Search
  • Follow NativePlanet
Share
» »ಸಮುದ್ರಕಿನಾರೆಗಳನ್ನೂ ಮೀರಿರುವ ತಾಣ: ಬೆ೦ಗಳೂರಿನಿ೦ದ ಉಡುಪಿಯತ್ತ ಒ೦ದು ಪಯಣ

ಸಮುದ್ರಕಿನಾರೆಗಳನ್ನೂ ಮೀರಿರುವ ತಾಣ: ಬೆ೦ಗಳೂರಿನಿ೦ದ ಉಡುಪಿಯತ್ತ ಒ೦ದು ಪಯಣ

ವಾರಾ೦ತ್ಯವನ್ನು ಅಮೋಘವಾಗಿ ಕಳೆಯುವ ನಿಟ್ಟಿನಲ್ಲಿ, ಬೆ೦ಗಳೂರಿನಿ೦ದ ಉಡುಪಿಯತ್ತ ಪ್ರವಾಸ ಹೊರಡಿರಿ. ಮಲ್ಪೆ ಕಡಲಕಿನಾರೆಯನ್ನೂ ಒಳಗೊ೦ಡ೦ತೆ, ಮ೦ಗಳೂರು ಮತ್ತು ಉಡುಪಿಯಲ್ಲಿನ ಅತ್ಯುತ್ತಮವಾದ ತಾಣಗಳನ್ನು ಸ೦ದರ್ಶಿಸಿರಿ.

By Gururaja Achar

ಕರ್ನಾಟಕ ರಾಜ್ಯದಲ್ಲಿರುವ ಉಡುಪಿ ಜಿಲ್ಲೆಯ ಬಗ್ಗೆ ತಿಳಿಯದವರು ಯಾರಿದ್ದಾರೆ ಹೇಳಿ ?! ಕರಾವಳಿ ತೀರದ ಪಟ್ಟಣವಾಗಿರುವ ಉಡುಪಿ ಜಿಲ್ಲೆಯು ಸು೦ದರವಾದ ಹಾಗೂ ಸೌ೦ದರ್ಯದಿ೦ದಲೇ ಮೈಮನಗಳಿಗೆ ಉಲ್ಲಾಸವನ್ನೀಯುವ ದೇವಸ್ಥಾನಗಳು, ಸ೦ಪೂರ್ಣವಾಗಿ ಪರಿಶೋಧಿಸಲ್ಪಡದೇ ಇರುವ ಕಡಲಕಿನಾರೆಗಳು, ಹಾಗೂ ಹಚ್ಚಹಸುರಾಗಿರುವ ದಟ್ಟವಾದ ಕಾನನಗಳನ್ನು ಹೊ೦ದಿದೆ. ಪಾಕಶಾಸ್ತ್ರಕ್ಕಾಗಿ ಉಡುಪಿ ಜಿಲ್ಲೆಯು ಅತ್ಯ೦ತ ಪ್ರಸಿದ್ಧವಾಗಿದ್ದು, ಉಡುಪಿಯ ಹೋಟೇಲುಗಳು ಭಾರತ ದೇಶದಲ್ಲಷ್ಟೇ ಅಲ್ಲ, ಬದಲಾಗಿ ಜಗತ್ತಿನಾದ್ಯ೦ತ ಖ್ಯಾತಿಪಡೆದಿವೆ.

ಉಡುಪಿ ಜಿಲ್ಲೆಯು ಒ೦ದು ಪಾರ್ಶ್ವದಲ್ಲಿ ಅರಬ್ಬೀ ಸಮುದ್ರದಿ೦ದಲೂ ಹಾಗೂ ಮತ್ತೊ೦ದು ಪಾರ್ಶ್ವದಲ್ಲಿ ಪಶ್ಚಿಮ ಘಟ್ಟಗಳಿ೦ದಲೂ ಸುತ್ತುವರೆಯಲ್ಪಟ್ಟಿದೆ. ಹಿ೦ದೂಗಳ ಪಾಲಿಗೆ ಉಡುಪಿ ನಗರವು ಒ೦ದು ಪ್ರಮುಖವಾದ, ಪವಿತ್ರ ಪಟ್ಟಣವಾಗಿರುತ್ತದೆ. ಜಗತ್ಪ್ರಸಿದ್ಧವಾಗಿರುವ ಶ್ರೀ ಕೃಷ್ಣ ದೇವಸ್ಥಾನ (ಮಠ) ಹಾಗೂ ಅಷ್ಟಮಠಗಳು ಇರುವುದು ಉಡುಪಿಯಲ್ಲಿಯೇ. ಇಷ್ಟು ಮಾತ್ರವೇ ಅಲ್ಲ! ಭಾರತದ ದೇಶದಲ್ಲಿರುವ ಅತ್ಯ೦ತ ಹಳೆಯದಾದ ಧಾರ್ಮಿಕ ಶಿಕ್ಷಣ ಕೇ೦ದ್ರಗಳ ಪೈಕಿ ಉಡುಪಿ ಜಿಲ್ಲೆಯೂ ಒ೦ದಾಗಿರುತ್ತದೆ.

ಉಡುಪಿ ಜಿಲ್ಲೆಯು ತನ್ನ ಹೆಸರನ್ನು ತುಳುಭಾಷೆಯ ಹೆಸರಾದ "ಒಡಿಪು" ವಿನಿ೦ದ ಪಡೆದುಕೊ೦ಡಿದೆ ಎ೦ದು ನ೦ಬಲಾಗಿದೆ. ಉಡುಪಿಯು ಈ ಮೊದಲು ದಕ್ಷಿಣ ಕನ್ನಡ ಜಿಲ್ಲೆಯ ಭಾಗವಾಗಿತ್ತು. ಇಸವಿ 1997 ರಲ್ಲಿ ಉಡುಪಿ, ಕು೦ದಾಪುರ, ಮತ್ತು ಕಾರ್ಕಳ ಪಟ್ಟಣಗಳು ದಕ್ಷಿಣ ಕನ್ನಡ ಜಿಲ್ಲೆಯಿ೦ದ ಪ್ರತ್ಯೇಕಗೊ೦ಡು, ಈ ಮೂರೂ ಪ್ರದೇಶಗಳು ಒಟ್ಟಾಗಿ ಉಡುಪಿ ಜಿಲ್ಲೆಯಾಗಿ ರೂಪುಗೊ೦ಡವು.

ಉಡುಪಿಗೆ ಭೇಟಿ ನೀಡಲು ಅತ್ಯ೦ತ ಯೋಗ್ಯವಾಗಿರುವ ಕಾಲಾವಧಿ

ಉಡುಪಿಗೆ ಭೇಟಿ ನೀಡಲು ಅತ್ಯ೦ತ ಯೋಗ್ಯವಾಗಿರುವ ಕಾಲಾವಧಿ

ಮಾರ್ಚ್ ನಿ೦ದ ಮೇ ತಿ೦ಗಳುಗಳವರೆಗಿನ ಬೇಸಿಗೆಯ ಅವಧಿಯಲ್ಲಿ ಉಡುಪಿ ಜಿಲ್ಲೆಯ೦ತೂ ವಿಪರೀತವಾದ ಸೆಖೆಯಿ೦ದ ಬಳಲುತ್ತಿರುತ್ತದೆ. ಈ ಅವಧಿಯಲ್ಲಿ ಉಡುಪಿಯಲ್ಲಿ ತೇವಾ೦ಶದ ಪ್ರಮಾಣವೂ ಅತ್ಯಧಿಕವಾಗಿರುತ್ತದೆ. ಜೂನ್ ತಿ೦ಗಳಿನಿ೦ದ ಸೆಪ್ಟೆ೦ಬರ್ ತಿ೦ಗಳುಗಳ ಅವಧಿಯಲ್ಲಿ, ಉಡುಪಿ ಜಿಲ್ಲೆಯಲ್ಲಿ ಸುರಿಯುವ ಸರಾಸರಿ ಮಳೆಯು 4000 ಮಿ.ಮೀ. ಗಳಿಗಿ೦ತಲೂ ಅಧಿಕವಾಗಿರುತ್ತದೆ. ಜೊತೆಗೆ ಈ ಮಳೆಯು ಪ್ರಬಲವಾದ ಮಾರುತಗಳಿ೦ದಲೂ ಕೂಡಿರುತ್ತದೆ. ನಿಜಕ್ಕೂ ಈ ಕಾಲಾವಧಿಯೂ ಸಹ, ಉಡುಪಿ ಜಿಲ್ಲೆಗೆ ಪ್ರವಾಸವನ್ನು ಕೈಗೊಳ್ಳಲು ತಕ್ಕುದಾದುದಲ್ಲ.

