Search
  • Follow NativePlanet
Share
» »ಮಾಡಿ ನೋಡಿರೊಮ್ಮೆ ಭೀಮಾಶಂಕರ ಟ್ರೆಕ್ಕಿಂಗ್

ಮಾಡಿ ನೋಡಿರೊಮ್ಮೆ ಭೀಮಾಶಂಕರ ಟ್ರೆಕ್ಕಿಂಗ್

ಪುಣೆ ಬಳಿಯ ಖಾಂಡಾಸ್ ನಿಂದ ಭೀಮಾಶಂಕರ ದೇವಾಲಯಕ್ಕೆ ತಲುಪುವ ಟ್ರೆಕ್ಕಿಂಗ್ ಮಾರ್ಗವು ಅದ್ಭುತವಾಗಿದ್ದು ಮಳೆಗಾಲದ ಸಂದರ್ಭದಲ್ಲಿ ಸಾಕಷ್ಟು ರೋಮಾಂಚಕತೆಯಿಂದ ಕೂಡಿರುತ್ತದೆ

By Mahesh Kumar

ಮಹಾರಾಷ್ಟ್ರಾದ ಸಹ್ಯಾದ್ರಿ ಬೆಟ್ಟಗಳ ಸಾಲಿನಲ್ಲಿ ಇರುವ ಸುಂದರ ಪ್ರವಾಸಿ ತಾಣ ಭೀಮಾಶಂಕರ. ಪುಣೆಯಿಂದ 125ಕಿ.ಮೀ ದೂರದಲ್ಲಿ ಹಾಗೂ ಪುಣೆಯ ಖೇಡ್ ಪ್ರದೇಶದಿಂದ ವಾಯುವ್ಯ ದಿಕ್ಕಿನೆಡೆಗೆ 50 ಕಿ.ಮೀ. ಚಲಿಸಿ ಭೋರ್ಗಿರಿ ಎಂಬ ಹಳ್ಳಿಯನ್ನು ತಲುಪಿದರೆ ಈ ಭೀಮಾಶಂಕರದ ಅದ್ಭುತ ಬೆಟ್ಟಸಾಲುಗಳು ಕಾಣುತ್ತವೆ. ಜೂನ್ ತಿಂಗಳ ಮುಂಗಾರು ಸಮಯ ಭೀಮಾಶಂಕರವನ್ನು ನೋಡಲು ಬಯಸುವ ಪ್ರವಾಸಿಗರಿಗೆ ಸರಿಯಾದ ಸಮಯ.

"ಸೀಡಿ ಘಾಟ್", ಭೀಮಾಶಂಕರ ಹಾಗೂ ಖಾಂಡಾಸ್ ನಡುವೆ ಸಿಗುವ ಅತ್ಯಂತ ಪ್ರಸಿದ್ಧ ಟ್ರೆಕ್ಕಿಂಗ್ ತಾಣ. ಇದೊಂದು ಕಾಲು ದಾರಿಯ ಪಯಣ. ಅತ್ಯಂತ ಕಡಿದಾದ ಈ ಪ್ರದೇಶಕ್ಕೆ ಮೂರು ಕಬ್ಬಿಣದ ಏಣಿಯನ್ನು ನಿರ್ಮಿಸಿ ದಾರಿಯನ್ನು ಮಾಡಲಾಗಿದ್ದು ಪರ್ವತಾರೋಹಣವು ರೋಚಕ ಅನುಭವವನ್ನು ನೀಡುತ್ತದೆ.ಮಾನ್ಸೂನ್ ವೇಳೆಯಲ್ಲಿ ಈ ಪ್ರದೇಶದ ದಾರಿಯು ಜಾರಿಕೆಯಿಂದ ಕೂಡಿರುವುದರಿಂದ ಪ್ರವಾಸಿಗರು ಎಚ್ಚರಿಕೆ ವಹಿಸುವುದು ಅಗತ್ಯ.

