Search
  • Follow NativePlanet
Share
» »ಮಲೆ ಮಹದೇಶ್ವರ ಬೆಟ್ಟ ಹಾಗೂ ಮೆಟ್ಟೂರು

ಮಲೆ ಮಹದೇಶ್ವರ ಬೆಟ್ಟ ಹಾಗೂ ಮೆಟ್ಟೂರು

By Vijay

ಕರ್ನಾಟಕದಲ್ಲಿ ಶಿವನಿಗೆ ಮುಡಿಪಾದ ಅನೇಕ ದೇವಸ್ಥಾನಗಳಿರುವುದನ್ನು ಕಾಣಬಹುದು. ಕೆಲವು ಪುರಾತನ ಅಂದರೆ ರಾಜರಾಳುತ್ತಿದ್ದ ಕಾಲದಲ್ಲಿ ನಿರ್ಮಿಸಲ್ಪಟ್ಟ ದೇವಾಲಯಗಳಾಗಿದ್ದರೆ, ಇನ್ನೂ ಕೆಲವು ಆಧುನಿಕ ಯುಗದ ನಿರ್ಮಾಣಗಳಾಗಿವೆ. ಮತ್ತೆ ಕೆಲವು ವಿಶೇಷ ಸ್ಥಳಗಳಲ್ಲಿ ನಿರ್ಮಿಸಲ್ಪಟ್ಟ, ನಂಬಿಕೆಯಂತೆ ಸ್ವಯಂಭು ಶಿವಲಿಂಗಗಳ ಸ್ಥಳಗಳಾಗಿ ಪ್ರಸಿದ್ಧಿ ಪಡೆದಿವೆ.

ಕ್ಲಿಯರ್ ಟ್ರಿಪ್ ನಿಂದ ಹೋಟೆಲ್ ಮತ್ತು ಫ್ಲೈಟ್ ಬುಕ್ಕಿಂಗ್ ಮೇಲೆ 5000 ರೂ ಹಣ ಮರಳಿ ಪಡೆಯಿರಿ

ಹೀಗೆ ಅರಸುತ್ತ ಸಾಗಿದರೆ ಶಿವನ ಅನೇಕ ರೋಚಕ ಸ್ಥಳಗಳು ನಮಗೆ ಕಂಡುಬರುತ್ತವೆ. ಅಂತಹ ಒಂದು ಸ್ಥಳಗಳ ಪೈಕಿ ಒಂದಾಗಿದೆ ಮಲೆ ಮಹಾದೇಶ್ವರ. ಕರ್ನಾಟಕದ ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲ ತಾಲೂಕಿನಲ್ಲಿರುವ ಈ ತೀರ್ಥ ಕ್ಷೇತ್ರ ಮುಖ್ಯವಾಗಿ ಬಹುಪಾಲು ಲಿಂಗಾಯತರು ಪಾಲಿಸಿಕೊಂಡು ಬಂದ ಪುಣ್ಯ ಕ್ಷೇತ್ರವಾಗಿದೆ.

ವಿಶೇಷ ಲೇಖನ : ಶ್ರೀಶೈಲಂ ಆಣೆಕಟ್ಟು

ಎಂ.ಎಂ ಬೆಟ್ಟಗಳು ಎಂದೂ ಸಹ ಕರೆಯಲ್ಪಡುವ ಮಲೆ ಮಹಾದೇಶ್ವರವು ಬೆಂಗಳೂರಿನಿಂದ 210 ಕಿ.ಮೀ ಹಾಗೂ ಮೈಸೂರಿನಿಂದ 130 ಕಿ.ಮೀ ಗಳಷ್ಟು ದೂರದಲ್ಲಿದೆ. ಬೆಂಗಳೂರಿನಿಂದ ನಿಗದಿತ ಸಮಯಗಳಲ್ಲಿ ನೇರವಾಗಿ ಬಸ್ಸುಗಳು ದೊರೆಯುತ್ತವಾದರೂ ಕೊಳ್ಳೆಗಾಲದಿಂದ ಸಾಕಷ್ಟು ಬಸ್ಸುಗಳು ದೊರೆಯುತ್ತವೆ.