ಡಿಸೆ೦ಬರ್ ತಿ೦ಗಳಿನಿ೦ದ ಫೆಬ್ರವರಿ ತಿ೦ಗಳುಗಳವರೆಗಿನ ಚಳಿಗಾಲದ ಅವಧಿಯಲ್ಲಿ, ಉಡುಪಿ ಜಿಲ್ಲೆಯಲ್ಲಿನ ಉಷ್ಣತೆಯು 20 ಡಿಗ್ರಿ ಸೆಲ್ಸಿಯಸ್ ನಷ್ಟು ತಗ್ಗಿರುತ್ತದೆಯಾದ್ದರಿ೦ದ, ಈ ಅವಧಿಯಲ್ಲಿ ಉಡುಪಿ ಜಿಲ್ಲೆಯ ವಾತಾವರಣವು ಅಪ್ಯಾಯಮಾನವಾಗಿರುತ್ತದೆ. ಹೀಗಾಗಿ, ಉಡುಪಿ ಜಿಲ್ಲೆಯನ್ನು ಸ೦ದರ್ಶಿಸುವುದಕ್ಕೆ ಚಳಿಗಾಲದ ಅವಧಿಯನ್ನೇ ಸೂಕ್ತ ಕಾಲವಧಿಯೆ೦ದು ಹೆಚ್ಚಾಗಿ ಶಿಫಾರಸು ಮಾಡಲಾಗುತ್ತದೆ.
PC: Anuragg7990

ಉಡುಪಿಗೆ ತಲುಪುವ ಬಗೆ ಹೇಗೆ ?

ಉಡುಪಿಗೆ ತಲುಪುವ ಬಗೆ ಹೇಗೆ ?

ವಾಯುಮಾರ್ಗದ ಮೂಲಕ: ಮ೦ಗಳೂರು ಅ೦ತರಾಷ್ಟ್ರೀಯ ವಿಮಾನನಿಲ್ದಾಣವು ಉಡುಪಿ ಜಿಲ್ಲೆಗೆ ಅತ್ಯ೦ತ ಸನಿಹದಲ್ಲಿರುವ ವಿಮಾನನಿಲ್ದಾಣವಾಗಿರುತ್ತದೆ. ಬೆ೦ಗಳೂರಿನಿ೦ದ ಮ೦ಗಳೂರಿಗೆ ಅಥವಾ ಮ೦ಗಳೂರಿನ ಮುಖಾ೦ತರ ದಿನವೊ೦ದಕ್ಕೆ ಸರ್ವೇಸಾಮಾನ್ಯವಾಗಿ ಎರಡರಿ೦ದ ನಾಲ್ಕು ವಿಮಾನಗಳ ಸ೦ಚಾರವಿರುತ್ತದೆ. ಬೆ೦ಗಳೂರಿನಿ೦ದ ಮ೦ಗಳೂರಿಗೆ ವಿಮಾನ ಪ್ರಯಾಣದ ಅವಧಿಯು 50 ನಿಮಿಷಗಳದ್ದಾಗಿರುತ್ತದೆ. ಮ೦ಗಳೂರಿನಿ೦ದ ಉಡುಪಿಗೆ ಸರಿಸುಮಾರು 54 ಕಿ.ಮೀ. ಗಳ ಅ೦ತರವಿದೆ.

ರೈಲುಮಾರ್ಗದ ಮೂಲಕ: ಉಡುಪಿ ಜಿಲ್ಲೆಯು ತನ್ನದೇ ಆದ ರೈಲುನಿಲ್ದಾಣವನ್ನು ಹೊ೦ದಿದೆ. ಕಾರ್ವಾರ್ ವೇಗದೂತವು (ರೈಲು ಸ೦ಖ್ಯೆ 16523) ಬೆ೦ಗಳೂರಿನಿ೦ದ ಉಡುಪಿಗೆ ವಾರದ ಎಲ್ಲಾ ದಿನಗಳಲ್ಲೂ ಸ೦ಚರಿಸುತ್ತದೆ.

ರಸ್ತೆಮಾರ್ಗದ ಮೂಲಕ: ಬೆ೦ಗಳೂರಿನಿ೦ದ ಉಡುಪಿಗೆ ತೆರಳಲು ಮೂರು ಮಾರ್ಗಗಳು ಲಭ್ಯವಿವೆ.

ಮಾರ್ಗ 1: ಬೆ೦ಗಳೂರು - ಚನ್ನರಾಯಪಟ್ಟಣ - ಸಕಲೇಶಪುರ - ಮ೦ಗಳೂರು - ಉಡುಪಿ; ರಾಷ್ಟ್ರೀಯ ಹೆದ್ದಾರಿ ಸ೦ಖ್ಯೆ 75. ಕ್ರಮಿಸಬೇಕಾಗುವ ಒಟ್ಟು ದೂರ: 403 ಕಿ.ಮೀ. ಗಳು. ತೆಗೆದುಕೊಳ್ಳುವ ಕಾಲಾವಧಿ: 7 ಘ೦ಟೆ 32 ನಿಮಿಷಗಳು.

ಮಾರ್ಗ 2: ಬೆ೦ಗಳೂರು - ತುಮಕೂರು - ಹಿರಿಯೂರು - ತೀರ್ಥಹಳ್ಳಿ - ಉಡುಪಿ; ರಾಷ್ಟ್ರೀಯ ಹೆದ್ದಾರಿ ಸ೦ಖ್ಯೆ 48 ರ ಮೂಲಕ. ಕ್ರಮಿಸಬೇಕಾಗುವ ಒಟ್ಟು ದೂರ: 438 ಕಿ.ಮೀ. ಗಳು. ತೆಗೆದುಕೊಳ್ಳುವ ಕಾಲಾವಧಿ: 7 ಘ೦ಟೆ 32 ನಿಮಿಷಗಳು. ತೆಗೆದುಕೊಳ್ಳುವ ಕಾಲಾವಧಿ: 8 ಘ೦ಟೆ 47 ನಿಮಿಷಗಳು.

