Search
  • Follow NativePlanet
Share
» »ದೇಶದ ಅತ್ಯದ್ಭುತ ಐತಿಹಾಸಿಕ ಕೋಟೆಗಳು

ದೇಶದ ಅತ್ಯದ್ಭುತ ಐತಿಹಾಸಿಕ ಕೋಟೆಗಳು

By Vijay

ಹಿಂದೆ ರಾಜರುಗಳ ಕಾಲದಲ್ಲಿ ಸಾಮ್ರಾಜ್ಯವನ್ನು ಶತ್ರುಗಳಿಂದ ರಕ್ಷಿಸಲು ತಂತ್ರಗಾರಿಕೆಯ ರಚನೆಗಳಾಗಿ ಕಾರ್ಯ ನಿರ್ವಹಿಸುತ್ತಿದ್ದವು ಕೋಟೆಗಳು. ಗಟ್ಟಿ ಮುಟ್ಟಾದ ಗೋಡೆಗಳು, ಅಗಾಧವಾದ ಎತ್ತರ, ರಹಸ್ಯಮಯ ದಾರಿಗಳು, ಚಾಣಾಕ್ಷತನದಿಂದ ನಿರ್ಮಿಸಲಾದ ಆಯಕಟ್ಟಿನ ಸ್ಥಳಗಳು, ಶಸ್ತ್ರಾಗಾರ ಹೀಗೆ ಮುಂತಾದವುಗಳು ಕೋಟೆಗಳ ಪ್ರಮುಖ ಲಕ್ಷಣಗಳಾಗಿವೆ.

ಪ್ರಸ್ತುತ, ಇಂದು ನಮಗೆ ಅಂತಹ ಕೋಟೆಗಳ ಅವಶ್ಯಕತೆ ಇಲ್ಲದೆ ಹೋದರೂ ಸಹ, ಗತ ಕಾಲದ ವೈಭವತೆಯನ್ನು, ನಿರ್ಮಾಣ ಕೌಶಲ್ಯವನ್ನು, ಇಂದಿನ ಕಟ್ಟಡಗಳು ನಾಚುವಂತೆ ಇನ್ನೂ ಸದೃಢವಾಗಿ ನೆಲೆಸಿರುವುದನ್ನು ನೋಡುವುದೆ ಒಂದು ರೋಚಕಮಯ ಸಂಗತಿಯಾಗಿದೆ.

ಕೋಟೆಗಳು ಒಂದು ರೀತಿಯಲ್ಲಿ ಕುತೂಹಲಕರ ರಚನೆಗಳೂ ಸಹ ಆಗಿವೆ. ಸಾಮಾನ್ಯವಾಗಿ ಇಂದಿನ ಸಮಯಕ್ಕೆ ಹೋಲಿಸಿದಾಗ ಅಂದು ತಂತ್ರಜ್ಞಾನವು ಅಷ್ಟೊಂದು ಪ್ರಗತಿ ಹೊಂದದೆ ಹೋಗಿದ್ದರೂ ಸಹ ಕೋಟೆಗಳಲ್ಲಿ ಗಮನಾರ್ಹವಾದ ಚಾಣಾಕ್ಷತನ, ನಿಪುಣತೆಗಳು ಅನ್ವಯಿಸಲ್ಪಟ್ಟಿರುವುದನ್ನು ಕಾಣಬಹುದಾಗಿದೆ.