ವಿಶೇಷ ಲೇಖನ : ಅಕ್ಕ ಮಹಾದೇವಿಯ ಅಜ್ಞಾತ ಗುಹೆ

ಮಲೆ ಮಹದೇಶ್ವರ ಬೆಟ್ಟದಿಂದ ಕೇವಲ 45 ಕಿ.ಮೀ ಮುಂದೆ ತಮಿಳುನಾಡು ರಾಜ್ಯದೆಡೆಗೆ ಚಲಿಸಿದಾಗ ಸಿಗುವ ಜಲಾಶಯವೆ ಸ್ಟ್ಯಾನ್ಲೇ ಜಲಾಶಯ. ಇದೂ ಸಹ ಒಂದು ಸುಂದರ ಪ್ರವಾಸಿ ಆಕರ್ಷಣೆಯಾಗಿದೆ. ಮಲೆ ಮಹದೇಶ್ವರದ ಕುರಿತು ಇರುವ ಸ್ಲೈಡುಗಳನ್ನು ಓದಿದ ನಂತರ ಈ ಜಲಾಶಯದ ಬಗ್ಗೆಯೂ ತಿಳಿದುಕೊಳ್ಳಿ.

ತೆರಳುವ ಬಗೆ (ಬೆಂಗಳೂರಿನಿಂದ):

ಬೆಂಗಳೂರು - ರಾಮನಗರ - ಚೆನ್ನಪಟ್ಟಣ - ಮದ್ದೂರು (ಇಲ್ಲಿಂದ ಎಡ ತಿರುವು) - ಮಳವಳ್ಳಿ - ಕೊಳ್ಳೆಗಾಲ - ಹಣೂರು - ಕೌಡಳ್ಳಿ - ಮಲೆ ಮಹದೇಶ್ವರ (ಒಟ್ಟು ದೂರ ಸುಮಾರು 210 ಕಿ.ಮೀ)

ಮೈಸೂರಿನಿಂದ:

ಮೈಸೂರು - ಟಿ.ನರಸೀಪುರ - ಕೊಳ್ಳೆಗಾಲ - ಹಣೂರು - ಕೌಡಳ್ಳಿ - ಮಲೆ ಮಹದೇಶ್ವರ (ಒಟ್ಟು ದೂರ ಸುಮಾರು 130 ಕಿ.ಮೀ).

ಮಲೆ ಮಹದೇಶ್ವರ ಬೆಟ್ಟ:

ಮಲೆ ಮಹದೇಶ್ವರ ಬೆಟ್ಟ:

ಶಿವನ ಅವತಾರವಾದ, ಮಲೆ (ಬೆಟ್ಟ)ಗಳಲ್ಲಿ ವಾಸಿಸುವ ಅಥವಾ ನೆಲೆಸಿರುವ ಮಹಾದೇವನಿಗೆ ಭಕ್ತರು ಅಪಾರ. ಅಂತೆಯೆ ಕರ್ನಾಟಕದ ಮೂಲೆ ಮೂಲೆಗಳಿಂದ ಹಾಗೂ ಅಕ್ಕ ಪಕ್ಕದ (ವಿಶೇಷವಾಗಿ ತಮಿಳುನಾಡು) ರಾಜ್ಯಗಳಿಂದ ಸಾಕಷ್ಟು ಜನ ಭಕ್ತಾದಿಗಳು ಮಹೇಶ್ವರನ ದರುಶನ ಕೋರಿ ಈ ಬೆಟ್ಟಕ್ಕೆ ಬರುತ್ತಾರೆ.

ಚಿತ್ರಕೃಪೆ: Pavithrah

ಮಲೆ ಮಹದೇಶ್ವರ ಬೆಟ್ಟ:

ಮಲೆ ಮಹದೇಶ್ವರ ಬೆಟ್ಟ:

ಹೀಗೆ ಬೆಟ್ಟಗಳಲ್ಲಿ ನೆಲೆಸಿ ದರ್ಶನ ಅರಸಿ ಬರುವ ಭಕ್ತಾದಿಗಳ ಕಷ್ಟ ಕಾರ್ಪಣಗಳನ್ನು ನೀಗಿಸುತ್ತಿರುವ ದೇವರೆ, ಮಲೆ ಮಹದೇಶ್ವರನಾಗಿದ್ದು, ಈ ಸ್ಥಳವು ಮಲೆ ಮಹದೇಶ್ವರ ಬೆಟ್ಟ ಎಂತಲೆ ಕರೆಯಲ್ಪಡುತ್ತದೆ.

