Search
  • Follow NativePlanet
Share
» »ಸಾಹಸಮಯ ಸಾರ್ ಕಣಿವೆ ಮಾರ್ಗದ ಟ್ರೆಕ್!

ಸಾಹಸಮಯ ಸಾರ್ ಕಣಿವೆ ಮಾರ್ಗದ ಟ್ರೆಕ್!

ಹಿಮಾಚಲ ಪ್ರದೇಶ ರಾಜ್ಯದ ಕುಲ್ಲು ಜಿಲ್ಲೆಯ ಪಾರ್ವತಿ ಕಣಿವೆ ಪ್ರದೇಶದಲ್ಲಿರುವ ಸಾರ್ ಪಾಸ್ ಟ್ರೆಕ್ ಮಾರ್ಗವು ಒಂದು ಅದ್ಭುತ ಅನುಭವ ನೀಡುವ ರೋಮಾಂಚನಭರಿತ ಚಾರಣ ಪಥವಾಗಿದೆ

By Vijay

ಉತ್ತರ ಭಾರತದ ಉತ್ತರಾಖಂಡವಾಗಿರಬಹುದು, ಜಮ್ಮು-ಕಾಶ್ಮೀರವಾಗಿರಬಹುದು ಇಲ್ಲವೆ ಹಿಮಾಚಲ ಪ್ರದೇಶವಾಗಿರಬಹುದು, ಎಲ್ಲವೂ ಸಾಹಸಮಯ ಪ್ರವಾಸಿ ಚಟುವಟಿಕೆಯಾದ ಚಾರಣಕ್ಕೆ ಸುವರ್ಣಾವಕಾಶ ಒದಗಿಸುವ ರಾಜ್ಯಗಳಾಗಿವೆ.

ಇಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಸಾಹಸಮಯ ಚಾರಣ ಮಾರ್ಗಗಳಿದ್ದು ನಿಪುಣ ಚಾರಣಗಾರರಿಗೂ ಸಹ ಸವಾಲೆಸೆಯುವಂತಿದೆ. ಇನ್ನೂ ಈ ಚಾರಣ ಮಾಡುವಾಗ ಕಂಡುಬರುವ ಅಥವಾ ಸಿಗುವ ಪ್ರಾಕೃತಿಕ ಸಂಪತ್ತನ್ನು ಶಬ್ದಗಳಲ್ಲಿ ವರ್ಣಿಸುವುದು ಅಸಾಧ್ಯ. ಏನೆ ಆದರೂ ಅದನ್ನು ಚಾರಣ ಮಾಡುತ್ತ ಅನುಭವಿಸಿಯೆ ತೀರಬೇಕು.

ವಯಸ್ಸು ಇನ್ನೂ 40 ದಾಟಿಲ್ಲವೆ? ಹಾಗಾದರೆ ಈ ಚಾರಣ ಮಾಡ್ಬಿಡಿ!

ಅಂತೆಯೆ ಎಷ್ಟೊ ಚಾರಣಗಳು ಬಲು ಅಪಾಯಕಾರಿ ಅಥವಾ ಜೀವಕ್ಕೆ ಕುತ್ತು ತರುವಂತಹ ಸಂಭವನೀಯತೆ ಹೊಂದಿದ್ದರೂ ಇಲ್ಲಿ ಚಾರಣ ಮಾಡದೆ ಇರುವವರ ಸಂಖ್ಯೆಯೂ ವಿರಳವೆ ಆಗಿದೆ. ಹಿಮಚ್ಛಾದಿತ ಪರ್ವತಹ್ಗಳ ಗಮ್ಯ ನೋಟ, ಶುದ್ಧ ನೀರಿನ ಕೊಳಗಳು, ಮಂಜುಗಡ್ಡೆಯ ಅಡೆ-ತಡೆಗಳು, ಮೈಚುಚ್ಚುವಂತಹ ಚಳಿ ಒಂದು ರೋಮಾಂಚನ ಅನುಭೂತಿಯನ್ನೆ ನೀಡುತ್ತವೆ.

