Search
  • Follow NativePlanet
Share
» »ಪ್ರಪಂಚಕ್ಕೆ ಅಜಂತ ಗುಹೆಗಳು ಹೇಗೆ ಪರಿಚಯವಾಯಿತು ನಿಮಗೆ ಗೊತ್ತ?

ಪ್ರಪಂಚಕ್ಕೆ ಅಜಂತ ಗುಹೆಗಳು ಹೇಗೆ ಪರಿಚಯವಾಯಿತು ನಿಮಗೆ ಗೊತ್ತ?

ಮಹಾರಾಷ್ಟ್ರದಲ್ಲಿನ ಅಜಂತಾ ಗುಹೆಗಳಲ್ಲಿ ಕಲ್ಲಿನ ಸೂಕ್ಷ್ಮವಾದ ಕೆತ್ತನೆಗಳ ಶಿಲ್ಪಕಲೆಗಳನ್ನು ಹೊಂದಿರುವ ಗುಹೆಗಳ ನಿರ್ಮಾಣವನ್ನು ಕಾಣಬಹುದಾಗಿದೆ. ಇವುಗಳು ಸುಮಾರು ಕ್ರಿ.ಪೂ 2 ನೇ ಶತಮಾನದಲ್ಲಿ ನಿರ್ಮಾಣ ಮಾಡಲಾಗಿರುವುದು ಎಂದು ಗುರುತಿಸಲಾಗಿದೆ.

ಮಹಾರಾಷ್ಟ್ರದಲ್ಲಿನ ಅಜಂತಾ ಗುಹೆಗಳಲ್ಲಿ ಕಲ್ಲಿನ ಸೂಕ್ಷ್ಮವಾದ ಕೆತ್ತನೆಗಳ ಶಿಲ್ಪಕಲೆಗಳನ್ನು ಹೊಂದಿರುವ ಗುಹೆಗಳ ನಿರ್ಮಾಣವನ್ನು ಕಾಣಬಹುದಾಗಿದೆ. ಇವುಗಳು ಸುಮಾರು ಕ್ರಿ.ಪೂ 2 ನೇ ಶತಮಾನದಲ್ಲಿ ನಿರ್ಮಾಣ ಮಾಡಲಾಗಿರುವುದು ಎಂದು ಗುರುತಿಸಲಾಗಿದೆ. ಇಲ್ಲಿನ ಶಿಲ್ಪಕಲೆಗಳು ಬೌದ್ಧಮತಕ್ಕೆ ಸಂಬಂಧಿಸಿದ್ದಾಗಿದೆ. ಈ ಸುಂದರವಾದ ಅಜಂತಾ ಗುಹೆಗಳು ಮಹಾರಾಷ್ಟ್ರದ ಔರಂಗಬಾದ್ ಜಿಲ್ಲೆಯಲ್ಲಿದೆ. ಇದೊಂದು ಅಪರೂಪವಾದ ಚಾರಿತ್ರಿಕ ಸಂಪತ್ತು ಆಗಿದೆ.

ಸುಮಾರು ಕ್ರಿ.ಪೂ 2 ನೇ ಶತಮಾನದಲ್ಲಿ ನಿರ್ಮಾಣ ಮಾಡಿರುವ ಈ ಗುಹೆಗಳು ಅತ್ಯಂತ ಸುಂದರವಾಗಿದೆ. ಸಾಮಾನ್ಯವಾಗಿ ಇಲ್ಲಿನ ಗುಹೆಗಳನ್ನು ಕಂಡು ಮರುಳಾಗದೇ ಯಾರು ಇರಲಾರರು. ಈ ಗುಹೆಗಳನ್ನು 1983ರಲ್ಲಿ ಯುನೆಸ್ಕೋ ವಿಶ್ವ ಪಾರಂಪರಿಕ ಪಟ್ಟಿಯಲ್ಲಿ ಸೇರಿಸಲಾಯಿತು. ಈ ಅದ್ಭುತವಾದ ಅಜಂತ ಗುಹೆಗಳು 56 ಮೀಟರ್ ಎತ್ತರದಲ್ಲಿನ ಪರ್ವತದ ಮೇಲೆ ಇದು ಪಶ್ಚಿಮದಿಂದ ಪೂರ್ವಕ್ಕೆ ಹರಡಿದೆ.

