Search
  • Follow NativePlanet
Share
» »ಭಾರತದ ಕೆಲ ಅತ್ಯದ್ಭುತ ರಸ್ತೆ ಪ್ರವಾಸಗಳು

ಭಾರತದ ಕೆಲ ಅತ್ಯದ್ಭುತ ರಸ್ತೆ ಪ್ರವಾಸಗಳು

By Vijay

ಹೆ..ಕೆಚ್ಚೆದೆಯ ಪ್ರವಾಸಿಗರೆ...ವಿಶೇಷವಾಗಿ ಯುವ ಪಿಳಿಗೆಯವರೆ ನಿಮಗೆ ಸಿಗುವ ರಜಾ ಸಮಯದಲ್ಲಿ ಸ್ನೆಹಿತರೊಂದಿಗೆ ಬೆರೆತು ಕಾರಿನಲ್ಲೊ ಇಲ್ಲವೆ ನಿಮ್ಮ ಡ್ಯೂಕ್, ನಿಂಜಾ, ಕರಿಜ್ಮಾ, ಪಲ್ಸರ್ ನಂತಹ ಮೋಟಾರ್ ಬೈಕುಗಳಲ್ಲೊ ಸಾಹಸಮಯ ಪ್ರವಾಸ ಮಾಡಲು ನಿಮಗಿಷ್ಟವಿದೆಯೆ?

ಫ್ಲೈಟ್ ಬುಕಿಂಗ, ಬಸ್ಸು ಹಾಗೂ ಹೋಟೆಲು ದರಗಳ ಮೇಲೆ 50% ರಷ್ಟು ಕಡಿತ

ಹಾಗಾದರೆ ಈ ಲೇಖನವನ್ನೊಮ್ಮೆ ಓದಿ ಬಿಡಿ. ಇದರ ಮೂಲಕ ಭಾರತದಲ್ಲಿ ಕಂಡುಬರುವ ಕೆಲ ಪ್ರಮುಖ ಹಾಗೂ ಮೈಯಲ್ಲೆಲ್ಲ ವಿದ್ಯುತ್ ಸಂಚಾರ ಮೂಡಿಸುವಂತಹ ರಸ್ತೆ ಪ್ರವಾಸಗಳು ಯಾವುವು ಎಂಬುದರ ಕುರಿತು ತಿಳಿಸಲಾಗಿದೆ. ನೀವೆಲ್ಲಿದ್ದರೂ ಚಿಂತೆಯಿಲ್ಲ, ಇಲ್ಲಿ ಹೇಳಲಾದ ತಾಣಗಳಿಗೆ ನಿಮಗನುಕೂಲಕರವಾದ ರೀತಿಯಲ್ಲಿ ಬಂದು ಅಲ್ಲಿಂದ ಅಥವಾ ಆ ಸ್ಥಳಗಳಿಂದ ನಿಮ್ಮ ರಸ್ತೆ ಪ್ರವಾಸ ಯಾನ ಆರಂಭಿಸಿ ಬಿಡಿ.

ವಿಶೇಷ ಲೇಖನ : ಬೆಂಗಳೂರಿನಿಂದ ಕನ್ಯಾಕುಮಾರಿಗೆ ರಸ್ತೆ ಪ್ರವಾಸ

ರಸ್ತೆ ಪ್ರವಾಸಗಳು:

ರಸ್ತೆ ಪ್ರವಾಸಗಳು:

ಇಂತಹ ಪ್ರವಾಸಗಳಲ್ಲಿ ಸಾಮಾನ್ಯವಾಗಿ ಮುಂಚಿತವಾಗಿ ಯೋಜಿಸಿಕೊಳ್ಳುವುದು ಬಲು ಉತ್ತಮ.

ರಸ್ತೆ ಪ್ರವಾಸಗಳು:

ರಸ್ತೆ ಪ್ರವಾಸಗಳು:

ಮನಾಲಿಯಿಂದ ಲೇಹ್ : ಬಹುಶಃ ಶಬ್ದಗಳಲ್ಲಿ ಎಷ್ಟು ವಿವರಿಸಿದರೂ ಈ ಸುಂದರ ಪ್ರವಾಸದ ಅನುಭವಕ್ಕೆ ನ್ಯಾಯ ಒದಗಿಸಲಾಗುವುದಿಲ್ಲ. ಇದನ್ನು ಪ್ರವಾಸ ಮಡಿಯೆ ಆನಂದಿಸಬೇಕು. ಈ ಪ್ರವಾಸದ ಒಟ್ಟು ದೂರ ಸುಮಾರು 480 ಕಿ.ಮೀ. ವರ್ಷದ ಐದು ತಿಂಗಳುಗಳ ಕಾಲ ಮಾತ್ರವೆ ಈ ರಸ್ತೆಯು ಪ್ರಯಾಣಕ್ಕೆ ಮುಕ್ತವಾಗಿರುತ್ತದೆ. ಅದೂ ಬೇಸಿಗೆಯ ಸಂದರ್ಭ ಹಾಗೂ ಅಕ್ಟೋಬರ್ ಮಧ್ಯದ ಸಮಯದಲ್ಲಿ ಮಾತ್ರವೆ. ಪ್ರಯಾಣವು ಸಮುದ್ರ ಮಟ್ಟದಿಂದ ಬಹು ಎತ್ತರದಲ್ಲಿ ಶಿತಮಯ ವಾತಾವರಣದಲ್ಲಿ, ಗಿರಿ, ಪರ್ವತ ಪ್ರಪಾತಗಳ ಮಧ್ಯೆ ಮಾಡಬೇಕಾಗಿರುವುದರಿಂದ ವಿಶ್ರಾಂತಿ ಸಮಯ ಹಿಡಿದು ಸುಮಾರು ಎರಡು ದಿನಗಳಷ್ಟು ಕಾಲಾವಕಾಶ ಬೇಕಾಗುತ್ತದೆ.

ಚಿತ್ರಕೃಪೆ: Saad Faruque

ರಸ್ತೆ ಪ್ರವಾಸಗಳು:

ರಸ್ತೆ ಪ್ರವಾಸಗಳು:

ಮುಂಬೈ - ಪುಣೆ ಎಕ್ಸ್ ಪ್ರೆಸ್ ಹೆದ್ದಾರಿ : ಮುಂಬೈನಿಂದಾಗಲಿ ಅಥವಾ ಪುಣೆಯಿಂದಾಗಲಿ ಎಕ್ಸ್ ಪ್ರೆಸ್ ಹೆದ್ದಾರಿಯ ಮೂಲಕ ಲೋಣಾವಲಾಗೆ ಭೇಟಿ ನೀಡುವುದು ಒಂದು ಸಂತಸದ ಪಯಣವಾಗಿದೆ. ಅದೂ ಕೂಡ ಮಾನ್ಸೂನ್ ಸಂದರ್ಭದಲ್ಲಿ ಪ್ರಯಾಣಿಸಿದರಂತೂ ಪ್ರವಾಸದ ಆನಂದ ದುಪ್ಪಟ್ಟಾಗುವುದರಲ್ಲಿ ಯಾವುದೆ ಸಂಶಯವಿಲ್ಲ. ಅಗಲವಾದ ಹಾಗೂ ಸುಸ್ಥಿತಿಯ ರಸ್ತೆ, ರಸ್ತೆಯ ಎರಡೂ ಬದಿಗಳಲ್ಲಿ ಹಸಿರು ಸಂಪತ್ತಿನ ಮಂತ್ರಮುಗ್ಧಗೊಳಿಸುವ ಪರಿಸರ, ನಿಮ್ಮನ್ನೊಂದು ಕಲ್ಪನಾ ಲೋಕಕ್ಕೆ ಕರೆದೊಯ್ಯುವುದು ಖಚಿತ. ಹಾಗೆಂದ ಮಾತ್ರಕ್ಕೆ ಕಲ್ಪನಾ ಲೋಕದಲ್ಲೆ ವಿಹರಿಸ ಬೇಡಿ...ವಾಹನ ಚಲಾಯಿಸುವುದರ ಮೇಲೆ ಗಮನವಿರಲಿ. ಇದರ್ ಒಟ್ಟು ದೂರ ಸುಮಾರು 93 ಕಿ.ಮೀ ಗಳು.

