Search
  • Follow NativePlanet
Share
» »ದೇಶದ ಆಕರ್ಷಕ ರಾಷ್ಟ್ರೀಯ ಹೆದ್ದಾರಿಗಳು

ದೇಶದ ಆಕರ್ಷಕ ರಾಷ್ಟ್ರೀಯ ಹೆದ್ದಾರಿಗಳು

By Vijay

ವಿಶಾಲವಾದ ಭಾರತ ದೇಶದಲ್ಲಿ ಕಾಶ್ಮೀರದಿಂದ ಹಿಡಿದು ಸಾವಿರಾರು ಕಿ.ಮೀ ಕ್ರಮಿಸುತ್ತ ದಕ್ಷಿಣದ ಕನ್ಯಾಕುಮಾರಿಯವರೆಗೆ ರಸ್ತೆಯ ಮುಖಾಂತರವಾಗಿ ತೆರಳಬಹುದಾಗಿದೆ. ಇದಕ್ಕಾಗಿ ನಾವು ರಾಷ್ಟ್ರೀಯ ಹೆದ್ದಾರಿಗಳನ್ನು ಪ್ರಶಂಸಿಸಲೇಬೇಕು. ಒಂದೊಮ್ಮೆ ಕೇವಲ ಒಂದು ಪಥವನ್ನು ಮಾತ್ರ ಹೊಂದಿತ್ತು ರಾಷ್ಟ್ರೀಯ ಹೆದ್ದಾರಿಗಳು. ಇದರಿಂದ ಸುಗಮವಾದ ಸಂಚಾರಕ್ಕೆ ಅಡ್ಡಿ ಉಂಟಾಗುತ್ತಿತ್ತು ಹಾಗು ಅಮೂಲ್ಯವಾದ ಸಮಯವೂ ವ್ಯರ್ಥವಾಗುತ್ತಿತ್ತು. ಕ್ರಮೇಣವಾಗಿ ಈ ತೊಡಕುಗಳನ್ನು ನಿವಾರಿಸುವ ದೃಷ್ಟಿಯಿಂದ ಎರಡು, ನಾಲ್ಕು ಹಾಗು ಆರು ಪಥಗಳ ರಾಷ್ಟ್ರೀಯ ಹೆದ್ದಾರಿಗಳು ನಿರ್ಮಾಣವಾದವು.

ಪ್ರಸ್ತುತ ಅನೇಕ ರಾಷ್ಟ್ರೀಯ ಹೆದ್ದಾರಿಗಳು ಸುಸಜ್ಜಿತವಾಗಿ ನಿರ್ಮಿಸಲ್ಪಟ್ಟಿದ್ದು ಅವುಗಳ ಮೇಲೆ ಬಸ್ಸೊ, ಕಾರೊ ಇಲ್ಲವೆ ಬೈಕುಗಳ ಮೇಲೆ ಜುಮ್ಮೆಂದು ಪ್ರಯಾಣಿಸುವಾಗ ಆಗುವ ಆನಂದ ಹೇಳತೀರದು. ಸ್ವಂತವಾಗಿ ಕಾರು ಇಲ್ಲವೆ ಬೈಕುಗಳ ಮೂಲಕ ಪ್ರವಾಸ ಮಾಡುವ ಪ್ರವಾಸಿಪ್ರಿಯ ಪ್ರವಾಸಿಗರಿಗಂತೂ ಈ ಹೆದ್ದಾರಿಗಳು ವರದಾನವಾಗಿ ಲಭಿಸಿದೆ. ಪ್ರಸ್ತುತ ಲೇಖನದ ಮೂಲಕ ಭಾರತದಲ್ಲಿ ಕಂಡುಬರುವ ಸಾಕಷ್ಟು ರಾಷ್ಟ್ರೀಯ ಹೆದ್ದಾರಿಗಳ ಪೈಕಿ ಕೆಲವು ಆಕರ್ಷಕ ರಸ್ತೆಗಳ ಸುಂದರ ನೋಟಗಳನ್ನು ಸವಿಯೋಣ.

ರಾಷ್ಟ್ರೀಯ ಹೆದ್ದಾರಿ 1:

ರಾಷ್ಟ್ರೀಯ ಹೆದ್ದಾರಿ 1:

ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 1 ದೇಶದ ರಾಜಧಾನಿಯಾದ ದೆಹಲಿಯನ್ನು ಭಾರತ-ಪಾಕಿಸ್ತಾನ ಗಡಿಯಲ್ಲಿರುವ ಪಂಜಾಬ್ ರಾಜ್ಯದ ಅಟ್ಟಾರಿ ಪಟ್ಟಣದೊಂದಿಗೆ ಬೆಸೆಯುತ್ತದೆ.

