Search
  • Follow NativePlanet
Share
» »ಅಮೃತೇಶ್ವರ ದೇವಾಲಯದ ಕಲಾ ಸೌಂದರ್ಯಕ್ಕೆ ಎಂಥವರು ಕೂಡ ಬೆರಗಾಲೇಬೇಕು...

ಅಮೃತೇಶ್ವರ ದೇವಾಲಯದ ಕಲಾ ಸೌಂದರ್ಯಕ್ಕೆ ಎಂಥವರು ಕೂಡ ಬೆರಗಾಲೇಬೇಕು...

ತಮ್ಮ ವಿಶಿಷ್ಟವಾದ ವಾಸ್ತು ಶಿಲ್ಪ ಹಾಗೂ ಕೌಶಲ್ಯದಿಂದ ಕೆಲವು ದೇವಾಲಯಗಳು ಇಂದಿಗೂ ಅಜರಾಮರವಾಗಿ ಪ್ರಖ್ಯಾತಿಯನ್ನು ಪಡೆದಿದೆ. ಕೆಲವು ದೇವಾಲಯಗಳಲ್ಲಿನ ಕೆಲವು ರಹಸ್ಯಗಳೆಲ್ಲವೂ ಇಂದಿಗೂ ಬಗೆಹರಿಸಲಾಗದೇ ಇರುವುದನ್ನು ಗಮನಿಸಬಹುದು. ಅವು ಇಂದಿಗೂ ಕೂಡ

ಭಾರತ ದೇಶ ಒಂದು ಆಧ್ಯಾತ್ಮಿಕವಾದ ದೇಶ ಎಂದು ಪ್ರಸಿದ್ಧಿಯನ್ನು ಪಡೆದಿದೆ. ಭಕ್ತರು ಹಾಗೂ ದೇವಾಲಯಗಳು ಇಲ್ಲಿ ಸಾಕಷ್ಟು ಇವೆ. ಅನೇಕ ಮಂದಿ ಭಕ್ತರು ಹಾಗು ರಾಜರು ಹಲವಾರು ದೇವಾಲಯವನ್ನು ನಿರ್ಮಿಸಿದ್ದಾರೆ. ಆದರೆ ಪುರಾತನವಾದ ರಾಜರ ಕಾಲದಲ್ಲಿ ತಮ್ಮ ಅದ್ಭುತ ಕಾಲ ರುಚಿಯಿಂದ ಸುಂದರವಾದ ಶಿಲ್ಪಕ್ಕೆ ಹಾಗೂ ವಾಸ್ತು ಶಿಲ್ಪಕ್ಕೆ ಮಹತ್ವವನ್ನು ನೀಡುತ್ತಿದ್ದರು.

ತಮ್ಮ ವಿಶಿಷ್ಟವಾದ ವಾಸ್ತು ಶಿಲ್ಪ ಹಾಗೂ ಕೌಶಲ್ಯದಿಂದ ಕೆಲವು ದೇವಾಲಯಗಳು ಇಂದಿಗೂ ಅಜರಾಮರವಾಗಿ ಪ್ರಖ್ಯಾತಿಯನ್ನು ಪಡೆದಿದೆ. ಕೆಲವು ದೇವಾಲಯಗಳಲ್ಲಿನ ಕೆಲವು ರಹಸ್ಯಗಳೆಲ್ಲವೂ ಇಂದಿಗೂ ಬಗೆಹರಿಸಲಾಗದೇ ಇರುವುದನ್ನು ಗಮನಿಸಬಹುದು. ಅವು ಇಂದಿಗೂ ಕೂಡ ವಿಜ್ಞಾನಕ್ಕೆ ಪ್ರೆಶ್ನೆಯಾಗಿಯೇ ಉಳಿದಿದೆ.

ಹಾಗೆಯೇ ನಮ್ಮ ಕರ್ನಾಟಕದಲ್ಲಿನ ಇಂಥಹ ಅದ್ಭುತ ದೇವಾಲಯಗಳಲ್ಲಿ ಅಮೃತೇಶ್ವರ ದೇವಾಲಯವು ಒಂದು. ಈ ದೇವಾಲಯದಲ್ಲಿ ಅದ್ಭುತವಾದ ಶಿಲ್ಪಕಲಾ ಚಾರ್ತುಯವನ್ನು ಕಂಡು ಆನಂದಿಸಬಹುದು. ಇದು ನಮಗೆ ಒಂದು ಹೆಮ್ಮೆಯ ವಿಷಯವು ಕೂಡ ಹೌದು.

