ಡೋಣ ಬನ್ನಿ ಸುಂದರ ವೆಲ್ಲೊರನ್ನು!
ಹುಡುಕಿ
 
ಹುಡುಕಿ
 

ಪ್ರಕೃತಿಯ ಮಡಿಲಿನಲ್ಲೊ೦ದು ಅಪ್ಯಾಯಮಾನವಾದ ಚಾರಣ, ಕುಲ್ಲು ಕಣಿವೆ

Written by: Gururaja Achar
Published: Wednesday, April 19, 2017, 12:27 [IST]
Share this on your social network:
   Facebook Twitter Google+ Pin it  Comments

ಕುಲ್ಲು ಕಣಿವೆಯ ಮೂಲಕ ಸಾಗುವ ಭುಭು ಚಾರಣ ಮಾರ್ಗದ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಲೇಖನವನ್ನು ಓದಿರಿ. ಈ ಚಾರಣ ಮಾರ್ಗವು ಸಮುದ್ರಪಾತಳಿಯಿ೦ದ 2900 ಮೀ. ಎತ್ತರದಲ್ಲಿದ್ದು, ಕಾಠಿಣ್ಯದ ದೃಷ್ಟಿಯಿ೦ದ ಮಧ್ಯಮ ದರ್ಜೆಯ ಚಾರಣ ಮಾರ್ಗವಾಗಿದೆ.

ನಾನು ಕಾಲೇಜು ವಿದ್ಯಾಭ್ಯಾಸವನ್ನು ಮುಗಿಸಿ ಐದು ವರ್ಷಗಳಾದ ಬಳಿಕ, ನನ್ನ ಸಹಪಾಠಿಗಳ ಪುನರ್ಮಿಲನದ ಕಾರ್ಯಕ್ರಮವೊ೦ದನ್ನು ಆಯೋಜಿಸಲಾಗಿತ್ತು. ಜಗತ್ತಿನ ವಿವಿಧ ಭಾಗಗಳಿ೦ದ ಪುನರ್ಮಿಲನದ ಕಾರ್ಯಕ್ರಮಕ್ಕಾಗಿ ಆಗಮಿಸುತ್ತಿರುವ ಆ ನನ್ನ ಸಹಪಾಠಿ ಮಿತ್ರರನ್ನು ಭೇಟಿಯಾಗಲು ನಾನ೦ತೂ ತುದಿಗಾಲಲ್ಲಿ ನಿ೦ತು ಕಾಯುತ್ತಿದ್ದೆನು. ಜೊತೆಗೆ, ಕಾಲೇಜು ವಿದ್ಯಾಭ್ಯಾಸದ ತರುವಾಯ ನಾನೆ೦ದೂ ಭಯಗೊಳ್ಳದ, ಬದಲಾಗಿ ಆತ್ಮೀಯ, ಸಲುಗೆಯ ಭಾವನೆಯನ್ನು ಬೆಳೆಸಿಕೊ೦ಡ ನನ್ನ ಪ್ರೊಫೆಸರ್ ಗಳನ್ನು ಕಾಣುವುದಕ್ಕಾಗಿಯೂ ಕೂಡಾ, ಪುನರ್ಮಿಲನದ ಆ ದಿನದ ಆಗಮನಕ್ಕಾಗಿ ಚಡಪಡಿಸುತ್ತಾ ಕಾಯುತ್ತಿದ್ದೆನು.

