Search
  • Follow NativePlanet
Share
» »ಆನೆ ನಡುಗಡ್ಡೆಯ ಕಾಣದಂತಹ ಗುಹೆಗಳು!

ಆನೆ ನಡುಗಡ್ಡೆಯ ಕಾಣದಂತಹ ಗುಹೆಗಳು!

ಘಾರಾಪುರಿ ಎಂದು ಕರೆಯಲ್ಪಡುವ ಎಲಿಫಂಟಾ ಗುಹೆಗಳು ಮುಂಬೈನ ಬಳಿ ಅರಬ್ಬಿ ಸಮುದ್ರದಲ್ಲಿ ನೆಲೆಸಿರುವ ಎಲಿಫಂಟಾ ನಡುಗಡ್ಡೆಯಲ್ಲಿರುವ ಪ್ರವಾಸಿಗರ ನೆಚ್ಚಿನ ತಾಣವಾಗಿವೆ

By Vijay

ನಗರದ ಗೌಜು ಗದ್ದಲದಿಂದ ಹಲವು ಕಿ.ಮೀ ಗಳಷ್ಟು ದೂರದಲ್ಲಿ ಕಾಣದಂತೆ ಈ ಗುಹೆಗಳು ನೆಲೆಸಿವೆ. ನಗರವಾಸಿಗಳಿಗೆ ಸುಲಭವಾಗಿ ಕಣ್ಣಿಗೆ ಕಾಣದ ಗುಹೆಗಳಾಗಿ ಇವು ಪ್ರವಾಸಿಗರನ್ನು ಆಕರ್ಷಿಸುತ್ತವೆ ಎಂದರೂ ತಪ್ಪಾಗಲರದು. ಈ ಗುಹೆಗಳ ನಿರ್ಮಾಣದ ಕುರಿತು ಇನ್ನೂವರೆಗೂ ನಿಖರವಾದ ಯಾವುದೆ ಮಾಹಿತಿಗಳು ಲಭ್ಯವಿಲ್ಲ. ಆದರೂ ಕೆಲ ಇತಿಹಾಸಕಾರರ ಪ್ರಕಾರ ಐದರಿಂದ ಎಂಟನೇಯ ಶತಮಾನದ ಮಧ್ಯದಲ್ಲಿ ನಿರ್ಮಾಣವಾಗಿರುವ ಅಥವಾ ಕೆತ್ತಲಾಗಿರುವ ಗುಹೆಗಳು ಇವೆಂದು ಹೇಳಲಾಗುತ್ತದೆ.

ಇದಕ್ಕೆ ಪೂರಕವೆಂಬಂತೆ ನಡುಗಡ್ಡೆಯೊಂದರಲ್ಲಿರುವ ಈ ಗುಹೆಗಳಲ್ಲಾಗಲಿ ಅಥವಾ ಸುತ್ತಮುತ್ತಲಾಗಲಿ ಯಾವುದೆ ರೀತಿಯ ಶಾಸನಗಳು ದೊರೆತಿಲ್ಲ. ಸ್ಥಳೀಯವಾಗಿ ಈ ಗುಹೆಗಳು ಮನುಷ್ಯರಿಂದ ನಿರ್ಮಿಸಲ್ಪಟ್ಟ ಗುಹೆಗಳೆ ಅಲ್ಲವೆನ್ನಲಾಗುತ್ತದೆ. ಒಂದು ರೀತಿಯ ನಿಗೂಢತೆ ಹಾಗೂ ಅಲೌಕಿಕವಾದಂತಹ ಅನುಭೂತಿ ನೀಡುವ ತಾಣವಾಗಿದೆ ಈ ನಡುಗಡ್ಡೆ.

ಅಜಂತಾ ಕುರಿತು ಅಸಕ್ತಿಕರ ಮಾಹಿತಿ!