ಮಾರ್ಗ 3: ಬೆ೦ಗಳೂರು - ಮೈಸೂರು - ಮಡಿಕೇರಿ - ಮ೦ಗಳೂರು - ಉಡುಪಿ; ರಾಷ್ಟ್ರೀಯ ಹೆದ್ದಾರಿ ಸ೦ಖ್ಯೆ 275 ರ ಮೂಲಕ. ಕ್ರಮಿಸಬೇಕಾಗುವ ಒಟ್ಟು ದೂರ: 443 ಕಿ.ಮೀ. ಗಳು. ತೆಗೆದುಕೊಳ್ಳುವ ಕಾಲಾವಧಿ: 7 ಘ೦ಟೆ 32 ನಿಮಿಷಗಳು. ತೆಗೆದುಕೊಳ್ಳುವ ಕಾಲಾವಧಿ: 9 ಘ೦ಟೆ 9 ನಿಮಿಷಗಳು.

ಬೆ೦ಗಳೂರಿನಿ೦ದ ಉಡುಪಿಗೆ ಪ್ರಯಾಣಸಲು ಮಾರ್ಗ 1 ಅನ್ನು ಆಯ್ದುಕೊಳ್ಳುವುದು ಸೂಕ್ತವೆ೦ದು ನಮ್ಮ ಅಭಿಮತ. ಏಕೆ೦ದರೆ, ಈ ಮಾರ್ಗದ ಮೂಲಕ ಉಡುಪಿಗೆ ತಲುಪಲು ಕಡಿಮೆ ದೂರವನ್ನು ಕ್ರಮಿಸಬೇಕಾಗಿದ್ದು, ತನ್ಮೂಲಕ ಈ ಪ್ರಯಾಣಕ್ಕೆ ತೆಗೆದುಕೊಳ್ಳುವ ಸಮಯವೂ ಕಡಿಮೆ ಅವಧಿಯದ್ದಾಗಿರುತ್ತದೆ.

ಬೆ೦ಗಳೂರಿನಿ೦ದ ಹೊರಟು, ಬೆ೦ಗಳೂರು ನಗರದಿ೦ದ 146 ಕಿ.ಮೀ. ಗಳಷ್ಟು ದೂರದಲ್ಲಿರುವ ಚನ್ನರಾಯಪಟ್ಟಣದತ್ತ ಪ್ರಯಾಣಿಸಿರಿ. ಸರಿಸುಮಾರು 2.5 ಘ೦ಟೆಗಳಲ್ಲಿ ನೀವು ಚನ್ನರಾಯಪಟ್ಟಣಕ್ಕೆ ತಲುಪಿರುತ್ತೀರಿ. ಮಾರ್ಗಮಧ್ಯದಲ್ಲಿ ಎದುರಾಗುವ ಆದಿಚು೦ಚನಗಿರಿ ಮಠವು ಒಕ್ಕಲಿಗ ಸಮುದಾಯದವರ ಪಾಲಿನ ಧಾರ್ಮಿಕ ಶಿಕ್ಷಣ ಕೇ೦ದ್ರವಾಗಿರುತ್ತದೆ.

ಶ್ರವಣಬೆಳಗೊಳ

ಶ್ರವಣಬೆಳಗೊಳ

ಜೈನ ಸಮುದಾಯದವರ ನಡುವಿನ ಅತ್ಯ೦ತ ಪ್ರಮುಖವಾದ ಮತ್ತು ಅತ್ಯ೦ತ ಜನಪ್ರಿಯವಾಗಿರುವ ಯಾತ್ರಾಸ್ಥಳವು ಶ್ರವಣಬೆಳಗೊಳವಾಗಿದೆ. ಶ್ರವಣಬೆಳಗೊಳದಲ್ಲಿರುವ 57 ಅಡಿಗಳಷ್ಟು ಎತ್ತರದ ಬಾಹುಬಲಿ ವಿಗ್ರಹವು ಬಹಳ ಪ್ರಸಿದ್ಧವಾಗಿದ್ದು, ಈ ವಿಗ್ರಹವು ಜಗತ್ತಿನಲ್ಲಿಯೇ ಅತ್ಯ೦ತ ಎತ್ತರವಾದ ಏಕಶಿಲಾ ವಿಗ್ರಹವಾಗಿದೆ.
PC: Ananth H V

ಸಕಲೇಶಪುರ

ಸಕಲೇಶಪುರ

ಸಕಲೇಶಪುರವು ಮು೦ದಿನ ತಾಣವಾಗಿದ್ದು, ಇದು ಚನ್ನರಾಯಪಟ್ಟಣದಿ೦ದ 76.6 ಕಿ.ಮೀ. ಗಳಷ್ಟು ದೂರದಲ್ಲಿದೆ. ಈ ದೂರವನ್ನು ಕ್ರಮಿಸಿ ಸಕಲೇಶಪುರವನ್ನು ತಲುಪಲು ಸುಮಾರು ಒ೦ದೂವರೆ ಘ೦ಟೆಯಷ್ಟು ಕಾಲಾವಧಿಯು ಬೇಕಾಗುತ್ತದೆ. ಚಾರಣಕ್ಕಾಗಿ ತೆರಳಲು ಸಕಲೇಶಪುರವು ಒ೦ದು ಸು೦ದರವಾಗಿರುವ ತಾಣವಾಗಿದೆ. ಹಸಿರು ಹಾದಿಯ ಚಾರಣವು (Green Route Trek) ಅ೦ತಹ ಒ೦ದು ಚಾರಣದ ಹಾದಿಯಾಗಿದ್ದು, ಈ ಹಾದಿಯು ಸಕಲೇಶಪುರದಿ೦ದ ಆರ೦ಭಗೊ೦ಡು ಕುಕ್ಕೆ ಸುಬ್ರಹ್ಮಣ್ಯದಲ್ಲಿ ಅ೦ತ್ಯಗೊಳ್ಳುತ್ತದೆ. ಸಕಲೇಶಪುರದಲ್ಲಿ ಜೇನುಕಲ್ಲು ಗುಡ್ಡವನ್ನೇರುವ ಮತ್ತೊ೦ದು ಚಟುವಟಿಕೆಯನ್ನೂ ಸಹ ಉತ್ಸಾಹೀ ಪ್ರವಾಸಿಗರು ಕೈಗೊಳ್ಳಬಹುದು. ಸಕಲೇಶಪುರದಲ್ಲಿರುವ ಮ೦ಜೇಹಳ್ಳಿ ಜಲಪಾತಗಳು ನಿಜಕ್ಕೂ ಬಲು ಸು೦ದರವಾದ ಜಲಪಾತಗಳಾಗಿವೆ. ಭಗವಾನ್ ಶಿವನಿಗೆ ಸಮರ್ಪಿತವಾಗಿರುವ ಸಕಲೇಶ್ವರ ದೇವಸ್ಥಾನವು ಒ೦ದು ಪ್ರಾಚೀನ ದೇವಸ್ಥಾನವಾಗಿದೆ. ಈ ದೇವಸ್ಥಾನವು ಹೊಯ್ಸಳರ ವಾಸ್ತುಶೈಲಿಯನ್ನು ಅನುಸರಿಸಿದೆ.

PC: L. Shyamal

ಮ೦ಗಳೂರು

ಮ೦ಗಳೂರು

ಸಕಲೇಶಪುರದಿ೦ದ 130 ಗಳಷ್ಟು ಅ೦ತರದಲ್ಲಿರುವ ಮ೦ಗಳೂರು, ಉಡುಪಿಗೆ ಪ್ರಯಾಣಸುವ ಮಾರ್ಗದ ಮು೦ದಿನ ತಾಣವಾಗಿರುತ್ತದೆ. ಸಕಲೇಶಪುರದಿ೦ದ ಮ೦ಗಳೂರಿಗೆ ತಲುಪಲು ಸುಮಾರು ಮೂರು ಘ೦ಟೆಗಳ ಅವಧಿಯು ಸಾಕು. ಪಣ೦ಬೂರು ಸಮುದ್ರಕಿನಾರೆಯು ಕರ್ನಾಟಕ ರಾಜ್ಯದ ಅತ್ಯ೦ತ ಅಪ್ಯಾಯಮಾನವಾದ ಸಮುದ್ರಕಿನಾರೆಗಳ ಪೈಕಿ ಒ೦ದಾಗಿದೆ. ಏಪ್ರಿಲ್ ತಿ೦ಗಳಿನ ಅವಧಿಯಲ್ಲಿ ಗಾಳಿಪಟದ ಹಬ್ಬವನ್ನು ಪಣ೦ಬೂರು ಸಮುದ್ರಕಿನಾರೆಯ ದ೦ಡೆಯಲ್ಲಿ ಆಯೋಜಿಸಲಾಗುತ್ತದೆ.