ಪ್ರಸ್ತುತ ಲೇಖನದ ಸಾರ್ ಪಾಸ್ ಚಾರಣದ ಕುರಿತು ತಿಳಿಸಲಾಗಿದೆ. ಈ ಚಾರಣ ಮಾರ್ಗವು ಹಿಮಾಚಲ ಪ್ರದೇಶ ರಾಜ್ಯದಲ್ಲಿದ್ದು ಜಗತ್ತಿನಾದ್ಯಂತ ಸಾಹಸಮಯ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಹಾಗಾದರೆ ಈ ಲೇಖನದಲ್ಲಿ ಸಾರ್ ಪಾಸ್ ಚಾರಣದ ಕುರಿತು ಉಪಯುಕ್ತ ಮಾಹಿತಿ ಪಡೆಯಿರಿ.

ಹಿಮಾಚಲ

ಹಿಮಾಚಲ

ಸಾರ್ ಪಾಸ್ ಟ್ರೆಕ್ ಅನ್ನು ಹಿಮಾಚಲದಲ್ಲಿರುವ ಅತಿ ಸುಂದರ ಚಾರಣ ಮಾರ್ಗಗಳಲ್ಲಿ ಒಂದಾಗಿ ಪರಿಗಣಿಸಲಾಗುತ್ತದೆ. ಹಾಗಾಗಿ ಈ ಚಾರಣ ಮಾಡಬಯಸುವವರು ವರ್ಷದ ನಿರ್ದಿಷ್ಟ ಸಮಯಕ್ಕೆ ಹಿಮಾಚಲಕ್ಕೆ ಭೇಟಿ ನೀಡುತ್ತಾರೆ.

ಚಿತ್ರಕೃಪೆ: Navudt

ಹಾದು ಹೋಗಿದೆ

ಹಾದು ಹೋಗಿದೆ

ಈ ಚಾರಣ ಮಾರ್ಗವು ಹಿಮಾಚಲದಲ್ಲಿರುವ, ಅದ್ಭುತ ಪ್ರಕೃತಿ ಸೌಂದರ್ಯ ಹೊಂದಿರುವ ಪಾರ್ವತಿ ಕಣಿವೆಯಲ್ಲಿ ಸ್ಥಿತವಿರುವುದರಿಂದ ಚಾರಣದ ಸಂದರ್ಭದಲ್ಲಿ ಸೃಷ್ಟಿ ಸೌಂದರ್ಯದ ನಯನ ಮನೋಹರ ಭೂದೃಶ್ಯಾವಳಿಗಳನ್ನು ವೀಕ್ಷಿಸಬಹುದಾಗಿದೆ.

ಚಿತ್ರಕೃಪೆ: J.M.Garg

ಕೆರೆ

ಕೆರೆ

ಹಿಮಾಚಲಿ ಭಾಷೆಯಲ್ಲಿ ಸಾರ್ ಎಂದರೆ ಕೆರೆ ಅಥವಾ ಸರೋವರ ಎಂಬರ್ಥವಿದೆ. ಅಂದರೆ ಈ ಚಾರಣ ಮಾರ್ಗವು ಹಿಮಗಟ್ಟಿದ ಸಾರ್ ಕೆರೆಯ ಮೂಲಕವೆ ಹಾದು ಹೋಗಿರುವುದರಿಂದ ಇದಕ್ಕೆ ಸಾರ್ ಪಾಸ್ ಟ್ರೆಕ್ ಎಂದು ಕರೆಯಲಾಗುತ್ತದೆ.

ಚಿತ್ರಕೃಪೆ: J.M.Garg

ಕಸೋಲ್

ಕಸೋಲ್

ಕುಲ್ಲು-ಮನಾಲಿಯ ಮನಾಲಿ ಬಳಿಯಿರುವ ಕಸೋಲ್ ಎಂಬ ಗ್ರಾಮವು ಈ ಟ್ರೆಕ್ ನ ಪ್ರಾರಂಭ ಘಟ್ಟವಾಗಿರುತ್ತದೆ. ಇನ್ನೊಂದು ವಿಷಯವೆಂದರೆ ಹಲವಾರು ಟ್ರೆಕ್ ಸಂಸ್ಥೆಗಳು, ಪ್ರವಾಸಿ ಸೇವೆ ಸಂಸ್ಥೆಗಳು ಋತುಮಾನದ ಸಮಯದಲ್ಲಿ ಸಾರ್ ಪಾಸ್ ಚಾರಣವನ್ನು ಆಯೋಜಿಸುತ್ತವೆ.