ಚಿತ್ರಕೃಪೆ: Ekabhishek

ರಾಷ್ಟ್ರೀಯ ಹೆದ್ದಾರಿ 1D:

ರಾಷ್ಟ್ರೀಯ ಹೆದ್ದಾರಿ 1D:

ಶ್ರೀನಗರ - ಲೇಹ್ ಹೆದ್ದಾರಿ ಎಂತಲೂ ಕರೆಯಲ್ಪಡುವ ಈ ರಾಷ್ಟ್ರೀಯ ಹೆದ್ದಾರಿಯು ಶ್ರೀನಗರ ಹಾಗು ಲಡಾಖ್ ನ ಲೇಹ್ ವನ್ನು ಸಂಪರ್ಕಿಸುತ್ತದೆ.

ಚಿತ್ರಕೃಪೆ: Kondephy

ರಾಷ್ಟ್ರೀಯ ಹೆದ್ದಾರಿ 2:

ರಾಷ್ಟ್ರೀಯ ಹೆದ್ದಾರಿ 2:

ದೆಹಲಿ - ಕೊಲ್ಕತ್ತಾ ರಸ್ತೆ ಎಂದು ಕರೆಯಲ್ಪಡುವ ಈ ರಾಷ್ಟ್ರೀಯ ಹೆದ್ದಾರಿಯು ದೆಹಲಿ, ಹರಿಯಾಣ, ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್ ಹಾಗು ಪಶ್ಚಿಮ ಬಂಗಾಳದ ರಾಜ್ಯಗಳಲ್ಲಿ ಹರಡಿದೆ.

ಚಿತ್ರಕೃಪೆ: Raulcaeser

ರಾಷ್ಟ್ರೀಯ ಹೆದ್ದಾರಿ 3:

ರಾಷ್ಟ್ರೀಯ ಹೆದ್ದಾರಿ 3:

ಇದನ್ನು ಸಾಮಾನ್ಯವಾಗಿ ಮುಂಬೈ - ಆಗ್ರಾ ಹೆದ್ದಾರಿ ಎಂದು ಕರೆಯಲಾಗುತ್ತದೆ. ಈ ರಸ್ತೆಯು ಉತ್ತರ ಪ್ರದೇಶ, ರಾಜಸ್ಥಾನ, ಮಧ್ಯ ಪ್ರದೇಶ ಹಾಗು ಮಹಾರಾಷ್ಟ್ರ ರಾಜ್ಯಗಳಲ್ಲಿ ಹರಡಿದೆ.

ಚಿತ್ರಕೃಪೆ: Hkore

ರಾಷ್ಟ್ರೀಯ ಹೆದ್ದಾರಿ 4:

ರಾಷ್ಟ್ರೀಯ ಹೆದ್ದಾರಿ 4:

ಮಹಾರಾಷ್ಟ್ರದ ಮುಂಬೈಯಿಂದ ದಕ್ಷಿಣ ಭಾರತದ ಚೆನ್ನೈ ನಗರವನ್ನು ಸಂಪರ್ಕಿಸುವ ಈ ಹೆದ್ದಾರಿಯು ಹತ್ತು ಅತಿ ಜನಸಂಖ್ಯೆಯುಳ್ಳ ಪಟ್ಟಣಗಳ ಮೂಲಕ ಚಲಿಸುತ್ತದೆ. ಕರ್ನಾಟಕದಲ್ಲಿ ಪುಣಾ - ಬೆಂಗಳೂರು ರಸ್ತೆ ಎಂದೆ ಜನಜನಿತವಾಗಿರುವ ಈ ರಸ್ತೆಯು ಮುಂಬೈ, ಪುಣೆ, ಬೆಳಗಾವಿ, ಬೆಂಗಳೂರು ಹಾಗು ಚೆನ್ನೈ ನಗರಗಳನ್ನು ಬೆಸೆಯುತ್ತದೆ.