ಅಮೃತೇಶ್ವರ ದೇವಾಲಯ ಎಲ್ಲಿದೆ?

ಅಮೃತೇಶ್ವರ ದೇವಾಲಯ ಎಲ್ಲಿದೆ?

ಈ ಸುಂದರವಾದ ದೇವಾಲಯವಿರುವುದು ನಮ್ಮ ಕರ್ನಾಟಕದಲ್ಲಿನ ಚಿಕ್ಕಮಂಗಳೂರು ಜಿಲ್ಲೆಯ ಒಂದು ಸಣ್ಣ ಅಮೃತಪುರ ಹಳ್ಳಿಯಲ್ಲಿ. ಅಮೃತಪುರವು ಅಮೃತೇಶ್ವರ ದೇವಾಲಯಕ್ಕೆ ಖ್ಯಾತಿಯನ್ನು ಪಡೆದಿದೆ.

PC:Dineshkannambadi

ಯಾರು ನಿರ್ಮಿಸಿದರು?

ಯಾರು ನಿರ್ಮಿಸಿದರು?

ಈ ಸುಂದರವಾದ ಶಿಲ್ಪಕಲೆಗಳನ್ನು ಹೊಂದಿರುವ ದೇವಾಲಯವನ್ನು ನಿರ್ಮಿಸಿದವರು ಹೊಯ್ಸಳ ರಾಜವಂಶದ 2ನೇ ವೀರ ಬಳ್ಳಾಲ. ಈ ದೇವಾಲಯವನ್ನು ಸುಮಾರು 1196 ರಲ್ಲಿ ನಿರ್ಮಿಸಿದ್ದಾರೆ ಎಂದು ಇತಿಹಾಸ ತಿಳಿಸುತ್ತದೆ.


PC:Dineshkannambadi

ವಾಸ್ತು ಶಿಲ್ಪ

ವಾಸ್ತು ಶಿಲ್ಪ

ಈ ಅಮೃತೇಶ್ವರ ದೇವಾಲಯವನ್ನು ಹೊಯ್ಸಳ ವಾಸ್ತುಶಿಲ್ಪ ಶೈಲಿಯಲ್ಲಿ ನಿರ್ಮಿಸಲಾಗಿದೆ. ಇಲ್ಲಿ ಒಂದು ವಿಶಾಲವಾದ ತೆರೆದ ಮಂಟಪದ ನಿರ್ಮಾಣವನ್ನು ಕಾಣಬಹುದಾಗಿದೆ. ಇದೊಂದು ಹೊಯ್ಸಳ ನಿರ್ಮಾಣ ಶೈಲಿಯ ನಿರ್ದನವಾಗಿದೆ.


PC:Dineshkannambadi

ಸುಂದರವಾದ ಕೆತ್ತನೆಗಳು

ಸುಂದರವಾದ ಕೆತ್ತನೆಗಳು

ಈ ದೇವಾಲಯದಲ್ಲಿ ಸಮಾನವಾದ ವೃತ್ತಾಕಾರದ ಕೆತ್ತನೆಗಳನ್ನು ಹೊಂದಿರುವ ಹೊರ ಗೋಡೆಗಳನ್ನು ಕಾಣಬಹುದಾಗಿದೆ. ಈ ದೇವಾಲಯದ ಗೋಪುರವಂತೂ ಸೂಕ್ಷ್ಮವಾದ ಕೆತ್ತನೆಗಳಿಂದ ಕಂಗೊಳಿಸುತ್ತಿದೆ.

PC:Dineshkannambadi

ವೀರ ನಾರಾಯಣ ದೇವಾಲಯ

ವೀರ ನಾರಾಯಣ ದೇವಾಲಯ

ಈ ದೇವಾಲಯದ ಮಂಟಪ ರಚನೆ ಮತ್ತು ಗಾತ್ರ ವೀರ ನಾರಾಯಣ ದೇವಾಲಯಕ್ಕೆ ಹೋಲಿಕೆಯಾಗುವಂತೆ ಇದೆಯಂತೆ. ತೆರದ ಮಂಟಪವು 29 ಕೊಲ್ಲಿಗಳನ್ನು ಹಾಗೂ ಮುಚ್ಚಿದ ಮಂಟಪವು 9 ಕೊಲ್ಲಿಗಳನ್ನು ಒಳಗೊಂಡಿದೆ.