ವಿಶೇಷವೆಂದರೆ ಈ ನಡುಗಡ್ಡೆ ಹಾಗೂ ಅಲ್ಲಿರುವ ವಿಸ್ಮಯಕಾರಿ ಗುಹೆಗಳು ಇಂದು ಪ್ರಸಿದ್ಧ ಪ್ರವಾಸಿ ಆಕರ್ಷಣೆಗಳಾಗಿವೆ. ವಾರಾಂತ್ಯ ಬಂತೆಂದರೆ ಸಾಕು ಈ ಸ್ಥಳವನ್ನು ಅನ್ವೇಷಿಸಲು ಹಾಗೂ ಪ್ರಾಚೀನ ಗುಹೆಗಳ ಅಗಾಧ ಕೆತ್ತನೆಯನ್ನು ವೀಕ್ಷಿಸಲೆಂದು ನಗರದಿಂದ ಪ್ರವಾಸಿಗರ ದಂಡೆ ಬರುತ್ತಿರುತ್ತದೆ. ಸಾಕಷ್ಟು ವಿದೇಶಿ ಪ್ರವಾಸಿಗರೂ ಸಹ ಇಲ್ಲಿಗೆ ಭೇಟಿ ನೀಡುತ್ತಾರೆ. ಹಾಗಾದರೆ ಆ ಸ್ಥಳ ಯಾವುದು? ಅಲ್ಲಿರುವ ವಿಶೇಷತೆಯಾದರೂ ಏನು? ಎಂಬುದರ ಕುರಿತು ಸಮಗ್ರ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.

ಎಲ್ಲಿದೆ ಗೊತ್ತೆ?

ಎಲ್ಲಿದೆ ಗೊತ್ತೆ?

ನಿಮ್ಮಲ್ಲಿ ಬಹುತೇಕರು ಈ ತಾಣದ ಕುರಿತು ಬಹುಶಃ ಕೇಳಿರಬಹುದು. ಇದು ಭಾರತದ ಪ್ರಸಿದ್ಧ ಗುಹೆಗಳ ಪೈಕಿ ಒಂದಾಗಿ ಪರಿಗಣಿಸಲ್ಪಡುತ್ತದೆ. ಮುಂಬೈ ಬಳಿ ಈ ನಡುಗಡ್ಡೆಯಿದ್ದು ಸಾಕಷ್ಟು ಜನಪ್ರೀಯವಾದ ಹೆಸರಿನಿಂದ ಇದು ಗುರುತಿಸಲ್ಪಡುತ್ತದೆ.

ಚಿತ್ರಕೃಪೆ: Christian Haugen

ಹೌದು, ಅದೆ!

ಹೌದು, ಅದೆ!

ಗೊತ್ತಾಗಿರಬೇಕಲ್ಲವೆ? ಹೌದು, ಇದೆ ಎಲಿಫಂಟಾ ಗುಹೆಗಳು. ಮುಂಬೈನ ಗೇಟ್ ವೇ ಆಫ್ ಇಂಡಿಯಾದಿಂದ ಅರಬ್ಬಿ ಸಮುದ್ರದಲ್ಲಿ ಸುಮಾರು ಹತ್ತು ಕಿ.ಮೀ ದೂರದಲ್ಲಿ ನೆಲೆಸಿರುವ ಎಲಿಫಂಟಾ ನಡುಗಡ್ಡೆಯಲ್ಲಿರುವ ಅದ್ಭುತ ಗುಹೆಗಳು. ಈ ನಡುಗಡ್ಡೆಯನ್ನು ಸ್ಥಳೀಯವಾಗಿ ಘಾರಾಪುರಿ ಅಥವಾ ಘಾರಾಪುರಿ ಚಿ ಲೇಣಿ ಎಂತಲೂ ಸಹ ಕರೆಯುತ್ತಾರೆ.

ಚಿತ್ರಕೃಪೆ: Elroy Serrao

ಕುತೂಹಲ

ಕುತೂಹಲ

ಯುನೆಸ್ಕೊದಿಂದ ವಿಶ್ವ ಪಾರಂಪರಿಕ ತಾಣದ ಮಾನ್ಯತೆ ಪಡೆದಿರುವ ಎಲಿಫಂಟಾ ಗುಹೆಗಳು ಇಂದಿಗೂ ಸಾಕಷ್ಟು ಕುತೂಹಲ ಸೃಷ್ಟಿಸುವ ಒಂದು ರೀತಿಯ ನಿಗೂಢಮಯ ತಾಣವಾಗಿದೆ. ಕೆಲವು ಸ್ಥಳೀಯ ಹಿರಿಯರ ಪ್ರಕಾರ ಈ ಗುಹೆಗಳು ಮನುಷ್ಯನಿಂದ ನಿರ್ಮಿತವಾದ ರಚನೆಗಳೆ ಅಲ್ಲವಂತೆ! ಇದನ್ನು ಪುಷ್ಟಿಕರಿಸಲು ಇಂದಿಗೂ ಇದರ ಕುರಿತು ಯಾವುದೆ ಶಾಸನಗಳ ಮೂಲಕವಾಗಲಿ ನಿಖರವಾದ ಮಾಹಿತಿಗಳಿಲ್ಲ.

