Search
  • Follow NativePlanet
Share
» »ಚೆನ್ನೈನಿಂದ ಗೋಕರ್ಣ ರಸ್ತೆ ಪ್ರವಾಸ!

ಚೆನ್ನೈನಿಂದ ಗೋಕರ್ಣ ರಸ್ತೆ ಪ್ರವಾಸ!

ಕಾರಿನಲ್ಲಿ ರಸ್ತೆಯ ಮೂಲಕ ಚೆನ್ನೈನಿಂದ ಗೋಕರ್ಣ ಪ್ರವಾಸವು ಒಂದು ರೋಮಾಂಚಕ ಅನುಭೂತಿ ನೀಡುವ ಸುಂದರ ಪ್ರವಾಸವಾಗಿ ಮನದಲ್ಲಿ ಅಚ್ಚಳಿಯದೆ ಉಳಿದುಬಿಡುತ್ತದೆ

By Mahesh Pallakki

ಸದಾ ಜನಜಂಗುಳಿಯಿಂದ ಗಿಜುಗುಟ್ಟುವ ಮರೀನಾ ಬೀಚ್ ಜೀವಮಾನದಲ್ಲಿ ಒಮ್ಮೆಯಾದರೂ ನೋಡಲೇಬೇಕಾದಂತಹ ಜಾಗ. ಮರೀನಾ ಬೀಚ್ ಅನ್ನು ಹತ್ತಿರದಿಂದ ಬಲ್ಲವರಿಗೆ ಅದರ ಮಹತ್ವದ ಬಗ್ಗೆ ಅರಿವಿರುತ್ತದೆ. ನಾನು ಸಹ ಆಗಾಗ ನನ್ನ ಬಿಡುವಿನ ಸಮಯವನ್ನು ಚೆನ್ನೈನಲ್ಲಿ ಕಳೆಯುತ್ತಿದ್ದೆ.

ಮರೀನಾ ಬೀಚ್ ತನ್ನ ಮೋಹಕ ಮರಳುಗಳ ಹಾಗೂ ಭವ್ಯವಾದ ಸೂರ್ಯನ ದರ್ಶನದ ಅನುಭವವನ್ನು ನೀಡುವ ಮೂಲಕ ಜನರನ್ನು ತನ್ನತ್ತ ಆಕರ್ಷಿಸುತ್ತದೆ. ಆದರೆ ಸದ್ಯಕ್ಕೆ ಮರೀನಾ ಬೀಚನ್ನು ಬದಿಗಿಟ್ಟು ನನ್ನ ಮುಂದಿನ ಭೇಟಿನೀಡಬಹುದಾದ ಜಾಗದ ಪಟ್ಟಿಗೆ ಗೋಕರ್ಣದ ಹೆಸರನ್ನು ಸೇರಿಸುತ್ತಿದ್ದೇನೆ. ಗೋಕರ್ಣವು ಕರ್ನಾಟಕದ ಒಂದು ಸಣ್ಣ ಹಳ್ಳಿ. ಇದೊಂದು ಪ್ರಸಿದ್ಧ ತೀರ್ಥಕ್ಷೇತ್ರವೂ ಹೌದು.

ಹಾಗಾದರೆ ಬನ್ನಿ, ಪ್ರಸ್ತುತ ಲೇಖನದ ಮೂಲಕ ಮರೀನಾ ಕಡಲ ತೀರದಿಂದ ಓಂ ಕಡಲ ತೀರದವರೆಗಿನ ಪ್ರವಾಸದ ಆನಂದಮಯ ಕ್ಷಣಗಳ ಕುರಿತು ತಿಳಿದುಕೊಳ್ಳೋಣ. ಇದೊಂದು ಆನಂದದಾಯಕ ರಸ್ತೆ ಪ್ರವಾಸಿವಾಗಿದ್ದು ಹಲವಾರು ಭವ್ಯ ತಾಣಗಳ ಮೂಲಕ ಸಾಗುತ್ತದೆ.

ಏನೇನಿದೆ

ಏನೇನಿದೆ

ಗೋಕರ್ಣವು ದೇವಸ್ಥಾನ, ಬೀಚ್, ಹಾಗೂ ಕೋಟೆಗಳಿಂದ ಕೂಡಿದ ಒಂದು ಸುಂದರ ಜಾಗ. ಮೋಜುಮಸ್ತಿ ಮಾಡಲು, ವಿಶ್ರಾಂತಿ ಪಡೆಯಲು, ಸಾಹಸಮಯ ಹಾಗೂ ಪ್ರೇಕ್ಷಣೀಯ ಜಾಗಗಳೆಲ್ಲ ಒಂದೇ ಜಾಗದಲ್ಲಿ ದೊರಕಬಹುದಾದಂತಹ ಜಾಗ ಈ ಗೋಕರ್ಣ.