ಚಿತ್ರಕೃಪೆ: Rohit Patwardhan

ರಸ್ತೆ ಪ್ರವಾಸಗಳು:

ರಸ್ತೆ ಪ್ರವಾಸಗಳು:

ವೈಜಾಗ್ ನಿಂದ ಅರಕು ಕಣಿವೆ : ಪೂರ್ವ ಘಟ್ಟಗಳು ಬಂಗಾಳ ಕೊಲ್ಲಿ ಸಮುದ್ರದೊಂದಿಗೆ ಗೆಳೆತನ ಬೆಳೆಸುವುದನ್ನು ವೈಜಾಗ್ ಅಥವಾ ವಿಶಾಖಪಟ್ಟಣಂ ನಲ್ಲಿ ಕಾಣಬಹುದು ಹಾಗೂ ಈ ಗೆಳೆತನ ಚಿರಕಾಲವಿರಲಿ ಎಂದು ಹಾರೈಸಲೂ ಬಹುದು. ಆಂಧ್ರದಲ್ಲಿರುವ ಪೂರ್ವಘಟ್ಟದ ಸಿಂಗರಿಸಿಕೊಂಡು ಬರುವವರನ್ನು ಹೃದಯ ತುಂಬಿ ಸ್ವಾಗತಿಸುವ ಅರಕು ಕಣಿವೆಯನ್ನು ಕಾಣಬಹುದು. ವೈಜಾಗ್ ನಿಂದ ಅರಕು ಕಣಿವೆಯವರೆಗಿನ ಪಯಣವು ಆಂಧ್ರ ಕರಾವಳಿಯ ಸುಂದರತೆಯನ್ನೂ ಹಾಗೂ ಪೂರ್ವ ಘಟ್ಟಗಳ ಚೆಲುವನ್ನು ಅನಾವರಣಗೊಳಿಸುತ್ತದೆ. ಒಟ್ಟು ಪ್ರಯಾಣದ ಉದ್ದ 116 ಕಿ.ಮೀ ಹಾಗೂ ತೆರಳಲು ಅಕ್ಟೋಬರ್ ನಿಂದ ಮಾರ್ಚ್ ಮಧ್ಯದ ಅವಧಿಯು ಪ್ರಶಸ್ತ.

ಚಿತ್ರಕೃಪೆ: lpiepiora

ರಸ್ತೆ ಪ್ರವಾಸಗಳು:

ರಸ್ತೆ ಪ್ರವಾಸಗಳು:

ಶಿಮ್ಲಾದಿಂದ ಮನಾಲಿ : ಬಿಯಾಸ್ ನದಿಯಗುಂಟ ಅದರ ಹರಿವಿನ ಜೊತೆ ಜೊತೆಯಲ್ಲಿ, ಸುಂದರ ಭೂ ದೃಶ್ಯಾವಳಿಗಳನ್ನು ಆಸ್ವಾದಿಸುತ್ತ ಹಾಯಾಗಿ ರಸ್ತೆ ಪ್ರವಾಸ ಮಡಲು ಶಿಮ್ಲಾದಿಂದ ಮನಾಲಿಗೆ ರಸ್ತೆ ಪ್ರವಾಸ ಮಾಡಿ. ಅಷ್ಟೆ ಏಕೆ ಅಲ್ಲಲ್ಲಿ ತುಸು ವಿಶ್ರಾಂತಿ ಪಡೆದು ಬಿಯಾಸ್ ನದಿಯ ಅತಿ ತಂಪಾದ ನೀರಿನಲ್ಲಿ ಆಟವಾಡಿ. ಈ ಪ್ರವಾಸದ ಉದ್ದವು ಸುಮಾರು 250 ಕಿ.ಮೀ ಗಳು.

ಚಿತ್ರಕೃಪೆ: _paVan_

ರಸ್ತೆ ಪ್ರವಾಸಗಳು:

ರಸ್ತೆ ಪ್ರವಾಸಗಳು:

ಚೆನ್ನೈನಿಂದ ಪಾಂಡಿಚೆರಿ : ಈಸ್ಟ್ ಕೋಸ್ಟ್ ಹೆದ್ದಾರಿಯು ಸುಗಮ ಹಾಗೂ ಅಗಲಮಯ ರಸ್ತೆಯಾಗಿದ್ದು ಈ ರಸ್ತೆ ಮೇಲಿನ ಪ್ರಯಾಣವು ಯಾವಾಗಲೂ ನೆನೆಪನಲ್ಲಿಟ್ಟುಕೊಳ್ಳುವ ಹಾಗೆ ಮಾಡುತ್ತದೆ. ಅದಕ್ಕೆ ಮುಖ್ಯ ಕಾರಣವೆಂದರೆ ಇದು ಬಂಗಾಳ ಕೊಲ್ಲಿ ಸಮುದ್ರದ ಜೊತೆ ಜೊತೆಯಾಗೆ ಸಾಗುವುದರಿಂದ. ಮೋಟರು ಬೈಕುಗಳಲ್ಲಿ ಈ ರಸ್ತೆ ಮೇಲಿನ ಪ್ರವಾಸವು ಹೆಚ್ಚಿನ ಹುಮ್ಮಸ್ಸನ್ನು ಕೊಡುತ್ತದೆ ಎಂದರೆ ತಪ್ಪಾಗಲಾರದು. ಅಲ್ಲದೆ ಈ ರಸ್ತೆಯ ಮೂಲಕ ಸಾಗುವಾಗ ಸಾಕಷ್ಟು ಇತರೆ ಪ್ರವಾಸಿ ಆಕರ್ಷಣೆಗಳಿಗೂ ಭೇಟಿ ನೀಡುವ ಅವಕಾಶ ದೊರೆಯುತ್ತದೆ. ಇದರ ಒಟ್ಟು ಉದ್ದ 160 ಕಿ.ಮೀ.

