ಡೋಣ ಬನ್ನಿ ಸುಂದರ ವೆಲ್ಲೊರನ್ನು!
ಹುಡುಕಿ
 
ಹುಡುಕಿ
 

ಒಮ್ಮೆಯಾದರೂ ನೋಡಲೇಬೇಕಾದ ಕೆಮ್ಮಣ್ಣುಗುಂಡಿ

Written by:
Published: Thursday, June 2, 2016, 12:20 [IST]
Share this on your social network:
   Facebook Twitter Google+ Pin it  Comments

ಮಹಾರಾಷ್ಟ್ರದಿಂದ ತಮಿಳುನಾಡಿನವರೆಗೆ ಅರಬ್ಬಿ ಸಮುದ್ರಕ್ಕೆ ಜೊತೆ ಜೊತೆಯಾಗಿ ಕೈಹಿಡಿದು ಚಾಚಿರುವ ಪಶ್ಚಿಮ ಘಟ್ಟಗಳು ತನ್ನ ಪಥದಲ್ಲಿ ಸಾಕಷ್ಟು ನಯನಮನೋಹರ ಪ್ರದೇಶಗಳನ್ನು ಎಲ್ಲೆಡೆ ಒದಗಿಸಿವೆ. ಪ್ರಕೃತಿ ಪ್ರಿಯ ಪ್ರವಾಸಿಗರಿಗೆ ಪಶ್ಚಿಮ ಘಟ್ಟಗಳು ವರದಾನವೆ ಸರಿ.

ಕರ್ನಾಟಕದಲ್ಲೂ ಸಹ ಹಾಯ್ದು ಹೋಗಿರುವ ಈ ಘಟ್ಟಗಳ ಅನೇಕ ಸ್ಥಳಗಳು ಇಂದು ಅತಿ ಜನಪ್ರೀಯ ಪ್ರವಾಸಿ ಧಾಮಗಳಾಗಿ ಹೆಸರುವಾಸಿಯಾಗಿವೆ. ಕಡಿದಾದ ಹಾಗೂ ಆಗಸಕ್ಕೆ ಸೆಡ್ಡು ಹೊಡೆದು ನಿಂತಿರುವ ಬೆಟ್ಟಗುಡ್ಡಗಳು, ದಟ್ಟ ಹಸಿರಿನ ಸುಂದರ ಶೋಲಾ ವನಗಳು, ಹಿತಕರವಾದ ವಾತಾವರಣ, ರೋಮಾಂಚನಗೊಳಿಸುವ ಚಾರಣ ಮಾರ್ಗಗಳು ಈ ಧಾಮಗಳ ವಿಶೇಷ ಗುಣಲಕ್ಷಣಗಳು.

ನಿಮಗಿಷ್ಟವಾಗಬಹುದಾದ : ನಯನ ಮನೋಹರ ಕುದುರೆಮುಖ ವಿಶೇಷ

ಕರ್ನಾಟಕ ಭಾಗದ ಪಶ್ಚಿಮ ಘಟ್ಟಗಳ ಶ್ರೇಣಿಯಲ್ಲಿ ಬರುವ ಅನೇಕ ಪ್ರವಾಸಿ ಧಾಮಗಳ ಪೈಕಿ ಒಂದಾಗಿದೆ ಸುಂದರವಾದ ಕೆಮ್ಮಣ್ಣುಗುಂಡಿ. ಚಿಕ್ಕಮಗಳೂರು ಜಿಲ್ಲೆಯ ತರಿಕೆರೆ ತಾಲೂಕಿನಲ್ಲಿರುವ ಈ ಸುಂದರ ಗಿರಿಧಾಮವು ಕರ್ನಾಟಕದಲ್ಲಿ ಕಂಡುಬರುವ ಆಕರ್ಷಕ ಪ್ರವಾಸಿ ತಾಣಗಳ ಪೈಕಿ ಒಂದಾಗಿದೆ.

ಎಲ್ಲ ವಯೋಮಾನದವರು ಆಸ್ವಾದಿಸಬಹುದಾದ ಕೆಮ್ಮಣ್ಣುಗುಂಡಿ ಕೇವಲ ತನ್ನ ಅದ್ವಿತೀಯ ಪ್ರಕೃತಿ ಸೌಂದರ್ಯದಿಂದ ಮಾತ್ರವಲ್ಲದೆ ಸುತ್ತಮುತ್ತಲಿರುವ ಸಾಕಷ್ಟು ಪ್ರವಾಸಿ ಆಕರ್ಷಣೆಗಳಿಂದಲೂ ಸಹ ಪ್ರಸಿದ್ಧವಾಗಿದೆ. ನೀವು ಪ್ರಕೃತಿಯ ಆರಾಧಕರಾಗಿದ್ದರೆ ಈ ಸುಂದರ ಗಿರಿಧಾಮಕ್ಕೆ ಒಂದೊಮ್ಮೆಯಾದರೂ ಭೇಟಿ ನೀಡಲೇಬೇಕು.