ಚಿತ್ರಕೃಪೆ: Robert Helvie

ಓಂ ತೀರದವರೆಗೆ

ಓಂ ತೀರದವರೆಗೆ

ಹೀಗಾಗಿ ಮರೀನಾ ಬೀಚಿಂದ ಹೊರಟು, ಅದಕ್ಕೆ ಸರಿಸಮನಾದ ಓಂ ಬೀಚನ್ನು ಸೇರುವ ಸೌಭಾಗ್ಯ ನನ್ನದಾಗಿತ್ತು. ನನ್ನ 5 ದಿನಗಳ ಪ್ರಯಾಣವು ಮರೆಯಲಾರದಂತಹ ಅದ್ಭುತ ಕ್ಷಣಗಳನ್ನು ಎದುರಿಸಲು ಸಿದ್ದವಾಗಿತ್ತು. ನಾನು ತಲುಪಬೇಕಾದ ಸ್ಥಳದ ಹಾಗೆಯೇ ನನ್ನ ಪ್ರಯಾಣವೂ ಸಹ ರೋಮಾಂಚಕಾರಿಯಾಗಿರುತ್ತದೆಂದು ನಾನು ಊಹೆ ಕೂಡ ಮಾಡಿರಲಿಲ್ಲ.

ಚಿತ್ರಕೃಪೆ: B Balaji

ಹೊಸ ಸ್ನೇಹಿತರು

ಹೊಸ ಸ್ನೇಹಿತರು

ನಾನು ಪ್ರಯಾಣದ ಸಮಯದಲ್ಲಿ ಹಲವು ಆಸಕ್ತಿದಾಯಕವಾದಂತಹ ಕೆಲವು ಸನ್ನಿವೇಶಗಳನ್ನು ಎದುರಿಸಿದೆನು. ಹಲವು ಅಪರಿಚಿತರನ್ನು ಸ್ನೇಹಿತರನ್ನಾಗಿಸಿಕೊಂಡದ್ದು, ಉತ್ತಮ ಸತ್ಕಾರಯುತವಾದ ಹೋಟೆಲುಗಳಲ್ಲಿ ಉಳಿದುಕೊಂಡದ್ದು ಹಾಗು ದಾರಿಯುದ್ದಕ್ಕೂ ಅನುಭವಿಸಿದ ಆ ಮೋಜು ನನ್ನ ಪ್ರಯಾಣದ ಆರಂಭದ ಅನುಭವಗಳನ್ನು ಮರೆಯಲಾರದಂತೆ ಮಾಡಿದವು.

ಚಿತ್ರಕೃಪೆ: Ashwin Kumar

ಪ್ರವಾಸದ ಮಾಹಿತಿ

ಪ್ರವಾಸದ ಮಾಹಿತಿ

ಆರಂಭದಿಂದ ಅಂತ್ಯದವರೆಗಿನ ಆ ಅನುಭವದ ಕ್ಷಣಗಳ ವಿವರಗಳು ಇಲ್ಲಿವೆ ನೋಡಿ.
ಪ್ರಯಾಣ ಆರಂಭವಾದ ಸ್ಥಳ: ಚೆನ್ನೈ
ತಲುಪಬೇಕಾದ ಜಾಗ: ಗೋಕರ್ಣ
ಭೇಟಿನೀಡಲು ಸೂಕ್ತ ಸಮಯ: ಸೆಪ್ಟಂಬರ್ ತಿಂಗಳಿನಿಂದ ಏಪ್ರಿಲ್ ತಿಂಗಳು ಗೋಕರ್ಣಕ್ಕೆ ಭೇಟಿ ಕೊಡಲು ಸೂಕ್ತ ಸಮಯ

