Search
  • Follow NativePlanet
Share
» »3 ಲಕ್ಷ ವರ್ಷ ಪುರಾತನ ಭೀಮ್ ಬೇಟ್ಕಾ ವಿಸ್ಮಯ

3 ಲಕ್ಷ ವರ್ಷ ಪುರಾತನ ಭೀಮ್ ಬೇಟ್ಕಾ ವಿಸ್ಮಯ

By Vijay

ಭಾರತ ಉಪಖಂಡದಲ್ಲೆ ಮೊಟ್ಟ ಮೊದಲ ಬಾರಿಗೆ ಮಾನವ ಜೀವಿಸಿದ್ದರ ಬಗ್ಗೆ ಆಧಾರ ಕೊಡುವ ಭೀಮ್ ಬೇಟ್ಕಾ ಕಲ್ಲಿನ ಆಶ್ರಯಗಳು ಪೇಲಿಯೊಲಿಥಿಕ್ ಅಥವಾ ಪೂರ್ವ ಶಿಲಾಯುಗಕ್ಕೆ ಸಂಬಂಧಿಸಿದ ತಾಣವಾಗಿದೆ. ಈ ವಿಸ್ಮಯಭರಿತ ಕುತೂಹಲಕಾರಿ ತಾಣವಿರುವುದು ಮಧ್ಯ ಪ್ರದೇಶದ ರಾಯ್ಸನ್ ಜಿಲ್ಲೆಯಲ್ಲಿ. ಶಿಲಾಯುಗಕ್ಕೆ ಸಂಬಂಧಿಸಿದ ಶಿಲಾವರ್ಣಚಿತ್ರಗಳನ್ನು ಸಹ ಇಲ್ಲಿ ಕಾಣಬಹುದು. ಆದರೆ ಇವು ಸುಮಾರು 30000 ವರ್ಷಗಳಷ್ಟು ಪುರಾತನವಾಗಿವೆ. ಅಲ್ಲದೆ ಇಲ್ಲಿ ಕಂಡುಬರುವ ಗುಹೆಗಳು ನೃತ್ಯದ ಪ್ರಪ್ರಥಮ ಸಾಕ್ಷ್ಯಗಳನ್ನು ಒದಗಿಸುತ್ತವೆ. ಯುನೆಸ್ಕೊದ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಭೀಮ್ ಬೇಟ್ಕಾದ ಹೆಸರನ್ನು 2003 ರಲ್ಲಿ ಸೇರ್ಪಡೆ ಮಾಡಲಾಯಿತು. ಇತಿಹಾಸಪ್ರಿಯ ಪ್ರವಾಸಿಗರಿಗೆ ಹಾಗು ಪುರಾತತ್ವ ತಜ್ಞರಿಗೆ ಇದೊಂದು ನೆಚ್ಚಿನ ಪ್ರವಾಸಿ ಪ್ರದೇಶವಾಗಿದೆ.

