Search
  • Follow NativePlanet
Share
» »ಏನಿದು ತ್ರಿಶ್ಶೂರ್ ಕೋಲ್ ವೆಟ್ ಲ್ಯಾಂಡ್?

ಏನಿದು ತ್ರಿಶ್ಶೂರ್ ಕೋಲ್ ವೆಟ್ ಲ್ಯಾಂಡ್?

ತ್ರಿಶ್ಶೂರ್ ಕೋಲ್ ಜೌಗು ಭೂಮಿ ಒಂದು ನೈಸರ್ಗಿಕ ಜೌಗು ಭೂಮಿಯಾಗಿರುವುದಲ್ಲದೆ ಹಲವಾರು ಪ್ರಬೇಧಗಳ ಪಕ್ಷಿಗಳ ಆಶ್ರಯತಾಣವಾಗಿಯೂ ಪ್ರವಾಸಿಗರನ್ನು ಆಕರ್ಷಿಸುತ್ತದೆ

By Vijay

ವೆಟ್ ಲ್ಯಾಂಡ್ ಎಂಬುದು ಜೌಗು ಪ್ರದೇಶ. ಅಂದರೆ ನೀರಿನ ಅಂಶವುಳ್ಳ ಪ್ರದೇಶ. ಸ್ವಾಭಾವಿಕವಾಗಿ ಸಾಕಷ್ಟು ಫಲವತ್ತತೆಯನ್ನು ಹೊಂದಿರುತ್ತವೆ ಈ ಭೂಮಿ. ಅಲ್ಲದೆ ಹಿತಕರವಾದ ವಾತಾವರಣವನ್ನೂ ಸಹ ಇಲ್ಲಿ ಕಾಣಬಹುದು. ಕೆಲವೆ ಕೆಲವು ವಿಶಾಲವಾದ ನೈಸರ್ಗಿಕ ಜೌಗು ಪ್ರದೇಶಗಳನ್ನು ಭಾರತದಲ್ಲಿ ಕಾಣಬಹುದು. ಅದರಲ್ಲಿ ಕೇರಳದ ತ್ರಿಶ್ಶೂರ್ ಜಿಲ್ಲೆಯಲ್ಲಿರುವ ಕೋಲ್ ಜೌಗು ಪ್ರದೇಶವೂ ಸಹ ಒಂದು.

ಇದನ್ನು ತ್ರಿಶ್ಶೂರಿನ ನೈಸರ್ಗಿಕ ಕಾಲುವೆ ವ್ಯವಸ್ಥೆ ಎಂದೂ ಸಹ ಕರೆಯಲಾಗುತ್ತದೆ. ಅಲ್ಲದೆ ಕೇರಳದ ಅನ್ನದ ಬಟ್ಟಲು ಎಂದರೂ ಸಹ ತಪ್ಪಾಗಲಾರದು. ಕೇರಳದಲ್ಲಿ ಬೆಳೆಯಲಾಗುವ ಒಟ್ಟು ಅಕ್ಕಿಯಲ್ಲಿ ಶೇ 40 ರಷ್ಟು ಉತ್ಪತ್ತಿಯಾಗುವುದು ಈ ಜೌಗು ಪ್ರದೇಶದಲ್ಲೆ ಎಂದರೆ ಆಶ್ಚರ್ಯವಾಗುವುದು ಸಹಜ.

ಕುತೂಹಲ ಕೆರಳಿಸುವ ತ್ರಿಶ್ಶೂರ್ ಪೂರಂ ಎಂದರೇನು?

