ಡೋಣ ಬನ್ನಿ ಸುಂದರ ವೆಲ್ಲೊರನ್ನು!
ಹುಡುಕಿ
 
ಹುಡುಕಿ
 

ಪ್ರಕೃತಿಯಲಿ ತೇಲಬೇಕೆ? ಔಲಿ ನೋಡಬಾರದೇಕೆ?

Written by: Mahesh Pallakki
Published: Tuesday, February 14, 2017, 16:30 [IST]
Share this on your social network:
   Facebook Twitter Google+ Pin it  Comments

ಸಮುದ್ರಮಟ್ಟದಿಂದ 2500 ಅಡಿ ಎತ್ತರದಲ್ಲಿರುವ ಔಲಿ ಗುಡ್ಡಗಾಡು ಪ್ರದೇಶವು ಭಾರತದಲ್ಲಿ ಅಷ್ಟೇನು ಪ್ರಸಿದ್ಧಿಯಲ್ಲಿ ಇಲ್ಲದ ಪ್ರದೇಶವಾಗಿದೆ. ಇಂತಹ ಗೌಪ್ಯಪ್ರದೇಶವಿರುವುದು ಉತ್ತರಾಖಾಂಡ್‍ನ ಚಮೋಲಿ ಎಂಬ ಜಿಲ್ಲೆಯಲ್ಲಿ. ಸ್ಕೀಯಿಂಗ್ (ಹಿಮದಲ್ಲಿ ಸ್ಕೇಟ್ ಮಾಡುವವರು) ನಂತಹ ಸಾಹಸ ಕ್ರೀಡೆಗಳಿಗೆ ಇದು ಹೇಳಿ ಮಾಡಿಸಿದ ಜಾಗವಾಗಿದೆ. ಪ್ರಕೃತಿ ಆರಾಧಕರಿಗಂತೂ ಇದೊಂದು ವರದಾನ. ಔಲಿಯಂತಹ ಸುಂದರ ತಾಣದ ಸವಿಯನ್ನು ಸವಿಯಲು ಆ ಜಾಗಕ್ಕೇ ಹೋಗಿ ಅಲ್ಲಿಯೇ ಅದನ್ನು ಅನುಭವಿಸಬೇಕು.

ಪ್ರವಾಸದ ಪಕ್ಷಿನೋಟ:

ಪ್ರವಾಸದ ಆರಂಭ : ದೆಹಲಿ
ತಲುಪಬೇಕಾದ ಜಾಗ: ಔಲಿ
ತೆಗೆದುಕೊಂಡ ದಿನಗಳು: 5 ದಿನ
ಸಾರಿಗೆಯ ವಿಧಾನ: ರಸ್ತೆ ಪ್ರಯಾಣ, ಸ್ವಂತ ವಾಹನದಲ್ಲಿ
ಒಟ್ಟು ದೂರ: 487 ಕಿ.ಮೀ.

ಇದನ್ನೂ ಓದಬಯಸುವಿರಾ?

ಉತ್ತರಾಖಂಡದ ಪ್ರಮುಖ ಪ್ರವಾಸಿ ಕ್ಷೇತ್ರಗಳು

ಪ್ರಶಸ್ತವಾದ ಸಮಯ:

ನಿಮ್ಮ ನಿಮ್ಮ ಉದ್ದೇಶಗಳ ಅನುಸಾರದ ಮೇಲೆ, ವರ್ಷದ ಯಾವುದೇ ದಿನಗಳಲ್ಲಿ ಔಲಿಯನ್ನು ಭೇಟಿ ಕೊಡಬಹುದು. ಆದರೆ ಔಲಿಯು ತನ್ನ ಹಿಮಚ್ಚಾದಿತ ಸೌಂದರ್ಯ ಹಾಗು ಸ್ಕೀಯರ್ಸಗಳಿಗೆ ಹೇಳಿಮಾಡಿಸಿದ ಜಾಗವಾದ್ದರಿಂದ, ಜನವರಿಯಿಂದ ಮಾರ್ಚ್ ನಡುವಿನ ಚಳಿಗಾಲದಲ್ಲಿ ಭೇಟಿಕೊಡುವುದು ಒಳ್ಳೆಯದು. ಔಲಿಯ ಚಿತ್ರಸದೃಶ ನೋಟವನ್ನು ನೋಡಬಯಸುವ ಪ್ರವಾಸಿಗರು ಜುಲೈ ಹಾಗು ಆಗಸ್ಟ್ ತಿಂಗಳಲ್ಲಿ ಭೇಟಿನೀಡಬಹುದು.

