Search
  • Follow NativePlanet
Share
» »ಭಾರತದ ಅತಿ ಶ್ರೀಮಂತ ದೇವಾಲಯಗಳು

ಭಾರತದ ಅತಿ ಶ್ರೀಮಂತ ದೇವಾಲಯಗಳು

By Vijay

ಬಹುಸಂಖ್ಯಾತ ಆಸ್ಥಿಕರನ್ನು ಹೊಂದಿರುವ ಭಾರತ ದೇಶದಲ್ಲಿ ಕಾಣಸಿಗುವ ದೇವಾಲಯಗಳ ಸಂಖ್ಯೆ ಅನಂತ. ಆದರೂ ಕೆಲವು ಕ್ಷೇತ್ರಗಳ ಹಿಂದಿರುವ ದಂತ ಕಥೆಗಳಿಂದಾಗಿಯೋ ಅಥವಾ ದೇವಾಲಯಗಳ ಪ್ರಭಾವದಿಂದಾಗಿಯೋ ಕೆಲ ಕ್ಷೇತ್ರಗಳು ಸದಾ ಜನರಿಂದ ಪ್ರವಾಸಿಗರಿಂದ ಕಿಕ್ಕಿರಿದು ತುಂಬಿರುತ್ತವೆ.

ಈ ದೇವಾಲಯಗಳು ವಿಶೇಷವೆಂದೆ ಹೇಳಬಹುದು. ಏಕೆಂದರೆ ವರ್ಷಪೂರ್ತಿ ನಿರಂತರವಾಗಿ ಜನರು ಈ ದೇವಾಲಯಗಳಿಗೆ ಭೇಟಿ ನೀಡುತ್ತಲೆ ಇರುತ್ತಾರೆ. ಈ ದೇವಾಲಯಗಳಿಗೆ ಭೇಟಿ ನೀಡಿದರೆ ಖಂಡಿತವಾಗಿಯೂ ತಮ್ಮ ಎಲ್ಲ ಕಷ್ಟ ಕಾರ್ಪಣ್ಯಗಳು ದೂರವಾಗುತ್ತವೆ ಎಂಬ ಅಚಲವಾದ ನಂಬಿಕೆ ಇಲ್ಲಿಗೆ ಭೇಟಿ ನೀಡುವ ಜನರದ್ದು.

ನಿಮಗಿಷ್ಟವಾಗಬಹುದಾದ : ಭಾರತದಲ್ಲಿರುವ ಅತಿ ವಿಚಿತ್ರ ದೇವಸ್ಥಾನಗಳು

ಅದರಂತೆ ಇಂತಹ ದೇವಾಲಯಗಳಿಗೆ ಭೇಟಿ ನೀಡಿ ದೇವರ ದರ್ಶನ ಮಾಡಿ ಸೇವೆಗಳನ್ನು ಪೂರೈಸಿ ಮರಳಿದ ಲಕ್ಷ ಲಕ್ಷ ಜನರಿಗೆ ಜೀವನದಲ್ಲಿ ಸುಖ ಶಾಂತಿ ಲಭಿಸಿರುವ ಕುರಿತು ಅವರೆ ಸ್ವತಃ ಹೇಳಿಕೊಂಡಿರುವ ಸಾಕಷ್ಟು ಉದಾಹರಣೆಗಳೂ ಸಹ ನಮಗೆ ಕಂಡುಬರುತ್ತವೆ.

ಹೀಗಾಗಿ ಇಂತಹ ದೇವಾಲಯಗಳು ದಿನೆ ದಿನೆ ಭಕ್ತರು ಪ್ರೀತಿಯಿಂದ, ಗೌರವದಿಂದ ಅರ್ಪಿಸಿದ ಕಾಣಿಕೆ, ದೇಣಿಗೆಗಳಿಂದ ಸಾಮಾನ್ಯವಾಗಿ ಶ್ರೀಮಂತಿಕೆಯನ್ನು ಪಡೆದು ಭಾರತದ ಅತಿ ಶ್ರೀಮಂತ ದೇವಾಲಯಗಳು ಎಂಬ ಹೆಗ್ಗಳಿಕೆಗೆ ಪಾತ್ರವಾಗಿವೆ. ಪ್ರಸ್ತುತ ಲೇಖನದ ಮೂಲಕ ಭಾರತದಲ್ಲಿರುವ ಕೆಲವು ಆಯ್ದ ಅತಿ ಶ್ರೀಮಂತ ಹಾಗೂ ಅಗಾಧ ಸಂಪತ್ತಿನಿಂದ ಕೂಡಿರುವ ದೇವಾಲಯಗಳ ಕುರಿತು ತಿಳಿಯಿರಿ.