ಇದೇ ರೀತಿ ಇಲ್ಲಿರುವ ಮತ್ತೊಂದು ಟ್ರೆಕ್ಕಿಂಗ್ ತಾಣ "ಗಣೇಶ್ ಘಾಟ್". ಈ ದಾರಿಯಲ್ಲಿ ಹಿಂದುಗಳ ಆರಾಧ್ಯ ದೈವವಾದ ಗಣೇಶ ಮಂದಿರವಿರುವುದರಿಂದ ಈ ತಾಣಕ್ಕೆ ಗಣೇಶ್ ಘಾಟ್ ಎಂಬ ಹೆಸರು ಬಂದಿದೆ. ಈ ಎರಡೂ ಟ್ರೆಕ್ಕಿಂಗ್ ತಾಣಗಳಿಗೆ ಹೋಲಿಸಿದರೆ ಗಣೇಶ್ ಘಾಟ್ ಸುದೀರ್ಘ ಪಯಣದ ಅಲ್ಲದೇ ಕಡಿಮೆ ಸವಾಲುಗಳಿಂದ ಕೂಡಿದ ಟ್ರೆಕ್ಕಿಂಗ್ ದಾರಿಯಾಗಿದೆ.

ಮಾಡಿ ನೋಡಿರೊಮ್ಮೆ ಭೀಮಾಶಂಕರ ಟ್ರೆಕ್ಕಿಂಗ್

ಚಿತ್ರಕೃಪೆ: solarisgirl

ಖಾಂಡಾಸ್ ನಿಂದ ಶುರುವಾಗುವ ಈ ಕಾಲುದಾರಿಯ ಪ್ರಯಾಣ, ಗಣೇಶ್ ಘಾಟ್ ಅನ್ನು ದಾಟಿ ಭೀಮಾಶಂಕರಕ್ಕೆ ತಲುಪಲು ನಮಗೆ ಸರಿಸುಮಾರು 4 ಗಂಟೆಗಳು ಬೇಕಾಗುತ್ತದೆ. ಸುಮಾರು 8 ಕಿ.ಮೀ.ಗಳ ದೀರ್ಘ ಪ್ರಯಾಣ. ಬಂಡೆಗಳ ಗೋಪುರವೆಂದೇ ಹೆಸರಾದ ಪಡ್ಡಾರ್ ಕಿಲ್ಲಾ ಶಿಖರದ ತಪ್ಪಲಲ್ಲೇ ಹಾದು ಹೋಗುವ ಈ ಕಾಲುದಾರಿಯು, ಹಾವಿನ ಹೆಡೆಯ ಹಾಗೆ ಕಾಣುವ ನಾಗಪಾಣಿ ಪೀಕ್ ಅನ್ನು ಹಾದುಹೋಗುತ್ತದೆ.

ಸ್ಥಳೀಯ ಜನರು ಹಾಗೂ ಪ್ರವಾಸಿಗರು ಇಲ್ಲಿ ಹೆಚ್ಚು ಓಡಾಡುವುದರಿಂದ ಈ ಕಾಲುದಾರಿಯು ನಮಗೆ ಸ್ಪಷ್ಟವಾಗಿ ಕಣ್ಣಿಗೆ ಕಾಣುವ ಹಾಗೆ ಇವೆ ಹಾಗೂ ಪ್ರವಾಸಿಗರಿಗೆ ಅನುಕೂಲವಾಗಲೆಂದು ದಾರಿಯಲ್ಲಿ ಗುರುತುಗಳನ್ನೂ ಸಹ ಮಾಡಲಾಗಿದೆ. ದಾರಿ ಗೊತ್ತಾಗದೇ ಹಾದಿತಪ್ಪಿಸಿಕೊಂಡ ಹಲವಾರು ಪ್ರವಾಸಿಗರ ಬಗ್ಗೆ, ಕತ್ತಲಲ್ಲಿ ದಾರಿ ತಪ್ಪಿದವರ ಬಗ್ಗೆ, ಹಾಗೂ ಈ ದೀರ್ಘ ದಾರಿಯ ಪಯಣವು ಸಮಯ ಹಾಳುಮಾಡುತ್ತದೆ ಎಂದು ಬೇಸತ್ತು ವಾಪಸು ಬಂದ ಹಲವಾರು ಪರ್ವತಾರೋಹಿ ಅಥವಾ ಪ್ರವಾಸಿಗರ ಬಗ್ಗೆ ಇಲ್ಲಿನ ಸ್ಥಳೀಯ ಹಳ್ಳಿಯ ಜನರು ರೋಚಕವಾದ ಕಥೆಗಳನ್ನೂ ಹೇಳುವುದುಂಟು.