ಚಿತ್ರಕೃಪೆ: Christian Haugen

ಪ್ರಾಚೀನ

ಪ್ರಾಚೀನ

ಆದಾಗ್ಯೂ ಇಲ್ಲಿ ಅಪಾರ ಸಂಶೋಧನೆ ನಡೆಸಿರುವ ಕೆಲ ಪ್ರಖ್ಯಾತ ಇತಿಹಾಸಕಾರರ ಪ್ರಕಾರ, ಇವು ಐದರಿಂದ ಎಂಟನೇಯ ಶತಮಾನದ ಮಧ್ಯದಲ್ಲಿ ನಿರ್ಮಿತವಾದ ಗುಹೆಗಳಿರಬಹುದು ಎನ್ನಲಾಗಿದೆ. ಏಕೆಂದರೆ ಇಲ್ಲಿ ಎರಡು ಪ್ರಕಾರದ ಗುಹೆಗಳನ್ನು ಕಾಣಬಹುದು.

ಚಿತ್ರಕೃಪೆ: Barry & PK

ಬೌದ್ಧ ಧರ್ಮ

ಬೌದ್ಧ ಧರ್ಮ

ಒಂದು ಹಿಂದು ಧರ್ಮದ ಶೈವ ಪರಂಪರೆಯ ಶಿವನಿಗೆ ಮುಡಿಪಾದ ಗುಹೆಗಳಾಗಿದ್ದರೆ ಇನ್ನೊಂದು ಪ್ರಕಾರದ ಗುಹೆಗಳಲ್ಲಿ ಬೌದ್ಧ ಧರಮದ ಪ್ರಭಾವವಿರುವುದನ್ನು ಗಮನಿಸಬಹುದಾಗಿದೆ. ಗಟ್ಟಿಮುಟ್ಟಾದ ಬಸಾಲ್ಟ್ ಶಿಲೆಗಳನ್ನು ಕಡಿದು ಈ ಅದ್ಭುತವಾದ ಗುಹೆಗಳನ್ನು ನಿರ್ಮಿಸಲಾಗಿದೆ.

ಚಿತ್ರಕೃಪೆ: Ashwin Kumar

ಎರಡನೆಯ ಗುಂಪು

ಎರಡನೆಯ ಗುಂಪು

ಮೊದಲನೆಯ ಗುಂಪಿನಲ್ಲಿ ಐದು ಹಿಂದು ಗುಹೆಗಳಿದ್ದು ಸಾಕಷ್ಟು ದೊಡ್ಡ ರಚನೆಗಳಾಗಿವೆ. ಎರಡನೆಯ ಗುಂಪಿನಲ್ಲಿ ಎರಡು ಬೌದ್ಧ ಗುಹೆಗಳಿದ್ದು ಗಾತ್ರದಲ್ಲಿ ಸ್ವಲ್ಪ ಚಿಕ್ಕವಾದವುಗಳಾಗಿವೆ. ಇಲ್ಲಿನ ಗುಹೆಗಳು ಬಣ್ಣಗಳಿಂದ ಅಲಂಕೃತಗೊಂಡಿದ್ದವು ಎಂಬುದು ಇಂದಿಗೆ ಬಹುತೇಕವಾಗಿ ನಶಿಸಿ ಹೋದ ಅಲ್ಲಲ್ಲಿ ಚಿಕ್ಕ ಪುಟ್ಟ ಬಣ್ಣದ ಅವಶೇಷಗಳಿರುವುದರಿಂದ ಹೇಳಬಹುದು.

