Search
  • Follow NativePlanet
Share
» »ಕರ್ನಾಟಕದ ಹತ್ತು ಮಧುಚಂದ್ರ ಸ್ಥಳಗಳು

ಕರ್ನಾಟಕದ ಹತ್ತು ಮಧುಚಂದ್ರ ಸ್ಥಳಗಳು

ವಿವಾಹ ಬಂಧನಕ್ಕೊಳಗಾದ ನವದಂಪತಿಗಳಿಗೆ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಲು, ಪ್ರೀತಿಯನ್ನು ಹಂಚಿಕೊಳ್ಳಲು ಏಕಾಂತ ಸಮಯದ ಅವಶ್ಯಕತೆ ಇದ್ದೆ ಇರುತ್ತದೆ. ಅದರಲ್ಲೂ ಅಂತಹ ಸಮಯವನ್ನು ಸುಂದರವಾದ, ಹಿತಕರವಾದ ವಾತಾವರಣವಿರುವ, ನಗರದ ಗೌಜು ಗದ್ದಲಗಳಿಂದ ದೂರವಿರುವ, ಉತ್ಸಾಹ, ಚೈತನ್ಯಗಳನ್ನು ಬಡಿದೆಬ್ಬಿಸುವ, ಪ್ರಕೃತಿ ಸೌಂದರ್ಯದಿಂದ ತುಂಬಿ ತುಳುಕುತ್ತಿರುವ ಸ್ಥಳಗಳಲ್ಲಿ ಕಳೆಯುವುದರಿಂದ ಒಬ್ಬರಿಗೊಬ್ಬರು ಹೆಚ್ಚು ಹತ್ತಿರವಾಗಬಹುದು.

ಋತುಮಾನದಂತ್ಯದ ಮಾರಾಟ : ಫ್ಲೈಟ್ ಮತ್ತು ಹೋಟೆಲ್ ಬುಕ್ಕಿಂಗ್ ಮೇಲೆ 50% ದವರೆಗೆ ಕಡಿತ

ಅನುಭವಿಗಳು ಹೇಳುವ ಪ್ರಕಾರ ಈ ಸಂದರ್ಭವು ಜೇನು ತುಪ್ಪವನ್ನು ಸವಿದಷ್ಟೆ ಸುಂದರಮಯವಾಗಿರುತ್ತದೆ, ಆನಂದಮಯವಾಗಿರುತ್ತದೆ. ಅಂತೆಯೆ ಪ್ರೀತಿಯಿಂದ ಇದನ್ನು ಇಂಗ್ಲೀಷಿನಲ್ಲಿ ಹನಿಮೂನ್ ಎಂದು ಕರೆದರೆ ಅಚ್ಚ ಕನ್ನಡದಲ್ಲಿ ಮಧುಚಂದ್ರ ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ ನವದಂಪತಿಗಳು ಮಧುಚಂದ್ರಕ್ಕೆಂದು ತಮ್ಮ ತಮ್ಮ ಸಾಮರ್ಥ್ಯಾನುಸಾರ ವಿವಿಧೆಡೆ ತೆರಳುತ್ತಾರೆ. ಕೆಲವರು ವಿದೇಶಗಳಿಗೆ ಹೋಗಲು ಬಯಸಿದರೆ, ಇನ್ನೂ ಹಲವರು ದೇಶದ ವಿವಿಧ ಗಮನಾರ್ಹ ಪ್ರವಾಸಿ ಸ್ಥಳಗಳಿಗೆ ತೆರಳಲು ಬಯಸುತ್ತಾರೆ.