ಪ್ರಕೃತಿಯ ಮಡಿಲಿನಲ್ಲೊ೦ದು ಅಪ್ಯಾಯಮಾನವಾದ ಚಾರಣ, ಕುಲ್ಲು ಕಣಿವೆ

PC : B.Balaji

ಈ ಮಹತ್ತರ ಘಟ್ಟದ ಬೋನಸ್ ಎ೦ಬ೦ತೆ, ಮೂರು ವರ್ಷಗಳಿ೦ದ ಭೇಟಿ ನೀಡಲು ಸಾಧ್ಯವಾಗದೇ ಇದ್ದ, ನಾನು ಕಲಿತ, ಆ ಕಾಲೇಜಿಗೆ ಭೇಟಿ ನೀಡುವುದಕ್ಕೂ ಈ ಪುನರ್ಮಿಲನದ ಸುಸ೦ದರ್ಭವು ಅವಕಾಶವನ್ನು ಒದಗಿಸಿತು. ಆ ಸುದಿನದ ಆಗಮನದವರೆಗೂ ಕಾತರತೆಯು ಬೆಳೆಯುತ್ತಲೇ ಸಾಗಿತು. ನಾವೆಲ್ಲರೂ ಭೇಟಿಯಾದ ಆ ಅಪೂರ್ವ ಕ್ಷಣವು ಹೇಗಿತ್ತೆ೦ದರೆ ನಾವೆ೦ದೆ೦ದಿಗೂ ಬೇರೆ ಬೇರೆ ಆಗಿಯೇ ಇರಲಿಲ್ಲವೇನೋ ಎ೦ಬ೦ತೆ ಆತ್ಮೀಯತೆಯನ್ನು ಆ ಕ್ಷಣದಲ್ಲಿ ಅನುಭವಿಸಿದೆವು. ಇದರ ಎಲ್ಲಾ ಶ್ರೇಯಸ್ಸು ಸಾಮಾಜಿಕ ಜಾಲತಾಣಕ್ಕೆ ಸಲ್ಲಬೇಕು ಹಾಗೂ ನಮ್ಮ ಎಲ್ಲಾ ಚಟುವಟಿಕೆಗಳನ್ನೂ ಕ್ಷಣಕ್ಷಣಕ್ಕೂ ಎ೦ಬ೦ತೆ ಜಾಲತಾಣದಲ್ಲಿ ಅಪ್ ಡೇಟ್ ಮಾಡಬೇಲೇಕೆ೦ಬ, ನಮಗೆ ನಾವೇ ಹಾಕಿಕೊ೦ಡ ನಮ್ಮ ನಿಯಮಕ್ಕೂ ಇದರ ಕೀರ್ತಿ ಸಲ್ಲಬೇಕು.

ಕಾಲೇಜು ದಿನಗಳಲ್ಲಿ ನಾವು ಕೈಗೊಳ್ಳುತ್ತಿದ್ದ೦ತೆ ಈ ಬಾರಿಯೂ ಕೂಡಾ ನಾವೆಲ್ಲರೂ ಜೊತೆಗೂಡಿ ಪ್ರವಾಸವೊ೦ದನ್ನೇರ್ಪಡಿಸಬೇಕೆ೦ದು ತೀರ್ಮಾನಿಸಿದೆವು. ಕಟ್ಟಕಡೆಗೆ ನಾವೊ೦ದು ಚಾರಣ ಪ್ರವಾಸವನ್ನು ಕೈಗೊಳ್ಳುವುದೆ೦ಬ ತೀರ್ಮಾನಕ್ಕೆ ಬ೦ದೆವು. ನಮ್ಮ ದಿನನಿತ್ಯದ ಅದೇ ನೀರಸ, ಯಾ೦ತ್ರಿಕ ಜೀವನ ಹಾಗೂ ವೃತ್ತಿಜೀವನಕ್ಕೆ ಬಹುಬೇಗನೇ ಹಿ೦ದಿರುಗಬೇಕಾದ ಅನಿವಾರ್ಯತೆ ಇದ್ದುದರಿ೦ದ ನಮ್ಮಲ್ಲಿ ಪ್ರತಿಯೊಬ್ಬರ ಆಯ್ಕೆಯೂ ಕೂಡಾ ಕೆಲವೇ ದಿನಗಳಿಗಷ್ಟೇ ಸೀಮಿತವಾಗಬಲ್ಲ ಕಿರುಪ್ರವಾಸವೇ ಆಗಿತ್ತು. ಹೀಗಾಗಿ, ನಾವು ಕುಲ್ಲು ಕಣಿವೆಯ ಭುಭು ಚಾರಣ ಮಾರ್ಗವನ್ನು ಪ್ರವಾಸಕ್ಕಾಗಿ ಆಯ್ಕೆ ಮಾಡಿಕೊ೦ಡೆವು.

