Search
  • Follow NativePlanet
Share
» »ಬೆಂಗಳೂರಿನಿಂದ ಶಿವಮೊಗ್ಗಗೆ ದೀರ್ಘವಾದ ಪಯಣ

ಬೆಂಗಳೂರಿನಿಂದ ಶಿವಮೊಗ್ಗಗೆ ದೀರ್ಘವಾದ ಪಯಣ

ಬೆಂಗಳೂರು ಪ್ರವಾಸಿಗರ ಸ್ವರ್ಗ ಎಂದೇ ಖ್ಯಾತವಾಗಿದೆ. ಇಲ್ಲಿ ಆನೇಕ ಆಕರ್ಷಣಿಯ ಸ್ಥಳಗಳಾದ ಜವಹರಲಾಲ್ ನೆಹರು ಪ್ಲಾನೇಟೊರಿಯಮ್, ಲಾಲ್‍ಬಾಗ್, ಕಬ್ಬನ್ ಪಾರ್ಕ್, ಅಕ್ವೇರಿಯಮ್, ವೆಂಕಟಪ್ಪಾ ಆರ್ಟ್ ಗ್ಯಾಲರಿ, ವಿಧಾನ ಸೌಧ ಮತ್ತು ಬನ್ನೇರುಘಟ್ಟ ನ್ಯಾಷನ

ವಾರಾಂತ್ಯವಾದ್ದರಿಂದ ಯಾವುದಾದರೂ ಸುಂದರ ಪ್ರದೇಶದಲಿರಲು ನಿಮ್ಮ ಮನಸ್ಸು ಹತೋರೆಯುತ್ತಿರಬಹುದು. ಪ್ರವಾಸವೆಂದರೆ ಹಾಗೇ ಕೆಲವು ದಿನಗಳು ಜೀವನದ ಎಲ್ಲಾ ಒತ್ತಡಗಳನ್ನು ಮರೆತು ತಮ್ಮ ಕುಟುಂಬ, ಸ್ನೇಹಿತರ ಹಾಗೂ ಸಂಗಾತಿಯೊಂದಿಗೆ ಒಂದು ಅದ್ಭುತ ಲೋಕಕ್ಕೆ ತೆರಳುವುದೇ ಆಗಿದೆ. ಅಂತಹ ಆನಂದವನ್ನು ಕುಟುಂಬಿಕರೊಂದಿಗೆ ಪಡೆಯಬೇಕು ಎಂಬುದು ನಿಮ್ಮ ಹಂಬಲವಾಗಿದ್ದರೆ,ಬೆಂಗಳೂರಿನಿಂದ ಶಿವಮೊಗ್ಗದ ಹಾದಿಯಲ್ಲಿ ಹಲವಾರು ದೇವಾಲಯಗಳು, ನೋಡಲೇಬೇಕಾದ ಪ್ರಸಿದ್ದವಾದ ಸ್ಥಳಗಳಿವೆ. ಬೆಂಗಳೂರಿನಿಂದ ಶಿವಮೊಗ್ಗಗೆ ಸುಮಾರು 275 ಕಿ,ಮೀ ದೂರದಲ್ಲಿದ್ದು ಪ್ರಸುತ್ತ ಈ ಲೇಖನದ ಮೂಲಕ ತಿಳಿದು ಒಮ್ಮೆ ನಿಮಗೆ ಇಷ್ಟವಾದ ಪ್ರದೇಶಕ್ಕೆ ಭೇಟಿ ಕೊಟ್ಟು ಬನ್ನಿ.

