Search
  • Follow NativePlanet
Share
» »ಹೂಗ್ಲಿ ನದಿತಟದ ಬೇಲೂರು ಮಠ ಹಾಗೂ ದಕ್ಷಿಣೇಶ್ವರ

ಹೂಗ್ಲಿ ನದಿತಟದ ಬೇಲೂರು ಮಠ ಹಾಗೂ ದಕ್ಷಿಣೇಶ್ವರ

By Vijay

ಭಾರತ ಕಂಡ ಮಹಾ ಗುರುಗಳ ಪೈಕಿ ರಾಮಕೃಷ್ಣ ಪರಮಹಂಸರು ಸಹ ಒಬ್ಬರು. ತಮ್ಮ ಚಿಕ್ಕ ವಯಸಿನಲ್ಲೆ ಅಧ್ಯಾತ್ಮಿಕತೆಯಲ್ಲಿ ಅತೀವವಾಗಿ ಆಕರ್ಷಿತರಾಗಿದ್ದ ಇವರು ಕಾಳಿ ದೇವಿಯ ಪರಮ ಭಕ್ತರು. ಮನುಷ್ಯನ ಜೀವನದ ಪರಮೋದ್ದೇಶ ದೈವ ಸಾಕ್ಷಾತ್ಕಾರವೆ ಆಗಿರಬೇಕು ಎಂದು ಸಾರಿದ್ದ ಇವರ ಪರಮ ಶಿಷ್ಯ ಸ್ವಾಮಿ ವಿವೇಕಾನಂದರು ಇವರಿಂದ ಹೆಚ್ಚು ಪ್ರಭಾವಿತರಾಗಿದ್ದರು.

ಇಂದು ಸ್ವಾಮಿ ವಿವೇಕಾನಂದರನ್ನು ಭಾರತದ ಯುವ ಶಕ್ತಿಯ ಪ್ರೇರಣಾ ಶಕ್ತಿ, ಧೈರ್ಯದ ಚಿಲುಮೆ, ಯುವ ಸಂತ ಎಂದೆಲ್ಲ ಕೊಂಡಾಡಲಾಗುತ್ತದೆ. ರಾಮಕೃಷ್ಣರ ಆದರ್ಶ ಉಪದೇಶಗಳನ್ನು ಪಸರಿಸುವ ನಿಟ್ಟಿನಲ್ಲಿ ಇವರು ಸ್ಥಾಪಿಸಿದ ಸಂಸ್ಥೆಯ ರಾಮಕೃಷ್ಣ ಮಿಷನ್. ಇದೊಂದು ಧಾರ್ಮಿಕ ಸಂಸ್ಥೆಯಾಗಿದ್ದು ಸನಾತನ ಧರ್ಮದ ಆಧ್ಯಾತ್ಮಿಕತೆಯನ್ನು, ವೇದ ಸಾರಗ ಳನ್ನು ಜಗತಿನೆಲ್ಲೆಡೆ ಪಸರಿಸುವ ನಿಟ್ಟಿನಲ್ಲಿ ನಿರತವಾದ ಸಾಮಾಜಿಕ ಸಂಸ್ಥೆ.

ನಿಮಗಿಷ್ಟವಾಗಬಹುದಾದ : ಗುರು ರಾಯರು ನೆಲೆಸಿರುವ ಮಂತ್ರಾಲಯ

ಈ ಸಂಸ್ಥೆಯ ಕೇಂದ್ರ ಬಿಂದುವಾಗಿ, ಜಗತಿನೆಲ್ಲೆಡೆಯಿರುವ ಸ್ವಾಮಿ ವಿವೇಕಾನಂದ ಹಾಗೂ ರಾಮಕೃಷ್ಣರ ಅನುಯಾಯಿಗಳನ್ನು ಆಕರ್ಷಿಸುವ ಬೇಲೂರು ಮಠವು ಕಂಗೊಳಿಸುತ್ತದೆ. ಪಶ್ಚಿಮ ಬಂಗಾಳ ರಾಜ್ಯದ ಕೊಲ್ಕತ್ತಾ ಬಳಿಯಿರುವ ಬೇಲೂರು ಪಟ್ಟಣದ ಹೂಗ್ಲಿ ನದಿಯ ತಟದಲ್ಲಿ ಈ ಭವ್ಯ ಬೇಲೂರು ರಾಮಕೃಷ್ಣ ಮಠವಿದೆ.