ಚಿತ್ರಕೃಪೆ: Induhari

 

ದೆಹಲಿಯಿಂದ ಪ್ರಯಾಣ

ಬೆಳಗಿನ ಉಪಹಾರದ ಬಳಿಕ, ಔಲಿಯನ್ನು ನೋಡುವ ಸಲುವಾಗಿ ದೆಹಲಿಯಿಂದ ಹೊರಟೆನು.ಧೀರ್ಘ 5ಗಂಟೆಗಳ ಪ್ರಯಾಣದ ನಂತರ ಮೊದಲ ನಿಲುಗಡೆಯಾದದ್ದು ರಿಷಿಕೇಶದಲ್ಲಿ. ಬೆಳ್ಳಂಬೆಳಗ್ಗೆಯೇ ಹೊರಟದ್ದರಿಂದ ಟ್ರಾಫಿಕ್ ನ ಯಾವುದೇ ಕಿರಿಕಿರಿಯಿಲ್ಲದೇ 225ಕಿ.ಮೀ ದೂರದ ರಿಷಿಕೇಶವನ್ನು ಸುಲಭವಾಗಿಯೇ ತಲುಪಿದೆನು. ರಿಷಿಕೇಶವನ್ನು ತಲುಪಲು ಬಳಸಿದ ಮಾರ್ಗ: ದೆಹಲಿ-ಗಜಿಯಾಬಾದ್-ಮೋದಿನಗರ್-ಮೀರತ್-ಖತೌಲಿ-ಮುಜಫ್ಫರ್ ನಗರ್- ರೂರ್ಕಿ-ಹರಿದ್ವಾರ-ರಿಷಿಕೇಶ

ಚಿತ್ರಕೃಪೆ: meg and rahul

 

ನೀರಜ್ ಭವನ್

ರಿಷಿಕೇಶವನ್ನು ತಲುಪಿದ ನಂತರ ನೀರಜ್ ಭವನ್ ಹೋಟೆಲಿನಲ್ಲಿ ವಾಸ್ತವ್ಯ ಹೂಡಿದೆನು. ರೈಲು ನಿಲ್ದಾಣಕ್ಕೆ ಈ ಹೋಟೆಲ್ ಬಹಳ ಹತ್ತಿರವಿದೆ ಹಾಗೂ ಕೇವಲ 0.7ಕಿಮೀ ದೂರದಲ್ಲಿ ಹರಿದ್ವಾರದ ಷಾಪಿಂಗ್ ರಸ್ತೆ ಸಿಗುತ್ತದೆ. ಬಾಲ್ಕನಿಯುಳ್ಳ ವಿಶಾಲವಾದ ರೂಮುಗಳು, ಉತ್ತಮ ಆತಿಥ್ಯ ಹಾಗು ಆಹಾರ ಎಲ್ಲವೂ ಇಲ್ಲಿ ಆರ್ಥಿಕವಾಗಿ ಕೈಗೆಟುಕುವಂತಿದೆ. ಹೋಟೆಲಿನಲ್ಲಿ ಎಲ್ಲ ಅನುಕೂಲಗೊಳಿಸಿಕೊಂಡು ರಿಷಿಕೇಶವನ್ನು ನೋಡಲು ಹೊರಟೆನು.

ಚಿತ್ರಕೃಪೆ: Aleksandr Zykov

 

ಅಮೋಘ

ರಿಷಿಕೇಶ್ ನ ಪ್ರವಾಸಿ ಜಾಗಗಳಾದ ರಾಮ್ ಝುಲಾ, ನೀಲಕಂಠ ಮಹಾದೇವ ದೇವಸ್ಥಾನ, ರಾಜಾಜಿ ನ್ಯಾಷನಲ್ ಪಾರ್ಕ್, ಭರತ ಮಂದಿರ ಮತ್ತು ಲಕ್ಷ್ಮಣ ಝುಲಾ ಎಲ್ಲವನ್ನೂ ತಿರುಗಾಡಿದೆನು, ಅಲ್ಲಿ ಅಡ್ಡಾಡಿದ ನನಗೆ ಅನ್ನಿಸಿದ್ದು ರಿಷಿಕೇಶ್ ನಿಜವಾಗಲೂ ಪ್ರವಾಸಿಗರನ್ನು ಅನೇಕ ಕಾರಣಗಳಿಂದ ಸೆಳೆಯುವ ಒಂದು ಉತ್ತಮ ಪ್ರವಾಸಿ ತಾಣ. ರಾಮ ಝೂಲಾ.