ಚಿತ್ರಕೃಪೆ: Ashwin Kumar

ಪೋರ್ಚುಗೀಸರು

ಪೋರ್ಚುಗೀಸರು

ಇಲ್ಲಿರುವ ಕೇವ್ ಒಂದು ಅಥವಾ ಮೊದಲನೆಯ ಗುಹೆಯು ಮುಖ್ಯ ಹಾಗೂ ದೊಡ್ಡದಾದ ಗುಹೆಯಾಗಿದ್ದು ಹಿಂದುಗಳಿಂದ ಪೂಜಿಸಲ್ಪಡುತ್ತಿತ್ತು ಎಂದು ತಿಳಿದುಬರುತ್ತದೆ. ಸಾಕಷ್ಟು ಸಂರಕ್ಷಿಸಲ್ಪಟ್ಟಿದ್ದ ಈ ಗುಹೆಗಳು ಹದಿನಾರನೇಯ ಶತಮಾನದಲ್ಲಿ ಪೋರ್ಚುಗೀಸರ ಹಾವಳಿಯಿಂದ ಅಪಾರ ಪ್ರಮಾಣದಲ್ಲಿ ನಾಶಕ್ಕೆ ಒಳಗಾಗಬೇಕಾಯಿತು.

ಚಿತ್ರಕೃಪೆ: Ashwin Kumar

ನವೀಕರಣಗೊಂಡಿತು

ನವೀಕರಣಗೊಂಡಿತು

ತದನಂತರ ಹಾಗೆಯೆ ನಿರ್ಲಕ್ಷಿಸಲ್ಪಟ್ಟಿದ್ದ ಈ ಅದ್ಭುತವಾದ ಗತ ವೈಭವದ ಕುರಿತು ಮಹತ್ವವು 20 ನೇಯ ಶತಮಾನದಲ್ಲಿ ಗೊತ್ತಾಗಿ 1970 ರಲ್ಲಿ ಇವುಗಳನ್ನು ನವೀಕರಣಗೊಳಿಸಲಾಯಿತು. ಅಂತಿಮವಾಗಿ ಯುನೆಸ್ಕೊದಿಂದ ಈ ತಾಣವನ್ನು ವಿಶ್ವಪಾರಂಪರಿಕ ತಾಣವೆಂದು 1987 ರಲ್ಲಿ ಘೋಷಿಸಲಾಯಿತು. ಪ್ರಸ್ತುತ ಭಾರತೀಯ ಪುರಾತತ್ವ ಇಲಾಖೆಯ ಸುಪರ್ದಿಯಲ್ಲಿದೆ ಈ ಗುಹೆಗಳು.

ಚಿತ್ರಕೃಪೆ: Elroy Serrao

ಸ್ತೂಪ ಬೆಟ್ಟ

ಸ್ತೂಪ ಬೆಟ್ಟ

ಎಲಿಫಂಟಾ ಗುಹೆಗಳಿರುವ ಎಲಿಫಂಟಾ ನಡುಗಡ್ಡೆಯು ಎರಡುವರೆ ಕಿ.ಮೀ ಗಳಷ್ಟು ಉದ್ದವನ್ನು ಹೊಂದಿದ್ದು ಎರಡು ಗುಡ್ಡಗಳಿಂದ ಕೂಡಿದೆ. ಒಂದು ಗುಡ್ಡವು 490 ಅಡಿಗಳಷ್ಟು ಎತ್ತರವಿದ್ದರೆ ಇನ್ನೊಂದು ಗುಡ್ಡವು 568 ಅಡಿಗಳಷ್ಟು ಎತ್ತರವನ್ನು ಹೊಂದಿದೆ. ಎತ್ತರವಿರುವ ಬೆಟ್ಟವನ್ನು ಸ್ತೂಪ ಬೆಟ್ಟ ಎಂಬ ಹೆಸರಿನಿಂದ ಕರೆಯಲಾಗಿತ್ತದೆ.

ಚಿತ್ರಕೃಪೆ: Ashwin Kumar

ಹುಣಸೆ ಮರಗಳು

ಹುಣಸೆ ಮರಗಳು

ಈ ಬೆಟ್ಟಗಾಡುಗಳು ಪೊದೆಗಳು, ಮುಳ್ಳಿನ ಕಂಟಿ ಹಾಗೀ ಚಿಕ್ಕ ಪುಟ್ಟ ಸಸ್ಯಗಳಿಂದ ಎಲ್ಲೆಡೆ ಕೂಡಿದೆ. ಅಲ್ಲದೆ ಸಾಕಷ್ಟು ಸಂಖ್ಯೆಯಲ್ಲಿ ಹುಣಸೆ ಮರಗಳು, ಕಾರಂಜ ಮರಗಳು, ತೆಂಗು ಹಾಗೂ ಮಾವಿನ ಮರಗಳು ಎಲ್ಲೆಡೆ ವ್ಯಾಪಿಸಿವೆ. ಎರಡು ಹಳ್ಳಿಗಳಿಗೆ ಆಶ್ರಯ ತಾಣವಾಗಿರುವ ಈ ನಡುಗಡ್ಡೆ ಭತ್ತದ ಗದ್ದೆಗಳನ್ನೂ ಸಹ ಹೊಂದಿದೆ.

