Search
  • Follow NativePlanet
Share
» »ಈ ಅದ್ಭುತ ಹೋಟೆಲುಗಳಲ್ಲಿ ಬೆಂಗಳೂರಿನ ಸಂಜೆ

ಈ ಅದ್ಭುತ ಹೋಟೆಲುಗಳಲ್ಲಿ ಬೆಂಗಳೂರಿನ ಸಂಜೆ

By Vijay

ಬೆಳೆಯುತ್ತಿರುವ ಬೆಂಗಳೂರು ಮಹಾನಗರದಲ್ಲಿ ದರ್ಶಿನಿ, ಉಪಹಾರಗೃಹ, ರಸ್ತೆ ಬದಿಯ ಖಾನಾವಳಿಗಳಿಗಳು ಎಲ್ಲೆಂದರಲ್ಲಿ ಕಂಡುಬರುತ್ತವೆ. ಮೊದಲೆ ಸಮಯದಭಾವವನ್ನು ಎದುರಿಸುವ ಬಹುತೇಕ ಬೆಂಗಳೂರಿಗರಿಗೆ ಈ ಹೋಟೆಲುಗಳು ಒಂದು ಮಹಾ ವರದಾನವೂ ಸಹ ಹೌದು. ಹಿಂದೆ ಸಾಮಾನ್ಯವಾಗಿ ಹೋಟೆಲುಗಳಿಗೆ ಎಲ್ಲರೂ ಒಟ್ಟಾಗಿ ಕಲೆತು ಉತ್ತಮವಾಗಿ ಸಮಯವನ್ನು ಕಳೆಯುವ ದೃಷ್ಟಿಯಿಂದ ಭೇಟಿ ನೀಡಲಾಗುತ್ತಿತ್ತು.

ವಿಶೇಷ ಲೇಖನ : ಈ ಹೋಟೆಲುಗಳಲ್ಲಿ ಒಂದು ದಿನದ ಶುಲ್ಕ ಲಕ್ಷಗಳಲ್ಲೆ!

ಆದರೆ ಇಂದು ಹೊಟ್ಟೆಯ ಗೋಳನ್ನು ತಣಿಸುವ ಉದ್ದೇಶದಿಂದ ಸರ ಸರ ಎಂದು ದರ್ಶಿನಿಗಳಿಗೆ ಭೇಟಿ ನೀಡಿ ಪಟ ಪಟನೆ ತಿಂದು ಎದ್ದು ಬಿಡುತ್ತೇವೆ. ಆದರೂ ಮನದಲ್ಲೆಲ್ಲೊ ಸಂಗಾತಿಯೊಡನೆ ಇಲ್ಲವೆ ಸ್ನೇಹಿತ, ಬಂಧು ಬಾಂಧವರೊಂದಿಗೆ ರಜೆಯ ಸಂಜೆಯ ಹೊತ್ತನ್ನು ನಿಧಾನದಿಂದ ಸುಂದರವಾದ ಪರಿಸರವಿರುವ ಉತ್ತಮ ಹೋಟೆಲುಗಳಿಗೆ ಭೇಟಿ ನೀಡಿ ವ್ಯಯಿಸಬೇಕೆಂದು ಅನಿಸಿರಲೂಬಹುದು.

ವಿಶೇಷ ಲೇಖನ : ಬೆಂಗಳೂರಿನ ಸಖತ್ ಜನಪ್ರೀಯ ಹೋಟೆಲುಗಳು

ಪಂಚಾತಾರಾ ಹೋಟೆಲುಗಳಲ್ಲಿ ಒಮ್ಮೆಯಾದರೂ ಒಂದು ಸಂಜೆಯ ಹೊತ್ತು ತಿಂದು ತೇಗಿದರೆ, ಮನದಾಳದಲ್ಲಾಗುವ ಆನಂದ ಅಷ್ಟಿಷ್ಟಲ್ಲ. ಹಾಗಾದರೆ ತಡವೇಕೆ ಒಂದು ಸುಂದರ ಸಂಜೆಯ ಸಮಯದಲ್ಲಿ ನಿಮ್ಮ ಬಾಳ ಸಂಗಾತಿಯೊಡನೆ ಬೆಂಗಳೂರಿನಲ್ಲಿರುವ ಕೆಲವು ವಿಶಿಷ್ಟ ಹಾಗೂ ಅದ್ದೂರಿ ಹೋಟೆಲುಗಳಿಗೆ ಭೇಟಿ ನೀಡಿ ಆನಂದ ಹೊಂದಿ. ಸ್ಲೈಡುಗಳ ಮೂಲಕ ನಿಮಗಿಷ್ಟವಾಗುವ ಹೋಟೆಲನ್ನು ಆಯ್ಕೆ ಮಾಡಿಕೊಳ್ಳಿ.