ನೀವು ಆಸ್ಥಿಕರೆ ಆಗಿರಲಿ ಅಥವಾ ನಾಸ್ತಿಕರೆ ಆಗಿರಲಿ ಇಲ್ಲಿಗೆ ಭೇಟಿ ನೀಡಿದಾಗ ಆ ದೇವಾಲಯಗಳ ವೈಭವ, ಕಲಾತ್ಮಕತೆ, ಲವಲವಿಕೆಯ ವಾತಾವರಣ, ಅಪಾರ ಜನದಟ್ಟನೆ ಹಾಗೂ ನಿರ್ವಹಣೆಗಳನ್ನು ನೋಡಿದಾಗ ನಿಮಗೂ ಒಂದು ಕ್ಷಣ ಅಚ್ಚರಿಯಾಗದೆ ಇರಲಾರದು. ಈ ದೇವಾಲಯಗಳು ಧಾರ್ಮಿಕ ಪ್ರವಾಸೋದ್ಯಮಕ್ಕೆ ಸಾಕಷ್ಟು ಮಹತ್ವದ ಕೊಡುಗೆಗಳನ್ನು ನೀಡುತ್ತಿವೆ.

ಭಾರತದ ಶ್ರೀಮಂತ ದೇವಾಲಯಗಳು:

ಭಾರತದ ಶ್ರೀಮಂತ ದೇವಾಲಯಗಳು:

ಅನಂತ ಪದ್ಮನಾಭ ದೇವಾಲಯ : ಕೇರಳ ರಾಜ್ಯದ ರಾಜಧಾನಿ ನಗರವಾದ ತಿರುವನಂತಪುರಂನಲ್ಲಿ ವಿಷ್ಣುವಿನ ಅವತಾರವಾದ ಶ್ರೀ ಪದ್ಮನಾಭಸ್ವಾಮಿಯ ದೇವಸ್ಥಾನವು ಪ್ರಸ್ತುತ ಭಾರತದ ಅತಿ ಶ್ರೀಮಂತ ದೇವಸ್ಥಾನವಾಗಿ ಹೆಸರುವಾಸಿಯಾಗಿದೆ. ಅನಂತ ಪದ್ಮನಾಭಸ್ವಾಮಿ ಎಂದೆ ಹೆಸರುವಾಸಿಯಾಗಿರುವ ಈ ದೇವಾಲಯದ ಒಟ್ಟು ಆಸ್ತಿ ಮೌಲ್ಯ 20 ಬಿಲಿಯನ್ ಅಮೇರಿಕನ್ ಡಾಲರ್ ಗಳಷ್ಟಾಗಿದೆ. ಅಂದರೆ 1134 ಕೋಟಿ ರೂಪಾಯಿಗೂ ಅಧಿಕ.

ಚಿತ್ರಕೃಪೆ: Manu Jha

ಭಾರತದ ಶ್ರೀಮಂತ ದೇವಾಲಯಗಳು:

ಭಾರತದ ಶ್ರೀಮಂತ ದೇವಾಲಯಗಳು:

ಇತ್ತೀಚಿಗಷ್ಟೆ ಈ ದೇವಾಲಯದ ವಿವಿಧ ದ್ವಾರ ಹಾಗೂ ಕೋಣೆಗಳಿಂದ ಕೋಟ್ಯಾಂತರ ಮೌಲ್ಯದ ಬಂಗಾರ, ವಜ್ರ ಹಾಗೂ ರತ್ನಗಳಿಂದ ಕೂಡಿದ ಅನೆಕ ಆಭರಣಾದಿಗಳು ದೊರೆತಿದ್ದು ಈ ಮೊದಲು ಅತಿ ಶ್ರೀಮಂತ ದೇವಸ್ಥಾನವಾಗಿದ್ದ ತಿರುಮಲವನ್ನು ಹಿಂದಿಕ್ಕಿ ಸದ್ಯ ಶ್ರೀಮಂತ ದೇವಾಲಯಗಳ ಪೈಕಿ ಮೊದಲ ಸ್ಥಾನವನ್ನು ಅಲಂಕರಿಸಿದೆ.