ಚಿತ್ರಕೃಪೆ: Ashwin Kumar

ಮೂರು ವಿಭಾಗಗಳಲ್ಲಿ

ಮೂರು ವಿಭಾಗಗಳಲ್ಲಿ

ವಾಯುಮಾರ್ಗ : ಗೋಕರ್ಣದಲ್ಲಿ ವಿಮಾನ ನಿಲ್ದಾಣವಿಲ್ಲ. ಆದರೆ ಗೋಕರ್ಣಕ್ಕೆ ಸಮೀಪ, ಅಂದರೆ 140ಕಿ.ಮೀ ದೂರವಿರುವ ಗೋವಾದ ಡಬೊಲಿಮ್ ವಿಮಾನ ನಿಲ್ದಾಣ ತಲುಪಿ, ಅಲ್ಲಿಂದ ಟ್ಯಾಕ್ಸಿಯಲ್ಲಿ ಗೋಕರ್ಣಕ್ಕೆ ತಲುಪಬಹುದು.
ರೈಲುಮಾರ್ಗ: ಗೋಕರ್ಣದಿಂದ 20 ಕಿ.ಮೀ ದೂರದಲ್ಲಿರುವ ಅಂಕೋಲಾಕ್ಕೆ ಹಲವಾರು ರೈಲುಗಳು ದೊರೆಯುತ್ತವೆ. ಅಂಕೋಲಾ ರೈಲುನಿಲ್ದಾಣದಿಂದ ಟ್ಯಾಕ್ಸಿ ಮಾಡಿಕೊಂಡು ಗೋಕರ್ಣಕ್ಕೆ ತಲುಪಬಹುದು.
ರಸ್ತೆಮಾರ್ಗ: ಗೋಕರ್ಣಕ್ಕೆ ಹಲವು ರಸ್ತೆಮಾರ್ಗಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಚೆನ್ನೈಯಿಂದ ಗೋಕರ್ಣಕ್ಕೆ 834 ಕಿ.ಮೀ ಅಂತರವಿದೆ.ಚೆನ್ನೈಯಿಂದ ಗೋಕರ್ಣಕ್ಕೆ ಹಲವು ಬಸ್ ಗಳ ವ್ಯವಸ್ತೆಯಿದೆ. ನಿಮ್ಮ ಬಳಿ ನಿಮ್ಮ ಇಷ್ಟದ ಕಾರ್ ಇದ್ದಲ್ಲಿ, ನಿಮ್ಮ ಕುಟುಂಬ ಹಾಗು ಸ್ನೇಹಿತರೊಟ್ಟಿಗೆ ಕೂತು ಪಯಣಿಸಿ ಈ ಸುಂದರ ರಸ್ತೆ ಪ್ರಯಾಣವನ್ನು ಅನುಭವಿಸಬಹುದು. ಈ ಕೆಳಗೆ ನೀಡಲಾಗಿರುವ ಎರಡು ಮಾರ್ಗಗಳಲ್ಲಿ ಯಾವುದಾದರೂ ಒಂದನ್ನು ನೀವು ಆಯ್ದುಕೊಳ್ಳಬಹುದು. ಭರತ ಗುಡಿ, ಗೋಕರ್ಣ.

ಚಿತ್ರಕೃಪೆ: Daniel Hauptstein

ಎರಡು ಪ್ರಕಾರ

ಎರಡು ಪ್ರಕಾರ

ಮಾರ್ಗ 1 : ಚೆನ್ನೈ-ಬೆಂಗಳೂರು-ತುಮಕೂರು-ದಾವಣಗೆರೆ-ಗೋಕರ್ಣ (ರಾಷ್ಟ್ರೀಯ ಹೆದ್ದಾರಿ 48 ಮೂಲಕ)
ಮಾರ್ಗ 2 : ಚೆನ್ನೈ-ಪುದುಚೆರಿ-ಹೊಸೂರು-ಬೆಂಗಳೂರು-ದಾವಣಗೆರೆ- ಗೋಕರ್ಣ (ರಾಷ್ಟ್ರೀಯ ಹೆದ್ದಾರಿ 48 ಮೂಲಕ)

ಚಿತ್ರಕೃಪೆ: Balaji.B

ಮೊದಲನೆಯದ್ದು

ಮೊದಲನೆಯದ್ದು

ಮೊದಲನೆಯ ಮಾರ್ಗವನ್ನು ಆಯ್ದುಕೊಂಡ ನನಗೆ, ಆ ಮಾರ್ಗದ ಮೂಲಕ ಗೋಕರ್ಣವನ್ನು ತಲುಪಲು 14 ಗಂಟೆಗಳು ಹಿಡಿದವು. ದಾರಿಯುದ್ದಕ್ಕೂ ಸಿಗುವ ಸುಂದರ ಪ್ರಾಕೃತಿಕ ದೃಶ್ಯಗಳು ಮನಸ್ಸನ್ನು ತಣಿಸುವುದರಲ್ಲಿ ಸಂಶಯವೇ ಇಲ್ಲ.

