Search
  • Follow NativePlanet
Share
» »ಅರಕು ಕಣಿವೆ ಹಾಗೂ ಬೊರ್‍ರಾ ಗುಹೆಗಳು

ಅರಕು ಕಣಿವೆ ಹಾಗೂ ಬೊರ್‍ರಾ ಗುಹೆಗಳು

By Vijay

ಅರಕು ಕಣಿವೆ, ಆಂಧ್ರಪ್ರದೇಶದ ವೈಜಾಗ್(ವಿಶಾಖಪಟ್ಟಣ) ಜಿಲ್ಲೆಯಲ್ಲಿರುವ ಒಂದು ಸುಂದರ ಹಾಗೂ ಮನಮೋಹಕ ಗಿರಿಧಾಮವಾಗಿದೆ. ನಮ್ಮಲ್ಲಿ ಪಶ್ಚಿಮ ಘಟ್ಟ ಹೇಗೊ ಅದೆ ರೀತಿಯಲ್ಲಿ ಆಂಧ್ರದ ಪೂರ್ವ ಘಟ್ಟಗಳ ಆಕರ್ಷಕ ಪರ್ವತ ಶ್ರೇಣಿಗಳಲ್ಲಿ ನೆಲೆಸಿರುವ ಅರಕು ಕಣಿವೆ ವಿವಿಧ ಬುಡಕಟ್ಟು ಜನಾಂಗಗಳ ಆಶ್ರಯ ತಾಣವಾಗಿದೆ.

ದಕ್ಷಿಣ ಭಾರತದ ಪ್ರೇಕ್ಷಣೀಯ ಸ್ಥಳಗಳ ಪೈಕಿ ಅತಿ ಕಡಿಮೆ ಪ್ರಮಾಣದಲ್ಲಿ ಕಲುಷಿತಗೊಂಡ ಹಾಗೂ ಅಲ್ಪ ವಾಣಿಜ್ಯೀಕರಣಗೊಂಡ ಪ್ರವಾಸಿ ಸ್ಥಳ ಎಂಬ ಹೆಗ್ಗಳಿಕೆಯನ್ನು ಗಳಿಸಿರುವ ಅರಕು ಕಣಿವೆ ತನ್ನಲ್ಲಿರುವ ಬೊರ್‍ರಾ ಎಂಬ ಗುಹೆಗಳಿಂದಾಗಿಯೂ ಹೆಸರುವಾಸಿಯಾಗಿದೆ. ಪ್ರಸ್ತುತ ಲೇಖನವು ಆಂಧ್ರದ ಸುಂದರ ಗಿರಿಧಾಮವಾದ ಅರಕು ಕಣಿವೆಯ ಜೊತೆ ಬೊರ್‍ರಾ ಗುಹೆಗಳ ಕುರಿತು ತಿಳಿಸುತ್ತದೆ.

ಅರಕು ಕಣಿವೆಯ ಬೊರ್‍ರಾ ಗುಹೆಗಳು:

ಅರಕು ಕಣಿವೆಯ ಬೊರ್‍ರಾ ಗುಹೆಗಳು:

ವಿಶಾಖಪಟ್ಟಣಂನಿಂದ 114 ಕಿ.ಮೀ ಗಳಷ್ಟು ದೂರದಲ್ಲಿರುವ ಅರಕು ಕಣಿವೆ, ಒಡಿಶಾ ರಾಜ್ಯದ ಗಡಿಗೆ ಬಹು ಹತ್ತಿರದಲ್ಲಿ ನೆಲೆಸಿದೆ.

ಚಿತ್ರಕೃಪೆ: Raj

ಅರಕು ಕಣಿವೆಯ ಬೊರ್‍ರಾ ಗುಹೆಗಳು:

ಅರಕು ಕಣಿವೆಯ ಬೊರ್‍ರಾ ಗುಹೆಗಳು:

ಅನಂತಗಿರಿ ಪರ್ವತಗಳು ಹಾಗೂ ಸುಂಕರಿಮೆಟ್ಟ ರಕ್ಷಿತಾರಣ್ಯ, ಅರಕು ಕಣಿವೆಯ ಭಾಗವಾಗಿದ್ದು, ವೈವಿಧ್ಯಮಯ ಜೀವ ಸಂಪನ್ಮೂಲಗಳಿಗೆ ಹೆಸರುವಾಸಿಯಾಗಿವೆ.