ಚಿತ್ರಕೃಪೆ: Ashcoounter

ಭಾರತದ ಶ್ರೀಮಂತ ದೇವಾಲಯಗಳು:

ಭಾರತದ ಶ್ರೀಮಂತ ದೇವಾಲಯಗಳು:

ತಿರುಪತಿ ತಿರುಮಲ ದೇವಸ್ಥಾನ : ಹಿಂದಿನ ಸ್ಲೈಡಿನಲ್ಲಿ ತಿಳಿಸಿದ ಹಾಗೆ ಪದ್ಮನಾಭ ದೇವಸ್ಥಾನದಲ್ಲಿ ಗೌಪ್ಯವಾಗಿ ಇಡಲಾಗಿದ್ದ ಸಂಪತ್ತು, ದೊರೆಯುವ ಮೊದಲು ತಿರುಮಲ ದೇವಸ್ಥಾನವೆ ಭಾರತದ ಮೊದಲ ಶ್ರೀಮಂತ ದೇವಸ್ಥಾನವಾಗಿತ್ತು. ಪ್ರಸ್ತುತ ಈ ದೇವಾಲಯವು ಎರಡನೆಯ ಅತಿ ಶ್ರೀಮಂತ ದೇವಸ್ಥಾನವಾಗಿದ್ದು ಆಂಧ್ರಪ್ರದೇಶ ರಾಜ್ಯದ ಹಿರಿಮೆಯನ್ನು ಹೆಚ್ಚಿಸಿದೆ.

ಚಿತ್ರಕೃಪೆ: Ashok Prabhakaran

ಭಾರತದ ಶ್ರೀಮಂತ ದೇವಾಲಯಗಳು:

ಭಾರತದ ಶ್ರೀಮಂತ ದೇವಾಲಯಗಳು:

ಪ್ರತಿ ದಿನ 60,000 ಕ್ಕೂ ಹೆಚ್ಚು ಜನರನ್ನು ಪಡೆಯುವ ಈ ದೇವಾಲಯ ಕ್ಷೇತ್ರ ಜಗತ್ತಿನ ಅತಿ ಜನದಟ್ಟನೆಯ ತೀರ್ಥ ಕ್ಷೇತ್ರಗಳ ಪೈಕಿ ಒಂದಾಗಿದೆ ಹಾಗೂ ವೆಂಕಟೇಶ್ವರನ ವಿಗ್ರಹವು 1000 ಕೆ ಜಿ ಗಳಷ್ಟು ತೂಕದ ಬಂಗಾರದ ಆಭರಣಗಳಿಂದ ಭೂಷಿತವಾಗಿದೆ. ದೇವಸ್ಥಾನದ ವಾರ್ಷಿಕ ಆದಾಯ ಸುಮಾರು 650 ಕೋಟಿ ರೂಪಾಯಿಗಳಷ್ಟಿದೆ. ಸಾಂದರ್ಭಿಕ ಚಿತ್ರ.

ಚಿತ್ರಕೃಪೆ: Karsolene

ಭಾರತದ ಶ್ರೀಮಂತ ದೇವಾಲಯಗಳು:

ಭಾರತದ ಶ್ರೀಮಂತ ದೇವಾಲಯಗಳು:

ಶಬರಿಮಲೆ ಅಯ್ಯಪ್ಪ ದೇವಸ್ಥಾನ : ಕೇರಳ ರಾಜ್ಯದಲ್ಲಿರುವ ಶಬರಿಮಲೆಯ ಅಯ್ಯಪ್ಪನ ದೇವಸ್ಥಾನವು ವಾರ್ಷಿಕವಾಗಿ ನಿರ್ದಿಷ್ಟ ಸಮಯದಲ್ಲಿ ಅತಿ ಹೆಚ್ಚು ಭಕ್ತಾದಿಗಳನ್ನು ಪಡೆಯುವ ದೇವಸ್ಥಾನಗಳಲ್ಲಿ ಮಂಚೂಣಿಯಲ್ಲಿ ನಿಂತಿದೆ. ಅಂದರೆ ತೀರ್ಥಯಾತ್ರೆಯ ನಿರ್ದಿಷ್ಟ ಸಮಯದಲ್ಲಿ ಏನಿಲ್ಲವೆಂದರೂ ನಾಲ್ಕರಿಂದ ಐದು ಕೋಟಿಯಷ್ಟ ಭಕ್ತಾದಿಗಳು ಈ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ.

ಚಿತ್ರಕೃಪೆ: Avsnarayan

ಭಾರತದ ಶ್ರೀಮಂತ ದೇವಾಲಯಗಳು:

ಭಾರತದ ಶ್ರೀಮಂತ ದೇವಾಲಯಗಳು:

ಕೇವಲ ಪುರುಷ ಭಕ್ತರು ಮಾತ್ರ ಪ್ರವೇಶಿಸಬಹುದಾದ ಈ ದೇವಾಲಯದ ವಾರ್ಷಿಕ ಆದಾಯವು ಸುಮಾರು 200-220 ಕೋಟಿ ರೂಪಾಯಿಗಳಷ್ಟಿದೆ.