ಚಿತ್ರಕೃಪೆ: Shardulphatak

ಮಲೆ ಮಹದೇಶ್ವರ ಬೆಟ್ಟ:

ಮಲೆ ಮಹದೇಶ್ವರ ಬೆಟ್ಟ:

ಸ್ಥಳ ಪುರಾಣದ ಪ್ರಕಾರ, ಮಹದೇಶ್ವರನು ಶಿವನ ಅವತಾರದ ಒಬ್ಬ ಸಂತನಾಗಿದ್ದನು. ಉತ್ತರಾಜಮ್ಮ ಎಂಬ ಸುಂದರ ಕನ್ಯೆಗೆ ಜನಿಸಿದ ಪುತ್ರನಾಗಿದ್ದು ಬಹುಶಃ ಶ್ರೀಶೈಲಂ ಭಾಗದಿಂದ ಬಂದಿರಬಹುದೆಂದು ಹೇಳಲಾಗಿದೆ. ಅಲ್ಲದೆ ಯುವಕನಾಗಿದ್ದಾಗ ಸುತ್ತೂರು ಮಠ ಹಾಗೂ ಕುಂಟೂರು ಮಠದ ಗುರುಗಳಿಂದ ವಿದ್ಯೆ ಕಲಿತಿದ್ದ.

ಚಿತ್ರಕೃಪೆ: Siddarth P Raj

ಮಲೆ ಮಹದೇಶ್ವರ ಬೆಟ್ಟ:

ಮಲೆ ಮಹದೇಶ್ವರ ಬೆಟ್ಟ:

ನಂತರ ಮಹದೇಶ್ವರನು ಈ ಪ್ರದೇಶದಲ್ಲಿ ಹುಲಿಯನ್ನು ವಾಹನವನ್ನಾಗಿ ಮಾಡಿಕೊಂಡು ಸಾಗುತ್ತ ಸಾಕಷ್ಟು ಪವಾಡಗಳನ್ನು ಮಾಡುತ್ತ, ನೆನೆದವರಿಗೆ ಸಹಾಯ ಮಾಡುತ್ತ ಜನರ ಕಷ್ಟ ಕಾರ್ಪಣ್ಯಗಳನ್ನು ನೀಗಿಸುತ್ತಿದ್ದ. ಒಂದೊಮ್ಮೆ ಇಲ್ಲಿರುವ ಏಳು ಬೆಟ್ಟಗಳಲ್ಲಿ ಇನ್ನೂ ಕೆಲ ಋಷಿ ಮುನಿಗಳು ದೃಷ್ಟ ಶ್ರಾವಣ ರಾಕ್ಷಸನೊಬ್ಬನ ಸೆರೆಯಲ್ಲಿರುವುದು ಗೊತ್ತಾಗಿ, ಅಲ್ಲಿಗೆ ತೆರಳಿದ.

ಚಿತ್ರಕೃಪೆ: Pavithrah

ಮಲೆ ಮಹದೇಶ್ವರ ಬೆಟ್ಟ:

ಮಲೆ ಮಹದೇಶ್ವರ ಬೆಟ್ಟ:

ಶ್ರಾವಣ ರಾಕ್ಷಸನು ಮಾಟ್ ಮಂತ್ರಗಳ ವಿದ್ಯೆಯಲ್ಲಿ ಬಲು ಶಕ್ತನಾಗಿದ್ದ ಹಾಗೂ ಕಾಡಿನ ಕೆಲ ಬುಡಕಟ್ಟು ಜನಾಂಗಗಳನ್ನು ತನ್ನ ದಾಸನನ್ನಾಗಿ ಮಾಡಿಕೊಂಡು, ತಪಗೈಯುತ್ತಿದ್ದ ಸಾಧು ಸಂತರನ್ನು ಸೆರೆ ಹಿಡಿದು ಅವರಿಗೆ ನಿತ್ಯ ಹಿಂಸೆ ಕೊಡುತ್ತಿದ್ದ. ಇದನ್ನರಿತ ಮಹದೇಶ್ವರನು ರಕ್ಕಸನೊಂದಿಗೆ ಯುದ್ಧ ಮಾಡಿ ಅವನನ್ನು ಸಂಹರಿಸಿ ಜನರನ್ನು ಕಷ್ಟದಿಂದ ಬಿಡುಗಡೆಗೊಳಿಸಿದ.