ಬೆಂಗಳೂರು

PC:Omshivaprakash H L

ಬೆಂಗಳೂರಿನ ಪ್ರಸಿದ್ದ ಆರ್ಕಣೆಗಳು

 ಲಾಲ್‍ಬಾಗ್

PC:Bala Gopalan

ಬೆಂಗಳೂರು ಪ್ರವಾಸಿಗರ ಸ್ವರ್ಗ ಎಂದೇ ಖ್ಯಾತವಾಗಿದೆ. ಇಲ್ಲಿ ಆನೇಕ ಆಕರ್ಷಣಿಯ ಸ್ಥಳಗಳಾದ ಜವಹರಲಾಲ್ ನೆಹರು ಪ್ಲಾನೇಟೊರಿಯಮ್, ಲಾಲ್‍ಬಾಗ್, ಕಬ್ಬನ್ ಪಾರ್ಕ್, ಅಕ್ವೇರಿಯಮ್, ವೆಂಕಟಪ್ಪಾ ಆರ್ಟ್ ಗ್ಯಾಲರಿ, ವಿಧಾನ ಸೌಧ ಮತ್ತು ಬನ್ನೇರುಘಟ್ಟ ನ್ಯಾಷನಲ್ ಪಾರ್ಕ್‍ಗಳನ್ನು ಇಲ್ಲಿ ಕಾಣಬಹುದು. ಇವೆಲ್ಲಾ ಬೆಂಗಳೂರಿನ ಪ್ರಸಿದ್ದ ತಾಣಗಳಾಗಿದ್ದು, ದೇಶ ವಿದೇಶಗಳಿಂದ ಬೆಂಗಳೂರಿನ ಪ್ರವಾಸ ಮಾಡುತ್ತಾರೆ. ಬೆಂಗಳೂರು ನಟ ನಟಿಯರಿಗೂ ಅಚ್ಚು ಮೆಚ್ಚಿನ ತಾಣವಾಗಿದೆ. ಬೆಂಗಳೂರು ಬಹುಮುಖಿಯ ಸಂಸ್ಕøತಿ ಹೊಂದಿರುವ ಕಾರಣ, ವಿವಿಧ ಬಗೆಯ ಖಾದ್ಯಗಳನ್ನು ಕೂಡ ಇಲ್ಲಿ ಅಸ್ವಾಧಿಸಬಹುದು. ಬೀದಿ ತಿನಿಸುಗಳಿಂದ ಹಿಡಿದು ಅಂತಾರಾಷ್ಟ್ರೀಯ ಮಟ್ಟದವರೆಗಿನ ತಿನಿಸುಗಳು ಕೂಡ ಇಲ್ಲಿ ಲಭ್ಯ. ಇಲ್ಲಿ ಇತರೆ ರಾಜ್ಯಗಳ ಖಾದ್ಯವೂ ಕೂಡ ದೊರೆಯುವುದನ್ನು ಕಾಣಬಹುದಾಗಿದೆ. ಈ ತಾಣವೆಲ್ಲವನ್ನೂ ಸವಿದು ತುಮಕೂರಿನ ಕಡೆ ಹೋರಟರೆ ಸುಂದರ ಪ್ರವಾಸವನ್ನು ನೀವು ಸವಿಯಬಹುದು.

ತುಮಕೂರಿನ ಪ್ರಸಿದ್ದ ಆಕರ್ಷಣೆಗಳು

 ತುಮಕೂರು

PC:Srinivasa83

ಬೆಂಗಳೂರಿನಿಂದ ಸುಮಾರು 65 ಕಿ,ಮೀ ಗಳಷ್ಟು ದೂರದಲ್ಲಿರುವ ತುಮಕೂರು ಹಲವು ಆಕರ್ಷಕ ಹಾಗೂ ಮನಸೂರೆಗೊಳ್ಳುವ ಪ್ರವಾಸಿ ಆಕರ್ಷಣೆಗಳನ್ನು ಕಾಣಬಹುದಾಗಿದೆ. ಇವುಗಳಲ್ಲಿ ಬಹು ಮಟ್ಟಿಗಿನ ಸ್ಥಳಗಳು ಧಾರ್ಮಿಕ ಆಕರ್ಷಣೆಯುಳ್ಳ ಸ್ಥಳಗಳಾಗಿವೆ. ಸಿದ್ದಗಂಗಾ ಮಠವಿರಬಹುದು, ದೇವರಾಯನದುರ್ಗವಿರಬಹುದು ಇಲ್ಲವೆ ತುರುವೆಕೆರೆಯ ಶಂಕರೇಶ್ವರ ದೇವಾಲಯವಿರಬಹುದು ಎಲ್ಲವೂ ಧಾರ್ಮಿಕ ಆಕರ್ಷಣೆಯ ಸ್ಥಳಗಳಾಗಿವೆ. ತುಮಕೂರಿನ ಜಿಲ್ಲೆಯಲ್ಲಿರುವ ಒಂದು ತಾಲ್ಲೂಕು ಮಧುಗಿರಿ, ಈ ಪ್ರದೇಶದಲ್ಲಿ ಬೆಟ್ಟ ಗುಡ್ಡಗಳಿಂದ ಕೂಡಿದ ಆಕರ್ಷಕತಾಣ ಇದಾಗಿದೆ. ಇಲ್ಲಿ ಮಧುಗಿರಿ ಏಕಶಿಲಾ ಬೆಟ್ಟ, ಸಿದ್ಧರ ಬೆಟ್ಟ, ಮಧುಗಿರಿ ಕೋಟೆಗಳನ್ನು ಕಾಣಬಹುದಾಗಿದೆ. ಇಲ್ಲಿಗೆ ಹಲವಾರು ಪ್ರವಾಸಿಗರು ಟ್ರೆಕ್ಕಿಂಗ್ ಮಾಡಲು ಬಯುಸುತ್ತಾರೆ. ಇಲ್ಲಿಂದ ಮುಂದೆ ಸಾಗಿದರೆ ತಿಪಟೂರು ಸಿಗುತ್ತದೆ.