ಚಿತ್ರಕೃಪೆ: Sailesh

ಭಾರತದ ಶ್ರೀಮಂತ ದೇವಾಲಯಗಳು:

ಭಾರತದ ಶ್ರೀಮಂತ ದೇವಾಲಯಗಳು:

ವೈಷ್ಣೋ ದೇವಿ ದೇವಾಲಯ : ಜಮ್ಮು ಮತ್ತು ಕಾಶ್ಮೀರ ರಾಜ್ಯದ ಕಾತ್ರಾದಲ್ಲಿರುವ ವೈಷ್ಣೋ ದೇವಿ ದೇವಾಲಯವು ಭಾರತದಲ್ಲಿರುವ ಶ್ರೀಮಂತ ದೇವಾಲಯಗಳ ಪೈಕಿ ಒಂದಾಗಿದೆ. ವಾರ್ಷಿಕವಾಗಿ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತಾದಿಗಳು ಈ ದೇವಾಲಯಕ್ಕೆ ಭೇಟಿ ನೀಡುತ್ತಾರೆ. ರುದ್ರ ರಮಣೀಯ ನೋಟಗಳನ್ನು ಕರುಣಿಸುವ ಹಿಮಾಲಯ ಪರ್ವತ ಶ್ರೇಣಿಗಳ ಬುಡದಲ್ಲಿ ನೆಲೆಸಿರುವ ಈ ದೇವಾಲಯದ ವಾರ್ಷಿಕ ಆದಾಯ ಸುಮಾರು 500 ಕೋಟಿ ರೂಪಾಯಿಗಳಷ್ಟಿದೆ.

ಚಿತ್ರಕೃಪೆ: Shikha Baranwal

ಭಾರತದ ಶ್ರೀಮಂತ ದೇವಾಲಯಗಳು:

ಭಾರತದ ಶ್ರೀಮಂತ ದೇವಾಲಯಗಳು:

ಶಿರಡಿಸಾಯಿ ದೇವಾಲಯ : ಮಹಾರಾಷ್ಟ್ರದ ಅಹ್ಮದ್ ನಗರ ಜಿಲ್ಲೆಯಲ್ಲಿರುವ ಶಿರಡಿ ಕ್ಷೇತ್ರವು ಭಾರತದ ಪ್ರಖ್ಯಾತ ಯಾತ್ರಾಗಳ ಪೈಕಿ ಒಂದಾಗಿದ್ದು ಇಲ್ಲಿರುವ ಶಿರಡಿ ಸಾಯಿಬಾಬಾರ ದೇವಸ್ಥಾನವು ದೇಶದ ಶ್ರೀಮಂತ ದೇವಾಲಯಗಳ ಪೈಕಿ ಒಂದಾಗಿದೆ. ವಾರ್ಷಿಕವಾಗಿ ಈ ದೇವಸ್ಥಾನ 300 ಕೋಟಿ ರೂಪಾಯಿಗಳಿಗೂ ಅಧಿಕ ದಾನವನ್ನು ಪಡೆಯುತ್ತದೆ.

ಚಿತ್ರಕೃಪೆ: Shikhaverma117

ಭಾರತದ ಶ್ರೀಮಂತ ದೇವಾಲಯಗಳು:

ಭಾರತದ ಶ್ರೀಮಂತ ದೇವಾಲಯಗಳು:

ಗುರುವಾಯೂರು ದೇವಸ್ಥಾನ : ಕೇರಳದ ತ್ರಿಶ್ಶೂರು ಜಿಲ್ಲೆಯಲ್ಲಿರುವ ಪುಣ್ಯ ಕ್ಷೇತ್ರ ಗುರುವಾಯೂರಿನ ಕೃಷ್ಣನ ದೇವಾಲಯವು ದೇಶದ ಸಂಪದ್ಭರಿತ ದೇವಾಲಯಗಳ ಪೈಕಿ ಒಂದಾಗಿದೆ. ಗುರುವಾಯುರಪ್ಪನ್ ಎಂದೆ ಜನಮನ್ನಣೆಗಳಿಸಿರುವ ಈ ದೇವಾಲಯವನ್ನು ದಕ್ಷಿಣ ಭಾರತದ ದ್ವಾರಕಾ ಎಂತಲೂ ಸಹ ಕರೆಯಲಾಗುತ್ತದೆ. ದೇವಸ್ಥಾನವು ಪ್ರತಿ ತಿಂಗಳು ಹುಂಡಿಯಿಂದ ಏನಿಲ್ಲವೆಂದರೂ ಸುಮಾರು ಎರಡು ಕೋಟಿ ರೂಪಾಯಿಗಳಷ್ಟು ಆದಾಯಗಳಿಸುತ್ತದೆ.