ಚಿತ್ರಕೃಪೆ: Raj

ಅರಕು ಕಣಿವೆಯ ಬೊರ್‍ರಾ ಗುಹೆಗಳು:

ಅರಕು ಕಣಿವೆಯ ಬೊರ್‍ರಾ ಗುಹೆಗಳು:

ಮೂಲದಲ್ಲಿ ಅರಕು ಕಣಿವೆ ಪ್ರದೇಶವು ಗಾಳಿಕೊಂಡ, ರಕ್ತಕೊಂಡ, ಸುಂಕರಿಮೆಟ್ಟ ಹಾಗೂ ಚಿತಾಮೊಗೊಂಡಿ ಎಂಬ ಬೆಟ್ಟಗಳಿಂದ ಸುತ್ತುವರೆದಿದೆ. ಇವುಗಳಲ್ಲಿ ಗಾಳಿಕೊಂಡ ಆಂಧ್ರದಲ್ಲಿರುವ ಎತ್ತರದ ಪರ್ವತಗಳ ಪೈಕಿ ಒಂದಾಗಿದೆ.

ಚಿತ್ರಕೃಪೆ: Raj

ಅರಕು ಕಣಿವೆಯ ಬೊರ್‍ರಾ ಗುಹೆಗಳು:

ಅರಕು ಕಣಿವೆಯ ಬೊರ್‍ರಾ ಗುಹೆಗಳು:

ಅರಕು ಕಣಿವೆ ವಿಶೇಷವಾಗಿ ಕಾಫಿ ಬೆಳೆಗೆ ಹೆಚ್ಚು ಪ್ರಸಿದ್ಧಿ ಪಡೆದಿದೆ. ಬುಡಕಟ್ಟು ಜನಾಂಗದವರಿಂದ ಬೆಳೆಯಲಾದ ಮೊದಲ ಜೈವಿಕ ಕಾಫಿ ಉತ್ಪನ್ನವನ್ನು ಅರಕು ಕಣಿವೆಯಲ್ಲಿ 2007 ರಲ್ಲಿ ಉದ್ಘಾಟಿಸಲಾಯಿತು.

ಚಿತ್ರಕೃಪೆ: Amartyabag

ಅರಕು ಕಣಿವೆಯ ಬೊರ್‍ರಾ ಗುಹೆಗಳು:

ಅರಕು ಕಣಿವೆಯ ಬೊರ್‍ರಾ ಗುಹೆಗಳು:

"ಅರಕು ಎಮರಾಲ್ಡ್" ಎಂಬ ಹೆಸರಿನ ಈ ಕಾಫಿಯು ಜಾಗತಿಕವಲಯದಲ್ಲೂ ಮಾರಾಟವಾಗುತ್ತಿದೆ. ಸಾವಿರಾರು ಸಂಖ್ಯೆಯಲ್ಲಿ ಬುಡಕಟ್ಟು ಜನರು ತಮ್ಮನ್ನು ತಾವು ಇಂದು ಈ ಕಾಫಿ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದಾರೆ.

ಚಿತ್ರಕೃಪೆ: Amartyabag

ಅರಕು ಕಣಿವೆಯ ಬೊರ್‍ರಾ ಗುಹೆಗಳು:

ಅರಕು ಕಣಿವೆಯ ಬೊರ್‍ರಾ ಗುಹೆಗಳು:

ಅರಕು ಕಣಿವೆಯು ವಿಶಾಖಪಟ್ಟಣಂನಿಂದ ರೈಲು ಹಾಗೂ ರಸ್ತೆಗಳೆರಡರ ಮೂಲಕವೂ ಸಂಪರ್ಕ ಹೊಂದಿದೆ.