ಚಿತ್ರಕೃಪೆ: Balaji.B

ರಾಷ್ಟ್ರೀಯ ಹೆದ್ದಾರಿ 5:

ರಾಷ್ಟ್ರೀಯ ಹೆದ್ದಾರಿ 5:

ಪೂರ್ವ ಕರಾವಳಿ ತೀರದ ಒಡಿಶಾ, ಆಂಧ್ರ ಹಾಗು ತಮಿಳುನಾಡಿನಲ್ಲಿ ಚಾಚಿದೆ ಈ ಹೆದ್ದಾರಿ. ಒಡಿಶಾದ ಝರ್ಪೋಕಾರಿಯಾವನ್ನು ಚೆನ್ನೈ ನಗರದೊಂದಿಗೆ ಬೆಸೆಯುತ್ತದೆ. ಒಟ್ಟಾರೆ ಉದ್ದ 1533 ಕಿ.ಮೀ.

ಚಿತ್ರಕೃಪೆ: Enthusiast10

ರಾಷ್ಟ್ರೀಯ ಹೆದ್ದಾರಿ 7:

ರಾಷ್ಟ್ರೀಯ ಹೆದ್ದಾರಿ 7:

ಉತ್ತರ - ದಕ್ಷಿಣದ ಪ್ರಮುಖ ರಾಷ್ಟ್ರೀಯ ಹೆದ್ದಾರಿ ಇದಾಗಿದ್ದು ಉತ್ತರ ಪ್ರದೇಶ, ಮಧ್ಯ ಪ್ರದೇಶ, ಮಹಾರಾಷ್ಟ್ರ, ಆಂಧ್ರ ಪ್ರದೇಶ, ಕರ್ನಾಟಕ ಹಾಗು ತಮಿಳುನಾಡು ರಾಜ್ಯಗಳನ್ನು ಸಂಪರ್ಕಿಸುತ್ತದೆ. ಇದರ ಒಟ್ಟಾರೆ ಉದ್ದ 2,369 ಕಿ.ಮೀ.

ಚಿತ್ರಕೃಪೆ: arunpnair

ರಾಷ್ಟ್ರೀಯ ಹೆದ್ದಾರಿ 8:

ರಾಷ್ಟ್ರೀಯ ಹೆದ್ದಾರಿ 8:

ಭಾರತದ ರಾಜಧಾನಿಯಾದ ದೆಹಲಿಯನ್ನು ಭಾರತದ ವಾಣಿಜ್ಯ ರಾಜಧಾನಿಯಾದ ಮುಂಬೈನೊಂದಿಗೆ ಬೆಸೆಯುತ್ತದೆ ಈ ಹೆದ್ದಾರಿ. ಇದರ ಒಟ್ಟಾರೆ ಉದ್ದ 1428 ಕಿ.ಮೀ.

ಚಿತ್ರಕೃಪೆ: Lisa.davis

ರಾಷ್ಟ್ರೀಯ ಹೆದ್ದಾರಿ 11:

ರಾಷ್ಟ್ರೀಯ ಹೆದ್ದಾರಿ 11:

ಉತ್ತರ ಪ್ರದೇಶದ ಆಗ್ರಾ ಪಟ್ಟಣವನ್ನು ರಾಜಸ್ಥಾನದ ಬಿಕಾನೇರ್ ಪಟ್ಟಣದೊಂದಿಗೆ ಸಂಪರ್ಕಿಸುತ್ತದೆ ಈ ಹೆದ್ದಾರಿ. ಇದರ ಒಟ್ಟಾರೆ ಉದ್ದ 582 ಕಿ.ಮೀ.

ಚಿತ್ರಕೃಪೆ: Haros

ರಾಷ್ಟ್ರೀಯ ಹೆದ್ದಾರಿ 13:

ರಾಷ್ಟ್ರೀಯ ಹೆದ್ದಾರಿ 13:

ಮಹಾರಾಷ್ಟ್ರದ ಸೋಲಾಪುರ ಪಟ್ಟಣವನ್ನು ಕರ್ನಾಟಕದ ಬಂದರು ನಗರಿ ಮಂಗಳೂರಿನೊಂದಿಗೆ ಸಂಪರ್ಕಿಸುತ್ತದೆ ಈ ಹೆದ್ದಾರಿ. ಇದರ ಒಟ್ಟಾರೆ ಉದ್ದ 691 ಕಿ.ಮೀ.