ಹುಲಿಯನ್ನು ಭೇಟೆಯಾಡುತ್ತಾ ಗುಹೆಯೊಳಗೆ ಹೋದನು, ಜಾನ್ ಸ್ಮಿತ್ ಅಲ್ಲಿ ಏನಿತ್ತು ನಿಮಗೆ ಗೊತ್ತ?

ಜಾನ್ ಸ್ಮಿತ್

ಜಾನ್ ಸ್ಮಿತ್

ಕ್ರಿ.ಶ 1819 ಏಪ್ರಿಲ್ 28 ರಂದು, ಆಕಾಲದಲ್ಲಿ ಭಾರತ ದೇಶ ಬ್ರಿಟಿಷ್‍ರ ಅಧೀನದಲ್ಲಿ ಇದ್ದಿದ್ದು ಸಾಮಾನ್ಯವಾಗಿ ನಮಗೆ ಗೊತ್ತಿರುವ ಸಂಗತಿಯೇ. ಜಾನ್ ಸ್ಮಿತ್ ಎಂಬುವವನು ಒಂದು ಬ್ರಿಟಿಷ್ ಅಧಿಕಾರಿ ತನ್ನ ಗುಂಪಿನ ಜೊತೆ ಅಜಂತ ನಗರಕ್ಕೆ ಸಮೀಪದಲ್ಲಿನ ಅರಣ್ಯಕ್ಕೆ ತೆರಳಿದರು.

ಹುಲಿ

ಹುಲಿ

ಅಷ್ಟರಲ್ಲಿ ಜಾನ್ ಸ್ಮಿತ್‍ಗೆ ಒಂದು ಹುಲಿ ಕಾಣಿಸಿತು. ಹೇಗಾದರು ಮಾಡಿ ಆ ಹುಲಿಯನ್ನು ಭೇಟೆಯಾಡಬೇಕು ಎಂದು ನಿರ್ಧರಿಸಿದನು. ಆ ಹುಲಿಯು ತುಂಬ ಸಮಯ ದೂರ ಓಡುತ್ತಾ ಅರಣ್ಯದಿಂದ ಒಂದೇ ಬಾರಿಗೆ ಮಾಯವಾಗಿ ಹೋಯಿತು. ಆಶ್ಚರ್ಯ ಪಟ್ಟ ಬ್ರಿಟಿಷ್ ಅಧಿಕಾರಿಗಳು ಅಲ್ಲಿಗೆ ಅರಣ್ಯ ಪ್ರದೇಶವು ಮುಕ್ತಾಯವಾಗಿ ಹೋರ ಬಂದಿದ್ದರು.

ದ್ವಾರ

ದ್ವಾರ

ಅಲ್ಲಿ ಬೆಟ್ಟಗಳು ಬಿಟ್ಟು ಬೇರೆ ಏನು ಇರಲಿಲ್ಲ. ಹುಲಿಯು ಎಲ್ಲಿ ಹೋಯಿತು ಎಂದು ಯೋಚಿಸುತ್ತಿರುವಾಗ ದೂರದಲ್ಲಿ ಒಂದು ದ್ವಾರವು ಕಾಣಿಸಿತು.

 ಅಧಿಕಾರಿ

ಅಧಿಕಾರಿ

ಜಾನ್ ಮತ್ತು ಉಳಿದ ಅಧಿಕಾರಿಗಳು ದಟ್ಟವಾದ ಅರಣ್ಯದಲ್ಲಿ ತುಂಬ ಕಷ್ಟವಹಿಸಿ ಒಳಗೆ ಪ್ರವೇಶಿಸಿದರು.