ಚಿತ್ರಕೃಪೆ: Kuttix

ಭಾರತದ ಶ್ರೀಮಂತ ದೇವಾಲಯಗಳು:

ಭಾರತದ ಶ್ರೀಮಂತ ದೇವಾಲಯಗಳು:

ಮದುರೈ ಮೀನಾಕ್ಷಿ ದೇವಸ್ಥಾನ : ತಮಿಳುನಾಡಿನ ಮದುರೈ ಎಂದಿಗೂ ನಿದ್ರಿಸಲಾರದ ನಗರ ಎಂದು ಪ್ರೀತಿಯಿಂದ ಕರೆಸಿಕೊಳ್ಳುತ್ತದೆ. ಇಲ್ಲಿರುವ ದೇವಾಲಯಗಳ ಸಂಖ್ಯೆ ಅಪಾರ. ಆದಾಗ್ಯೂ ನಗರದಲ್ಲಿರುವ ಮೀನಾಕ್ಷಿ ಅಮ್ಮನವರ ದೇವಸ್ಥಾನ ಬಹು ಮುಖ್ಯವಾದ ದೇವಾಲಯವಾಗಿದ್ದು ದೇಶದ ಶ್ರೀಮಂತ ದೇವಸ್ಥಾನಗಳಲ್ಲೊಂದಾಗಿದೆ. ಪ್ರತಿ ದಿನ 20 ರಿಂದ 30 ಸಾವಿರ ಭಕ್ತರನ್ನು ಪಡೆಯುವ ಈ ದೇವಸ್ಥಾನವು ವಾರ್ಷಿಕವಾಗಿ 600 ಲಕ್ಷ ರೂಪಾಯಿಗಳಷ್ಟು ಆದಾಯಗಳಿಸುತ್ತದೆ.

ಚಿತ್ರಕೃಪೆ: Simply CVR

ಭಾರತದ ಶ್ರೀಮಂತ ದೇವಾಲಯಗಳು:

ಭಾರತದ ಶ್ರೀಮಂತ ದೇವಾಲಯಗಳು:

ಜಗನ್ನಾಥ ಪುರಿ ದೇವಸ್ಥಾನ : ಒಡಿಶಾ ರಾಜ್ಯದ ಪುರಿ ನಗರದ ಗ್ರ್ಯಾಂಡ್ ರಸ್ತೆಯಲ್ಲಿರುವ ಜಗನ್ನಾಥ ದೇವಾಲಯವು ರಾಜ್ಯದ ಅತಿ ಶ್ರೀಮಂತ ದೇವಾಲಯವಾಗಿದೆ. 2010 ರಲ್ಲಿ ದೇವಾಲಯವು ಸುಮಾರು 150 ಕೋಟಿ ರೂಪಾಯಿಗಳಷ್ಟು ಆದಾಯಗಳಿಸಿತ್ತು. ಪ್ರಸ್ತುತ ಪ್ರತಿ ದಿನ 30000 ರೂಪಾಯಿಗೂ ಅಧಿಕ ಹಣಗಳಿಸುವ ಈ ದೇವಾಲಯ ಹಬ್ಬದ ಸಂದರ್ಭದಲ್ಲಿ ಮೂರ್ನಾಲ್ಕು ಪಟ್ಟು ಹೆಚ್ಚಿನ ಆದಾಯಗಳಿಸುತ್ತದೆ.

ಚಿತ್ರಕೃಪೆ: eT-pek

ಭಾರತದ ಶ್ರೀಮಂತ ದೇವಾಲಯಗಳು:

ಭಾರತದ ಶ್ರೀಮಂತ ದೇವಾಲಯಗಳು:

ಕಾಶಿ ವಿಶ್ವನಾಥ ದೇವಸ್ಥಾನ : ಉತ್ತರ ಪ್ರದೇಶ ರಾಜ್ಯದ ವರಾಣಸಿಯಲ್ಲಿರುವ ಕಾಶಿ ವಿಶ್ವನಾಥನ ದೇವಾಲಯವು ಶ್ರೀಮಂತ ದೇವಸ್ಥಾನಗಳ ಪೈಕಿ ಒಂದಾಗಿದೆ. ವಾರ್ಷಿಕವಾಗಿ ನಾಲ್ಕರಿಂದ ಐದು ಕೋಟಿ ರೂಪಾಯಿಗಳಷ್ಟು ದಾನ ಪಡೆಯುವ ಈ ದೇವಾಲಯಕ್ಕೆ 30 ಲಕ್ಷಕ್ಕೂ ಅಧಿಕ ದೇಶೀಯ ಪ್ರವಾಸಿಗರು ಹಾಗೂ 2 ಲಕ್ಷಕ್ಕೂ ಅಧಿಕ ವಿದೇಶಿ ಪ್ರವಾಸಿಗರೂ ಭೇಟಿ ನೀಡುತ್ತಾರೆ. ವಿಶ್ವನಾಥ ದೇವಾಲಯದ ಮೂರು ಗೋಪುರಗಳ ಪೈಕಿ ಎರಡು ಗೋಪುರಗಳು ಚಿನ್ನದಿಂದ ನಿರ್ಮಿಸಲಾದ ಕವಚ ಹೊಂದಿವೆ.

ಚಿತ್ರಕೃಪೆ: Ashley Van Haeften

ಭಾರತದ ಶ್ರೀಮಂತ ದೇವಾಲಯಗಳು:

ಭಾರತದ ಶ್ರೀಮಂತ ದೇವಾಲಯಗಳು:

ಸಿದ್ಧಿ ವಿನಾಯಕ ದೇವಸ್ಥಾನ : ಮುಂಬೈನಗರದಲ್ಲಿರುವ ಸಿದ್ಧಿ ವಿನಾಯಕನ ದೇವಸ್ಥಾನವು ಅತಿ ಪ್ರಮುಖ ದೇವಾಲಯವಾಗಿದೆ. ಕಿರಿಯರಿಂದ ಹಿಡಿದು ಹಿರಿಯರವರೆಗೂ, ಗಣ್ಯ ವ್ಯಕ್ತಿಗಳು, ಚಿತ್ರತಾರೆಗಳು, ರಾಜಕಾರಣಿಗಳೆಲ್ಲರೂ ಬಹುವಾಗಿ ಭೇಟಿ ನೀಡುವ ಗಣೇಶನ ಈ ದೇವಾಲಯದ ಆದಾಯವೂ ಆನೆಯ ಗಾತ್ರದ್ದೆ. ಗಣೇಶ ಚತುರ್ಥಿಯ ಸಂದರ್ಭದಲ್ಲಂತೂ ಐದಾರು ಘಂಟೆಗಳಷ್ಟು ಕಾಯ್ದು ದರುಶನ ಪಡೆಯಬೇಕು. ಇದರ ವಾರ್ಷಿಕ ಆದಾಯ 48 ಕೋಟಿಯಿಂದ ಹಿಡಿದು 120 ಕೋಟಿಗಳವರೆಗಿರುತ್ತದೆ.

ಚಿತ್ರಕೃಪೆ: Abhijeet Rane

ಭಾರತದ ಶ್ರೀಮಂತ ದೇವಾಲಯಗಳು:

ಭಾರತದ ಶ್ರೀಮಂತ ದೇವಾಲಯಗಳು:

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ : ಕರ್ನಾಟಕದಲ್ಲಿರುವ ಶ್ರೀಮಂತ ದೇವಸ್ಥಾನಗಳ ಪೈಕಿ ಮಂಚೂಣಿಯಲ್ಲಿರುವ ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನವು ದೇಶದ ಶ್ರೀಮಂತ ದೇವಸ್ಥಾನಗಳ ಪೈಕಿ ಒಂದಾಗಿದೆ. ದೇವಾಲಯದ ವಾರ್ಷಿಕ ಆದಾಯ 50 ರಿಂದ 70 ಕೋಟಿ ರೂಪಾಯಿ ಮಧ್ಯದಲ್ಲಿರುತ್ತದೆ.