ಚಿತ್ರಕೃಪೆ: Soham Banerjee

ರಸ್ತೆ ಪ್ರವಾಸಗಳು:

ರಸ್ತೆ ಪ್ರವಾಸಗಳು:

ರಾ.ಹೆ 203 ರಲ್ಲಿ ಪುರಿಯಿಂದ ಕೋನಾರ್ಕ್ : ನೀವು ಹವ್ಯಾಸಿಯೆ ಆಗಲಿ ಅಥವಾ ವೃತ್ತಿಪರ ಛಾಯಾಗ್ರಾಹಕರಿರಲಿ ಪ್ರಕೃತಿ ಸೌಂದರ್ಯವನ್ನು ನಿಮ್ಮದೆ ಆದ ಕಲ್ಪನೆಯಲ್ಲಿ ಸೆರೆ ಹಿಡಿಯಲು ಇಷ್ಟವಿದ್ದಲ್ಲಿ ಈ ಪ್ರವಾಸವನ್ನೊಮ್ಮೆ ಮಾಡಿ ಬಿಡಿ. ರಾಷ್ಟ್ರೀಯ ಹೆದ್ದಾರಿ 203 ರ ಪುರಿಯಿಂದ ಕೋನಾರ್ಕ್ ವರೆಗಿನ ರಸ್ತೆ ಪ್ರವಾಸವು ನಿಮ್ಮೊಳಗಿನ ಛಾಯಾಗ್ರಾಹಕ ಪ್ರತಿಭೆಯನ್ನು ಬಡಿದೆಬ್ಬಿಸುವುದರಲ್ಲಿ ಸಂಶಯವಿಲ್ಲ. ಈ ಪ್ರಯಾಣದ ಒಟ್ಟು ದೂರ ಕೇವಲ 36 ಕಿ.ಮೀ ಗಳು ಮಾತ್ರ ಆದರೆ ಇದರ ಸುಮಧುರ ಅನುಭೂತಿಯು ವರ್ಷಗಳ ಕಾಲ ನಿಮ್ಮ ಸ್ಮೃತಿಯಲ್ಲಿರುತ್ತದೆ.

ಚಿತ್ರಕೃಪೆ: Manasa Malipeddi

ರಸ್ತೆ ಪ್ರವಾಸಗಳು:

ರಸ್ತೆ ಪ್ರವಾಸಗಳು:

ಗ್ಯಾಂಗ್ಟಕ್ ನಿಂದ ಸೊಮ್ಗೊ ಸರೋವರ : ಈಶಾನ್ಯ ಭಾರತದ ಹಲವು ಸ್ಥಳಗಳು ಪ್ರಕೃತಿಯ ಮಡಿಲಿನಲ್ಲೆ ಗಾಢವಾಗಿ ಬೆಸೆದುಕೊಂಡಿರುವುದನ್ನು ಕಾಣಬಹುದು. ಪ್ರಕೃತಿಯನ್ನು ಅತಿ ಹತ್ತಿರದಿಂದ ನೋಡ ಬಯಸುವವರಿಗೆ ಈಶಾನ್ಯ ಭಾರತವು ವಿಫುಲವಾದ ಅವಕಾಶಗಳನ್ನು ಕರುಣಿಸುತ್ತದೆ. ನಾಥು ಲಾ ಪಾಸ್ ಮೂಲಕ ಸಿಕ್ಕಿಂ ರಾಜ್ಯದ ಗ್ಯಾಂಗ್ಟಕ್ ನಿಂದ ಸುಮಾರು 55 ಕಿ.ಮೀ ಪ್ರಯಾಣಿಸಿ ಸುಂದರ ಮನಮೋಹಕ ಸೊಮ್ಗೊ ಸರೋವರದ ಪ್ರಯಾಣವು ಸಾಕಷ್ಟು ವಿನೂತನ ಅನುಭವವನ್ನು ಕರುಣಿಸುತ್ತದೆ. ಈ ಸರೋವರವನ್ನು ಚಾಂಗು ಕೆರೆ ಎಂದೂ ಸಹ ಇದನ್ನು ಕರೆಯಲಾಗುತ್ತದೆ.