ಚಿತ್ರಕೃಪೆ: Yhaindia

ಯೋಜಿಸಿ

ಯೋಜಿಸಿ

ಹಾಗಾಗಿ ಈ ಚಾರಣ ಮಾಡಬಯಸುವವರು ಮುಂಚಿತವಾಗಿಯೆ ಯೋಜನೆ ಸಿದ್ಧ ಮಾಡಿಕೊಂಡು ಈ ಸಂಸ್ಥೆಗಳ ಮೂಲಕ ನಿಗದಿತ ಶುಲ್ಕ ಭರಿಸಿ ಈ ಅದ್ಭುತ ಆನಂದದ ಚಾರಣವನ್ನು ಅನುಭವಿಸಬಹುದಾಗಿದೆ.

ಚಿತ್ರಕೃಪೆ: Suresh Karia

ಆಯ್ಕೆ ಮಾಡಿಕೊಳ್ಳಿ

ಆಯ್ಕೆ ಮಾಡಿಕೊಳ್ಳಿ

ಚಾರಣ ಏರ್ಪಡಿಸುವ ಸಂಸ್ಥೆಗಳು ಹಲವಾರು ಆಯ್ಕೆಗಳನ್ನು ನೀಡುತ್ತವೆ ಹಾಗೂ ಪ್ರವಾಸಿಗರು ತಮಗಿಷ್ಟವಾದ ಆಯ್ಕೆಯನ್ನು ಆಯ್ಕೆ ಮಾಡಿ ಈ ಚಾರಣ ಮಾಡಬಹುದು. ಕೆಲವು ಮುಂಜಾಗೃತಾ ಕ್ರಮಗಳನ್ನು ತೆಗೆದುಕೊಳ್ಳುವುದು ಅನಿವಾರ್ಯ.

ಚಿತ್ರಕೃಪೆ: Suresh Karia

ಮೇ ನಿಂದ ಅಕ್ಟೋಬರ್

ಮೇ ನಿಂದ ಅಕ್ಟೋಬರ್

ಸಾಮಾನ್ಯವಾಗಿ ಮೇ ನಿಂದ ಅಕ್ಟೋಬರ್ ವರೆಗಿನ ಸಮಯವು ಈ ಚಾರಣ ಮಾಡಲು ಯೋಗ್ಯವಾಗಿದ್ದು ಅದಕ್ಕೆ ಮುಂಚಿತವಾಗಿಯೆ ನಿಮ್ಮ ಹೆಸರುಗಳನ್ನು ಆನ್ಲೈನ್ ಮೂಲಕ ಈ ಚಾರಣ ಸಂಸ್ಥೆಗಳಲ್ಲಿ ನೊಂದಾಯಿಸಕೊಳ್ಳಬಹುದಾಗಿದೆ.

ಚಿತ್ರಕೃಪೆ: J.M.Garg

ಬಲು ಸುಂದರ

ಬಲು ಸುಂದರ

ಈ ಚಾರಣ ಮಾಡುವಾಗ ಒಂದೊಂದು ಸ್ಥಳಗಳೂ ಒಂದೊಂದು ರೀತಿಯ ಅದ್ಭುತ ಅನುಭವ ನೀಡುತ್ತವೆ. ಟ್ರೆಕ್ ಮಾರ್ಗವು ಕಾಡುಗಳಲ್ಲಿ, ಹಿಮದಲ್ಲಿ, ಹುಲ್ಲುಗಾವಲಿನಲ್ಲಿ ವ್ಯಾಪಿಸಿರುವುದರಿಂದ ಸಾಕಷ್ಟು ರೋಮಾಂಚನ ಉಂಟಾಗುವುದರಲ್ಲಿ ಸಂಶಯವಿಲ್ಲ.