ಮಾಡಿ ನೋಡಿರೊಮ್ಮೆ ಭೀಮಾಶಂಕರ ಟ್ರೆಕ್ಕಿಂಗ್

ಚಿತ್ರಕೃಪೆ: solarisgirl

ಭೀಮಾಶಂಕರದ ಬಳಿ ಇರುವ ಅರಣ್ಯ ಪ್ರದೇಶದ ಮರಗಳು ಕತ್ತಲಲ್ಲೂ ರೇಡಿಯಂನ ಹಾಗೆ ಹೊಳೆಯುವ ತನ್ನ ವಿಶಿಷ್ಟ ಗುಣದಿಂದ ಜನರನ್ನು ತನ್ನತ್ತ ಆಕರ್ಷಿಸುತ್ತದೆ.ರಾತ್ರಿ ಹೊತ್ತು ಕ್ಯಾಂಪ್ ಹಾಕುವ ಯೋಚನೆಯುಳ್ಳ ಪ್ರವಾಸಿಗರು ಒಮ್ಮೆ ಈ ಅರಣ್ಯ ಪ್ರದೇಶದ ಅಪರೂಪದ ಗಿಡಮರಗಳನ್ನು ನೋಡುವುದಕ್ಕಾಗಿಯೇ ತಮ್ಮ ಸಮಯವನ್ನು ಮೀಸಲಿಡುವುದು ಓಳ್ಳೆಯದು.

ಚಾರಣದ(ಟ್ರೆಕ್) ಇತರ ವಿವರಗಳು: ಖಾಂಡಾಸ್ ಎಂಬ ಹಳ್ಳಿಯಿಂದ 2ಕಿ.ಮೀ.ನಂತರ ಈ ಕಾಲು ದಾರಿಯು ಶುರುವಾಗುತ್ತದೆ. ಖಾಂಡಾಸ್ ,ನೇರಲ್ ನಿಂದ 25 ಕಿ.ಮೀ, ಹಾಗೂ ಕರ್ಜಾತ್ ನಿಂದ 29 ಕಿ.ಮೀ ದೂರದ ಅಂತರದಲ್ಲಿದೆ. ಹವಾಮಾನಕ್ಕನುಗುಣವಾಗಿ ಕರ್ಜಾತ್ ಹಾಗೂ ನೇರಲ್‍ನಿಂದಲೂ ಚಾರಣವನ್ನು ಆರಂಭಿಸಬಹುದು.

ಕರ್ಜಾತ್ ಹಾಗೂ ನೇರಲ್‍ನಿಂದ ಚಾರಣ ಆರಂಭಿಸುವುದಾದರೆ ಕಶೇಲಿ ಎಂಬ ಸಣ್ಣ ಪಟ್ಟಣವನ್ನು ತಲುಪಬೇಕು. ಕಶೇಲಿಯಿಂದ ಖಾಂಡಾಸ್‍ಗೆ ಸುಲಭವಾಗಿ ತಲುಪಲು ಸಾರ್ವಜನಿಕ ಆಟೋ ರಿಕ್ಷಾದ ಅನುಕೂಲವಿದೆ. ಕಶೇಲಿಯಿಂದ ಖಾಂಡಾಸ್‍ಗೆ ಸುಮಾರು 12.3 ಕಿ.ಮೀಗಳ ಅಂತರವಿದ್ದು, ತಲುಪಲು 30 ನಿಮಿóಷಗಳು ಹಿಡಿಯುತ್ತದೆ.