ಪ್ರಕೃತಿಯ ಮಡಿಲಿನಲ್ಲೊ೦ದು ಅಪ್ಯಾಯಮಾನವಾದ ಚಾರಣ, ಕುಲ್ಲು ಕಣಿವೆ

PC  : RuckSackKruemel

ಭುಭು ಚಾರಣ ಮಾರ್ಗವು ಒ೦ದು ಅದ್ವಿತೀಯವಾದ, ಪುರಾತನ ಹಾದಿಯಾಗಿದ್ದು, ಈ ದಾರಿಯು ಹಿಮಾಚಲಪ್ರದೇಶದ ಮ೦ಡಿಯಲ್ಲಿರುವ ಚುಹಾರ್ ಹಾಗೂ ಕುಲ್ಲುವಿನಲ್ಲಿರುವ ಲಾಗ್ ಕಣಿವೆಗಳನ್ನು ಸ೦ಪರ್ಕಿಸುತ್ತದೆ. ಈ ಮಾರ್ಗವು ಸಮುದ್ರಪಾತಳಿಯಿ೦ದ 2900 ಮೀ ನಷ್ಟು ಎತ್ತರದಲ್ಲಿದೆ. ಕಾಠಿಣ್ಯದ ದೃಷ್ಟಿಯಿ೦ದ ಇದೊ೦ದು ಮಧ್ಯಮ ದರ್ಜೆಯ ಚಾರಣಮಾರ್ಗವಾಗಿದೆ. ಈ ಚಾರಣಮಾರ್ಗವು ಅದ್ಭುತವಾದ ಪ್ರಾಕೃತಿಕ ದೃಶ್ಯ ವೈಭವಗಳಿ೦ದೊಡಗೂಡಿದ ಗ್ರಾಮೀಣ ಪ್ರದೇಶಗಳು, ಗಿರಿಶಿಖರಗಳ ಮೇಲಿನ ಹುಲ್ಲುಗಾವಲುಗಳು, ವಿಹ೦ಗಮ ದೃಶ್ಯಗಳಿ೦ದೊಡಗೂಡಿದ ಕಾನನಗಳು, ಹಾಗೂ ಭೋರ್ಗರೆಯುವ ತೊರೆಗಳುಳ್ಳ ಪ್ರದೇಶಗಳ ಮೂಲಕ ಹಾದುಹೋಗುತ್ತದೆ. ದೌಲಾಧರ್ ಪರ್ವತಶ್ರೇಣಿಗಳ ಅಕ್ಷಾ೦ಶಕ್ಕೆ ಈ ಚಾರಣಮಾರ್ಗವು ಒಳಪಡುವುದಿಲ್ಲವಾದರೂ ಕೂಡಾ, ಈ ಮಾರ್ಗದ ಮೂಲಕ ನೀವು ಚಾರಣವನ್ನು ಕೈಗೊ೦ಡಾಗ ನಿಮಗೆ ದೌಲಾಧರ್ ನಲ್ಲಿ ಚಾರಣವನ್ನು ಕೈಗೊ೦ಡ೦ತಹ ಅನುಭವವನ್ನೇ ಭುಭು ಮಾರ್ಗವು ನೀಡುತ್ತದೆ.

ಭುಭು ಚಾರಣಮಾರ್ಗವು ತೌಲನಿಕವಾಗಿ ಅತೀ ಎತ್ತರದಲ್ಲಿಲ್ಲದಿದ್ದರೂ ಕೂಡಾ, ಇದೇನೂ ಹೇಳಿಕೊಳ್ಳುವಷ್ಟು ಅತೀ ಸುಲಭವೆನಿಸುವ೦ತಹ ಚಾರಣಮಾರ್ಗವೇನೂ ಅಲ್ಲ. ಮ೦ಡಿಯಿ೦ದ ಎತ್ತರೆತ್ತರಕ್ಕೆ ಸಾಗುವ ಈ ಮಾರ್ಗವು ಪ್ರಯಾಸಕರವಾಗಿದ್ದು, ರಸ್ತೆಯ ಮಾರ್ಗವು ಅಷ್ಟೇನೂ ಉತ್ತಮವಾಗಿಲ್ಲ. ಹೀಗಾಗಿ, ಈ ಮಾರ್ಗವು ಪುರಾತನ ಕಾಲಕ್ಕೆ ಸೇರಿದ ಮಾರ್ಗವೆ೦ದೆನಿಸದೇ ಇರದು. ಚಾರಣಮಾರ್ಗವೂ ಕೂಡಾ ಸ್ಪಷ್ಟವಾಗಿ ಗುರುತಿಸಲ್ಪಟ್ಟಿಲ್ಲ.

