Search
  • Follow NativePlanet
Share
» »ವಿಶಿಷ್ಟ ಆಕರ್ಷಣೆಗಳ ವಿಶಾಖಾಪಟ್ಟಣಂ

ವಿಶಿಷ್ಟ ಆಕರ್ಷಣೆಗಳ ವಿಶಾಖಾಪಟ್ಟಣಂ

By Vijay

ವೈಜಾಗ್ ಎಂಬ ಹೆಸರಿನಿಂದಲೂ ಸಹ ಕರೆಯಲ್ಪಡುವ ವಿಶಾಖಾಪಟ್ಟಣಂ ಆಂಧ್ರಪ್ರದೇಶ ರಾಜ್ಯದ ಅತಿ ದೊಡ್ಡ ಪಟ್ಟಣವಾಗಿದ್ದು, ಭಾರತದ ಪೂರ್ವ ಕರಾವಳಿ ತೀರದಗುಂಟ ನೆಲೆಸಿರುವ ಚೆನ್ನೈ ಹಾಗೂ ಕೊಲ್ಕತ್ತಾ ನಗರಗಳ ನಂತರದ ಅತೊ ದೊಡ್ಡ ಪಟ್ಟಣವೂ ಸಹ ಆಗಿದೆ. ವೈಶಾಕ ದೇವತೆಯ ಗೌರವಾರ್ಥಕವಾಗಿ ಈ ಪಟ್ಟಣಕ್ಕೆ ಈ ಹೆಸರು ಬಂದಿದ್ಎ ಎಂದು ಹೇಳಲಾಗುತ್ತದೆ.

ವಿಮಾನ ಹಾರಾಟ ದರಗಳ ಮೇಲೆ 7000 ರೂಪಾಯಿಯವರೆಗೂ ಕಡಿತ, ತ್ವರೆ ಮಾಡಿ

ಮೂಲತಃ ವೈಜಾಗ್ ಒಂದು ಸುಂದರಮಯ ಕಡಲ ತೀರಗಳುಳ್ಳ ಬಂದರು ಪಟ್ಟಣವಾಗಿದೆ. ಅಲ್ಲದೆ ಭಾರತ ಸೇನೆಯ ಒಂದು ಭಾಗವಾದ ನೌಕಾದಳದ ಪೂರ್ವ ನೌಕಾದಳ ವಿಭಾಗಕ್ಕೆ ಕೇಂದ್ರವಾಗಿದೆ. ಪ್ರಸ್ತುತ ವೈಜಾಗ್ ಒಂದು ರಭಸವಾಗಿ ಬೆಳೆಯುತ್ತಿರುವ ಕೈಗಾರಿಕಾ ನಗರ ಎಂಬ ಹಿರಿಮೆ ಹೊಂದಿದ್ದರೂ ಸಹ ಇಲ್ಲಿ ಶ್ರೀಮಂತಮಯ ಸಂಸ್ಕೃತಿ, ಸಂಪ್ರದಾಯಗಳು ತಳುಕು ಹಾಕಿಕೊಂಡಿರುವುದನ್ನು ಗಮನಿಸಬಹುದು.

ವಿಶೇಷ ಲೇಖನ : ಉಡುಪಿ ಜಿಲ್ಲೆಯ ಸುಂದರ ಆಕರ್ಷಣೆಗಳು

ಹಿಂದೆ ಕಳಿಂಗ ಸಾಮ್ರಾಜ್ಯದ ಭಾಗವಾಗಿ ಈ ಪಟ್ಟಣವು ಮೆರೆದಿತ್ತು. ಈ ಪ್ರದೇಶವನ್ನು ಅಶೋಕ ಚಕ್ರವರ್ತಿಯಿಂದ ಹಿಡಿದು ಕೃಷ್ಣದೇವರಾಯನವರೆಗೆ ಹಲವಾರು ಅರಸರು ಆಳಿದ್ದರು. 18 ನೆಯ ಶತಮಾನದ ಸಂದರ್ಭದಲ್ಲಿ ವಿಶಾಖಾಪಟ್ಟಣಂ ಡಚ್ಚರ ಕೈವಶದಲ್ಲಿತ್ತು. ಇಂದು ಈ ಪಟ್ಟಣವು ತನ್ನ ಐತಿಹಾಸಿಕ ಶ್ರೀಮಂತಿಕೆಯಿಂದ ಒಂದು ಸುಮಧುರ ಪ್ರವಾಸಿ ತಾಣವಾಗಿ ಹೆಸರುವಾಸಿಯಾಗಿದೆ.