ಕೊಲ್ಕತ್ತಾದ ಪ್ರವಾಸೋದ್ಯಮದಲ್ಲಿ ಇಲ್ಲವೆ ಕೊಲ್ಕತ್ತಾಗೆ ಭೇಟಿ ನೀಡಿದ ಸಂದರ್ಭದಲ್ಲಿ ನೋಡಲೇಬೇಕಾದ ಪ್ರಮುಖ ಪ್ರವಾಸಿ ಆಕರ್ಷಣೆಗಳ ಪೈಕಿ ಒಂದಾಗಿದೆ ಬೇಲೂರು ರಾಮಕೃಷ್ಣ ಮಠ ಅಥವಾ ಮಂದಿರ. ಪ್ರಸ್ತುತ ಲೇಖನದ ಮೂಲಕ ಈ ಭವ್ಯ ಮಠದ ಗಮ್ಯ ಇತಿಹಾಸ ತಿಳಿಯಿರಿ.

ಬೇಲೂರು ಮಠ ಹಾಗೂ ದಕ್ಷಿಣೇಶ್ವರ

ಬೇಲೂರು ಮಠ ಹಾಗೂ ದಕ್ಷಿಣೇಶ್ವರ

ಸ್ವಾಮಿ ವಿವೇಕಾನಂದರು ಅಲೆದಾಡುವ ಸನ್ಯಾಸಿಯಾಗಿ ಭಾರತದ ತುಂಬೆಲ್ಲ ಸಂಚರಿಸಿದ್ದರು. ದೆಹಲಿ, ರಾಜಸ್ಥಾನ, ಗುಜರಾತ್, ಮಹಾರಾಷ್ಟ್ರ, ಕರ್ನಾಟಕ, ತಮಿಳುನಾಡು ಹೀಗೆ ಎಲ್ಲ ರಾಜ್ಯಗಳಿಗು ಭೇಟಿ ನೀಡಿದ್ದರು. ನಂತರ
ಅಮೇರಿಕ ಹಾಗೂ ಯುರೋಪ್ ದೇಶಗಳಿಗೆ ಭೇಟಿ ನೀಡಿದ್ದಾಗ ಅಲ್ಲಿನ ಕಟ್ಟಡಗಳ ಗೋಥಿಕ್, ರಿನೈಸ್ಸನ್ಸ್ ನಂತಹ ವಾಸ್ತು ಶೈಲಿಗಳಿಂದ ಪ್ರಭಾವಿತರಾಗಿದ್ದರು.

ಚಿತ್ರಕೃಪೆ: Lisa.davis

ಬೇಲೂರು ಮಠ ಹಾಗೂ ದಕ್ಷಿಣೇಶ್ವರ

ಬೇಲೂರು ಮಠ ಹಾಗೂ ದಕ್ಷಿಣೇಶ್ವರ

ಭಾರತದಲ್ಲಿ ವಿವೇಕಾನಂದರು ರಾಮಕೃಷ್ಣ ಮಿಷನ್ ಸ್ಥಾಪಿಸಿ ಅದರ ಕೇಂದ್ರ ಕಚೇರಿಯನ್ನಾಗಿ ಬೇಲೂರು ಮಠವನ್ನು ಸ್ಥಾಪಿಸಿದರು. ಹಿಂದೂ, ಮುಸ್ಲಿಮ್, ಕ್ರೈಸ್ತ ಧರ್ಮಗಳ ಗುರುತುಗಳನ್ನೊಳಗೊಂಡಂತೆ ಬೇಲುರು ಮಠದ ರಚನೆಯ ವಿನ್ಯಾಸವನ್ನು ಕಲ್ಪಿಸಿಕೊಂಡು ಸಾಕಾರಗೊಳಿಸಿದರು. ಅಲ್ಲದೆ ಉತ್ತರಾಖಂಡದ ಚಂಪಾವತ್ ನಲ್ಲಿ ಅದ್ವೈತ ಆಶ್ರಮದ ಸ್ಥಾಪನೆಯನ್ನೂ ಸಹ ಮಾಡಿದರು.