ಚಿತ್ರಕೃಪೆ: Asis K. Chatterjee

 

ಮುಂದೆ ಸಾಗು

ಬೆಳಗ್ಗೆ ಬೇಗನೇ ತಿಂಡಿ ಮುಗಿಸಿ, ರಿಷಿಕೇಶ್ ನಿಂದ ನನ್ನ ಮುಂದಿನ ಪ್ರಯಾಣ ಜೋಶಿಮಠದ ಕಡೆಗೆ ಹೊರಟಿತು. ರಿಷಿಕೇಶ್ ನಿಂದ ಜೋಶಿಮಠ್ ಗೆ ಸುಮಾರು 270 ಕಿ.ಮೀ ದೂರವಿದೆ. ಅಲ್ಲಿಗೆ ತಲುಪಲು ನನಗೆ ಹಿಡಿದದ್ದು 9 ಗಂಟೆಗಳು. ಜೋಶಿಮಠದಿಂದ ಔಲಿಗೆ ಕೇವಲ 16 ಕಿ.ಮೀ. ನಾನು ಔಲಿಗೆ ಪ್ರಯಾಣ ಬೆಳೆಸಿದ್ದು ಚಳಿಗಾಲದಲ್ಲಾದ್ದರಿಂದ , ಔಲಿಯ ಕಡೆಗಿನ ರಸ್ತೆಗಳು ಅಷ್ಟೇನು ಸುಲಭದ್ದಾಗಿರಲಿಲ್ಲ. ಡಿಸೆಂಬರ್ ಹಾಗು ಮಾರ್ಚ್ ಮಧ್ಯದವರೆಗೂ ಅತಿಯಾದ ಹಿಮ ಬೀಳುವುದರಿಂದ ಇಲ್ಲಿ ಇದು ಸಹಜ.

ಚಿತ್ರಕೃಪೆ: Raji.srinivas

 

ಕೇಬಲ್ ಕಾರ್

ಈ ಕಾರಣದಿಂದಾಗಿ ಕೇಬಲ್ ಸವಾರಿಯ ಮುಖಾಂತರವೇ ಔಲಿಗೆ ತಲುಪಬೇಕಾಗುತ್ತದೆ. ಹೀಗಾಗಿ ನಾನು ನನ್ನ ಕಾರನ್ನು ರೋಪ್ ವೇ ಪಾರ್ಕ್ ನ ಬಳಿಯಲ್ಲೇ ನಿಲ್ಲಿಸಿ, ಕೇಬಲ್ ಸವಾರಿಯ ಮುಖಾಂತರ ಹೊರಟೆ. 4 ಕಿ.ಮೀ ಗಳ ಈ ರೋಪ್ ವೇ ದಾರಿಯು ಅತ್ಯಂತ ಸುಂದರ ಹಿಮಾಲಯ ಪರ್ವತಗಳ ದರ್ಶನ ಮಾಡಿಸುತ್ತದೆ. ಈ ಕೇಬಲ್ ಕಾರಿನಲ್ಲಿ ಕೇವಲ 25 ಜನರು ಮಾತ್ರ ಪಯಣಿಸಲು ಸಾಧ್ಯ.

ಚಿತ್ರಕೃಪೆ: christian0702

 

ಹತ್ತು ಜನ

ಕೇಬಲ್ ಕಾರ್ ನ ನಿರ್ವಾಹಕರು ಕನಿಷ್ಠ 10 ಮಂದಿ ಆಗುವವರೆಗೂ ಸವಾರಿಯನ್ನು ಆರಂಭಿಸುವುದಿಲ್ಲ. ಇದರ ಮೂಲಕ ಔಲಿಯನ್ನು ತಲುಪಲು 20 ರಿಂದ 25 ನಿಮಿಷಗಳು ಬೇಕು. ಅಲ್ಲಿಗೆ ತಲುಪಿದ ಮೇಲೆ ದೇವಿ ದರ್ಶನ್ ಲಾಡ್ಜ್ ನಲ್ಲಿ ಉಳಿಯುವ ವ್ಯವಸ್ತೆ ಮಾಡಿಕೊಂಡೆನು. ಔಲಿಯನ್ನು ನೋಡುವ ಮುನ್ನ ಪ್ರಯಾಣದ ದಣಿವನ್ನು ನೀಗಿಸಿ ಉತ್ಸಾಹಭರಿತನಾಗಿ ಪಯಣ ಮುಂದುವರೆಸುವ ಹಂಬಲ ನನ್ನದು.