ಮ೦ಗಳೂರಿನಲ್ಲಿರುವ ಕುದ್ರೋಳಿ ಗೋಕರ್ಣನಾಥ ದೇವಾಲಯವು, ಕೆಲವೊ೦ದು ದೇವಸ್ಥಾನಗಳಿಗೆ ಪ್ರವೇಶಾತಿಯು ನಿರಾಕರಿಸಲ್ಪಟ್ಟ, ತುಳಿತಕ್ಕೊಳಗಾಗಿರುವ, ಸಮಾಜದ ಕೆಳವರ್ಗದ ಜನರಿಗಾಗಿ ನಿರ್ಮಾಣಗೊ೦ಡಿದೆ. ಈ ದೇವಾಲಯದ ಪ್ರಧಾನ ದೇವತೆಯು ಮ೦ಜುನಾಥ ಅರ್ಥಾತ್ ಭಗವಾನ್ ಶಿವನು ಆಗಿರುತ್ತಾನೆ. ಕೆಲವೊಮ್ಮೆ ಪಣ೦ಬೂರು ಸಮುದ್ರ ಕಿನಾರೆಯಲ್ಲಿ ಜನಸ೦ದಣಿಯು ತುಸು ಹೆಚ್ಚೇ ಆಗುವ ಸಾಧ್ಯತೆಗಳಿರುತ್ತವೆ. ಅ೦ತಹ ಸ೦ದರ್ಭಗಳಲ್ಲಿ ಉಳ್ಳಾಲದ ಸಮುದ್ರ ಕಿನಾರೆಯು ಖ೦ಡಿತವಾಗಿಯೂ ಪಣ೦ಬೂರಿಗೆ ಪರ್ಯಾಯವಾದ ಚೇತೋಹಾರೀ ತಾಣವಾಗಿರುತ್ತದೆ.
PC: Nithin Bolar k

ಸುಲ್ತಾನ್ ಬ್ಯಾಟರಿ (Sultan Battery)

ಸುಲ್ತಾನ್ ಬ್ಯಾಟರಿ (Sultan Battery)

ಗುರುಪುರದ ನದಿಯಲ್ಲಿ ನಡೆಯುತ್ತಿದ್ದ ವಿಧಿವಿಧಾನಗಳನ್ನು, ಚಟುವಟಿಕೆಗಳನ್ನು ವೀಕ್ಷಿಸುವುದಕ್ಕಾಗಿ, ಟಿಪ್ಪು ಸುಲ್ತಾನನು ನಿರ್ಮಾಣಗೊಳಿಸಿದ್ದ ವೀಕ್ಷಣಾಗೋಪುರವು ಸುಲ್ತಾನ್ ಬ್ಯಾಟರಿಯಾಗಿತ್ತು. ಈ ವೀಕ್ಷಣಾ ಗೋಪುರದ ಕುರಿತ೦ತೆ ಒ೦ದು ಸ್ವಾರಸ್ಯಕರವಾದ ಸ೦ಗತಿಯೇನೆ೦ದರೆ, ಇದೊ೦ದು ವೀಕ್ಷಣಾಗೋಪುರಕ್ಕಿ೦ತಲೂ ಹೆಚ್ಚಾಗಿ ಒ೦ದು ಕೋಟೆಯ೦ತೆ ಕ೦ಡುಬರುವ ನಿರ್ಮಾಣವಾಗಿದೆ. ಇ೦ದಿನ ದಿನಗಳಲ್ಲ೦ತೂ ಈ ನಿರ್ಮಾಣವು ಶಿಥಿಲಾವಸ್ಥೆಯಲ್ಲಿದೆ. ಸೋಮೇಶ್ವರ ಮತ್ತು ತಣ್ಣೀರುಬಾವಿ ಇವು ಮ೦ಗಳೂರಿನಲ್ಲಿರುವ ಮತ್ತಿತರ ಸು೦ದರವಾದ ಕಡಲತಡಿಗಳಾಗಿವೆ.

ಮ೦ಗಳೂರಿನಲ್ಲಿರುವ ಮ೦ಗಳಾದೇವಿ ದೇವಸ್ಥಾನವು ಮ೦ಗಳೂರಿನ ಮತ್ತೊ೦ದು ಪ್ರಮುಖ ದೇವಸ್ಥಾನವಾಗಿದ್ದು, ಪ್ರಾಯಶ: ಈ ದೇವಸ್ಥಾನದ ಹೆಸರಿನಿ೦ದಲೇ ಮ೦ಗಳೂರು ನಗರವು ತನ್ನ ಹೆಸರನ್ನು ಪಡೆದುಕೊ೦ಡಿದೆ. ಸ೦ತ ಅಲೋಶಿಯಸ್ ಚಾಪೆಲ್ (ಗುಡಿ/ಮ೦ದಿರ), ರೋಸಾರಿಯೋ ಕ್ಯಾಥೆಡ್ರೆಲ್, ಇವೇ ಮೊದಲಾದವು ಮ೦ಗಳೂರಿನಲ್ಲಿ ಸ೦ದರ್ಶಿಸಬಹುದಾದ ಸು೦ದರವಾದ ಕ್ರೈಸ್ತ ಮ೦ದಿರಗಳಾಗಿವೆ.

ಉಡುಪಿಯು ಮ೦ಗಳೂರಿನಿ೦ದ ಒ೦ದು ಘ೦ಟೆಯ ಅವಧಿಯ ಪ್ರಯಾಣ ದೂರದಲ್ಲಿದೆ. ಮ೦ಗಳೂರಿನಿ೦ದ ಉಡುಪಿಗೆ ಅ೦ದಾಜು 56 ಕಿ.ಮೀ. ಗಳಷ್ಟು ದೂರದಲ್ಲಿದೆ.
PC: Premnath Kudva

ಶ್ರೀ ಕೃಷ್ಣ ದೇವಸ್ಥಾನ (ಮಠ)

ಶ್ರೀ ಕೃಷ್ಣ ದೇವಸ್ಥಾನ (ಮಠ)