ಚಿತ್ರಕೃಪೆ: Ramakrishna Reddy Y

ಪಕ್ಷಿವೀಕ್ಷಣೆ

ಪಕ್ಷಿವೀಕ್ಷಣೆ

ಹಾಗಾಗಿ ನಿಸರ್ಗಪ್ರಿಯ ಪ್ರವಾಸಿಗರ ನೆಚ್ಚಿನ ತಾಣವಾಗಿ ಎಲಿಫಂಟಾ ನಡುಗಡ್ಡೆ ಆಕರ್ಷಿಸುತ್ತದೆ. ಸುತ್ತಲೂ ಸಮುದ್ರದ ನೀರಿನಿಂದಾಅವೃತವಾಗಿರುವುದರಿಂದ ಹಲವು ಬಗೆಯ ಸಮುದ್ರ ಹಕ್ಕಿಗಳು ಅಲ್ಲದೆ ಕಾಡುಗಳಲ್ಲಿ ಕಂಡುಬರುವ ವೈವಿಧ್ಯಮಯ ಪಕ್ಷಿಗಳಿಂದ ಸಂಪದ್ಭರಿತವಾಗಿದ್ದು ಪಕ್ಷಿ ವೀಕ್ಷಣೆಗೆಂದೂ ಸಹ ಹೆಸರುವಾಸಿಯಾಗಿದೆ.

ಚಿತ್ರಕೃಪೆ: Philip Larson

ಮ್ಯಾಂಗ್ರೋವ್ ಗಿಡಗಳು

ಮ್ಯಾಂಗ್ರೋವ್ ಗಿಡಗಳು

ನಡುಗಡ್ಡೆಯ ದಂಡೆಗಳು ಮಣ್ಣು ಹಾಗೂ ಮರಳುಗಳಿಂದ ಕೂಡಿದ್ದು ಮ್ಯಾಂಗ್ರೋವ್ ಗಿಡಗಳನ್ನು ಅಲ್ಲಲ್ಲಿ ನೋಡಬಹುದಾಗಿದೆ. ಅಲ್ಲದೆ ವಿವಿಧ ಬಗೆಯ ಜಲಚರಗಳು ಹಾಗೂ ಮೀನುಗಳು ಇಲ್ಲಿನ ನೀರಿನ ಮೂಲಗಳಲ್ಲಿ ಕಂದುಬರುತ್ತವೆ.

ಚಿತ್ರಕೃಪೆ: Sahil Ahuja

ದ್ವಾಪರಯುಗ

ದ್ವಾಪರಯುಗ

ಇನ್ನೂ ಗುಹೆಗಳ ಇತಿಹಾಸಕ್ಕೆ ಬರುವುದಾದರೆ, ಇವು ಐದನೇಯ ಶತಮಾನದ ಪ್ರಾಂಭದಲ್ಲೆ ಕೆತ್ತಲ್ಪಟ್ಟಿರುವ ಗುಹೆಗಳೆಂದು ತಿಳಿದುಬರುತ್ತದೆ. ಸ್ಥಳೀಯವಾಗಿ ಈ ಗುಹೆಗಳನ್ನು ದ್ವಾಪರಯುಗದಲ್ಲಿ ಪಾಂಡವರು ಹಾಗೂ ಬಾಣಾಸುರನೆಂಬ ಶಿವನ ಭಕ್ತನಿಂದ ಕೆತ್ತಲಾಗಿದೆ ಎಂದು ಹೇಳಲಾಗುತ್ತದೆ.