ಗುಹೆ

ಗುಹೆ

ಅಲ್ಲಿ ಸಮೀಪದಲ್ಲಿಯೇ ಇರುವ ಪ್ರಜೆಗಳು ಕೂಡ ಅವರಿಗೆ ಸಾಹಯವನ್ನು ಕೂಡ ಮಾಡಿದರು. ಅದೇನೂ ಪಾಳು ಬಿದ್ದಿರುವ ಕೋಟೆ ಎಂದು ಜಾನ್ ಭಾವಿಸಿದನು. ಆದರೆ ಒಳಗೆ ಹೋಗಿ ನೋಡಿದರೆ ಜಾನ್‍ಗೆ ಆಶ್ಚರ್ಯ ಕಾದಿತ್ತು. ಅದು ಒಂದು ಅದ್ಭುತವಾದ ಗುಹೆ.

ಗುಹೆ

ಗುಹೆ

ಅದು ಅಂತಹ ಇಂತಹ ಗುಹೆಯಲ್ಲ. ಒಂದೇ ದೊಡ್ಡ ಬಂಡೆಕಲ್ಲಿನಿಂದ ಕೆತ್ತಿರುವ ಅದ್ಭುತವಾದ ಗುಹೆಯಾಗಿತ್ತು. ಗುಡೆಗಳ ಮೇಲೆ ಅತ್ಯಂತ ಮನೋಹರವಾದ ಬೌದ್ಧನ ಶಿಲ್ಪಕಲೆಗಳನ್ನು ಕಾಣಬಹುದಾಗಿತ್ತು. ಒಂದಕ್ಕಿಂತ ಒಂದು ಸುಂದರವಾಗಿತ್ತು. ಜಾನ್ ಆ ಗುಹೆಯನ್ನು ದಾಟಿ ಸ್ವಲ್ಪ ಮುಂದೆ ಸಾಗಿದನು. ಪಕ್ಕದಲ್ಲಿ ಮತ್ತೊಂದು ಸುಂದರವಾದ ಗುಹೆ ಇತ್ತು.

29 ಗುಹೆ

29 ಗುಹೆ

ಅದರಲ್ಲೂ ಕೂಡ ಶಿಲ್ಪಗಳು, ವಿಗ್ರಹಗಳು, ಆಕರ್ಷಕವಾದ ಚಿತ್ರಗಳು ಇದ್ದವು. ಹಾಗೆ ಒಂದಲ್ಲ ಎರಡಲ್ಲ ಒಟ್ಟು 29 ಗುಹೆಗಳು ಇದ್ದವು.

ಅದ್ಭುತವಾದ ಶಿಲ್ಪಕಲೆಗಳು

ಅದ್ಭುತವಾದ ಶಿಲ್ಪಕಲೆಗಳು

ಆ ಗುಹೆಗಳು ಬ್ರಿಟಿಷ್ ಅಧಿಕಾರಿಗಳಿಗೆ ಇದು ಭಾರತ ದೇಶ ಘನ ಚರಿತ್ರೆ ಎಂದು ಸಾರಿ ಹೇಳುವಂತೆ ಇತ್ತು. ಭಾರತ ದೇಶದ ಅದ್ಭುತವಾದ ಶಿಲ್ಪಕಲೆಗಳ ಮೂಲಕವೇ ಬ್ರಿಟಿಷ್ ಅಧಿಕಾರಿಗಳಿಗೆ ಮೌನವಾಗಿ ಉತ್ತರ ನೀಡುತ್ತಿತ್ತು.

ಪುರಾತತ್ವ ಇಲಾಖೆಯವರು

ಪುರಾತತ್ವ ಇಲಾಖೆಯವರು

ಹೀಗೆ ಅಜಂತ ಗುಹೆಗಳು ಪ್ರಪಂಚಕ್ಕೆ ಪರಿಚಯವಾಯಿತು. ಇಲ್ಲಿನ ಬೌದ್ಧ ಧರ್ಮದ ಗುಹೆಗಳ ನಿರ್ಮಾಣ ಕ್ರಿ.ಪೂ 200 ನಿಂದ ಕ್ರಿ.ಶ 600ರ ವರೆಗೆ ನಿರ್ಮಾಣ ಮಾಡಿರಬಹುದು ಎಂದು ಪುರಾತತ್ವ ಇಲಾಖೆಯವರು ಗುರುತಿಸಿದರು.