ಚಿತ್ರಕೃಪೆ: J.M.Garg

ಸೃಷ್ಟಿ ಸೌಂದರ್ಯಕ್ಕೆ

ಸೃಷ್ಟಿ ಸೌಂದರ್ಯಕ್ಕೆ

ಇನ್ನೂ ಕುಲ್ಲುವಿನಲ್ಲಿರುವ ಪಾರ್ವತಿ ಕಣಿವೆಯು ತನ್ನ ಅದ್ಭುತ ಸೌಂದರ್ಯಕ್ಕಾಗಿ ಸಾಕಷ್ಟು ಪ್ರಸಿದ್ಧಿಗಳಿಸಿದೆ. ಅಲ್ಲದೆ ಈ ಚಾರಣವೂ ಸಹ ಆ ಕಣಿವೆಯ ಮೂಲಕವೆ ಸಾಗುವುದರಿಂದ ಹಿಮಾಚಲದ ನೈಜ ಸೌಂದರ್ಯವನ್ನು ನಿಮ್ಮ ಕಣ್ಮನಗಳಲ್ಲಿ ತುಂಬಿಕೊಳ್ಳಬಹುದು.

ಚಿತ್ರಕೃಪೆ: Suresh Karia

ಈ ಚಾರಣ

ಈ ಚಾರಣ

ಸಾಮಾನ್ಯವಾಗಿ ಈ ಟ್ರೆಕ್ ಆರಂಭವಾಗುವುದು ಕಸೋಲ್ ಗ್ರಾಮದಿಂದ. ಕಸೋಲ್ ಗ್ರಾಮವು ಮನಾಲಿಗೆ ಬಲು ಹತ್ತಿರದಲ್ಲಿದ್ದು ಸುಲಭವಾಗಿ ತಲುಪಬಹುದಾಗಿದೆ. ಮೊದಲಿಗೆ ಕಸೋಲ್ ನಲ್ಲಿ ವಿವಿಧ ಚಾರಣ ಆಯೋಜನ ಸಂಸ್ಥೆಗಳು ಚಾರಣದ ಕುರಿತು ಮೂಲ ತರಬೇತಿ ಅಥವಾ ಮಾರ್ಗದರ್ಶನ ಶಿಬಿರವನ್ನು ಆ ದಿನ ಸಂಜೆಯಲ್ಲಿ ಏರ್ಪಡಿಸುತ್ತವೆ.

ಚಿತ್ರಕೃಪೆ: T.prachi

ಅವಶ್ಯಕ

ಅವಶ್ಯಕ

ಚಾರಣ ಮಾಡುವಾಗ ಎದುರಾಗಬಹುದಾದ ಅಡೆ-ತಡೆಗಳು, ಅವುಗಳನ್ನು ಎದುರಿಸುವ ಬಗೆ, ನಡೆಯುವ ರೀತಿ, ಹೀಗೆ ಮುಂತಾದ ಅನೇಕ ವಿಚಾರಗಳ ಮೇಲೆ ಮಾರ್ಗದರ್ಶನವನ್ನು ನೀಡಲಾಗುತ್ತದೆ. ಆ ದಿನದಂತೆ ನೊಂದಾವಣಿಯಂತಹ ಕಾರ್ಯಗಳು ಸಂಪೂರ್ಣಗೊಳ್ಳುತ್ತವೆ. ಇನ್ನೇನಿದ್ದರೂ ಚಾರಣ ಪ್ರಾರಂಭ ಅದೂ ಮರುದಿನದಿಂದ.