ಚಿತ್ರಕೃಪೆ: Kunal Dalui

ಬೇಲೂರು ಮಠ ಹಾಗೂ ದಕ್ಷಿಣೇಶ್ವರ

ಬೇಲೂರು ಮಠ ಹಾಗೂ ದಕ್ಷಿಣೇಶ್ವರ

ವಿವೇಕಾನಂದ ಸಹೋದರ ಹಾಗೂ ಸನ್ಯಾಸಿಯೂ ಆಗಿದ್ದ ಸ್ವಾಮಿ ವಿಜ್ಞಾನಾನಂದರವರು ಪೂರ್ವ ಆಶ್ರಮದಲ್ಲಿ ಒಬ್ಬ ಸಿವಿಲ್ ಇಂಜಿನಿಯರ್ ಆಗಿದ್ದರು. ಆ ಕಾರಣ ವಿವೇಕಾನಂದರು ತಮ್ಮ ಕಟ್ಟಡದ ವಿನ್ಯಾಸವನ್ನು ಅವರಿಗೆ ಹೇಳಿ ಅದಕ್ಕೆ ತಕ್ಕುದಾಗಿ ಈ ಮಠದ ನಿರ್ಮಾಣ ಮಾಡಿದರು.

ಚಿತ್ರಕೃಪೆ: Ramakrishna Mission

ಬೇಲೂರು ಮಠ ಹಾಗೂ ದಕ್ಷಿಣೇಶ್ವರ

ಬೇಲೂರು ಮಠ ಹಾಗೂ ದಕ್ಷಿಣೇಶ್ವರ

ಮೂಲತಃ ಈ ಆಶ್ರಮವು ಸನ್ಯಾಸಿಯಾಗುವ ತೀವ್ರ ಬಯಕೆಯಿರುವ ನವ ಯುವಕರನ್ನು ಸ್ವೀಕರಿಸಿ, ದೀಕ್ಷೆ ನೀಡಿ, ರಾಮಕೃಷ್ಣರ ಉಪದೇಶಗಳನ್ನು ಭೋದಿಸಿ, ಸಂಸ್ಥೆಯ ಸನ್ಯಾಸತ್ವ ನೀಡಿ, ದೇಶ ಸಂಚಾರ ಹಾಗೂ ನೀತಿ ಭೋದೆಗಳ ತರಬೇತಿ ನೀಡಲು ಸ್ಥಾಪನೆಯಾಗಿತ್ತು.

ಚಿತ್ರಕೃಪೆ: Ramakrishna Mission, Belur Math

ಬೇಲೂರು ಮಠ ಹಾಗೂ ದಕ್ಷಿಣೇಶ್ವರ

ಬೇಲೂರು ಮಠ ಹಾಗೂ ದಕ್ಷಿಣೇಶ್ವರ

40 ಎಕರೆಯಷ್ಟು ವಿಶಾಲವಾದ ಪ್ರದೇಶದಲ್ಲಿ ಹರಡಿರುವ ಬೇಲೂರು ಮಠವು ತನ್ನ ಆವರಣದಲ್ಲಿ ರಾಮಕೃಷ್ಣರಿಗೆ ಮುಡಿಪಾದ, ಸ್ವಾಮಿ ವಿವೇಕಾನಂದರಿಗೆ ಮುಡಿಪಾದ ಹಾಗೂ ಶಾರದಾ ದೇವಿಗೆ ಮುಡಿಪಾದ ದೇಗುಲಗಳನೊಳಗೊಂಡಿದೆ. ಅಲ್ಲದೆ ಇಲ್ಲಿ ವಸ್ತು ಸಂಗ್ರಹಾಲಯವೂ ಸಹ ಇದ್ದು ಅಲ್ಲಿ ರಾಮಕೃಷ್ಣರಿಗೆ ಹಾಗೂ ಮಿಷನ್ ಗೆ ಸಂಬಂಧಿಸಿದಂತೆ ಹಲವಾರಿ ಐತಿಹಾಸಿಕ ವಸ್ತುಗಳನ್ನು ಪ್ರದರ್ಶನಕ್ಕಿಡಲಾಗಿದೆ.