ಚಿತ್ರಕೃಪೆ: Ashwin Kumar

ಆರಾಮದಾಯಕ

ಆರಾಮದಾಯಕ

ನಿಜಕ್ಕೂ ಕಾರಿನಲ್ಲಿ ಪ್ರಯಾಣಿಸುವುದು ಸ್ವಲ್ಪಮಟ್ಟಿಗೆ ಆರಾಮದಾಯಕವಾದದ್ದು, ಬೇಕಾದಾಗ ಕಾರು ನಿಲ್ಲಿಸಿ, ಕಾಲು ಚಾಚಿಕೊಂಡು, ತಾಜಾಗಾಳಿಯನ್ನು ಸೇವಿಸುತ್ತಾ ವಿಶ್ರಮಿಸಬಹುದು. ಯಾರಿಗಾದರು 2ನೇ ಮಾರ್ಗದ ಮುಖಾಂತರ ಪ್ರಯಾಣಿಸುವ ಹಂಬಲವಿದ್ದಲ್ಲಿ ಆ ಮಾರ್ಗದ ಮುಖಾಂತರ ಹೋದರೆ ಗೋಕರ್ಣವನ್ನು ತಲುಪಲು 16ಗಂಟೆ 45 ನಿಮಿಷಗಳು ಬೇಕಾಗುತ್ತದೆ ಎಂಬುದನ್ನು ಗಮನದಲ್ಲಿಟ್ಟುಕೊಂಡರೆ ಒಳ್ಳೆಯದು.

ಚಿತ್ರಕೃಪೆ: shankar s.

ಬೇರೆ ಮಾರ್ಗ ಉತ್ತಮ

ಬೇರೆ ಮಾರ್ಗ ಉತ್ತಮ

ವಾರಾಂತ್ಯದಲ್ಲಿ ಗೋಕರ್ಣಕ್ಕೆ ಭೇಟಿ ನೀಡುವ ಆಲೋಚನೆಯುಳ್ಳವರು ವಿಮಾನ ಪ್ರಯಾಣದ ಹೊರತು, ಬೇರೆ ಮಾರ್ಗವನ್ನು ಆಯ್ಕೆ ಮಾಡಿಕೊಂಡರೆ ವಾರಾಂತ್ಯದ ಮೋಜನ್ನು ಅನುಭವಿಸಲು ಸಮಯ ಸಾಕಾಗುವುದಿಲ್ಲ. ಗೋಕರ್ಣದ ಪ್ರವಾಸಿ ತಾಣಗಳನ್ನು ನೋಡಲು 2-3 ದಿನಗಳಾದರೂ ಬೇಕು. ಗೋಕರ್ಣ.

ಚಿತ್ರಕೃಪೆ: Andre Engels

ವಿಶ್ರಾಂತಿ

ವಿಶ್ರಾಂತಿ

ಗೋಕರ್ಣಕ್ಕೆ ಹೋಗುವಾಗ ಕೆಲವರು ಸಾಮಾನ್ಯವಾಗಿ ದಾವಣಗೆರೆಯಲ್ಲಿ ಸ್ವಲ್ಪಸಮಯ ತಂಗುತ್ತಾರೆ.ಕಾರಣ ದಾವಣಗೆರೆಯ ಕೆಲವು ಪ್ರೇಕ್ಷಣೀಯ ಸ್ಥಳಗಳು. ದಾವಣಗೆರೆಯಲ್ಲಿ ಅಲ್ಲಿನ ಸ್ಥಳೀಯ ಆಹಾರದಿಂದ ಹಿಡಿದು ಪ್ರೇಕ್ಷಣೀಯ ಸ್ಥಳಗಳವರೆಗೆ ನೋಡಲು, ಮಾಡಲು ಹಲವಾರು ಆಯ್ಕೆಗಳು ನಮ್ಮ ಮುಂದೆ ಸಿಗುತ್ತವೆ. ಇಲ್ಲಿನ ಅತಿ ಮುಖ್ಯ ಆಕರ್ಷಣೆ ಶ್ರೀ ಆಂಜನೇಯಸ್ವಾಮಿ ದೇವಾಲಯ. ಚಿತ್ರದಲ್ಲಿ: ಶಿವಾಜಿ ನಗರ, ದಾವಣಗೆರೆ.

ಚಿತ್ರಕೃಪೆ: Suchitmore

ಪ್ರಸಿದ್ಧ

ಪ್ರಸಿದ್ಧ

ರಾವಣನಿಂದ ಅಪಹರಿಸಲ್ಪಟ್ಟಿದ್ದ ಸೀತೆಯನ್ನು ರಕ್ಷಿಸುವ ಸಲುವಾಗಿ ಲಂಕೆಗೆ ಹಾರಿದ್ದ ರಾಮನ ಭಕ್ತ ಹನುಮಂತನ ಆರಾಧನೆಗೆ ಈ ದೇವಾಲಯ ಮುಡಿಪಾಗಿದೆ. ಆಧ್ಯಾತ್ಮಿಕ ಪ್ರಶಾಂತತೆ ಹಾಗೂ ದೃಶ್ಯವೈಭವವನ್ನು ಬಯಸುವ ಪ್ರವಾಸಿಗರು ಈ ಸ್ಥಳವನ್ನೊಮ್ಮೆ ಭೇಟಿ ಮಾಡಬಹುದು. ಸಾಂದರ್ಭಿಕ ಚಿತ್ರ. ಫೈನ್ ಆರ್ಟ್ಸ್ ಕಾಲೇಜು, ದಾವಣಗೆರೆ.