ಚಿತ್ರಕೃಪೆ: Ronakshah1990

ಕ್ಷಾತ್ರಪ ನಾಣ್ಯಗಳು

ಕ್ಷಾತ್ರಪ ನಾಣ್ಯಗಳು

ಪುರಾತತ್ವ ಶಾಸ್ತ್ರಜ್ಞರು ಇಲ್ಲಿ ಭೂಮಿಯನ್ನು ಅಗೆದು ಹಲವು ಕ್ಷಾತ್ರಪ ನಾಣ್ಯಗಳನ್ನು ವಶಪಡಿಸಿಕೊಂಡಿದ್ದಾರೆ. ಇವು ನಾಲ್ಕನೇಯ ಶತಮಾನಕ್ಕೆ ಸೇರಿದ್ದವೆನ್ನಲಾಗಿದೆ. ಗೂತಿರುವ ಅಥವಾ ದಾಖಲಾಗಿರುವ ಇತಿಹಾಸದಂತೆ ಕೊಂಕಣದ ಮೌರ್ಯರನ್ನು ಸೋಲಿಸಿದ ಬಾದಾಮಿ ಚಾಲುಕ್ಯರು ಈ ಪ್ರದೇಶವನ್ನಾಳಿರಬಹುದೆಂಬ ಅಭಿಪ್ರಾಯಗಳು ಸೇರಿಕೊಂಡಿವೆ.

ಚಿತ್ರಕೃಪೆ: AKS.9955

ಜಂಟಿಯಾಗಿ

ಜಂಟಿಯಾಗಿ

ಇಲ್ಲಿರುವ ಶಿವನ ಗುಹೆಯನ್ನು ಪರೀಕ್ಷಿಸಿರುವ ಹಲವು ಇತಿಹಾಸಕಾರರು ಮೌರ್ಯರು ಇದರ ನಿರ್ಮಾತೃ ಎಂದು ನಂಬಿದ್ದರೆ ಇನ್ನೂ ಕೆಲವರ ಪ್ರಕಾರ, ಚಿಕ್ಕ ಸಾಮಾಜ್ಯ ಹೊಂದಿದ್ದ ಕೊಂಕಣ ಮೌರ್ಯರು ಇಷ್ಟು ದೊಡ್ಡ ಪ್ರಮಾಣದ ಗುಹೆಗಳನ್ನು ಕೆತ್ತಿರಲು ಸಾಧ್ಯವಿಲ್ಲವೆಂದೂ ಇದು ಕಾಲಚೂರಿ ಹಾಗೂ ಮೌರ್ಯರ ಜಂಟಿ ಪ್ರಯತ್ನವಾಗಿರಬಹುದೆಂದು ಅಭಿಪ್ರಾಯ ಮಂಡಿಸುತ್ತಾರೆ.

ಚಿತ್ರಕೃಪೆ: Nehha.1990

ಅಥವಾ ರಾಷ್ಟ್ರಕೂಟರೆ?

ಅಥವಾ ರಾಷ್ಟ್ರಕೂಟರೆ?

ಮೂರನೇಯದಾಗಿ ಬಾದಾಮಿ ಚಾಲುಕ್ಯರ ಕೊಡುಗೆ ಇದಾಗಿರಬಹುದೆಂದು ಕೆಲವರು ಹೇಳಿದ್ದರೆ ಕೊನೆಯದಾಗಿ ರಾಷ್ಟ್ರಕೂಟರು ಬಹುಶಃ ಈ ಗುಹಾಲಯಗಳ ರಚನೆಕಾರರಾಗಿರಬಹುದೆಂದು ಸಂದೇಹ ವ್ಯಕ್ತಪಡಿಸುತ್ತಾರೆ. ಒಟ್ಟಾರೆಯ ಸತ್ಯ ಏನೆ ಇರಲಿ ಇಂದಿಗೂ ಇವು ತಮ್ಮ ಅಗಾಧತೆಯಿಂದ ಜನರನ್ನು ಒಂದು ನಿಗೂಢ ಲೋಕಕ್ಕೆ ಕರೆದೊಯ್ಯುವುದಂತೂ ದಿಟ.