ವಿಶೇಷ ಲೇಖನ : ಜನಪ್ರೀಯ ಹನಿಮೂನ್ ಸ್ಥಳಗಳು

ಆದರೆ ಮಧುಚಂದ್ರದ ಮೂಲ ಉದ್ದೇಶ ಒಬ್ಬರಿಗೊಬ್ಬರು ಪ್ರಕೃತಿಯ ಮಡಿಲಲ್ಲಿ ಬೆರೆತು ಪ್ರಕೃತಿ ಹಾಗೂ ಪುರುಷನಾಗಿ ನವ ಸಂಬಂಧದ ಸಂಭ್ರಮವನ್ನು ಆಚರಿಸುತ್ತ, ದೀರ್ಘ ಕಾಲದ ದಾಂಪತ್ಯ ಜೀವನಕ್ಕೆ ಸದೃಢವಾದ ಅಡಿಪಾಯವನ್ನು ಹಾಕುವ ಚಟುವಟಿಕೆಯಾಗಿರುತ್ತದೆ ಎಂದರೂ ತಪ್ಪಾಗಲಿಕ್ಕಿಲ್ಲ. ಇಂತಹ ಸಂಬಂಧಗಳಿಗೆ ಅರಳಲು ಅನುವು ಮಾಡಿ ಕೊಡುವಂತಹ ಸಾಕಷ್ಟು ಸ್ಥಳಗಳು ಕರ್ನಾಟಕದ ತುಂಬೆಲ್ಲ ಕಾಣಬಹುದು. ಹಾಗಾದರೆ ಬನ್ನಿ ಈ ಲೇಖನದ ಮೂಲಕ ಕರ್ನಾಟಕದಲ್ಲಿರುವ ಸುಂದರ ಹತ್ತು ಮಧುಚಂದ್ರ ಸ್ಥಳಗಳ ಕುರಿತು ತಿಳಿಯಿರಿ.

ಕರ್ನಾಟಕದ ಮಧುಚಂದ್ರ ಸ್ಥಳಗಳು:

ಕರ್ನಾಟಕದ ಮಧುಚಂದ್ರ ಸ್ಥಳಗಳು:

ಬೆಂಗಳೂರು : ಬೆಂಗಳೂರು, ತನ್ನ ವೈಭವಯುತ ಮಾಲ್ ಗಳು,ಸದಾ ಕಿಕ್ಕಿರಿದು ತುಂಬಿರುವ ರೋಡ್ ಗಳು ಮತ್ತು ಎತ್ತರದ ಕಟ್ಟಡಗಳಿಂದ, ಪ್ರಸ್ತುತ ಭಾರತದ ಹೊಸ ಮುಖವಾಗಿ ಹೊರಹೊಮ್ಮುತ್ತಿದೆ. ಕರ್ನಾಟಕದ ಇತರೆ ಭಾಗಗಳಲ್ಲಿ ವಾಸಿಸುತ್ತಿರುವವರಿಗೆ ಇಂದೂ ಕೂಡ ಬೆಂಗಳೂರು ಭೇಟಿ ನೀಡಿ ಸಮಯ ಕಳೆಯಲು ಒಂದು ಸುಂದರ ಸ್ಥಳವಾಗಿದೆ. ಇಲ್ಲಿರುವ ಲಾಲ್ ಬಾಗ್, ಕಬ್ಬನ್ ಪಾರ್ಕ್, ಸ್ಯಾಂಕಿ ಕೊಳ, ಅಲಸೂರು ಕೊಳ ಮುಂತಾದ ಸ್ಥಳಗಳು ನವ ದಂಪತಿಗಳು ಏಕಾಂತ ಸಮಯವನ್ನು ಸುಂದರವಾಗಿ ಕಳೆಯಲು ಆದರ್ಶಮಯ ತಾಣಗಳಾಗಿವೆ. ಇವುಗಳಲ್ಲದೆ ನಗರದಲ್ಲಿ ಸಾಕಷ್ಟು ವೈವಿಧ್ಯಮಯ ಚಟುವಟಿಕೆಗಳನ್ನು ಆಸ್ವಾದಿಸಬಹುದಾಗಿದೆ.