ನಾವು ಬೆ೦ಗಳೂರಿನಿ೦ದ ದೆಹಲಿಗೆ ವಿಮಾನದಲ್ಲಿ ಹಾರಿದೆವು. ನಾವು ಕೈಗೊಳ್ಳಲಿದ್ದ ಭಾವೀ ಚಾರಣವನ್ನು ಸ೦ಭ್ರಮಿಸುವುದರ ಪೂರ್ವಭಾವಿಯಾಗಿ ಔತಣ ಕೂಟವೊ೦ದನ್ನು ಏರ್ಪಡಿಸಲು ನಿರ್ಧರಿಸಿ, ಚಾರಣವನ್ನು ಕೈಗೊಳ್ಳುವ ಎರಡು ದಿನಗಳ ಮೊದಲು ಮನಾಲಿಯತ್ತ ಸಾಗಿದೆವು. ಮೊದಲನೆಯ ದಿನವನ್ನು ಮನಾಲಿಯ ಪ್ರಾಕೃತಿಕ ದೃಶ್ಯವೈಭವವನ್ನು ಸವಿಯುತ್ತಾ ಕಳೆದೆವು ಹಾಗೂ ಎರಡನೆಯ ದಿನವನ್ನು ವಿಶ್ರಾ೦ತಿಗಾಗಿ ಮೀಸಲಿಟ್ಟೆವು. ಏಕೆ೦ದರೆ, ನಮ್ಮ ಭಾವೀ ಚಾರಣಪ್ರವಾಸಕ್ಕಾಗಿ ನಮ್ಮೆಲ್ಲಾ ಚೈತನ್ಯವನ್ನು ದಾಸ್ತಾನಿರಿಸಿಕೊಳ್ಳುವುದು ನಮಗನಿವಾರ್ಯವಾಗಿತ್ತು.

ಪ್ರಕೃತಿಯ ಮಡಿಲಿನಲ್ಲೊ೦ದು ಅಪ್ಯಾಯಮಾನವಾದ ಚಾರಣ, ಕುಲ್ಲು ಕಣಿವೆ

PC : Paul Hamilton

ಈ ಚಾರಣಸಾಹಸವನ್ನು ಕೈಗೊಳ್ಳಲು ಅತೀ ಪ್ರಶಸ್ತವಾದ ಕಾಲಾವಧಿ:
ಮೇ ನಿ೦ದ ಜೂನ್ ತಿ೦ಗಳವರೆಗಿನ ಹಾಗೂ ಸೆಪ್ಟೆ೦ಬರ್ ನಿ೦ದ ಅಕ್ಟೋಬರ್ ನವರೆಗಿನ ಕಾಲಾವಧಿಗಳು ಅತೀ ಸೂಕ್ತವಾದ ಕಾಲಾವಧಿಗಳಾಗಿವೆ. ಚಳಿಗಾಲ ಹಾಗೂ ಮಳೆಗಾಲದ ಅವಧಿಗಳಲ್ಲಿ ಭೇಟಿ ನೀಡುವುದು ವಿಹಿತವಲ್ಲ. ಹಿಮಾಲಯ ಪರ್ವತಶ್ರೇಣಿಗಳಲ್ಲಿ ಚಾರಣವನ್ನು ಕೈಗೊಳ್ಳಲು ಚಳಿಗಾಲ ಹಾಗೂ ಮಳೆಗಾಲಗಳು ಸೂಕ್ತವಲ್ಲ. ಏಕೆ೦ದರೆ ಈ ಅವಧಿಗಳಲ್ಲಿ ಹಿಮಾಲಯದ ವಾತಾವರಣದ ಕುರಿತು ಏನನ್ನೂ ಹೇಳಲಾಗುವುದಿಲ್ಲ. ಹಾಗಾದಾಗ, ಹಿಮಾಲಯ ಚಾರಣದ ರಸಾನುಭವವು ಸ೦ಪೂರ್ಣವಾಗಿ ಹಾಳಾದೀತು.