ಚಿತ್ರಕೃಪೆ: Pradeep Kumbhashi

ರಸ್ತೆ ಪ್ರವಾಸಗಳು:

ರಸ್ತೆ ಪ್ರವಾಸಗಳು:

ಬೆಂಗಳೂರಿನಿಂದ ಬಂಡೀಪುರ : ಕಾಡುಗಳ ಮಧ್ಯದಲ್ಲಿ ಸ್ಥಿತವಿರುವ ರಸ್ತೆಗಳ ಮೂಲಕ ಸಾಗುತ್ತ ಕಾಡಿನ ಅಮೋಘ ಸೌಂದರ್ಯವನ್ನು ಅನುಭವಿಸುವುದೆಂದರೆ ಎಲ್ಲರಿಗೂ ಒಂದು ರೀತಿಯ ರೋಮಾಂಚನವಾಗುತ್ತದೆ. ಹೌದು ಅಂತಹ ಒಂದು ಸುಂದರ ರಸ್ತೆ ಪ್ರವಾಸ ಮಾಡುವ ಬಯಕೆ ನಿಮಗಿದ್ದರೆ ಬೆಂಗಳೂರಿನಿಂದ ಬಂಡೀಪುರಕ್ಕೆ ರಸ್ತೆಯ ಮೂಲಕ ತೆರಳಿ. ಬೆಂಗಳೂರಿನಿಂದ ಕೇವಲ 220 ಕಿ.ಮೀ ಗಳಷ್ಟು ದೂರವಿರುವ ಬಂಡೀಪುರ ರಾಷ್ಟ್ರೀಯ ಉದ್ಯಾನಕ್ಕೆ ಒಂದು ಪ್ರವಾಸ ಮಾಡಲು ಯೋಜಿಸಿ. ಬಂಡೀಪುರ ರಾಷ್ಟ್ರೀಯ ಉದ್ಯಾನವು ಪಶ್ಚಿಮ ಘಟ್ಟಗಳ ಭವ್ಯ ವನಸಿರಿಯಲ್ಲಿ ನೆಲೆಸಿದ್ದು ಮುದುಮಲೈ ಅಭಯಾರಣ್ಯ, ನಾಗರಹೊಳೆ ಹಾಗೂ ವಯನಾಡ್ ಅಭಯಾರಣ್ಯಗಳಿಂದ ಸುತ್ತುವರೆದಿದೆ.

ಚಿತ್ರಕೃಪೆ: rahuldeebee

ರಸ್ತೆ ಪ್ರವಾಸಗಳು:

ರಸ್ತೆ ಪ್ರವಾಸಗಳು:

ಪಂಬನ್ ಸೇತುವೆ : ಕಣ್ಣು ಹಾಯಿಸಿದಷ್ಟೂ ಕಂಡುಬರುವ ವಿಶಾಲವಾದ ಜಲರಾಶಿ ಅದರ ಮಧ್ಯೆ ಪ್ರಯಾಣ, ಪಕ್ಕದಲ್ಲೆ ರೈಲು ಸೇತುವೆ...ಇವೆಲ್ಲವೂ ಸಮುದ್ರದಲ್ಲೆ...ಹೇಗಿರುತ್ತದೆ ಎಂಬುದನ್ನು ಒಂದೊಮ್ಮೆ ಯೋಚಿಸಿ ನೋಡಿ. ಇಂತಹ ಅದ್ಭುತ ಅನುಭವ ಪಡೆಯುವ ಬಯಕೆ ನಿಮಗಿದ್ದರೆ ರಾಮೇಶ್ವರಂ ನ ಪಂಬನ್ ಸೇತುವೆ ಮೇಲೆ ನಿಮ್ಮ ಪ್ರಯಾಣ ಸಾಗಲಿ. ಇದೊಂದು 13.5 ಕಿ.ಮೀ ಉದ್ದದ ಪ್ರಯಾಣವಾಗಿದ್ದು ರೋಮಾಂಚನವನ್ನುಂಟು ಮಾಡುತ್ತದೆ.