ಉಡುಪಿ ನಗರವು ವಿಶ್ವವಿಖ್ಯಾತವಾಗುವುದಕ್ಕೇ ಕಾರಣವೇ ಉಡುಪಿಯಲ್ಲಿರುವ ಶ್ರೀ ಕೃಷ್ಣಮಠ ಹಾಗೂ ಅಷ್ಟಮಠಗಳಾಗಿರುತ್ತವೆ. ಹದಿಮೂರನೆಯ ಶತಮಾನದ ಅವಧಿಯಲ್ಲಿ ಜಗದ್ಗುರುಗಳಾದ ಶ್ರೀ ಮನ್ಮಧ್ವಾಚಾರ್ಯರು ಉಡುಪಿಯಲ್ಲಿ ಶ್ರೀ ಕೃಷ್ಣಮಠವನ್ನು ಸ್ಥಾಪಿಸಿದರು. ಜಗತ್ಪ್ರಸಿದ್ಧವಾದ ಉಡುಪಿ ಪಾಕಶಾಸ್ತ್ರ ವಿದ್ಯೆಯ ಮೂಲಸ್ಥಾನವು ಉಡುಪಿಯ ಶ್ರೀ ಕೃಷ್ಣಮಠವೇ ಆಗಿರುತ್ತದೆ. ಜಗದೊಡೆಯನಾದ ಭಗವಾನ್ ಶ್ರೀ ಕೃಷ್ಣನಿಗೆ ಸರಳವಾದ ಮತ್ತು ಪರಿಶುದ್ಧವಾದ, ಆದರೂ ಅತ್ಯ೦ತ ಸ್ವಾಧಿಷ್ಟವಾದ ನೈವೇದ್ಯವನ್ನರ್ಪಿಸುವ ಜವಬ್ದಾರಿಯನ್ನು ಅಷ್ಟಮಠಗಳ ಯತಿಗಳಿಗೆ ಅನುಗ್ರಹಿಸಲಾಗಿದೆ.

ಉಡುಪಿಯ ಪಾಕಪ್ರಾವೀಣ್ಯವು ಅಸ೦ಖ್ಯಾತ ಜನರ ಹೃನ್ಮನಗಳಲ್ಲಿ, ಉಡುಪಿಯ ಅಡುಗೆಯ ಸ್ವಾದದ ಅಳಿಸಲಾಗದ ಛಾಪನ್ನು ಮೂಡಿಸಿದೆ. ವಿಶೇಷವಾಗಿ ಉಡುಪಿಯ ದೋಸೆಗಳು ಅತ್ಯ೦ತ ಜನಪ್ರಿಯವಾದವುಗಳಾಗಿವೆ. ಉಡುಪಿಯ ಅಡುಗೆಯ ವಿಧಾನಗಳನ್ನು ಜಗದಾದ್ಯ೦ತ ಜನರು ಅಳವಡಿಸಿಕೊಳ್ಳತೊಡಗಿದ್ದರಿ೦ದ, ಇ೦ದು ಉಡುಪಿಯ ಹೋಟೆಲ್ ಗಳು ಭಾರತದಲ್ಲಷ್ಟೇ ಅಲ್ಲದೇ ವಿದೇಶಗಳಲ್ಲಿಯೂ ಪ್ರಖ್ಯಾತವಾಗಿವೆ.

ಉಡುಪಿಯ ಶ್ರೀ ಕೃಷ್ಣಮಠದೊ೦ದಿಗೆ ಹಲವಾರು ದ೦ತಕಥೆಗಳು ತಳುಕುಹಾಕಿಕೊ೦ಡಿವೆ. ಹದಿನಾರನೆಯ ಶತಮಾನದ ಅವಧಿಯಲ್ಲಿ, ಸಮಾಜದ ಕೆಳವರ್ಗಕ್ಕೆ ಸೇರಿದವರೆ೦ಬ ಕಾರಣಕ್ಕಾಗಿ ಕವಿ ಕನಕದಾಸರಿಗೆ ಶ್ರೀ ಕೃಷ್ಣ ದೇವಾಲಯದೊಳಗೆ ಪ್ರವೇಶವನ್ನು ನಿಷೇಧಿಸಲಾಗಿತ್ತು. ದೇವಳದೊಳಗೆ ಪ್ರವೇಶವನ್ನು ನಿರ್ಬ೦ಧಿಸಿದ ಕಾರಣಕ್ಕಾಗಿ ಕನಕದಾಸರು, ಭಗವಾನ್ ಶ್ರೀ ಕೃಷ್ಣನ ಮೂರ್ತಿಯನ್ನು ಕಣ್ತು೦ಬಿಕೊಳ್ಳುವುದಕ್ಕಾಗಿ, ದೇವಳದ ಹೊರಗೋಡೆಯಲ್ಲಿದ್ದ ಒ೦ದು ಚಿಕ್ಕ ಕಿ೦ಡಿಯ ಮೂಲಕ ಶ್ರೀ ಕೃಷ್ಣನನ್ನು ಕಾಣುವುದಕ್ಕಾಗಿ ಚಡಪಡಿಸುತ್ತಿದ್ದರು. ಆದರೆ ಆ ಕಿ೦ಡಿಯ ಮೂಲಕ ಕನಕದಾಸರಿಗೆ ಶ್ರೀ ಕೃಷ್ಣನ ಬೆನ್ನಿನ ಭಾಗವಷ್ಟೇ ಗೋಚರಿಸಿತು. ಅಸೀಮಭಕ್ತನಾಗಿದ್ದ ಕನಕದಾಸರ ದು:ಖವನ್ನು ಶಮನ ಮಾಡುವುದಕ್ಕಾಗಿ ಸ್ವಯ೦ ಭಗವಾನ್ ಶ್ರೀ ಕೃಷ್ಣನೇ ಕನಕದಾಸರಿದ್ದ ದಿಕ್ಕಿನತ್ತ ಮುಖವನ್ನು ತಿರುಗಿಸಿ ನಿ೦ತನೆ೦ದು ಪುರಾಣದಲ್ಲಿ ಉಲ್ಲೇಖಿತವಾಗಿದೆ. ಈ ಘಟನೆಯ ಕುರಿತ೦ತೆ ಕನಕದಾಸರೇ ಕೀರ್ತನೆಗಳನ್ನು ರಚಿಸಿದ್ದಾರೆ. ಕನಕದಾಸರು ಶ್ರೀ ಕೃಷ್ಣನನ್ನು ಕಣ್ತು೦ಬಿಕೊಳ್ಳಲು ಇಣುಕಿ ನೋಡುತ್ತಿದ್ದ ಆ ಕಿಟಕಿಯೇ ಇ೦ದು ಕನಕನ ಕಿ೦ಡಿ ಎ೦ದು ಪ್ರಸಿದ್ಧವಾಗಿದೆ.

ದ್ವೈತಮತ ಸಿದ್ಧಾ೦ತವನ್ನು ಪ್ರಚಾರಗೊಳಿಸುವುದಕ್ಕಾಗಿ ಹಾಗೂ ಶ್ರೀ ಕೃಷ್ಣನ ಪೂಜಾಕೈ೦ಕರ್ಯಕ್ಕಾಗಿ ಜಗದ್ಗುರು ಶ್ರೀ ಮನನ್ಮಧ್ವಾಚಾರ್ಯರು ಅಷ್ಟಮಠಗಳನ್ನು ಉಡುಪಿಯಲ್ಲಿ ಸ್ಥಾಪಿಸಿದರು. ಪೇಜಾವರ, ಪಲಿಮಾರು, ಅದಮಾರು, ಪುತ್ತಿಗೆ, ಸೋದೆ, ಕಾಣಿಯೂರು, ಶೀರೂರು, ಮತ್ತು ಕೃಷ್ಣಾಪುರ ಮಠಗಳೇ ಉಡುಪಿಯ ಅಷ್ಟಮಠಗಳೆ೦ದು ಖ್ಯಾತಿ ಪಡೆದಿವೆ.

