Search
  • Follow NativePlanet
Share
» »ಅನನ್ಯ ವಾಸ್ತುಶಿಲ್ಪದ ಮೆಟ್ಟಿಲು ಬಾವಿಗಳು

ಅನನ್ಯ ವಾಸ್ತುಶಿಲ್ಪದ ಮೆಟ್ಟಿಲು ಬಾವಿಗಳು

By Vijay

ರಾಜರುಗಳ ಕಾಲದಲ್ಲಿ ನೀರನ್ನು ಶೇಖರಿಸಿಡಲು ಬಾವಿಗಳನ್ನು ನಿರ್ಮಿಸಲಾಗುತ್ತಿದ್ದುದನ್ನು ನಾವು ಇತಿಹಾಸದ ಪುಸ್ತಕಗಳನ್ನು ಕೆದಕಿದಾಗ ತಿಳಿದುಬರುತ್ತದೆ. ಅಷ್ಟೆ ಅಲ್ಲ, ಹಂಪಿಯ ಇತಿಹಾಸವನ್ನು ಅವಲೋಕಿಸಿದಾಗ ಆ ಕಾಲದಲ್ಲಿಯೆ ನೀರಿನ ಪರಿಣಾಮಕಾರಿ ಬಳಕೆಗೆಂದು ಸುಸಜ್ಜಿತವಾದ ನೀರು ಸರಬರಾಜು ವ್ಯವಸ್ಥೆಯ ನಿರ್ಮಾಣವಾಗಿತ್ತು ಎಂಬಂಶವು ಕೂಡ ತಿಳಿದುಬರುತ್ತದೆ. ಮಳೆಯ ನೀರಾಗಲಿ ಅಥವಾ ಭೂಮಿಯ ಅಂತರ್ಜಲವಾಗಲಿ ಒಂದೆಡೆಯಾಲಿ ಹಿಡಿದಿಡಲು ದೊಡ್ಡದಾದ ಹೊಂಡಗಳಿಂದ ಹಿಡಿದು ಗೋಲಾಕಾರದ ಬಾವಿಗಳವರೆಗೂ ಅನೇಕ ರಚನೆಗಳನ್ನು ನಾವು ಇಂದು ಭಾರತದಲ್ಲಿ ಕಾಣಬಹುದಾಗಿದೆ.

ಸಾಮಾನ್ಯವಾಗಿ ಕಲ್ಯಾಣಿ/ಪುಷ್ಕರಿಣಿ ಅಥವಾ ಮೆಟ್ಟಿಲು ಬಾವಿಗಳು ಒಂದೆ ಆದರೂ ಮೆಟ್ಟಿಲು ಬಾವಿಗಳು ಕೊಂಚ ಚಿಕ್ಕದಾಗಿಯೂ ಹಾಗೂ ಆಳವಾಗಿಯೂ ಇರುತ್ತವೆ ಎಂದು ಹೇಳಬಹುದು. ಅಲ್ಲದೆ ಮುಖ್ಯವಾಗಿ ಕಲ್ಯಾಣಿಗಳು ದೇವಸ್ಥಾನಗಳಿದ್ದರೆ ಇತರೆ ಈ ತರಹದ ರಚನೆಗಳು ರಾಜರುಗಳ ಅರಮನೆ ಆವರಣ ಹಾಗು ಸಾಮಾನ್ಯವಾದ ಸ್ಥಳಗಳಲ್ಲಿ ಕಂಡುಬರುತ್ತವೆ.

ಇನ್ನು, ವಾಸ್ತುಶಿಲ್ಪ ದೃಷ್ಟಿಯಿಂದ ಗಮನಿಸಿದಾಗ ಅನೇಕ ಮೆಟ್ಟಿಲು ಬಾವಿಗಳು ಅತಿ ವಿಶಿಷ್ಟ ಕಲಾತ್ಮಕತೆಯಿಂದ ರಚಿತವಾಗಿದುದನ್ನು ನಾವು ಇಂದು ನೋಡಬಹುದಾಗಿದೆ. ಅದರಲ್ಲೂ ಕೆಲ ವಿಶಿಷ್ಟವಾಗಿ ರಚಿತವಾದ ಬಾವಿಗಳು ಚಲನ ಚಿತ್ರಗಳಲ್ಲೂ ತಮ್ಮ ಗಮನ ಸೆಳೆದಿವೆ. ಹಾಗಾದರೆ ಬನ್ನಿ ನಮ್ಮಲ್ಲಿ ಕಂಡುಬರುವ ಕೆಲವು ಮೆಟ್ಟಿಲು ಬಾವಿಗಳ ಚಿತ್ರಗಳು ಹಾಗೂ ಅವು ಎಲ್ಲೆಲ್ಲಿವೆ ಎಂಬುದರ ಕುರಿತು ಈ ಲೇಖನದ ಮೂಲಕ ತಿಳಿದುಕೊಳ್ಳೊಣ.