ಈ ಜೌಗು ಪ್ರದೇಶದ ಕುರಿತು ಒಂದು ಕಿರು ನೋಟ ಈ ಲೇಖನದಲ್ಲಿ. ಪ್ರಕೃತಿಯನ್ನು ಇಷ್ಟಪಡುವ ಪ್ರವಾಸಿಗರಿಗೆ ಈ ಜೌಗು ಪ್ರದೇಶ ಆಕರ್ಷಿಸದೆ ಇರಲಾರದು. ಇನ್ನೊಂದು ವಿಶೇಷವೆಂದರೆ ಇಲ್ಲಿ ವಲಸೆ ಬರುವ ಹಲವಾರು ವಿವಿಧ ಪ್ರಬೇಧದ ಹಕ್ಕಿಗಳನ್ನೂ ಸಹ ಕಾಣಬಹುದು. ಆ ನಿಟ್ಟಿನಲ್ಲಿ ಇದೊಂದು ಅದ್ಭುತ ಪಕ್ಷಿಧಾಮವಾಗಿಯೂ ಕಾರ್ಯನಿರ್ವಹಿಸುತ್ತದೆ.

18 ನೇಯ ಶತಮಾನದಲ್ಲೆ!

18 ನೇಯ ಶತಮಾನದಲ್ಲೆ!

ಹದಿನೆಂಟನೇಯ ಶತಮಾನದಲ್ಲೆ ಇಲ್ಲಿ ಭತ್ತದ ಗದ್ದೆಗಳು ಪ್ರಾರಂಭವಾಯಿತೆನ್ನಲಾಗಿದೆಯಾದರೂ, ದಾಖಲಾತಿಗಳ ಪ್ರಕಾರ ಮೊದಲ ಬಾರಿಗೆ ಭತ್ತ ಬೆಳೆಯಲಾಗಿದ್ದು 1916 ರಲ್ಲಿ.

ಚಿತ್ರಕೃಪೆ: Manojk

ಘೋಷಿಸಲಾಗಿದೆ

ಘೋಷಿಸಲಾಗಿದೆ

ಜೌಗು ಪ್ರದೇಶಗಳನ್ನು ರಕ್ಷಿಸುವ ಕಾರ್ಯದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ರೂಪಿಸಲಾದ ರಾಮ್ಸಾರ್ ಕನ್ವೆನ್ಷನ್ ಒಪ್ಪಂದದ ಪ್ರಕಾರ, ಈ ಜೌಗು ಪ್ರದೇಶವನ್ನೂ ಸಹ ಸಂಕೀರ್ಣ ಹಾಗೂ ಅಳಿವಿನಂಚಿನಲ್ಲಿರುವ ಜೌಗು ಪ್ರದೇಶ ಎಂದು ಘೋಷಿಸಲಾಗಿದ್ದು ಅದನ್ನು ತಡೆಯುವ ಸಲುವಾಗಿ ಹಲವಾರು ಯೋಜನೆಗಳನ್ನು ರೂಪಿಸಲಾಗಿದೆ.

ಚಿತ್ರಕೃಪೆ: Manoj K

ತೀರಿಸುತ್ತದೆ

ತೀರಿಸುತ್ತದೆ

ತ್ರಿಶ್ಶೂರ್ ಜಿಲ್ಲೆಯ ಸಮಗ್ರ ಅನ್ನದ ಹಸಿವನ್ನು ತೀರಿಸುವ ಜೌಗು ಪ್ರದೇಶವಾಗಿಯೂ, ಸ್ವಾಭಾವಿಕವಾದ ಕಾಲುವೆಯನ್ನು ಹೊಂದಿರುವ ವ್ಯವಸ್ಥೆಯಾಗಿಯೂ ತ್ರಿಶ್ಶೂರ್ ಕೋಲ್ ಗಮನಸೆಳೆಯುತ್ತದೆ.