ತಿಪಟೂರಿನ ಪ್ರಸಿದ್ದ ಆಕರ್ಷಣೆಗಳು

ತಿಪಟೂರು

PC:BP


ತುಮಕೂರಿನಿಂದ ಸುಮಾರು 74 ಕಿ,ಮೀ ದೂರದಲ್ಲಿರುವ ತಿಪಟೂರಿನಲ್ಲಿ ಹಲವಾರು ಪ್ರಸಿದ್ದ ತಾಣಗಳನ್ನು ಕಾಣಬಹುದಾಗಿದೆ. ಇಲ್ಲಿ ಪ್ರಸಿದ್ದ ಚೌಡೇಶ್ವರಿ ಅಮ್ಮನವರು ನೆಲೆಸಿರುವ ಜಿಲ್ಲೆಯಾಗಿದೆ. ತಿಪಟೂರಿನ ದಸರಿಘಟ್ಟ ಗ್ರಾಮದಲ್ಲಿ ನೊಂದವರಿಗೆ ಪರಿಹಾರ ಕರುಣಿಸುವ ತಾಯಿಯ ದೇಗುಲವಿದೆ. ಈ ದೇವಾಲಯಕ್ಕೆ ಕೇವಲ ಕರ್ನಾಟಕದಿಂದಲೇ ಅಲ್ಲದೇ ಅಕ್ಕ ಪಕ್ಕದ ರಾಜ್ಯಗಳಿಂದಲೂ ಈ ದೇವಿಯ ದರ್ಶನಕ್ಕೆ ಬರುತ್ತಾರೆ. ಈ ದೇವಾಲಯದ ಜೊತೆ ಜೊತೆಗೆ ತಿಪಟೂರು ಸೆಂಟೆನರಿ ಹಾಲ್, ಶ್ರೀ ಕನ್ನಿಕಾ ಪರಮೇಶ್ವರಿ ದೇವಾಲಯ, ಶ್ರೀ ಸತ್ಯ ಗಣಪತಿ ಅಸ್ಥಾನ ಮಂಟಪ, ಶ್ರೀ ಕಲ್ಲೇಶ್ವರ ಸ್ವಾಮಿ ದೇವಾಲಯ, ಗೌಡೇಶ್ವರಿ ದೇವಾಲಯಗಳನ್ನು ಇಲ್ಲಿ ಕಾಣಬುಹುದಾಗಿದೆ. ಇಲ್ಲಿಂದ ಮುಂದೆ ಸಾಗಿದರೆ ತರಿಕೇರಿ ಪ್ರದೇಶವು ದೊರೆಯುತ್ತದೆ.

ತರೀಕೆರೆ ಪ್ರದೇಶ ಆರ್ಕಷಣೆ

ತರೀಕೆರೆ

PC:Anwer Reyaz


ತಿಪಟೂರಿನಿಂದ ಮುಂದೆ ಸಾಗಿದರೆ ತರೀಕೆರೆ ನಗರವು ದೊರೆಯುತ್ತದೆ. ಇಲ್ಲಿ ಶಾಂತಿ ಫಾಲ್ಸ್ ಅತ್ಯಂತ ಪ್ರಸಿದ್ಧವಾದ ಪ್ರವಾಸಿ ತಾಣಗಳಲ್ಲಿ ಇದೋ ಒಂದು ಹಾಗೇಯೆ ಭದ್ರ ವನ್ಯಧಾಮ ದೊರೆಯುತ್ತದೆ. ಇಲ್ಲಿ ಹಲವಾರು ಪ್ರಾಣಿ, ಪಕ್ಷಿಗಳನ್ನು ನೋಡಿ ಮೈ ಮರೆಯಬಹುದು. ಕಲಹಟ್ಟಿ ಎಂಬ ಫಾಲ್ಸ್ ಕೂಡ ಇಲ್ಲಿ ಪ್ರಸಿದ್ಧವಾದುದು. ಇಲ್ಲಿ ಕಾಫಿ ಮ್ಯೂಸಿಯಂ ಅತ್ಯಂತ ಸುಂದರವಾದ ತಾಣವೆಂದೇ ಹೇಳಬಹುದು. ದೇವಾಲಯಗಳ ವಿಷಯಕ್ಕೆ ಬಂದರೆ ಸುಂದರವಾದ ಶಿವ ದೇವಾಲಯ, ಗಣಪತಿ ದೇವಾಲಯ, ಶ್ರೀ ಕೃಷ್ಣ ದೇವಾಲಯ, ಮಾನಸ ಅಕ್ವೇರಿಯಂ ಕೂಡ ಕಾಣಬಹುದಾಗಿದೆ. ಇಲ್ಲಿಂದ ಮುಂದೆ ಸಾಗಿದರೆ ಭದ್ರವತಿ ತಾಲ್ಲೂಕು ಸಿಗುತ್ತದೆ.