PC:Dineshkannambadi

ಹೊಯ್ಸಳ ಲಾಂಛನ

ಹೊಯ್ಸಳ ಲಾಂಛನ

ಈ ದೇವಾಲಯವನ್ನು ಹೊಯ್ಸಳರು ನಿರ್ಮಾಣ ಮಾಡಿರುವುದು ಎಂಬುದಕ್ಕೆ ಸಾಕ್ಷಿಯೆಂಬಂತೆ ಈ ದೇವಾಲಯದಲ್ಲಿ ಹೊಯ್ ಎಂಬ ರಾಜನು ಸಿಂಹವನ್ನು ಕೊಲ್ಲುತ್ತಿರುವ ಹೊಯ್ಸಳರ ಲಾಂಛನವನ್ನು ಇಲ್ಲಿ ಕಾಣಬಹುದು.


PC:Dineshkannambadi

ಒಳ ಛಾವಣಿಯ ರಚನೆ

ಒಳ ಛಾವಣಿಯ ರಚನೆ

ನೀವು ಈ ದೇವಾಲಯದಲ್ಲಿನ ಒಳ ಛಾವಣಿಯನ್ನು ಕಂಡರೇ ಮೂಕ ವಿಸ್ಮಿತರಾಗುವುದಂತೂ ಖಂಡಿತ. ಮಂಟಪದ ಮಧ್ಯೆ ಭಾಗದಲ್ಲಿ ಸುಂದರವಾದ ಹೂವಿನ ವಿನ್ಯಾಸವಿದೆ. ಈ ಹೂವಿನ ಕೆತ್ತನೆಯು ಆನೇಕ ಅಲಂಕಾರಿಕ ಒಳಂಗಾಣ ಕೆತ್ತನೆಗಳನ್ನು ಕಾಣಬುದಾಗಿದೆ. ಈ ಸುಂದರವಾದ ಕೆತ್ತನೆಯನ್ನು ಇಲ್ಲಿಗೆ ಬರುವ ಹಲವಾರು ಪ್ರವಾಸಿಗರು ಬೆರಗಾಗುತ್ತಾರೆ.

PC:Dineshkannambadi

ಶಿಲ್ಪಗಳು

ಶಿಲ್ಪಗಳು

ದೇವಾಲಯದ ಹೊರಭಾಗದಲ್ಲಿ ವಾಲಿ ಮತ್ತು ಸುಗ್ರೀವರು ಯುದ್ಧ ಮಾಡುತ್ತಿರುವ ಶಿಲ್ಪಗಳು, ಹಿಂದೂ ದೇವತಾ ಮೂರ್ತಿಗಳು, ಹಳೆಯ ಕನ್ನಡ ಶಾಸನಗಳು, ಕೀರ್ತಿ ಮೂಖಗಳನ್ನು ಇಲ್ಲಿ ಕಾಣಬಹುದಾಗಿದೆ.


PC:Dineshkannambadi

ಸಮೀಪದ ಪ್ರವಾಸಿ ತಾಣಗಳು

ಸಮೀಪದ ಪ್ರವಾಸಿ ತಾಣಗಳು

ಸಮಿಪದ ಪ್ರವಾಸಿ ತಾಣಗಳೆಂದರೆ ಅವು ಬಾಬಾ ಬುಡನ್‍ಗಿರಿ, ಅಯ್ಯನ ಕೆರೆ, ಕೊದಂಡರಾಮ ದೇವಾಲಯ, ಮಾಣಿಕ್ಯಾಧಾರ ಜಲಪಾತ, ಮುತುಡಿ ಫಾರೆಸ್ಟ್ ಕ್ಯಾಂಪ್ ಇನ್ನೂ ಹಲವಾರು...


PC:Dineshkannambadi

ತಲುಪುವ ಬಗೆ?

ತಲುಪುವ ಬಗೆ?

ಬೆಂಗಳೂರಿನಿಂದ ಚಿಕ್ಕಮಂಗಳೂರಿನ ಅಮೃತೇಶ್ವರ ದೇವಾಲಯಕ್ಕೆ ತಲುಪುವ ಸಮಯ ಸುಮಾರು 5 ಗಂಟೆ. ಸುಮಾರು 263 ಕಿ,ಮೀ ದೂರದ ಪ್ರಯಾಣ ಮಾಡಬೇಕಾಗುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X