Search
  • Follow NativePlanet
Share
» »ಕಾರಿನಲ್ಲಿ ಬೆಂಗಳೂರಿನಿಂದ ಚಿತ್ರದುರ್ಗದೆಡೆ ಪಯಣ

ಕಾರಿನಲ್ಲಿ ಬೆಂಗಳೂರಿನಿಂದ ಚಿತ್ರದುರ್ಗದೆಡೆ ಪಯಣ

By Vijay

ಬೆಂಗಳೂರು ದಕ್ಷಿಣ ಭಾರತದ ಒಂದು ಮಹಾನಗರವಾಗಿದ್ದು ಈ ಭಾಗದ ಬಹುತೇಕ ಎಲ್ಲ ಪ್ರವಾಸಿ ಸ್ಥಳಗಳೊಂದಿಗೆ ಸುಲಲಿತವಾದ ಸಂಪರ್ಕವನ್ನು ಹೊಂದಿದೆ. ರಸ್ತೆಯಿಂದಾಗಲಿ, ರೈಲಿನಲ್ಲಾಗಲಿ ಇಲ್ಲವೆ ವಿಮಾನಗಳಿಂದಾಗಲಿ ಮೂರೂ ಪ್ರಮುಖ ಸಂಚಾರಿ ಮಾಧ್ಯಮಗಳು ಬೆಂಗಳೂರಿನಿಂದ ನಿರಾಯಾಸವಾಗಿ ಲಭಿಸುತ್ತವೆ.

ಶುಭ ಶುಕ್ರವಾರ : ಪ್ರವಾಸ ಹಾಗೂ ವಿಮಾನ ಹಾರಾಟ ದರಗಳ ಮೇಲೆ 50% ರ ವರೆಗೆ ಕಡಿತ!

ಕಾರಿನಲ್ಲಿ ಬೆಂಗಳೂರಿನಿಂದ ಚಿತ್ರದುರ್ಗದೆಡೆ ಪಯಣ

ಬೆಂಗಳೂರಿನಿಂದ ಪ್ರವಾಸ ಹೊರಡಲು ಸಾಕಷ್ಟು ಆಯ್ಕೆಗಳು ಲಭ್ಯವಿರುವಾಗ ಅದನ್ನು ಸದುಪಯೋಗ ಪಡಿಸಿಕೊಳ್ಳುವುದೂ ಕೂಡ ಪ್ರವಾಸಿಗರ ಕರ್ತವ್ಯವೆಂದೇ ಹೇಳಬಹುದು. ನಿಮಗೆ ಬೆಂಗಳೂರಿನಿಂದ ಮೈಸೂರು, ಮಂಡ್ಯ, ಹಾಸನ, ನಂದಿ ಬೆಟ್ಟ, ಸಂಗಮ, ತಲಕಾಡು ಮುಂತಾದ ಸ್ಥಳಗಳಿಗೆ ಹೋಗಿ ಹೋಗಿ ಬೇಸರ ಮೂಡಿದ್ದರೆ, ಮತ್ತೊಂದು ವಿಶಿಷ್ಟ ಪ್ರವಾಸ ಮಾಡಬೇಕೆಂದಿದ್ದರೆ ಚಿತ್ರದುರ್ಗಕ್ಕೊಮ್ಮೆ ಭೇಟಿ ನೀಡಿ.