ಚಿತ್ರಕೃಪೆ: Irrigator

ಪುಣ್ಯಸ್ಥಳ

ಪುಣ್ಯಸ್ಥಳ

ಇದೇ ರೀತಿಯ ಮಾರ್ಗ ಮಧ್ಯದಲ್ಲಿ ಸಿಗುವ ಮತ್ತೊಂದು ಪ್ರೇಕ್ಷಣೀಯ ಜಾಗವೆಂದರೆ ಹರಿಹರ. ಇಲ್ಲಿನ ಹರಿಹರೇಶ್ವರ ದೇವಾಲಯವು ದಾವಣಗೆರೆಗೆ ಹತ್ತಿರವಿರುವುದರಿಂದ ಪ್ರವಾಸಿಗರು ಇಲ್ಲಿಗೂ ಭೇಟಿ ನೀಡುವುದು ಸರ್ವೇ ಸಮಾನ್ಯ. ಈ ದೇವಾಲಯದ ಆರಾಧ್ಯದೈವ ಶಿವ ಹಾಗೂ ವಿಷ್ಣು ದೇವತೆಗಳ ಮಿಶ್ರಣವಾದ ಹರಿ-ಹರ. ಈ ದೇವತೆಯ ದೇಹದ ಬಲಭಾಗ ಶಿವನದ್ದಾದರೆ ಎಡಭಾಗ ವಿಷ್ಣುವಿನದ್ದು.ಈ ದೇವಾಲಯವು ಶುದ್ಧ ಹೊಯ್ಸಳ ವಾಸ್ತು ಶೈಲಿಯಲ್ಲಿ ಕ್ರಿ.ಪೂ 1224ರಲ್ಲಿ ನಿರ್ಮಾಣಗೊಂಡಿದೆ.

ಚಿತ್ರಕೃಪೆ: Dineshkannambadi

ಅಲೌಕಿಕ ಅನುಭವ

ಅಲೌಕಿಕ ಅನುಭವ

ಈ ಎರಡೂ ದೇವಾಲಯಗಳು ಅದರದೇ ಆದ ವೈಶಿಷ್ಟ್ಯಗಳಿಂದ ಕೂಡಿದ್ದು ಜನರನ್ನು ಆಕರ್ಷಿಸುತ್ತದೆ. ಇವುಗಳ ವಾಸ್ತು ಸೌಂದರ್ಯ ಹಾಗೂ ಇಲ್ಲಿ ಸಿಕ್ಕ ಅಲೌಕಿಕ ಅನುಭವವನ್ನು ಅನುಭವಿಸುತ್ತಾ ಕೂತ ನನಗೆ ನಾನು ಹಲವು ಗಂಟೆಗಳಿಂದ ಏನೂ ಆಹಾರ ಸೇವಿಸಿಲ್ಲವೆಂಬುದನ್ನು ಮರೆತೇ ಹೋಗಿದ್ದೆ. ಅಲ್ಲಿನ ಸ್ಥಳೀಯರಿಂದ ಕೇಳಿತಿಳಿದು ಅಲ್ಲಿನ ಪ್ರಸಿದ್ಧ ದಾವಣಗೆರೆ ಬೆಣ್ಣೆ ದೋಸೆಯನ್ನು ತಿನ್ನಲು ಹೊರಟೆ.

ಚಿತ್ರಕೃಪೆ: Dineshkannambadi

ಪ್ರವಾಸಿ ಮಂದಿರ ರಸ್ತೆ

ಪ್ರವಾಸಿ ಮಂದಿರ ರಸ್ತೆ

ನಾನು ಹೋದದ್ದು ಪ್ರವಾಸಿ ಮಂದಿರದ ರಸ್ತೆಯಲ್ಲಿನ ಮಹಿಳಾ ಸಮಾಜ ಕಾಂಪ್ಲೆಕ್ಸ್ ನಲ್ಲಿದ್ದ ಸಾಗರ್ ಬೆಣ್ಣೆ ದೋಸೆ ಹೋಟೆಲ್ಲಿಗೆ. ನಾನು ಕೇಳಿದ್ದ ನನ್ನ ದೋಸೆಯನ್ನು ಕೆಲವೇ ಕ್ಷಣಗಳಲ್ಲಿ ನನ್ನ ಮುಂದೆ ತಂದಿಟ್ಟರು, ಅದು ನಾನು ನನ್ನ ಜೀವಮಾನದಲ್ಲೆ ತಿನ್ನದ ಅತ್ಯಂತ ರುಚಿಯಾದ ಗರಿಗರಿಯಾದ ದೋಸೆಯಾಗಿತ್ತು ಎಂಬುದನ್ನು ನಾನಿಲ್ಲಿ ಒತ್ತಿ ಹೇಳಬೇಕಾಗಿದೆ. ಅಲ್ಲಿಂದ ನಾನು ಧಾವಿಸಿದ್ದು ದಾವಣಗೆರೆಯಲ್ಲಿ ಸ್ಟ್ರೀ ಫುಡ್ ಗೆ ಪ್ರಸಿದ್ಧವಾದ ರಾಮ್ ಅಂಡ್ ಕೋ ವೃತ್ತಕ್ಕೆ. ಸಾಂದರ್ಭಿಕ ಚಿತ್ರ.