ಚಿತ್ರಕೃಪೆ: Raj

ಅರಕು ಕಣಿವೆಯ ಬೊರ್‍ರಾ ಗುಹೆಗಳು:

ಅರಕು ಕಣಿವೆಯ ಬೊರ್‍ರಾ ಗುಹೆಗಳು:

ಅರಕು ಕಣಿವೆಯ ಕೆಲ ಸುಂದರ ಚಿತ್ರಗಳನ್ನು ಸವಿಯಿರಿ ನಂತರ ಬೊರ್‍ರಾ ಗುಹೆಗಳತ್ತ ನಮ್ಮ ಪಯಣ.

ಚಿತ್ರಕೃಪೆ: Adityamadhav83

ಅರಕು ಕಣಿವೆಯ ಬೊರ್‍ರಾ ಗುಹೆಗಳು:

ಅರಕು ಕಣಿವೆಯ ಬೊರ್‍ರಾ ಗುಹೆಗಳು:

ಅರಕು ಕಣಿವೆಯ ಕೆಲ ಸುಂದರ ಚಿತ್ರಗಳನ್ನು ಸವಿಯಿರಿ ನಂತರ ಬೊರ್‍ರಾ ಗುಹೆಗಳತ್ತ ನಮ್ಮ ಪಯಣ.

ಚಿತ್ರಕೃಪೆ: Ankitha veerepalli

ಅರಕು ಕಣಿವೆಯ ಬೊರ್‍ರಾ ಗುಹೆಗಳು:

ಅರಕು ಕಣಿವೆಯ ಬೊರ್‍ರಾ ಗುಹೆಗಳು:

ಅರಕು ಕಣಿವೆಯ ಕೆಲ ಸುಂದರ ಚಿತ್ರಗಳನ್ನು ಸವಿಯಿರಿ ನಂತರ ಬೊರ್‍ರಾ ಗುಹೆಗಳತ್ತ ನಮ್ಮ ಪಯಣ.

ಚಿತ್ರಕೃಪೆ: Yalla.vamsi

ಅರಕು ಕಣಿವೆಯ ಬೊರ್‍ರಾ ಗುಹೆಗಳು:

ಅರಕು ಕಣಿವೆಯ ಬೊರ್‍ರಾ ಗುಹೆಗಳು:

ಅರಕು ಕಣಿವೆಯ ಕೆಲ ಸುಂದರ ಚಿತ್ರಗಳನ್ನು ಸವಿಯಿರಿ ನಂತರ ಬೊರ್‍ರಾ ಗುಹೆಗಳತ್ತ ನಮ್ಮ ಪಯಣ.

ಚಿತ್ರಕೃಪೆ: Adityamadhav83

ಅರಕು ಕಣಿವೆಯ ಬೊರ್‍ರಾ ಗುಹೆಗಳು:

ಅರಕು ಕಣಿವೆಯ ಬೊರ್‍ರಾ ಗುಹೆಗಳು:

ಬೊರ್‍ರಾ ಗುಹೆಗಳು: ಅರಕು ಕಣಿವೆ ಪ್ರದೇಶದಲ್ಲಿರುವ ಬೊರ್‍ರಾ ಗುಹೆಗಳು ನೈಸರ್ಗಿಕವಾಗಿ ರೂಪಗೊಂಡ ವಿಸ್ಮಯಕಾರಿ ಗುಹೆಯಾಗಿದೆ. ಇದು ಪ್ರಮುಖವಾಗಿ ಹೆಸರುವಾಸಿಯಾಗಿರುವುದು ಸ್ಟ್ಯಾಲಗ್ಮೈಟ್ ಮತ್ತು ಸ್ಟ್ಯಾಲಕ್ಟೈಟ್ ಎಂಬ ಶಿಲಾ ರಚನೆಗಳಿಗಾಗಿ.

