Search
  • Follow NativePlanet
Share
» »ಕೈಬಿಸಿ ಕರೆಯುತ್ತಿರುವ ಮೀನ್ಮುಟ್ಟಿ ಜಲಪಾತ

ಕೈಬಿಸಿ ಕರೆಯುತ್ತಿರುವ ಮೀನ್ಮುಟ್ಟಿ ಜಲಪಾತ

By Vijay

ಮಳೆಗಾಲದ ಬಂದಂತೆಲ್ಲ ಎಲ್ಲೆಡೆ ಹಸಿರುಮಯ ವಾತಾವರಣ ಕಾಣಲು ಪ್ರಾಂರಭವಾಗುತ್ತದೆ. ಬೆಟ್ಟ ಗುಡ್ಡಗಳಲ್ಲಂತೂ ಮಂಜು ಮುಸುಕಿದ ಪರಿಸರದೊಂದಿಗೆ ಚುಮು ಚುಮು ಅಂತ ಬೀಳುವ ಮಳೆಯಿಂದುಂಟಾಗುವ ಕಳೆಯನ್ನು ನೋಡಿದವನೆ ಅನುಭವಿಸಬೇಕು. ಈ ಸಮಯದಲ್ಲಿ ಸಾಕಷ್ಟು ಕೆರೆ ತೊರೆಗಳು ತುಂಬಲಾರಂಭಿಸುತ್ತವೆ.

ಕೇರಳದ ಅದ್ಭುತ ಜಲಾಶಯಗಳು

ಕೈಬಿಸಿ ಕರೆಯುತ್ತಿರುವ ಮೀನ್ಮುಟ್ಟಿ ಜಲಪಾತ

ಚಿತ್ರಕೃಪೆ: Vssekm

ಅಲ್ಲಲ್ಲಿ ಉಂಟಾಗುವ ಕೃತಕ ಜಲಧಾರೆಗಳು ನೋಡುಗರನ್ನು ರೋಮಾಂಚನಗೊಳಿಸುತ್ತವೆ. ಇದಕ್ಕೆ ಉದಾಹರಣೆಯಾಗಿ ಮಹಾರಾಷ್ಟ್ರದಲ್ಲಿರುವ ಅಂಬೋಲಿಯನ್ನು ಹೆಸರಿಸಬಹುದು. ಸದಾ ಧುಮುಕುವ ಜಲಪಾತಗಳು ಬೇಸಿಗೆಯಿಂದ ಬಿಸಿಯಿಂದ ನೀರನ್ನು ಕಳೆದುಕೊಂಡಿದ್ದರೂ ಮಳೆಗಾಲವು ಮತ್ತಷ್ಟು ಬಲ ನೀಡಿ ಮತ್ತೆ ಆ ಜಲಪಾತಗಳು ಗರಿಗೆದರುವಂತೆ ಮಾಡುತ್ತದೆ.

ಕೈಬಿಸಿ ಕರೆಯುತ್ತಿರುವ ಮೀನ್ಮುಟ್ಟಿ ಜಲಪಾತ

ಚಿತ್ರಕೃಪೆ: Pillai.mech

ಮಳೆಗಾಲದಲ್ಲಿ ಸಾಮಾನ್ಯವಾಗಿ ಎಲ್ಲರೂ ಹೋಗಬಯಸುವ ಅಥವಾ ಇಷ್ಟಪಡುವ ತಾಣವೆಂದರೆ ಜಲಪಾತ ಕೇಂದ್ರಗಳು. ಭಾರತದಲ್ಲಿ ಅದರಲ್ಲೂ ದಕ್ಷಿಣ ಭಾರತವು ಸಾಕಷ್ಟು ನಯನ ಮನೋಹರವಾದ ಜಲಪಾತಗಳಿಗೆ ಆಶ್ರಯ ಒದಗಿಸಿದೆ. ಕರ್ನಾಟಕ ಸೇರಿದಂತೆ ಕೇರಳ, ತಮಿಳುನಾಡು, ಆಂಧ್ರ ಹಾಗೂ ತೆಲಂಗಾಣ ರಾಜ್ಯಗಳಲ್ಲಿ ಕೆಲವು ಸುಂದರ ಜಲಪಾತಗಳಿದ್ದು ಮಳೆಗಾಲವು ಅವುಗಳಿಗೆ ಭೇಟಿ ನೀಡಲು ಪ್ರಶಸ್ತ ಸಮಯ.