ವೈವಿಧ್ಯಮಯ ರಾಜಮನೆತನಗಳು, ವಿವಿಧ ದೇಶಗಲ ಅರಸರುಗಳನ್ನು ಕಂಡ ಭಾರತದಲ್ಲಿ ವೈವಿಧ್ಯಮಯ ಕೋಟೆಗಳು ಸಾವಿರಾರು ಸಂಖ್ಯೆಯಲ್ಲಿವೆ. ಆದರೂ ಕೆಲವು ಕೋಟೆಗಳು ತಮ್ಮ ವಿಶಾಲತೆ, ಸದೃಢತೆ, ವಿಶಿಷ್ಟ ವಿನ್ಯಾಸಗಳಿಂದ ಸಾಕಷ್ಟು ಪ್ರಾಮುಖ್ಯತೆಯನ್ನು ಪಡೆದಿವೆ. ಅಂತಹ ಕೆಲವು ಪ್ರಮುಖ ಕೋಟೆಗಳ ಪರಿಚಯವನ್ನು ಈ ಲೇಖನದಲ್ಲಿ ಮಾಡಲಾಗಿದೆ.

ಭಾರತದಲ್ಲಿರುವ ಅದ್ಭುತ ಕೋಟೆಗಳು:

ಭಾರತದಲ್ಲಿರುವ ಅದ್ಭುತ ಕೋಟೆಗಳು:

ಮೆಹ್ರಾನ್ಗಡ್ ಕೋಟೆ: ಇದೊಂದು ಅತಿ ದೊಡ್ಡದಾದ ಕೋಟೆಯಾಗಿದ್ದು ರಾಜಸ್ಥಾನ ರಾಜ್ಯದ ಮೆಹ್ರಾನ್ಗಡ್ ನಗರದಲ್ಲಿದೆ. ಭಾರತದಲ್ಲೆ ವಿಶಾಲವಾದ ಕೋಟೆ ಇದಾಗಿದೆ ಎಂದು ಹೇಳಲಾಗುತ್ತದೆ. ರಾಜ ಹಾಗೂ ನಿರ್ಮಾತೃ ರಾವ್ ಜೋಧಾ ಅವರು ಈ ಕೋಟೆಯನ್ನು ಭದ್ರತೆಯ ದೃಷ್ಟಿಯಿಂದ ನಿರ್ಮಿಸಿದ್ದನು. ಭೇಟಿ ನೀಡಬಹುದಾದ ಸಮಯ ಬೆಳಿಗ್ಗೆ ಒಂಬತ್ತರಿಂದ ಸಂಜೆ ಐದು ಘಂಟೆಯವರೆಗೆ.

ಚಿತ್ರಕೃಪೆ: Milo & Silvia in the world

ಭಾರತದಲ್ಲಿರುವ ಅದ್ಭುತ ಕೋಟೆಗಳು:

ಭಾರತದಲ್ಲಿರುವ ಅದ್ಭುತ ಕೋಟೆಗಳು:

ನಿಮ್ರಾನಾ ಕೋಟೆ: ನಿಮ್ರಾನಾ ಕೋಟೆಯು ರಾಜಸ್ಥಾನದ ಅಳ್ವಾರ್ ಪಟ್ಟಣದಲ್ಲಿದೆ. ರಾಜಸ್ಥಾನದ ಚೌಹಾಣ್ ಮನೆತನದ ಅರಸರಿಂದ 1464 ರಲ್ಲಿ ಈ ಕೋಟೆಯ ನಿರ್ಮಾಣವಾಗಿದೆ. ಪ್ರಸ್ತುತ ಈ ಕೋಟೆಯು ಸಾಂಪ್ರದಾಯಿಕ ಹೋಟೆಲ್ ಆಗಿ ಪರಿವರ್ತನೆಗೊಂಡಿದ್ದು ಸಾಕಷ್ಟು ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಭೇಟಿ ನೀಡಬಹುದಾದ ಸಮಯ ಬೆಳಿಗ್ಗೆ ಒಂಬತ್ತರಿಂದ ಸಂಜೆ ಐದು ಘಂಟೆಯವರೆಗೆ.

ಶುಲ್ಕ: ಎರಡು ಘಂಟೆಗೆ 100 ರೂ.

