೇಕ ನಗರಗಳೊಂದಿಗೆ ಉತ್ತಮ ಸಂಪರ್ಕ ಹೊಂದಿದೆ.

ಚಿತ್ರಕೃಪೆ: Vaibhav96

ಪ್ರಮುಖ ರೈಲು ನಿಲ್ದಾಣಗಳು:

ಪ್ರಮುಖ ರೈಲು ನಿಲ್ದಾಣಗಳು:

ಕೇರಳ ರಾಜ್ಯದಲ್ಲಿರುವ ಪ್ರಮುಖ ರೈಲು ನಿಲ್ದಾಣವೆಂದರೆ ಪಾಲಕ್ಕಾಡ್ ಜಂಕ್ಷನ್. ಕರ್ನಾಟಕ, ತಮಿಳುನಾಡುಗಳೊಂದಿಗೆ ಸಂಪರ್ಕ ಹೊಂದಿರುವುದಲ್ಲದೆ ದೇಶದ ಇತರೆ ಮಹಾನಗಗಳೊಂದಿಗೂ ಸಹ ಸಂಪರ್ಕ ಸಾಧಿಸುತ್ತದೆ.

ಚಿತ್ರಕೃಪೆ: wikimapia

ಪ್ರಮುಖ ರೈಲು ನಿಲ್ದಾಣಗಳು:

ಪ್ರಮುಖ ರೈಲು ನಿಲ್ದಾಣಗಳು:

ಕೇರಳ ರಾಜ್ಯದ ಕೊಚ್ಚಿ ನಗರದಲ್ಲಿರುವ ಅತಿ ದೊಡ್ಡ ಜಂಕ್ಷನ್ ರೈಲು ನಿಲ್ದಾಣವೆ ಎರ್ನಾಕುಲಂ ರೈಲು ನಿಲ್ದಾಣ. ನಾಲ್ಕು ಮಾರ್ಗಗಳುಳ್ಳ ಈ ಜಂಕ್ಷನ್ ರೈಲು ನಿಲ್ದಾಣದಲ್ಲಿ ಒಟ್ಟು ಆರು ಅಂಕಣಗಳಿವೆ. ಉತ್ತರ ಭಾರತದ ಪ್ರಮುಖ ನಗರಗಳಲ್ಲದೆ ಪಕ್ಕದ ಕರ್ನಾಟಕ, ತಮಿಳುನಾಡು ರಾಜ್ಯಗಳೊಂದಿಗೆ ಉತ್ತಮವಾದ ಸಂಪರ್ಕವನ್ನು ಈ ನಿಲ್ದಾಣ ಹೊಂದಿದೆ.

ಚಿತ್ರಕೃಪೆ: Sreejithk2000

ಪ್ರಮುಖ ರೈಲು ನಿಲ್ದಾಣಗಳು:

ಪ್ರಮುಖ ರೈಲು ನಿಲ್ದಾಣಗಳು:

ಕೇರಳದ ಕೊಲ್ಲಂ ಜಂಕ್ಷನ್ ರೈಲು ನಿಲ್ದಾಣವು ರಾಜ್ಯದ ಎರಡನೇಯ ದೊಡ್ಡ ರೈಲು ನಿಲ್ದಾಣವಾಗಿದೆ. ಅಲ್ಲದೆ ಗೋರಖ್ಪೂರ್ ನಂತರದಲ್ಲಿ ಜಗತ್ತಿನಲ್ಲೆ ಎರಡನೇಯ ಅತಿ ಉದ್ದದ ಅಂಕಣ ಹೊಂದಿರುವ ರೈಲು ನಿಲ್ದಾಣವಾಗಿದೆ ಕೊಲ್ಲಂ. ಅಂಕಣದ ಒಟ್ಟಾರೆ ಉದ್ದ 1180.5 ಕಿ.ಮೀ ಗಳು. ಒಟ್ಟು 17 ಹಳಿಗಳನ್ನು ಈ ನಿಲ್ದಾಣ ಹೊಂದಿದೆ.