ಮಾಡಿ ನೋಡಿರೊಮ್ಮೆ ಭೀಮಾಶಂಕರ ಟ್ರೆಕ್ಕಿಂಗ್

ಚಿತ್ರಕೃಪೆ: Ankit Patel

ಖಾಂಡಾಸ್ ಒಂದು ಸಣ್ಣ ಹಳ್ಳಿಯಾಗಿದ್ದು, ಉಳಿದುಕೊಳ್ಳಲು ಯಾವುದೇ ರೀತಿಯ ಲಾಡ್ಜ್ ಹಾಗೂ ಅತಿಥಿ ಗೃಹಗಳ ವ್ಯವಸ್ಥೆಯಿರುವುದಿಲ್ಲ. ಆದರೆ ತಕ್ಷಣದ ಹಸಿವು ನೀಗಲು, ಊಟೋಪಚಾರಕ್ಕಾಗಿ ಅಕ್ಷಯ್ ಚೈನೀಸ್ ಕಾರ್ನರ್ ಎಂಬ ಸಣ್ಣ ಉಪಹಾರ ಗೃಹವಿದೆ. ಕರ್ಜಾತ್ ಹಾಗೂ ನೇರಲ್ ಹತ್ತಿರದ ಪಟ್ಟಣಗಳಾಗಿದ್ದು, ಮುಂಬೈನಿಂದ ಇಲ್ಲಿಗೆ ನೇರ ರೈಲುಸಂಪರ್ಕವಿದೆ.

ಅಕ್ಷಯ್ ಚೈನೀಸ್ ಕಾರ್ನರ್‍ನಿಂದ ಮೊಹಘಲ್ ಕಡೆಗೆ ಕಬ್ಬಿಣದಿಂದ ನಿರ್ಮಿಸಲಾದ ರಸ್ತೆಯಲ್ಲಿ ಹೋದರೆ ,1.5 ಕಿ.ಮೀ ಅಂತರದಲ್ಲಿ ತೊರೆಗೆ ಅಡ್ಡಲಾಗಿ ಕಟ್ಟಿರುವ ಒಂದು ಸಣ್ಣ ಸೇತುವೆ ಎದುರಾಗುತ್ತದೆ ಅದನ್ನು ದಾಟಿಹೋದರೆ "ಟಿ" ಜಂಕ್ಷನ್ ಸಿಗುತ್ತದೆ, "ಟಿ" ಜಂಕ್ಷನ್‍ನಿಂದ ಬಲಕ್ಕೆ ತಿರುಗಿ ಮತ್ತೆ ಕಬ್ಬಿಣದಿಂದ ನಿರ್ಮಿಸಿದ ದಾರಿಯು ಎದುರಾಗುತ್ತದೆ, ಅಲ್ಲಿಂದ 600 ಮೀಟರ್‍ಗಳಷ್ಟು ದೂರ ಸಾಗಿದರೆ ನಿರ್ಜನ ಪ್ರದೇಶದಿಂದ ಕೂಡಿದ, ಹಾಗೂ ಸ್ಥಳೀಯರಿಂದ ನಿರ್ಮಿಸಲ್ಪಟ್ಟ ಬಿಡಾರಗಳು ಕಾಣಸಿಗುತ್ತದೆ.

ಅಲ್ಲಿಂದ ಮುಂದೆ ಕಲ್ಲುಗಳಿಂದ ಕೂಡಿದ ಕಾಲುದಾರಿಯು ದಟ್ಟ ಅರಣ್ಯದೆಡೆಗೆ ಸಾಗುತ್ತದೆ. ಸ್ಥಳೀಯರಿಂದ ನಿರ್ಮಿತವಾದ ಆ ಬಿಡಾರಗಳು ಬೇಸಿಗೆ ಹಾಗೂ ಚಳಿಗಾಲದಲ್ಲಿ ಟೀ ಅಂಗಡಿಗಳಾಗಿ ಪರಿವರ್ತಿತವಾಗುತ್ತದೆ. ಗಣೇಶ್ ಘಾಟ್ ಚಾರಣಕ್ಕೆ ಹೋಗುವ ಕಾಲುದಾರಿಯು ಶುರುವಾಗುವುದು ಇಲ್ಲಿಂದಲೇ.