ಬೆಂಗಳೂರಿನ ಅದ್ದೂರಿ ಹೋಟೆಲುಗಳು

ಬೆಂಗಳೂರಿನ ಅದ್ದೂರಿ ಹೋಟೆಲುಗಳು:

ಬೆಂಗಳೂರಿನ ಅದ್ದೂರಿ ಹೋಟೆಲುಗಳು:

ಬೆಂಗಳೂರಿನಲ್ಲಿ ತಿನ್ನಲು ಸಾಕಷ್ಟು ಅದ್ದೂರಿ ಹೋಟೆಲುಗಳನ್ನು ಕಾಣಬಹುದಾಗಿದ್ದರೂ ಇಲ್ಲಿ ಕೆಲವೆ ಕೆಲವು ಹೋಟೆಲುಗಳ ಸುಂದರ ತಿನ್ನುವ ಭೋಜನಾಲಯಗಳ ಕುರಿತು ಮಾತ್ರವೆ ತಿಳಿಸಲಾಗಿದೆ.

ಬೆಂಗಳೂರಿನ ಅದ್ದೂರಿ ಹೋಟೆಲುಗಳು:

ಬೆಂಗಳೂರಿನ ಅದ್ದೂರಿ ಹೋಟೆಲುಗಳು:

ರಿಮ್ ನಾಮ್, ಒಬೇರಾಯ್ : ನಗರದ ಹೃದಯ ಭಾಗದಲ್ಲಿರುವ ಎಂಜಿ ರಸ್ತೆಯ ಮೇಲೆ ನೆಲೆಸಿರುವ ಒಬೇರಾಯ್ ಹೋಟೆಲಿನ ರಿಮ್ ನಾಮ್ ಒಂದು ವಿನೂತನ ಅನುಭವ ನೀಡುವ ಭೋಜನಾಲಯವಾಗಿದೆ. ಇಲ್ಲಿ ಭಾರತೀಯ ಶೈಲಿಯಿಂದ ಹಿಡಿದು ಪಾಶ್ಚಿಮಾತ್ಯ ರಾಷ್ಟ್ರಗಳ ಶೈಲಿಯ ಹಲವಾರು ವ್ಯಂಜನಗಳು ದೊರೆಯುತ್ತವೆ. ಸುಂದರವಾದ ವಾತಾವರಣ ಹೊಂದಿರುವ ಈ ಹೋಟೆಲಿನಲ್ಲಿ ಇಬ್ಬರಿಗೆ ಊಟದ ಶುಲ್ಕವು ಸುಮಾರು 3000 ರೂಪಾಯಿಗಳಷ್ಟಾಗಬಹುದು.

ಚಿತ್ರಕೃಪೆ: ಒಬೇರಾಯ್ ಹೋಟೆಲ್, ಬೆಂಗಳೂರು

ಬೆಂಗಳೂರಿನ ಅದ್ದೂರಿ ಹೋಟೆಲುಗಳು:

ಬೆಂಗಳೂರಿನ ಅದ್ದೂರಿ ಹೋಟೆಲುಗಳು:

ಪರ್ಷಿಯನ್ ಟೆರೇಸ್, ಶೆರಟಾನ್ : ಡಾ.ರಾಜ್ ಕುಮಾರ್ ರಸ್ತೆಯಲ್ಲಿರುವ ಮಲ್ಲೇಶ್ವರಂ-ರಾಜಾಜಿನಗರ ಪ್ರದೇಶದ ಬ್ರಿಗೇಡ್ ಗೇಟ್ ವೇ ಯ ಶೆರಟಾನ್ ಹೋಟೆಲ್ ಒಂದು ಸುಂದರ ಸಂಜೆಯ ಸಮಯವನ್ನು ಸೊಗಸಾಗಿ ಕಳೆಯಲು ಹೇಳಿ ಮಾಡಿಸಿದ ಹಾಗಿದೆ. ವೈವಿಧ್ಯಮಯ ತಿಂಡಿ ತೀರ್ಥಗಳೆಲ್ಲವೂ ಇಲ್ಲಿ ಲಭ್ಯ. ನಿಮ್ಮ ಸಂಗಾತಿಯೊಂದಿಗೆ ಮನದಾಳದ ಮಾತುಗಳನ್ನಾಡುತ್ತ ಹೋಟೆಲಿನ ಸುಂದರ ಪರಿಸರದಲ್ಲಿ ತನ್ಮಯರಾಗಬಹುದು. ಅರೇಬಿಕ ಶೈಲಿಯ ಖಾದ್ಯಗಳಿಗೆ ಇದು ವಿಶೇಷವಾಗಿದೆ. ಈ ಹೋಟೆಲಿನಲ್ಲಿ ಇಬ್ಬರಿಗೆ ಊಟದ ಶುಲ್ಕವು ಸುಮಾರು 2000 ರೂಪಾಯಿಗಳಷ್ಟಾಗಬಹುದು.