ವಿಶೇಷ ಲೇಖನ : ಅದ್ಭುತ, ವಿಹಂಗಮ ಈಸ್ಟ್ ಕೋಸ್ಟ್ ಹೆದ್ದಾರಿ

ವೈಜಾಗ್ ನಲ್ಲಿ ಸಾಕಷ್ಟು ಪ್ರಖ್ಯಾತಿ ಪಡೆದ, ಚುಂಬಕದಂತೆ ಸೆಳೆಯುವ ಪ್ರವಾಸಿ ಆಕರ್ಷಣೆಗಳನ್ನು ನೋಡಬಹುದಾಗಿದೆ. ವೈಜಾಗ್ ಈಸ್ಟ್ ಕೋಸ್ಟ್ ರಾಷ್ಟ್ರೀಯ ಹೆದ್ದಾರಿ ಐದರ ಮೇಲೆ ಸ್ಥಿತವಿದ್ದು ಚೆನ್ನೈ ಹಾಗೂ ಕೊಲ್ಕತ್ತಾದೊಂದಿಗೆ ಉತ್ತಮ ರೈಲು ಹಾಗೂ ಬಸ್ಸು ಸಂಪರ್ಕ ಹೊಂದಿದೆ. ಬೆಂಗಳೂರಿನಿಂದ 1000 ಕಿ.ಮೀ ಗಳಷ್ಟು ದೂರವಿರುವ ವೈಜಾಗ್ ಪಟ್ಟಣಕ್ಕೆ ತೆರಳಲು ಬೆಂಗಳೂರಿನಿಂದ ನೇರವಾದ ರೈಲುಗಳು ಹಾಗೂ ಕೆಲ ಖಾಸಗಿ ಬಸ್ಸುಗಳೂ ಸಹ ದೊರೆಯುತ್ತವೆ. ರೈಲಿನಲ್ಲಿ ವೈಜಾಗ್ ಬೆಂಗಳೂರಿನಿಂದ ಸುಮಾರು 23 ರಿಂದ 24 ಘಂಟೆಗಳಷ್ಟು ಪ್ರಯಾಣಾವಧಿಯ ದೂರದಲ್ಲಿದೆ.

ವೈಜಾಗ್ ಆಕರ್ಷಣೆಗಳು:

ವೈಜಾಗ್ ಆಕರ್ಷಣೆಗಳು:

ವೈಜಾಗ್ ಮೂಲವಾಗಿ ಶ್ರೀ ವೆಂಕಟೇಶ್ವರ ಕೊಂಡ, ರಾಸ್ ಬೆಟ್ಟ ಹಾಗೂ ದರ್ಗಾ ಕೊಂಡ ಎಂಬ ಮೂರು ಬೆಟ್ಟಗಳಿಂದ ಸುತ್ತುವರೆದಿದ್ದು ಪ್ರತಿ ಬೆಟ್ಟಗಳ ಮೇಲೆ ಆಯಾ ಧರ್ಮದ ಪವಿತ್ರ ಸನ್ನಿಧಿಗಳಿರುವುದನ್ನು ಗಮನಿಸಬಹುದಾಗಿದೆ.

ವೈಜಾಗ್ ಆಕರ್ಷಣೆಗಳು:

ವೈಜಾಗ್ ಆಕರ್ಷಣೆಗಳು:

ಕೈಲಾಸಗಿರಿ ಬೆಟ್ಟ : ನಗರದಿಂದ 26 ಕಿ.ಮೀ ಗಳಷ್ಟು ದೂರದಲ್ಲಿರುವ ಕೈಲಾಸಗಿರಿ ಪರ್ವತ ಪ್ರದೇಶವು ಒಂದು ಸುಂದರ ಹಾಗೂ ಆಕರ್ಷಕ ಪ್ರವಾಸಿ ತಾಣವಾಗಿದೆ. ಇಲ್ಲಿ ರಾಮಕೃಷ್ಣ ಹಾಗೂ ರಿಷಿಕೊಂಡ ಎಂಬ ಸುಂದರ ಕಡಲ ತೀರಗಳನ್ನು ನೋಡಬಹುದಾಗಿದ್ದು ಭೇಟಿ ನೀಡಲು ಪ್ರವಾಸಿಗರ ಮನ ಹವಣಿಸುವಂತೆ ಮಾಡುತ್ತವೆ. ಕೈಲಾಸಗಿರಿಯಲ್ಲಿರುವ ಶಿವಪಾರ್ವತಿಯರ ಪ್ರತಿಮೆಗಳು.