ಚಿತ್ರಕೃಪೆ: Arne Hückelheim

ಬೇಲೂರು ಮಠ ಹಾಗೂ ದಕ್ಷಿಣೇಶ್ವರ

ಬೇಲೂರು ಮಠ ಹಾಗೂ ದಕ್ಷಿಣೇಶ್ವರ

ಬೇಲೂರು ಮಠದಲ್ಲಿರುವ ರಾಮಕೃಷ್ಣ ದೇವಾಲಯವು ಭಾರತದ ವಿವಿಧ ಧರ್ಮಗಳ ವೈವಿಧ್ಯತೆಯನ್ನು ಸಡಗರದಿಂದ ಆಚರಿಸುವ ಭವನವಾಗಿದೆ. ವಿವಿಧ ದಿಕ್ಕುಗಳಿಂದ ನೋಡಿದಾಗ ಈ ಮಂದಿರವು ದೇವಸ್ಥಾನ, ಮಸೀದಿ ಹಾಗೂ ಚರ್ಚಿನಂತೆ ಕಂಡುಬರುತ್ತದೆ. 1938 ಜನವರಿ 14 ಮಕರ ಸಂಕ್ರಾಂತಿಯ ದಿನದಂದು ಈ ದೇವಾಲಯವನ್ನು ಉದ್ಘಾಟಿಸಲಾಯಿತು.

ಚಿತ್ರಕೃಪೆ: Kunal Dalui

ಬೇಲೂರು ಮಠ ಹಾಗೂ ದಕ್ಷಿಣೇಶ್ವರ

ಬೇಲೂರು ಮಠ ಹಾಗೂ ದಕ್ಷಿಣೇಶ್ವರ

ಪ್ರವೇಶ ದ್ವಾರವು ವಿವಿಧ ಧರ್ಮಗಳ ಪವಿತ್ರ ಸಂಕೇತಗಳನೊಳಗೊಂಡಿದ್ದು, ಇದೊಂದು ಸರ್ವ ಧರ್ಮದ ಸಮಾನತೆಯ ಭವನವಾಗಿದೆ ಎಂದು ಭೇಟಿ ನೀಡಿದವರಿಗೆ ಸಾರಿ ಸಾರಿ ಹೇಳುತ್ತಿರುವಂತಿದೆ.

ಚಿತ್ರಕೃಪೆ: Rakeshmallick27

ಬೇಲೂರು ಮಠ ಹಾಗೂ ದಕ್ಷಿಣೇಶ್ವರ

ಬೇಲೂರು ಮಠ ಹಾಗೂ ದಕ್ಷಿಣೇಶ್ವರ

ಮುಖ್ಯ ದೇವಾಲಯದ ಎತ್ತರವು 112.5 ಅಡಿಗಳು. ದಕ್ಷಿಣ ಭಾರತದ ದೇಗುಲಗಳ ಗೋಪುರಗಳಂತೆ ಈ ದೇವಾಲಯ ಎತ್ತರವಿದ್ದು ಅದಕ್ಕೆ ಆಧಾರವಾಗಿರುವ ಖಂಬಗಳು ಬೌದ್ಧ ವಾಸ್ತು ಶೈಲಿಯ ಪ್ರಭಾವ ಹೊಂದಿರುವುದನ್ನು ಗಮನಿಸಬಹುದು.