ಚಾರಣಕ್ಕಾಗಿ ಹೊತ್ತೊಯ್ಯಬೇಕಾದ ಸಾಮಗ್ರಿಗಳು:
ಚಾರಣದ ಬೂಟುಗಳು, ತಲೆದೀಪ (ಹೆಡ್ ಲ್ಯಾ೦ಪ್), ಚಾರಣದ ಊರುಗೋಲು, ದಪ್ಪನೆಯ ಜಾಕೆಟ್ ಗಳು, ಪಾಂಚೋಸ್, ಥರ್ಮಲ್ಸ್ ,ಕೈಗವಸುಗಳು, ತ೦ಪುಕನ್ನಡಕಗಳು, ಸೌರಟೋಪಿ, ಚಾಪ್ ಸ್ಟಿಕ್ಸ , ನೀರಿನ ಬಾಟಲಿಗಳು, ತಿನಿಸುಗಳು, ಸ್ವಿಸ್ ನೈಫ್, ಲೈಟರ್, ಸ್ನಾನಗೃಹದಲ್ಲಿ ಬಳಸಲ್ಪಡುವ ವಸ್ತುಗಳು (ಟಾಯ್ಲೆಟರೀಸ್), ಹಾಗೂ ವೈದ್ಯಕೀಯ ಸಲಕರಣೆಗಳ ಪೆಟ್ಟಿಗೆ.

ಮೊದಲನೆಯ ದಿನ: ದಾಲಿಘಾಟ್ ನಿ೦ದ ಡಾಕ್ ಬ೦ಗಲೆಯವರೆಗೆ
ಮನಾಲಿಯಿ೦ದ ಕುಲ್ಲುವಿನತ್ತ ಪ್ರಯಾಣಿಸುವುದರೊ೦ದಿಗೆ ನಮ್ಮ ದಿನವನ್ನಾರ೦ಭಿಸಿದೆವು. ಕುಲ್ಲುವಿಗೆ ತಲುಪಿದ ಬಳಿಕ, ದಾಲ್ಪುರ್ ಗೆ ಸಾಗಿ, ಬಳಿಕ ಲಗ್ ಕಣಿವೆಯತ್ತ ಪಯಣಿಸುವುದು ನಮ್ಮ ಗುರಿಯಾಗಿತ್ತು. ಲಗ್, ಒ೦ದು ಇಕ್ಕಟ್ಟಾದ ಕಣಿವೆ ಪ್ರದೇಶವಾಗಿದೆ. ಸಣ್ಣ ಸಣ್ಣ ಹೋಬಳಿಗಳ ಮೂಲಕ ಸಾಗುತ್ತಾ ನಾವು ಕಟ್ಟಕಡೆಯ ಗ್ರಾಮವಾದ ದಾಲಿಘಾಟ್ ಅನ್ನು ತಲುಪಿದೆವು. ಈ ಚಾರಣದ ಆರ೦ಭದ ತಾಣವು ದಾಲಿಘಾಟ್ ಗ್ರಾಮವೇ ಆಗಿರುತ್ತದೆ. ನಮ್ಮ ಜೊತೆಗೆ ಕೊ೦ಡು ಹೋಗಿದ್ದ ಸಾಮಾನು ಸರ೦ಜಾಮುಗಳ ಸಾಗಾಟಕ್ಕಾಗಿ ನಾವು ಕುದುರೆಸವಾರರ ಸೇವೆಯನ್ನು ಗೊತ್ತುಮಾಡಿಕೊ೦ಡೆವು ಹಾಗೂ ಡಾಕ್ ಬ೦ಗಲೆಯತ್ತ ನಡಿಗೆಯನ್ನು ಆರ೦ಭಿಸಿದೆವು.

ಪ್ರಕೃತಿಯ ಮಡಿಲಿನಲ್ಲೊ೦ದು ಅಪ್ಯಾಯಮಾನವಾದ ಚಾರಣ, ಕುಲ್ಲು ಕಣಿವೆ

PC : B.Balaji

ಸೆಡರ್, ದೇವದಾರು, ಹಾಗೂ ಓಕ್ ವೃಕ್ಷಗಳನ್ನೊಳಗೊ೦ಡ ದಟ್ಟವಾದ ಅರಣ್ಯದ ಮೂಲಕ ನಮ್ಮ ಕಾಲ್ನಡಿಗೆಯು ಸಾಗಿತು. ಇದು ಮೂರು ಘ೦ಟೆಗಳ ಕಾಲಾವಧಿಯ ಚಾರಣವಾಗಿದೆ. ಈ ಪ್ರಾ೦ತ್ಯದಲ್ಲಿ ಮಾತ್ರವೇ ಕ೦ಡುಬರುವ ವೆಸ್ಟೆರ್ನ್ ಟ್ರಗೋಪಾನ್ (ಒ೦ದು ಜಾತಿಯ ಪಕ್ಷಿ) ಗಾಗಿ ನಮ್ಮ ನೋಟವನ್ನು ಮೀಸಲಾಗಿರಿಸಿದ್ದೆವು.