ಚಿತ್ರಕೃಪೆ: ಶೆರಟಾನ್ ಹೋಟೆಲ್, ಬೆಂಗಳೂರು

ಬೆಂಗಳೂರಿನ ಅದ್ದೂರಿ ಹೋಟೆಲುಗಳು:

ಬೆಂಗಳೂರಿನ ಅದ್ದೂರಿ ಹೋಟೆಲುಗಳು:

ಬ್ಲೂ ಜಿಂಜರ್, ತಾಜ್ ವೆಸ್ಟ್ ಎಂಡ್ : ಉದ್ಯಮಿಗಳ ಪ್ರಿಯ, ಔದ್ಯೋಗಿಕ ವಲಯದಲ್ಲಿ ಹೆಗ್ಗುರುತಾದ, ನಗರದ ಹಲವು ಪ್ರಮುಖ ವಾಣಿಜ್ಯ ಸಂಕೀರ್ಣಗಳಿಗೆ ಹತ್ತಿರದಲ್ಲಿರುವ ರೇಸ್ ಕೋರ್ಸ್ ರಸ್ತೆಯ ಮೇಲೆ ನೆಲೆಸಿರುವ ತಾಜ್ ವೆಸ್ಟ್ ಎಂಡ್ ಹೋಟೆಲ್ ನ ಬ್ಲೂ ಜಿಂಜರ್ ಹೋಟೆಲ್ ಆಕರ್ಷಕ ಪರಿಸರ ಹೊಂದಿದ್ದು ಸಂಜೆಯ ಸಮಯವನ್ನು ಅದ್ಭುತವಾಗಿ ಕಳೆಯಲು ಹೇಳಿ ಮಾಡಿಸಿದ ಹಾಗಿದೆ. ವಿಯಟ್ನಾಮೀಸ್ ವ್ಯಂಜನಗಳಿಗೆ ಈ ಹೋಟೆಲ್ ವಿಶೇಷವಾಗಿದೆ. ಈ ಹೋಟೆಲಿನಲ್ಲಿ ಇಬ್ಬರಿಗೆ ಊಟದ ಶುಲ್ಕವು ಸುಮಾರು 3200 ರೂಪಾಯಿಗಳಷ್ಟಾಗಬಹುದು.

ಚಿತ್ರಕೃಪೆ: ತಾಜ್ ವೆಸ್ಟ್ ಎಂಡ್

ಬೆಂಗಳೂರಿನ ಅದ್ದೂರಿ ಹೋಟೆಲುಗಳು:

ಬೆಂಗಳೂರಿನ ಅದ್ದೂರಿ ಹೋಟೆಲುಗಳು:

ಗ್ರೇಜ್, ತಾಜ್ ವಿವಾಂತಾ : ತಾಜ್ ವಿವಾಂತಾದ ಗ್ರೇಜ್ ಹೋಟೆಲ್ ಮತ್ತೊಂದು ಉತ್ತಮ ಗುಣಮಟ್ಟದ ಖಾದ್ಯ್ಗಳು ದೊರೆಯುವ ಸ್ಥಳ. ವೈನ್ ಹಾಗೂ ಸಮುದ್ರ ವ್ಯಂಜನಗಳನ್ನು ಮನ ಬಯಸಿದ್ದರೆ ಈ ಹೋಟೆಲ್ ಗೆ ಹೊರಡಿ. ತೆರೆದ ಅಂಗಳದಲ್ಲಿ ಇಲ್ಲವೆ ಟೇಬಲ್ ಗಳ ಮೇಲೆ ಕುಳಿತು ಭಕ್ಷ್ಯಗಳನ್ನು ಭುಜಿಸಿ. ಹೊಟೆಲ್ ಖಾದ್ಯ ಸಿಬ್ಬಂದಿ ವರ್ಗವು ಉತ್ಕೃಷ್ಟವಾದ ಖಾದ್ಯಗಳ ಕುರಿತು ತಿಳಿಸುವಲ್ಲಿ ಸದಾ ಸಿದ್ಧರಿರುತ್ತಾರೆ.