ಚಿತ್ರಕೃಪೆ: Ricardo Martins

ಹನ್ನೆರಡು ಕಿ.ಮೀ

ಹನ್ನೆರಡು ಕಿ.ಮೀ

ಎಲಿಫಂಟಾ ದ್ವೀಪವು ಮುಂಬೈನ ಗೇಟ್ ವೇ ಆಫ್ ಇಂಡಿಯಾ ಬಂದರಿನಿಂದ ಹನ್ನೆರಡು ಕಿ.ಮಿ ಗಳಷ್ಟು ದೂರದಲ್ಲಿದ್ದು ದೋಣಿಯ ಮೂಲಕ ಸುಲಭವಾಗಿ ತಲುಪಬಹುದಾಗಿದೆ. ಪ್ರವಾಸಿಗರಿಗೆಂದೆ ಸಾಕಷ್ಟು ದೋಣಿಗಳು ದೊರೆಯುತ್ತವೆ. ವಾರದಲ್ಲಿ ಸೋಮವಾರವೊಂದನ್ನು ಹೊರತುಪಡಿಸಿ ಮಿಕ್ಕೆಲ್ಲ ದಿನಗಳಲ್ಲಿ ಈ ನಡುಗಡ್ಡೆ ಗುಹೆಗಳು ಪ್ರವಾಸಿಗರಿಗಾಗಿ ತೆರೆದಿರುತ್ತವೆ.

ಚಿತ್ರಕೃಪೆ: A.Savin

ಕಡು ಬೇಸಿಗೆ ಬೇಡ

ಕಡು ಬೇಸಿಗೆ ಬೇಡ

ವರ್ಷದ ಎಲ್ಲಾ ಸಮಯದಲ್ಲೂ ಎಲಿಫಂಟಾ ಪ್ರವಾಸಿಗರಿಗೆ ಮುಕ್ತವಾಗಿರುತ್ತದೆ. ಆದಾಗ್ಯೂ ಕಡು ಬೇಸಿಗೆಯನ್ನು ಹೊರತುಪಡಿಸಿ ಎಲ್ಲ ಸಮಯವೂ ಭೇಟಿ ನೀಡಲು ಉತ್ತಮ. ಮಳೆಗಾಲದಲ್ಲಿ ಮಳೆ ಪ್ರಮಾಣ ಹಾಗೂ ಸಮುದ್ರದ ಸ್ಥಿತಿಗತಿಗಳನ್ನು ನೋಡಿ ದೋಣಿ ಓಡಿಸಲಾಗುತ್ತದೆ.

ಚಿತ್ರಕೃಪೆ: Sankarshan Mukhopadhyay

ಹಳ್ಳಿಗೆ ಭೇಟಿ ನೀಡಿ

ಹಳ್ಳಿಗೆ ಭೇಟಿ ನೀಡಿ

ಈ ನಡುಗಡ್ಡೆಯಲ್ಲಿರುವ ಹಳ್ಳಿಗಳ ಪರಿಸರವನ್ನು ವೀಕ್ಷಿಸಬಯಸುವವರು ನಿರ್ದಿಷ್ಟ ಶುಲ್ಕ ಪಾವತಿಸಿ ಹಳ್ಳಿಗಳನ್ನು ಪ್ರವೇಶಿಸಬಹುದು. ಮಿಕ್ಕಂತೆ ಚಿತ್ರಪಟ ಹಾಗೂ ಚಿತ್ರೀಕರಣಕ್ಕೆ ಅವಕಾಶವಿದ್ದು ನಿಗದಿತ ಶುಲ್ಕ ಪಾವತಿಸಬೇಕಾಗುತ್ತದೆ.

ಚಿತ್ರಕೃಪೆ: Elroy Serrao

ಕಾರಣವೇನು?

ಕಾರಣವೇನು?

ಅಂದಹಾಗೆ ಕೊನೆಯದಾಗಿ, ಇದನ್ನು ಎಲಿಫಂಟಾ ಎಂದು ಏಕೆ ಕರೆಯುತ್ತಾರೆಂದು ಗೊತ್ತೆ? ಹಿಂದೆ ಈ ನಡುಗಡ್ಡೆಯಲ್ಲಿ ದೈತ್ಯ ಗಾತ್ರದ ಆನೆಯ ವಿಗ್ರಹ ಸಿಕ್ಕಿತ್ತು. ಆ ಕಾರಣದಿಂದಾಗಿ ಬ್ರಿಟೀಷರಿಂದ ಎಲಿಫಂಟಾ ಗುಹೆಗಳು ಎಂಬ ಪದವು ಬಳುವಳಿಯಾಗಿ ಬಂದಿತು. ಪ್ರಸ್ತುತ ಆ ಆನೆಯನ್ನು ಮುಂಬೈನ ಜೀಜಾಮಾತಾ ಉದ್ಯಾನದಲ್ಲಿರಿಸಲಾಗಿದೆ.

ಚಿತ್ರಕೃಪೆ: Elroy Serrao

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X