ಚಿತ್ರಕೃಪೆ: Archit Ratan

ಭಾರತದಲ್ಲಿರುವ ಅದ್ಭುತ ಕೋಟೆಗಳು:

ಭಾರತದಲ್ಲಿರುವ ಅದ್ಭುತ ಕೋಟೆಗಳು:

ಪಾನಿಕೋಟಾ ಕೋಟೆ: ಕೇಂದ್ರಾಡಳಿತ ಪ್ರದೇಶವಾದ ದೀವ್ ಹಾಗೂ ದಾಮನ್ ಗಳ ಪೈಕಿ ದೀವ್ ನ ಸಮುದ್ರದಲ್ಲಿ ಈ ಕೋಟೆಯಿದೆ. ಅಸ್ವಾಭಾವಿಕ ಹಾಗೂ ಆಶ್ಚರ್ಯಕರ ನೆಲೆಯಿಂದಾಗಿ ಇದು ಜನಪ್ರಿಯವಾಗಿದೆ. ಈ ಕೋಟೆಗೆ ತೆರಳಲು ಸಮುದ್ರದ ಮೂಲಕವೆ ಸಾಗಬೇಕೆಂದು ಹೇಳಬೇಕಾಗಿಲ್ಲ ಅಲ್ಲವೆ! ಭೇಟಿ ನೀಡಬಹುದಾದ ಸಮಯ ಬೆಳಿಗ್ಗೆ ಒಂಬತ್ತರಿಂದ ಸಂಜೆ ಆರು ಘಂಟೆಯವರೆಗೆ.

ಚಿತ್ರಕೃಪೆ: bijapuri ( Ed Sentner )

ಭಾರತದಲ್ಲಿರುವ ಅದ್ಭುತ ಕೋಟೆಗಳು:

ಭಾರತದಲ್ಲಿರುವ ಅದ್ಭುತ ಕೋಟೆಗಳು:

ರತನ್ಗಡ್ ಕೋಟೆ: ಮಹಾರಾಷ್ಟ್ರದ ರತನವಾಡಿ ಎಂಬಲ್ಲಿ ಈ ಕೋಟೆಯಿದೆ. ಭಂಡಾರಧಾರಾ ಎಂಬ ಪಟ್ಟಣವನ್ನು ಎದುರಾಭಿಮುಖವಾಗಿ ನೋಡುತ್ತಿರುವ ಈ ಕೋಟೆಯು ಸುಮಾರು 2000 ವರ್ಷಗಳಷ್ಟು ಪುರಾತನವಾದುದು ಎಂದು ಅಂದಾಜಿಸಲಾಗಿದೆ. ಇದೊಂದು ದೊಡ್ಡದಾದ ಬೆಟ್ಟವಾಗಿದ್ದು ತುದಿಯಲ್ಲಿ ಕುಳಿಯನ್ನು ಹೊಂದಿದೆ. ಇದನ್ನು ನೆಧೆ ಎಂದು ಕರೆಯಲಾಗುತ್ತದೆ. ಛತ್ರಪತಿ ಶಿವಾಜಿಯು ಈ ಕೋಟೆಯನ್ನು ವಶಪಡಿಸಿಕೊಂಡಿದ್ದನು ಹಾಗೂ ಇದು ಅವನ ಇಷ್ಟವಾದ ಕೋಟೆಗಳಲ್ಲಿ ಒಂದಾಗಿತ್ತು. ಗಣೆಶ, ಹನುಮಾನ, ಕೊಂಕಣ, ತ್ರಿಂಬಕ ಎಂಬ ಒಟ್ಟು ನಾಲ್ಕು ದ್ವಾರಗಳಿವೆ ಈ ಕೋಟೆಗೆ.

