Search
  • Follow NativePlanet
Share
» »ಮನದಲ್ಲಿ ನೆಲೆಸುವ ಬನವಾಸಿ ಮಧುಕೇಶ್ವರ!

ಮನದಲ್ಲಿ ನೆಲೆಸುವ ಬನವಾಸಿ ಮಧುಕೇಶ್ವರ!

ಕದಂಬರ ರಾಜಧಾನಿಯಾಗಿ ಮೆರೆದಿದ್ದ ಉತ್ತರ ಕನ್ನಡ ಜಿಲ್ಲೆಯ ಬನವಾಸಿಯು ತನ್ನಲ್ಲಿರುವ ಪ್ರಾಚೀನ ಮಧುಕೇಶ್ವರ ದೇವಾಲಯದಿಂದಾಗಿ ಸಾಕಷ್ಟು ಪ್ರಸಿದ್ದಿ ಪಡೆದ ಪ್ರವಾಸಿ ತಾಣವಾಗಿದೆ

By Vijay

ರಾಜ್ಯ - ಕರ್ನಾಟಕ
ಜಿಲ್ಲೆ - ಉತ್ತರ ಕನ್ನಡ
ಪಟ್ಟಣ - ಬನವಾಸಿ

ವಿಶೇಷತೆ - ಮಧುಕೇಶ್ವರ ದೇವಾಲಯ

ಮಧುಕೇಶ್ವರ ದೇವಾಲಯ ಮುನ್ನೋಟ : ಕದಂಬ ವಾಸ್ತುಶೈಲಿ ಹೊಂದಿರುವ ಶಿವನಿಗೆ ಮುಡಿಪಾದ ಮಧುಕೇಶ್ವರ ದೇವಾಲಯ ಬನವಾಸಿ ಪಟ್ಟಣದಲ್ಲಿರುವ ಅತಿ ಪ್ರಮುಖ ದಾರ್ಮಿಕ ಹಾಗೂ ಐತಿಹಾಸಿಕ ಪ್ರವಾಸಿ ಆಕರ್ಷಣೆಯಾಗಿದೆ.

ಮನದಲ್ಲಿ ನೆಲೆಸುವ ಬನವಾಸಿ ಮಧುಕೇಶ್ವರ!

ಚಿತ್ರಕೃಪೆ: Ajaya.n.g

ಕಿರು ಇತಿಹಾಸ

ಬನವಾಸಿ ಪಟ್ಟಣವು ಐತಿಹಾಸಿಕವಾಗಿ ಸಾಕಷ್ಟು ಶ್ರೀಮಂತಿಕೆ ಇರುವ ಪಟ್ಟಣ. ಪುರಾತನ ಕಾಲದಲ್ಲಿ ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಪ್ರಾಂತವನ್ನಾಳಿರುವ ಕದಂಬರ ವೈಭವಯುತ ರಾಜಧಾನಿಯಾಗಿತ್ತು ಇಂದಿನ ಬನವಾಸಿ. ಹಾಗಾಗಿ ಕದಂಬರ ವಾಸ್ತುಶೈಲಿ ಪ್ರಭಾವ ಇಂದಿಗೂ ಈ ಪಟ್ಟಣದಲ್ಲಿ ಎಲ್ಲೆಡೆ ಕಂಡುಬರುವ ವಿವಿಧ ರಚನೆಗಳಲ್ಲಿ ಕಾಣಬಹುದಾಗಿದೆ.

ಮನದಲ್ಲಿ ನೆಲೆಸುವ ಬನವಾಸಿ ಮಧುಕೇಶ್ವರ!

ಚಿತ್ರಕೃಪೆ: Clt13

ಮಧುಕೇಶ್ವರ ದೇವಾಲಯ ಇತಿಹಾಸ

ಕರ್ನಾಟಕವು ಐತಿಹಾಸಿಕವಾಗಿ ಸಾಕಷ್ಟು ಶ್ರೀಮಂತಿಕೆ ಹೊಂದಿರುವ ರಾಜ್ಯ. ಇಲ್ಲಿ ಅನೇಕ ಪುರಾತನ ದೇವಾಲಯಗಳನ್ನು ಕಾಣಬಹುದಾಗಿದೆ. ಅದರಂತೆ ಬನವಾಸಿಯಲ್ಲಿರುವ ಮಧುಕೇಶ್ವರ ದೇವಾಲಯವೂ ಸಹ ಸಾಕಷ್ಟು ಪ್ರಾಚೀನತೆಯಿಂದ ಕೂಡಿರುವ ರಾಜ್ಯ.

ಕದಂಬರ ಮೊದಲ ದೊರೆ ಮಯೂರ ಶರ್ಮ ಎಂಬ ದೊರೆಯು ಈ ಮಧುಕೇಶ್ವರ ದೇವಾಲಯವನ್ನು ನಿರ್ಮಾಣ ಮಾಡಿದ ಎಂದು ನಂಬಲಾಗಿದೆ. ಕರ್ನಾಟಕದಲ್ಲಿ ಕದಂಬ ಸಾಮ್ರಾಜ್ಯ ಬಲು ಪುರಾತನವಾದುದು ಎಂದು ಹೇಳಲಾಗುತ್ತದೆ. ಚಾಲುಕ್ಯರ ಪ್ರಭಾವ ಏರುವವರೆಗೆ ಕರ್ನಾಟಕದ ಬಹು ಭಾಗವನ್ನು ಕದಂಬರು ಆಳಿದ್ದಾರೆ.