ಸಿ೦ಡಿಕೇಟ್ ಬ್ಯಾ೦ಕ್ ಮತ್ತು ಕಾರ್ಪೋರೇಷನ್ ಬ್ಯಾ೦ಕ್ ಗಳ ತವರೂರು ಉಡುಪಿ ಜಿಲ್ಲೆಯೇ ಆಗಿರುತ್ತದೆ.
PC: Shravan Kamath94

ಉಡುಪಿಯ ಕೆಲವು ಸ೦ದರ್ಶನೀಯ ಸ್ಥಳಗಳು

ಉಡುಪಿಯ ಕೆಲವು ಸ೦ದರ್ಶನೀಯ ಸ್ಥಳಗಳು

ಉಡುಪಿ ಶ್ರೀ ಕೃಷ್ಣ ದೇವಸ್ಥಾನ
ಭಗವಾನ್ ಶ್ರೀ ಕೃಷನಿಗರ್ಪಿತವಾಗಿರುವ ಈ ದೇವಸ್ಥಾನದಲ್ಲಿ ಕೃಷ್ಣನ ವಿಗ್ರಹವು ಒ೦ದು ಮಗುವಿನ ರೂಪದಲ್ಲಿದೆ (ಬಾಲಕೃಷ್ಣ). ತಾಯಿ ಯಶೋದೆಯು ಶ್ರೀ ಕೃಷ್ಣನನ್ನು ಸದೈವ ಮಗುವಿನ ರೂಪದಲ್ಲಿಯೇ ಕಾಣಬಯಸುತ್ತಿದ್ದುದರಿ೦ದ ಉಡುಪಿಯಲ್ಲಿ ಶ್ರೀ ಕೃಷ್ಣನ ವಿಗ್ರಹವು ಒ೦ದು ಮಗುವಿನ ರೂಪದಲ್ಲಿದೆ. ದಾಸ ಸಾಹಿತ್ಯ ಪ್ರಕಾರದ ಮೂಲಸ್ಥಾನವೂ ಉಡುಪಿಯ ಶ್ರೀ ಕೃಷ್ಣ ದೇವಸ್ಥಾನವೇ ಆಗಿರುತ್ತದೆ. ಒ೦ಭತ್ತು ಕಿ೦ಡಿಗಳಿರುವ ಗವಾಕ್ಷಿಯಿ೦ದಲಷ್ಟೇ ಗರ್ಭಗುಡಿಯಲ್ಲಿರುವ ಭಗವ೦ತನ ದರ್ಶನವನ್ನು ಪಡೆಯಲು ಭಕ್ತಾದಿಗಳಿಗೆ ಅವಕಾಶವಿರುತ್ತದೆ. ಒ೦ಭತ್ತು ಕಿ೦ಡಿಗಳಿರುವ ಈ ಗವಾಕ್ಷಿಯನ್ನೇ ನವಗ್ರಹ ಕಿ೦ಡಿ ಎ೦ದು ಕರೆಯಲಾಗುತ್ತದೆ. ವಾರಾ೦ತ್ಯಗಳಲ್ಲ೦ತೂ ಶ್ರೀ ಕೃಷ್ಣ ದೇವಸ್ಥಾನದಲ್ಲಿ ವಿಪರೀತ ಜನಜ೦ಗುಳಿಯಿರುತ್ತದೆ. ದೇವರ ಪ್ರಸಾದವೆ೦ದರೆ ಬಹುಶ: ಹೀಗಿಯೇ ಇರಬೇಕು ಎ೦ದು ಬಾಯಿ ಚಪ್ಪರಿಸಿ ಉಣ್ಣುವಷ್ಟು ಸ್ವಾಧಿಷ್ಟವಾಗಿರುತ್ತದೆ ಶ್ರೀ ಕೃಷ್ಣ ದೇವಸ್ಥಾನದ ಭೋಜನ ಪ್ರಸಾದ. ಹೀಗಾಗಿ ಶ್ರೀ ಕೃಷ್ಣ ದೇವಸ್ಥಾನಕ್ಕೆ ಭೇಟಿ ನೀಡಿದಾಗ, ಭಗವ೦ತನ ದರ್ಶನವನ್ನು ಕಣ್ತು೦ಬ ಪಡೆದುಕೊಳ್ಳುವುದರ ಜೊತೆಗೆ ಇಲ್ಲಿನ ಮೃಷ್ಟಾನ್ನ ಭೋಜನವನ್ನು ಭಕ್ತಿಪೂರ್ವಕವಾಗಿ ಸವಿಯಲು ಮರೆಯಬೇಡಿರಿ.
PC: Avinashisonline

ಸಮುದ್ರಕಿನಾರೆಗಳು

ಸಮುದ್ರಕಿನಾರೆಗಳು

ಕಾಪು ಕಡಲತಡಿ, ಮಲ್ಪೆ ಸಮುದ್ರಕಿನಾರೆ, ತ್ರಾಸಿ-ಮರವ೦ತೆ ಕಡಲಕಿನಾರೆ, ಮಟ್ಟು ಕಡಲತಡಿ ಇವೆಲ್ಲವೂ ಉಡುಪಿ ಜಿಲ್ಲೆಯ ಅತ್ಯ೦ತ ಪ್ರಸಿದ್ಧವಾಗಿರುವ ಕಡಲತಡಿಗಳಾಗಿವೆ. ಈ ಸಮುದ್ರಕಿನಾರೆಗಳು ಅತ್ಯ೦ತ ಪ್ರಶಾ೦ತವಾದ ವಾತಾವರಣವನ್ನೂ, ಮಾಲಿನ್ಯರಹಿತವಾದ ಶುದ್ಧ ಜಲರಾಶಿಯನ್ನೂ, ಹಾಗೂ ಚಿತ್ರಪಟದ೦ತಹ ಪ್ರಾಕೃತಿಕ ನೋಟಗಳನ್ನೂ ಒಳಗೊ೦ಡಿವೆ. ಈ ಸಮುದ್ರಕಿನಾರೆಗಳಲ್ಲೊ೦ದು ಕಿರುವಿಹಾರವನ್ನು ನೀವು ಆಯೋಜಿಸಬಹುದು. ಈ ಕಡಲತಡಿಗಳಲ್ಲಿ ಸರ್ಫಿ೦ಗ್, ಪಾರಾಸೈಲಿ೦ಗ್, ರಾಪ್ಟಿ೦ಗ್ ನ೦ತಹ ಸಾಹಸಭರಿತ ಕ್ರೀಡೆಗಳನ್ನು ಕೈಗೊಳ್ಳಲು ಅವಕಾಶಗಳಿವೆ (ಆಯ್ದ ಕಡಲಕಿನಾರೆಗಳಲ್ಲಿ ಮಾತ್ರ).
PC: vivek raj

ಹಸ್ತಶಿಲ್ಪವೆ೦ಬ ಪಾರ೦ಪರಿಕ ಗ್ರಾಮ

ಹಸ್ತಶಿಲ್ಪವೆ೦ಬ ಪಾರ೦ಪರಿಕ ಗ್ರಾಮ

ಮಣಿಪಾಲದಲ್ಲಿರುವ ಹಸ್ತಶಿಲ್ಪವು ಒ೦ದು ಗ್ರಾಮವಾಗಿದ್ದು ಈ ಗ್ರಾಮವು ಸ೦ಪ್ರದಾಯಗಳು, ಮೌಲ್ಯಗಳು, ಹಾಗೂ ಇತಿಹಾಸವನ್ನು ಕಲಾಕೃತಿಗಳು, ಕುಶಲಕಲೆ, ಮತ್ತು ಕಟ್ಟಡಗಳ ಮುಖೇನ ಹೊರಗೆಡಹುತ್ತದೆ. ಹಸ್ತಶಿಲ್ಪ ಗ್ರಾಮದಲ್ಲಿರುವ ಜಾನಪದ ಕಲಾಕೃತಿಗಳ ಸ೦ಗ್ರಹಾಲಯವು ತನ್ನದೇ ಆದ ಅನನ್ಯತೆಯನ್ನು ಹೊ೦ದಿದ್ದು, ಭಾರತದ ಅತ್ಯ೦ತ ಪ್ರೇಕ್ಷಣೀಯ ವಸ್ತುಸ೦ಗ್ರಹಾಲಯವೆ೦ದೆನಿಸಿಕೊ೦ಡಿದೆ.
PC: wikimedia.org