ಚಿತ್ರಕೃಪೆ: aptdc.gov.in

ವೈಜಾಗ್ ಆಕರ್ಷಣೆಗಳು:

ವೈಜಾಗ್ ಆಕರ್ಷಣೆಗಳು:

ರಾಮಕೃಷ್ಣ ಕಡಲ ತೀರ : ಪರಿಶುದ್ಧ ನೀರು ಹಾಗೂ ಸಮ್ಮೋಹಿತಗೊಳಿಸುವ ಸುಂದರ ಸೂರ್ಯೋದಯ ಹಾಗೂ ಸೂರ್ಯಾಸ್ತಗಳ ನೋಟಗಳಿಗೆ ಹೆಸರುವಾಸಿಯಾಗಿದೆ. ವೈಜಾಗ್ ನಲ್ಲಿರುವ ರಾಮಕೃಷ್ಣ ಕಡಲ ತೀರ.

ಚಿತ್ರಕೃಪೆ: Srichakra Pranav

ವೈಜಾಗ್ ಆಕರ್ಷಣೆಗಳು:

ವೈಜಾಗ್ ಆಕರ್ಷಣೆಗಳು:

ವೈಜಾಗ್ ಪಟ್ಟಣದಲ್ಲಿರುವ ಮತ್ತೊಂದು ಅಮೋಘ್ ಕಡಲ ತೀರವಾದ ರಿಷಿಕೊಂಡ ಕಡಲ ತೀರದ ಅದ್ಭುತ ನೋಟ.

ಚಿತ್ರಕೃಪೆ: Amit Chattopadhyay

ವೈಜಾಗ್ ಆಕರ್ಷಣೆಗಳು:

ವೈಜಾಗ್ ಆಕರ್ಷಣೆಗಳು:

ಜಲಾಂತರ್ಗಾಮಿ ಸಂಗ್ರಹಾಲಯ : ವೈಜಾಗ್ ನಲ್ಲಿರುವ ಈ ಜಲಾಂತರ್ಗಾಮಿ ಸಂಗ್ರಹಾಲಯವು ದೇಶದಲ್ಲಿ ತನ್ನದೆ ಆದ ಒಂದು ವಿಶಿಷ್ಟ ರೀತಿಯ ಸಂಗ್ರಹಾಲಯವಾಗಿದೆ. ಐ ಎನ್ ಎಸ್ ಕುರುಸುರಾ ಎಂಬ ನಿಜವಾದ ಜಲಾಂತರ್ಗಾಮಿಯಲ್ಲಿ ಈ ಸಂಗ್ರಹಾಲಯವಿರುವುದು ವಿಶೇಷ. ಸತತ 21 ವರ್ಷಗಳ ಕಾಲ ಭಾರತೀಯ ನೌಕಾದಳದಲ್ಲಿ ತನ್ನ ಅವಿಸ್ಮರಣೀಯ ಸೇವೆ ಸಲ್ಲಿಸಿದ ಬಳಿಕ ಈ ಜಲಾಂತರ್ಗಾಮಿಯನ್ನು ರಾಮಕೃಷ್ಣ ಕಡಲ ತೀರದ ಬಳಿ ಕಾಂಕ್ರೀಟ್ ಕಟ್ಟೆಯೊಂದರ ಮೇಲೆ ಆಧಾರವಾಗಿರಿಸಲಾಗಿದೆ.