ಮನದಲ್ಲಿ ನೆಲೆಸುವ ಬನವಾಸಿ ಮಧುಕೇಶ್ವರ!

ಚಿತ್ರಕೃಪೆ: Dineshkannambadi

ಮಧುಕೇಶ್ವರ ದೇವಾಲಯ ಕದಂಬರಿಂದ ನಿರ್ಮಿತವಾದರೂ ಕಾಲ ಕಾಲಕ್ಕೆ ವಿವಿಧ ಸಾಮ್ರಾಜ್ಯದ ಆಡಳಿತಕ್ಕೆ ಒಳಪಟ್ಟಿತು. ಆದಾಗ್ಯೂ ಈ ಪ್ರಾಂತವನ್ನಾಳಿದ ಚಾಲುಕ್ಯರು, ಹೊಯ್ಸಳರು ಈ ದೇವಾಲಯವನ್ನು ಹೆಚ್ಚು ಹೆಚ್ಚು ನವೀಕರಣಗೊಳಿಸಿದರು.

ದೇವಾಲಯ ವಾಸ್ತುಶೈಲಿ

ಮಧುಕೇಶ್ವರ ದೇವಾಲಯವು ಒಂದು ಸರಳ ಹಾಗೂ ಸುಂದರವಾಗಿ ನಿರ್ಮಿಸಲಾದ ದೇವಾಲಯ ರಚನೆಯಾಗಿದೆ. ಹೆಚ್ಚು ಕೆತ್ತನೆ ಕೆಲಸಗಳಿಲ್ಲದಿದ್ದರೂ ಸಾಕಷ್ಟು ಸುಸಜ್ಜಿತವಾಗಿ ನಿರ್ಮಿಸಲಾಗಿದೆ. ಚಾಲುಕ್ಯರ ಅವಧಿಯಲ್ಲಿ ಸಂಕಲ್ಪ ಮಂಟಪವನ್ನು ಹೆಚ್ಚುವರಿಯಾಗಿ ನಿರ್ಮಿಸಲಾಗಿದೆ.

ಮನದಲ್ಲಿ ನೆಲೆಸುವ ಬನವಾಸಿ ಮಧುಕೇಶ್ವರ!

ಚಿತ್ರಕೃಪೆ: Shashidhara halady

ನಂತರ ಹೊಯ್ಸಳರ ಆಡಳಿತದಲ್ಲಿ ನೃತ್ಯ ಮಂಟಪವನ್ನು ನಿರ್ಮಿಸಲಾಗಿದೆ. ಈ ಮಂಟಪದಲ್ಲಿ ಅದ್ಭಿತವಾದ ಶಿಲ್ಪಕಲಾಕೃತಿಗಳ ಕೆತ್ತನೆಯ ಕೆಲಸಗಳನ್ನು ಕಾಣಬಹುದಾಗಿದೆ. ಮಧುಕೇಶ್ವರ ದೇವಾಲಯದಲ್ಲಿರುವ ಶಿವಲಿಂಗವು ಜೇನುತುಪ್ಪ ಅಂದರೆ ಮಧು ಬಣ್ಣದಲ್ಲಿ ಕಂಗೊಳಿಸುತ್ತದೆ. ಹಾಗಾಗಿಯೆ ಈ ಈಶ್ವರ ಮಧುಕೇಶ್ವರನಾಗಿ ಪ್ರ್ರಸಿದ್ಧನಾಗಿದ್ದಾನೆ.

ತಲುಪುವ ಬಗೆ

ನೂರು ಕಿ.ಮೀ ದೂರದಲ್ಲಿರುವ ಹುಬ್ಬಳ್ಳಿ ವಾಯು ನಿಲ್ದಾಣ ಬನವಾಸಿಗೆ ಹತ್ತಿರದಲ್ಲಿರುವ ವಾಯು ನಿಲ್ದಾಣ. 50 ಕಿ.ಮೀ ದೂರದಲ್ಲಿರುವ ಹಾವೇರಿಯು ಬನವಾಸಿಗೆ ಹತ್ತಿರದಲ್ಲಿರುವ ರೈಲು ನಿಲ್ದಾಣ ಹೊಂದಿದೆ. ಬನವಾಸಿಗೆ ಬಸ್ಸಿನ ಮೂಲಕ ತಲುಪಬೇಕೆಂದಿದ್ದರೆ ಶಿರಸಿಗೆ ಹೊರಡುವುದು ಉತ್ತಮ. ಬನವಾಸಿ ಇಲ್ಲಿಂದ 23 ಕಿ.ಮೀ ಹಾಗೂ ಶಿರಸಿಯಿಂದ ಬನವಾಸಿಗೆ ನಿರಂತರ ಬಸ್ಸುಗಳು ಲಭ್ಯವಿದೆ.

ಉತ್ತರ ಕನ್ನಡ ಜಿಲ್ಲೆಯ ಆಕರ್ಷಕ ಸ್ಥಳಗಳು!

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X