ಚಿತ್ರಕೃಪೆ: Ajith Kumar

ಕರ್ನಾಟಕದ ಮಧುಚಂದ್ರ ಸ್ಥಳಗಳು:

ಕರ್ನಾಟಕದ ಮಧುಚಂದ್ರ ಸ್ಥಳಗಳು:

ಕುದುರೆಮುಖ : ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯಲ್ಲಿರುವ ಕುದುರೆಮುಖವು ಒಂದು ಗುಡ್ಡ ಪ್ರದೇಶವಾಗಿದೆ ಹಾಗೂ ಇದು ಪಶ್ಚಿಮ ಘಟ್ಟದ ಒಂದು ಭಾಗವಾಗಿದೆ. ತನ್ನ ಯಥೇಚ್ಛ ಹುಲ್ಲುಗಾವಲು ಪ್ರದೇಶ ಮತ್ತು ದಟ್ಟ ಅರಣ್ಯದಿಂದಾಗಿ ಜೀವವೈವಿಧ್ಯದ ಪ್ರಮುಖ ಕೇಂದ್ರವಾಗಿದೆ. ಪಶ್ಚಿಮಘಟ್ಟದಲ್ಲೇ ಕುದುರೆಮುಖ ರಾಷ್ಟ್ರೀಯ ಪಾರ್ಕ್‌ ಎರಡನೇ ಅತಿ ದೊಡ್ಡ ರಕ್ಷಿತ ಅರಣ್ಯವಾಗಿದೆ. ಕುದುರೆಮುಖದ ಸುತ್ತಮುತ್ತ ಹಲವು ಆಕರ್ಷಕ ಪ್ರವಾಸಿ ತಾಣಗಳಿವೆ. ಇವುಗಳಲ್ಲಿ ಲಕ್ಯಾ ಡ್ಯಾಮ್‌, ರಾಧಾಕೃಷ್ಣ ದೇವಸ್ಥಾನ, ಗಂಗಾಮೂಲ ಬೆಟ್ಟ ಮತ್ತು ಹನುಮಾನ್‌ ಗುಂಡಿ ಜಲಪಾತ ಪ್ರಮುಖವಾದವುಗಳು. ನವಿರಾದ ಶೋಲಾ ಅರಣ್ಯದ ಗಿಡ ಮರಗಳು ಮನದಲ್ಲಿ ಪ್ರಸನ್ನತೆಯ ಭಾವವನ್ನು ಮೂಡಿಸುತ್ತದೆ ಹಾಗೂ ನಿಮ್ಮಲ್ಲಿ ಶೃಂಗಾರ ರಸ ಉಕ್ಕಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ.

ಚಿತ್ರಕೃಪೆ: Praveen

ಕರ್ನಾಟಕದ ಮಧುಚಂದ್ರ ಸ್ಥಳಗಳು:

ಕರ್ನಾಟಕದ ಮಧುಚಂದ್ರ ಸ್ಥಳಗಳು:

ಕೊಡಗು : ಭೇಟಿ ನೀಡುವ ನವದಂಪತಿಗಳಿಗೆ ಮೋಡಿ ಮಾಡುವ ನಾಡು ಕೊಡಗು. ರ್ನಾಟಕದ ಮಲೆನಾಡಿನ ಪಶ್ಚಿಮ ಘಟ್ಟದಲ್ಲಿನ ನೈಋತ್ಯ ಭಾಗದಲ್ಲಿರುವ ಕೊಡಗು, ಒಂದು ಗುಡ್ಡಗಳ ಜಿಲ್ಲೆ. ಕೊಡಗನ್ನು ಭಾರತದ ಸ್ಕಾಟ್‌ಲ್ಯಾಂಡ್‌ ಎಂದು ಕರೆಯಲಾಗುತ್ತದೆ ಹಾಗೂ ಕರ್ನಾಟಕದ ಕಾಶ್ಮೀರ ಎಂದು ಕರೆಯಲಾಗುತ್ತದೆ. ಈ ಪ್ರದೇಶವು ನಿತ್ಯಹರಿದ್ವರ್ಣ ಅರಣ್ಯ, ಸುಂದರ ಹಸಿರು ಕಣಿವೆಗಳು, ಮಂಜಿನ ಗುಡ್ಡಗಳು, ವಕ್ರವಕ್ರವಾಗಿರುವ ಕಾಫಿ ತೋಟಗಳು, ಟೀ ಎಸ್ಟೇಟ್‌ಗಳು, ಕಿತ್ತಳೆ ತೋಟಗಳು, ಅತ್ಯುತ್ತಮ ಇಳುವರಿ ಮತ್ತು ವೇಗವಾಗಿ ಹರಿಯುವ ಪ್ರವಾಹಗಳಿಂದಾಗಿ ತುಂಬಾ ಜನಪ್ರಿಯವಾಗಿದೆ. ನವದಂಪತಿಗಳು ಮಧುಚಂದ್ರ ಆಚರಿಸ ಬಯಸುವ ಬಹು ನೆಚ್ಚಿನ ತಾಣವಾಗಿದೆ ಕೊಡಗು.

