Search
  • Follow NativePlanet
Share
» »ಧರ್ಮಸ್ಥಳ ಹಾಗೂ ಶ್ರೀಕ್ಷೇತ್ರ ಕುಕ್ಕೆಸುಬ್ರಹ್ಮಣ್ಯ

ಧರ್ಮಸ್ಥಳ ಹಾಗೂ ಶ್ರೀಕ್ಷೇತ್ರ ಕುಕ್ಕೆಸುಬ್ರಹ್ಮಣ್ಯ

By Vijay

ಕ್ರಮವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಹಾಗೂ ಬೆಳ್ತಂಗಡಿ ತಾಲೂಕುಗಳಲ್ಲಿರುವ ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ಮತ್ತು ಶ್ರೀಕ್ಷೇತ್ರ ಧರ್ಮಸ್ಥಳ ಕರ್ನಾಟಕದ ರಾಜ್ಯದಲ್ಲಿರುವ ಶ್ರೀಮಂತ ದೇವಸ್ಥಾನಗಳ ಪೈಕಿ ಮಂಚೂಣಿಯಲ್ಲಿರುವ ಪ್ರಮುಖ ದೇವಾಲಯಗಳಾಗಿವೆ. ದಿನೆ ದಿನೆ ಈ ಕ್ಷೇತ್ರಗಳಿಗೆ ಭೇಟಿ ನೀಡುತ್ತಿರುವವರ ಸಂಖ್ಯೆ ವೃದ್ಧಿಸುತ್ತಿದೆ. ಇದಕ್ಕೆ ಮುಖ್ಯ ಕಾರಣ ಇಲ್ಲಿ ನೆಲೆಸಿರುವ ಸರ್ಪಗಳ ಒಡೆಯ ಶ್ರೀ ಸುಬ್ರಹ್ಮಣ್ಯ ಸ್ವಾಮಿ ಹಾಗೂ ಶಿವನ ಅವತಾರವಾದ ಶ್ರೀಮಂಜುನಾಥ ಸ್ವಾಮಿ.

ಸುಬ್ರಹ್ಮಣ್ಯ ಸ್ವಾಮಿಯು ಎಲ್ಲ ರೀತಿಯ ಸರ್ಪಗಳಿಗೆ ಅಧಿ ದೇವತೆಯಾಗಿದ್ದು ಸರ್ಪದೋಷಕ್ಕೊಳಗಾದ ಯಾರೆ ಆಗಲಿ ಈ ಕ್ಷೇತ್ರಕ್ಕೆ ಬಂದು ಸ್ವಾಮಿಯನ್ನು ಕುರಿತು ಪ್ರಾರ್ಥಿಸಿ ನಿರ್ದಿಷ್ಟ ಸೇವೆಯನ್ನು ನೆರವೇರಿಸುವುದರ ಮೂಲಕ ಆ ದೋಷದಿಂದ ಮುಕ್ತಿ ಪಡೆದು ಜೇವನದಲ್ಲಿ ಸುಖ, ಶಾಂತಿ, ನೆಮ್ಮದಿಗಳನ್ನು ಕಾಣುತ್ತಾರೆ ಎಂಬುದು ಇಲ್ಲಿಗೆ ಭೇಟಿ ನೀಡುವ ಭಕ್ತರ ಪ್ರಬಲ ನಂಬಿಕೆಯಾಗಿದೆ ಹಾಗೂ ಧರ್ಮಸ್ಥಳದ ಶ್ರೀಮಂಜುನಾಥ ಸ್ವಾಮಿಯು ಸಕಲ ಕಷ್ಟ ಕಾರ್ಪಣ್ಯಗಳನ್ನು ದೂರ ಹೋಗಿಸುತ್ತಾನೆಂಬ ನಂಬಿಕೆಯಿದೆ.