ಚಿತ್ರಕೃಪೆ: ತಾಜ್ ವಿವಾಂತಾ

ಬೆಂಗಳೂರಿನ ಅದ್ದೂರಿ ಹೋಟೆಲುಗಳು:

ಬೆಂಗಳೂರಿನ ಅದ್ದೂರಿ ಹೋಟೆಲುಗಳು:

ಸ್ಪೈಸ್ ಟೆರೇಸ್, ಜೆಡಬ್ಲ್ಯು ಮಾರಿಯಟ್ : ಬೆಂಗಳೂರಿನ ವಿಟ್ಠಲ ಮಲ್ಯ ರಸ್ತೆಯಲ್ಲಿರುವ ಜೆಡಬ್ಲ್ಯು ಮಾರಿಯಟ್ ಹೋಟೆಲ್ ವೈವಿಧ್ಯಮಯ ಖಾದ್ಯಗಳ ರುಚಿಯನ್ನು ಗ್ರಾಹಕರಿಗೆ ಒದಗಿಸುತ್ತದೆ. ಇದರ ಸ್ಪೈಸ್ ಟೆರೇಸ್ ಒಂದು ಸುಂದರ ವಾತಾವರಣವಿರುವ ಹೋಟೆಲ್ ಆಗಿದ್ದು ಶುದ್ಧ ಭಾರತೀಯ ಖಾದ್ಯಗಳ ರುಚಿಯನ್ನು ಇಲ್ಲಿ ಸವಿಯಬಹುದಾಗಿದೆ. ಈ ಹೋಟೆಲಿನಲ್ಲಿ ಇಬ್ಬರಿಗೆ ಊಟದ ಶುಲ್ಕವು ಸುಮಾರು 3000 ರೂಪಾಯಿಗಳಷ್ಟಾಗಬಹುದು.

ಚಿತ್ರಕೃಪೆ: ಜೆಡಬ್ಲ್ಯು ಮಾರಿಯಟ್

ಬೆಂಗಳೂರಿನ ಅದ್ದೂರಿ ಹೋಟೆಲುಗಳು:

ಬೆಂಗಳೂರಿನ ಅದ್ದೂರಿ ಹೋಟೆಲುಗಳು:

ಜಶ್ನ್, ಲೀ ಮೆರಿಡೀಯನ್ : ಬೆಂಗಳೂರಿನ ಸ್ಯಾಂಕಿ ರಸ್ತೆಯಲ್ಲಿರುವ ಲೀ ಮೆರಿಡೀಯನ್ ಹೋಟೆಲ್ ನಗರದ ವಿಹಂಗಮ ನೋಟವನ್ನು ಒದಗಿಸುತ್ತದೆ. ಇಂತಹ ಒಂದು ಸ್ಥಳದಲ್ಲಿ ನಿಮ್ಮ ಸಂಗಾತಿಯೊಡನೆ ಕಲೆತು ರಾತ್ರಿಯ ಊಟ ಸವಿದರೆ...ಆಗುವ ಆನಂದ ಅಷ್ಟಿಷ್ಟಲ್ಲ. ಭಾರತೀಯ ಖಾದ್ಯಗಳಿಂದ ಹಿಡಿದು ಆಧುನಿಕ ಸಮ್ಮಿಶ್ರ ಊಟ ಹಾಗೂ ಜಪಾನಿ ಶೈಲಿಯ ಊಟವನ್ನು ಇಲ್ಲಿ ಸವಿಯಬಹುದು. ಈ ಹೋಟೆಲಿನಲ್ಲಿ ಇಬ್ಬರಿಗೆ ಊಟದ ಶುಲ್ಕವು ಸುಮಾರು 2000 ರೂಪಾಯಿಗಳಷ್ಟಾಗಬಹುದು.