ಭಾರತ ದೇಶ

ಭಾರತ ದೇಶ

6 ನೇ ಶತಮಾನದ ನಂತರ ಬೌದ್ಧಿಸಂ ದಿನದಿನಕ್ಕೆ ಭಾರತ ದೇಶದಲ್ಲಿ ಕ್ಷೀಣಿಸುತ್ತಾ ಹೋಯಿತು. ಹಾಗಾಗಿ ಈ ಗುಹೆಗಳಿಗೆ ಭೇಟಿ ನೀಡುವುದು ಜನರು ಕೈಬಿಟ್ಟರು.

ದಟ್ಟವಾದ ವೃಕ್ಷ

ದಟ್ಟವಾದ ವೃಕ್ಷ

ಹಾಗಾಗಿ ಗುಹೆಗಳ ಸುತ್ತಮುತ್ತ ದಟ್ಟವಾದ ವೃಕ್ಷಗಳು ಬೆಳದವು. ಆ ಅದ್ಭುತವಾದ ಗುಹೆಗಳು ವೃಕ್ಷಗಳಲ್ಲಿ ಇದ್ದು ಬಾಹ್ಯ ಪ್ರಪಂಚಕ್ಕೆ ಕಾಣಿಸಿಕೊಳ್ಳದೆ ಪೂರ್ತಿಯಾಗಿ ಕಣ್ಮರೆಯಾಯಿತು.

ಏಪ್ರಿಲ್ 28,1918

ಏಪ್ರಿಲ್ 28,1918

ಅಂದಿನಿಂದ ಆ ಗುಹೆಗಳು ಸೂರ್ಯನನ್ನು ಕಾಣಲು ಮೌನವಾಗಿ ನಿರೀಕ್ಷಿಸುತ್ತಿತ್ತು. ಕೊನೆಯಾದಾಗಿ ಜಾನ್ ಪುಣ್ಯವೇ ಎಂಬಂತೆ ಏಪ್ರಿಲ್ 28,1918 ರಲ್ಲಿ ಗುಹೆಗಳ ಅಸ್ಥಿತ್ವ ಬಾಹ್ಯ ಪ್ರಪಂಚಕ್ಕೆ ಪರಿಚಯವಾಯಿತು.

ಜಾತಕಕಥೆಗಳು

ಜಾತಕಕಥೆಗಳು

ಈ ಗುಹೆಗಳ ಚಿತ್ರಗಳು ಬೌದ್ಧ ಮತ್ತು ಅವರ ಜೀವನಗಳನ್ನು ಹೇಳುವ ಜಾತಕಕಥೆಗಳನ್ನು ಕಾಣಬಹುದಾಗಿದೆ. 2 ಗುಹೆಗಳಲ್ಲಿ ಬೌದ್ಧನಿಗೆ ಸಂಬಂಧಿಸಿದ ಚಿತ್ರಗಳನ್ನು ಕಾಣಬಹುದಾಗಿದೆ.

ಮೇಲ್ಛಾವಣಿ

ಮೇಲ್ಛಾವಣಿ

ಮೇಲ್ಛಾವಣಿದಟ್ಟವಾದ ವೃಕ್ಷಯ ಮೇಲೆ ಹಂಸಗಳ ಚಿತ್ರಗಳು ಅತ್ಯಂತ ಆಕರ್ಷಕವಾಗಿರುತ್ತದೆ. ಆ ಕಾಲದಲ್ಲಿ ಪ್ರಜೆಗಳು ಬಳಸುತ್ತಿದ್ದ ವಸ್ತ್ರಗಳು, ಕಂಬಳಿಗಳನ್ನು ಹೊಂದಿರುವ ಕಲಾ ಚಿತ್ರಗಳನ್ನು ಕಾಣಬಹುದಾಗಿದೆ.