ನಿಮಗಿಷ್ಟವಾಗಬಹುದಾದ : ಪೆರ್ಣಂಕಿಲ ಎಂಬ ದೈವ ಭೂಮಿ

ಅದರಂತೆ ನಿತ್ಯವೂ ಈ ಕ್ಷೇತ್ರಗಳಿಗೆ ದೇಶದ ಮೂಲೆ ಮೂಲೆಗಳಿಂದ ಭಕ್ತ ವೃಂದವು ಬರುತ್ತಿರುತ್ತದೆ. ಈ ಎರಡೂ ಕ್ಷೇತ್ರಗಳು ಒಂದಕ್ಕೊಂದು ಕೇವಲ ಒಂದು ಘಂಟೆಯಷ್ಟು ಪ್ರಯಾಣಾವಧಿಯ ದೂರದಲ್ಲಿ ನೆಲೆಸಿವೆ. ಹೀಗಾಗಿ ಅನೇಕ ಜನ ಪ್ರವಾಸಿಗರಾಗಲಿ, ಭಕ್ತರಾಗಲಿ ಈ ಭಾಗಕ್ಕೆ ಬಂದಾಗ ಎರಡೂ ಕ್ಷೇತ್ರಗಳಿಗೆ ಭೇಟಿ ನೀಡುವುದು ಸಾಮಾನ್ಯವಾಗಿ ನಡೆದು ಬಂದಿರುವ ಪದ್ಧತಿ. ಇಲ್ಲಿ ಗಮನಿಸಬೇಕಾದ ಒಂದು ಅಂಶವೆಂದರೆ ಕುಕ್ಕೆಗೆ ತೆರಳಿ ದರ್ಶನ ಪಡೆದ ನಂತರ ನೇರವಾಗಿ ಅವರವರ ಊರಿಗೆ ತೆರಳಬೇಕೆಂಬ ನಂಬಿಕೆಯ ನಿಯಮವಿರುವುದರಿಂದ ಮೊದಲಿಗೆ ಧರ್ಮಸ್ಥಳಕ್ಕೆ ಭೇಟಿ ನೀಡಿ ತದ ನಂತರ ಕುಕ್ಕೆಗೆ ಭೇಟಿ ನೀಡಲಾಗುತ್ತದೆ.

ಇನ್ನೂ ಧರ್ಮಸ್ಥಳ ಹಾಗೂ ಕುಕ್ಕೆಗೆ ತೆರಳಲು ಮಂಗಳೂರು, ಬೆಂಗಳೂರುಗಳಿಂದ ಸಾಕಷ್ಟು ಖಾಸಗಿ ಹಾಗೂ ಸರ್ಕಾರಿ ಬಸ್ಸುಗಳ ಸೌಲಭ್ಯವಿದೆ. ಅಲ್ಲದೆ ರೈಲುಗಳೂ ಸಹ ಲಭ್ಯವಿರುವುದರಿಂದ ಸರಳವಾಗಿ ಈ ಕ್ಷೇತ್ರಗಳಿಗೆ ತಲುಪಬಹುದು. ಬೆಂಗಳೂರಿನಿಂದ ಕುಕ್ಕೆಗೆ ರೈಲು ಲಭ್ಯವಿದ್ದು ಮಂಗಳೂರಿನಿಂದಲೂ ಸಹ ಕುಕ್ಕೆಗೆ ರೈಲಿನ ವ್ಯವಸ್ಥೆಯಿದೆ. ಇನ್ನೂ ಕುಕ್ಕೆ ಹಾಗೂ ಧರ್ಮಸ್ಥಳಗಳ ಮಧ್ಯೆ ಓಡಾಡಲು ಸಾಕಷ್ಟು ಬಸ್ಸುಗಳು ಎರಡೂ ಸ್ಥಳಗಳಿಂದ ದೊರೆಯುತ್ತವೆ.

ಧರ್ಮಸ್ಥಳ ಹಾಗೂ ಶ್ರೀಕ್ಷೇತ್ರ ಕುಕ್ಕೆ:

ಧರ್ಮಸ್ಥಳ ಹಾಗೂ ಶ್ರೀಕ್ಷೇತ್ರ ಕುಕ್ಕೆ:

ಧರ್ಮಸ್ಥಳ ಕ್ಷೇತ್ರವು ಧಾರ್ಮಿಕವಾಗಿ ಪ್ರಖ್ಯಾತಿ ಪಡೆದಿರುವುದಲ್ಲದೆ ಪ್ರಾಕೃತಿಕವಾಗಿಯೂ ಅದ್ಭುತವಾಗಿ ಕಂಡುಬರುತ್ತದೆ ಕಾರಣ ಇದು ನಯನ ಮನೋಹರವಾದ ಪಶ್ಚಿಮ ಘಟ್ಟಗಳ ದಟ್ಟ ಹಸಿರಿನಿಂದ ಕೂಡಿದ ಕಾಡುಗಳ ಮಧ್ಯದಲ್ಲಿ ನೆಲೆಸಿರುವುದರಿಂದ.

