Search
  • Follow NativePlanet
Share
» »ಮರುಳು ಮಾಡುವ ಶೃಂಗಾರ ಶಿಲ್ಪಕಲೆಯ ಬಳ್ಳಿಗಾವಿ

ಮರುಳು ಮಾಡುವ ಶೃಂಗಾರ ಶಿಲ್ಪಕಲೆಯ ಬಳ್ಳಿಗಾವಿ

By Vijay

"ಹಸಿರಿನ ನಾಡು", "ಗಂಧದ ಬೀಡು" ಎಂತೆಲ್ಲ ಕರೆಯಿಸಿಕೊಳ್ಳುವ ಕರ್ನಾಟಕದಲ್ಲಿ ಶಿಲ್ಪ ಕಲೆಯ ನೈಪುಣ್ಯತೆಯನ್ನು ಎತ್ತಿ ತೋರಿಸುವಂತಹ ಉದಾಹರಣೆಗಳಿಗೇನೂ ಕಮ್ಮಿ ಇಲ್ಲ. ಶಿಲ್ಪಕಲೆಯ ಅಗಾಧತೆಯನ್ನು ತ್ರಿಪುರಾಂತಕೇಶ್ವರ ಎಂತಲೂ ಸಹ ಕರೆಯಲ್ಪಡುವ ತ್ರಿಪುರಾಂತಕ ಎಂಬ ಕುತೂಹಲಕರ ಚಿಕ್ಕ ದೇವಾಲಯದಲ್ಲಿಯೂ, ಕೇದಾರನಾಥೇಶ್ವರ ಎಂಬ ಸುಂದರ ದೇವಾಲಯದಲ್ಲಿಯೂ ಕಾಣಬಹುದು.

ರತಿ ಸಮಾಗಮದ ಅದ್ಭುತ ಕೆತ್ತನೆಗಳು

ಸುಮಾರು ಹತ್ತು, ಹನ್ನೊಂದನೇಯ ಶತಮಾನಗಳಲ್ಲಿ ನಿರ್ಮಾಣಗೊಂಡು ನೂರಾರು ವರುಷಗಳ ಕಾಲ ತಮ್ಮ ಭವ್ಯತೆಯನ್ನು ಗಟ್ಟಿಯಾಗಿ ಕಟ್ಟಿಕೊಂಡು ಕಾಲವನ್ನು ಇಂದಿಗೂ ಸಮರ್ಥವಾಗಿ ಎದುರಿಸುತ್ತಿರುವ ಇಂತಹ ಶಿಲ್ಪಕಲೆಯ ಕುರುಹುಗಳು ನಾಡಿನ ಗರಿಮೆಯನ್ನು ಎತ್ತಿ ಹಿಡಿಯುವಲ್ಲಿ ತಮ್ಮದೆ ಆದ ಶ್ರೇಷ್ಠ ಕೊಡುಗೆ ನೀಡುತ್ತಿವೆ.

ಮತ್ತೊಂದು ವಿಶೇಷತೆ ಎಂದರೆ ತ್ರಿಪುರಾಂತಕೇಶ್ವರ ದೇವಾಲಯದ ಹೊರ ಗೋಡೆಗಳಲ್ಲಿ ಕಲಾತ್ಮಕವಾಗಿ ಕಡಿಯಲಾದ ಮಿಥುನ ಕಲೆ (ಶೃಂಗಾರರಸ) ಯ ಪ್ರದರ್ಶನ ನೋಡುಗರನ್ನು ಮೂಕವಿಸ್ಮಿತರನ್ನಾಗಿಸುತ್ತದೆ. ಅಲ್ಲದೆ ಇಂತಹ ಕಲಾತ್ಮಕತೆ ಬಹು ವಿರಳ ಎನ್ನಬಹುದಾದ ಚಾಲುಕ್ಯರಿಂದ ರೂಪಗೊಂಡಿರುವುದು.

ತ್ರಿಪುರಾಂತಕೇಶ್ವರ ದೇವಾಲಯ:

ತ್ರಿಪುರಾಂತಕೇಶ್ವರ ದೇವಾಲಯ:

ತ್ರಿಪುರಾಂತಕೇಶ್ವರ ದೇವಾಲಯದ ಪ್ರವೇಶ ಸ್ಥಳದ ಹೊರಗೋಡೆಗಳು ರತಿ ಸಮಾಗಮವನ್ನು ಬಿಂಬಿಸುವ ಶೃಂಗಾರ ರಸಗಳಿಂದ ಕೂಡಿದ್ದು, ಇವುಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ಮಾತ್ರವೆ ತಿಳಿದುಬರುತ್ತದೆ.