ಚಿತ್ರಕೃಪೆ: Srutiagarwal123

ಬಾಯಲ್ಲಿ ನೀರು!

ಬಾಯಲ್ಲಿ ನೀರು!

ಅಲ್ಲಿನ ದಾವಣಗೆರೆ ಮಿರ್ಚಿ ಬಜ್ಜಿಯ ರುಚಿ ಇನ್ನು ನನ್ನ ನಾಲಗೆಯ ಮೇಲೆ ಹಾಗೇ ಇದೆ. ದಾವಣಗೆರೆಯಲ್ಲಿ ಸಂತಸದ ಕ್ಷಣಗಳನ್ನು ಕಳೆದು ನಾನು ಹೊರಟು ತಲುಪಿದ್ದು ಸುಂದರ ಪಶ್ಚಿಮ ಘಟ್ಟದಲ್ಲಿರುವ ಶಿರಸಿಗೆ. ದಾವಣಗೆರೆಯಿಂದ ಶಿರಸಿಗೆ 145ಕಿ.ಮೀ ಅಂತರವಿದೆ. ಶಿರಸಿಯು ಹಸಿರು ಅರಣ್ಯಗಳಿಂದ ಕೂಡಿದ ಬೆಟ್ಟ ಪ್ರದೇಶವಾಗಿದೆ. ಸಾಂದರ್ಭಿಕ ಚಿತ್ರ.

ಚಿತ್ರಕೃಪೆ: Bhaskaranaidu

ಪ್ರಕೃತಿ ಸೌಂದರ್ಯ

ಪ್ರಕೃತಿ ಸೌಂದರ್ಯ

ನಾನು ಅಲ್ಲಿನ ಪ್ರಕೃತಿಯನ್ನು ಸವಿಯಲು ನನ್ನ ಕಾರನ್ನು ಅಲ್ಲಿನ ಒಂದು ಎತ್ತರದ ಪ್ರದೇಶಕ್ಕೆ ಚಲಾಯಿಸಿದೆ. ಅಲ್ಲಿನ ಸುಂದರ ಪ್ರಶಾಂತ ಸ್ಥಳ ಹಾಗು ಅಲ್ಲಿನ ಸ್ನೇಹಜೀವಿ ಸ್ಥಳೀಯರನ್ನು ಕಂಡು ಪ್ರಭಾವಿತನಾದೆ. ಭೀಮನ ಗುಡ್ಡ ಶಿರಸಿ.

ಚಿತ್ರಕೃಪೆ: SachinRM

ಪ್ರಾಚೀನ

ಪ್ರಾಚೀನ

ಕ್ರಿ.ಪೂ 1660ರಲ್ಲಿ ನಿರ್ಮಾಣಗೊಂಡ ರಾಷ್ಟ್ರೀಯ ಹೆದ್ದಾರಿ 77 ರಲ್ಲಿರುವ ಮಾರಿಕಾಂಬ ದೇವಾಲಯವು ಇಲ್ಲಿನ ಪ್ರಸಿದ್ದ ಆಕರ್ಷಣೀಯ ಸ್ಥಳವಾಗಿದೆ. ದೇವಿ ಮಾರಿಕಾಂಬೆಯನ್ನು ಆರಾಧ್ಯ ದೈವವಾಗಿ ಆರಾಧಿಸಲ್ಪಡುವ ಈ ದೇವಾಲಯವು ಉತ್ತಮ ವಾಸ್ತುಸೌಂದರ್ಯದಿಂದ ಕೂಡಿದೆ.ಈ ದೇವಾಲಯದ ಒಳಗಿರುವ ಕೆತ್ತನೆಗಳು ಹಾಗೂ ವರ್ಣಚಿತ್ರಗಳು ಅಲ್ಲಿನ ಇತಿಹಾಸವನ್ನು ಸಾರಿ ಹೇಳುತ್ತವೆ.

