Search
  • Follow NativePlanet
Share
» »ಬಂಡೆಯಲ್ಲಿ ಅಡಗಿರುವ ಭೈರವಕೋಣ ಗುಹಾಲಯ

ಬಂಡೆಯಲ್ಲಿ ಅಡಗಿರುವ ಭೈರವಕೋಣ ಗುಹಾಲಯ

ಭಾರತದ ಆಗ್ನೇಯ ಕರಾವಳಿ ಭಾಗದಲ್ಲಿ ಇರುವ ಆಂಧ್ರ ಪ್ರದೇಶ ನಾಲ್ಕನೇ ಅತಿದೊಡ್ಡ ರಾಜ್ಯ. ಚಳಿಗಾಲದಲ್ಲಿ ಹಿತಕರವಾದ ವಾತಾವರಣ ಹೊಂದಿರುವ ಈ ತಾಣದಲ್ಲಿ ಅನೇಕ ಐತಿಹಾಸಿಕ, ನೈಸರ್ಗಿಕ ಹಾಗೂ ಪವಿತ್ರ ಕ್ಷೇತ್ರಗಳಿವೆ.

By Divya

ಭಾರತದ ಆಗ್ನೇಯ ಕರಾವಳಿ ಭಾಗದಲ್ಲಿ ಇರುವ ಆಂಧ್ರ ಪ್ರದೇಶ ನಾಲ್ಕನೇ ಅತಿದೊಡ್ಡ ರಾಜ್ಯ. ಚಳಿಗಾಲದಲ್ಲಿ ಹಿತಕರವಾದ ವಾತಾವರಣ ಹೊಂದಿರುವ ಈ ತಾಣದಲ್ಲಿ ಅನೇಕ ಐತಿಹಾಸಿಕ, ನೈಸರ್ಗಿಕ ಹಾಗೂ ಪವಿತ್ರ ಕ್ಷೇತ್ರಗಳಿವೆ. ಮಳೆಗಾಲದಲ್ಲಿ ಸಮೃದ್ಧವಾದ ಮಳೆಯನ್ನು ಪಡೆಯುವ ಈ ತಾಣ ಸುಂದರ ಪ್ರಕೃತಿ ಸೌಂದರ್ಯದಿಂದಲೂ ಕಂಗೊಳಿಸುತ್ತದೆ. ಇಲ್ಲಿ ಪ್ರಕೃತಿಯ ಮಡಿಲಲ್ಲಿ ಅಡಗಿರುವಂತೆ ಕುಳಿತಿದೆ ಭೈರವಕೋಣ ಗುಹಾಲಯ.

ಬೆಂಗಳೂರಿನಿಂದ 379 ಕಿ.ಮೀ. ದೂರದಲ್ಲಿರುವ ಈ ತಾಣ ಪವಿತ್ರ ಕ್ಷೇತ್ರಗಳಲ್ಲಿ ಒಂದು. ಪ್ರಕಾಶಂ ಜಿಲ್ಲೆಯಲ್ಲಿರುವ ಭೈರವಕೋಣ ನಲ್ಲಮಲ ಬೆಟ್ಟದಲ್ಲಿದೆ. ಕಲ್ಲಿನಲ್ಲಿ ಕೊರೆದ ಈ ಗುಹಾಲಯ ಶಿವನಿಗೆ ಮೀಸಲು. ಇಲ್ಲಿಯೇ ಹತ್ತಿರದಲ್ಲಿ 200 ಮೀಟರ್ ಎತ್ತರದಿಂದ ಜಲಧಾರೆಯೊಂದು ಧುಮುಕುತ್ತದೆ. ಇಲ್ಲಿ ಭಕ್ತರು ಹಾಗೂ ಪ್ರವಾಸಿಗರು ಸ್ನಾನ ಮಾಡಬಹುದು.

Bhairavakona Interesting Places

PC: wikipedia.org

ಒಂದೇ ಬಂಡೆಯಲ್ಲಿ ಎಂಟು ಗುಹಾಲಯವನ್ನು ಕೆತ್ತಿರುವುದನ್ನು ಕಾಣಬಹುದು. ಗುಹಾಲಯಗಳಲ್ಲೇ ಬಹಳ ಅಪರೂಪದ ಗುಹಾಲಯವಿದು ಎನ್ನಬಹುದು. 7ನೇ ಶತಮಾನದ ಇತಿಹಾಸ ಹೊಂದಿರುವ ಈ ದೇಗುಲದಲ್ಲಿ ಶಿವಲಿಂಗವನ್ನು ಆರಾಧಿಸಲಾಗುತ್ತದೆ. ಪ್ರತಿಯೊಂದು ಗುಹೆಯಲ್ಲೂ ದ್ವಾರಪಾಲಕರಂತಹ ಚಿತ್ರಗಳು ಹಾಗೂ ಗುಡಿಯ ಎದುರು ಪುಟ್ಟ ಪುಟ್ಟ ಬಸವ ಮೂರ್ತಿ ಇರುವುದನ್ನು ಕಾಣಬಹುದು.

ಇತಿಹಾಸದ ಪ್ರಕಾರ ಶಿವ ಮತ್ತು ಪಾರ್ವತಿ ಒಮ್ಮೆ ಪ್ರಕೃತಿಯ ಸೌಂದರ್ಯವನ್ನು ಸವಿಯಲು ಇಲ್ಲಿಗೆ ಬಂದಿದ್ದರು. ಅದರ ಗುರುತಾಗಿಯೇ ಈ ದೇವಾಲಯವಿದೆ ಎನ್ನಲಾಗುತ್ತದೆ. ಇದು ಅಮರನಾಥದಲ್ಲಿರುವ ಶಿವಲಿಂಗವನ್ನೇ ಹೋಲುತ್ತದೆ. ಇಲ್ಲಿಗೆ ಭಕ್ತರ ಹರಿವು ಜೋರಾಗಿಯೇ ಇವೆ. ಕಾರ್ತಿಕ ಹುಣ್ಣಿಮೆ ಹಾಗೂ ಶಿವರಾತ್ರಿಯಲ್ಲಿ ಸಾವಿರಾರು ಭಕ್ತರು ಆಗಮಿಸುತ್ತಾರೆ.

Bhairavakona Interesting Places

ಬೆಂಗಳೂರಿನಿಂದ ಉತ್ತಮ ಸಾರಿಗೆ ವ್ಯವಸ್ಥೆ ಹೊಂದಿರುವ ಈ ತಾಣಕ್ಕೆ ಹತ್ತಿರ ಇರುವ ಶಿರಡಿ ಸಾಯಿಬಾಬಾ, ಚಂದಾವರಂ, ಕಾಶಿವಿಶ್ವೇಶ್ವರಸ್ವಾಮಿ ದೇಗುಲ, ಚನ್ನಕೇಶವಸ್ವಾಮಿ ದೇಗುಲ ಹಾಗೂ ವೊಡರೇವು ಸಮುದ್ರ ತೀರಗಳನ್ನು ನೋಡಬಹುದು.

Read more about: andhra pradesh
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X