ಚಿತ್ರಕೃಪೆ: Pavithrah

ಮಲೆ ಮಹದೇಶ್ವರ ಬೆಟ್ಟ:

ಮಲೆ ಮಹದೇಶ್ವರ ಬೆಟ್ಟ:

ಶಿವನ ಅವತಾರವೆ ಆಗಿರುವುದರಿಂದ ಜನರು ಮಹದೇಶ್ವರನನ್ನು ಭಕ್ತಿಯಿಂದ ಪೂಜಿಸತೊಡಗಿದರು, ಆರಾಧಿಸ ತೊಡಗಿದರು. ಇಂದಿಗೂ ಮಹದೇಶ್ವರನ ಮಹಿಮೆಯನ್ನು ಜನಪದ ಶೈಲಿಯ ಭಕ್ತಿ ಗೀತೆಗಳ ಮೂಲಕ ಹೇಳಲಾಗುತ್ತದೆ. ಕಮ್ಸಾಲೆ ಗೀತೆಗಳು ಇದಕ್ಕೆ ಉತ್ತಮ ಉದಾಹರಣೆ. ಚೆಲ್ಲಿದರು ಮಲ್ಲಿಗೆಯಾ...ಎಂಬ ಜನಪದ ಗೀತೆ ಮಹದೇಶ್ವರನ ಕುರಿತು ಕಮಸಾಲೆಯವರಿಗಿರುವ ಭಕ್ತಿ, ನಂಬಿಕೆಯನ್ನು ಅನಾವರಣಗೊಳಿಸುತ್ತದೆ. ಹಾಲು ಮತ ಕುರುಬ ಗೌಡ ಸಮುದಾಯದವರು ಮಹದೇಶ್ವರನಿಗೆ ಸಮರ್ಪಿಸಿಕೊಂಡು ಕಮಸಾಲೆ ಪಥವನ್ನು ಅನುಸರಿಸುತ್ತಾರೆ. ಪ್ರೀತಿಯಿಂದ ಮಹದೇಶ್ವರನನ್ನು ಬಡವರ ಮಾದಪ್ಪ ಎಂದೂ ಸಹ ಕರೆಯಲಾಗುತ್ತದೆ.

ಚಿತ್ರಕೃಪೆ: Pavithrah

ಮಲೆ ಮಹದೇಶ್ವರ ಬೆಟ್ಟ:

ಮಲೆ ಮಹದೇಶ್ವರ ಬೆಟ್ಟ:

ಇಂದಿಗೂ ಮಲೆ ಮಹದೇಶ್ವರದಲ್ಲಿ ಶ್ರಾವಣ ಅಸುರನು ಸಾಧು ಸಂತರನ್ನು ಸೆರೆ ಹಿಡಿದಿಟ್ಟಿದ್ದ ಕೋಣೆಯನ್ನು ನೋಡಬಹುದಾಗಿದ್ದು ಅದನ್ನು ಪವಿತ್ರಮಯ ತವಸೆರೆ ಎಂದು ಕರೆಯುತ್ತಾರೆ. ಅದೇ ರೀತಿ ರಾಕ್ಷಸನು ವಾಸಿಸುತ್ತಿದ್ದ ಸ್ಥಳವನ್ನು ಶ್ರಾವಣ ಬೋಲಿ ಎಂದು ಕರೆಯಲಾಗುತ್ತದೆ.