ಕೈಬಿಸಿ ಕರೆಯುತ್ತಿರುವ ಮೀನ್ಮುಟ್ಟಿ ಜಲಪಾತ

ಚಿತ್ರಕೃಪೆ: Nithinasokan

ಪ್ರಸ್ತುತ ಲೇಖನದಲ್ಲಿ ಕೇರಳದ ಒಂದು ಸುಂದರ ಜಲಪಾತ ತಾಣದ ಕುರಿತು ತಿಳಿಸಲಾಗಿದೆ. ಈ ಜಲಪಾತದ ಹೆಸರು ಮೀನ್ಮುಟ್ಟಿ ಜಲಪಾತ. ಇದೊಂದು ಚಿಕ್ಕ ಜಲಪಾತವಾದರೂ ನೋಡುಗರನ್ನು ಚಕಿತಗೊಳಿಸುತ್ತದೆ ಇಲ್ಲಿನ ಜಲಧಾರೆ. ಹಿಂದೆ ಮೀನುಗಳು ತಮ್ಮ ಸಂತಾನಾಭಿವೃದ್ಧಿಗಾಗಿ ಮೇಲ್ಮುಖವಾಗಿ ನೀರು ಹರಿಯುವ ವಿರುದ್ದ ದಿಕ್ಕಿನಲ್ಲಿ ಸಾಗುತ್ತ ಸಾಗುತ್ತ ಕಲ್ಲಿನ ತಡೆಗೆ ಸವಾಲೆಸೆದು ಜಿಗಿಯುತ್ತ ಜಿಗಿಯುತ್ತ ಮೇಲೇರುತ್ತಿದ್ದುದರಿಂದ ಇದಕ್ಕೆ ಮೀನ್ಮುಟ್ಟಿ ಜಲಪಾತ ಎಂಬ ಹೆಸರು ಬಂದಿದೆ ಎಂದು ಹೇಳಲಾಗುತ್ತದೆ.

ಕೈಬಿಸಿ ಕರೆಯುತ್ತಿರುವ ಮೀನ್ಮುಟ್ಟಿ ಜಲಪಾತ

ಚಿತ್ರಕೃಪೆ: Irshadpp

ಮೀನ್ಮುಟ್ಟಿ ಹೆಸರಿನ ಎರಡು ಜಲಪಾತಗಳು ಕೇರಳದಲ್ಲಿವೆ. ಒಂದು ಎತ್ತರದ ಜಲಪಾತವಾಗಿದ್ದರೆ ಇನ್ನೊಂದು ಅಷ್ಟೊಂದು ಎತ್ತರವಿಲ್ಲ. ಪ್ರಸ್ತುತ ಲೇಖನದಲ್ಲಿ ಹೇಳಲಾಗಿರುವ ಮೀನ್ಮುಟ್ಟಿ ಜಲಪಾತವಿರುವುದು ತಿರುವನಂತಪುರಂ ಜಿಲ್ಲೆಯಲ್ಲಿ. ನೆಯ್ಯಾರ್ ನದಿಯಿಂದ ರೂಪಗೊಂಡಿದೆ ಈ ಸುಂದರ ಜಲಪಾತ.

ಕೇರಳದ ಹಿನ್ನೀರಿನಲ್ಲೊಂದು ಪ್ರವಾಸ

ಇನ್ನೊಂದು ವಿಷಯವೆಂದರೆ, ಈ ಜಲಪಾತ ತಾಣಕ್ಕೆ ತೆರಳಲು ಸಂಚಾರ ಸೌಲಭ್ಯಗಳಿಲ್ಲ. ಅಗಸ್ತ್ಯಾರ್ ಕೂಡಂ ಚಾರಣ ಪಥದ ಮಾರ್ಗದಲ್ಲೆ ಸಾಗುತ್ತ ನೆಯ್ಯಾರ್ ಜಲಾಶಯದ ಬಳಿಯಿರುವ ಈ ಜಲಪಾತ ಕೇಂದ್ರಕ್ಕೆ ಚಾರಣ ಮಾಡುತ್ತ ತಲುಪಬೇಕು. ತಿರುವನಂತಪುರಂನಿಂದ ಈ ಜಲಪಾತ ಕೇಂದ್ರ 45 ಕಿ.ಮೀ ಗಳಷ್ಟು ದೂರದಲ್ಲಿದೆ. ನೆಯ್ಯಾರ್ ಜಲಾಶಯಕ್ಕೆ ತಲುಪಲು ರಸ್ತೆ ಮಾರ್ಗಗಳಿದ್ದು ಅಲ್ಲಿಂದ ಕೇವಲ ಚಾರಣ ಮಾಡುತ್ತ ಮೀನ್ಮುಟ್ಟಿ ಜಲಪಾತಕ್ಕೆ ಭೇಟಿ ನೀಡಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X