ಚಿತ್ರಕೃಪೆ: Elroy Serrao

ಭಾರತದಲ್ಲಿರುವ ಅದ್ಭುತ ಕೋಟೆಗಳು:

ಭಾರತದಲ್ಲಿರುವ ಅದ್ಭುತ ಕೋಟೆಗಳು:

ಕೆಂಪು ಕೋಟೆ: ರಾಜಧಾನಿ ದೆಹಲಿಯಲ್ಲಿರುವ ಈ ಕೆಂಪು ಕೋಟೆಯು ಇಂದಿಗೂ ಕಾರ್ಯನಿರತವಾಗಿರುವ ಪ್ರಮುಖ ಕೋಟೆಯಾಗಿದೆ. 17 ನೇಯ ಶತಮಾನದಲ್ಲಿ ಶಹಜಹಾನನಿಂದ ನಿರ್ಮಿಸಲ್ಪಟ್ಟ ಈ ಕೋಟೆಯು ಮುಘಲ್ ಅರಸರ ವಸತಿ ನಿಲಯವಾಗಿತ್ತು.

ಭೇಟಿ ನೀಡ ಬಹುದಾದ ಸಮಯ: ಬೆಳಿಗ್ಗೆ 9.30 ರಿಂದ ಸಂಜೆ 4.30 ರ ವರೆಗೆ.

ಶುಲ್ಕ: ಹತ್ತು ರೂಪಾಯಿ ಪ್ರತಿ ಒಬ್ಬರಿಗೆ

ಚಿತ್ರಕೃಪೆ: Arian Zwegers

ಭಾರತದಲ್ಲಿರುವ ಅದ್ಭುತ ಕೋಟೆಗಳು:

ಭಾರತದಲ್ಲಿರುವ ಅದ್ಭುತ ಕೋಟೆಗಳು:

ತುಂಗ ಕೋಟೆ: ಮಹಾರಾಷ್ಟ್ರದ ಲೋನಾವಲಾ/ಖಂಡಾಲಾ ಪ್ರದೇಶದಲ್ಲಿರುವ ಹಸಿರು ಗುಡ್ಡದಲ್ಲಿ ಅವಿತು ಕುಳಿತ ಕೋಟೆ ಇದಾಗಿದೆ. ಟ್ರೆಕ್ ಮಾಡಲು ಸಾಕಷ್ಟು ಸವಾಲು ಎಸೆಯುತ್ತದೆ ಈ ಕೋಟೆ.

ಚಿತ್ರಕೃಪೆ: gouravshah

ಭಾರತದಲ್ಲಿರುವ ಅದ್ಭುತ ಕೋಟೆಗಳು:

ಭಾರತದಲ್ಲಿರುವ ಅದ್ಭುತ ಕೋಟೆಗಳು:

ಟ್ರೆಕ್ ಮಾಡಬೇಕೆಂದರೆ ಅದೂ ಮಳೆಗಾಲದ ಸಂದರ್ಭದಲ್ಲಿ ಸಾಕಷ್ಟು ಜಾಗೃತೆವಹಿಸಬೇಕಾಗಿರುವುದು ಅವಶ್ಯಕ. ಇಲ್ಲದಿದ್ದರೆ ಪ್ರಪಾತಕ್ಕೆ ಉರುಳುವುದರಲ್ಲಿ ಯಾವುದೆ ಸಂಶಯವಿಲ್ಲ.

ಚಿತ್ರಕೃಪೆ: gouravshah

ಭಾರತದಲ್ಲಿರುವ ಅದ್ಭುತ ಕೋಟೆಗಳು:

ಭಾರತದಲ್ಲಿರುವ ಅದ್ಭುತ ಕೋಟೆಗಳು:

ಕೋರಿಗಡ್ ಕೋಟೆ: ಮಹಾರಾಷ್ಟ್ರದ ಲೋನಾವಲಾ ಬಳಿಯಿರುವ ಕೋರಿಗಡ್ ಎಂಬ ಗ್ರಾಮದಲ್ಲಿ ಈ ಅದ್ಭುತ ಕೋಟೆಯಿದೆ. ಟ್ರೆಕ್ ಮಾಡಲೂ ಯೋಗ್ಯವಾಗಿರುವ ಈ ಕೋಟೆ ಪ್ರದೇಶವು ಮಳೆಗಾಲದ ಸಂದರ್ಭದಲ್ಲಿ ಸಿಂಗರಿಸಿಕೊಂಡಿರುತ್ತದೆ.