ಆಶ್ಚರ್ಯಚಕಿತಗೊಳಿಸುವ

ಆಶ್ಚರ್ಯಚಕಿತಗೊಳಿಸುವ

ಆ ಕಾಲದಲ್ಲಿ ಶಿಲ್ಪಗಳಿಗೆ ಬಳಸಿದ ಬಣ್ಣಗಳು ಇಂದಿಗೂ ಹಾಗೆಯೇ ಇರುವು ಆಶ್ಚರ್ಯವಲ್ಲದೇ ಮತ್ತೇನು? 26 ನೇ ಗುಹೆಯಲ್ಲಿ ಬುದ್ಧನ ನಿರ್ಮಾಣವನ್ನು ಸೂಚಿಸುವ ಬೌದ್ಧ ವಿಗ್ರಹಗಳನ್ನು ಕಾಣಬಹುದಾಗಿದೆ.

ಚಿತ್ರ

ಚಿತ್ರ

ಅಲ್ಲಿನ ಚಿತ್ರಗಳಲ್ಲಿ ಒಂದು ಬುದ್ಧನು ಮಲಗಿರುವುದು, ಕೆಳಗೆ ಆತನ ಆನುಚರರು ದುಃಖಿಸುವುದು. ಮೇಲೆ ದೇವತೆಗಳು ಆನಂದವಾಗಿ ಸ್ವಾಗತ ಕೋರುವುದು ಆ ಚಿತ್ರಗಳನ್ನು ಕೂಡ ಇಲ್ಲಿ ಕಾಣಬಹುದಾಗಿದೆ.

ನಿಜಾಂ ಪ್ರಭು

ನಿಜಾಂ ಪ್ರಭು

ಒಂದು ಕಾಲದಲ್ಲಿ ಅಜಂತ ಹೈದ್ರಾಬಾದ್ ರಾಜ್ಯದ ಭಾಗವಾಗಿತ್ತು. ನಿಜಾಂ ಪ್ರಭು ಈ ಗುಹೆಗಳನ್ನು ಮ್ಯೂಸಿಯಂನಂತೆ ಮಾಡಿ ಪ್ರವಾಸಿಗರಿಂದ ಹಣವನ್ನು ಸಂಪಾದಿಸುತ್ತಿದ್ದನು. ನಿಜಾಂ ರಾಜನಿಗೆ ಹಣದ ಮೇಲೆ ಇದ್ದ ಶ್ರದ್ಧೆ ಗುಹೆಯ ಮೇಲೆ ಇರಲಿಲ್ಲ.

ಪ್ರವಾಸಿ ತಾಣ

ಪ್ರವಾಸಿ ತಾಣ

ಹಾಗಾಗಿ ಪ್ರಕೃತಿ ಒಡಿಲಲ್ಲಿ ಭದ್ರವಾಗಿದ್ದ ಗುಹೆಗಳು ಇದ್ದಕ್ಕಿದ್ದ ಹಾಗೆ ಹಲವಾರು ಗುಹೆಗಳು ಬಿದ್ದು ಹೋದವು. ಸ್ವತಂತ್ರ್ಯದ ನಂತರ ಅಜಂತ ಮಹಾರಾಷ್ಟ್ರ ರಾಜ್ಯಕ್ಕೆ ಸೇರಿತು. ಮಹಾರಾಷ್ಟ್ರ ಸರ್ಕಾರ ಈ ಗುಹೆಗಳನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿಗೊಳಿಸಿದರು.

ಯಾವ ಸಮಯದಲ್ಲಿ ಭೇಟಿ ನೀಡಬೇಕು?

ಯಾವ ಸಮಯದಲ್ಲಿ ಭೇಟಿ ನೀಡಬೇಕು?