ಮಾಡಿ ನೋಡಿರೊಮ್ಮೆ ಭೀಮಾಶಂಕರ ಟ್ರೆಕ್ಕಿಂಗ್

ಚಿತ್ರಕೃಪೆ: Udaykumar PR

ಅಲ್ಲಿಂದ 850ಮೀ ನಡೆದರೆ ನಮಗೆ ಸಿಗುವುದೇ ಗಣೆಶ ಮಂದಿರ. ಗಣೇಶ್ ಘಾಟ್‍ಗೆ ಆ ಹೆಸರು ಬರಲು ಕಾರಣವೇ ಈ ಗಣೇಶ ಮಂದಿರ. ಈ ಗಣೇಶ ಮಂದಿರಕ್ಕೆ ಎಡಕ್ಕೆ ಹೊರಳುವ ಕಾಲುದಾರಿಯಲ್ಲಿಯೇ ಮುಂದೆ ಸಾಗಬೇಕು, ಅದು ಕಡಿದಾದ ಕಲ್ಲುಗಳ ಏರು ದಾರಿ, ಸುಮಾರು 2 ಕಿ.ಮೀ ಆ ದಾರಿಯನ್ನು ಏರಿದರೆ ಸಮತಟ್ಟಾದ ಕಲ್ಲು ಬಂಡೆಗಳಿಂದ ಕೂಡಿದ ಜಾಗಕ್ಕೆ ಹೋಗುತ್ತದೆ.ಈ ಜಾಗದಿಂದ ಕಾಲುದಾರಿಯು ಸ್ವಲ್ಪಮಟ್ಟಿಗೆ ಏರು ತಗ್ಗುಗಳಿಂದ ಕೂಡಿ, ಈಶಾನ್ಯ ದಿಕ್ಕಿನೆಡೆಗೆ ಹೊರಳುತ್ತದೆ.

ಈ ಎತ್ತರದ ಸಮತಟ್ಟಾದ ಕಾಲುದಾರಿಯಲ್ಲಿ ಅರ್ಧ ದೂರ ಕ್ರಮಿಸಿದರೆ ಸಾಕು, ಬಲದಲ್ಲಿ ಕಾಣುವುದೇ ಕಲ್ಲಿನ ಗೋಪುರವೆಂದೇ ಹೆಸರಾದ "ಪದ್ದಾರ್ ಕಿಲಾ". ಶಿಖರ ಚಾರಣಕ್ಕೆ ಈ ಭವ್ಯವಾದ ಜಾಗವು ಅತ್ಯಂತ ಪ್ರಶಸ್ತವಾದದ್ದು.ಅಡ್ಡಲಾಗಿ ಎದುರಾಗುವ ಎರಡು ಚಿಕ್ಕ ಕಾಲುದಾರಿಗಳಲ್ಲಿ ಒಂದು ಮುಖ್ಯ ಕಾಲುದಾರಿಯಾದರೆ ಮತ್ತೊಂದು ಪದ್ದಾರ್ ಕಿಲಾದ ಬುಡಕ್ಕೆ ಹೋಗುತ್ತದೆ.

ಮುಖ್ಯ ಕಾಲುದಾರಿಯಲ್ಲಿ ಮುಂದೆ ಹೋದರೆ ಸಿಗುವುದೇ ಭೀಮಶಂಕರದÀ ಬೃಹತ್ ಗೋಡೆಗಳ ಭವ್ಯದರ್ಶನ. ಈ ಸಮತಟ್ಟಾದ ಪ್ರದೇಶದ ಉತ್ತರ ತುದಿಯಿಂದ ನಿಂತು ನೋಡಿದರೆ ಭೀಮಶಂಕರದ ಆ ಬೃಹತ್ ಗೋಡೆಗಳನ್ನು ಸ್ಪಷ್ಟವಾಗಿ ನೋಡಬಹುದು.