ವಿಶೇಷ ಲೇಖನ : ಕ್ಯಾಸಲ್ ರಾಕ್‍ ನಿಂದ ದೂಧ್ ಸಾಗರ್ ಟ್ರೆಕ್

ಕಾರಿನಲ್ಲಿ ಬೆಂಗಳೂರಿನಿಂದ ಚಿತ್ರದುರ್ಗದೆಡೆ ಪಯಣ

ಸಾಂದರ್ಭಿಕ ಚಿತ್ರ, ತುಮಕೂರು ಬಳಿಯ ಒಂದು ರಸ್ತೆ
ಚಿತ್ರಕೃಪೆ: Subramanya Prasad

ಚಿತ್ರದುರ್ಗವು ಬೆಂಗಳೂರಿನ ವಾಯವ್ಯಕ್ಕೆ ಸುಮಾರು 205 ಕಿ.ಮೀ ಗಳಷ್ಟು ದೂರದಲ್ಲಿದ್ದು ರಾಷ್ಟ್ರಿಯ ಹೆದ್ದಾರಿ ಸಂಖ್ಯೆ ನಾಲ್ಕರ ಮೇಲೆ ನೇರ ಸಂಪರ್ಕ ಹೊಂದಿದೆ. ಇನ್ನು ಈ ಹೆದ್ದಾರಿಯು ನಾಲ್ಕು ಪಥಗಳ ಅಗಲವಾದ ಹೆದ್ದಾರಿಯಾಗಿದ್ದು ವಾಹನಗಳನ್ನು ತಕ್ಕ ಮಟ್ಟಿಗೆ ವೇಗವಾಗಿಯೂ ಓಡಿಸಬಹುದು. ಘಂಟೆಗೆ 60 ಕಿ.ಮೀ ವೇಗವೆಂದರೂ ಸುಮಾರು ಮೂರುವರೆ ಘಂಟೆಗಳಲ್ಲಿ ನೀವು ಚಿತ್ರದುರ್ಗ ತಲುಪಬಹುದು. ಹೀಗಾಗಿ ಬೇಕಾದರೆ ಒಂದೇ ಒಂದು ದಿನದಲ್ಲಿ ನೀವು ಈ ಶೀಘ್ರ ಪ್ರವಾಸ ಮಾಡಿ ಆನಂದಿಸಬಹುದು. ಚಿತ್ರದುರ್ಗದಲ್ಲಿ ಕೇವಲ ಕೋಟೆಯಲ್ಲದೆ ಇತರೆ ಅನೇಕ ವಿಶೇಷತೆಗಳನ್ನು ಕಾಣಬಹುದು.

ವಿಶೇಷ ಲೇಖನ : ರಸ್ತೆಯಿಂದ ಕೊಡಚಾದ್ರಿಗೆ ಹೀಗೂ ಪ್ರಯಾಣಿಸಿ

ಕಾರಿನಲ್ಲಿ ಬೆಂಗಳೂರಿನಿಂದ ಚಿತ್ರದುರ್ಗದೆಡೆ ಪಯಣ

ಚಿತ್ರದುರ್ಗದ ಭವ್ಯ ಕೋಟೆ
ಚಿತ್ರಕೃಪೆ: veeresh.dandur

ಚಿತ್ರದುರ್ಗದ ಕೋಟೆಯು ರಾಷ್ಟ್ರೀಯ ಮಹತ್ವ ಪಡೆದ ಕೋಟೆಯಾಗಿದ್ದು ಇಲ್ಲಿನ ಪರಿಸರವು ಒಂದು ರೀತಿಯ ವಿನೂತನ ಅನುಭವವನ್ನು ಕರುಣಿಸುತ್ತದೆ. ನಗರದ ಗೌಜು ಗದ್ದಲಗಳಿಗೆ ಸಲಾಂ ಹೇಳಿ ತಂಪಾದ ರಭಸಮಯ ಗಾಳಿಯ ನಡುವೆ ಸಮಯ ಕಳೆಯುವುದು ಹೆಚ್ಚಿನ ಹುಮ್ಮಸ್ಸನ್ನು ಕರುಣಿಸುತ್ತದೆ. ಇಲ್ಲಿ ಕೇವಲ ಕೋಟೆ ನೋಡಬೇಕೆಂದೇನಿಲ್ಲ. ಅದರ ಪ್ರಾಂಗಣದಲ್ಲಿರುವ ವಿವಿಧ ರಚನೆಗಳನ್ನು ನೋಡಬಹುದು, ಇವುಗಳು ಅಂದಿನ ಸಮಯದಲ್ಲಿ ತಮ್ಮದೆ ಆದ ವೈಶಿಷ್ಟ್ಯವನ್ನು ಹೊಂದಿದ್ದವು. ಇವುಗಳ ಕುರಿತು ತಿಳಿಯುವುದರಿಂದ ನಿಮ್ಮ ಜ್ಞಾನವೂ ಸಹ ವೃದ್ಧಿಯಾಗುತ್ತದೆ.

ವಿಶೇಷ ಲೇಖನ : ಬೆಂಗಳೂರಿನಿಂದ ವರ್ಕಲಾ ಹೇಗೆ ಪ್ರಯಾಣ?