ಚಿತ್ರಕೃಪೆ: Dineshkannambadi

ಮೋಡಿ ಮಾಡುತ್ತವೆ

ಮೋಡಿ ಮಾಡುತ್ತವೆ

ಶಿರಸಿಯಲ್ಲಿನ ಯಾಣದ ಗುಹೆಗಳನ್ನು ನೋಡುವಂತೆ ಕೆಲವರು ನನಗೆ ಸಲಹೆ ನೀಡಿದರು. ಹಾಗಾಗಿ ದೇವಿ ಮಾರಿಕಾಂಬೆಗೆ ನನ್ನ ಪ್ರಾರ್ಥನೆಗಳನ್ನು ಸಲ್ಲಿಸಿ ನನ್ನ ಪ್ರಯಾಣ ಶಿರಸಿಯ ಯಾಣಕ್ಕೆ ನನ್ನ ಪ್ರಯಾಣ ಹೊರಟಿತು. ಇದೊಂದು ದಟ್ಟ ಅರಣ್ಯಗಳ ನಡುವೆ ಇರುವ ಬೃಹತ್ ಕಲ್ಲುಗಳ ವಿಶಿಷ್ಟ ರಚನೆಯಾಗಿದೆ. ನೈಸರ್ಗಿಕ ಹಸಿರು ಪ್ರದೇಶಗಳು ಹಾಗು ಜಲಪಾತಗಳಿಂದ ಕೂಡಿದ ಈ ಜಾಗವು ಚಾರಣಿಗರಿಗೆ ಹೇಳಿ ಮಾಡಿಸಿದ ಜಾಗ. ನಾನು ಸಹ ಅಲ್ಲಿನ ಗೋಕರ್ಣ ಹಾಗೂ ವಿಭೂತಿ ಜಲಪಾತಗಳಿಗೆ ಭೇಟಿ ನೀಡಿದೆ.

ಚಿತ್ರಕೃಪೆ: Sukruth

ಆರಾಮದಾಯಕ

ಆರಾಮದಾಯಕ

ಅಲ್ಲಿಂದ ನಾನು ಅಲ್ಲಿನ ಸ್ಥಳೀಯ ಆಹಾರವನ್ನು ಸವಿಯಲು ಪ್ರಗತಿ ಹೋಂ ಸ್ಟೇ ಎಂಬ ಜಾಗಕ್ಕೆ ತೆರಳಿ ಆದರಣೀಯವಾದ ರುಚಿಕಟ್ಟಾದ ಹವ್ಯಕ ಶೈಲಿಯ ಊಟವನ್ನು ಸವಿದೆನು. ಅಲ್ಲಿಂದ ನೇರ ಹೊರಟಿದ್ದು ನಾನು ನೋಡಬೇಕೆಂದು ಬಯಸಿದ್ದ ಗೋಕರ್ಣಕ್ಕೆ.

ಚಿತ್ರಕೃಪೆ: John Cummings

ಹಸುವಿನ ಕಿವಿ

ಹಸುವಿನ ಕಿವಿ

ಗೋಕರ್ಣ. ಗೋ ಎಂದರೆ ಹಸು, ಕರ್ಣ ಎಂದರೆ ಕಿವಿ. ಒಟ್ಟಾರೆ ಹಸುವಿನ ಕಿವಿ ಎಂದರ್ಥ ಬರುತ್ತದೆ. ಶಿವನು ಇಲ್ಲಿ ಹಸುವಿನ ಕಿವಿಯಿಂದ ಉದ್ಭವಿಸಿದನು ಎಂಬ ಪ್ರತೀತಿಯಿದೆ. ಹಾಗಾಗಿ ಈ ಜಾಗಕ್ಕೆ ಗೋಕರ್ಣ ಎಂಬ ಹೆಸರು ಬಂದಿತು. ಬೀಚ್ ಟ್ರೆಕ್ಕಿಂಗ್ ನಿಂದ ಹಿಡಿದು ಜಲಕ್ರೀಡೆಯವರೆಗೆ ಗೋಕರ್ಣದಲ್ಲಿ ಅನುಭವಿಸಲು ಸಾಕಷ್ಟು ಆಯ್ಕೆಗಳು ನಿಮಗೆ ಸಿಗುತ್ತವೆ.

ಚಿತ್ರಕೃಪೆ: Infoayan

ಹೆಸರುವಾಸಿ

ಹೆಸರುವಾಸಿ

ಗೋಕರ್ಣದಲ್ಲಿ ಪ್ಯಾರಡೈಸ್ ಬೀಚ್, ಹಾಫ್ ಮೂನ್(ಅರ್ಧ ಚಂದ್ರಾಕೃತಿ) ಬೀಚ್, ಗೋಕರ್ಣ ಬೀಚ್, ಕುಡ್ಲೆ ಬೀಚ್, ಓಂ ಬೀಚ್ ಎಂಬ 5 ಅತಿ ಮುಖ್ಯ ಬೀಚ್ ಗಳನ್ನು ನಾವು ನೋಡಬಹುದು. ಈ ಎಲ್ಲ ಬೀಚ್ ಗಳಿಗೆ ಹೋಲಿಸಿದರೆ ಓಂ ಬೀಚ್ ಅತ್ಯಂತ ಜನಸಂದಣಿಯಿಂದ ಕೂಡಿದ ಬೀಚ್ ಆಗಿದೆ.

