Search
  • Follow NativePlanet
Share
» »ಬಂಕಾಪುರದಲ್ಲಿ ನವಿಲು ನಾಟ್ಯ...

ಬಂಕಾಪುರದಲ್ಲಿ ನವಿಲು ನಾಟ್ಯ...

ಸಾಮಾನ್ಯವಾಗಿ ಗಂಡು ಪಕ್ಷಿಗಿಂತ ಹೆಣ್ಣು ಹೆಚ್ಚು ಆಕರ್ಷಕವಾಗಿರುತ್ತದೆ. ಆದರೆ ನವಿಲು ಜಾತಿಯಲ್ಲಿ ಹಾಗಿಲ್ಲ. ಇದು ಸ್ವಲ್ಪ ಭಿನ್ನ. ಹೆಣ್ಣಿಗಿಂತ ಗಂಡೇ ಹೆಚ್ಚು ಸುಂದರವಾಗಿರುತ್ತದೆ.

By Divya

ಸಾಮಾನ್ಯವಾಗಿ ಗಂಡು ಪಕ್ಷಿಗಿಂತ ಹೆಣ್ಣು ಹೆಚ್ಚು ಆಕರ್ಷಕವಾಗಿರುತ್ತದೆ. ಆದರೆ ನವಿಲು ಜಾತಿಯಲ್ಲಿ ಹಾಗಿಲ್ಲ. ಇದು ಸ್ವಲ್ಪ ಭಿನ್ನ. ಹೆಣ್ಣಿಗಿಂತ ಗಂಡೇ ಹೆಚ್ಚು ಸುಂದರವಾಗಿರುತ್ತದೆ. ಉದ್ದನೆಯ ಗರಿಗಳನ್ನು ಬಿಚ್ಚಿ ನೃತ್ಯ ಮಾಡುತ್ತಿದ್ದರೆ ಆ ಸೊಬಗನ್ನು ಬಣ್ಣಿಸಲಸಾಧ್ಯ. ಅದೇನಿದ್ದರೂ ಕಣ್ತುಂಬಿಕೊಳ್ಳಬೇಕಷ್ಟೇ. ವಾರಾಂತ್ಯದಲ್ಲಿ ಮಕ್ಕಳಿಗೆ ಈ ರೀತಿಯ ವಿಶೇಷ ಪಕ್ಷಿಗಳ ಪರಿಚಯ ಮಾಡಿಕೊಟ್ಟರೆ ಅದೆಷ್ಟು ಚೆನ್ನ ಅಲ್ಲವಾ? ಅವರಿಗೂ ಒಂದು ರೀತಿಯ ಖುಷಿ.

ಬೆಂಗಳೂರಿನಿಂದ 355.6 ಕಿ.ಮೀ. ದೂರದಲ್ಲಿರುವ ಬಂಕಾಪುರ ನವಿಲುಧಾಮ ರಾಷ್ಟ್ರೀಯ ನವಿಲು ಧಾಮದಲ್ಲೊಂದು. ಹಾವೇರಿ ಜಿಲ್ಲೆ, ಶಿಗ್ಗಾಂವಿ ತಾಲೂಕಿನಲ್ಲಿರುವ ನವಿಲು ಧಾಮ, ಹಾವೇರಿಯಿಂದ 22 ಕಿ.ಮೀ. ಹಾಗೂ ತಾಲೂಕು ಕೇಂದ್ರದಿಂದ 12 ಕಿ.ಮೀ. ದೂರದಲ್ಲಿದೆ. ನವಿಲುಗಳ ರಕ್ಷಣೆಗಾಗಿ ರಚಿತವಾದ ಈ ಧಾಮ 139 ಎಕರೆ ಪ್ರದೇಶದಲ್ಲಿ ಹರಡಿಕೊಂಡಿದೆ. ಇದಕ್ಕೆ ಹತ್ತಿರದಲ್ಲೇ ಒಂದು ಕೋಟೆ ಇದೆ. ಇದರ ಸುತ್ತಲು ಇರುವ ಜಾಲಿ ಮತ್ತು ಹಿಪ್ಪೆ ಮರಗಳು ಇಲ್ಲಿಯ ನವಿಲುಗಳಿಗೆ ಒಂದು ಆಶ್ರಯ ತಾಣ.