ಚಿತ್ರಕೃಪೆ: aptdc.gov.in

ವೈಜಾಗ್ ಆಕರ್ಷಣೆಗಳು:

ವೈಜಾಗ್ ಆಕರ್ಷಣೆಗಳು:

ಡಾಲ್ಫಿನ್ ನೋಸ್ : ಡಾಲ್ಫಿನ್ (ದೊಡ್ಡ ಗಾತ್ರದ ಮೀನಿನಂತಿರುವ ಸಮುದ್ರ ಸಸ್ತನಿ) ಮೂಗನ್ನು ಹೋಲುವ ತಾಣವೊಂದು ವಿಶಾಖಾಪಟ್ಟಣಂದಲ್ಲಿದ್ದು ಡಾಲ್ಫಿನ್ ನೋಸ್ ಎಂದು ಇದು ಹೆಸರುವಾಸಿಯಾಗಿದೆ. ಇದೊಂದು ಬೃಹದಾಕಾರದ ಬಂಡೆಯಾಗಿದ್ದು 174 ಮೀ ಗಳಷ್ಟು ಎತ್ತರವಿದೆ.

ಚಿತ್ರಕೃಪೆ: aptdc.gov.in

ವೈಜಾಗ್ ಆಕರ್ಷಣೆಗಳು:

ವೈಜಾಗ್ ಆಕರ್ಷಣೆಗಳು:

ಟೈಡಾ : ಆಂಧ್ರಪ್ರದೇಶ ಪ್ರವಾಸೋದ್ಯಮ ಹಾಗೂ ಅರಣ್ಯ ಇಲಾಖೆಗಳ ಜಂಟಿ ಸಹಯೋಗದಲ್ಲಿ ರೂಪಗೊಂಡ ಸುಂದರ, ಕಣ್ಮನ ಸೆಳೆವ ಕಾಡುಗಳ ದಟ್ಟ ಹಸಿರಿನಲ್ಲಿ ರೂಪಗೊಂಡ ವಿಶೇಷ ಪ್ರದೇಶವೆ ಟೈಡಾ. ಇದು ಪ್ರಖ್ಯಾತವಾದ ಜಂಗಲ್ ಬೆಲ್ಸ್ ರಿಸಾರ್ಟಿಗೆ ಹೆಸರುವಾಸಿಯಾಗಿದೆ. ಈ ರಿಸಾರ್ಟಿಗೆ ತಲುಪಲು ಪ್ರವಾಸಿಗರು ರೈಲು ಪ್ರಯಾಣವನ್ನೂ ಸಹ ಮಾಡಬಹುದಾಗಿದೆ. ದಟ್ಟ ಹಸಿರಿನ ಕಾಡುಗಳ ಮಧ್ಯದಲ್ಲಿ ಸುರಂಗಗಳನ್ನು ಹಿಂದಿಕ್ಕುತ್ತಾ ಓಡುವ ರೈಲು ಅವಿಸ್ಮರಣೀಯವಾದ ಅನುಭವವನ್ನು ಕರುಣಿಸುತ್ತದೆ.

ಚಿತ್ರಕೃಪೆ: aptdc.gov.in

ವೈಜಾಗ್ ಆಕರ್ಷಣೆಗಳು:

ವೈಜಾಗ್ ಆಕರ್ಷಣೆಗಳು:

ಋಷಿಕೊಂಡ : ಪೂರ್ವ ಕರಾವಳಿಯ ರತ್ನ ಎಂಬ ನಾಮದಿಂದ ಭೂಷಿತವಾಗಿರುವ ಋಷಿಕೊಂಡ ಬೆಟ್ಟವು ನಗರದಿಂದ ಎಂಟು ಕಿ.ಮೀ ದೂರದಲ್ಲಿ ಸ್ಥಿತವಿರುವ ಸುಂದರ ಪ್ರವಾಸಿ ತಾಣವಾಗಿದೆ. ಸುವರ್ಣ ಬಣ್ಣದ ಮರಳಿನ ಹಾಸಿಗೆಯ ಮೇಲೆ ಸಮುದ್ರದಲೆಗಳ ಝೆಂಕಾರ ಕೇಳುತ್ತ ನಿರರ್ಗಳವಾಗಿ ವಿಶ್ರಾಂತಿ ಪಡೆಯ ಬಯಸುವ ಮನಗಳಿಗೆ ಯೋಗ್ಯವಾದ ಸ್ಥಳವಾಗಿದೆ ಇದು.