ಕೆಮ್ಮಣ್ಣುಗುಂಡಿ ಗಿರಿಧಾಮ:

ಕೆಮ್ಮಣ್ಣುಗುಂಡಿ ಚಿಕ್ಕಮಗಳೂರು ಜಿಲ್ಲೆಯ ತರಿಕೆರೆ ತಾಲೂಕಿನಲ್ಲಿ ಬರುತ್ತದೆ.

ಚಿತ್ರಕೃಪೆ: Elroy Serrao

 

ಕೆಮ್ಮಣ್ಣುಗುಂಡಿ ಗಿರಿಧಾಮ:

ಈ ಗಿರಿಧಾಮದಲ್ಲಿ ಕಬ್ಬಿಣದ ಅದಿರು ಯಥೇಚ್ಚವಾಗಿ ಲಭ್ಯವಿರುವುದರಿಂದ ಈ ಪ್ರದೇಶದ ಮಣ್ಣು ಕೆಂಬಣ್ಣದಿಂದ ಕೂಡಿದ್ದು ಅಲ್ಲದೆ, ಇದೊಂದು ಗುಂಡಿ (ಕಣಿವೆ ರೀತಿಯ) ಪ್ರದೇಶವಾಗಿದ್ದರಿಂದ ಇದಕ್ಕೆ ಹೆಸರು ಕೆಂಪು ಮಣ್ಣಿನ ಗುಂಡಿ ಮುಂದೆ ಕ್ರಮೇಣವಾಗಿ ಕೆಮ್ಮಣ್ಣುಗುಂಡಿ ಎಂದು ಬಂದಿದೆ.

ಚಿತ್ರಕೃಪೆ: Elroy Serrao

 

ಕೆಮ್ಮಣ್ಣುಗುಂಡಿ ಗಿರಿಧಾಮ:

ಇದೊಂದು ನಿಸರ್ಗಧಾಮವಾಗಿದ್ದು ಪಶ್ಚಿಮ ಘಟ್ಟಗಳ ಅನೇಕ ಚಿಕ್ಕ ಪುಟ್ಟ ಪರ್ವತ ಶ್ರೇಣಿಗಳಿಂದ ಅಲಂಕೃತಗೊಂಡಿದ್ದು ರೋಮಾಂಚನಗೊಳಿಸುವ ದೃಶ್ಯಾವಳಿಗಳನ್ನು ಕರುಣಿಸುತ್ತದೆ.

ಚಿತ್ರಕೃಪೆ: Elroy Serrao

 

ಕೆಮ್ಮಣ್ಣುಗುಂಡಿ ಗಿರಿಧಾಮ:

ಈ ಗಿರಿಧಾಮದ ಅಗಾಧ ಸೃಷ್ಟಿ ಸೌಂದರ್ಯವನ್ನು ಅಣು ಅಣುವಾಗಿ ಸವಿಯಬೇಕೆಂದರೆ ಚಾರಣ ಕೈಗೊಳ್ಳುವುದು ಉತ್ತಮವಾದ ಆಯ್ಕೆಯಾಗಿದ್ದು ಆ ದೃಷ್ಟಿಯಿಂದಲೂ ಸಹ ಈ ಗಿರಿಧಾಮ ಪ್ರವಾಸಿಗರಿಗೆ ಸಾಕಷ್ಟು ಅನುಕೂಲ ಮಾಡಿಕೊಟ್ಟಿದೆ. ಅಂದರೆ ಇಲ್ಲಿ ಚಿಕ್ಕ ಪುಟ್ಟ ಚಾರಣ ಮಾರ್ಗಗಳು ಲಭ್ಯವಿದ್ದು ಪ್ರಕೃತಿಯ ಸೌಂದರ್ಯದ ಅಮೋಘ ಅನುಭವ ಪಡೆಯಬಹುದು.

ಚಿತ್ರಕೃಪೆ: Rajive

 

ಕೆಮ್ಮಣ್ಣುಗುಂಡಿ ಗಿರಿಧಾಮ:

ಹಿಂದೆ ಮೈಸೂರು ಸಂಸ್ಥಾನದ ನಾಲ್ಕನೆಯ ಕೃಷ್ಣರಾಜ ವಡೇಯರ್ ಅವರ ಬೇಸಿಗೆಯ ರಾಜಧಾನಿಯಾಗಿ ಕೆಮ್ಮಣ್ಣುಗುಂಡಿ ಹೆಸರುವಾಸಿಯಾಗಿತ್ತು. ಈ ಕಾರಣದಿಂದಾಗಿ ಈ ಗಿರಿಧಾಮವನ್ನು ಶ್ರೀಕೃಷ್ಣರಾಜೇಂದ್ರ ಗಿರಿಧಾಮ ಎಂಬ ಹೆಸರಿನಿಂದಲೂ ಸಹ ಕರೆಯಲಾಗಿದೆ.