ಚಿತ್ರಕೃಪೆ: Raj srikanth800

ಅರಕು ಕಣಿವೆಯ ಬೊರ್‍ರಾ ಗುಹೆಗಳು:

ಅರಕು ಕಣಿವೆಯ ಬೊರ್‍ರಾ ಗುಹೆಗಳು:

ಅತಿ ಆಳ ಹೊಂದಿರುವ ಹಾಗೂ ಬೃಹತ್ ಗುಹೆಗಳ ಪೈಕಿ ಒಂದಾಗಿರುವ ಬೊರ್‍ರಾ ಗುಹೆಗಳು ಕೌತುಕಮಯ ವಿನ್ಯಾಸ ಹಾಗೂ ಮನಮೋಹಕ ಬಣ್ಣ ಹೊಂದಿರುವ ಅನನ್ಯ ಶಿಲಾ ರಚನೆಗಾಗಿ ಪ್ರಖ್ಯಾತಿ ಪಡೆದಿವೆ.

ಚಿತ್ರಕೃಪೆ: Bhaskaranaidu

ಅರಕು ಕಣಿವೆಯ ಬೊರ್‍ರಾ ಗುಹೆಗಳು:

ಅರಕು ಕಣಿವೆಯ ಬೊರ್‍ರಾ ಗುಹೆಗಳು:

ಈ ಗುಹೆಗಳ ಹಿಂದೆ ಹಲವಾರು ದಂತ ಕಥೆಗಳು ತಳುಕು ಹಾಕಿಕೊಂಡಿವೆ. ಒಂದು ದಂತ ಕಥೆಯ ಪ್ರಕಾರ, ಒಂದೊಮ್ಮೆ ಈ ಪ್ರದೇಶದಲ್ಲಿ ಆಕಳೊಂದು ಮೇಯುತ್ತಿದ್ದಾಗ ಆಕಸ್ಮಿಕವಾಗಿ ಗುಹೆಯ ಮೇಲ್ಭಾಗದಲ್ಲಿದ್ದ ಒಂದು ಖಿಂಡಿಯ ಮೂಲಕ ಕೆಳಗೆ ಬಿದ್ದಿತು.

ಚಿತ್ರಕೃಪೆ: Snehareddy

ಅರಕು ಕಣಿವೆಯ ಬೊರ್‍ರಾ ಗುಹೆಗಳು:

ಅರಕು ಕಣಿವೆಯ ಬೊರ್‍ರಾ ಗುಹೆಗಳು:

ದನಗಾಹಿಯು ಆ ಆಕಳನ್ನು ಹುಡುಕುತ್ತ ಅಲೆಯುವಾಗ ಈ ಗುಹೆಗಳನ್ನು ನೋಡಿದನು ಹಾಗೂ ಅದರಲ್ಲಿ ಅವನಿಗೆ ಒಂದು ಶಿವ ಲಿಂಗದ ಆಕಾರದ ಕಲ್ಲು ದೊರೆಯಿತು. ಇದರಿಂದ ಆತ ಶಿವನೆ ತನ್ನ ಆಕಳನ್ನು ರಕ್ಷಿಸಿರುವನೆಂದು ಬಗೆದನು.

ಚಿತ್ರಕೃಪೆ: Snehareddy

ಅರಕು ಕಣಿವೆಯ ಬೊರ್‍ರಾ ಗುಹೆಗಳು:

ಅರಕು ಕಣಿವೆಯ ಬೊರ್‍ರಾ ಗುಹೆಗಳು:

ಈ ಸುದ್ದಿಯು ಕಾಡ್ಗಿಚ್ಚಿನಂತೆ ಹರಡಿ, ತಂಡೋಪತಂಡವಾಗಿ ಹಳ್ಳಿ ಜನರು ಅಲ್ಲಿಗೆ ಬಂದು ಭಕ್ತಿ ಭಾವಗಳನ್ನು ಮೆರೆದರು ಹಾಗೂ ಶಿವನಿಗೆ ಮುಡಿಪಾಗಿ ಒಂದು ಚಿಕ್ಕ ದೇವಾಲಯವನ್ನೂ ಸಹ ಗುಹೆಯ ಪಕ್ಕದಲ್ಲಿ ನಿರ್ಮಿಸಿದರು. ಇಂದಿಗೂ ಭೇಟಿ ನೀಡುವ ಪ್ರವಾಸಿಗರು ಆ ದೇಗುಲಕ್ಕೆ ಭೇಟಿ ನೀಡಬಹುದು.