ಚಿತ್ರಕೃಪೆ: Dineshkannambadi

ತ್ರಿಪುರಾಂತಕೇಶ್ವರ ದೇವಾಲಯ:

ತ್ರಿಪುರಾಂತಕೇಶ್ವರ ದೇವಾಲಯ:

ಮಿಥುನಕಲೆ ಅಥವಾ ಕಾಮಕಲೆಯನ್ನು ಪ್ರಚುರಪಡಿಸುವ ಈ ಕಲಾತ್ಮಕ ರಚನೆಗಳು ಸೂಕ್ಷ್ಮವಾಗಿ ಹಾಗೂ ಅಷ್ಟೆ ಚಿಕ್ಕದಾಗಿ ಸುಂದರವಾಗಿ ಕಡಿಯಲ್ಪಟ್ಟಿವೆ.

ಚಿತ್ರಕೃಪೆ: Dineshkannambadi

ತ್ರಿಪುರಾಂತಕೇಶ್ವರ ದೇವಾಲಯ:

ತ್ರಿಪುರಾಂತಕೇಶ್ವರ ದೇವಾಲಯ:

ಮಧ್ಯಯುಗಕ್ಕೆ ಸಂಬಂಧಿಸಿದ 80 ಕ್ಕೂ ಹೆಚ್ಚು ಶಾಸನಗಳು ಬಳ್ಳಿಗಾವಿಯಲ್ಲಿ ದೊರೆತಿದ್ದು, ಈ ಪಟ್ಟಣವು ಅಂದಿನ ಸಮಯದಲ್ಲಿ ತಾನು ಗಳಿಸಿಕೊಂಡಿದ್ದ ಮಹತ್ವವನ್ನು ತಿಳಿಸುತ್ತದೆ ಎಂದರೆ ತಪ್ಪಾಗಲಾರದು.

ಚಿತ್ರಕೃಪೆ: Dineshkannambadi

ತ್ರಿಪುರಾಂತಕೇಶ್ವರ ದೇವಾಲಯ:

ತ್ರಿಪುರಾಂತಕೇಶ್ವರ ದೇವಾಲಯ:

ತ್ರಿಪುರಾಂತಕೇಶ್ವರ ದೇವಾಲಯದಲ್ಲಿ ಮತ್ತೊಂದು ವಿಶೇಷವಾಗಿ ಗಮನಿಸಬೇಕಾದ ಸಂಗತಿ ಎಂದರೆ ಕಿಟಕಿಗಳ ಅತ್ಯದ್ಭುತ ಹಾಗೂ ಸಂಕೀರ್ಣವಾದ ವಿನ್ಯಾಸ.

ಚಿತ್ರಕೃಪೆ: Dineshkannambadi

ತ್ರಿಪುರಾಂತಕೇಶ್ವರ ದೇವಾಲಯ:

ತ್ರಿಪುರಾಂತಕೇಶ್ವರ ದೇವಾಲಯ:

ತ್ರಿಪುರಾಂತಕ ದೇವಾಲಯದಾವರಣದಲ್ಲಿರುವ ವಿಸ್ಮಿತಗೊಳಿಸುವ ಒಂದು ಸುಂದರ ಕೆತ್ತನೆ.

ಚಿತ್ರಕೃಪೆ: Dineshkannambadi

ತ್ರಿಪುರಾಂತಕೇಶ್ವರ ದೇವಾಲಯ:

ತ್ರಿಪುರಾಂತಕೇಶ್ವರ ದೇವಾಲಯ:

ಚಾಲುಕ್ಯ ವಾಸ್ತು ಕಲಾಶಿಲ್ಪದ ವೈಭವ ಸಾರುವ ದೇವಾಲಯದ ಖಂಬಗಳು.

ಚಿತ್ರಕೃಪೆ: Dineshkannambadi

ತ್ರಿಪುರಾಂತಕೇಶ್ವರ ದೇವಾಲಯ:

ತ್ರಿಪುರಾಂತಕೇಶ್ವರ ದೇವಾಲಯ:

ವಿರಳಾತಿ ವಿರಳ ಎನ್ನಬಹುದಾದ, ಅದ್ಭುತ ಶಾಕ್ತಿ ಸಾಮರ್ಥ್ಯಗಳ ಪ್ರತಿನಿಧಿಯಾಗಿರುವ ಗಂಡಬೇರುಂಡ ಸ್ಥಂಬವನ್ನು ಈ ದೇವಾಲಯದಾವರಣದಲ್ಲಿ ಕಾಣಬಹುದು. ಮಾನವದೇಹ, ಎರಡು ಪಕ್ಷಿ ಮುಖಗಳು, ಆನೆಗಳನ್ನೆ ತಿಂದು ಬದುಕುವ ಈ ಪೌರಾಣಿಕ ಜೀವಿಯು ಕರ್ನಾಟಕ ಸರ್ಕಾರದ ಲಾಂಛನದಲ್ಲಿಯೂ ಸಹ ಇದೆ.