ಚಿತ್ರಕೃಪೆ: Ashwin Kumar

ರಸ್ತೆ ಪ್ರವಾಸಗಳು:

ರಸ್ತೆ ಪ್ರವಾಸಗಳು:

ಯಮುನಾ ಎಕ್ಸ್ ಪ್ರೆಸ್ ವೇ ಮೂಲಕ ದೆಹಲಿಯಿಂದ ಆಗ್ರಾ : ಬಹುಶಃ ಭಾರತದಲ್ಲಿ ಇಂದು ಚಾಲ್ತಿಯಲ್ಲಿರುವ ಅತ್ಯುತ್ತಮ ಹೆದ್ದಾರಿಗಳ ಪೈಕಿ ಯಮುನಾ ಎಕ್ಸ್ ಪ್ರೆಸ್ ಹೆದ್ದಾರಿಯು ಮೊದಲನೆಯದೆಂದು ಹೇಳಬಹುದು. ದೆಹಲಿ ಭಾಗದ ಎಲ್ಲ ರಸ್ತೆ ಪ್ರವಾಸ ಪ್ರಿಯ ಪ್ರವಾಸಿಗರಿಗೆ ಈ ಹೆದ್ದಾರಿಯಲ್ಲಿ ಪ್ರವಾಸ ಖಂಡಿತವಾಗಿಯು ಮಾಡಲೇಬೇಕಾದ ಚಟುವಟಿಕೆಯಾಗಿದೆ. ಈ ರಸ್ತೆಯು ಎಷ್ಟೊಂದು ಉತ್ತಮ ಗುಣಮಟ್ಟ ಹೊಂದಿದೆ ಎಂದರೆ ನೀವು ನಿಪುಣ ಚಾಲಕರಾಗಿದ್ದರೆ ಒಂದೆ ದಿನದಲ್ಲಿ ದೆಹಲಿಯಿಂದ ಆಗ್ರಾಗೆ ತೆರಳಿ ತಾಜ್ ಮಹಲ್ ಹಾಗೂ ಆಗ್ರಾ ಕೋಟೆ ನೋಡಿಕೊಂಡು ಮರಳಿ ದೆಹಲಿಗೆ ತಲುಪಬಹುದು. ರಸ್ತೆಯ 180 ಕಿ.ಮೀ ದೂರವನ್ನು ಎರಡು ಘಂಟೆಗೂ ಕಡಿಮೆ ಅವಧಿಯಲ್ಲಿ ಕ್ರಮಿಸಬಹುದು.

ಚಿತ್ರಕೃಪೆ: Ian Brown

ರಸ್ತೆ ಪ್ರವಾಸಗಳು:

ರಸ್ತೆ ಪ್ರವಾಸಗಳು:

ಜೈಪುರದಿಂದ ಜೈಸಲ್ಮೇರ್ : ಚಳಿಗಾಲ ರಾಜಸ್ಥಾನಕ್ಕೆ ಪ್ರಯಾಣಿಸಲು ಉತ್ತಮ ಸಮಯ. ಮರಭೂಮಿಗಳ ಅಂದ ಚೆಂದವನ್ನು ಅಣು ಅಣುವಾಗಿ ಸವಿಯುತ್ತ ಮರಭೂಮಿಯ ಮಧ್ಯದಲ್ಲೆ ಪ್ರಯಾಣ ಮಾಡಿದರೆ ಹೇಗಿರುತ್ತದೆ? ಹೌದು ರಾಜಸ್ಥಾನದ ಪಿಂಕ್ ಸಿಟಿ ಜೈಪುರದಿಂದ ಜೋಧಪುರ ಮಾರ್ಗವಾಗಿ ಜೈಸಲ್ಮೇರ್ ಗೆ ಹೊರಡುವುದು ಒಂದು ಅತ್ಯದ್ಭುತ ಮರಭೂಮಿ ಪ್ರವಾಸದ ಅನುಭವ ನೀಡುತ್ತದೆ. ಅಷ್ಟೆ ಏಕೆ ಮಧ್ಯದಲ್ಲಿ ಜೋಧಪುರದಲ್ಲಿ ತುಸು ವಿಶ್ರಾಂತಿ ಪಡೆದು ರುಚಿರುಚಿಯಾದ ರಾಜಸ್ಥಾನಿ ಭೋಜನವನ್ನು ಬಾಯ್ಚಪ್ಪರಿಸಬಹುದು.