ಚಿತ್ರಕೃಪೆ: Kunal Dalui

ಬೇಲೂರು ಮಠ ಹಾಗೂ ದಕ್ಷಿಣೇಶ್ವರ

ಬೇಲೂರು ಮಠ ಹಾಗೂ ದಕ್ಷಿಣೇಶ್ವರ

ಹೀಗೆ ದೇವಾಲಯವನ್ನು ಸೂಕ್ಷ್ಮವಾಗಿ ಗಮನಿಸಿದರೆ ಭಾರತದ ವೈವಿಧ್ಯತೆಯ ವಿವಿಧ ಗುಣ ಲಕ್ಷಣಗಳನ್ನು ಇಲ್ಲಿ ಗಮನಿಸಬಹುದು. ರಚನೆಗಳ ಒಂದೊಂದು ಭಾಗಗಳು ಭಾರತದ ಶ್ರೀಮಂತ ಇತಿಹಾಸ ಹೇಳುವ ಅಪರೂಪದ ಸ್ಮಾರಕಗಳ ಗುಣ ಲಕ್ಷಣಗಳನ್ನು ಹೊಂದಿರುವುದು ಕಾಣಬಹುದು.

ಚಿತ್ರಕೃಪೆ: Arunankapilan

ಬೇಲೂರು ಮಠ ಹಾಗೂ ದಕ್ಷಿಣೇಶ್ವರ

ಬೇಲೂರು ಮಠ ಹಾಗೂ ದಕ್ಷಿಣೇಶ್ವರ

ಮಠದಲ್ಲಿ ರಾಮಕೃಷ್ಣರ ಪೂರ್ಣ ಪ್ರಮಾಣದ ವಿಗ್ರಹವಿದ್ದು ಡಮರುವೊಂದರ ಮೇಲೆ ಅವರು ಕುಳಿತಿರುವುದನ್ನು ಕಾಣಬಹುದು. ಅವರ ಪಾದ ಕಮಲಗಳಲ್ಲಿ ಗುರುಗಳ ಪವಿತ್ರ ಅವಶೇಷಗಳನ್ನು ಸಂರಕ್ಷಿಸಿಡಲಾಗಿದೆ. ಬ್ರಾಹ್ಮಿ ಹಂಸವೊಂದಿದ್ದು ಪರಮಹಂಸವನ್ನು ಸೂಚಿಸುವಂತಿದೆ.

ಚಿತ್ರಕೃಪೆ: Belur Math, Calcutta

ಬೇಲೂರು ಮಠ ಹಾಗೂ ದಕ್ಷಿಣೇಶ್ವರ

ಬೇಲೂರು ಮಠ ಹಾಗೂ ದಕ್ಷಿಣೇಶ್ವರ

ಇದಲ್ಲದೆ ಸ್ವಾಮಿ ವಿವೇಕಾನಂದರಿಗೆ ಮುಡಿಪಾದ ದೇವಾಲಯವನ್ನೂ ಸಹ ಬೇಲೂರು ಮಠದಲ್ಲಿ ಕಾಣಬಹುದು. ವಿವೇಕಾನಮ್ದರ ಸಮಾಧಿ ಸ್ಥಳದ ಮೇಲೆಯೆ ಈ ದೇವಾಲಯ ನಿರ್ಮಾಣವಾಗಿರುವುದು ವಿಶೇಷ.

ಚಿತ್ರಕೃಪೆ: wikipedia

ಬೇಲೂರು ಮಠ ಹಾಗೂ ದಕ್ಷಿಣೇಶ್ವರ

ಬೇಲೂರು ಮಠ ಹಾಗೂ ದಕ್ಷಿಣೇಶ್ವರ

ಬೇಲೂರು ಮಠ ಪ್ರವೇಶಿಸುತ್ತಿದ್ದಂತೆಯೆ ಮೊದಲಿಗೆ ಕಂಡುಬರುವುದು ಶಾರದಾ ದೇವಿಯ ದೇವಾಲಯ. ಶಾರದಾ ದೇವಿಯು ರಾಮಕೃಷ್ಣರ ಇಹ ಜೀವನದ ಮಡದಿಯಾಗಿದ್ದರೂ ಆಧ್ಯಾತ್ಮಿಕವಾಗಿ ಸಾಧನಾ ಮಾರ್ಗದಲ್ಲಿದ್ದರು.