ಚಿತ್ರಕೃಪೆ: Dineshkannambadi

ಕೇದಾರೇಶ್ವರ ದೇವಸ್ಥಾನ:

ಕೇದಾರೇಶ್ವರ ದೇವಸ್ಥಾನ:

ಕೇದಾರೇಶ್ವರ ದೇವಸ್ಥಾನ : ತ್ರಿಕೂಟಕ ದೇವಸ್ಥಾನ ಅಂದರೆ ಮೂರು ಗೋಪುರಗಳುಳ್ಳ ದೇವಸ್ಥಾನಕ್ಕೆ ಇದೊಂದು ಉತ್ತಮ ಉದಾಹರಣೆಯಾಗಿದೆ. ಈ ದೇವಸ್ಥಾನದ ವಾಸ್ತು ಶಿಲ್ಪ ಕಲೆಯೂ ಸಹ ನೋಡಲು ಆಕರ್ಷಕವಾಗಿದ್ದು ಕಲಾಪ್ರಿಯರನ್ನು ಆಕರ್ಷಿಸುತ್ತದೆ.

ಚಿತ್ರಕೃಪೆ: Dineshkannambadi

ಕೇದಾರೇಶ್ವರ ದೇವಸ್ಥಾನ:

ಕೇದಾರೇಶ್ವರ ದೇವಸ್ಥಾನ:

ದಂತಕಥೆಯ ಪ್ರಕಾರ, ಬಳ್ಳಿಗಾವಿಯು ಹಿಂದೆ ಒಬ್ಬ ಅಸುರ ರಾಜನ ರಾಜಧಾನಿ ಪಟ್ಟಣವಾಗಿ ಬಲಿಪುರ ಎಂಬ ಹೆಸರಿನಿಂದ ಕರೆಯಲ್ಪಡುತ್ತಿತ್ತು. ಪಾಂಡವರು ವನವಾಸದಲ್ಲಿದ್ದಾಗ ಈ ಸ್ಥಳಕ್ಕೆ ಬಂದಿದ್ದರು.

ಚಿತ್ರಕೃಪೆ: Dineshkannambadi

ಕೇದಾರೇಶ್ವರ ದೇವಸ್ಥಾನ:

ಕೇದಾರೇಶ್ವರ ದೇವಸ್ಥಾನ:

ಪಾಂಡವರು ಇಲ್ಲಿ ಕೆಲ ಸಮಯ ನೆಲೆಸಿ ಶಿವನ ಆರಾಧನೆಗಾಗಿ ಪಂಚಲಿಂಗೇಶ್ವರನನ್ನು ಪ್ರತಿಷ್ಠಾಪಿಸಿದ್ದರು. ಸುಮಾರು ಕ್ರಿ.ಶ 685 ರ ಸಮಯದಲ್ಲಿ ಬಾದಾಮಿ ಚಾಲುಕ್ಯರ ಶಾಸನಗಳಲ್ಲಿ ಬಳ್ಳಿಗಾವಿಯ ಕುರಿತು ಉಲ್ಲೇಖಿಸಲಾಗಿರುವುದನ್ನು ಕಾಣಬಹುದು.

ಚಿತ್ರಕೃಪೆ: Technophilo

ಕೇದಾರೇಶ್ವರ ದೇವಸ್ಥಾನ:

ಕೇದಾರೇಶ್ವರ ದೇವಸ್ಥಾನ:

ಇತಿಹಾಸ ತಜ್ಞರ ಪ್ರಕಾರ, ಇದು ಶಾತವಾಹನ-ಕದಂಬರ ಕಾಲದಲ್ಲೂ ಇದ್ದಿತೆಂಬ ಅಭಿಪ್ರಾಯವಿದೆ. ಕಾರಣ ಇವರ ಆಡಳಿತದ ಸಂದರ್ಭದಲ್ಲಿ ವಿಶೇಷವಾಗಿ ನಿರ್ಮಿಸಲ್ಪಡುತ್ತಿದ್ದ ಚತುರ್ಮುಖ ಲಿಂಗಗಳು ಇಲ್ಲಿಯೂ ಸಹ ದೊರೆತಿರುವುದು.