ಚಿತ್ರಕೃಪೆ: hermesmarana

ರಸ್ತೆ ಪ್ರವಾಸಗಳು:

ರಸ್ತೆ ಪ್ರವಾಸಗಳು:

ಮುಂಬೈದಿಂದ ಗೋವಾ : ಬಹುತೇಕರಿಗೆ ಹಳೆಯ ಒಂದು ಹಿಂದಿ ಚಿತ್ರ "ಬಾಂಬೆ ಟು ಗೋವಾ" ದ ಹೆಸರು ಜ್ಞಾಪಕವಿರಬಹುದು. ಅದು ಕೇವಲ ಚಿತ್ರದ ಟೈಟಲ್, ಆದರೆ ನಿಜವಾಗಿಯೂ ಬಾಂಬೆ (ಈಗಿನ ಮುಂಬೈ) ದಿಂದ ಗೋವಾದವರೆಗೆ ಪ್ರಯಾಣ ಮಾಡಿದರೆ ಒಂದು ವಿಶಿಷ್ಟ ರೀತಿಯ ಅನುಭೂತಿ ಸಿಗುವುದರಲ್ಲಿ ಅನುಮಾನವೆ ಇಲ್ಲ. ಮುಂಬೈದಿಂದ ಗೋವಾ, ಸಂಚಾರ ಯೋಗ್ಯ ರಸ್ತೆಯ ಮೂಲಕ 603 ಕಿ.ಮೀ ಗಳಷ್ಟು ಅಂತರದಲ್ಲಿದೆ. ಹೊರಡಲು ಎರಡು, ಮೂರು ಆಯ್ಕೆಗಳಿವೆ. ಆದರೆ ನಿಮ್ಮ ಪ್ರವಾಸ ರೋಮಾಂಚನ, ಆನಂದಮಯ ಹಾಗೂ ಹಿತಕರವಾಗಿರಬೇಕಿದ್ದರೆ, ಕೋಲ್ಲಾಪುರ, ಸಾವಂತವಾಡಿ ಮಾರ್ಗವಾಗಿ ರಾಷ್ಟ್ರೀಯ ಹೆದ್ದಾರಿ ನಾಲ್ಕರ ಮೂಲಕ ತೆರಳುವುದು ಉತ್ತಮ.

ಚಿತ್ರಕೃಪೆ: Nikkul

ರಸ್ತೆ ಪ್ರವಾಸಗಳು:

ರಸ್ತೆ ಪ್ರವಾಸಗಳು:

ಬೆಂಗಳೂರಿನಿಂದ ಗೋವಾ : ಸುಮಾರು 560 ಕಿ.ಮೀ ದೂರದ ಈ ಪ್ರಯಾಣವು ಬೆಂಗಳೂರನ್ನು ಗೋವಾದೊಂದಿಗೆ ಬೆಸೆಯುತ್ತದೆ. ರಾಷ್ಟ್ರೀಯ ಹೆದ್ದಾರಿ ನಾಲ್ಕು ಈ ಪ್ರಯಾಣದ ಬಹುಭಾಗವನ್ನು ಆವರಿಸಿಕೊಂಡಿದ್ದು, ರಸ್ತೆಯ ಉತ್ತಮ ಗುಣಮಟ್ಟದ ಸ್ಥಿತಿಯು ಪ್ರಯಾಣವನ್ನು ಇನ್ನಷ್ಟು ಸೊಗಸುಭರಿತವನ್ನಾಗಿ ಮಾಡುತ್ತದೆ. ಬೆಂಗಳೂರಿನಿಂದ ಚಿತ್ರದುರ್ಗ, ಹುಬ್ಬಳ್ಳಿ, ಬೆಳಗಾವಿ ಮಾರ್ಗವಾಗಿ ಗೋವಾವನ್ನು ಸುಲಭವಾಗಿ ತಲುಪಬಹುದಾಗಿದೆ.