ಚಿತ್ರಕೃಪೆ: Kalidas Pavithran

ಕರ್ನಾಟಕದ ಮಧುಚಂದ್ರ ಸ್ಥಳಗಳು:

ಕರ್ನಾಟಕದ ಮಧುಚಂದ್ರ ಸ್ಥಳಗಳು:

ದಾಂಡೇಲಿ : ದಾಂಡೇಲಿ ಕರ್ನಾಟಕ ರಾಜ್ಯದ ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಪಶ್ಚಿಮ ಘಟ್ಟಗಳ ಸುಂದರ ಹಸಿರಿನ ಮಡಿಲಲ್ಲಿರುವ ಸುಂದರ ಪಟ್ಟಣ. ಇಲ್ಲಿನ ಜಲಸಾಹಸ ಕ್ರೀಡೆಯಿಂದಾಗಿ ದಾಂಡೇಲಿಯು ದಕ್ಷಿಣ ಭಾರತದಲ್ಲೇ ಪ್ರಸಿದ್ಧವಾಗಿದೆ. ಇಲ್ಲಿರುವ ದಟ್ಟ ದಂಡಕಾರಣ್ಯ ಇರುವುದರಿಂದ ದಾಂಡೇಲಿ ಪಟ್ಟಣವೆಂಬ ಹೆಸರು ಬಂದಿದೆ ಎಂಬ ಪ್ರತೀತಿ ಇದೆ. ಅಲ್ಲದೇ ಇಲ್ಲಿರುವ ದಾಂಡೇಲಪ್ಪ ದೇವಸ್ಥಾನದಿಂದಾಗಿ ದಾಂಡೇಲಿ ಎಂಬ ಹೆಸರು ಬಂದಿದೆ ಎಂಬ ಇನ್ನೊಂದು ನಂಬಿಕೆ ಇದೆ. ದಾಂಡೇಲಿಯು ರಾಜ್ಯದಲ್ಲಿಯೇ ಎರಡನೇ ದೊಡ್ಡ ವನ್ಯಜೀವಿಧಾಮವೆಂದು ಹೆಸರಾಗಿದೆ. ಪ್ರಖ್ಯಾತ ಧಾರ್ಮಿಕ ಸ್ಥಳ ಉಳವಿ, ಸೈಕ್ಸ್ ಪಾಯಿಂಟ್, ಸುಪಾ ಡ್ಯಾಮ್, ಸಿಂಥೇರಿ ರಾಕ್ಸ್, ಕವಲ ಗುಹೆ ದಾಂಡೇಲಿಗೆ ಹತ್ತಿರದಲ್ಲಿರುವ ಇತರೆ ಪ್ರೇಕ್ಷಣೀಯ ಸ್ಥಳಗಳು.

ಚಿತ್ರಕೃಪೆ: Ankur P

ಕರ್ನಾಟಕದ ಮಧುಚಂದ್ರ ಸ್ಥಳಗಳು:

ಕರ್ನಾಟಕದ ಮಧುಚಂದ್ರ ಸ್ಥಳಗಳು:

ಆಗುಂಬೆ : ಆಗುಂಬೆಯು ಮಲೆನಾಡು ಪ್ರಾಂತ್ಯದ ತೀರ್ಥಹಳ್ಳಿ (ರಾಷ್ಟ್ರಕವಿ ಕುವೆಂಪು ಅವರ ತವರು) ತಾಲ್ಲೂಕಿನ ಒಂದು ಪುಟ್ಟ ಗ್ರಾಮ. ಇಲ್ಲಿನಿಂದ ಅರಬ್ಬಿ ಸಮುದ್ರದಲ್ಲಿ ಮುಳುಗುವ ಸೂರ್ಯನನ್ನು ನೋಡಬಹುದು. ಆ ಸೂರ್ಯಾಸ್ತದ ದೃಶ್ಯಕ್ಕಾಗಿ ಈ ಜಾಗ ಪ್ರಸಿದ್ಧವಾಗಿದೆ. ಅಲ್ಲದೆ ಈ ಊರಿನಲ್ಲಿ ದಕ್ಷಿಣ ಭಾರತದಲ್ಲಿಯೇ ಅತಿ ಹೆಚ್ಚು ಮಳೆ ಬೀಳುತ್ತದೆ. ತನ್ನ ನಯನ ಮನೋಹರ ಪ್ರಾಕೃತಿಕ ಸೊಬಗಿಗೆ ಇದು ಹೆಸರುವಾಸಿ. ಆಗುಂಬೆಯಲ್ಲಿ ಕಾಣಸಿಗುವ ಪ್ರಾಣಿ ಮತ್ತು ಸಸ್ಯಸಂಕುಲಗಳಿಗಾಗಿ ನಾವು ಮಲೆನಾಡಿಗೆ ವಿಶೇಷ ಧನ್ಯವಾದವನ್ನು ಅರ್ಪಿಸಬೇಕು. ಹಾಗಾಗಿಯೇ ಆಗುಂಬೆಯು ಭಾರತದ ಮಲೆನಾಡು ಸಂಶೋಧನಾ ಕೇಂದ್ರವಾಗಿದೆ. ನೀವು ಆಗುಂಬೆಗೆ ಭೇಟಿಕೊಟ್ಟಾಗ ಬರ್ಕನ ಜಲಪಾತ, ಕುಂಚಿಕಲ್ ಜಲಪಾತ, ಒನಕೆ ಅಬ್ಬಿ ಜಲಪಾತ, ಜೋಗಿ ಗುಂಡಿ ಮತ್ತು ಕೂಡ್ಲು ತೀರ್ಥ ಜಲಪಾತಗಳನ್ನು ವೀಕ್ಷಿಸಬಹುದು.

ಚಿತ್ರಕೃಪೆ: Karunakar Rayker

ಕರ್ನಾಟಕದ ಮಧುಚಂದ್ರ ಸ್ಥಳಗಳು:

ಕರ್ನಾಟಕದ ಮಧುಚಂದ್ರ ಸ್ಥಳಗಳು:

ಮೈಸೂರು : ಮೈಸೂರು ದಕ್ಷಿಣ ಭಾರತದಲ್ಲಿ ತನ್ನ ವೈಭವೋಪೇತ ಮತ್ತು ಸಮೃದ್ಧ ಸನ್ನಿವೇಶಕ್ಕೆ ಪ್ರಸಿದ್ಧವಾಗಿರುವ ಒಂದು ಪ್ರವಾಸಿ ತಾಣವಾಗಿದೆ. ಮೈಸೂರು ನಗರದ ಹಿಂದಿನ ಕಾಲದ ಚೆಲುವು ಮತ್ತು ಉತ್ತಮವಾಗಿ ಪೋಷಿಸಿರುವ ಉದ್ಯಾನವನಗಳು, ಪಾರಂಪರಿಕ ಕಟ್ಟಡಗಳು ಹಾಗೂ ದಾರಿಯುದ್ದಕ್ಕೂ ಬಿದ್ದಿರುವ ಸುಂದರವಾದ ಎಲೆಗಳು ಮರೆಯಲಾರದಂತಹ ನೆನಪುಗಳನ್ನು ಅಲ್ಲಿಗೆ ಭೇಟಿ ನೀಡುವ ಪ್ರವಾಸಿಗರಲ್ಲಿ ತುಂಬುತ್ತದೆ. ಮೈಸೂರಿಗೆ ಭೇಟಿ ನೀಡುವವರನ್ನು ಬಹಳ ಕಾಡುವುದು ಅಲ್ಲಿನ ವೈವಿಧ್ಯಮಯ ಸಂಸ್ಕೃತಿ. ಇದನ್ನು ಅಲ್ಲಿನವರ ಪರಂಪರೆ, ಕಲೆ, ಕರಕುಶಲತೆ, ಭಕ್ಷ್ಯ ಬೋಜನ ಮತ್ತು ಜೀವನ ಶೈಲಿಗಳಲ್ಲೂ ಬಿಂಬಿತವಾಗಿವೆ. ಮೈಸೂರು ಮೃಗಾಲಯ, ಚಾಮುಂಡೇಶ್ವರಿ ದೇವಾಲಯ,ಮಹಾಬಲೇಶ್ವರ ದೇವಾಲಯ, ಸಂತ ಫಿಲೋಮಿನಾರ ಚರ್ಚ್, ಬೃಂದಾವನ ಉದ್ಯಾನವನ, ಜಗನ್ ಮೋಹನ್ ಅರಮನೆ ಕಲಾ ಪ್ರದರ್ಶನಾ ಕೇಂದ್ರ, ಲಲಿತ್ ಮಹಲ್ ಅರಮನೆ, ಜಯಲಕ್ಷ್ಮಿ ವಿಲಾಸ್ ನಿವಾಸ, ರೈಲ್ವೇ ವಸ್ತು ಸಂಗ್ರಹಾಲಯ, ಕಾರಂಜಿ ಕೆರೆ, ಮತ್ತು ಕುಕ್ಕರಹಳ್ಳಿ ಕೆರೆ ಮೈಸೂರು ನಗರದ ಇತರೆ ಆಕರ್ಷಣೆಗಳಾಗಿವೆ.

ಚಿತ್ರಕೃಪೆ: Harsh Wardhan

ಕರ್ನಾಟಕದ ಮಧುಚಂದ್ರ ಸ್ಥಳಗಳು:

ಕರ್ನಾಟಕದ ಮಧುಚಂದ್ರ ಸ್ಥಳಗಳು:

ಮಂಗಳೂರು : ಮಂಗಳೂರು ನಗರಿಯನ್ನು ಕರ್ನಾಟಕದ ಹೆಬ್ಬಾಗಿಲು ಎಂದು ಸಂಬೋಧಿಸಲಾಗಿದೆ. ಪಶ್ಚಿಮ ಘಟ್ಟದ ಸುಂದರ ದಟ್ಟಾರಣ್ಯ ಹಾಗೂ ಆಕರ್ಷಕ ನೀಲಿ ನೀರಿನ ಅರೇಬಿಯನ್‌ ಸಮುದ್ರ ಎರಡು ಪ್ರಕೃತಿದತ್ತ ಸೌಂದರ್ಯವನ್ನು ಮೈವೆತ್ತಿ ನಿಂತಿದೆ. ಇವೆರಡೂ ಈ ನಗರಿಗೆ ಭೂಷಣಪ್ರಾಯವಾಗಿ ಲಭಿಸಿವೆ. ಇದರಿಂದಲೇ ಮಂಗಳೂರು ನೋಡುಗರ ಕಣ್ಮನ ಸೆಳೆಯುವ ಆಕರ್ಷಕ ತಾಣಗಳನ್ನು ಒಳಗೊಂಡ ಪ್ರದೇಶವಾಗಿ ಜನಪ್ರಿಯವಾಗಿದೆ. ದೇವಿ ಮಂಗಲದೇವಿಯಿಂದಾಗಿ ಈ ಪ್ರದೇಶಕ್ಕೆ ಮಂಗಳೂರು ಎಂಬ ಹೆಸರು ಬಂದಿದೆ. ಇಂದು ಅತ್ಯಂತ ಪ್ರಸಿದ್ಧ ತಾಣವಾಗಿ ಮಾತ್ರವಲ್ಲ, ಸದಾ ಕಾರ್ಯನಿರತ ಬಂದರನ್ನು ಹೊಂದಿದ ಕಡಲ ತೀರವಾಗಿ ಜನಪ್ರಿಯವಾಗಿದೆ. ಮಧುಚಂದ್ರವನ್ನು ಆಚರಿಸಲೂ ಸಹ ಇದೊಂದು ಆದರ್ಶಮಯ ಸ್ಥಳವಾಗಿದೆ.