ಚಿತ್ರಕೃಪೆ: Pavithrah

ಮಲೆ ಮಹದೇಶ್ವರ ಬೆಟ್ಟ:

ಮಲೆ ಮಹದೇಶ್ವರ ಬೆಟ್ಟ:

ಮೂಲವಾಗಿ ಈ ಸ್ಥಳದಲ್ಲಿರುವ ಮಲೆ ಮಹದೇಶ್ವರನ ದೇವಸ್ಥಾನವನ್ನು ಕುರುಬ ಸಮುದಾಯದ ಗೌಡನಾಗಿದ್ದ ಜುಂಜೆ ಗೌಡ ಎಂಬ ಧನಿಕನು ನಿರ್ಮಿಸಿದನೆಂದು ಹೇಳಲಾಗಿದೆ. ಐತಿಹಾಸಿಕ ಪುರಾವೆಗಳನ್ನು ಗಮನಿಸಿದಾಗ ತಿಳಿದು ಬರುವ ಅಂಶವೆಂದರೆ, ಮಹದೇಶವರನು 15 ನೇಯ ಶತಮಾನದಲ್ಲಿ ಅಂದರೆ ಸುಮಾರು 600 ವರ್ಷಗಳ ಹಿಂದೆ ಜೀವಿಸಿದ್ದನೆಂದೂ, ಇಲ್ಲಿಗೆ ತಪಗೈಯ್ಯಲು ಬಂದಿದ್ದನೆಂದು ಅಭಿಪ್ರಾಯ ಮೂಡುತ್ತದೆ. ಇಂದಿಗೂ ಶಿವಲಿಂಗದ ರೂಪದಲ್ಲಿ ದೇವಸ್ಥಾನದ ಗರ್ಭಗುಡಿಯಲ್ಲಿ ಮಹದೇಶ್ವರನು ತಪ ಮಾಡುತ್ತಿದ್ದಾನೆಂದು ಇಲ್ಲಿಗೆ ಭೇಟಿ ನೀಡುವ ಭಕ್ತರ ಬಲವಾದ ನಂಬಿಕೆ.

ಚಿತ್ರಕೃಪೆ: Siddarth P Raj

ಮಲೆ ಮಹದೇಶ್ವರ ಬೆಟ್ಟ:

ಮಲೆ ಮಹದೇಶ್ವರ ಬೆಟ್ಟ:

ಸಾಂಪ್ರದಾಯಿಕವಾಗಿ ಈ ಪ್ರದೇಶವು ಏಳು ಬೆಟ್ಟಗಳಿಂದ ಕೂಡಿದ್ದು ಅವುಗಳು ಅನುಮಲೆ, ಜೇನುಮಲೆ, ಕನುಮಲೆ, ಪಚ್ಚೆಮಲೆ, ಪವಲಮಲೆ, ಪೊನ್ನಾಚಿಮಲೆ ಹಾಗೂ ಕೊಂಗುಮಲೆ ಎಂಬ ಹೆಸರುಗಳಿಂದ ಕರೆಯಲ್ಪಡುತ್ತವೆ. ಈ ಎಲ್ಲ ಬೆಟ್ಟಗಳನ್ನು ಒಟ್ಟಾರೆಯಾಗಿ ಸೇರಿಸಿ ಮಲೆ ಮಹದೇಶ್ವರ ಬೆಟ್ಟಗಳು ಎಂದು ಏಕ ನಾಮದಿಂದ ಕರೆಯಲಾಗಿದೆ. ಇದೊಂದು ಪ್ರಕೃತಿ ಸಹಜ ಸೌಂದರ್ಯದಿಂದ ಕೂಡಿರುವ ಅರಣ್ಯ ಪ್ರದೇಶವೂ ಆಗಿದ್ದು ಸಾಕಷ್ಟು ಕಾಡು ಪ್ರಾಣಿಗಳು ಹಾಗೂ ವೈವಿಧ್ಯಮಯ ಜೀವ ಜಂತುಗಳಿಂದ ಸಂಪದ್ಭರಿತವಾಗಿದೆ.