ಮಾಡಿ ನೋಡಿರೊಮ್ಮೆ ಭೀಮಾಶಂಕರ ಟ್ರೆಕ್ಕಿಂಗ್

ಚಿತ್ರಕೃಪೆ: Udaykumar PR

ಈ ಸುಂದರ ದೃಶ್ಯವನ್ನು ನೋಡಲೆಂದೇ ಗಣೇಶ್ ಘಾಟ್ ದಾರಿಯನ್ನು ಪ್ರಥಮ ಆಯ್ಕೆಯನ್ನಾಗಿ ಮಾಡಿಕೊಳ್ಳುತ್ತಾರೆ. ನಂತರ ಈ ದಾರಿಯಿಂದ ಕಾಲುದಾರಿಯು ಬಲಕ್ಕೆ ಪಶ್ಚಿಮದೆಡೆಗೆ ಹೊರಳುತ್ತದೆ, ಮಾರ್ಗಮಧ್ಯ ಒಂದು ಹಳೇಯ ನೀರಿನ ಬಾವಿಯನ್ನು ನೋಡಬಹುದು.ಇದು ಅಷ್ಟೇನು ಆಳವಿಲ್ಲದ ಬಾವಿಯಾಗಿದ್ದು, ಹಗ್ಗದ ಸಹಾಯವಿಲ್ಲದೆ ನೀರನ್ನು ತೆಗೆಯಬಹುದು.

ಈ ಸಮತಟ್ಟಾದ ಪ್ರದೇಶದ ಪಶ್ಚಿಮದ ದಾರಿಯು ಒಂದು ಕೊಳ್ಳದ ಬಳಿ ಮುಕ್ತಾಯವಾಗುತ್ತದೆ. ಈ ಕೊಳ್ಳವು ಎಡಕ್ಕೆ ಆಳವಿದ್ದು ಕೊಳ್ಳವನ್ನು ದಾಟುವಾಗ ಜಾಗರೂಕತೆಯಿಂದ ದಾಟಬೇಕು.ಈ ಕೊಳ್ಳದ ಬಳಿಯೇ ಸಣ್ಣ ಬಿಡಾರವಿದ್ದು ಅದರ ಪಕ್ಕದಲ್ಲೇ ಪುಟ್ಟ ಜಲಪಾತವೂ ಇದೆ. ಈ ಬಿಡಾರವು ವಿಶ್ರಾಂತಿ ಪಡೆಯಲು ಹಾಗೂ ಉಪಹಾರ ಸೇವಿಸಲು ಸೂಕ್ತ ಸ್ಥಳ.ಈ ದಾರಿಯಲ್ಲಿ ಕೋತಿಗಳ ಹಾವಳಿಯಿರುವುದರಿಂದ ಪ್ರವಾಸಿಗರು ಅವುಗಳ ಬಗ್ಗೆ ಎಚ್ಚರದಿಂದಿರುವುದು ಒಳ್ಳೆಯದು.

ದೊಡ್ಡ ಬಂಡೆಗಳಿಂದ 800 ಮೀ ಮುಂದೆ , ಆ ಕಾಲುದಾರಿಗಳು ಕಾಡುಗಳ ನಡುವೆ ಮುಂದುವರೆಯುತ್ತದೆ, ಹಾಗೆ ನಡೆಯುತ್ತಾ ಹೋದರೆ ನಮಗೆ ಬಿಡಾರಗಳ ಗುಂಪುಗಳು ಕಾಣಸಿಗುತ್ತವೆ.ಈ ಬೀಡಾರಗಳ ಗುಂಪುಗಳು ಸಿದ್ದಿ ಘಾಟ್ ಹಾಗೂ ಗಣೇಶ್ ಘಾಟ್‍ಗಳನ್ನು ಒಮ್ಮುಖವಾಗಿಸಲು ಇರುವ ಒಂದು ಮುಖ್ಯ ಪ್ರದೇಶ.