ಚಿತ್ರಕೃಪೆ: karthick siva

ಭಾರತದ ಶ್ರೀಮಂತ ದೇವಾಲಯಗಳು:

ಭಾರತದ ಶ್ರೀಮಂತ ದೇವಾಲಯಗಳು:

ಸ್ವಾಮಿ ನಾರಾಯಣ ಅಕ್ಷರಧಾಮ ದೇವಾಲಯ : ಮನವನ್ನು ಒಂದೆ ಕ್ಷಣದಲ್ಲಿ ಸೆಳೆಯುವಂತೆ ಅದ್ಭುತ ವಾಸ್ತುಶೈಲಿ ಹಾಗೂ ಉತ್ಕೃಷ್ಟ ಕಲಾತ್ಮಕತೆಯಿಂದ ಕೂಡಿರುವ ನವದೆಹಲಿಯ ಸ್ವಾಮಿನಾರಾಯಣ ಅಕ್ಷರಧಾಮ ದೇವಾಲಯವು ದೇಶದ ಶ್ರೀಮಂತ ದೇವಾಲಯಗಳಲ್ಲಿ ಒಂದಾಗಿದೆ. ವರ್ಷಕ್ಕೆ ಲಕ್ಷ ಲಕ್ಷ ಸಂಖ್ಯೆಯಲ್ಲಿ ಭಕ್ತಾದಿಗಳನ್ನು ಪಡೆಯುತ್ತದೆ ಈ ದೇವಾಲಯ.

ಚಿತ್ರಕೃಪೆ: Russ Bowling

ಭಾರತದ ಶ್ರೀಮಂತ ದೇವಾಲಯಗಳು:

ಭಾರತದ ಶ್ರೀಮಂತ ದೇವಾಲಯಗಳು:

ಸೋಮನಾಥ ದೇವಸ್ಥಾನ : ಗುಜರಾತಿನ ಸೌರಾಷ್ಟ್ರ ಭಾಗದ ವೇರಾವಲ್ ಬಳಿಯ ಪ್ರಭಾಸ ಕ್ಷೇತ್ರದಲ್ಲಿರುವ ಸೋಮನಾಥ ದೇವಾಲಯವು ದೇಶದ ಶ್ರೀಮಂತ ದೇವಸ್ಥಾನಗಳಲ್ಲೊಂದಾಗಿದೆ. ಇತಿಹಾಸ ಗಮನಿಸಿದಾಗ ಈ ದೇವಾಲಯವು 17 ಬಾರಿ ಆಕ್ರಮಣಕ್ಕೊಳಗಾಗಿ ಲೂಟಿಗೊಳಗಾಗಿದ್ದರೂ ಸಹ ಇಂದಿಗೂ ಶ್ರೀಮಂತ ದೇವಾಲಯ ಎಂದೆನಿಸಿಕೊಳ್ಳಲು ಯೋಗ್ಯವಾದ ಆಸ್ತಿಪಾಸ್ತಿಗಳನ್ನು ಹೊಂದಿದೆ.

ಚಿತ್ರಕೃಪೆ: Nagarjun Kandukuru

ಭಾರತದ ಶ್ರೀಮಂತ ದೇವಾಲಯಗಳು:

ಭಾರತದ ಶ್ರೀಮಂತ ದೇವಾಲಯಗಳು:

ಗೋಲ್ಡನ್ ಟೆಂಪಲ್ (ಸುವರ್ಣ ಮಂದಿರ) : ಪಂಜಾಬ್ ರಾಜ್ಯದ ಅಮೃತಸರದಲ್ಲಿರುವ ಸಿಖ್ಖರ ಪವಿತ್ರ ಯಾತ್ರಾ ಕೇಂದ್ರವಾದ ಸುವರ್ಣ ಮಂದಿರ ಅಥವಾ ಗೋಲ್ಡನ್ ಟೆಂಪಲ್ ಶ್ರೀಮಂತ ದೇವಾಲಯಗಳ ಪೈಕಿ ಒಂದಾಗಿದೆ. ಪ್ರತಿ ದಿನ 40000 ರಷ್ಟು ಭಕ್ತಾದಿಗಳನ್ನು ಸ್ವೀಕರಿಸುವ ಈ ಗುರುದ್ವಾರಾ ಪಂಜಾಬಿನ ಶ್ರೀಮಂತ ದೇವಾಲಯವಾಗಿದೆ.

ಚಿತ್ರಕೃಪೆ: Prashant Ram

ಭಾರತದ ಶ್ರೀಮಂತ ದೇವಾಲಯಗಳು:

ಭಾರತದ ಶ್ರೀಮಂತ ದೇವಾಲಯಗಳು:

ಅಮರನಾಥ : ಅಮರನಾಥ ಯಾತ್ರೆ ಪ್ರತಿ ಹಿಂದೂ ಒಮ್ಮೆಯಾದರೂ ಜೀವನದಲ್ಲಿ ಮಾಡಲೇಬೇಕೆಂಬ ಮಹದಾಸೆ ಹೊಂದಿರುತ್ತಾನೆ. ಇದು ವರ್ಷದಲ್ಲಿ ಒಂದು ಬಾರಿಗೆ ನಿರ್ದಿಷ್ಟ ಅವಧಿಯಲ್ಲಿ ಮಾತ್ರ ತೆರೆದಿರುತ್ತದೆ, ಕಾರಣ ಇಲ್ಲಿಗೆ ತಲುಪುವುದು ಕಷ್ಟಕರವಾಗಿರುವ ಪರಿಸರ ವಿಶೇಷವಾಗಿ ಹಿಮಪಾತದ ಸಂದರ್ಭದಲ್ಲಿ. ಪ್ರತಿ ವರ್ಷವು ಲಕ್ಷ ಭಕ್ತರನ್ನು ಪಡೆಯುವ ಈ ದೇವಾಲಯ ಶ್ರ್‍ಇಂತ ದೇವಾಲಯವಾಗಿದೆ. ಒಂದು ವರದಿಯ ಪ್ರಕಾರ, ಇದನ್ನು ವರ್ಷಪೂರ್ತಿ ತೆರೆದಿಟ್ಟು ತೆರಳಲು ಇನ್ನಷ್ಟು ಅನುಕೂಲಕರ ವಾತಾವರಣ ಕಲ್ಪಿಸಿದರೆ ಇದು ಜಮ್ಮು ಕಾಶ್ಮೀರ ರಾಜ್ಯಕ್ಕೆ ಸಾವಿರ ಸಾವಿರ ಕೋಟಿ ರೂಪಾಯಿಗಳಷ್ಟು ಆದಾಯಗಳಿಸಿಕೊಡಬಹುದಂತೆ!

ಚಿತ್ರಕೃಪೆ: Gktambe

ಭಾರತದ ಶ್ರೀಮಂತ ದೇವಾಲಯಗಳು:

ಭಾರತದ ಶ್ರೀಮಂತ ದೇವಾಲಯಗಳು:

ಕೊಲ್ಹಾಪುರ ಮಹಾಲಕ್ಷ್ಮಿ ದೇವಾಲಯ : ಮಹಾರಾಷ್ಟ್ರದ ಕೊಲ್ಹಾಪುರದಲ್ಲಿರುವ ಮಹಾಲಕ್ಷ್ಮಿಯ ದೇವಸ್ಥಾನವೂ ಸಹ ಶ್ರೀಮಂತ ದೇವಾಲಯಗಳಲ್ಲೊಂದಾಗಿದೆ. ದಕ್ಷಿಣ ಭಾರತದಿಂದಲೂ ಸಹ ಸಾಕಷ್ಟು ಭಕ್ತಾದಿಗಳು ಮಹಾಲಕ್ಷ್ಮಿಯ ದರುಶನ ಕೋರಿ ಕೊಲ್ಹಾಪುರಕ್ಕೆ ಭೆಟಿ ನೀಡುತ್ತಾರೆ. 2013-14 ರಲ್ಲಿ ದೇವಸ್ಥಾನವು 14 ಕೋಟಿ ರೂಪಾಯಿಗಳಷ್ಟು ಆದಾಯಗಳಿಸಿತ್ತು.

ಚಿತ್ರಕೃಪೆ: kolhapurtourism

ಭಾರತದ ಶ್ರೀಮಂತ ದೇವಾಲಯಗಳು:

ಭಾರತದ ಶ್ರೀಮಂತ ದೇವಾಲಯಗಳು:

ಲಿಂಗರಾಜ ದೇವಾಲಯ : ಲಿಂಗರಾಜ ದೇವಸ್ಥಾನವು ಒಡಿಶಾ ರಾಜ್ಯದ ಭುವನೇಶ್ವರದಲ್ಲಿರುವ ಅತಿ ದೊಡ್ಡ ದೇವಾಲಯವಾಗಿದೆ. ಅನೇಕ ಕಾರಣಗಳಿಗಾಗಿ ಈ ದೇವಳವು ಮಹತ್ವವನ್ನು ಪಡೆದಿದೆ. ಇದು ನಗರದ ಅತಿ ಪುರಾತನ ದೇವಾಲಯಗಳಲ್ಲೊಂದಾಗಿರುವುದಲ್ಲದೆ ಶ್ರೀಮಂತ ದೇವಾಲಯವೂ ಸಹ ಆಗಿದೆ. ಈ ದೇವಾಲಯದ ವಾರ್ಷಿಕ ಆದಾಯ ನಾಲ್ಕರಿಂದ ಐದು ಮಿಲಿಯನ್ ರೂಪಾಯಿಗಳಷ್ಟಿದೆ.

ಚಿತ್ರಕೃಪೆ: BOMBMAN

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X