ಚಿತ್ರಕೃಪೆ: Tumkurameen

ಮೆಟ್ಟೂರು:

ಮೆಟ್ಟೂರು:

ಮಲೆ ಮಹದೇಶ್ವರ ದೇವಸ್ಥಾನದ ದರುಶನದ ನಂತರ ವಿಫುಲವಾದ ಸಮಯಾವಕಾಶ ನಿಮಗಿದ್ದರೆ ಒಂದು ಸುಂದರ ಜಲಾಶಯ ತಾಣಕ್ಕೂ ಭೇಟಿ ನೀಡಬಹುದು. ಅದುವೆ ಸ್ಟ್ಯಾನ್ಲಿ ಜಲಾಶಯ ಅಥವಾ ಮೆಟ್ಟೂರು ಆಣೆಕಟ್ಟು.

ಚಿತ್ರಕೃಪೆ: Vvenka1

ಮೆಟ್ಟೂರು:

ಮೆಟ್ಟೂರು:

ತನ್ನದೆ ಆದ ವಿಶಿಷ್ಟ ರೀತಿಯ ಜಲಾಶಯಗಳ ಪೈಕಿ ದಕ್ಷಿಣ ಭಾರತದ ದೊಡ್ಡ ಜಲಾಶಯವಾದ ಸ್ಟ್ಯಾನ್ಲಿ ಎರಡು ಗ್ರ್ರಮಗಳು ಮುಳುಗಡೆಯಿಂದ ರೂಪಿತವಾಗಿದೆ. ಆ ಗ್ರಾಮಗಳಲ್ಲಿದ್ದ ಜನರು ಇಂದು ಪಕ್ಕದ ಮೆಟ್ಟೂರಿನಲ್ಲಿ ವಾಸಿಸುತ್ತಿದ್ದಾರೆ.

ಚಿತ್ರಕೃಪೆ: Praveen Kumar.R

ಮೆಟ್ಟೂರು:

ಮೆಟ್ಟೂರು:

ಈ ಜಲಾಶಯಕ್ಕೆ ನಿರ್ಮಿಸಲಾಗಿರುವ ಮೆಟ್ಟೂರು ಆಣೆಕಟ್ಟು ದಕ್ಷಿಣ ಭಾರತದ ಜಲೋತ್ಪನ್ನ ಕೇಂದ್ರಗಳ ಪೈಕಿ ಒಂದಾಗಿದ್ದು, ವಿದ್ಯುತ್ ಸಂಗ್ರಹಣಾವರಣ, ಉದ್ಯಾನ ಹಾಗೂ ಸುತ್ತಮುತ್ತಲು ರಮಣೀಯ ಪರಿಸರದ ಬೆಟ್ಟ ಗುಡ್ಡಗಳಿಂದ ತುಂಬಿ ಹೋಗಿದೆ. ಆದ್ದರಿಂದ ಸೇಲಂ ಜಿಲ್ಲೆಯ ಮೆಟ್ಟೂರು ಜಲಾಶಯವೂ ಸಹ ಒಂದು ಪ್ರಬುದ್ಧ ಪ್ರವಾಸಿ ಆಕರ್ಷಣೆಯಾಗಿದೆ.

ಚಿತ್ರಕೃಪೆ: Praveen Kumar.R

ಮೆಟ್ಟೂರು:

ಮೆಟ್ಟೂರು:

ಮೆಟ್ಟೂರು ಜಲಾಶಯದ ಗರಿಷ್ಠ ಆಳ ಸುಮಾರು 120 ಅಡಿಗಳಷ್ಟಾಗಿವೆ.

ಚಿತ್ರಕೃಪೆ: Saravankm

ಮೆಟ್ಟೂರು:

ಮೆಟ್ಟೂರು:

ಮೆಟ್ಟೂರು ತಲುಪುವ ಮುಂಚೆ ಸುಂದರ ಬೆಟ್ಟ ಗುಡ್ಡಗಳ ಮಧ್ಯೆ ಕಾವೇರಿಯ ಅದ್ಭುತ ನಡಿಗೆ.