ಚಿತ್ರಕೃಪೆ: Manojk

ಬೇಸಿಗೆ ಕಾಲದಲ್ಲಿ

ಬೇಸಿಗೆ ಕಾಲದಲ್ಲಿ

ಕೋಲ್ ಎಂದರೆ ಭರ್ಜರಿ ಇಳುವರಿ ಎಂದಾಗುತ್ತದೆ. ಈ ಜೌಗು ಪ್ರದೇಶವು ಸಾಮಾನ್ಯವಾಗಿ ಮಳೆಗಾಲದಲ್ಲಿ ನೀರಿನಿಂದ ಆವರಿಸಿರುತ್ತದೆ ಹಾಗೂ ಡಿಸೆಂಬರ್ ನಿಂದ ಏಪ್ರಿಲ್-ಮೇ ವರೆಗೆ ಇಲ್ಲಿ ಸಾಕಷ್ಟು ತೇವಾಂಶವಿರುವುದರಿಂದ ಆ ಸಂದರ್ಭದಲ್ಲಿ ಇಲ್ಲಿ ಭತ್ತವನ್ನು ಬೆಳೆಯಲಾಗುತ್ತದೆ.

ಚಿತ್ರಕೃಪೆ: Manojk

13,632 ಹೆಕ್ಟೇರುಗಳಷ್ಟು

13,632 ಹೆಕ್ಟೇರುಗಳಷ್ಟು

ಒಟ್ಟು 13,632 ಹೆಕ್ಟೇರುಗಳಷ್ಟು ಭೂಮಿಯನ್ನು ಹೊಂದಿರುವ ಈ ಭೂಮಿ ತ್ರಿಶ್ಶೂರ್ ಹಾಗೂ ಪಕ್ಕದ ಮಲ್ಲಪ್ಪುರಂ ಜಿಲ್ಲೆಯಲ್ಲೂ ಸಹ ವ್ಯಾಪಿಸಿದೆ. ತ್ರಿಶ್ಶೂರ್ ಜಿಲ್ಲೆಯ ಹಲವಾರು ಚಿಕ್ಕ ಪುಟ್ಟ ಕಾಲುವೆಗಳು ಇಲ್ಲಿ ಸಮಾಗಮಗೊಳ್ಳುತ್ತವೆ.

ಚಿತ್ರಕೃಪೆ: Manoj K

241 ಪ್ರಬೇಧಗಳು

241 ಪ್ರಬೇಧಗಳು

ಇನ್ನೂ ಇಲ್ಲಿನ ಪಕ್ಷಿ ಪ್ರಬೇಧಗಳ ಕುರಿತಂತೆ ಭಾರತದಲ್ಲಿಯೆ ಮೂರನೇಯ ದೊಡ್ಡ ಪ್ರದೇಶವಾಗಿ ತ್ರಿಶ್ಶೂರ್ ಜೌಗು ಭೂಮಿ ಗಮನಸೆಳೆಯುತ್ತದೆ. ಒಟ್ಟಾರೆಯಾಗಿ ಇಲ್ಲಿ 241 ಪ್ರಬೇಧಗಳ ಪಕ್ಷಿಯನ್ನು ಕಾಣಬಹುದಾಗಿದೆ. ಹಾಗಾಗಿ ಒಂದು ಸುಂದರ ಪಕ್ಷಿಧಾಮವಾಗಿಯೂ ಇದು ಪ್ರವಾಸಿಗರನ್ನು ಆಕರ್ಷಿಸುತ್ತದೆ.

ಚಿತ್ರಕೃಪೆ: Manojk

ಎಲ್ಲೆಡೆ ಚಿಲಿಪಿಲಿ

ಎಲ್ಲೆಡೆ ಚಿಲಿಪಿಲಿ

ಗುಂಪುಗಟ್ಟಿಕೊಂಡು ಆಹಾರ ಹುಡುಕುತ್ತ ಬರುವ ಕೊಕ್ಕರೆಗಳು ಪ್ರದೇಶದ ಅಂದವನ್ನು ಮತ್ತಷ್ಟು ಹೆಚ್ಚಿಸುತ್ತವೆ.

ಚಿತ್ರಕೃಪೆ: Challiyan

ಯಾವುದಿದು?

ಯಾವುದಿದು?

ಒರಿಯೆಂಟಲ್ ಕೋಲ್ ಎಂಬ ಜೌಗು ಭೂಮಿಯಲ್ಲಿ ಕಂಡುಬರುವ ಪುಟ್ಟ ಹಕ್ಕಿ.