ಚಿತ್ರಕೃಪೆ: Anuj Kumar Garg

 

ಮನಮೋಹಕ ದೃಶ್ಯ

ದೇವಿ ದರ್ಶನ್ ಒಂದು ಉತ್ತಮವಾದ ಶುಭ್ರತೆಯಿಂದ ಕೂಡಿದ ಹೋಟೆಲ್.ಇಲ್ಲಿನ ಊಟವೂ ಅಷ್ಟೆ. ದೇವಿ ದರ್ಶನ್ ಹೋಟೆಲ್ ನಿಂದ ನೋಡಿದರೆ 7817 ಮೀ ಎತ್ತರವಿರುವ ನಂದಾ ದೇವಿ ಪರ್ವತದ ಮನಮೋಹಕ ದೃಶ್ಯ ಕಣ್ಣಿಗೆ ಬೀಳುತ್ತದೆ. ಒಟ್ಟಾರೆ ಹೇಳಬೇಕೆಂದರೆ ಈ ಹೋಟೆಲ್ ಮಿತವ್ಯಯಿಗಳಿಗೆ ಹೇಳಿಮಾಡಿಸಿದ ಜಾಗ.

ಚಿತ್ರಕೃಪೆ: Michael Scalet

 

ಸ್ಕೀಯಿಂಗ್

ಸ್ಕೀಯಿಂಗ್ ಹಾಗೂ ಟ್ರೆಕ್ಕಿಂಗ್ ಮಾಡುವ ಸಲುವಾಗಿ ನಾನು ಮುಂಜಾನೆ ಬೇಗ ಎದ್ದು ತಯಾರಾಗಿ ಹೊರಟೆನು. ಸರಿಯಾದ ಅನುಭವವಿಲ್ಲದೆ, ಸ್ಕೀಯಿಂಗ್ ಹಾಗೂ ಸ್ನೋ ಬೋರ್ಡಿಂಗ್ ನಂತಹ ಸಾಹಸ ಕ್ರೀಡೆಗಳನ್ನು ಆಡುವುದು ಸ್ವಲ್ಪ ಕಷ್ಟದ ಕೆಲಸ. ಆದರೂ ಒಂದು ಪ್ರಯತ್ನ ಮಾಡಿ ನೋಡಲು ತವಕಿಸುತ್ತಿದ್ದೆ. ಅಲ್ಲಿ ಹಲವಾರು ಮಾರ್ಗದರ್ಶಕರು ಸಾಹಸ ಕ್ರೀಡೆಗಳ ಬಗ್ಗೆ ಮಾರ್ಗದರ್ಶನ ನೀಡಲು ಸಿಗುತ್ತಾರೆ, ಅವರಿಗೆ ಸ್ವಲ್ಪ ಹಣ ನೀಡಿ ಸೇವೆಯನ್ನು ಪಡೆಯಬಹುದು.

ಚಿತ್ರಕೃಪೆ: Anuj Kumar Garg

 

ವಿಶಿಷ್ಟ ಅನುಭವ

ಅಲ್ಲಿಯ ಒಬ್ಬ ಮಾರ್ಗದರ್ಶಕರು ಇದನ್ನು ಕಲಿಯಲು ಒಂದು ವಾರಗಳಷ್ಟು ಸಮಯ ಬೇಕಾಗುತ್ತದೆ ಎಂದು ನನಗೆ ಹೇಳಿದರು. ಆದರೆ ಅವರು ಹೇಳಿದಷ್ಟು ಸಮಯ ನನ್ನ ಈ ಬಾರಿಯ ಪುಟ್ಟ ಪ್ರಯಾಣದ ಅವಧಿಯಲ್ಲಿ ಇಲ್ಲವೆಂಬ ಅರಿವು ನನಗಿತ್ತಾದರೂ, ಬೆಳಗಿನ ಕೆಲ ಸಮಯವನ್ನು ಸ್ಕೀಯಿಂಗ್ ಅನ್ನು ಕಲಿಯಲು ಉಪಯೋಗಿಸಿದೆನು. ಮಿಕ್ಕ ಸಮಯವನ್ನು ಟ್ರೆಕ್ಕಿಂಗ್ ಮಾಡಲು ಮತ್ತು ಇತರ ಪ್ರವಾಸಿ ತಾಣಗಳನ್ನು ನೋಡಲು ಕಳೆದೆನು.