ಚಿತ್ರಕೃಪೆ: Coppercholride

ಮೆಟ್ಟೂರು:

ಮೆಟ್ಟೂರು:

ಮೊದಲೆ ತಿಳಿಸಿದಂತೆ ಈ ಜಲಾಶಯದ ಸ್ಥಳದಲ್ಲಿ ಎರಡು ಗ್ರಾಮಗಳಿದ್ದವು. ಅದರಂತೆ ಅಲ್ಲಿನ ಕೆಲ ಚಿಕ್ಕ ಪುಟ್ಟ ದೇಗುಲಗಳು ಇಂದಿಗೂ ಜಲಾಶಯದಾಳದಲ್ಲಿದ್ದು, ಯಾವಾಗ ಈ ನೀರಿನ ಮಟ್ಟ 50 ಅಡಿಗಿಂತಲೂ ಕಡಿಮೆಯಾಗುತ್ತದೊ ಆಗ ಇವು ದೂರದಿಂದ ನೋಡಿದಾಗ ಕಂಡುಬರುತ್ತವೆ.

ಚಿತ್ರಕೃಪೆ: Emjgopi

ಮೆಟ್ಟೂರು:

ಮೆಟ್ಟೂರು:

ಮೆಟ್ಟೂರು ಉದ್ಯಾನದಿಂದ ನೋಡಿದಾಗ ಆಣೆಕಟ್ಟು ಹಾಗೂ ಕಾವೇರಿ ಕಂಡುಬರುವುದು ಹೀಗೆ.

ಚಿತ್ರಕೃಪೆ: Praveen Kumar

ಮೆಟ್ಟೂರು:

ಮೆಟ್ಟೂರು:

ಮೆಟ್ಟೂರು ಆಣೆಕಟ್ಟು ಒಟ್ಟಾರೆಯಾಗಿ 1700 ಮೀ. (1.7 ಕಿ.ಮೀ) ಉದ್ದವನ್ನು ಹೊಂದಿದ್ದು 120 ಅಡಿಗಳಷ್ಟು ಆಳವನ್ನು ಹೊಂದಿದೆ. ಇದು ನಿರ್ಮಿಸಿರುವ ಜಲಾಗಾರವನ್ನೆ ಸ್ಟ್ಯಾನ್ಲಿ ಎಂಬ ಹೆಸರಿನಿಂದಲೂ ಸಹ ಕರೆಯಲಾಗುತ್ತದೆ.

ಚಿತ್ರಕೃಪೆ: Gopal Venkatesan

ಮೆಟ್ಟೂರು:

ಮೆಟ್ಟೂರು:

16 ನೀರು ಹೊರ ಚೆಲ್ಲುವ ದ್ವಾರಗಳನ್ನು (ಕ್ರಸ್ಟ್ ಗೇಟ್) ಹೊಂದಿರುವ ಮೆಟ್ಟೂರು ಆಣೆಕಟ್ಟಿನ ಸೇತುವೆ.

ಚಿತ್ರಕೃಪೆ: Praveen Kumar.R

ಮೆಟ್ಟೂರು:

ಮೆಟ್ಟೂರು:

ಮೆಟ್ಟೂರು ಆಣೆಕಟ್ಟು ಹಾಗೂ ಅದರಿಂದ ನಿರ್ಮಿತವಾದ ಸ್ಟ್ಯಾನ್ಲಿ ಜಲಾಶಯದ ಕುರಿತು ಸಮಗ್ರ ತಾಂತ್ರಿಕ ಮಾಹಿತಿ ನೀಡುವ ಫಲಕ.

ಚಿತ್ರಕೃಪೆ: Praveen Kumar

ಮೆಟ್ಟೂರು:

ಮೆಟ್ಟೂರು:

ಸ್ಟ್ಯಾನ್ಲಿ ಜಾಲಶಯದ ಬಳಿ ಕಾವೇರಿಯ ಒಂದು ಸುಂದರ ನೋಟ. ಈ ಜಲಾಶಯದ ಸುಮಾರು 60 ಕಿ.ಮೀ ಹಿಂದಿನಲ್ಲಿ ಕಾವೇರಿಯು ಹೊಗೆನಕ್ಕಲ್ ಬಳಿ ಅದ್ಭುತ ಜಲಪಾತವಾಗಿ ವಸುಂಧರೆಗೆ ಧುಮುಕುತ್ತ ಇಲ್ಲಿ ಬಂದು ಸೇರುತ್ತಾಳೆ.

ಚಿತ್ರಕೃಪೆ: Rsrikanth05

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X