ಚಿತ್ರಕೃಪೆ: Saad Faruque

ರಸ್ತೆ ಪ್ರವಾಸಗಳು:

ರಸ್ತೆ ಪ್ರವಾಸಗಳು:

ಬೆಂಗಳೂರಿನಿಂದ ಮೈಸೂರು ಮೂಲಕ ಊಟಿ : ಸುಂದರ ನೀಲ್ಗಿರಿ ಪರ್ವತಗಳ ವೈಭೋಗದ ನೋಟಗಳು, ಪಶ್ಚಿಮ ಘಟ್ಟದ ನಿತ್ಯ ಹರಿದ್ವರ್ಣದ ಸಂಪತ್ತು, ರಸ್ತೆಯ ಮೇಲೆ ಚಲಿಸುತ್ತಿದ್ದರೂ ಸಹ ಪ್ರಕೃತಿಯಿಂದ ಬೇರ್ಪಟ್ಟಿಲ್ಲ ಅನ್ನುವಂತಹ ಭಾವನೆಯ ಮಧ್ಯೆ ಪ್ರಯಾಣ ಮಾಡಲು ನಿಮಗಿಷ್ಟವಿದ್ದಲ್ಲಿ ಮೈಸೂರಿನ ಮೂಲಕ ಬೆಂಗಳೂರಿನಿಂದ ಗಿರಿಧಾಮಗಳ ರಾಣಿ ಎಂದು ಕರೆಯಲ್ಪಡುವ ತಮಿಳುನಾಡಿನ ಊಟಿಗೆ ತೆರಳಿ. ಈ ಪ್ರಯಾಣವು ಸವಿ ಸವಿ ನೆನಪನ್ನು ನಿಮ್ಮ ಸ್ಮೃತಿ ಪಟಲದಲ್ಲಿ ಯಾವಾಗಲೂ ಉಳಿಯುವಂತೆ ಮಾಡುತ್ತದೆ. ಊಟಿಯು ಬೆಂಗಳೂರಿನಿಂದ ಸುಮಾರು 270 ಕಿ.ಮೀ ಗಳಷ್ಟು ದೂರದಲ್ಲಿದೆ.

ಚಿತ್ರಕೃಪೆ: Darshan Simha

ರಸ್ತೆ ಪ್ರವಾಸಗಳು:

ರಸ್ತೆ ಪ್ರವಾಸಗಳು:

ದೆಹಲಿಯಿಂದ ಶಿಮ್ಲಾ : ರಸ್ತೆ ಪ್ರವಾಸಗಳಲ್ಲಿ ಸಾಮಾನ್ಯವಾಗಿ ಬೆಟ್ಟ ಗುಡ್ಡ ಪ್ರದೇಶಗಳ ಮಧ್ಯೆ ಹಾಯ್ದು ಹೋದ ರಸ್ತೆಗಳಲ್ಲಿ ಸಂಚಾರ ಮಾಡುವುದೆಂದರೆ ಒಂದು ರೀತಿಯ ಸಾಹಸ ಮನೋಭಾವವುಂಟಾಗಿ ವಿಶೇಷವಾಗಿ ಯುವಜನಾಂಗಕ್ಕೆ ರೋಮಾಂಚನವಾಗುವುದು ಖಚಿತ. ಅಲ್ಲದೆ ಸಾಕಷ್ಟು ಸಾಹಸಮಯಿ ಪ್ರವಾಸಿಗರು ಇಂತಹ ರಸ್ತೆ ಪ್ರವಾಸ ಮಾಡುವುದೆಂದರೆ ತುದಿ ಗಾಲ ಮೇಲೆಯೆ ನಿಂತಿರುತ್ತಾರೆ. ದೆಹಲಿಯಿಂದ ಶಿಮ್ಲಾ ಅಂತಹ ಒಂದು ಸಾಹಸಮಯ ರಸ್ತೆ ಪ್ರವಾಸಕ್ಕೆ ಅನುವು ಮಾಡಿಕೊಡುತ್ತದೆ. ಈ ಪ್ರಯಾಣವು 358 ಕಿ.ಮೀ ಗಳಷ್ಟು ದೂರವಿದ್ದು ಅಲ್ಲಲ್ಲಿ ಕಣಿವೆ, ಪ್ರಪಾತಗಳು ಹಾಗೂ ಬೆಟ್ಟ ಗುಡ್ಡಗಳ ಮಧ್ಯೆ ಚಿಕ್ಕದಾದ ಭಯ ಹುಟ್ಟಿಸುವಂತಹ ರಸ್ತೆಗಳ ಮೂಲಕ ಸಾಗುತ್ತದೆ. ಹೆಚ್ಚಿನ ಎಚ್ಚರಿಕೆ ವಹಿಸಬೇಕಾಗಿರುವುದು ಅವಶ್ಯ.

ಚಿತ್ರಕೃಪೆ: Vir Nakai

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X