ಈ ತಾಣದ ಹೆಸರು ಮಹಾಭಾರತದ ಪೌರಾಣಿಕ ಪಾತ್ರವಾದ ಪಾಂಡವರಲ್ಲಿ ಒಬ್ಬನಾದ ಭೀಮನೊಂದಿಗೆ ನಂಟನ್ನು ಹೊಂದಿದೆ. ಭೀಮ್ ಬೇಟ್ಕಾ ಎಂಬ ಹೆಸರು ಭೀಮ್ ಬೈಟ್ಕಾ ಎಂಬ ಶಬ್ದದಿಂದ ವ್ಯುತ್ಪತ್ತಿಯಾಗಿದ್ದು ಇದರ ಅರ್ಥ ಭೀಮನು ಕೂರುವ ಸ್ಥಳ ಎಂದಾಗುತ್ತದೆ. ರಾಯ್ಸನ್ ಜಿಲ್ಲೆಯಲ್ಲಿರುವ ಈ ತಾಣವು ರಾಜಧಾನಿ ಭೋಪಾಲ್ ನಗರದ ದಕ್ಷಿಣಕ್ಕೆ 45 ಕಿ.ಮೀಗಳ ದೂರದಲ್ಲಿದೆ. ಇದರ ಸುತ್ತಮುತ್ತಲಿನ ಪ್ರದೇಶವು ದಟ್ಟವಾದ ಸಸ್ಯ ಸಂಪತ್ತಿನಿಂದ ಆವರಿಸಿದೆ. ಇಲ್ಲಿರುವ ಕಲ್ಲಿನ ಆಸರೆಗಳು (ಶೆಲ್ಟರ್ಸ್) ಹಾಗು ಗುಹೆಗಳಲ್ಲಿ ಸಾಕಷ್ಟು ಶಿಲಾಯುಗಕ್ಕೆ ಸಂಬಂಧಿಸಿದ ವರ್ಣಚಿತ್ರಗಳನ್ನು ಕಾಣಬಹುದಾಗಿದೆ. ಕೆಲವು ವರ್ಣಚಿತ್ರಗಳು 30000 ವರ್ಷಗಳಷ್ಟು ಪುರಾತನವಾಗಿದ್ದರೆ ಇನ್ನೂ ಕೆಲವು ಜಾಮಿತಿಯ ಆಕೃತಿಗಳು ಮಧ್ಯಯುಗದಲ್ಲಿ ರಚಿತವಾಗಿರುವುದಾಗಿವೆ.

ಮೊದಲನೇಯ ವರ್ಗದ ಪೂರ್ವ ಶಿಲಾಯುಗಕ್ಕೆ ಸಂಬಂಧಿಸಿದ ವರ್ಣಚಿತ್ರಗಳಲ್ಲಿ ಹಸಿರು ಹಾಗು ಕಡು ಕೆಂಪು ಬಣ್ಣವನ್ನು ಬಳಸಿ ಹುಲಿ, ಬೈಸನ್, ಘೇಂಡಾಮೃಗಗಳಂತಹ ಪ್ರಾಣಿಗಳನ್ನು ದೊಡ್ಡ ಆಕಾರದಲ್ಲಿ ಬಿಡಿಸಲಾಗಿದೆ. ಎರಡನೇಯ ವರ್ಗದ ಪೂರ್ವಶಿಲಾಯುಗಕ್ಕೆ ಸಂಬಂಧಿಸಿದ ವರ್ಣಚಿತ್ರಗಳು ಚಿಕ್ಕ ಗಾತ್ರದ ಕಲಾಕೃತಿಗಳನ್ನು ಒಳಗೊಂಡಿದ್ದು, ಮನುಷ್ಯರ, ಪ್ರಾಣಿಗಳ, ಉಪಕರಣಗಳು, ಬೇಟೆಯಾಡುವ, ಸನ್ನಿವೇಶಗಳನ್ನು ಒಳಗೊಂಡಿವೆ. ಹೀಗೆ ಪೂರ್ವ ಶಿಲಾಯುಗದಿಂದ ಪ್ರಾರಂಭವಾಗಿ ಮಧ್ಯ ಯುಗದವರೆಗೆ ಒಟ್ಟು ಏಳು ವರ್ಗಗಳಲ್ಲಿ ಚಿತ್ರಗಳನ್ನು ಕಾಣಬಹುದು. ಹಾಗಾದರೆ ಬನ್ನಿ..ಈ ಲೇಖನದ ಮೂಲಕ ಈ ತಾಣದ ಸುತ್ತ ಒಂದು ಚಿತ್ರ ಸವಾರಿ ಮಾಡಿ ಬರೋಣ.

ಭೀಮ್ ಬೇಟ್ಕಾ 1:

ಭೀಮ್ ಬೇಟ್ಕಾ 1:

ಬೆರುಗುಗೊಳಿಸುವ ಗುಹಾ ದಾರಿ.