ಚಿತ್ರಕೃಪೆ: aptdc.gov.in

ವೈಜಾಗ್ ಆಕರ್ಷಣೆಗಳು:

ವೈಜಾಗ್ ಆಕರ್ಷಣೆಗಳು:

ಲಾವ್ಸನ್ಸ್ ಬೇ : ರಾಮಕೃಷ್ಣ ಕಡಲ ತೀರದ ಬಳಿ ಕೈಲಾಸಗಿರಿ ಬೆಟ್ಟಕ್ಕೆ ಹೋಗುವ ರಸ್ತೆಯೆಡೆ ಈ ಸುಂದರ ಚಿತ್ರಸದೃಶವಾದ ಕಡಲ ತೀರವಿದೆ. ಈ ಒಂದು ಕಡಲ ತೀರದ ಕಾಲೋನಿಗಳಿಂದ ಸಾಮಾನ್ಯವಾಗಿ ಮೀನುಗಾರರು ದಿನಗಳಗಟ್ಟಲೆ ಸಮುದ್ರದಲ್ಲಿ ತೆರಳಿ ಪ್ರತಿಷ್ಠಿತ ಟುನಾ ಹಾಗೂ ಸ್ವೋರ್ಡ್ ಮೀನುಗಳನ್ನು ಹಿಡಿದು ತರುತ್ತಾರೆ.

ಚಿತ್ರಕೃಪೆ: aptdc.gov.in

ವೈಜಾಗ್ ಆಕರ್ಷಣೆಗಳು:

ವೈಜಾಗ್ ಆಕರ್ಷಣೆಗಳು:

ವುಡಾ ಉದ್ಯಾನ : 55 ಎಕರೆಅಗಳಷ್ಟು ವಿಶಾಲವಾದ ಪ್ರದೇಶದಲ್ಲಿ ಹರಡಿರುವ ಈ ಉದ್ಯಾನ ಆಕರ್ಷಕ ಸಸ್ಯಗಳು ಹಾಗೂ ಹೂವುಗಳಿಂದ ಅಲಂಕೃತಗೊಂಡ ಸುಂದರ ಭೂದೃಶ್ಯಾವಳಿಗಳ ಉದ್ಯಾನವಾಗಿದೆ. 2500 ಕ್ಕೂ ಹೆಚ್ಚಿನ ಗಿಡ ಮರಗಳನ್ನು ಇಲ್ಲಿ ಕಾಣಬಹುದಾಗಿದೆ. ಕುಟುಂಬ ಸಮೇತ ಪಿಕ್ನಿಕ್ ತಾಣಕ್ಕೆ ಯೋಗ್ಯವಾದ ಸ್ಥಳವಾಗಿದೆ ಈ ಉದ್ಯಾನ. ವೈಜಾಗ್ ನಲ್ಲಿರುವ ಈ ಉದ್ಯಾನ ಬೆಳಿಗ್ಗೆ ಒಂಬತ್ತು ಘಂಟೆಯಿಂದ ರಾತ್ರಿಯ ಎಂಟು ಘಂಟೆಯವರೆಗೂ ತೆರೆದಿದ್ದು ಮನರಂಜನಾ ಕ್ರೀಡೆಗಳನ್ನೂ ಸಹ ಇಲ್ಲಿ ಆಸ್ವಾದಿಸಬಹುದಾಗಿದೆ.

ಚಿತ್ರಕೃಪೆ: aptdc.gov.in

ವೈಜಾಗ್ ಆಕರ್ಷಣೆಗಳು:

ವೈಜಾಗ್ ಆಕರ್ಷಣೆಗಳು:

ಇಂದಿರಾಗಾಂಧಿ ಪ್ರಾಣಿ ಉದ್ಯಾನ : ವಿಶಾಖಾಪಟ್ಟಣಂನ ರಾಷ್ಟ್ರೀಯ ಹೆದ್ದಾರಿಯ ಮೇಲೆ ಸ್ಥಿತವಿರುವ ಈ ಪ್ರಾಣಿ ಉದ್ಯಾನವು ವಾರಾಂತ್ಯದ ರಜೆಗೆ ಭೇಟಿ ನೀಡಲು ಪ್ರಶಸ್ತ ಸ್ಥಳವಾಗಿದ್ದು, 255 ಎಕರೆಗಳಷ್ಟು ವಿಶಾಲವಾದ ಪ್ರದೇಶದಲ್ಲಿ ಭವ್ಯವಾಗಿ ಹರಡಿದೆ. ಇಲ್ಲಿ ವೈವಿಧ್ಯಮಯ ಸಸ್ಯ ಹಾಗೂ ಪ್ರಾಣಿ ಸಂಪತ್ತನ್ನು ನೋಡಬಹುದಾಗಿದೆ. ಅಷ್ಟೆ ಅಲ್ಲ, ಆಸ್ಟ್ರೇಲಿಯಾ ಖಂಡದಿಂದಲೂ ಇಲ್ಲಿ ಕೆಲ ಪ್ರಾಣಿಗಳನ್ನು ಆಮದು ಮಾಡಿಕೊಳ್ಳಲಾಗಿದೆ.

ಚಿತ್ರಕೃಪೆ: aptdc.gov.in

ವೈಜಾಗ್ ಆಕರ್ಷಣೆಗಳು:

ವೈಜಾಗ್ ಆಕರ್ಷಣೆಗಳು:

ಸಿಂಹಾಚಲಂ : ವೈಜಾಗ್ ನಿಂದ 16 ಕಿ.ಮೀ ಗಳಷ್ಟು ದೂರವಿರುವ ಸಿಂಹಾಚಲಂ ಅಥವಾ ಸಿಂಹಾದ್ರಿಯು ಒಂದು ಉಪನಗರ ಪ್ರದೇಶವಾಗಿದೆ. ವಿಷ್ಣುವಿನ ಪುನರಾವತಾರವಾದ ಒಂದು ದೈವಕ್ಕೆ ಮುಡಿಪಾದ ಪ್ರಸಿದ್ಧ ದೇಗುಲಕ್ಕೆ ಇದು ಹೆಸರುವಾಸಿಯಾಗಿದೆ. ವಿಶೇಷವೆಂದರೆ ಈ ದೇವಸ್ಥಾನದ ಮುಖ್ಯ ದೇವರು ವರ್ಷದ ಒಂದು ನಿರ್ದಿಷ್ಟ ಸಮಯದಲ್ಲಿ 12 ಘಂಟೆಗಳಷ್ಟು ಕಾಲ ಮಾತ್ರವೆ ದರುಶನ ಕೊಡುತ್ತಾನೆ ಮಿಕ್ಕ ಸಮಯವೆಲ್ಲ ಸಂಪೂರ್ಣವಾಗಿ ಚಂದನದಿಂದ ಅಲಂಕರಿಸಲ್ಪಟ್ಟಿರುತ್ತಾನೆ.

ಚಿತ್ರಕೃಪೆ: Sureshiras

ವೈಜಾಗ್ ಆಕರ್ಷಣೆಗಳು:

ವೈಜಾಗ್ ಆಕರ್ಷಣೆಗಳು:

ಭೀಮುನಿಪಟ್ಟಣಂ : ಭೀಮುನಿಪಟ್ಟಣಂ ವಿಜಯವಾಡಾದ ಬಳಿಯಿರುವ ವಿಶಾಖಾಪಟ್ಟಣಂನಿಂದ ಕೇವಲ 45 ಕಿ.ಮೀ ಗಳಷ್ಟು ದೂರದಲ್ಲಿರುವ ಪ್ರಸಿದ್ಧ ಪ್ರವಾಸಿ ಪಟ್ಟಣವಾಗಿದೆ. ಐತಿಹಾಸಿಕ ಪ್ರಸಿದ್ಧವಾದ ಈ ಪಟ್ಟಣವು ಮಹಾಭಾರತದ ಸಮಯದಲ್ಲಿ ನಿರ್ಮಾಣವಾದುದೆನ್ನಲಾಗಿದೆ. ಭೀಮುನಿಪಟ್ಟಣಂ ಕಡಲ ತೀರವು ಜನಪ್ರೀಯ ಸ್ಥಳವಾಗಿದ್ದು ಗೋಸ್ಥಾನಿ ನದಿಯು ಬಂಗಾಳ ಕೊಲ್ಲಿಯಲ್ಲಿ ಸಮಾಗಮ ಹೊಂದುವ ಸ್ಥಳ ಇದಾಗಿದೆ.