ಮಾಡಿ ನೋಡಿರೊಮ್ಮೆ ಭೀಮಾಶಂಕರ ಟ್ರೆಕ್ಕಿಂಗ್

ಚಿತ್ರಕೃಪೆ: Udaykumar PR

ಈ ದಾರಿಯಲ್ಲಿ ಸಿಗುವ ಎರಡನೆಯ ಹಾಗೂ ಕಡಿದಾದ ಚಾರಣವು ಶುರುವಾಗುದು ಇದೇ ಬಿಡಾರ ಗುಂಪುಗಳ ಜಾಗದಿಂದ.ಇಲ್ಲಿಂದ 750 ಮೀ. ಗಳವರೆಗೆ ನಮಗೆ ಸಿಗುವುದೆಲ್ಲ ದಕ್ಷಿಣ ಘಟ್ಟಗಳಿಗೆ ಅಂಟಿಕೊಂಡಂತ್ತಿರುವ ಕಡಿದಾದ ಜಿಗ್‍ಜ್ಯಾಗ್ ಮಾದರಿಯ ಏರು ದಾರಿಗಳು. ಮುಂದಿನ 3ಕಿ.ಮೀ ಗಳ ಪಯಣದಲ್ಲಿ 200 ಮೀ ಎತ್ತರದ ಹಾಗೂ ನೇರದಾರಿಯಿಂದ ಕೂಡಿದ ಮತ್ತು ಎಡಭಾಗದಲ್ಲಿನ ಆಳಪ್ರದೇಶವು ನಮ್ಮ ಪಯಣಕ್ಕೆ ಜೊತೆಯಾಗಿರುತ್ತವೆ.

ಮಳೆಗಾಲದಲ್ಲಿ ಈ ಪ್ರದೇಶವು ಜಾರುವಿಕೆಯಿಂದ ಕೂಡಿದ್ದು, ಬಂಡೆಗಳು ಒದ್ದೆಯಾಗಿರುವುದಲ್ಲದೆ, ಸಣ್ಣ ಸಣ್ಣ ತೊರೆಗಳು ಕೂಡ ಮೂಡಿರುತ್ತವೆ.ಈ ಪ್ರದೇಶದಿಂದ ವಾಪಾಸ್ ಇಳಿದು ಬರುವಾಗ ಅತ್ಯಂತ ಎಚ್ಚರವಹಿಸುವುದು ಅತ್ಯವಶ್ಯಕ.ಈ ಪ್ರಯಾಣದಲ್ಲಿ ನಾಗಪಾಣಿ ಪೀಕ್‍ನ ಸುಂದರ ದೃಶ್ಯ, ಹಚ್ಚಹಸಿರಿನ ಮೈದಾನಗಳು,ಪಶ್ಚಿಮಕ್ಕೆ ಪಾದರವಾಡಿ ಹಳ್ಳಿಯ ಮನೆಗಳ ವಿಹಂಗಮ ನೋಟಗಳು ನಮಗೆ ನೋಡಲು ಸಿಗುತ್ತವೆ.

ಇಲ್ಲಿಂದ ಮುಂದಿನ 1 ಕಿ.ಮೀ ಪ್ರಯಾಣ ಮರಗಳ ನೆರಳಿನ ಆರಾಮದಾಯಕ ಚಾರಣವಾಗಿರುತ್ತದೆ. ಮೂರನೆಯ ಹಾಗೂ ಕೊನೆಯ 500 ಮೀ.ಗಳು ಮರಗಳ ದಟ್ಟಣೆಯ ನಡುವೆ ಆರಾಮದಾಯಕವಾಗಿ ಬೆಟ್ಟದ ತುತ್ತತುದಿಗೆ ನಮ್ಮನ್ನು ಕರೆದೊಯ್ಯುತ್ತದೆ.ಬೆಟ್ಟದ ತುದಿಯಿಂದ ಕಮಲಜ ದೇವಸ್ಥಾನದ ಕಡೆಗಿನ ಸುಲಭ ನಡಿಗೆಯು ಈ ಪರ್ವತಾರೋಹಣದ ಕಟ್ಟಕಡೆಯ ಹಂತವನ್ನು ತಲುಪಿ ಅಲ್ಲಿಯೇ ಮುಕ್ತಾಯಗೊಳ್ಳುತ್ತದೆ.