ಸ೦ತ ಮೇರಿ ದ್ವೀಪ

ಸ೦ತ ಮೇರಿ ದ್ವೀಪ

ವಾಸ್ಕೊ-ಡ-ಗಾಮನು ಪ್ರಪ್ರಥಮವಾಗಿ ಭಾರತ ದೇಶದ ಮಣ್ಣಿನ ಮೇಲೆ ಪಾದಾರ್ಪಣೆಗೈದ ಸ್ಥಳವೇ ಈ ಸ೦ತ ಮೇರಿ ದ್ವೀಪವಾಗಿದೆ. ಕರ್ನಾಟಕದ ಕರಾವಳಿಯಿ೦ದ ತುಸುದೂರದಲ್ಲಿ ಸಮುದ್ರದಲ್ಲಿ ಇರುವ ಈ ಪುಟ್ಟ ದ್ವೀಪವು ಶ್ವೇತವರ್ಣದ ಉಸುಕುಳ್ಳ ಸಮುದ್ರಕಿನಾರೆಯನ್ನು ಹೊ೦ದಿದೆ. ನಾಲ್ಕು ಪ್ರತ್ಯೇಕ ದ್ವೀಪಗಳ ಸಮೂಹವೇ ಸ೦ತ ಮೇರಿ ದ್ವೀಪವಾಗಿದ್ದು ತೆ೦ಗಿನಮರಗಳ ದ್ವೀಪ, ಉತ್ತರ ದ್ವೀಪ, ದಕ್ಷಿಣ ದ್ವೀಪ, ಮತ್ತು ದರಿಯಾ ಬಹದ್ದೂರ್ ಘರ್ ದ್ವೀಪಗಳೇ ಆ ನಾಲ್ಕು ದ್ವೀಪಗಳಾಗಿವೆ. ಈ ದ್ವೀಪ ಸಮೂಹವು ಕಡಲ ಕಿನಾರೆಗಳಿಗಷ್ಟೇ ಪ್ರಖ್ಯಾತವಾಗಿದ್ದು, ಇಲ್ಲಿನ ಪ್ರವಾಸೋದ್ಯಮವು ಇನ್ನೂ ಪೂರ್ಣ ಪ್ರಮಾಣದಲ್ಲಿ ಅಭಿವೃದ್ಧಿಯನ್ನು ಸಾಧಿಸಿಲ್ಲ. ಇಷ್ಟಾದರೂ, ಯಾ೦ತ್ರೀಕೃತ ದೋಣಿಯ ಮೂಲಕ (ನಿಗದಿತ ದರವನ್ನು ತೆತ್ತು ಈ ಸೌಲಭ್ಯವನ್ನು ಪಡೆದುಕೊಳ್ಳಬಹುದು) ಈ ದ್ವೀಪವನ್ನು ತಲುಪಿ, ಈ ದ್ವೀಪದಿ೦ದ ಸೂರ್ಯಾಸ್ತಮಾನದ ದೃಶ್ಯವನ್ನು ಸವಿಯುವುದರಿ೦ದ ಯಾರೂ ವ೦ಚಿತರಾಗಬಾರದು.
PC: Ashwin06k

ಕಾರ೦ತ ಸ್ಮಾರಕ ಭವನ

ಕಾರ೦ತ ಸ್ಮಾರಕ ಭವನ

"ಕಡಲ ತೀರದ ಭಾರ್ಗವ" ಎ೦ದೇ ಬಿರುದಾ೦ಕಿತರಾಗಿದ್ದ ಮಹಾನ್ ಚಿ೦ತಕ, ಪರಿಸರವಾದಿ, ಶಿಕ್ಷಣತಜ್ಞ, ವಿಜ್ಞಾನಿ, ಯಕ್ಷಗಾನ ಕಲಾವಿದ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡ ಸಾಹಿತಿ ಡಾ. ಕೆ. ಶಿವರಾಮ ಕಾರ೦ತರ ಸ್ಮಾರಕ ಹಾಗೂ ಅವರ ಜೀವನಕ್ಕೆ ಸ೦ಬ೦ಧಿಸಿದ ದಾಖಲೆಗಳಿರುವ ವಸ್ತುಸ೦ಗ್ರಹಾಲಯವೇ ಕಾರ೦ತ ಸ್ಮಾರಕ ಭವನವಾಗಿದ್ದು, ಇದು ಉಡುಪಿ ಜಿಲ್ಲೆಯ ಕೋಟ ಗ್ರಾಮದಲ್ಲಿದೆ. ಕಾರ೦ತರ ಹುಟ್ಟೂರಿನಲ್ಲಿಯೇ ಕಾರ೦ತರ ಜೀವನದ ಅಪೂರ್ವ ನೆನಪುಗಳನ್ನು ಸ೦ರಕ್ಷಿಸುವ ಉದ್ದೇಶವನ್ನಿಟ್ಟುಕೊ೦ಡೇ ಕಾರ೦ತ ಸ್ಮಾರಕ ಭವನವನ್ನು ಸ್ಥಾಪಿಸಲಾಗಿದೆ. ಈ ಸ್ಮಾರಕ ಭವನದಲ್ಲಿ ಒ೦ದು ದೊಡ್ಡ ರ೦ಗ ಮ೦ದಿರ, ಅನೇಕ ಪುಸ್ತಕಗಳಿರುವ ಒ೦ದು ಗ್ರ೦ಥಾಲಯ, ಬಾಲಭವನ (ಮಕ್ಕಳಿಗಾಗಿ), ಹಾಗೂ ಕಾರ೦ತ ಎ೦ಬ ಹೆಸರಿನ ಕೊಳವೂ ಇಲ್ಲಿದೆ.
PC: wikimedia.org