ಚಿತ್ರಕೃಪೆ: J.M.Garg

ಕ್ಯಾಂಪಿಂಗ್

ಕ್ಯಾಂಪಿಂಗ್

ಕಸೋಲ್ ನಿಂದ ಪ್ರಾರಂಭವಾಗುವ ಈ ಟ್ರೆಕ್ ಗ್ರಹಣ್ ಎಂಬ ಇನ್ನೊಂದು ಹಳ್ಳಿಯವರೆಗೂ ನಡೆದುಕೊಂಡು ಹೋಗುವ ಮಾರ್ಗವಾಗಿದೆ. ಸುಮಾರು ಐದಾರು ಘಂಟೆಗಳ ಚಾರಣದ ಬಳಿಕ ಗ್ರಹಣ್ ಹಳ್ಳಿ ದೊರೆಯುತ್ತದೆ. ಇಲ್ಲಿಯೆ ಆ ರಾತ್ರಿಯ ಕ್ಯಾಂಪಿಂಗ್. ಸಂಸ್ಥೆಗಳೆ ಊಟ-ತಿಂಡಿಗಳ ವ್ಯವಸ್ಥೆಯನ್ನು ಮಾಡಿರುತ್ತವೆ.

ಚಿತ್ರಕೃಪೆ: Surajhaveri

ಪಡ್ರಿ

ಪಡ್ರಿ

ಮರುದಿನ ಮತ್ತೆ ಪ್ರಾರಂಭವಾಗುವ ಟ್ರೆಕ್ ಪಡ್ರಿ ಎಂಬ ಸ್ಥಳಕ್ಕೆ ಕರೆದೊಯ್ಯುತ್ತದೆ. ಈ ಸಂದರ್ಭದಲ್ಲಿ ಹಲವಾರು ವಿಶೇಷ ಪ್ರಾಕೃತಿಕ ವೈವಿಧ್ಯತೆಗಳನ್ನು ಕಣ್ತುಂಬ ನೋಡಿ ಆಸ್ವಾದಿಸಬಹುದಾಗಿದೆ.

ಚಿತ್ರಕೃಪೆ: J.M.Garg

ಹಳ್ಳಿಗಳು

ಹಳ್ಳಿಗಳು

ಆ ನಂತರ ಮಿಘ್ ತಾಚ್, ನಗಾರಿ ಹಾಗೂ ಬೆಸ್ಕಾರಿಗಳಿಗೆ ತೆರಳುವ ಚಾರಣ ಮಾರ್ಗ ಇದಾಗಿದ್ದು ಈ ಸಂದರ್ಭದಲ್ಲಿ ನಗಾರಿಯಿಂದ ಬೆಸ್ಕಾರಿಗೆ ಹೋಗುವ ಮಾರ್ಗದ ಮಧ್ಯ ಸಾರ್ ಕೆರೆಯನ್ನು ದಾಟಿ ಹೋಗುವ ಪ್ರಸಂಗ ಬರುತ್ತದೆ. ಇದು ಚಾರಣ ಮಾರ್ಗದಲ್ಲಿ ತುಂಬಾನೆ ರೋಮಾಂಚನ ನೀಡುವ ಮಾರ್ಗವಾಗಿದ್ದು ಇದರಿಂದಾಗಿಯೆ ಇದಕ್ಕೆ ಸಾರ್ ಪಾಸ್ ಟ್ರೆಕ್ ಎಂಬ ಹೆಸರು ಬಂದಿದೆ.

ಚಿತ್ರಕೃಪೆ: Yhaindia

ಪ್ರತ್ಯೇಕ ಹೆಸರುಗಳು

ಪ್ರತ್ಯೇಕ ಹೆಸರುಗಳು

ಇದೆ ರೀತಿಯಾಗಿ ಸಾರ್ ಪಾಸ್ ನಲ್ಲಿ ಇತರೆ ಸ್ಥಳಗಳ ಮೂಲಕವೂ ಚಾರಣ ಮಾಡಬಹುದಾಗಿದ್ದು ಆಯಾ ಮಾರ್ಗಗಳು ಪ್ರತ್ಯೇಕವಾದ ಹೆಸರಿನಿಂದ ಕರೆಯಲ್ಪಡುತ್ತವೆ. ನಿಮಗೆ ಬೇಕಾದ ಮಾರ್ಗವನ್ನು ನೀವು ಆರಿಸಿಕೊಂಡು ಈ ಅದ್ಭುತ ಚಾರಣದಾನಂದವನ್ನು ಪಡೆಯಬಹುದಾಗಿದೆ.

ಚಿತ್ರಕೃಪೆ: Theanimatedman

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X