ಮಹಾರಾಷ್ಟ್ರದ ಅದ್ಭುತ ಚಾರಣಗಳು

ಟ್ರೆಕ್ಕಿಂಗ್‍ನ ಸಂಕ್ಷಿಪ್ತ ವಿವರ:

ಸಮಯ: 3.5-4.5 ಘಂಟೆಗಳು(ಏರಲು), 2-4 ಘಂಟೆಗಳು(ಇಳಿಯಲು)
ದೂರ: ಗಣೇಶ್ ಘಾಟ್ ನಿಂದ 8.1 ಕಿ.ಮೀ / ಖಾಂಡಾಸ್ ಹಳ್ಳಿಯಿಂದ 10.2 ಕಿ.ಮೀ.
ಪ್ರಾರಂಭ : ಖಾಂಡಾಸ್ ಹಳ್ಳಿ(ಕಶೀಲಿನಿಂದ 12.7 ಕಿ.ಮೀ, ನೇರಲ್‍ನಿಂದ 25 ಕಿ.ಮೀ, ಕರ್ಜತ್‍ನಿಂದ 29 ಕಿ.ಮೀ.
ಮುಕ್ತಾಯ : ಭೀಮಾಶಂಕರ್ ದೇವಸ್ಥಾನ
ತಲುಪುವುದು : ನೇರಲ್ ರೈಲು ನಿಲ್ದಾಣ ಖಾಂಡಾಲ್‍ಗೆ ಹತ್ತಿರವಾಗಿದೆ. Sಊ54 ಹೆದ್ದಾರಿಯು ನೇರಲ್ ನಿಂದ ಖಾಂಡಾಸ್ ಸಂಪರ್ಕಿಸುತ್ತದೆ.ನೇರಲ್‍ನಿಂದ ಕಶೇರ್ 12.3 ಕಿ.ಮೀ ಹಾಗೂ ಕಶೇಲ್‍ನಿಂದ 12.7 ಕಿ.ಮೀ. ಖಾಂಡಾಸ್‍ಗೆ ಆಟೋರಿಕ್ಷಾ ವ್ಯವಸ್ಥೆಯಿದ್ದು, ಅದು ನೇರಲ್ ಹಾಗೂ ಕಶೇಲ್ ನಿಂದ ಲಭ್ಯವಿದೆ.ಕರ್ಜತ್ ರೈಲು ನಿಲ್ದಾಣ ಕಶೇಲ್‍ನಿಂದ 16.7 ಕಿ.ಮೀ.ದೂರವಿದೆ. ಕರ್ಜತ್‍ನಿಂದ ಕಶೇಲಿಗೆ Sಊ38 ಹೆದ್ದಾರಿಯ ಸಂಪರ್ಕವಿದೆ.

ಕಶೇಲ್‍ನಲ್ಲಿ ಹಾಗೂ ಖಾಂಡಾಸ್‍ನಲ್ಲಿ ಉಳಿಯಲು ಯಾವುದೇ ರೀತಿಯ ಲಾಡ್ಜ್ ಹಾಗೂ ತಂಗುದಾಣಗಳ ವ್ಯವಸ್ಥೆಯಿಲ್ಲ. ನೇರಲ್ ಹಾಗೂ ಕರ್ಜತ್‍ನಲ್ಲಿ ಸಣ್ಣ ಲಾಡ್ಜ್‍ಗಳು ಲಭ್ಯವಿದೆ.

ಹವಾಮಾನ: ಭೀಮಾಶಂಕರ್ ಪರ್ವತ ಪ್ರದೇಶವು ಮಳೆಯಿಂದ ಕೂಡಿದ್ದು, ಮಳೆಗಾಲದಲ್ಲಿ ಮೋಡಗಳಿಂದ ಕೂಡಿರುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X