ಕಾರಿನಲ್ಲಿ ಬೆಂಗಳೂರಿನಿಂದ ಚಿತ್ರದುರ್ಗದೆಡೆ ಪಯಣ

ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 4
ಚಿತ್ರಕೃಪೆ: Balaji.B

ನೀವು ಬೆಂಗಳೂರಿನ ಯಾವುದೆ ಭಾಗದಿಂದ ಹೊರಟರೂ ಸಹ ಮೊದಲಿಗೆ ತುಮಕೂರಿನೆಡೆ ಹೋಗುವ ರಸ್ತೆ ಹಿಡಿದು ರಾಷ್ಟ್ರೀಯ ಹೆದ್ದಾರಿ ನಾಲ್ಕಕ್ಕೆ ತಲುಪಬೇಕು. ಇಲ್ಲಿಂದ ಯಾವುದೆ ಅಡಚಣೆಗಳಿಲ್ಲದೆ ಹಾಯಾಗಿ ವಾಹನ ಚಲಾಯಿಸುತ್ತ ಹೊರಡಬಹುದು. ಅಲ್ಲಲ್ಲಿ ಟೊಲ್ ಗೇಟುಗಳಿವೆ. ನೆಲಮಂಗಲ, ತುಮಕೂರು ಹಾಗೂ ಹಿರಿಯೂರು ಮಾರ್ಗವಾಗಿ ಸುಮಾರು 200 ಕಿ.ಮೀ ಗಳಷ್ಟು ಕ್ರಮಿಸಿ ಚಿತ್ರದುರ್ಗವನ್ನು ತಲುಪಬಹುದು. ಮೊದಲು ನೆಲಮಂಗಲ ಮೂಲಕ ತುಮಕೂರಿನೆಡೆ ಸಾಗುವಾಗ ತುಮಕೂರು ಬಳಿಯಿರುವ ಕ್ಯಾತಸಂದ್ರಕ್ಕೆ ಭೇಟಿ ನೀಡಲು ಮರೆಯದಿರಿ.

ಕಾರಿನಲ್ಲಿ ಬೆಂಗಳೂರಿನಿಂದ ಚಿತ್ರದುರ್ಗದೆಡೆ ಪಯಣ

ಬಾಯಲ್ಲಿ ನೀರೂರಿಸುವ ಬಿಸಿ ಬಿಸಿ ತಟ್ಟೆ ಇಡ್ಲಿ
ಚಿತ್ರಕೃಪೆ: Girionthenet

ಕ್ಯಾತಸಂದ್ರವು ಬೆಂಗಳೂರಿಗರ ಅಥವಾ ಇಂದು ಬೆಂಗಳೂರಿನಲ್ಲಿ ನೆಲೆಸಿರುವ ಇತರೆ ಜನರ ನೆಚ್ಚಿನ ತಿಂಡಿಯಾದ ತಟ್ಟೆ ಇಡ್ಲಿಗಳ ಆವಿಷ್ಕಾರದ ಗ್ರಾಮವಾಗಿದೆ. ಹೌದು ಇಲ್ಲಿಂದಲೆ ಪ್ರವರ್ಧಮಾನಕ್ಕೆ ಬಂದ ತಟ್ಟೆ ಇಡ್ಲಿಯು ಸಾಕಷ್ಟು ಜನಪ್ರೀಯವಾಗಿದೆ. ಸಾಮಾನ್ಯವಾಗಿ ಬೆಂಗಳೂರಿನೆಲ್ಲೆಡೆ ತಟ್ಟೆ ಇಡ್ಲಿಗಳು ಲಭ್ಯವಿದ್ದರೂ ಕ್ಯಾತಸಂದ್ರದ ಇಡ್ಲಿಗಳಿಗೆ ವಿಶೇಷವಾದ ರುಚಿಯೇ ಇದೆ ಎಂದು ಹೇಳಬಹುದು. ನಿಮಗಿಷ್ಟವಿದ್ದಲ್ಲಿ ಕ್ಯಾತಸಂದ್ರದ ತಟ್ಟೆ ಇಡ್ಲಿ ಹಾಗೂ ಬಿಸಿ ಬಿಸಿ ಉದ್ದಿನ ವಡೆಗಳ ರುಚಿಯನ್ನು ಸವಿದು ಹಿರಿಯೂರಿನೆಡೆ ಧಾವಿಸಬಹುದು. ತುಮಕೂರಿನಿಂದ ಹಿರಿಯೂರು ರಾಷ್ಟ್ರೀಯ ಹೆದ್ದಾರಿ ನಾಲ್ಕರ ಮೇಲೆ 90 ಕಿ.ಮೀ ಗಳಷ್ಟು ದೂರದಲ್ಲಿದೆ.