ಚಿತ್ರಕೃಪೆ: Amogh Sarpotdar

ಭಾರತದಲ್ಲಿರುವ ಅದ್ಭುತ ಕೋಟೆಗಳು:

ಭಾರತದಲ್ಲಿರುವ ಅದ್ಭುತ ಕೋಟೆಗಳು:

ಭಾನ್ಗಡ್ ಕೋಟೆ: ರಾಜಸ್ಥಾನ ರಾಜ್ಯದ ಭಾನ್ಗಡ್ ಪ್ರದೇಶದ ರಾಜನಾಗಿದ್ದ ಸವಾಯಿ ಮಾಧೊ ಸಿಂಗ್ ನಿಂದ 17 ನೇಯ ಶತಮಾನದಲ್ಲಿ ಈ ಕೋಟೆಯ ನಿರ್ಮಾಣವಾಗಿದೆ. ರೋಚಕದ ಸಂಗತಿಯೆಂದರೆ ಈ ಕೋಟೆಯು ಭೂತ, ಪ್ರೇತಾತ್ಮಗಳ ಮನೆಯಾಗಿದೆ ಎಂದು ಹೇಳಲಾಗುತ್ತದೆ. ಸಂಜೆಯ ವೇಳೆ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಅಲ್ಲದೆ ಭೂತದ ಕಾಟವಿದೆ ಎಂದು ಬಲವಾಗಿ ನಂಬಿರಲಾಗಿರುವುದರಿಂದ ಈ ಕೋಟೆಯ ಹೊರವಲಯದಲ್ಲಿ ಹೊಸ ಗ್ರಾಮ ನಿರ್ಮಿಸಿ ಜನ ವಾಸಿಸುತ್ತಿದ್ದಾರೆ.

ಚಿತ್ರಕೃಪೆ: Shahnawaz Sid

ಭಾರತದಲ್ಲಿರುವ ಅದ್ಭುತ ಕೋಟೆಗಳು:

ಭಾರತದಲ್ಲಿರುವ ಅದ್ಭುತ ಕೋಟೆಗಳು:

ಜುನಾಗಡ್ ಕೋಟೆ: ರಾಜಸ್ಥಾನದ ಬಿಕಾನೇರ್ ಜಿಲ್ಲೆಯ ಜುನಾಗಡ್ ನಲ್ಲಿ ಈ ಕೋಟೆಯಿದೆ. 1588 ರಲ್ಲಿ ನಿರ್ಮಿಸಲ್ಪಟ್ಟ ಈ ಕೋಟೆಯು ರಾಜನ ಶ್ರೀಮಂತಮಯ ಜೀವನ ಶೈಲಿಗೆ ಹಿಡಿದ ಕೈಗನ್ನಡಿಯಾಗಿದೆ.

ಚಿತ್ರಕೃಪೆ: akhil kila

ಭಾರತದಲ್ಲಿರುವ ಅದ್ಭುತ ಕೋಟೆಗಳು:

ಭಾರತದಲ್ಲಿರುವ ಅದ್ಭುತ ಕೋಟೆಗಳು:

ಗ್ವಾಲೀಯರ್ ಕೋಟೆ: ಮಧ್ಯ ಪ್ರದೇಶ ರಾಜ್ಯದ, ಗ್ವಾಲೀಯರ್ ಪಟ್ಟಣದ ಬಳಿಯಿರುವ ಈ ಕೋಟೆಯು ಒಂದು ಪ್ರಸಿದ್ಧ ಬೆಟ್ಟ ಕೋಟೆಯಾಗಿದೆ. ಗುರ್ಜರಿ ಮಹಲ್ ಹಾಗೂ ಮನ್ ಮಂದಿರ ಎಂಬ ಎರಡು ಅರಮನೆಗಳುಳ್ಳ ಈ ಕೋಟೆಯು ರಾಜಾ ಮಾನ್ ಸಿಂಗ್ ತೋಮರ್ ನಿಂದ ನಿರ್ಮಿಸಲ್ಪಟ್ಟಿದೆ.