ಚಿತ್ರಕೃಪೆ: Ishan Manjrekar

 

ದ್ರೋಣ ಶಿಖರ

ನನ್ನ ಮೊದಲ ಭೇಟಿ ಔಲಿಯ ಚಿತ್ರಸದೃಶ ತಾಣವಾದಂತಹ ಗುರ್ಸೋ ಬುಗ್ಯಾಲ್ .ಇಲ್ಲಿಂದಲೇ ದ್ರೋಣ್ ಶಿಖರ ಹಾಗೂ ತ್ರಿಶೂಲ್ ಶಿಖರದ ಸುಂದರ ದೃಶ್ಯವನ್ನು ನೋಡಿ ಆನಂದಿಸಿದೆನು. ತ್ರಿಶೂಲ್ ಶಿಖರದ ತಳದಲ್ಲಿ ರಾಷ್ಟ್ರೀಯ ಉದ್ಯಾನವನದಿಂದ ಸುತ್ತುವರೆದ ರೂಪಕುಂಡ್ ಎಂಬ ಕೆರೆಯಿದೆ. ಅಲ್ಲಿಂದ ನಾನು ಪರಿಶುದ್ದ ತಿಳಿನೀರಿನಿಂದ ಕೂಡಿದ ಪ್ರಸಿದ್ದ ಛತ್ರಕುಂಡ್ ಎಂಬ ಕೆರೆಗೆ ಭೇಟಿಕೊಟ್ಟೆ.

ಚಿತ್ರಕೃಪೆ: Vaibhav Dautkhani

 

ಕೆರೆ

ಇದು ಗುರ್ಸೋ ಬುಗ್ಯಾಲ್ ಯಿಂದ ಒಂದು ಕಿ.ಮೀ ದೂರದಲ್ಲಿದ್ದು ಪಿಕ್ ನಿಕ್ ಗೆ ಬರುವ ಪ್ರವಾಸಿಗರಿಗೆ ಇದು ಅತ್ಯಂತ ಮೆಚ್ಚಿನ ತಾಣವಾಗಿದೆ. ಅಲ್ಲದೆ ಇಲ್ಲಿ ಮಾನವ ನಿರ್ಮಿತ ಕೃತಕ ಕೆರೆಯನ್ನು ನಿರ್ಮಿಸಲಾಗಿದ್ದು, ಕೃತಕ ಹಿಮವೂ ಬೀಳುವಂತೆ ಮಾಡಲಾಗಿದೆ. ಈ ಕೆರೆಯು ಹಿಮಾಲಯ ಪರ್ವತಗಳಿಂದ ಸುತ್ತುವರೆದಿದೆ. ಇಲ್ಲಿನ ಸೌಂದರ್ಯವನ್ನು ಕಂಡು ನಾನೆಲ್ಲೋ ಸ್ವಿಟ್ಜರ್ಲ್ಯಾಂಡ್ ನಲ್ಲಿದ್ದೇನೇನೋ ಎಂಬಷ್ಟು ಸಂತಸವಾಯಿತು.

ಚಿತ್ರಕೃಪೆ: Ishan Manjrekar

 

ಟ್ರೆಕ್ಕಿಂಗ್

ಉಳಿದ ಸಮಯವನ್ನು ಔರಿ ಪಾಸ್ ನಲ್ಲಿ ಟ್ರೆಕ್ಕಿಂಗ್ ಮಾಡುವ ಮೂಲಕ ಕಳೆದೆನು. ಇದು ಗರ್ವಾಲ್ ಹಿಮಾಲಯದಲ್ಲಿ, ಸಮುದ್ರಮಟ್ಟದಿಂದ 4268 ಮೀಟರ್ ಎತ್ತರದಲ್ಲಿದೆ. ಹರಡಿನಿಂತಿರುವ ಹಿಮಾಲಯದ ಸುಂದರ ಸಾಲುಗಳು ನಾನು ಕೈಗೊಂಡ ಟ್ರೆಕ್ಕಿಂಗ್ ನ ಅತ್ಯಂತ ರಸಮಯಕ್ಷಣಗಳಾಗಿ ನನ್ನ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿಯಿತು.