ಚಿತ್ರಕೃಪೆ: Rakeshmallick27

ಬೇಲೂರು ಮಠ ಹಾಗೂ ದಕ್ಷಿಣೇಶ್ವರ

ಬೇಲೂರು ಮಠ ಹಾಗೂ ದಕ್ಷಿಣೇಶ್ವರ

ಶಾರದಾ ದೇವಿ ದೇವಾಲಯದ ಬಳಿಯಲ್ಲೆ ಸ್ವಾಮಿ ಬ್ರಹ್ಮಾನಂದರ ದೇವಾಲಯವನ್ನೂ ಸಹ ಕಾನಬಹುದು. ಇವರು ರಾಮಕೃಷ್ಣರ ನೇರ ಶಿಷ್ಯ ಹಾಗೂ ಮಠ ಮತ್ತು ರಾಮಕೃಷ್ಣ ಮಿಷನ್ನಿನ ಮೊದಲ ಅಧ್ಯಕ್ಷರು.

ಚಿತ್ರಕೃಪೆ: Rakeshmallick27

ಬೇಲೂರು ಮಠ ಹಾಗೂ ದಕ್ಷಿಣೇಶ್ವರ

ಬೇಲೂರು ಮಠ ಹಾಗೂ ದಕ್ಷಿಣೇಶ್ವರ

ಇನ್ನೊಂದು ತಿಳಿಯಬೇಕಾದ ಅಂಶವೆಂದರೆ ಮೊದಲಿನಿಂದಲೂ ಬೇಲೂರು ಮಠವು ಸಮಾಜಮುಖಿ ಕಾರ್ಯಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದೆ. ಆರೋಗ್ಯ ಶಿಬಿರಗಳಾಗಿರಬಹುದು, ಮಹಿಳಾ ಕಲ್ಯಾಣ ಕೆಲಸಗಳಾಗಿರಬಹುದು, ಶಿಕ್ಷಣ, ಸಾಂಸ್ಕೃತಿಕ ಕಾರ್ಯಕ್ರಮಗಳು ಹೀಗೆ ಅನೇಕ ಚಟುವಟಿಕೆಗಳಲ್ಲಿ ಬೇಲೂರು ಮಠದ ಪಾತ್ರ ಅಪಾರ. ನೀವೇನಾದರೂ ಕೊಲ್ಕತ್ತಾಗೆ ಭೇಟಿ ನೀಡಿದರೆ ಈ ಮಠಕ್ಕೆ ಭೇಟಿ ನೀಡುವುದನ್ನು ಮಾತ್ರ ಮರೆಯದಿರಿ.

ಚಿತ್ರಕೃಪೆ: Subhashish Panigrahi

ಬೇಲೂರು ಮಠ ಹಾಗೂ ದಕ್ಷಿಣೇಶ್ವರ

ಬೇಲೂರು ಮಠ ಹಾಗೂ ದಕ್ಷಿಣೇಶ್ವರ

ಇನ್ನೂ ಬೇಲೂರು ಮಠವನ್ನು ತಲುಪುವುದು ಬಹಳ ಸುಲಭವಾಗಿದೆ. ಕೊಲ್ಕತ್ತಾ ನಗರ ಕೇಂದ್ರದಿಂದ 30 ಕಿ.ಮೀ ಗಳಷ್ಟು ದೂರದಲ್ಲಿ ಬೇಲೂರು ಮಠವಿದ್ದು ಟ್ಯಾಕ್ಸಿ ಹಾಗೂ ರಿಕ್ಷಾಗಳು ದೊರೆಯುತ್ತವೆ. ಇಲ್ಲವೆಂದರೆ ಕೊಲ್ಕತ್ತಾ ನಗರದ ಸಿಯಾಲದಹ (ಸಿಲ್ಡಾ) ರೈಲು ನಿಲ್ದಾಣದಿಂದ ಬ್ಯಾಲಿ ಘಾಟ್ ವರೆಗೆ ರೈಲುಗಳು ದೊರಕುತ್ತವೆ. ಅಲ್ಲಿಂದ ಬೇಲೂರು ಮಠವು ಕೇವಲ ಮೂರು ಕಿ.ಮೀ ದೂರವಿದ್ದು ಆಟೋಗಳು ದೊರೆಯುತ್ತವೆ. ಬೇಲೂರು ಮಠದಲ್ಲಿರುವ ದುರ್ಗಾ ವಿಗ್ರಹ.