ಚಿತ್ರಕೃಪೆ: Tom Maloney

ಭಾರತದಲ್ಲಿರುವ ಅದ್ಭುತ ಕೋಟೆಗಳು:

ಭಾರತದಲ್ಲಿರುವ ಅದ್ಭುತ ಕೋಟೆಗಳು:

ಲೋಹಗಡ್ ಕೋಟೆ: ಪುಣೆ ಜಿಲ್ಲೆಯಲ್ಲಿರುವ ಲೋಹಗಡ್ ಬೆಟ್ಟ ಕೋಟೆಯು ಸಮುದ್ರ ಮಟ್ಟದಿಂದ ಸುಮಾರು 3,389 ಅಡಿಗಳಷ್ಟು ಎತ್ತರದಲ್ಲಿ ನೆಲೆಸಿದ್ದು ಅದ್ಭುತವಾದ, ಉಸಿರು ಬಿಗಿ ಹಿಡಿದು ನೋಡುವಂತಹ ದೃಶ್ಯಾವಳಿಗಳನ್ನು ಭೇಟಿ ನೀಡುವವರಿಗೆ ಒದಗಿಸುತ್ತದೆ. ಮತ್ತೊಂದು ಪ್ರಖ್ಯಾತ ಗಿರಿಧಾಮವಾದ ಲೋನಾವಲಾಕೆ ಸನಿಹದಲ್ಲಿರುವ ಲೋಹಗಡ್ ಸುತ್ತ ಮುತ್ತಲೂ ಅನೇಕ ಆಕರ್ಷಕ ದೃಶ್ಯಾವಳಿಗಳನ್ನು ಕಾಣಬಹುದಾಗಿದೆ.


ಚಿತ್ರಕೃಪೆ: vivek Joshi

ಭಾರತದಲ್ಲಿರುವ ಅದ್ಭುತ ಕೋಟೆಗಳು:

ಭಾರತದಲ್ಲಿರುವ ಅದ್ಭುತ ಕೋಟೆಗಳು:

ಮುರುದ್ ಜಂಜೀರಾ ಕೋಟೆ: ಮಹಾರಾಷ್ಟ್ರ ರಾಜ್ಯದ ರಾಯಗಡ್ ಜಿಲ್ಲೆಯ ಮುರುದ್ ಎಂಬ ಕರಾವಳಿ ಹಳ್ಳಿಯ ನಡುಗಡ್ಡೆ ಕೋಟೆಯಾಗಿದೆ ಇದು. ಸಿದ್ದಿಗಳಿಂದ ವಾಸಿಸಲ್ಪಡುತ್ತಿದ್ದ ಈ ಕೋಟೆಯು ಒಂದು ಹೆಗ್ಗಳಿಕೆಯನ್ನು ಹೊಂದಿದೆ. ಅದೇನೆಂದರೆ ಪಶ್ಚಿಮ ಕರಾವಳಿ ತೀರದ ಈ ಒಂದು ಕೋಟೆಯು ಡಚ್ಚರು, ಮರಾಠರು, ಬ್ರಿಟೀಷರು ಹೀಗೆ ಯಾರೆ ಆಕ್ರಮಣ ಮಾಡಿದರೂ ಯಾರ ಕೈವಶವೂ ಆಗಲಿಲ್ಲ.