ಚಿತ್ರಕೃಪೆ: Peter Pham

 

ಮತ್ತೆ ಸ್ಕೀಯಿಂಗ್

ನನ್ನ ನಾಲ್ಕನೆಯ ದಿನವು ನನ್ನ ಸ್ಕೀಯಿಂಗ್ ಅಭ್ಯಾಸದ ಪ್ರಯತ್ನದೊಂದಿಗೆ ಶುರುವಾಯಿತು. ಮತ್ತೊಮ್ಮೆ ಇದೊಂದು ಆಹ್ಲಾದಕರವಾದ ಅನುಭವವನ್ನು ನೀಡಿತಲ್ಲದೆ, ಸ್ಕೀಯಿಂಗ್ ಅನ್ನು ಸ್ವಲ್ಪಮಟ್ಟಿಗೆ ಕಲಿತೂ ಇದ್ದೆ. ಕೆಲವು ಗಂಟೆಗಳ ಅಭ್ಯಾಸದ ಬಳಿಕ ಚಮೋಲಿ ಜಿಲ್ಲೆಯ ವಿಷ್ಣು ಪ್ರಯಾಗಕ್ಕೆ ನನ್ನ ಪಯಣ ಹೊರಟಿತು.1889ರಲ್ಲಿ ನಿರ್ಮಾಣಗೊಂಡ ಈ ವಿಷ್ಣು ದೇವಾಲಯದ ಸೃಷ್ಟಿಯೇ ಒಂದು ಅದ್ಭುತ ಹಾಗು ಕೌತುಕಮಯವಾದದ್ದು.

ಚಿತ್ರಕೃಪೆ: Fowler&fowler

 

ಸಾಕಷ್ಟು ಆಯ್ಕೆಗಳು

ಇಲ್ಲಿ ಕೆಲ ಸಮಯ ಕಳೆದ ನಂತರ ಶಾಪಿಂಗ್ ಮಾಡುವ ಮನಸ್ಸಾಯಿತು. ಔಲಿಯ ನೆನಪಿಗಾಗಿ ಕೆಲವೊಂದು ವಸ್ತುಗಳನ್ನು ಖರೀದಿಸಿ ನನ್ನ ಗೆಳೆಯರಿಗಾಗಿ ಕೆಲವು ಉಡುಗೊರೆಗಳನ್ನು ಖರೀದಿಸಿದೆನು. ಬಟ್ಟೆಗಳಿಂದ ಹಿಡಿದು , ಸಿಹಿತಿನಿಸುಗಳವರೆಗೆ ಔಲಿಯಲ್ಲಿ ಖರೀದಿಸಲು ಹಲವಾರು ಆಯ್ಕೆಗಳು ನಮ್ಮ ಮುಂದಿರುತ್ತದೆ. ಹಾಗಾಗಿ ಶಾಪಿಂಗ್ ಮಾಡಲೂ ಸಹ ಔಲಿಯಲ್ಲಿ ಅವಕಾಶಗಳಿವೆ.

ಚಿತ್ರಕೃಪೆ: Mandeep Thander

 

ಮತ್ತೆ ಮನೆಯತ್ತ...

ಐದನೆಯ ದಿನ ದೆಹಲಿಗೆ ವಾಪಾಸ್ಸಾಗಲು ಗುರುತು ಮಾಡಿದ್ದ ದಿನ. ನನ್ನ ಕಾರನ್ನು ಎಲ್ಲಿ ನಿಲ್ಲಿಸಿದ್ದೆನೋ ಅಲ್ಲಿಂದ ದೆಹಲಿಯ ಕಡೆಗೆ ನನ್ನ ಪಯಣ ಶುರುವಾಯಿತು. ಭಾರವಾದ ಹೃದಯದಿಂದ ಔಲಿಯನ್ನು ಬೀಳ್ಕೊಡಬೇಕಾಯಿತು. ಔಲಿಗೆ ಮತ್ತೊಮ್ಮೆ ಭೇಟಿ ನೀಡಿ ಸ್ಕೀಯಿಂಗ್ ಅನ್ನು ಕಲಿಯಬೇಕೆಂದು ತೀರ್ಮಾನಿಸಿದೆನು. ಔಲಿ, ಇದೊಂದು ಹಿಮಾಲಯದ ತೋಳುಗಳಲ್ಲಿ ಅಡಗಿಸಿದ ಸುಂದರ ಹರಳು ಎಂಬ ವರ್ಣನೆ ಅತಿಶಯೋಕ್ತಿಯಾಗಲಾರದು.

ಚಿತ್ರಕೃಪೆ: Rick McCharles

 

English summary

Auli : The Hidden Paradise of Uttarakhand!

Auli is a beautiful hill station located in the Chamoli district of Uttarakhand state, India. Auli is well known destination for skiing.
Please Wait while comments are loading...