ಚಾಂದ್ ಬಾವರಿ:

ಚಾಂದ್ ಬಾವರಿ:

ರಾಜಸ್ಥಾನ ರಾಜ್ಯದ ಜೈಪುರ್ ಬಳಿಯ ಅಭನೇರಿ ಎಂಬಲ್ಲಿ ಈ ಸುಂದರ ಕಲಾತ್ಮಕತೆಯ ಮೆಟ್ಟಿಲು ಬಾವಿಯನ್ನು ಕಾಣಬಹುದು.

ಚಿತ್ರಕೃಪೆ: Doron

ರಾಣಿ ಕಿ ವಾವ್:

ರಾಣಿ ಕಿ ವಾವ್:

ಗುಜರಾತ್ ರಾಜ್ಯದ ಪಟಾನ್ ಎಂಬಲ್ಲಿರುವ ರಾಣಿ ಕಿ ವಾವ್ ಎಂದು ಕರೆಯಲ್ಪಡುವ ಒಂದು ವಿಶಿಷ್ಟವಾಗಿ ರಚಿತವಾದ ಮೆಟ್ಟಿಲು ಬಾವಿ ಅಥವಾ ಕಲ್ಯಾಣಿ.

ಚಿತ್ರಕೃಪೆ: Bernard Gagnon

ಹಂಪಿ ಮೆಟ್ಟಿಲು ಬಾವಿ:

ಹಂಪಿ ಮೆಟ್ಟಿಲು ಬಾವಿ:

ಕರ್ನಾಟಕದ ಸುಪ್ರಸಿದ್ಧ ಐತಿಹಾಸಿಕ ನಗರ ಹಿಂದೆ ವೈಭವಯುತ ವಿಜಯನಗರ ಸಾಮ್ರಾಜ್ಯವಿದ್ದ ಹಂಪಿಯಲ್ಲಿ ಕಂಡುಬರುವ ಮೆಟ್ಟಿಲು ಬಾವಿ ಅಥವಾ ಕಲ್ಯಾಣಿ.

ಚಿತ್ರಕೃಪೆ: Dharani.prakash

ಅಗ್ರಸೇನ್ ಕಿ ಬಾವಲಿ:

ಅಗ್ರಸೇನ್ ಕಿ ಬಾವಲಿ:

ವಿಶಿಷ್ಟ ಬಗೆಯಲ್ಲಿ ರಚಿತವಾಗಿರುವ ಅಗ್ರಸೇನ ಕಿ ಬಾವಲಿ ಎಂದು ಕರೆಯಲ್ಪಡುವ ಮೆಟ್ಟಿಲು ಬಾವಿ. ಇದು ದೆಹಲಿಯಲ್ಲಿದೆ.

ಚಿತ್ರಕೃಪೆ: Supreet Sethi

ಗಂಧಕ್ ಕಿ ಬಾವಲಿ:

ಗಂಧಕ್ ಕಿ ಬಾವಲಿ:

ದೆಹಲಿಯಲ್ಲಿ ಕಂಡುಬರುವ ಗಂಧಕ್ ಕಿ ಬಾವಲಿ ಎಂದು ಕರೆಯಲ್ಪಡುವ ಬಾವಿ.

ಚಿತ್ರಕೃಪೆ: Anupamg

ರಾಜೊ ಕಿ ಬಾವಲಿ:

ರಾಜೊ ಕಿ ಬಾವಲಿ:

ದೆಹಲಿಯಲ್ಲಿ ಕಂಡುಬರುವ ರಾಜೊ ಕಿ ಬಾವಲಿ ಎಂದು ಕರೆಯಲ್ಪಡುವ ಮತ್ತೊಂದು ಮೆಟ್ಟಿಲು ಬಾವಿ. ಆದರೆ ಪ್ರಸ್ತುತ ಇದರಲ್ಲಿ ನೀರಿಲ್ಲದೆ ಇದು ಶಿಥಿಲಾವಸ್ಥೆಗ ಜಾರಿರುವುದು ದುರದೃಷ್ಟ.

ಚಿತ್ರಕೃಪೆ: Roboture

ಅಡಾಲಜ ಬಾವಲಿ:

ಅಡಾಲಜ ಬಾವಲಿ:

ಗುಜರಾತಿನ ಅಹ್ಮದಾಬಾದ್ ಪಟ್ಟಣದ ಬಳಿಯಿರುವ ಅಡಾಲಜ ಎಂಬ ಹಳ್ಳಿಯಲ್ಲಿ ಕಂಡುಬರುವ ವಿಶಿಷ್ಟವಾದ ಮೆಟ್ಟಿಲು ಬಾವಿ.