ಚಿತ್ರಕೃಪೆ: Arunvrparavur

ಪ್ರಮುಖ ರೈಲು ನಿಲ್ದಾಣಗಳು:

ಪ್ರಮುಖ ರೈಲು ನಿಲ್ದಾಣಗಳು:

ಅಸ್ಸಾಂ ರಾಜ್ಯದ ಅತಿ ದೊಡ್ಡ ನಗರವಾದ ಗುವಾಹಟಿಯ ಜಂಕ್ಷನ್ ರೈಲು ನಿಲ್ದಾಣವು ಭಾರತದ ಪ್ರಮುಖ ರೈಲು ನಿಲ್ದಾಣಗಳ ಪೈಕಿ ಒಂದಾಗಿದೆ. ಈಶಾನ್ಯ ಭಾರತದ ಪ್ರಮುಖ ಮೆಟ್ರೊಪಾಲಿಟನ್ ನಗರವಾಗಿರುವ ಗುವಾಹಟಿಯು ಭಾರತದ ಪ್ರಮುಖ ನಗರಗಳೊಂದಿಗೆ ತನ್ನ ಜಂಕ್ಷನ್ ರೈಲು ನಿಲ್ದಾಣದಿಂದ ಸಂಪರ್ಕ ಸಾಧಿಸುತ್ತದೆ.

ಚಿತ್ರಕೃಪೆ: Suraj Kumar Das

ಪ್ರಮುಖ ರೈಲು ನಿಲ್ದಾಣಗಳು:

ಪ್ರಮುಖ ರೈಲು ನಿಲ್ದಾಣಗಳು:

ಜಗತ್ತಿನಲ್ಲೆ ಮೂರನೇಯ ಅತಿ ಉದ್ದದ ಅಂಕಣ ಹೊಂದಿರುವ ರೈಲು ನಿಲ್ದಾಣವಾಗಿದೆ ಪಶ್ಚಿಮ ಬಂಗಾಳ ರಾಜ್ಯದ ಖರಗ್ಪೂರ್. ಹೌರಾದ ನಂತರ ಆಗ್ನೇಯ ರೈಲ್ವೆ ವಿಭಾಗದ ಅತಿ ಚಟುವಟಿಕೆಯುಳ್ಳ ರೈಲು ನಿಲ್ದಾಣವಾಗಿದೆ ಖರಗ್ಪೂರ್. ಭಾರತದ ಪ್ರಮುಖ ಭಾಗಗಳಿಗೆ ಇಲ್ಲಿಂದ ರೈಲಿನ ಸಂಪರ್ಕವಿದೆ.

ಚಿತ್ರಕೃಪೆ: Biswarup Ganguly

ಪ್ರಮುಖ ರೈಲು ನಿಲ್ದಾಣಗಳು:

ಪ್ರಮುಖ ರೈಲು ನಿಲ್ದಾಣಗಳು:

ತಮಿಳುನಾಡಿನ ಕೋಯಮತ್ತೂರು ದಕ್ಷಿಣ ಭಾರತದ ಪ್ರಮುಖ ರೈಲು ನಿಲ್ದಾಣಗಳ ಪೈಕಿ ಒಂದಾಗಿದೆ. ಚೆನ್ನೈ ಸೆಂಟ್ರಲ್ ರೈಲು ನಿಲ್ದಾಣದ ನಂತರ ತಮಿಳುನಾಡಿನಲ್ಲಿ ಅತಿ ಹೆಚ್ಚು ಚಟುವಟಿಕೆ ನಿರತ ಜಂಕ್ಷನ್ ರೈಲು ನಿಲ್ದಾಣ ಇದಾಗಿದೆ.

ಚಿತ್ರಕೃಪೆ: Ragunathan

ಪ್ರಮುಖ ರೈಲು ನಿಲ್ದಾಣಗಳು:

ಪ್ರಮುಖ ರೈಲು ನಿಲ್ದಾಣಗಳು:

ಬೆಂಗಳೂರಿನ ಕೇಂದ್ರ ರೈಲು ನಿಲ್ದಾಣದ ನಂತರ ಅತಿ ಮಹತ್ತರವಾದ ಜಂಕ್ಷನ್ ರೈಲು ನಿಲ್ದಾಣ ಯಶವಂತಪುರ. ಉತ್ತರ ಭಾರತದ ಹಲವು ಪ್ರಮುಖ ನಗರಗಳಿಗೆ ನೇರವಾಗಿ ಇಲ್ಲಿಂದ ರೈಲುಗಳಿವೆ.

ಚಿತ್ರಕೃಪೆ: Nikhilb239

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X