ಚಿತ್ರಕೃಪೆ: Elroy Serrao

 

ಕೆಮ್ಮಣ್ಣುಗುಂಡಿ ಗಿರಿಧಾಮ:

ಸಾಕಷ್ಟು ಖ್ಯಾತ ಕನ್ನಡ ಚಿತ್ರಗಳ ಚಿತ್ರೀಕರಣಗಳೂ ಆಗಿರುವ ಈ ಗಿರಿಧಾಮದ ಸುತ್ತಮುತ್ತಲು ರಾಜಭವನ, ಗುಲಾಬಿ ಉದ್ಯಾನ, ಜೆಡ್ ಪಾಯಿಂಟ್, ಹೆಬ್ಬೆ ಜಲಪಾತ ಹಾಗೂ ಕಲ್ಹತ್ತಿ ಜಲಪಾತಗಳಂತಹ ಆಕರ್ಷಣೆಗಳನ್ನು ಕಾಣಬಹುದು.

ಚಿತ್ರಕೃಪೆ: Yathin S Krishnappa

 

ಕೆಮ್ಮಣ್ಣುಗುಂಡಿ ಗಿರಿಧಾಮ:

ಕಲ್ಹತ್ತಿ ಜಲಪಾತ ಕೇಂದ್ರವು ಕೆಮ್ಮಣ್ಣುಗುಂಡಿಯಿಂದ ಹತ್ತು ಕಿ.ಮೀ ದೂರದಲ್ಲಿದ್ದು ವಿಶೇಷವಾಗಿ ವೀರಭದ್ರನ ದೇಗುಲದ ಮುಂದೆ ನಯನಮನೋಹರವಾಗಿ ಧುಮುಕುವ ಜಲಪಾತದಿಂದಾಗಿ ಪ್ರಸಿದ್ಧವಾಗಿದೆ.

ಚಿತ್ರಕೃಪೆ: Srihari Kulkarni

 

ಕೆಮ್ಮಣ್ಣುಗುಂಡಿ ಗಿರಿಧಾಮ:

ಚಂದ್ರದ್ರೋಣ ಪರ್ವತದಿಂದ ಧುಮುಕುವ ಈ ಜಲಪಾತದ ನೀರನ್ನು ದಾಟುವ ಮೂಲಕವೆ ವೀರಭದ್ರನ ದೇವಾಲಯ ತಲುಪಬಹುದಾಗಿದ್ದು ಪ್ರವಾಸಿಗರಿಗೆ ಇದೊಂದು ರೀತಿಯ ರೋಮಾಂಚನ ಅನುಭವ ನೀಡುತ್ತದೆ.

ಚಿತ್ರಕೃಪೆ: modi.kumar

 

ಕೆಮ್ಮಣ್ಣುಗುಂಡಿ ಗಿರಿಧಾಮ:

ಜೆಡ್ ಪಾಯಿಂಟ್, ಕೆಮ್ಮಣ್ಣುಗುಂಡಿಯ ಒಂದು ಅದ್ಭುತ ವೀಕ್ಷಣಾ ಸ್ಥಳ. ಇಲ್ಲಿಂದ ಪಶ್ಚಿಮ ಘಟ್ಟಗಳ ಮುಳ್ಳಯ್ಯನಗಿರಿ ಹಾಗೂ ಇತರೆ ಅದ್ಭುತ ಅರ್ವತ ಶ್ರೇಣಿಗಳ ಸುಂದರವಾದ ದೃಶ್ಯಾವಳಿಗಳನ್ನು ನೋಡಬಹುದು.

ಚಿತ್ರಕೃಪೆ: Srinivasa83

 

ಕೆಮ್ಮಣ್ಣುಗುಂಡಿ ಗಿರಿಧಾಮ:

ತೋಟಗಾರಿಕೆ ಇಲಾಖೆಯಿಂದ ನಿರ್ವಹಿಸಲ್ಪಡುವ ಗುಲಾಬಿ ಉದ್ಯಾನ ಕೆಮ್ಮಣ್ಣುಗುಂಡಿಯ ಮತ್ತೊಂದು ಆಕರ್ಷಣೆ. ಬಣ್ಣ ಬಣ್ಣದ ಅಂದ ಚೆಂದದ ಹೂವುಗಳು ನೋಡುಗರ ಮನ ಸೆಳೆಯುತ್ತದೆ.