ಚಿತ್ರಕೃಪೆ: Ishan Manjrekar

ಭಾರತದಲ್ಲಿರುವ ಅದ್ಭುತ ಕೋಟೆಗಳು:

ಭಾರತದಲ್ಲಿರುವ ಅದ್ಭುತ ಕೋಟೆಗಳು:

ಉದಯಗಿರಿ ಕೋಟೆ: ದಕ್ಷಿಣ ಭಾರತದಲ್ಲಿ ಉದಯಗಿರಿ ಎಂಬ ಹೆಸರಿನ ಎರಡು ಕೋಟೆಗಳಿವೆ. ಒಂದು ಆಂಧ್ರದ ನೆಲ್ಲೂರು ಪಟ್ಟಣದಲ್ಲಿದ್ದರೆ ಇನ್ನೊಂದು ತಮಿಳುನಾಡಿನ ಕನ್ಯಾಕುಮಾರಿಯಲ್ಲಿದೆ. ಇಲ್ಲಿ ಪರಿಚಯಿಸಲಾಗುತ್ತಿರುವುದು ನೆಲ್ಲೂರಿನ ಉದಯಗಿರಿ ಕೋಟೆ. ಲಂಗುಲ ಗಜಪತಿಯಿಂದ ನಿರ್ಮಿಸಲ್ಪಟ್ಟ ಈ ಕೋಟೆಗೆ ತೆರಳುವುದು ಕಷ್ಟಕರ. ಬಹುತೇಕ ಕಡೆಗಳಿಂದ ಇಲ್ಲಿಗೆ ದಾರಿಯೆ ಇಲ್ಲ. ಆದರೆ ಪೂರ್ವದಲ್ಲಿರುವ ಕಾಡು ದಾರಿ ಹಾಗೂ ಪಶ್ಚಿಮದಲ್ಲಿರುವ ಚಿಕ್ಕ ಕಚ್ಚಾ ಮಾರ್ಗದಿಂದ ಮಾತ್ರವೆ ಈ ಕೋಟೆಗೆ ತೆರಳಬಹುದಾಗಿದೆ.

ಚಿತ್ರಕೃಪೆ: YVSREDDY

ಭಾರತದಲ್ಲಿರುವ ಅದ್ಭುತ ಕೋಟೆಗಳು:

ಭಾರತದಲ್ಲಿರುವ ಅದ್ಭುತ ಕೋಟೆಗಳು:

ಅಂಬರ ಕೋಟೆ: ರಾಜಸ್ಥಾನದ ಜೈಪುರ ಪಟ್ಟಣದಲ್ಲಿದೆ ಈ ಅಂಬರ ಕೋಟೆ. ಇಂದು ಪ್ರವಾಸಿ ಆಕರ್ಷಣೆಯಾಗಿ ಈ ಕೋಟೆ ಜನಪ್ರಿಯವಾಗಿದೆ.

ಚಿತ್ರಕೃಪೆ: michael clarke stuff

ಭಾರತದಲ್ಲಿರುವ ಅದ್ಭುತ ಕೋಟೆಗಳು:

ಭಾರತದಲ್ಲಿರುವ ಅದ್ಭುತ ಕೋಟೆಗಳು:

ಜೈಸಲ್ಮೇರ್ ಕೋಟೆ: ಜಗತ್ತಿನ ದೊಡ್ಡ ಕೋಟೆ ಸಂಕೀರ್ಣಗಳ ಪೈಕಿ ಜೈಸಲ್ಮೇರ್ ಕೋಟೆಯೂ ಸಹ ಒಂದಾಗಿದೆ. ಭಾಟಿಯ ರಜಪೂತ ದೊರೆಯಾದ ರಾವಲ್ ಜೈಸಲ್ ಎಂಬಾತನಿಂದ 1156 ರಲ್ಲಿ ಈ ಕೋಟೆಯ ನಿರ್ಮಾಣವಾಗಿದೆ.

ಚಿತ್ರಕೃಪೆ: Adrian Sulc

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X