ಚಿತ್ರಕೃಪೆ: Snehareddy

ಅರಕು ಕಣಿವೆಯ ಬೊರ್‍ರಾ ಗುಹೆಗಳು:

ಅರಕು ಕಣಿವೆಯ ಬೊರ್‍ರಾ ಗುಹೆಗಳು:

ಮತ್ತೊಂದು ಕಥೆಯ ಪ್ರಕಾರ, ಗುಹೆಯ ಆಳದಲ್ಲಿ ಶಿವಲಿಂಗವಿದ್ದು ಆಕಳನ್ನು ಹೋಲುವ ಒಂದು ಶಿಲಾ ರಚನೆಯಿಂದ ಆವೃತವಾಗಿದೆ. ವಿಜಿನಗರಂ ಹಾಗೂ ವಿಶಾಖಪಟ್ಟಣ ಜಿಲ್ಲೆಗಳಲ್ಲಿ ಹರಿಯುವ ಗೋಸ್ಥಾಣಿ ಎಂಬ ನದಿಯ ಮೂಲ ಗುಹೆಯಲ್ಲಿರುವ ಆ ಆಕಳಿನ ಕೆಚ್ಚಲಾಗಿದೆ ಎಂದು ಹೇಳಲಾಗುತ್ತದೆ.

ಚಿತ್ರಕೃಪೆ: Joshi detroit

ಅರಕು ಕಣಿವೆಯ ಬೊರ್‍ರಾ ಗುಹೆಗಳು:

ಅರಕು ಕಣಿವೆಯ ಬೊರ್‍ರಾ ಗುಹೆಗಳು:

ಅರಕು ಕಣಿವೆಯಿಂದ ಸುಮಾರು 29 ಕಿ.ಮೀ ಗಳಷ್ಟು ದೂರವಿರುವ ಬೊರ್‍ರಾ ಗುಹೆಗಳಲ್ಲಿ ಪ್ರಮುಖವಾಗಿ ಸಸ್ಯಾಹಾರಿ ಬಾವಲಿಗಳು ಹಾಗೂ ವಿಶಿಷ್ಟ ಬಗೆಯ ಹಲ್ಲಿಗಳು ಪ್ರಮುಖವಾಗಿ ಕಂಡುಬರುತ್ತವೆ. ಅಲ್ಲದೆ ಅಳಿವಿನಂಚಿನಲ್ಲಿರುವ ವಿಶಿಷ್ಟ ಪಾಚಿ ಹಾಗೂ ಅಲ್ಗೆಗಳೂ ಸಹ ಇಲ್ಲಿ ಕಂಡುಬರುತ್ತವೆ.

ಚಿತ್ರಕೃಪೆ: Bhaskaranaidu

ಅರಕು ಕಣಿವೆಯ ಬೊರ್‍ರಾ ಗುಹೆಗಳು:

ಅರಕು ಕಣಿವೆಯ ಬೊರ್‍ರಾ ಗುಹೆಗಳು:

ಆಂಧ್ರ ಸರ್ಕಾರ ಪ್ರವಾಸೋದ್ಯಮ ಇಲಾಖೆಯಿಂದ ರೂಪಿಸಲಾದ ರೈಲು ಹಾಗೂ ರಸ್ತೆಯ ಮೂಲಕ ಅರಕು ಮತ್ತು ಬೊರ್‍ರಾ ಪ್ರವಾಸ ಸೇವೆಯು ಒಂದು ಉತ್ತಮ ಆಯ್ಕೆಯಾಗಿದೆ.