ಚಿತ್ರಕೃಪೆ: Raveesh Vyas

ಭೀಮ್ ಬೇಟ್ಕಾ 2:

ಭೀಮ್ ಬೇಟ್ಕಾ 2:

ಸುತ್ತಮುತ್ತಲಿನ ಹಸಿರಿನ ನಡುವೆ ಭೀಮ್ ಬೇಟ್ಕಾದ ವಿಹಂಗಮ ನೋಟ.

ಚಿತ್ರಕೃಪೆ: Sushil Kumar

ಭೀಮ್ ಬೇಟ್ಕಾ 3:

ಭೀಮ್ ಬೇಟ್ಕಾ 3:

ಕಡು ಕೆಂಪು ಬಣ್ಣದಿಂದ ರಚಿಸಲಾದ ಚಿತ್ರ.

ಚಿತ್ರಕೃಪೆ: Raveesh Vyas

ಭೀಮ್ ಬೇಟ್ಕಾ 4:

ಭೀಮ್ ಬೇಟ್ಕಾ 4:

ಗುಹೆಯ ಕಲ್ಲಿನ ಮೇಲೆ ರಚಿಸಲಾದ ಚಿತ್ರಾವಳಿ.

ಚಿತ್ರಕೃಪೆ: Conscious

ಭೀಮ್ ಬೇಟ್ಕಾ 5:

ಭೀಮ್ ಬೇಟ್ಕಾ 5:

ಪುರಾತನ ಮಾನವ ಆಶ್ರಯ ಪಡೆದಿದ್ದೆನ್ನಲಾದ ಗುಹಾ ರಚನೆಗಳು.

ಚಿತ್ರಕೃಪೆ: Nikhil2789

ಭೀಮ್ ಬೇಟ್ಕಾ 6:

ಭೀಮ್ ಬೇಟ್ಕಾ 6:

ಕಲ್ಲಿನ ವಿವಿಧ ಚಿತ್ತಾರಗಳ ಈ ತಾಣ ಪ್ರಸಿದ್ಧ ಪ್ರವಾಸಿ ಆಕರ್ಷಣೆಯಾಗಿದೆ.

ಚಿತ್ರಕೃಪೆ: Nikhil2789

ಭೀಮ್ ಬೇಟ್ಕಾ 7:

ಭೀಮ್ ಬೇಟ್ಕಾ 7:

ಪ್ರಕೃತಿಯಿಂದ ರಚಿತವಾದ ಕಲ್ಲಿನ ಶಿಲ್ಪಕಲೆ.

ಚಿತ್ರಕೃಪೆ: Nikhil2789

ಭೀಮ್ ಬೇಟ್ಕಾ 8:

ಭೀಮ್ ಬೇಟ್ಕಾ 8:

ಗುಹೆಯಲ್ಲಿ ಕೃತಕವಾಗಿ ರಚಿಸಲಾದ ಅಂದಿನ ಮಾನವನ ಪ್ರತಿಕೃತಿ.

ಚಿತ್ರಕೃಪೆ: Nandanupadhyay

ಭೀಮ್ ಬೇಟ್ಕಾ 9:

ಭೀಮ್ ಬೇಟ್ಕಾ 9:

ಭೀಮ್ ಬೇಟ್ಕಾ ಗುಹೆಯ ಎತ್ತರವನ್ನು ತೋರಿಸುವ ಚಿತ್ರ.

ಚಿತ್ರಕೃಪೆ: Nikhil2789

ಭೀಮ್ ಬೇಟ್ಕಾ 10:

ಭೀಮ್ ಬೇಟ್ಕಾ 10:

ಕುತೂಹಲಕಾರಿ ಪ್ರವಾಸಿಗರಿಗೆ ಅದ್ಭುತವಾದ ವಾರಾಂತ್ಯದ ರಜಾ ತಾಣ.