ಎರಡನೆಯ ದಿನ: ಡಾಕ್ ಬ೦ಗಲೆ - ಜಿಂಗ್ಭಾನ್ (ಭುಭು ಮಾರ್ಗದ ಮೂಲಕ)
ಹಿ೦ದಿನ ರಾತ್ರಿಯನ್ನು ನಾವು ಡಾಕ್ ಬ೦ಗಲೆಯಲ್ಲಿ ಕಳೆದಿದ್ದೆವು. ಇ೦ದಿನ ದಿನದ ಚಾರಣವನ್ನು ನಸುಕಿನಲ್ಲಿಯೇ ಆರ೦ಭಿಸಿದ್ದೆವು. ಓಕ್ ಹಾಗೂ ದೇವದಾರು ವೃಕ್ಷಗಳಿರುವ ಅರಣ್ಯದ ಮೂಲಕ ಚಾರಣವನ್ನು ಆರ೦ಭಿಸಿದ್ದೆವು. ಇಂದ್ರಸ್ಯಾನ್ ಹಾಗೂ ದೆಯೋ ಟಿಬ್ಬ ಗಿರಿಶಿಖರಗಳ ಮನಸೂರೆಗೊಳ್ಳುವ ಪ್ರಾಕೃತಿಕ ಭೂಪ್ರದೇಶದ ಸೌ೦ದರ್ಯವನ್ನು ಸವಿಯುವ ಸೌಭಾಗ್ಯ ನಮ್ಮದಾಯಿತು. ಸಮುದ್ರಪಾತಳಿಯಿ೦ದ 3000 ಮೀ ಎತ್ತರದಲ್ಲಿರುವ ಭುಭು ಮಾರ್ಗವನ್ನು ಅ೦ತಿಮವಾಗಿ ತಲುಪಿದೆವು.

ಭಗವಾನ್ ಗಣೇಶನಿಗೆ ಅರ್ಪಿತವಾದ ಪುಟ್ಟ ದೇವಸ್ಥಾನವೊ೦ದು ಇಲ್ಲಿದೆ. ಈ ಸ್ಥಳದಿ೦ದ ಕಾಣಸಿಗುವ ಕಾ೦ಗ್ರಾ ಕಣಿವೆಯ ರಮಣೀಯ ನೋಟವನ್ನು ಎ೦ದೆ೦ದಿಗೂ ಮರೆಯಲಾರದ೦ಥದ್ದು. ಎರಡನೆಯ ದಿನಾ೦ತ್ಯ ಅರ್ಥಾತ್ ರಾತ್ರಿಯನ್ನು ಕಳೆಯುವುದಕ್ಕಾಗಿ ನಾವು ಮತ್ತಷ್ಟು ಮು೦ದೆ ಸಾಗಿ ಜಿಂಗ್ಭಾನ್ ಅನ್ನು ತಲುಪಿದೆವು.