ಚಿತ್ರಕೃಪೆ: Robbygrine

ಅರಕು ಕಣಿವೆಯ ಬೊರ್‍ರಾ ಗುಹೆಗಳು:

ಅರಕು ಕಣಿವೆಯ ಬೊರ್‍ರಾ ಗುಹೆಗಳು:

ಅಲ್ಲದೆ ಸರ್ಕಾರವು ಗುಹೆಯೊಳಗೆ ಸೋಡಿಯಮ್ ವೆಪರ್, ಹ್ಯಾಲೋಜನ್ ನಂತಹ ವಿದ್ಯುತ್ ದೀಪಗಳನ್ನು ಅಳವಡಿಸಿದ್ದು, ಗುಹೆಯೊಳಗೆ ಪ್ರವೇಶಿಸಿದಾಗ ಯಾವುದೋ ಮಾಯಾ ಲೋಕಕ್ಕೆ ಬಂದೆವೇನೊ ಎಂಬಂತೆ ಭಾಸ ಉಂಟಾಗುವುದು ಸಹಜವೆನಿಸುತ್ತದೆ.

ಚಿತ್ರಕೃಪೆ: Rajib Ghosh

ಅರಕು ಕಣಿವೆಯ ಬೊರ್‍ರಾ ಗುಹೆಗಳು:

ಅರಕು ಕಣಿವೆಯ ಬೊರ್‍ರಾ ಗುಹೆಗಳು:

ಮೂಕವಿಸ್ಮಿತಗೊಳಿಸುವ ಬೊರ್‍ರಾ ಗುಹೆಗಳೊಳಗೆ....

ಚಿತ್ರಕೃಪೆ: Raj

ಅರಕು ಕಣಿವೆಯ ಬೊರ್‍ರಾ ಗುಹೆಗಳು:

ಅರಕು ಕಣಿವೆಯ ಬೊರ್‍ರಾ ಗುಹೆಗಳು:

ಮೂಕವಿಸ್ಮಿತಗೊಳಿಸುವ ಬೊರ್‍ರಾ ಗುಹೆಗಳೊಳಗೆ....

ಚಿತ್ರಕೃಪೆ: V.v

ಅರಕು ಕಣಿವೆಯ ಬೊರ್‍ರಾ ಗುಹೆಗಳು:

ಅರಕು ಕಣಿವೆಯ ಬೊರ್‍ರಾ ಗುಹೆಗಳು:

ಮೂಕವಿಸ್ಮಿತಗೊಳಿಸುವ ಬೊರ್‍ರಾ ಗುಹೆಗಳೊಳಗೆ....

ಚಿತ್ರಕೃಪೆ: Raj

ಅರಕು ಕಣಿವೆಯ ಬೊರ್‍ರಾ ಗುಹೆಗಳು:

ಅರಕು ಕಣಿವೆಯ ಬೊರ್‍ರಾ ಗುಹೆಗಳು:

ಮೂಕವಿಸ್ಮಿತಗೊಳಿಸುವ ಬೊರ್‍ರಾ ಗುಹೆಗಳೊಳಗೆ....

ಚಿತ್ರಕೃಪೆ: Archana Jarajapu

ಅರಕು ಕಣಿವೆಯ ಬೊರ್‍ರಾ ಗುಹೆಗಳು:

ಅರಕು ಕಣಿವೆಯ ಬೊರ್‍ರಾ ಗುಹೆಗಳು:

ಮೂಕವಿಸ್ಮಿತಗೊಳಿಸುವ ಬೊರ್‍ರಾ ಗುಹೆಗಳೊಳಗೆ....

ಚಿತ್ರಕೃಪೆ: thotfulspot

ಅರಕು ಕಣಿವೆಯ ಬೊರ್‍ರಾ ಗುಹೆಗಳು:

ಅರಕು ಕಣಿವೆಯ ಬೊರ್‍ರಾ ಗುಹೆಗಳು:

ಮೂಕವಿಸ್ಮಿತಗೊಳಿಸುವ ಬೊರ್‍ರಾ ಗುಹೆಗಳೊಳಗೆ....

ಚಿತ್ರಕೃಪೆ: thotfulspot

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X