ಚಿತ್ರಕೃಪೆ: Rakeshmallick27

ಬೇಲೂರು ಮಠ ಹಾಗೂ ದಕ್ಷಿಣೇಶ್ವರ

ಬೇಲೂರು ಮಠ ಹಾಗೂ ದಕ್ಷಿಣೇಶ್ವರ

ಬೇಲೂರು ಮಠವನ್ನು ನೋಡಿದ ನಂತರ ನಿಮ್ಮಲ್ಲಿ ಸಮಯವಿದ್ದರೆ ಗಂಗೆಯ ರೂಪವೆ ಆಗಿರುವ ಹೂಗ್ಲಿ ನದಿಯಲ್ಲಿ ದೋಣಿ ಸವಾರಿ ಮಾಡುತ್ತ ಕೇವಲ ಅರ್ಧ ಘಂಟೆಯಲ್ಲಿ ದಕ್ಷಿಣೇಶ್ವರಕ್ಕೆ ತಲುಪಬಹುದು. ದಕ್ಷಿಣೇಶ್ವರವು ಕಾಳಿ ಮಂದಿರಕ್ಕೆ ಪ್ರಸಿದ್ಧವಾಗಿದ್ದು ರಾಮಕೃಷ್ಣರು ಈ ಕಾಳಿ ದೇವಿಯ ಆರಾಧಕರು ಹಾಗೂ ದೇವಾಲಯದ ಅರ್ಚಕರೂ ಸಹ ಆಗಿದ್ದರು.

ಚಿತ್ರಕೃಪೆ: Ms Sarah Welch

ಬೇಲೂರು ಮಠ ಹಾಗೂ ದಕ್ಷಿಣೇಶ್ವರ

ಬೇಲೂರು ಮಠ ಹಾಗೂ ದಕ್ಷಿಣೇಶ್ವರ

ಈ ದೇವಾಲಯದ ಅಧಿ ದೇವತೆ ಕಾಳಿ ದೇವಿಯ ಅವತಾರವಾದ ಭವತಾರಿಣಿ, ಅಂದರೆ ಜೀವನವೆಂಬ ಸಂಸಾರ ಚಕ್ರದಿಂದ ಮುಕ್ತಿ ನೀಡಿ ಮೋಕ್ಷ ಕರುಣಿಸುವವಳು ಎಂದರ್ಥ. ನವರತ್ನಗಳ ಶೈಲಿಯಲ್ಲಿ ನಿರ್ಮಾಣವಾಗಿರುವ ಈ ದೇವಾಲಯವನ್ನು ನೋಡಿದಾಗ ಒಮ್ಮೆ ದಿಗ್ಭ್ರಮೆಗೊಳ್ಳುವುದು ಖಂಡಿತ. ಏಕೆಂದರೆ ಈ ಒಂದು ಅದ್ಭುತ ದೇವಾಲಯ ವರ್ಣಚಿತ್ರದಂತೆ ಸುಂದರವಾಗಿ ಕಂಡುಬರುತ್ತದೆ.