ಚಿತ್ರಕೃಪೆ: Notnarayan

ಅಡಿ ಕಡಿ ವಾವ್:

ಅಡಿ ಕಡಿ ವಾವ್:

ಗುಜರಾತಿನ ಜುನಾಗಡ್ ಎಂಬಲ್ಲಿ ಈ ಬೃಹತ್ ಬಾವಿಯನ್ನು ಕಾಣಬಹುದಾಗಿದೆ. ಪ್ರಸ್ತುತ ಇದು ದುಸ್ಥಿತಿಗೆ ತಲುಪಿದ್ದರೂ ಸಹ ಅಂದಿನ ಕಲಾ ಕೌಶಲ್ಯತೆಗೆ ಇದು ಉದಾಹರಣೆಯಾಗಿದೆ.

ಚಿತ್ರಕೃಪೆ: Bernard Gagnon

ಸೂರ್ಯಕುಂಡ:

ಸೂರ್ಯಕುಂಡ:

ಗುಜರಾತಿನ ಮೆಹ್ಸಾನಾ ಬಳಿಯ ಮೋದೆರಾ ಸೂರ್ಯ ದೇವಾಲಯದ ಬಳಿಯಿರುವ ವಿಶಿಷ್ಟವಾದ ಸೂರ್ಯಕುಂಡ ಎಮ್ಬ ಹೆಸರಿನ ಮೆಟ್ಟಿಲು ಬಾವಿ ಅಥವಾ ಕಲ್ಯಾಣಿ.

ಚಿತ್ರಕೃಪೆ: Rashesh d

ಭೋಗ ನಂದೀಶ್ವರ:

ಭೋಗ ನಂದೀಶ್ವರ:

ಕರ್ನಾಟಕದ ನಂದಿ ಬೆಟ್ಟದಲ್ಲಿರುವ ಭೋಗ ನಂದೀಶ್ವರ ದೇವಸ್ಥಾನದಲ್ಲಿರುವ ಮೆಟ್ಟಿಲು ಬಾವಿ ಅಥವಾ ಕಲ್ಯಾಣಿ.

ಚಿತ್ರಕೃಪೆ: Poorniyer

ಮೇಲುಕೋಟೆ:

ಮೇಲುಕೋಟೆ:

ಮಂಡ್ಯ ಜಿಲ್ಲೆಯ ಮೇಲುಕೊಟೆಯ ಚೆಲುವ ನಾರಾಯಣಸ್ವಾಮಿ ದೇವಸ್ಥಾನದಲ್ಲಿರುವ ಮೆಟ್ಟಿಲುಗಳ ಕಲ್ಯಾಣಿ.

ಚಿತ್ರಕೃಪೆ: Ranganatha C

ಮಸ್ಕೀನ್ ಬಾವಿ:

ಮಸ್ಕೀನ್ ಬಾವಿ:

ಗದಗ್ ಜಿಲ್ಲೆಯ ಲಕ್ಕುಂಡಿ ಎಂಬಲ್ಲಿ ಮಸ್ಕೀನ್ ಬಾವಿಯ ಈ ಮೆಟ್ಟಿಲು ಬಾವಿಯನ್ನು ಕಾಣಬಹುದು.

ಚಿತ್ರಕೃಪೆ: Dineshkannambadi

ಅಲಿ ಗೋಶ್ ಬಾವಲಿ:

ಅಲಿ ಗೋಶ್ ಬಾವಲಿ:

ಹರ್ಯಾಣ ರಾಜ್ಯದ ಗುರ್ಗಾಂವ್ ಜಿಲ್ಲೆಯ ಫಾರೂಕ್ ನಗರ ಪಟ್ಟಣದಲ್ಲಿರುವ ಅಷ್ಟಭುಜಾಕೃತಿಯ ಅಲಿ ಗೋಶ್ ಮೆಟ್ಟಿಲು ಬಾವಿ.

ಚಿತ್ರಕೃಪೆ: Anupamg

ಪೆರಲಶೇರಿ:

ಪೆರಲಶೇರಿ:

ಕೇರಳದ ಕಣ್ಣೂರು ಬಳಿಯ ಪೆರಲಶೇರಿ ಎಂಬಲ್ಲಿನ ಸುಬ್ರಮಣ್ಯಸ್ವಾಮಿ ದೇವಸ್ಥಾನದಲ್ಲಿರುವ ಮೆಟ್ಟಿಲು ಬಾವಿ ಅಥವಾ ಕಲ್ಯಾಣಿ.

ಚಿತ್ರಕೃಪೆ: Baburajpm

ಮೈಲಾಡುತುರೈ:

ಮೈಲಾಡುತುರೈ:

ತಮಿಳುನಾಡಿನ ಮೈಲಾಡುತುರೈ ರೈಲ್ವೆ ಜಂಕ್ಷನ್ ಬಳಿಯಿರುವ ವಿಜಯ ನಗರ ಸಾಮ್ರಾಜ್ಯವಿದ್ದ ಸಂದರ್ಭದಲ್ಲಿ ನಿರ್ಮಾಣವಾದ ಕಲ್ಯಾಣಿ ಅಥವಾ ಮೆಟ್ಟಿಲು ಬಾವಿ.

ಚಿತ್ರಕೃಪೆ: Amol.Gaitonde

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X