ಚಿತ್ರಕೃಪೆ: Elroy Serrao

 

ಕೆಮ್ಮಣ್ಣುಗುಂಡಿ ಗಿರಿಧಾಮ:

ರಾಜಭವನ ಕೆಮ್ಮಣ್ಣುಗುಂಡಿ ಗಿರಿಧಾಮದಲ್ಲಿರುವ ಒಂದು ಸುಂದರ ಕಟ್ಟಡವಾಗಿದೆ. ಹಿಂದೆ ಮೈಸೂರು ರಾಜರು ಬೇಸಿಗೆ ಸಮಯ ಕಳೆಯಲು ಬಂದಾಗ ಇದರಲ್ಲಿ ತಂಗುತ್ತಿದ್ದರು. ರಾಜಭವನದಿಂದ ಸೂರ್ಯಾಸ್ತದ ನೋಟ ಎಂಥವರನ್ನೂ ಮೂಕವಿಸ್ಮಿತರನ್ನಾಗಿ ಮಾಡುತ್ತದೆ.

ಚಿತ್ರಕೃಪೆ: divya.nayakBhat

 

ಕೆಮ್ಮಣ್ಣುಗುಂಡಿ ಗಿರಿಧಾಮ:

ಹೆಬ್ಬೆ ಜಲಪಾತ, ಕೆಮ್ಮಣ್ಣುಗುಂಡಿಯಲ್ಲಿ ನೋದಬಹುದಾದ ಇನ್ನೊಂದು ಸುಂದರ ಜಲಪಾತ ಕೇಂದ್ರ. ರಾಜಭವನದಿಂದ ಎಂಟು ಕಿ.ಮೀ ಇಳಿಮುಖ ಚಾರಣದ ಮೂಲಕ ಈ ಸುಂದರ ಜಲಪಾತ ತಾಣವನ್ನು ತಲುಪಬಹುದು.

ಚಿತ್ರಕೃಪೆ: Srinivasa83

 

ಕೆಮ್ಮಣ್ಣುಗುಂಡಿ ಗಿರಿಧಾಮ:

ಹೆಬ್ಬೆ ಜಲಪಾತ ಎರಡು ಹಂತಗಳಲ್ಲಿ ಧುಮುಕುವ ಜಲಪಾತವಾಗಿದ್ದು ದೊಡ್ಡ ಹೆಬ್ಬೆ, ಚಿಕ್ಕ ಹೆಬ್ಬೆ ಎಂದು ಕರೆಯಲ್ಪಡುತ್ತದೆ. ಆದರೆ ಗಮನಿಸಬೆಕಾದ ಅಂಶವೆಂದರೆ ಇಂದು ಈ ಜಲಪಾತ ತಾಣವು ಸಾಕಷ್ಟು ಹುಲಿಗಳನ್ನು ಇತ್ತೀಚಿನ ಸಮಯದಲ್ಲಿ ಆಕರ್ಷಿಸಿರುವುದರಿಂದ ನಿಷೇಧಿತ ತಾಣವಾಗಿದೆ.

ಚಿತ್ರಕೃಪೆ: Pradeep Kumbhashi

 

ಕೆಮ್ಮಣ್ಣುಗುಂಡಿ ಗಿರಿಧಾಮ:

ಕೆಮ್ಮಣ್ಣುಗುಂಡಿ ಚಿಕ್ಕಮಗಳೂರಿನಿಂದ 53 ಕಿ.ಮೀ ಹಾಗೂ ಲಿಂಗದಹಳ್ಳಿಯಿಂದ 17 ಕಿ.ಮೀ ದೂರದಲ್ಲಿದೆ. ಬಸ್ಸಿನಲ್ಲಿ ಪ್ರಯಾಣಿಸಬಯಸುವವರು ಚಿಕ್ಕಮಗಳೂರಿನಿಂದ ಲಿಂಗದಹಳ್ಳಿ ಹಾಗೂ ಅಲ್ಲಿಂದ ನಿಯಮಿತ ಸಮಯಗಳಲ್ಲಿ ದೊರೆಯುವ ಖಾಸಗಿ ಬಸ್ಸುಗಳ ಮೂಲಕ ಕೆಮ್ಮಣ್ಣುಗುಂಡಿ ತಲುಪಬಹುದು. ಬೆಂಗಳೂರಿನಿಂದ ಚಿಕ್ಕಮಗಳೂರು ಸುಮಾರು 250 ಕಿ.ಮೀ ಗಳಷ್ಟು ದೂರದಲ್ಲಿದೆ.

ಚಿತ್ರಕೃಪೆ: rajesh_dangi

 

English summary

An unforgettable Kemmanagundi trip

Kemmanagundi or Kemmangundi is a beautiful hill station surrounded by the lush green Shola forests of Western Ghats. This hill station is located in the Tarikere taluk of Chikmagalur district of Karnataka state in India.
Please Wait while comments are loading...