Search
  • Follow NativePlanet
Share
» »ಕೇರಳದಲ್ಲಿ ಮಿನುಗುತ್ತಿರುವ ಅರಮನೆ

ಕೇರಳದಲ್ಲಿ ಮಿನುಗುತ್ತಿರುವ ಅರಮನೆ

ಕೇರಳದಲ್ಲಿ ನೋಡುವಂತಹ ಸ್ಥಳಗಳು ಹಲವಾರಿವೆ. ರಾಜ್ಯದ ಗತ ವೈಭವವನ್ನು ಸಾರುವ ಅವುಗಳಲ್ಲಿ ಕೆಲವು ಪ್ರಸಿದ್ಧ ಪ್ರವಾಸ ಸ್ಥಳವಾಗಿ ಮಿನುಗುತ್ತಿವೆ.

By Divya

ಕೇರಳದಲ್ಲಿ ನೋಡುವಂತಹ ಸ್ಥಳಗಳು ಹಲವಾರಿವೆ. ರಾಜ್ಯದ ಗತ ವೈಭವವನ್ನು ಸಾರುವ ಅವುಗಳಲ್ಲಿ ಕೆಲವು ಪ್ರಸಿದ್ಧ ಪ್ರವಾಸ ಸ್ಥಳವಾಗಿ ಮಿನುಗುತ್ತಿವೆ. ಅದರಲ್ಲಿ ಕಾಯಂಕುಲಮ್‍ನ ಕೃಷ್ಣಪುರಂ ಅರಮನೆಯೂ ಒಂದು. ಇಲ್ಲಿಗೆ ಒಮ್ಮೆ ಪ್ರವಾಸ ಬೆಳೆಸಿದರೆ ಸಾರ್ಥಕ ಭಾವನೆ ಉಂಟಾಗುವುದು. 18ನೇ ಶತಮಾನದಲ್ಲಿ ನಿರ್ಮಾಣಗೊಂಡ ಈ ಅರಮನೆ ಈಗ ಪುರಾತತ್ತ್ವ ಶಾಸ್ತ್ರ ಸಂರಕ್ಷಣಾ ಇಲಾಖೆಯ ಅಧೀನದಲ್ಲಿದೆ.

Krishnapuram Palace in Kayamkulam

PC: wikipedia.org

ಅರಮನೆಯ ವಿನ್ಯಾಸ
ಈ ಅರಮನೆಯನ್ನು ಸಂಪೂರ್ಣ ಕೇರಳ ಶೈಲಿಯಲ್ಲೇ ನಿರ್ಮಿಸಲಾಗಿದೆ. ಇಳಿ ಜಾರಿನಂತಿರುವ ಛಾವಣಿ, ಕಿರಿದಾದ ಕಾರಿಡಾರ್ ಗಳನ್ನು ಹೊಂದಿದೆ. ಇದು ನೋಡಲು ಕನ್ಯಾಕುಮಾರಿಯಲ್ಲಿರುವ ಪದ್ಮನಾಭಪುರಂ ಅರಮನೆಯನ್ನು ಹೋಲುತ್ತದೆ. ಸಂರಕ್ಷಿಸುತ್ತಿರುವ ಇಲಾಖೆ ಇದನ್ನು ಒಂದು ಮ್ಯೂಸಿಯಂನಂತೆ ಮಾಡಿದೆ.

Krishnapuram Palace in Kayamkulam

PC: wikipedia.org

ಇಲ್ಲಿಯ ಸಂಪತ್ತು
ರಾಜ ಮನೆತನದವರು ಬಳಸಿರುವ ಅನೇಕ ವಸ್ತುಗಳನ್ನು ಇಲ್ಲಿಯ ಪ್ರದರ್ಶನಕ್ಕೆ ಇಡಲಾಗಿದೆ. ಅವುಗಳಲ್ಲಿ ಗಜೇಂದ್ರ ಮೋಕ್ಷಂ (ಮುರಲ ವರ್ಣ ಚಿತ್ರ) ಒಂದು. ಇದು ಕೇರಳದ ಇತಿಹಾಸವನ್ನು ಬಿಚ್ಚಿಡುತ್ತದೆ. ಇನ್ನೊಂದು ಆಕರ್ಷಣೆಯೆಂದರೆ ಕಾಯಂಕುಲಮ್‍ನ ಕತ್ತಿ. ಬಹಳ ಉದ್ದ ಹಾಗೂ ಎರಡು ಭಾಗದಲ್ಲಿ ಮೊನಚಾದ ವಿನ್ಯಾಸವನ್ನು ಹೊಂದಿರುವುದು. ಹಾಗೆಯೇ ಅಪರೂಪ ಶೈಲಿಯ ಬುದ್ಧವಿಗ್ರಹವೂ ಇದೆ. ಇಲ್ಲಿರುವ ಧಾರ್ಮಿಕ ಗೃಂಥಗಳು, ವಿವಿಧ ವಿನ್ಯಾಸದ ಎಣ್ಣೆಯ ಹಣತೆಗಳೆಲ್ಲಾ ಟ್ರೆವೆನ್ಕೊರ್ ರಾಜ ಮನೆತನದವರು ಬಳಸಿದ್ದ ವಸ್ತುಗಳು ಎನ್ನಲಾಗುತ್ತದೆ.

Krishnapuram Palace in Kayamkulam

PC: wikipedia.org

ಬರುವುದು ಹೇಗೆ
ಕೃಷ್ಣಪುರಂ ಅರಮನೆ ಕಾಯಂಕುಲಮ್ ಆವೃತ್ತಿಯಲ್ಲಿದೆ. ಆಲಪುಳದಿಂದ ಸರಿಸುಮಾರು 47 ಕಿ.ಮೀ. ದೂರದಲ್ಲಿದೆ. ಅನುಕೂಲಕ್ಕೆ ತಕ್ಕಂತೆ ಖಾಸಗಿ ಅಥವಾ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ ಸಾಗಬಹುದು. ಕಾಯಂಕುಲಮ್ ರೈಲ್ವೆ ನಿಲ್ದಾಣದಿಂದ ಕೇವಲ 8.ಕಿ.ಮೀ. ದೂರ. ಇದರ ಹತ್ತಿರದ ವಿಮಾನ ನಿಲ್ದಾಣ ತಿರುವನಂತಪುರಂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ.

Krishnapuram Palace in Kayamkulam

PC: wikipedia.org

Read more about: kerala
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X