ಚಿತ್ರಕೃಪೆ: Raj

ವೈಜಾಗ್ ಆಕರ್ಷಣೆಗಳು:

ವೈಜಾಗ್ ಆಕರ್ಷಣೆಗಳು:

ವೈಜಾಗ್ ನಿಂದ 50 ಕಿ.ಮೀ ದೂರವಿರುವ ಭೀಮುನಿಪಟ್ಟಣಂ ಬಳಿಯಿರುವ ಗೋಸ್ಥಾನಿ ನದಿಯ ಸುಂದರ ಜಲಾಶಯದ ಹಿನ್ನೀರು.

ಚಿತ್ರಕೃಪೆ: kiran kumar

ವೈಜಾಗ್ ಆಕರ್ಷಣೆಗಳು:

ವೈಜಾಗ್ ಆಕರ್ಷಣೆಗಳು:

ನಗರದ ಆಕರ್ಷಣೆಗಳು : ತೆನ್ನೆತಿ ಪಾರ್ಕ್, ವೈಜಾಗ್ ನಲ್ಲಿರುವ ಈ ಉದ್ಯಾನವು ಪ್ರವಾಸಿಗರನ್ನು ಕೈಬಿಸಿ ಕರೆಯುತ್ತದೆ. ಇಲ್ಲಿಂದ ಕಂಡುಬರುವ ಮನಮೋಹಕವಾದ ಕಡಲ ತೀರದ ದೃಶ್ಯಾವಳಿಗಳು ಸಂತಸ, ಉಲ್ಲಸವನ್ನು ಕರುಣಿಸುತ್ತವೆ.

ಚಿತ್ರಕೃಪೆ: Adityamadhav83

ವೈಜಾಗ್ ಆಕರ್ಷಣೆಗಳು:

ವೈಜಾಗ್ ಆಕರ್ಷಣೆಗಳು:

ವೈಜಾಗ್ ಪಟ್ಟಣದಲ್ಲಿರುವ ಸುಂದರ ಪರಿಸರದ ಶಿವಾಜಿ ಉದ್ಯಾನದ ಒಂದು ನೋಟ.

ಚಿತ್ರಕೃಪೆ: Adityamadhav83

ವೈಜಾಗ್ ಆಕರ್ಷಣೆಗಳು:

ವೈಜಾಗ್ ಆಕರ್ಷಣೆಗಳು:

ವಿಶಾಖಾಪಟ್ಟಣಂ ನಗರ ಪ್ರದೇಶದಲ್ಲಿರುವ ಮತ್ತೊಂದು ಸುಂದರ ಪ್ರವಾಸಿ ಆಕರ್ಷಣೆ ಕೇಂದ್ರವಾದ ವೈಸಾಖಿ ಜಲ ಉದ್ಯಾನವನದ ಒಂದು ನೋಟ.

ಚಿತ್ರಕೃಪೆ: Adityamadhav83

ವೈಜಾಗ್ ಆಕರ್ಷಣೆಗಳು:

ವೈಜಾಗ್ ಆಕರ್ಷಣೆಗಳು:

ವೈಜಾಗ್ ನ ಸುಂದರ ಬಂದರು ಪ್ರದೇಶ.

ಚಿತ್ರಕೃಪೆ: SreeBot

ವೈಜಾಗ್ ಆಕರ್ಷಣೆಗಳು:

ವೈಜಾಗ್ ಆಕರ್ಷಣೆಗಳು:

ವೈಜಾಗ್ ನಗರದ ಪಾಕ್ಷಿಕ ನೋಟ.

ಚಿತ್ರಕೃಪೆ: Candeo gauisus

ವೈಜಾಗ್ ಆಕರ್ಷಣೆಗಳು:

ವೈಜಾಗ್ ಆಕರ್ಷಣೆಗಳು:

ವೈಜಾಗ್ ನಲ್ಲಿರುವ ಕೈಲಾಸಗಿರಿ ಬೆಟ್ಟಕ್ಕೆ ಹೊತ್ತೊಯ್ಯುವ ವಿದ್ಯುತ್ ಚಾಲಿತ ಕೇಬಲ್ ಕಾರ್.

ಚಿತ್ರಕೃಪೆ: PhBasumata

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X