ಚಿತ್ರಕೃಪೆ: Nithesh Yashodhar Rai

ಲಭ್ಯವಿದೆ

ಲಭ್ಯವಿದೆ

ಪ್ರವಾಸಿಗರು ಸಂತಸದಿಂದ ಸಮಯ ಕಳೆಯಲು ಉಳಿಯುವ ಸೌಕರ್ಯದಿಂದ ಹಿಡಿದು, ಒಳ್ಳೆಯ ಆಹಾರ, ದೋಣಿ ವಿಹಾರಗಳಂತಹ ಅನೇಕ ಸೌಕರ್ಯಗಳು ಗೋಕರ್ಣದಲ್ಲಿ ಲಭ್ಯವಿದೆ. ಗೋಕರ್ಣದಲ್ಲಿ ನೋಡಬಹುದಾದಂತಹ ಇತರ ಸ್ಥಳಗಳೆಂದರೆ ಮಹಾಬಲೇಶ್ವರ ದೇವಾಲಯ, ಮುರುಡೇಶ್ವರ ದೇವಾಲಯ, ಮಹಾಗಣಪತಿ ದೇವಾಲಯ ಹಾಗೂ ಮಿರ್ಜಾನ್ ಕೋಟೆ.

ಚಿತ್ರಕೃಪೆ: Nechyporuk Iuliia

ಜಾಗಗಳು

ಜಾಗಗಳು

ಗೋಕರ್ಣದಲ್ಲಿ ಸಾಕಷ್ಟು ಹೋಟೆಲ್ ಗಳು ಹಾಗು ರೆಸಾರ್ಟ್ ಗಳು ನಮಗೆ ಸಿಗುತ್ತವೆ. ಪರಶುರಾಮ ದೇವಾಲಯ ರಸ್ತೆಯ ಹರಿಪ್ರಿಯ ರೆಸಿಡೆನ್ಸಿಯನ್ನು ನಾನು ಉಳಿದುಕೊಳ್ಳಲು ಆಯ್ಕೆ ಮಾಡಿಕೊಂಡೆನು, ಕಾರಣ ಇಲ್ಲಿನ ಸರಳ ಸುಂದರ ವಾತಾವರಣ.ನಮ್ಮ ಮನೆಯ ಹಾಗೆ. ತೀರಾ ನಿರ್ಭಂಧಗಳಿಲ್ಲದ ಚೆಕ್ಇನ್ ಹಾಗೂ ಬಾಲ್ಕಾನಿಯಿಂದ ಕಾಣಸಿಗುವ ಸುಂದರ ನೋಟವು ನನ್ನನ್ನು ಇಲ್ಲಿ ಬಹುವಾಗಿ ಆಕರ್ಷಿಸಿದವು.

ಚಿತ್ರಕೃಪೆ: Happyshopper

ಆಸಕ್ತಿದಾಯಕ

ಆಸಕ್ತಿದಾಯಕ

ಗೋಕರ್ಣದಲ್ಲಿ ಹಲವಾರು ಆಸಕ್ತಿಕರವಾದಂತಹ ವಸ್ತುಗಳು ನಮಗೆ ಕೊಳ್ಳಲು ಸಿಗುತ್ತದೆ. ಬಟ್ಟೆಗಳು, ಹಿತ್ತಾಳೆಯ ವಿಗ್ರಹಗಳು, ಮಸಾಲೆ ಪದಾರ್ಥಗಳು, ಮಣಿಗಳಿಂದ ವಿನ್ಯಾಸಗೊಂಡ ಆಭರಣಗಳು, ಗೃಹಾಲಂಕಾರೀ ವಸ್ತುಗಳು, ಇವೆಲ್ಲವನ್ನು ಮುಖ್ಯ ರಸ್ತೆಯಲ್ಲಿ ಕಾಣಸಿಗುವ ಸಾಲು ಸಾಲು ಮಳಿಗೆಗಳಿಂದ ಕೊಂಡುಕೊಳ್ಳಬಹುದು.ನಿಮಗೆ ಚೌಕಾಶಿ ಮಾಡುವ ಕಲೆ ಗೊತ್ತಿದ್ದರೆ ಇನ್ನು ಹೆಚ್ಚಾಗಿ ಇಲ್ಲಿನ ಶಾಪಿಂಗ್ ಅನ್ನು ಆನಂದಿಸಬಹುದು.

ಚಿತ್ರಕೃಪೆ: roweenaweb

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X