Bankapura Peacock Sanctuary in Haveri

PC: wikipedia.org

1963ರಲ್ಲಿ ಕೇಂದ್ರ ಸರ್ಕಾರ ನವಿಲನ್ನು ರಾಷ್ಟ್ರೀಯ ಪಕ್ಷಿ ಎಂದು ಘೋಷಿಸಿದ ಬಳಿಕ, 1972ರ ವನ್ಯ ಜೀವಿ ಕಾಯ್ದೆಯಡಿ ಈ ನವಿಲು ಧಾಮವನ್ನು ನಿರ್ಮಿಸಲಾಯಿತು ಎನ್ನಲಾಗುತ್ತದೆ. 2001ರಲ್ಲಿ ಇದನ್ನು ಅಧಿಕೃತವಾಗಿ ನವಿಲು ಧಾಮ ಎಂದು ಘೋಷಿಸಲಾಯಿತು. ನವಿಲುಗಳ ಸಂರಕ್ಷಣೆ ಹಾಗೂ ಸಂತಾನವೃದ್ಧಿ ಕೇಂದ್ರವಾಗಿ ಇದು ಪ್ರಾಮುಖ್ಯತೆ ಪಡೆದಿದೆ. ಇಲ್ಲಿ ಸುಮಾರು ಒಂದು ಸಾವಿರ ನವಿಲುಗಳು ಇವೆ ಎಂದು ಅಂದಾಜಿಸಲಾಗಿದೆ.

<strong>ಎಷ್ಟು ಸುಂದರ, ಹಾವೇರಿಯ ಸಿದ್ಧೇಶ್ವರ!</strong>ಎಷ್ಟು ಸುಂದರ, ಹಾವೇರಿಯ ಸಿದ್ಧೇಶ್ವರ!

Bankapura Peacock Sanctuary in Haveri

PC: wiki2.org

ಮನುಷ್ಯರ ಓಡಾಟ ಕಡಿಮೆ ಪ್ರಮಾಣದಲ್ಲಿರುವುದಕ್ಕೆ ಇದೊಂದು ಉತ್ತಮ ನೆಲೆಯಾಗಿ ಮಾರ್ಪಟ್ಟಿದೆ. 2009ರ ವೇಳೆ ಇಲ್ಲಿ ಕೇವಲ 400 ನವಿಲುಗಳಿದ್ದವು. ಇದೀಗ ಸಾವಿರದ ಸಂಖ್ಯೆ ಪಡೆದಿರುವುದು ಹೆಮ್ಮೆಯ ವಿಚಾರ. ಈ ಧಾಮದಲ್ಲಿ ನವಿಲನ್ನು ಹೊರತು ಪಡಿಸಿದರೆ ಮರಕುಟಿಕ, ಗೂಬೆ, ಬ್ಯಾಬ್ಲರ್, ಮಡಿವಾಳ ಹಕ್ಕಿ, ನೊಣ ಹಿಡುಕ, ನೈಟ್ ಜಾರ್, ಚುಕ್ಕೆ ಮುನಿಯ, ಬಾಲದಂಡೆ ಹಕ್ಕಿ, ಇಂಡಿಯನ್ ರಾಬಿನ್, ಸ್ಪಾಟೆಡ್ ಡವ್, ಗಿಳಿ, ಮಿಂಚುಳ್ಳಿ, ಬೂದು ಮಂಗಟ್ಟೆ ಹಾಗೂ ದರ್ಜಿ ಹಕ್ಕಿ ಸೇರಿದಂತೆ ಅನೇಕ ಪಕ್ಷಿಗಳನ್ನು ಕಾಣಬಹುದು.

Bankapura Peacock Sanctuary in Haveri

PC: wikipedia.org

ಈ ತಾಣಕ್ಕೆ ಭೇಟಿ ನೀಡಲು ಪ್ರತಿ ದಿನ ಬೆಳಗ್ಗೆ 9 ರಿಂದ ಸಂಜೆ 5ರವರೆಗೆ ಅವಕಾಶವಿರುತ್ತದೆ. ಈ ಪಕ್ಷಿಧಾಮಕ್ಕೆ ಬಂದರೆ ಹತ್ತಿರ ಇರುವ ನಾಗೇಶ್ವರ ದೇಗುಲ ಹಾಗೂ ಬಂಕಾಪುರ ಕೋಟೆಯನ್ನು ನೋಡಬಹುದು.

Read more about: haveri bangalore
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X