ಚಿತ್ರಕೃಪೆ: Karunakar Rayker

ಕರ್ನಾಟಕದ ಮಧುಚಂದ್ರ ಸ್ಥಳಗಳು:

ಕರ್ನಾಟಕದ ಮಧುಚಂದ್ರ ಸ್ಥಳಗಳು:

ಕಾರವಾರ : ಭಾರತ ದ್ವೀಪಕಲ್ಪದ ಪಶ್ಚಿಮ ಭಾಗದಲ್ಲಿರುವ ಕಾರವಾರ ಜಿಲ್ಲೆಯು ಗೋವಾದಿಂದ ಕೇವಲ 15 ಕಿ.ಮೀ ದೂರದಲ್ಲಿದ್ದು, ರಾಜ್ಯದ ರಾಜಧಾನಿಯಾದ ಬೆಂಗಳೂರಿಗೆ 520 ಕಿ.ಮೀ ದೂರದಲ್ಲಿದೆ. ಕಾಳಿ ನದಿಯು ಅರೇಬಿಯನ್ ಸಮುದ್ರಕ್ಕೆ ಸೇರಿಕೊಳ್ಳುವ ಸ್ಥಳವನ್ನು ಕಾರವಾರಿನಲ್ಲಿ ಕಾಣಬಹುದಾಗಿದ್ದು, ಈ ಸ್ಥಳವು ಪ್ರಸಿದ್ಧ ಸದಾಶಿವಗಡ ಕೋಟೆ ಮತ್ತು ಕಾಳಿ ನದಿ ಸೇತುವೆಗೆ ಹತ್ತಿರದಲ್ಲಿದೆ. ಈ ಅದ್ಭುತಗಳ ಮಿಶ್ರಣವು ನೋಡುಗರ ಮೈಮನ ಪುಳುಕಿಸದೆ ಇರಲಾರದು. ಇಲ್ಲಿರುವ ನಯನಮನೋಹರವಾದ ಕಡಲ ತೀರಗಳು ಬಂಗಾರದ ಮರಳನ್ನು ತುಂಬಿಸಿಕೊಂಡು, ನರ್ತಕಿಯರ ಹಾಗೆ ನಲಿದಾಡುತ್ತಿರುವ ತೆಂಗಿನ ಮರಗಳನ್ನು ಬೆಳೆಸಿಕೊಂಡು ನೋಡುಗರಿಗೆ ಸಾಕ್ಷಾತ್ ಸ್ವರ್ಗದ ಅನುಭವವನ್ನೆ ಒದಗಿಸುತ್ತದೆ.

ಚಿತ್ರಕೃಪೆ: Prashant Dobhal

ಕರ್ನಾಟಕದ ಮಧುಚಂದ್ರ ಸ್ಥಳಗಳು:

ಕರ್ನಾಟಕದ ಮಧುಚಂದ್ರ ಸ್ಥಳಗಳು:

ಗೋಕರ್ಣ : ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯಲ್ಲಿನ ಗೋಕರ್ಣವು ಒಂದು ಪುಣ್ಯ ಕ್ಷೇತ್ರ ವಾಗಿರುವುದಲ್ಲದೆ ಅಲ್ಲಿರುವ ಸುಂದರ ಸರೋವರದಿಂದ ಪ್ರವಾಸೀ ತಾಣವಾಗಿ ಪ್ರಸಿದ್ಧಿ ಹೊಂದಿದೆ. ಈ ಸ್ಥಳವು ಎರಡು ನದಿಗಳಾದ ಅಗನಾಶಿನಿ ಮತ್ತು ಗಂಗಾವಳಿಯ ಸಂಗಮದ ಸಾನಿಧ್ಯದಲ್ಲಿದ್ದು ಆ ನದಿಗಳು ಒಂದಾಗುವ ಆಕಾರವು ಗೋವಿನ ಕಿವಿಯ ಆಕಾರವನ್ನು ಹೊಂದಿರುವ ಕಾರಣ ಈ ಸ್ಥಳಕ್ಕೆ ಗೋಕರ್ಣ ಎಂಬ ಹೆಸರು ಬಂದಿದೆ. ಗೋಕರ್ಣವು ಅತ್ಯಂತ ವೇಗವಾಗಿ ಪ್ರಿಯವಾಗುತ್ತಿರುವ ಪ್ರವಾಸಿ ತಾಣವಾಗಿದ್ದು ಗೋವಾದ ಅನೇಕ ಸಮುದ್ರ ತೀರಗಳನ್ನು ಹಿಮ್ಮೆಟ್ಟಿಸುವಂತಹ ಸುಂದರವಾದ ಹಲವು ಕರಾವಳಿ ಪ್ರದೇಶಗಳನ್ನು ಹೊಂದಿದೆ. ಕುಡ್ಲೆ ಸಮುದ್ರ ತೀರ, ಗೋಕರ್ಣ ತೀರ, ಅರ್ಧ ಚಂದಿರ ಸಮುದ್ರ ತೀರ, ಪ್ಯಾರಾಡೈಸ್ ತೀರ ಹಾಗೂ ಓಂ ಸಮುದ್ರ ತೀರಗಳು ಇಲ್ಲಿರುವ ಐದು ಪ್ರಮುಖ ಸಮುದ್ರ ಪ್ರದೇಶದ ಆಕರ್ಷಣೆಗಳಾಗಿವೆ.

ಚಿತ್ರಕೃಪೆ: Infoayan

ಕರ್ನಾಟಕದ ಮಧುಚಂದ್ರ ಸ್ಥಳಗಳು:

ಕರ್ನಾಟಕದ ಮಧುಚಂದ್ರ ಸ್ಥಳಗಳು:

ಸಕಲೇಶಪುರ : ಸಕಲೇಶಪುರವು ಪಶ್ಚಿಮ ಘಟ್ಟಗಳಲ್ಲಿ ನೆಲೆಗೊಂಡಿರುವ ಒಂದು ಸಣ್ಣ ಗಿರಿಧಾಮವಾಗಿದ್ದು, ವಿಹಾರಕ್ಕೆ ಬರುವವರಿಗೆ ಒಂದು ಚೇತೋಹಾರಿ ಅನುಭವವನ್ನು ಒದಗಿಸುತ್ತದೆ. ಸಕಲೇಶಪುರವು ತನ್ನ ಶ್ರೀಮಂತ ಜೀವವೈವಿಧ್ಯಕ್ಕೆ ಹೆಸರುವಾಸಿಯಾಗಿದೆ. ಅಲ್ಲದೆ ಇದು ಪ್ರಮುಖವಾಗಿ ಚಾರಣ ಮಾಡುವವರ ನೆಚ್ಚಿನ ತಾಣವಾಗಿ ಖ್ಯಾತಿ ಪಡೆದಿದೆ. ಇಲ್ಲಿನ ಬಿಸಿಲೆ ಮೀಸಲು ಅರಣ್ಯ ಪ್ರದೇಶ ಹಾಗು ಕುಮಾರ ಪರ್ವತದಲ್ಲಿ ಚಾರಣ ಮಾಡುವವರಿಗೆ ಇಲ್ಲಿನ ವೈವಿಧ್ಯಮಯ ಜೀವ ಜಾಲದ ಕುರಿತು ಹೊಸ ಅಂಶಗಳು ಲಭ್ಯವಾಗುವುದಷ್ಟೆ ಅಲ್ಲದೆ ಅವರ ಮನತಣಿಯುವಷ್ಟು ಅವರ ಕುತೂಹಲ ಕೆರಳುತ್ತಿರುತ್ತದೆ.

ಚಿತ್ರಕೃಪೆ: L. Shyamal

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X