ಕಾರಿನಲ್ಲಿ ಬೆಂಗಳೂರಿನಿಂದ ಚಿತ್ರದುರ್ಗದೆಡೆ ಪಯಣ

ಮಾರಿ ಕಣಿವೆ ಜಲಾಶಯ
ಚಿತ್ರಕೃಪೆ: Karthik Prabhu

ಒಂದೊಮ್ಮೆ ಹಿರಿಯೂರು ತಲುಪಿದಾಗ ಮತ್ತೊಂದು ಚಿಕ್ಕ ಪ್ರಯಾಣವನ್ನು ನಿಮಗಿಷ್ಟವಿದ್ದಲ್ಲಿ ಮಾಡಬಹುದು. ಅದಕ್ಕಾಗಿ ನೀವು ಹಿರಿಯೂರಿನಿಂದ ತುಸು ಮುಂದೆ ಬಂದು ಎಡ ತಿರುವು ಪಡೆದು ಟಿ.ಹೆಚ್ ರಸ್ತೆಯ ಮೇಲೆ ಸುಮಾರು 30 ಕಿ.ಮೀ ಪ್ರಯಾಣಿಸಿ ಮಾರಿ ಕಣಿವೆಯನ್ನು ತಲುಪಬಹುದು. ವಾಣಿ ವಿಲಾಸ ಸಾಗರ ಎಂತಲೂ ಕರೆಯಲಾಗುವ ಈ ಜಲಾಶಯವು ರಾಜ್ಯದ ಅತಿ ಪುರಾತನ ಆಣೆಕಟ್ಟುಗಳ ಪೈಕಿ ಒಂದಾಗಿದೆ. ಸ್ವಾತಂತ್ರ್ಯಕ್ಕೂ ಮುಂಚೆ ಮೈಸೂರು ಅರಸರಿಂದ ಈ ಆಣಕಟ್ಟನ್ನು ವೇದವತಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದೆ. ಇದು ಚಿತ್ರದುರ್ಗ ಹಾಗೂ ಹಿರಿಯೂರಿಗೆ ಕುಡಿಯುವ ನೀರಿನ ಮುಖ್ಯ ಮೂಲವಾಗಿದೆ.

ಕಾರಿನಲ್ಲಿ ಬೆಂಗಳೂರಿನಿಂದ ಚಿತ್ರದುರ್ಗದೆಡೆ ಪಯಣ

ಗೋಪಾಲ ಸ್ವಾಮಿ ಹೊಂಡ
ಚಿತ್ರಕೃಪೆ: Nagarjun Kandukuru

ಜಲಾಶಯದ ಸುಂದರ ಅಂಗಳದಲ್ಲಿ ಸ್ವಲ್ಪ ಸಮಯ ಕಳೆದು ಮತ್ತೆ ಅದೇ ಮಾರ್ಗವಾಗಿ ಹಿಂತಿರುಗಿ ರಾಷ್ಟ್ರೀಯ ಹೆದ್ದಾರಿ ತಲುಪಿ ಅಲ್ಲಿಂದ ನಿಮ್ಮ ಪ್ರಯಾಣವನ್ನು ಚಿತ್ರದುರ್ಗದೆಡೆ ಮುಂದುವರೆಸಬಹುದು. ಚಿತ್ರದುರ್ಗವು ಹಿರಿಯೂರಿನಿಂದ ಕೇವಲ 44 ಕಿ.ಮೀ ಗಳಷ್ಟು ದೂರದಲ್ಲಿದೆ. ಒಂದೊಮ್ಮೆ ಚಿತ್ರದುರ್ಗ ಪ್ರವೇಶಿಸಿದರೆ ಅಲ್ಲಿಂದ ನೇರವಾಗಿ ಕೋಟೆಯ ತಾಣಕ್ಕೆ ಧಾವಿಸಬಹುದು. ಇದು ರಾಷ್ಟ್ರೀಯ ಸಂರಕ್ಷಿಸಲ್ಪಟ್ಟ ಸ್ಮಾರಕವಾಗಿದ್ದು ಒಳ ಪ್ರವೇಶಿಸಲು ಸರ್ಕಾರದಿಂದ ನಿಗದಿಪಡಿಸಲಾದ ನಿರ್ದಿಷ್ಟ ಶುಲ್ಕವನ್ನು ಪಾವತಿಸಿ ಒಳ ನಡೆಯಬಹುದು.