ಅಜಂತ ಗುಹೆಗಳಿಗೆ ಭೇಟಿ ನೀಡಬೇಕು ಎಂದರೆ ವರ್ಷದಲ್ಲಿ ಯಾವ ಸಮಯದಲ್ಲಿಯಾದರೂ ಭೇಟಿ ನೀಡಬಹುದಾಗಿದೆ. ಇಲ್ಲಿ ಹಲವಾರು ಗುಹೆಗಳು ಇದ್ದು ಒಂದೇ ದಿನದಲ್ಲಿ ನೋಡಲು ಸಾಧ್ಯವಿಲ್ಲ. ಈ ಗುಹೆಗಳನ್ನು ಮಳೆಗಾಲದಲ್ಲಿ ನೋಡುವುದು ಮರೆಯಲಾಗದ ಅನುಭೂತಿಯನ್ನು ಉಂಟು ಮಾಡುತ್ತದೆ.

ಅದ್ಭುತವನ್ನು ತಪ್ಪದೇ ನೋಡಿ

ಅದ್ಭುತವನ್ನು ತಪ್ಪದೇ ನೋಡಿ

ಅಜಂತ ಗುಹೆಗಳ ಬಗ್ಗೆ ತಿಳಿದು ಆನಂದಿಸುವುದಕ್ಕಿಂತ, ವ್ಯಕ್ತಿಗತವಾಗಿ ನೇರವಾಗಿ ಭೇಟಿ ನೀಡಿ ರೋಮಾಂಚನಗೊಳ್ಳಿ. ವಿಶ್ವ ಪಾರಂಪರಿ ಸಂಪತ್ತು ಎಂದು ಗುರುತಿಸಿಕೊಂಡಿರುವ ಈ ಸುಂದರವಾದ ತಾಣಕ್ಕೆ ಜೀವನದಲ್ಲಿ ಒಮ್ಮೆಯಾದರೂ ಭೇಟಿ ನೀಡಿ ಬನ್ನಿ.

ಹೇಗೆ ಸಾಗಬೇಕು?

ಹೇಗೆ ಸಾಗಬೇಕು?

ಅಜಂತ ಗುಹೆಗಳಿಗೆ ವಿಮಾನ, ರೈಲ್ವೆ ಅಥವಾ ಬಸ್ಸು ಮುಖಾಂತರ ಸುಲಭವಾಗಿ ಸೇರಿಕೊಳ್ಳಬಹುದಾಗಿದೆ.

ವಿಮಾನ ನಿಲ್ದಾಣ

ವಿಮಾನ ನಿಲ್ದಾಣ

ಅಜಂತ ಗುಹೆಗೆ ಸಮೀಪವಾದ ವಿಮಾನ ನಿಲ್ದಾಣವೆಂದರೆ ಅದು ಔರಂಗಬಾದ್ ವಿಮಾನ ನಿಲ್ದಾಣವಾಗಿದೆ. ಇಲ್ಲಿಂದ ಸುಮಾರು 100 ಕಿ.ಮೀ ದೂರದಲ್ಲಿ ಅಜಂತಾ ಗುಹೆಗಳು ಇವೆ.

ರೈಲ್ವೆ ಮಾರ್ಗದ ಮೂಲಕ

ರೈಲ್ವೆ ಮಾರ್ಗದ ಮೂಲಕ

ಅಜಂತ ಗುಹೆಗೆ ಸಮೀಪದ ರೈಲ್ವೆ ಮಾರ್ಗವೆಂದರೆ ಅದು ಔರಂಗಬಾದ್ ಮತ್ತು ಜಲಗಾಂವ್ ಆಗಿದೆ. ಇಲ್ಲಿಂದ ಅಜಂತಾಗೆ ಅತ್ಯಂತ ಸಮೀಪದಲ್ಲಿದೆ.

ಬಸ್ಸು ಮಾರ್ಗದ ಮೂಲಕ

ಬಸ್ಸು ಮಾರ್ಗದ ಮೂಲಕ

ಬಸ್ಸು ಮಾರ್ಗದ ಮೂಲಕ ಅಜಂತ ಗುಹೆಗೆ ತೆರಳಬೇಕಾದರೆ ಮೊದಲು ಔರಂಗಬಾದ್‍ಗೆ ತಲುಪಿ ನಂತರ 2 ರಿಂದ 3 ಗಂಟೆಗಳ ಕಾಲ ಪ್ರಯಾಣವನ್ನು ಮಾಡಬೇಕಾಗುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X