ಚಿತ್ರಕೃಪೆ: Knath

ಬೇಲೂರು ಮಠ ಹಾಗೂ ದಕ್ಷಿಣೇಶ್ವರ

ಬೇಲೂರು ಮಠ ಹಾಗೂ ದಕ್ಷಿಣೇಶ್ವರ

ಬೇಲೂರು ಮಠಕ್ಕಿಂತಲೂ ದೊಡ್ಡದಾಗಿರುವ ಈ ದೇವಾಲಯವನ್ನು ನಿರ್ಮಿಸಿದವರು ಮಾಹಿಶ್ಯ (ಬಂಗಾಳಿ ಹಿಂದು ಧರ್ಮದ ಒಕ್ಕಲಿಗ) ಜಾತಿಯ ರಾಣಿ ರಷ್ಮೋನಿ. ದೈವ ಭಕ್ತೆ ಹಾಗೂ ಅಪಾರ ಸಿರಿವಂತೆಯಾಗಿದ್ದ ರಾಣಿಯು ಒಂದೊಮ್ಮೆ ತನ್ನ ಬಂಧು ಮಿತ್ರರೊಂದಿಗೆ ಕಾಶಿಗೆ ಹೋಗಬಯಸಿದ್ದಳು. ಅದರಂತೆ ಎಲ್ಲ ಸಿದ್ಧತೆಗಳು ಪೂರ್ಣಗೊಂಡು ಮರು ದಿನ ದೋಣಿಗಳಲ್ಲಿ ಸಂಚರಿಸಬೇಕೆನ್ನುವಾಗ ಹಿಂದಿನ ದಿನ ರಾತ್ರಿಯಲ್ಲಿ ಕಾಳಿ ದೇವಿಯು ಅವಳ ಸ್ವಪನದಲ್ಲಿ ಪ್ರತ್ಯಕ್ಷಳಾಗಿ.....

ಚಿತ್ರಕೃಪೆ: Kunal Dalui

ಬೇಲೂರು ಮಠ ಹಾಗೂ ದಕ್ಷಿಣೇಶ್ವರ

ಬೇಲೂರು ಮಠ ಹಾಗೂ ದಕ್ಷಿಣೇಶ್ವರ

"ನೀನು ಕಾಶಿಗೆ ಬರುವ ಅಗತ್ಯವಿಲ್ಲ, ಇಲ್ಲಿಯೆ ಸುಂದರವಾದ ದೇವಾಲಯವೊಂದನ್ನು ನಿರ್ಮಿಸಿ ನನ್ನನ್ನು ಪೂಜಿಸು, ನಾ ವಿಗ್ರಹದಲ್ಲಿ ಆಹ್ವಾನಗೊಂಡು ಅದನ್ನು ಸ್ವಿಕರಿಸುವೆ" ಎಂದು ಹೇಳಿದ ಹಾಗಾಯಿತು. ತಕ್ಷಣವೆ ರಾಣಿಯು ದಕ್ಷಿಣೇಶ್ವರದಲ್ಲಿ 20 ಎಕರೆಗಳಷ್ಟು ಜಾಅಗವೊಂದನ್ನು ಇಂಗ್ಲಿಷಿನವನೊಬ್ಬನಿಂದ ಖರೀದಿಸಿ, ಅಲ್ಲಿ ದೇವಾಲಯವನ್ನು ಸುಂದರವಾಗಿ ನಿರ್ಮಿಸಿದಳು.

ಚಿತ್ರಕೃಪೆ: Jagadhatri

ಬೇಲೂರು ಮಠ ಹಾಗೂ ದಕ್ಷಿಣೇಶ್ವರ

ಬೇಲೂರು ಮಠ ಹಾಗೂ ದಕ್ಷಿಣೇಶ್ವರ

ನಂತರ ಈ ದೇವಾಲಯಕ್ಕೆ ರಾಮಕುಮಾರ್ ಚಟ್ಟೋಪಾಧ್ಯಾಯ ಎನ್ನ್ನುವವರು ಅರ್ಚಕರಾಗಿ ಸೇವೆ ಸಲ್ಲಿಸಿದರು. ಅವರ ಸಾವಿನ ನಂತರ ರಾಮಕೃಷ್ಣ ಪರಮಹಂಸರು ಈ ದೇವಾಲಯದ ಅರ್ಚಕರಾಗಿ ತಮ್ಮ ಮಡದಿ ಶಾರದಾ ದೇವಿಯ ಜೊತೆ ಇಲ್ಲಿ ನೆಲೆಸಿದರು. ಇವರು ತಮ್ಮ ಕೊನೆಯ ತನಕ ಇಲ್ಲಿ ಸೇವೆ ಸಲ್ಲಿಸಿ, ದಕ್ಷಿಣೇಶ್ವರ ಕಾಳಿ ಮಂದಿರಕ್ಕೆ ಅಪಾರ ಜನಪ್ರೀಯತೆ ಬರುವಂತೆ ಮಾಡುವಲ್ಲಿ ಯಶಸ್ವಿಯಾದರು.

ಚಿತ್ರಕೃಪೆ: Htekas98

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X