ಭದ್ರವತಿ ಪ್ರಸಿದ್ದ ಆಕರ್ಷಣೆಗಳು

ಭದ್ರವತಿ

PC: HPNadig
ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ತಾಲ್ಲೂಕು ಈ ಭದ್ರವತಿ. ಇಲ್ಲಿ ಮುಖ್ಯವಾಗಿ 13 ನೇ ಶತಮಾನದ ಲಕ್ಷ್ಮೀನರಸಿಂಹಸ್ವಾಮಿಯ ದೇವಾಲಯ, ಭದ್ರಾ ಅಭಯಾರಣ್ಯ, ಭದ್ರ ನದಿ ಯೋಜನೆ, ಗೊಂದಿ, ಸುಣ್ಣದ ಹಳ್ಳಿ ಇವೆಲ್ಲವೂ ಈ ಭದ್ರವತಿಯ ವಿಶೇಷವಾದುದಾಗಿದೆ. ನಂತರ ಶಿವಮೊಗ್ಗ ಜಿಲ್ಲೆಯ ಆಕರ್ಷಣೆಗಳು.

ಶಿವಮೊಗ್ಗ ಪ್ರಸಿದ್ದವಾದ ಆರ್ಕಷಣೆ

ಶಿವಮೊಗ್ಗ

PC: Vmjmalali
ಶಿವಮೊಗ್ಗ ಜಿಲ್ಲೆಯು ಅತ್ಯಂತ ಪ್ರಸಿದ್ದವಾದ ತಾಣಗಳನ್ನು ಹೊಂದಿದ್ದು, ಪ್ರವಾಸಿಗರನ್ನು ದೇಶ ವಿದೇಶಗಳಿಂದ ಶಿವಮೊಗ್ಗಗೆ ಭೇಟಿ ನೀಡುತ್ತಾರೆ ಇದ್ದಕ್ಕೆ ಮುಖ್ಯ ಕಾರಣವೆಂದರೆ ರಾಜ, ರಾಣಿ, ರೋರರ್ ಮತ್ತು ರಾಕೆಟ್ ಎಂಬ ನಾಲ್ಕು ವಿಭಿನ್ನ ಪ್ರವಾಹಗಳಾಗಿ ಧುಮುಕುವ ಶರಾವತಿ ಏಷ್ಯದ ಅತಿ ಎತ್ತರದ ಜಲಪಾತವನ್ನು ನಿರ್ಮಿಸಿದೆ. ಇಲ್ಲಿನ ಜೋಗ ಜಿಲಪಾತ ನೋಡುವುದು ಒಂದು ಅಪೂರ್ವವೇ ಸರಿ. ಶಿವಮೊಗ್ಗದಲ್ಲಿ ಹಲವಾರು ಆಕರ್ಷಣೆಗಳಿವೆ ಅವುಗಳೆಂದರೆ ಸಿರಿಮನೆ ಜಲಪಾತ, ದಬ್ಬೆ ಜಲಪಾತ, ಲಿಂಗನಮಕ್ಕಿ ಅಣೆಕಟ್ಟು, 12ನೇ ಶತಮಾನದ ಲಕ್ಷ್ಮೀನರಸಿಂಹನ ದೇವಲಯ, ಶ್ರೀ ರೇಣುಕಾಂಬ ದೇವಾಲಯ, ಮಂಡಗದ್ದೆಯ ಪಕ್ಷಿಧಾಮ ಇತ್ಯಾದಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X