ಚಿತ್ರಕೃಪೆ: Manoj K

ಹಲ್ಲಿಗಳೂ ಸಹ

ಹಲ್ಲಿಗಳೂ ಸಹ

ಕಿಂಗ್ ಫಿಶರ್ ಹಕ್ಕಿ ಒತಿಕ್ಯಾತವನ್ನು ಹಿಡಿದು ತಿನ್ನುತ್ತಿರುವುದು. ಇಂತಹ ದೃಶ್ಯಗಳು ಇಲ್ಲಿ ಸಾಮಾನ್ಯವಾಗಿ ಕಂಡುಬರುತ್ತವೆ.

ಚಿತ್ರಕೃಪೆ: Manoj Karingamadathil

ಅಪರೂಪ

ಅಪರೂಪ

ರಡ್ಡಿ ಕ್ರೇಕ್ ಎಂಬ ಕೆಂಪುಗಣ್ಣಿನ ಕಮ್ದು ಮೈಬಣ್ಣದ ಹಕ್ಕಿ ಅಪರೂಪವಾಗಿದ್ದು ಈ ಜೌಗು ಪ್ರದೇಶದಲ್ಲಿ ಕಂಡುಬರುತ್ತದೆ.

ಚಿತ್ರಕೃಪೆ: Manoj Karingamadathil

ಉಣ್ಣೆಯಂತಹ ಕುತ್ತಿಗೆ

ಉಣ್ಣೆಯಂತಹ ಕುತ್ತಿಗೆ

ಶ್ವೇತವರ್ಣದ ಉಣ್ಣೆಯಂತಹ ಕುತ್ತಿಗೆಯುಳ್ಳ ಸ್ಟಾರ್ಕ್ ಹಕ್ಕಿ.

ಚಿತ್ರಕೃಪೆ: Manoj Karingamadathil

ಕಪ್ಪು ರೆಕ್ಕೆಯ

ಕಪ್ಪು ರೆಕ್ಕೆಯ

ಇದೂ ಸಹ ಒಂದು ಅಪರೂಪದ ಅತಿಥಿ. ಸಾಮಾನ್ಯವಾಗಿ ಜೌಗು ಪ್ರದೇಅಹಗಳಲ್ಲಿ ಹೆಚ್ಚಾಗಿ ಕಮ್ಡುಬರುತ್ತದೆ. ಕಪ್ಪು ರೆಕ್ಕೆಯುಳ್ಳ ಸ್ಟಿಲ್ಟ್ ಹಕ್ಕಿ ಇದು.

ಚಿತ್ರಕೃಪೆ: Manoj K

ಮೂರು ಬಣ್ಣದ

ಮೂರು ಬಣ್ಣದ

ಇದು ಗುಬ್ಬಚ್ಚಿಗಳಷ್ಟೆ ಗಾತ್ರವುಳ್ಳವಾದರೂ ಮೈಮೇಲೆ ಮೂರು ಬಣ್ಣಗಳ ಪಟ್ಟಿಯನ್ನು ಹೊಂದಿರುವ ಮುನಿಯಾ ಎಂದು ಕರೆಯಲಾಗುವ ಚಿಲಿಪಿಲಿ ಗುಟ್ಟುವ ಹಕ್ಕಿಗಳು.

ಚಿತ್ರಕೃಪೆ: Manoj K

ಕೋಲ್ ಭೂಮಿ

ಕೋಲ್ ಭೂಮಿ

ತ್ರಿಶ್ಶೂರ್ ಕೋಲ್ ಜೌಗು ಭೂಮಿಯಲ್ಲಿ ಕಂಡುಬರುವ ಕ್ಯಾಟಲ್ ಎಗ್ರೆಟ್ ಎಂಬ ಆಕರ್ಷಕ ಹಕ್ಕಿ.

ಚಿತ್ರಕೃಪೆ: Manoj K

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X