ಚಿತ್ರಕೃಪೆ: Tomas Belcik

ರಾಷ್ಟ್ರೀಯ ಹೆದ್ದಾರಿ 17:

ರಾಷ್ಟ್ರೀಯ ಹೆದ್ದಾರಿ 17:

ಪಶ್ಚಿಮ ಘಟ್ಟದ ಪಶ್ಚಿಮ ಕರಾವಳಿಯ ಮೂಲಕ ಸಾಗುವ ಈ ಹೆದ್ದರಿಯು ಮಹಾರಾಷ್ಟ್ರದ ಪನ್ವೇಲ್ ಅನ್ನು ಕೇರಳದ ಕೊಚ್ಚಿಯೊಂದಿಗೆ ಸಂಪರ್ಕಿಸುತ್ತದೆ. ಇದರ ಒಟ್ಟಾರೆ ಉದ್ದ 1269 ಕಿ.ಮೀ.

ಚಿತ್ರಕೃಪೆ: Rajaramraok

ರಾಷ್ಟ್ರೀಯ ಹೆದ್ದಾರಿ 22:

ರಾಷ್ಟ್ರೀಯ ಹೆದ್ದಾರಿ 22:

ಅಂಬಾಲಾ ಮೂಲಕ ಪ್ರಾರಂಭವಾಗುವ ಈ ರಸ್ತೆಯು ಚಂಡೀಗಡ್ ಮೂಲಕ ಹಿಮಾಚಲ ಪ್ರದೇಶದಲ್ಲಿ ಹರಡಿದ್ದು ಚೀನಾ ಗಡಿ ಹತ್ತಿರವಿರುವ ಖಬ್ ಎಂಬಲ್ಲಿ ಸಂಪೂರ್ಣಗೊಳ್ಳುತ್ತದೆ. ಹಲವು ಕಣಿವೆ ಪ್ರದೇಶಗಳ ಮೂಲಕ ಸಾಗುವ ರಸ್ತೆ ಕೆಲವು ಕಡೆ ಕಿರಿದಾಗಿದ್ದು ತಲೆ ತಿರುಗಿಸುವಂತೆ ಮಾಡುತ್ತದೆ. ಇದರ ಒಟ್ಟಾರೆ ಉದ್ದ 459 ಕಿ.ಮೀ.

ಚಿತ್ರಕೃಪೆ: Manojkhurana

ರಾಷ್ಟ್ರೀಯ ಹೆದ್ದಾರಿ 31:

ರಾಷ್ಟ್ರೀಯ ಹೆದ್ದಾರಿ 31:

ಈಶಾನ್ಯ ಭಾರತದ ರಾಜ್ಯಗಳನ್ನು ಸಂಪರ್ಕಿಸುತ್ತದೆ ಈ ಹೆದ್ದಾರಿ. ಬರ್ಹಿಯಿಂದ ಪ್ರ್ರರಂಭವಾಗುವ ಹೆದ್ದಾರಿ ಗುವಾಹಟಿಯವರೆಗೆ ಹರಡಿದೆ. ಇದರ ಒಟ್ಟಾರೆ ಉದ್ದ 1125 ಕಿ.ಮೀ.

ಚಿತ್ರಕೃಪೆ: Tanmoy Bhaduri

ರಾಷ್ಟ್ರೀಯ ಹೆದ್ದಾರಿ 43:

ರಾಷ್ಟ್ರೀಯ ಹೆದ್ದಾರಿ 43:

ಈ ಹೆದ್ದಾರಿಯು ಆಂಧ್ರದ ನಟವಲಸಾವನ್ನು ಛತ್ತೀಸ್ ಗಡ್ ನರಾಯ್ಪುರ್ ನೊಂದಿಗೆ ಬೆಸೆಯುತ್ತದೆ. ಇದರ ಒಟ್ಟಾರೆ ಉದ್ದ 551 ಕಿ.ಮೀ.

ಚಿತ್ರಕೃಪೆ: Paalappoo

ರಾಷ್ಟ್ರೀಯ ಹೆದ್ದಾರಿ 45:

ರಾಷ್ಟ್ರೀಯ ಹೆದ್ದಾರಿ 45:

ಗ್ರ್ಯಾಂಡ್ ಸದರ್ನ್ ಟ್ರಂಕ್ ರೋಡ್ ಎಂದು ಕರೆಯಲ್ಪಡುವ ಈ ಹೆದ್ದಾರಿಯು 472 ಕಿ.ಮೀ ಉದ್ದವಿದ್ದು ಚೆನ್ನೈನ ಗಿಂಡಿ ಜಂಕ್ಷನ್ ಬಳಿಯ ಕತಿಪಾರಾದಿಂದ ಪ್ರಾರಂಭವಾಗಿ ತೇಣಿಯವರೆಗಿದೆ.