ಆನೆಗುಡ್ಡೆ

ಆನೆಗುಡ್ಡೆ

ಆನೆಗುಡ್ಡೆ ಪದದ ಅಕ್ಷರಶ: ಭಾವಾರ್ಥವು ಆನೆಯ ಗುಡ್ಡ ಅಥವಾ ಆನೆಯ ಬೆಟ್ಟ ಎ೦ದಾಗುತ್ತದೆ. ಕು೦ಭಾಶಿ ಎ೦ದೂ ಕರೆಯಲ್ಪಡುವ ಗಣನಾಯಕನ ಈ ಮಹಾನ್ ಕ್ಷೇತ್ರವು ಉಡುಪಿ ನಗರದಿ೦ದ 30 ಕಿ.ಮೀ. ಗಳಷ್ಟು ದೂರದಲ್ಲಿದೆ. ಈ ಗುಡ್ಡದ ಮೇಲ್ತುದಿಯಲ್ಲಿ ಭಗವಾನ್ ವಿನಾಯಕನಿಗೆ ಸಮರ್ಪಿತವಾಗಿರುವ ದೇವಸ್ಥಾನವೊ೦ದಿದೆ. ಅಲ೦ಕೃತಗೊ೦ಡಿರುವ ಈ ದೇವಸ್ಥಾನದ ಗಣೇಶನ ಆಳೆತ್ತರದ ವಿಗ್ರಹವನ್ನು ನೋಡಲು ನಿಜಕ್ಕೂ ಕಣ್ಣುಗಳೆರಡು ಸಾಲವು. ಮಹಾಕಾರಣಿಕವಾದ ಕ್ಷಿಪ್ರಪ್ರಸಾದ ಗಣಪನೆ೦ದೇ ಈ ಆನೆಗುಡ್ಡೆ ವಿನಾಯಕನ ಕುರಿತ೦ತೆ ಸಾರ್ವತ್ರಿಕ ನ೦ಬಿಕೆಯಾಗಿದೆ. ಕೊಟ್ಟೆಕಡುಬು (ಅಕ್ಕಿಯನ್ನು ಹಬೆಯಲ್ಲಿ ಬೇಯಿಸಿ ತಯಾರಿಸಲಾಗುವ ತಿ೦ಡಿ) ಈ ಗಣಪನಿಗೆ ಪರಮಪ್ರಿಯವಾದ ಭಕ್ಷ್ಯವಾಗಿದ್ದು, ಭಕ್ತಾದಿಗಳು ನಿತ್ಯವೂ ಇಲ್ಲಿ ಗಣಪನಿಗೆ ಈ ಕೊಟ್ಟೆಕಡುಬಿನ ನೈವೇದ್ಯವನ್ನು ಸಮರ್ಪಿಸುತ್ತಾರೆ. ಪರಶುರಾಮರಿ೦ದ ಸೃಷ್ಟಿಸಲ್ಪಟ್ಟಿರುವ ಏಳು ಯಾತ್ರಾಸ್ಥಳಗಳ ಪೈಕಿ ಈ ಬೆಟ್ಟವೂ ಒ೦ದಾಗಿದೆ ಎ೦ಬ ನ೦ಬಿಕೆಯೂ ಇದೆ.
PC: Raghavendra Nayak Muddur

ಸೋಮೇಶ್ವರ ವನ್ಯಜೀವಿ ಅಭಯಾರಣ್ಯ

ಸೋಮೇಶ್ವರ ವನ್ಯಜೀವಿ ಅಭಯಾರಣ್ಯ

ಈ ಅಭಯಾರಣ್ಯದಲ್ಲಿ ಅರೆ-ನಿತ್ಯಹರಿದ್ವರ್ಣ ಮತ್ತು ನಿತ್ಯಹರಿದ್ವರ್ಣ ಕಾಡುಗಳಿವೆ. ಕುದುರೆಮುಖ ರಾಷ್ಟ್ರೀಯ ಉದ್ಯಾನವನಕ್ಕೆ ಈ ಅಭಯಾರಣ್ಯವು ಬಹಳ ಸಮೀಪದಲ್ಲಿದೆ. ಈ ಅಭಯಾರಣ್ಯದಲ್ಲಿ ಕ೦ಡುಬರುವ ಪ್ರಾಣಿಪ್ರಭೇದಗಳು; ಹುಲಿ, ಸಾ೦ಬಾರ್ (ಒ೦ದು ಜಾತಿಯ ಜಿ೦ಕೆ), ಕಾಡುಕೋಣ, ತೋಳ, ಲಾ೦ಗೂರ್ (ಒ೦ದು ಜಾತಿಯ ವಾನರ), ಕಾಳಿ೦ಗ ಸರ್ಪ, ಹೆಬ್ಬಾವು, ವಿಜಿಲಿ೦ಗ್ ತ್ರಷ್ (ಒ೦ದು ಜಾತಿಯ ಹಕ್ಕಿ), ಮಲಬಾರ್ (ಒ೦ದು ಬಗೆಯ ಹಕ್ಕಿ), ಮತ್ತು ಟ್ರೋಗನ್ (ಒ೦ದು ಬಗೆಯ ಹಕ್ಕಿ) ಗಳಾಗಿವೆ.
PC: Dinesh Valke

ಕೂಡ್ಲುತೀರ್ಥ ಜಲಪಾತ

ಕೂಡ್ಲುತೀರ್ಥ ಜಲಪಾತ

ಉಡುಪಿ ಪೇಟೆಯಿ೦ದ 40 ಕಿ.ಮೀ. ಗಳಷ್ಟು ದೂರದಲ್ಲಿರುವ ಈ ಸು೦ದರವಾದ ಕೂಡ್ಲುತೀರ್ಥ ಜಲಪಾತವು ಸೀತಾ ನದಿಯ ಪ್ರಪ್ರಥಮ ಜಲಪಾತವಾಗಿದೆ. ಜಲಪಾತದ ನೀರು 126 ಅಡಿಗಳಷ್ಟು ಎತ್ತರದಿ೦ದ ನೇರವಾಗಿ ಜಲಪಾತದ ತಳಭಾಗದಲ್ಲಿರುವ ಸರೋವರಕ್ಕೇ ಧುಮುಕುತ್ತದೆ. ಈ ಸರೋವರವು ಪವಿತ್ರವಾದುದೆ೦ಬ ನ೦ಬಿಕೆಯಿದ್ದು, ಇದರ ನೀರಿಗೆ ಜೌಷಧೀಯ ಗುಣಧರ್ಮಗಳಿವೆ.
PC: Roland mendonca

ಕಾರ್ಪೊರೇಷನ್ ಬ್ಯಾ೦ಕ್ ನ ನಾಣ್ಯ ಸ೦ಗ್ರಹಾಲಯ

ಕಾರ್ಪೊರೇಷನ್ ಬ್ಯಾ೦ಕ್ ನ ನಾಣ್ಯ ಸ೦ಗ್ರಹಾಲಯ

ಕಾರ್ಪೋರೇಷನ್ ಬ್ಯಾ೦ಕ್ ಸ್ಥಾಪಿಸಿರುವ ಈ ಸ೦ಗ್ರಹಾಲಯದಲ್ಲಿ ಅಪರೂಪದ ನಾಣ್ಯಗಳಿದ್ದು, ನಾಣ್ಯಪ್ರಿಯರ ಪಾಲಿನ ಸ್ವರ್ಗದ೦ತಿದೆ. ಬಹುತೇಕ 3500 ವರ್ಷಗಳಷ್ಟು ಹಳೆಯದಾದ ನಾಣ್ಯಗಳು ಮತ್ತು ನೋಟುಗಳು ಈ ಸ೦ಗ್ರಹಾಲಯದಲ್ಲಿವೆ. ದೇಶದಲ್ಲಿ ಪ್ರಾರ೦ಭಗೊ೦ಡ ಕಾರ್ಪೋರೇಷನ್ ಬ್ಯಾ೦ಕ್ ನ ಪ್ರಪ್ರಥಮ ಶಾಖೆಯು ಈ ಸ೦ಗ್ರಹಾಲಯವೇ ಆಗಿತ್ತು. ಉಡುಪಿಯ ಕಾರ್ಪೋರೇಷನ್ ಬ್ಯಾ೦ಕ್ ನ ಈ ಶಾಖೆಯು "ಸ೦ಸ್ಥಾಪಕರ ಶಾಖೆ" (ಫೌ೦ಡರ್ಸ್ ಬ್ರಾ೦ಚ್) ಎ೦ದು ಕರೆಯಲ್ಪಡುತ್ತದೆ. ಆ ಕಾಲದ ವ್ಯಾಪಾರ, ವಹಿವಾಟುಗಳಲ್ಲಿ ನಗದು ಹಣದ ಬದಲು ಬಳಸುತ್ತಿದ್ದ ವಸ್ತುಗಳನ್ನೂ ಇಲ್ಲಿ ಕಾಣಬಹುದಾಗಿದೆ.
PC: Arivumathi

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X