ಚಿತ್ರಕೃಪೆ: ಲೀ ಮರಿಡೀಯನ್

ಬೆಂಗಳೂರಿನ ಅದ್ದೂರಿ ಹೋಟೆಲುಗಳು:

ಬೆಂಗಳೂರಿನ ಅದ್ದೂರಿ ಹೋಟೆಲುಗಳು:

ಅಕ್ವಾ, ದಿ ಪಾರ್ಕ್ : ಶ್ವೇತ ವರ್ಣದಿಂದ ರಾರಾಜಿಸುವ ನಾಲ್ಕಂತಸ್ತಿನ ಬೆಂಗಳೂರಿನ ಎಂಜಿ ರಸ್ತೆಯಲ್ಲಿರುವ ದಿ ಪಾರ್ಕ್ ಹೋಟೆಲಿನ ಅಕ್ವಾ ಒಂದು ಸುಂದರ ಹಾಗೂ ಸುಮಧುರ ಸ್ಥಳವಾಗಿದೆ. ಈಜು ಕೊಳದ ಪಾಕದಲ್ಲಿ ಮೇಣದ ದೀಪದಿಂದ ಅಲಂಕೃತಗೊಂಡ ಟೇಬಲ್ ಗಳು, ರೆಟ್ರೊ ಸಂಗೀತ, ವೈವಿಧ್ಯಮಯ ಮದ್ಯ...ಇವೆಲ್ಲವೂ ನಿಮ್ಮನ್ನು ಮಂತ್ರಮುಗ್ಧರನ್ನಾಗಿಸುತ್ತದೆ. ಈ ಹೋಟೆಲಿನಲ್ಲಿ ಇಬ್ಬರಿಗೆ ಊಟದ ಶುಲ್ಕವು ಸುಮಾರು 3000 ರೂಪಾಯಿಗಳಷ್ಟಾಗಬಹುದು.

ಚಿತ್ರಕೃಪೆ: ದಿ ಪಾರ್ಕ್

ಬೆಂಗಳೂರಿನ ಅದ್ದೂರಿ ಹೋಟೆಲುಗಳು:

ಬೆಂಗಳೂರಿನ ಅದ್ದೂರಿ ಹೋಟೆಲುಗಳು:

ಬಾಯ್ ದಿ ಬ್ಲ್ಯೂ, ಗ್ರ್ಯಾಂಡ್ ಮರ್ಕ್ಯೂರ್ : ಬೆಂಗಳೂರಿನ ಪ್ರತಿಷ್ಠಿತ ಕೋರಮಂಗಲದ ಹಸಿರಿನ ನಡುವೆ ನೆಲೆನಿಂತಿರುವ ಆಧುನಿಕ ಗ್ರ್ಯಾಂಡ್ ಮರ್ಕ್ಯೂರ್ ಹೋಟೆಲ್ ನ ಈಜು ಕೊಳದ ಪಕ್ಕದ ಒಂದು ಸುಂದರ ಸ್ಥಳವೆ ಬಾಯ್ ದಿ ಬ್ಲ್ಯೂ. ಮೊದಲ ಬಾರಿಗೆ ಡೇತ್ ಮಾಡುತ್ತಿದ್ದರೆ ಈ ಸುಂದರ ಸ್ಥಳದಲ್ಲಿ ರಾತ್ರಿಯ ಊಟವು ಎಂದೆಂದಿಗೂ ಅವಿಸಮರಣೀಯವಾಗಿ ಉಳಿಯುತ್ತದೆ. ಈ ಹೋಟೆಲಿನಲ್ಲಿ ಇಬ್ಬರಿಗೆ ಊಟದ ಶುಲ್ಕವು ಸುಮಾರು 2500 ರೂಪಾಯಿಗಳಷ್ಟಾಗಬಹುದು.

ಚಿತ್ರಕೃಪೆ: ಗ್ರ್ಯಾಂಡ್ ಮರ್ಕ್ಯೂರ್

ಬೆಂಗಳೂರಿನ ಅದ್ದೂರಿ ಹೋಟೆಲುಗಳು:

ಬೆಂಗಳೂರಿನ ಅದ್ದೂರಿ ಹೋಟೆಲುಗಳು:

ಬ್ಲ್ಯಾಕ್ ಪೆಪ್ಪರ್ ಲಾಂಜ್, ಕಾಸಾ ಡೀ ಬೆಂಗಳೂರು : ಅಷ್ಟೊಂದಾಗಿ ಸದ್ದು ಮಾಡದಿದ್ದರೂ ಸುಂದರತೆಯಿಂದ ಸಂಪದ್ಭರಿತವಾಗಿರುವ, ಕೋರಮಂಗಲ ಬಡಾವಣೆಯಲ್ಲಿರುವ ಕಾಸಾ ಡೀ ಯ ಬ್ಲ್ಯಾಕ್ ಪೆಪ್ಪರ್ ಲಾಂಜ್ ಒಂದು ಸುಂದರ ರಸಮಯ ಸಂಜೆಯನ್ನು ಕಳೆಯುವಲ್ಲಿ ಸಹಾಯಕವಾಗುತ್ತದೆ. ತೆರೆದ ಛಾವಣಿಯಲ್ಲಿ ಆಗಸದ ನಕ್ಷತ್ರಗಳನ್ನು ನೋಡುತ್ತ, ತಂದೂರಿ ಖಾದ್ಯಗಳನ್ನು ಸವಿಯುತ್ತ ಮಾತನಾಡುತ್ತಿದ್ದರೆ ಸಮಯ ಕಳೆದ ಅರಿವು ಮೂಡುವುದೆ ಇಲ್ಲ ಎಂಬಂತಿರುತ್ತದೆ. ಅಲ್ಲದೆ ಮದ್ಯವೂ ಸಹ ದೊರೆಯುವುದರಿಂದ ಮನಸ್ಸು, ದೇಹಗಳೆರಡೂ ಆನಂದದಲ್ಲಿ ತೇಲಾಡುವುದು ಖಂಡಿತ. ಈ ಹೋಟೆಲಿನಲ್ಲಿ ಇಬ್ಬರಿಗೆ ಊಟದ ಶುಲ್ಕವು ಸುಮಾರು 1500 ರಿಂದ 2000 ರೂಪಾಯಿಗಳಷ್ಟಾಗಬಹುದು.

ಚಿತ್ರಕೃಪೆ: ಕಾಸಾ ಡೀ ಬೆಂಗಳೂರು

ಬೆಂಗಳೂರಿನ ಅದ್ದೂರಿ ಹೋಟೆಲುಗಳು:

ಬೆಂಗಳೂರಿನ ಅದ್ದೂರಿ ಹೋಟೆಲುಗಳು:

ಇನ್ಕಾಂಟೊ, ದಿ ಜುರಿ ವೈಟ್ ಫೀಲ್ಡ್ : ಬೆಂಗಳೂರಿನ ಐಟಿಪಿಎಲ್ ರಸ್ತೆಯಲ್ಲಿರುವ ನವ ನವೀನವಾಗಿ ಜಗಮಗಿಸುವ ಜುರಿ ವೈಟ್ ಫೀಲ್ಡ್ ಹೋಟೆಲ್ ಒಂದು ಉದ್ಯಮಿ ಪ್ರಿಯ ಹೋಟೆಲ್ ಆಗಿದ್ದು ಅದ್ಭುತವಾದ ಆದರಾತಿಥ್ಯಕ್ಕೆ ಹೆಸರುಮಾಡಿದೆ. ಈ ಹೋಟೆಲಿನ ಇನ್ಕಾಂಟೊ ರುಚಿಕರವಾದ ಪಕ್ವಾನಗಳಿಗೆ ಹೆಸರುವಾಸಿಯಾಗಿದ್ದು ನಿಮ್ಮ ಸಂಗಾತಿಯೊಂದಿಗೆ ಒಂದು ದಿನದ ರಾತ್ರಿಯ ಊಟಕ್ಕೆ ತೆರಳಲು ಒಂದು ಸೊಗಸಾದ ಹೋಟೆಲ್ ಆಗಿ ಇದು ಹೊರಹೊಮ್ಮುತ್ತದೆ. ಒಳಾಂಗಣದ ವಿನ್ಯಾಸವು ಅತ್ಯದ್ಭುತವಾಗಿದ್ದು ನಿಮ್ಮ ಸಂಗಾತಿಯು ಮತ್ತಷ್ಟು ಸಂತಸಪಡುವಂತೆ ಮಾಡುತ್ತದೆ. ಈ ಹೋಟೆಲಿನಲ್ಲಿ ಇಬ್ಬರಿಗೆ ಊಟದ ಶುಲ್ಕವು ಸುಮಾರು 2500 ರೂಪಾಯಿಗಳಷ್ಟಾಗಬಹುದು.

ಚಿತ್ರಕೃಪೆ: ದಿ ಜುರಿ ವೈಟ್ ಫೀಲ್ಡ್

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X