ಕಾರಿನಲ್ಲಿ ಬೆಂಗಳೂರಿನಿಂದ ಚಿತ್ರದುರ್ಗದೆಡೆ ಪಯಣ

ಅಕ್ಕ ತಂಗಿಯರ ಹೊಂಡ
ಚಿತ್ರಕೃಪೆ: Nagarjun Kandukuru

ಏಳು ಸುತ್ತಿನ ಈ ಕೋಟೆಯಲ್ಲಿ ಹಲವಾರು ರಚನೆಗಳು, ಹೊಂಡಗಳು, ದೇವಾಲಯಗಳನ್ನು ಕಾಣಬಹುದಾಗಿದೆ. ಇಂದು ಕೇಳುತ್ತಿರುವ ಮಳೆ ನೀರಿನ ಕೊಯ್ಲು ಪದ್ಧತಿಯನ್ನು ಅಂದೆ ಕೋಟೆಯ ನೀರ್ಮಾಣದ ಸಮಯದಲ್ಲಿ ಅಳವಡಿಸಲಾಗಿತ್ತು ಎಂದರೆ ತಿಳಿಯಬಹುದು ಅಂದಿನ ಜನರ ಮುಂದಾಲೋಚನೆ ಹಾಗೂ ಜಾಣ್ಮೆಯನ್ನು. ಇಲ್ಲಿ ಸಂತೆ ಹೊಂಡ, ಸಿಹಿನೀರಿನ ಹೊಂಡ, ಗೋಪಾಲ ಸ್ವಾಮಿ ಹೊಂಡ, ತುಪ್ಪದ ಕೊಳ, ಅಕ್ಕ ತಂಗಿ ಹೊಂಡ ಹೀಗೆ ವಿವಿಧ ನೀರಿನ ಸಂಗ್ರಹಣಾ ಕೊಳಗಳನ್ನು ಕಾಣಬಹುದು.

ವಿಶೇಷ ಲೇಖನ : ದುರ್ಗದ ಕೋಟೆಗೆ ಯಾವುದು ಸಾಟಿ?

ಕಾರಿನಲ್ಲಿ ಬೆಂಗಳೂರಿನಿಂದ ಚಿತ್ರದುರ್ಗದೆಡೆ ಪಯಣ

ಹಿಡಿಂಬೇಶ್ವರ ದೇವಸ್ಥಾನ, ಹಿಡಿಂಬಾ ವಾಸವಿದ್ದಳಂತಿಲ್ಲಿ!
ಚಿತ್ರಕೃಪೆ: Nagarjun Kandukuru

ಅಲ್ಲದೆ ಕೋಟೆಯ ಪರಿಸರದಲ್ಲಿ ಹಿಡಿಂಬೇಶ್ವರ ದೇವಸ್ಥಾನವನ್ನೂ ಸಹ ಕಾಣಬಹುದಾಗಿದೆ. ಸ್ಥಳ ಪುರಾಣದ ಪ್ರಕಾರ, ಹಿಂದೆ ಹಿಡಿಂಬಾಸುರನು ಒಬ್ಬ ದೈತ್ಯನಾಗಿದ್ದನು. ಈ ದೇವಸ್ಥಾನದಲ್ಲಿ ಹಿಡಿಂಬನ ದಂತವನ್ನು ಕಾಣಬಹುದಾಗಿದೆ. ಅಲ್ಲದೆ ಸಂಪಿಗೆ ಸಿದ್ದೇಶ್ವರ, ಏಕನಾಥಮ್ಮ, ಹಣುಮಂತ, ಸುಬ್ಬರಾಯ, ಗೋಪಾಲ ಕೃಷ್ಣ, ನಂದಿಯ ದೇವಾಲಯಗಳನ್ನು ನೋಡಬಹುದು. ಅಲ್ಲದೆ ಐತಿಹಾಸಿಕವಾಗಿ ಒಂದು ರೋಚಕ ಘಟನೆಯಾದ ಒನಕೆ ಒಬವ್ವನ ಖಿಂಡಿಯನ್ನೂ ಸಹ ಇಲ್ಲಿ ಕಾಣಬಹುದು. ಒಬವ್ವಳು ಈ ಖಿಂಡಿಯಿಂದ ತೂರಿ ಬರುತ್ತಿದ್ದ ಶತ್ರು ಸೈನಿಕರನ್ನು ತನ್ನ ಒನಕೆಯಿಂದ ಸೆದೆ ಬಡಿದಿದ್ದಳು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X