ಚಿತ್ರಕೃಪೆ: Ashok Prabhakaran

ರಾಷ್ಟ್ರೀಯ ಹೆದ್ದಾರಿ 46:

ರಾಷ್ಟ್ರೀಯ ಹೆದ್ದಾರಿ 46:

ತಮಿಳುನಾಡಿನಲ್ಲಿರುವ ಈ ಹೆದ್ದಾರಿಯು ಕೃಷ್ಣಗಿರಿಯಿಂದ ಪ್ರಾರಂಭವಾಗಿ ವಾಲಾಜಾಪೇಟ್ ವರೆಗಿದೆ. ಒಟ್ಟು ಉದ್ದ 148 ಕಿ.ಮೀ.

ಚಿತ್ರಕೃಪೆ: Immanueldc

ರಾಷ್ಟ್ರೀಯ ಹೆದ್ದಾರಿ 47:

ರಾಷ್ಟ್ರೀಯ ಹೆದ್ದಾರಿ 47:

ಒಟ್ಟಾರೆ ಉದ್ದ 620 ಕಿ.ಮೀ ಇರುವ ಈ ರಾಷ್ಟ್ರೀಯ ಹೆದ್ದಾರಿಯು ತಮಿಳುನಾಡಿನ ಸೇಲಂ ಅನ್ನು ಕನ್ಯಾಕುಮಾರಿಯೊಂದಿಗೆ ಸಂಪರ್ಕಿಸುತ್ತದೆ.

ಚಿತ್ರಕೃಪೆ: Smokingsingh

ರಾಷ್ಟ್ರೀಯ ಹೆದ್ದಾರಿ 67:

ರಾಷ್ಟ್ರೀಯ ಹೆದ್ದಾರಿ 67:

ಕರ್ನಾಟಕ ಹಾಗು ತಮಿಳುನಾಡು ರಾಜ್ಯಗಳನ್ನು ಸಂಪರ್ಕಿಸುತ್ತದೆ ಈ ಹೆದ್ದಾರಿ. ತಮಿಳುನಾಡಿನ ಕರಾವಳಿ ಪ್ರದೇಶ ನಾಗಪಟ್ಟಿನಾಂನಿಂದ ಪ್ರಾರಂಭವಾಗುವ ರಸ್ತೆ ಕರ್ನಾಟಕದ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯವರೆಗಿದೆ.

ಚಿತ್ರಕೃಪೆ: Incrazy

ರಾಷ್ಟ್ರೀಯ ಹೆದ್ದಾರಿ 68:

ರಾಷ್ಟ್ರೀಯ ಹೆದ್ದಾರಿ 68:

ಕೇವಲ ತಮಿಳನಾಡು ರಾಜ್ಯದಲ್ಲೆ ಚಾಚಿದೆ ಈ ರಾಷ್ಟ್ರೀಯ ಹೆದ್ದಾರಿ. ಉಳುಂದೂರುಪೆಟ್ಟೈ ಹಾಗು ಸೇಲಂ ಗಳನ್ನು ಸಂಪರ್ಕಿಸುವ ರಸ್ತೆಯ ಉದ್ದ 134 ಕಿ.ಮೀ. ಅಲ್ಲದೆ ಈ ರಸ್ತೆಯು ರಾಷ್ಟ್ರೀಯ ಹೆದ್ದಾರಿ ಸಂಖ್ಯೆ7 ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 4 ಗಳನ್ನೂ ಕೂಡ ಸಂಪರ್ಕಿಸುತ್ತದೆ.

ಚಿತ್ರಕೃಪೆ: Thamizhpparithi Maari

ರಾಷ್ಟ್ರೀಯ ಹೆದ್ದಾರಿ 76:

ರಾಷ್ಟ್ರೀಯ ಹೆದ್ದಾರಿ 76:

ಈ ಹೆದ್ದಾರಿಯು ಉತ್ತರ ಪ್ರದೇಶದ ಅಲಹಾಬಾದ್ ನಗರವನ್ನು ರಾಜಸ್ಥಾನದ ಪಿಂಡ್ವಾರಾ ಪಟ್ಟಣದೊಂದಿಗೆ ಸಂಪರ್ಕಿಸುತ್ತದೆ. ಇದರ ಒಟ್ಟಾರೆ ಉದ್ದ 1007 ಕಿ.ಮೀ.

ಚಿತ್ರಕೃಪೆ: Daniel Villafruela

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X