ಚಿತ್ರಕೃಪೆ: Pawaskar Vinayak

ಕೇದಾರೇಶ್ವರ ದೇವಸ್ಥಾನ:

ಕೇದಾರೇಶ್ವರ ದೇವಸ್ಥಾನ:

ಕೇದಾರೇಶ್ವರ ದೇವಸ್ಥಾನದ ಶಿಖರದಲ್ಲಿ ಒಡ ಮೂಡಿರುವ, ಸುಂದರ ಹಾಗೂ ಆಕರ್ಷಕ ಕೆತ್ತನೆ ಹಾಗೂ ವಿನ್ಯಾಸ.

ಚಿತ್ರಕೃಪೆ: Pawaskar Vinayak

ಕೇದಾರೇಶ್ವರ ದೇವಸ್ಥಾನ:

ಕೇದಾರೇಶ್ವರ ದೇವಸ್ಥಾನ:

ಹೊಯ್ಸಳರ ಕಾಲದಲ್ಲೂ ಸಹ ಈ ದೇವಾಲಯವು ಸಾಕಷ್ಟು ನವೀಕರಣಗೊಂಡಿತೆನ್ನಲಾಗುತ್ತದೆ.

ಚಿತ್ರಕೃಪೆ: Dineshkannambadi

ಕೇದಾರೇಶ್ವರ ದೇವಸ್ಥಾನ:

ಕೇದಾರೇಶ್ವರ ದೇವಸ್ಥಾನ:

ಕೇದಾರೇಶ್ವರ ದೇವಾಲಯದ ಛಾವಣಿಯ ಒಳಭಾಗದಲ್ಲಿರುವ ಸೂಕ್ಷ್ಮ ಕೆತನೆಯ ವಿಸ್ತಾರತೆ.

ಚಿತ್ರಕೃಪೆ: Dineshkannambadi

ಕೇದಾರೇಶ್ವರ ದೇವಸ್ಥಾನ:

ಕೇದಾರೇಶ್ವರ ದೇವಸ್ಥಾನ:

ಕೇದಾರೇಶ್ವರ ದೇವಾಲಯದಲ್ಲಿರುವ ವೀರಗಲ್ಲು.

ಚಿತ್ರಕೃಪೆ: Dineshkannambadi

ಕೇದಾರೇಶ್ವರ ದೇವಸ್ಥಾನ:

ಕೇದಾರೇಶ್ವರ ದೇವಸ್ಥಾನ:

ಕೇದಾರೇಶ್ವರ ದೇವಸ್ಥಾನದ ಇತಿಹಾಸಕ್ಕೆ ಸಂಬಂಧಿಸಿದಂತೆ ಇಲ್ಲಿ ವಸ್ತು ಸಂಗ್ರಹಾಲಯವೂ ಸಹ ಇದ್ದು ಪ್ರವಾಸಿಗರು ಭೇಟಿ ನೀಡಬಹುದಾಗಿದೆ.

ಚಿತ್ರಕೃಪೆ: Pawaskar Vinayak

ಕೇದಾರೇಶ್ವರ ದೇವಸ್ಥಾನ:

ಕೇದಾರೇಶ್ವರ ದೇವಸ್ಥಾನ:

ಈ ಎರಡು ವಿಶೇಷ ದೇವಸ್ಥಾನಗಳನ್ನು ಹೊಂದಿರುವ ಬಳ್ಳಿಗಾವಿಯು ಕರ್ನಾಟಕದ ಶಿವಮೊಗ್ಗ ಜಿಲ್ಲೆಯಲ್ಲಿದೆ. ನಗರದಿಂದ 72 ಕಿ.ಮೀ ಗಳಷ್ಟು ದೂರವಿದ್ದರೆ, ತಾಲೂಕು ಕೇಂದ್ರ ಶಿಕಾರಿಪುರದಿಂದ ಕೇವಲ 21 ಕಿ.ಮೀ ದೂರವಿದೆ. ತೆರಳಲು ಬಸ್ಸುಗಳು, ಬಾಡಿಗೆ ಟ್ಯಾಕ್ಸಿಗಳು ದೊರೆಯುತ್ತವೆ.

ಚಿತ್ರಕೃಪೆ: Dineshkannambadi

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X