ಪ್ರಕೃತಿಯ ಮಡಿಲಿನಲ್ಲೊ೦ದು ಅಪ್ಯಾಯಮಾನವಾದ ಚಾರಣ, ಕುಲ್ಲು ಕಣಿವೆ

PC : B.Balaji

ಮೂರನೆಯ ದಿನ: ಜಿಂಗ್ಭಾನ್ - ಡೆಂಟ್ಭಿಯಾಲ್ 
ಮೂರನೆಯ ದಿನದ ಸೂರ್ಯೋದಯವು ಪ್ರಖರತೆಯಿ೦ದೊಡಗೂಡಿ ಅಪ್ಯಾಯಮಾನವಾಗಿತ್ತು. ನಮ್ಮ ಮು೦ದಿನ ನೆಲೆದಾಣವಾದ ಡೆಂಟ್ಭಿಯಾಲ್ ನತ್ತ ನಮ್ಮ ಚಾರಣವು ಮು೦ದುವರೆಯಿತು. ಕಾ೦ಗ್ರಾ ಕಣಿವೆಯ ಬೆಚ್ಚಗಿನ ದೃಶ್ಯಗಳನ್ನು ಕಣ್ಮನಗಳಲ್ಲಿ ತು೦ಬಿಕೊಳ್ಳುತ್ತಾ ಕಡಿದಾದ ಪರ್ವತಶ್ರೇಣಿಯ ತುತ್ತತುದಿಯ ಗು೦ಟ ನಮ್ಮ ಚಾರಣವು ಸಾಗಿತು. ಚಾರಣದ ಈ ಭಾಗವು ಆರು ಘ೦ಟೆಗಳ ಕಾಲಾವಧಿಯದ್ದಾಗಿತ್ತು. ಮಾಧ್ಯಾಹ್ನಿಕ ಭೋಜನಕ್ಕಾಗಿ ನಾವು ನಮ್ಮ ಚಾರಣವನ್ನು ತಾತ್ಕಾಲಿಕವಾಗಿ ನಿಲ್ಲಿಸಿ ಜಿಂಗ್ಭಾನ್ ನಿ೦ದ ಮೂರು ಕಿ.ಮೀ. ದೂರದಲ್ಲಿದ್ದ ಹೆಬ್ಬ೦ಡೆಯೊ೦ದರ ಬಳಿ ವಿಶ್ರಾ೦ತಿ ಪಡೆದೆವು. ಇಲ್ಲಿ೦ದ ಕಾಣಸಿಗುವ ಹೋಬಳಿಗಳ ಹಾಗೂ ಕೃಷಿಭೂಮಿಗಳ ವಿಹ೦ಗಮ ನೋಟವು ಅತ್ಯ೦ತ ರಮಣೀಯ. ಡೆಂಟ್ಭಿಯಾಲ್ ಅನ್ನು ತಲುಪಿದ ನಾವು ಅಲ್ಲಿ ಡೇರೆಗಳಲ್ಲಿ ಮಲಗಿದೆವು.

ನಾಲ್ಕನೆಯ ದಿನ: ಡೆಂಟ್ಭಿಯಾಲ್ - ಮುಲ್ಲಿಂಗ್
ಡೆಂಟ್ಭಿಯಾಲ್ ನಿ೦ದ ನಾವು ಮುಲ್ಲಿಂಗ್ ನತ್ತ ಚಾರಣವನ್ನು ಆರ೦ಭಿಸಿದೆವು. ದಾರಿ ಸಾಗುತ್ತಾ ನಾವು ಎತ್ತರದಿ೦ದ ಆರ್ಭಟಿಸುತ್ತಾ ಧುಮುಕುವ ಕೆಲವೊ೦ದು ತೊರೆಗಳು ಹಾಗೂ ಕಡಿದಾದ ಪರ್ವತಶ್ರೇಣಿಗಳ ಮೂಲಕ ಹಾದುಹೋದೆವು. ಬರೋಟ್ ನಲ್ಲಾಹ್ ದತ್ತ ಇಳಿದು ಬಳಿಕ ಕಡಿದಾದ ಏರುದಾರಿಯನ್ನು ಹತ್ತುವುದರ ಮೂಲಕ ಮುಲ್ಲಿಂಗ್ ಅನ್ನು ತಲುಪಿದೆವು. ಇಲ್ಲಿಗೆ ನಮ್ಮ ಚಾರಣಪ್ರವಾಸವು ಸಮಾಪ್ತಿಗೊ೦ಡಿತು. ಇಲ್ಲಿ೦ದ ನಾವೆಲ್ಲರೂ ಟ್ಯಾಕ್ಸಿಗಳ ಮೂಲಕ ಧರಮ್ ಸಾಲಾದತ್ತ ಪ್ರಯಾಣ ಬೆಳೆಸಿದೆವು.

English summary

Bhubhu Pass Trek In Kullu Valley | Bhubhu Pass Trek In Himachal-Pradesh | Trekking Places In Himachal Pradesh | Difficulty level Of Bhubhu Pass Trek | Best Season To Trek Bhubhu Pass

Bhubhu Pass Trek is an extraordinary ancient trail that connects Chuhar (in Mandi) and Lag (in Kullu) valleys of Himachal Pradesh.
Please Wait while comments are loading...