ಚಿತ್ರಕೃಪೆ: Nikhil2789

ಭೀಮ್ ಬೇಟ್ಕಾ 11:

ಭೀಮ್ ಬೇಟ್ಕಾ 11:

ಅತಿ ಪುರಾತನ ಚಿತ್ರಾವಳಿಗಳು.

ಚಿತ್ರಕೃಪೆ: Vidishaprakash

ಭೀಮ್ ಬೇಟ್ಕಾ 12:

ಭೀಮ್ ಬೇಟ್ಕಾ 12:

ಪುರಾತನ ಮಾನವನ ಕಲ್ಪನೆಗನುಸಾರವಾಗಿ ಮೂಡಿ ಬಂದ ಚಿತ್ರಗಳು.

ಚಿತ್ರಕೃಪೆ: Nandanupadhyay

ಭೀಮ್ ಬೇಟ್ಕಾ 13:

ಭೀಮ್ ಬೇಟ್ಕಾ 13:

ಗುಹೆಯ ಕಲ್ಲಿನ ಮೇಲೆ ಬಿಡಿಸಿರುವ ಚಿತ್ರಗಳ ಒಂದು ನೋಟ.

ಚಿತ್ರಕೃಪೆ: Vu2sga

ಭೀಮ್ ಬೇಟ್ಕಾ 14:

ಭೀಮ್ ಬೇಟ್ಕಾ 14:

ವಿವಿಧ ಚಿತ್ರಗಳ ವಿನ್ಯಾಸ.

ಚಿತ್ರಕೃಪೆ: Nikhil2789

ಭೀಮ್ ಬೇಟ್ಕಾ 15:

ಭೀಮ್ ಬೇಟ್ಕಾ 15:

ಇನ್ನೂ ಅಳಿಸಿಹೋಗದ ಒಂದು ಚಿತ್ರ.

ಚಿತ್ರಕೃಪೆ: Nikhil2789

ಭೀಮ್ ಬೇಟ್ಕಾ 16:

ಭೀಮ್ ಬೇಟ್ಕಾ 16:

ಕಲ್ಲಿನ ಮೇಲೆ ಬಿಡಿಸಲಾದ ಪ್ರಾಣಿಗಳ ಚಿತ್ರಗಳು.

ಚಿತ್ರಕೃಪೆ: Nikhil2789

ಭೀಮ್ ಬೇಟ್ಕಾ 17:

ಭೀಮ್ ಬೇಟ್ಕಾ 17:

ಪ್ರಾಣಿಗಳ ಜೊತೆ ವಿವಿಧ ವಿನ್ಯಾಸ.

ಚಿತ್ರಕೃಪೆ: Vidishaprakash

ಭೀಮ್ ಬೇಟ್ಕಾ 18:

ಭೀಮ್ ಬೇಟ್ಕಾ 18:

ಬೇಟೆಯ ಸನ್ನಿವೇಶಗಳನ್ನು ತೋರುವ ಚಿತ್ರಗಳು.

ಚಿತ್ರಕೃಪೆ: Nikhil2789

ಭೀಮ್ ಬೇಟ್ಕಾ 19:

ಭೀಮ್ ಬೇಟ್ಕಾ 19:

ಕಲ್ಲಿನ ಮೇಲೆ ಬಿಡಿಸಲಾದ ಒಂದು ಚಿತ್ರ.

ಚಿತ್ರಕೃಪೆ: Priyanka1tamta

ಭೀಮ್ ಬೇಟ್ಕಾ 20:

ಭೀಮ್ ಬೇಟ್ಕಾ 20:

ಪ್ರಾಣಿಗಳು ಹಾಗು ಮನುಷ್ಯನನ್ನು ಬಿಂಬಿಸುವ ಒಂದು ಚಿತ್ರ.

ಚಿತ್ರಕೃಪೆ: Nandanupadhyay

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X