ಚಿತ್ರಕೃಪೆ: Dinesh Kumar (DK)

ಧರ್ಮಸ್ಥಳ ಹಾಗೂ ಶ್ರೀಕ್ಷೇತ್ರ ಕುಕ್ಕೆ:

ಧರ್ಮಸ್ಥಳ ಹಾಗೂ ಶ್ರೀಕ್ಷೇತ್ರ ಕುಕ್ಕೆ:

ಧರ್ಮಸ್ಥಳವು ಮೂಲತಃ ತನ್ನಲ್ಲಿರುವ ಶ್ರೀ ಮಂಜುನಾಥಸ್ವಾಮಿ ದೇವಾಲಯಕ್ಕಾಗಿ ಖ್ಯಾತಿ ಪಡೆದಿದೆ. ಅಷ್ಟೆ ಅಲ್ಲ ಶ್ರವಣಬೆಳಗೊಳದಲ್ಲಿರುವಂತೆ ಎತ್ತರದ ಬಾಹುಬಲಿಯ ಪ್ರತಿಮೆಯೂ ಕೂಡ ಧರ್ಮಸ್ಥಳದಲ್ಲಿದೆ.

ಚಿತ್ರಕೃಪೆ: Naveenbm

ಧರ್ಮಸ್ಥಳ ಹಾಗೂ ಶ್ರೀಕ್ಷೇತ್ರ ಕುಕ್ಕೆ:

ಧರ್ಮಸ್ಥಳ ಹಾಗೂ ಶ್ರೀಕ್ಷೇತ್ರ ಕುಕ್ಕೆ:

ಸರಿ ಸುಮಾರು 700 ವರ್ಷಗಳಷ್ಟು ಶ್ರೀಮಂತ ಇತಿಹಾಸ ಹೊಂದಿರುವ ಧರ್ಮಸ್ಥಳವು ನೇತ್ರಾವತಿ ನದಿಯ ದಡದಲ್ಲಿ ನೆಲೆಸಿದೆ. ಇಲ್ಲಿನ ದೇವಸ್ಥಾನದಲ್ಲಿರುವ ಆರಾಧ್ಯ ದೈವ ಮಂಜುನಾಧ ಸ್ವಾಮಿಯ ವಿಗ್ರಹವನ್ನು ಮಂಗಳೂರಿನ ಕದ್ರಿ ಎಂಬ ಸ್ಥಳದಿಂದ ಉಡುಪಿಯ ಯತಿಗಳಾಗಿದ್ದ ಶ್ರೀ ವಾದಿರಾಜರು ಸ್ವತಃ ತಂದು ಪ್ರತಿಷ್ಠಾಪಿಸಿದರು ಎಂದು ಹೇಳುತ್ತದೆ ಇಲ್ಲಿನ ಸ್ಥಳ ಪುರಾಣ. ಶಿವಲಿಂಗ ತಂದ ದೈವ ಪ್ರತಿನಿಧಿ ಅಣ್ಣಪ್ಪ ಸ್ವಾಮಿ ವಿಗ್ರಹ

ಚಿತ್ರಕೃಪೆ: Maheshshogun

ಧರ್ಮಸ್ಥಳ ಹಾಗೂ ಶ್ರೀಕ್ಷೇತ್ರ ಕುಕ್ಕೆ:

ಧರ್ಮಸ್ಥಳ ಹಾಗೂ ಶ್ರೀಕ್ಷೇತ್ರ ಕುಕ್ಕೆ:

ಈ ದೇವಾಲಯವು ದಾನ ಧರ್ಮಕ್ಕೆ ಪ್ರಸಿದ್ಧವಾಗಿರುವುದಲ್ಲದೆ, ಭಕ್ತರಿಗೆ ನೈತಿಕ - ಸಾಂಸ್ಕೃತಿಕ ಕೇಂದ್ರವಾಗಿಯೂ ಆಕರ್ಷಿಸುತ್ತದೆ. ಧರ್ಮಸ್ಥಳವು ರೋಚಕವಾದ ಹಿನ್ನಿಲೆಯನ್ನು ಹೊಂದಿದೆ. ಅದರ ಅನುಸಾರ, ಹಿಂದೆ ಧರ್ಮಸ್ಥಳವನ್ನು "ಕುಡುಮ" ಎಂಬ ಹೆಸರಿನಿಂದ ಕರೆಯಲಾಗುತ್ತಿತ್ತು. ಧರ್ಮಸ್ಥಳದಲ್ಲಿರುವ ರಥ

ಚಿತ್ರಕೃಪೆ: Gopal Venkatesan

ಧರ್ಮಸ್ಥಳ ಹಾಗೂ ಶ್ರೀಕ್ಷೇತ್ರ ಕುಕ್ಕೆ:

ಧರ್ಮಸ್ಥಳ ಹಾಗೂ ಶ್ರೀಕ್ಷೇತ್ರ ಕುಕ್ಕೆ:

ಈ ಪ್ರಾಂತ್ಯದಲ್ಲಿರುವ ನೆಲ್ಯಾಡಿ ಬೀಡು ಎಂಬ ಗೃಹದಲ್ಲಿ ಬಿರ್ಮಣ್ಣ ಪರ್ಗಡೆ ಮತ್ತು ಅಮ್ಮು ಬಲ್ಲಾಳ್ತಿ ಎಂಬ ಧಾರ್ಮಿಕ ಮನೋಭಾವವುಳ್ಳ ದಂಪತಿಗಳು ವಾಸಿಸುತ್ತಿದ್ದರು. ಹೀಗಿರುವಾಗ ಒಂದೊಮ್ಮೆ ಇವರ ಮನೆಗೆ ನಾಲ್ಕು ಜನ ಅತಿಥಿಗಳು ಬಂದರು. ಬಂದ ಅತಿಥಿಗಳಿಗೆ ಯಾವುದೆ ರೀತಿಯ ಚಿಕ್ಕ ಪುಟ್ಟ ಅನಾನುಕೂಲತೆಗಳೂ ಸಹ ಉಂಟಾಗದ ಹಾಗೆ ದಂಪತಿಗಳು ಅತಿಥಿ ಸತ್ಕಾರ ಮಾಡಿದರು. ಧರ್ಮಸ್ಥಳದಲ್ಲಿರುವ ಒಂದು ದೇವಾಲಯ

ಚಿತ್ರಕೃಪೆ: Gnanapiti

ಧರ್ಮಸ್ಥಳ ಹಾಗೂ ಶ್ರೀಕ್ಷೇತ್ರ ಕುಕ್ಕೆ:

ಧರ್ಮಸ್ಥಳ ಹಾಗೂ ಶ್ರೀಕ್ಷೇತ್ರ ಕುಕ್ಕೆ:

ಅದೆ ದಿನ ರಾತ್ರಿಯಲ್ಲಿ ಆ ನಾಲ್ವರು ಅತಿಥಿಗಳು ದೈವದ ರೂಪದ ಮೂಲಕ ಭೀಮಣ್ಣನವರ ಕನಸಿನಲ್ಲಿ ಬಂದು ತಾವು ಇಲ್ಲಿ ನೆಲೆಸಲು ಇಚ್ಛಿಸಿರುವುದಾಗಿ ತಿಳಿಸಿದರು. ಅದರಂತೆ ಭೀಮಣ್ಣನವರು ಆ ಮನೆಯನ್ನು ತ್ಯಜಿಸಿ ಆ ನಾಲ್ವರು ದೇವತೆಗಳಿಗೆ ಬಿಟ್ಟು ಕೊಟ್ಟರು ಹಾಗೂ ಅವರ ಅಣತಿಯಂತೆ ದೇವಾಲಯ ನಿರ್ಮಿಸಿ ಬ್ರಾಹ್ಮಣ ಅರ್ಚಕರನ್ನು ನಿತ್ಯ ಪೂಜೆಗೆ ನೇಮಿಸಿದರು. ಧರ್ಮಸ್ಥಳದಲ್ಲಿರುವ ಮಂಜುಷ ವಸ್ತು ಸಂಗ್ರಹಾಲಯ. ಧರ್ಮಸ್ಥಲದ ಧರ್ಮದರ್ಶಿಗಳಾದ ಶ್ರೀ ವೀರೆಂದ್ರ ಹೆಗ್ಗಡೆಯವರು ಖಾಸಗೀಯವಾಗಿ ಸ್ಥಾಪಿಸಿದ ಪುರಾತನ ವಸ್ತು ಸಂಗ್ರಹಾಲಯ ಇದಾಗಿದೆ.

ಚಿತ್ರಕೃಪೆ: Gowthami k

ಧರ್ಮಸ್ಥಳ ಹಾಗೂ ಶ್ರೀಕ್ಷೇತ್ರ ಕುಕ್ಕೆ:

ಧರ್ಮಸ್ಥಳ ಹಾಗೂ ಶ್ರೀಕ್ಷೇತ್ರ ಕುಕ್ಕೆ:

ಆ ನಾಲ್ಕು ದೈವವೆಂದರೆ ಕಾಳರಾಹು - ಪುರುಷ ದೈವ, ಕಳರ್ಕಾಯಿ - ಸ್ತ್ರೀ ದೈವ, ಕುಮಾರಸ್ವಾಮಿ - ಪುರುಷ ದೈವ, ಹಾಗೂ ಕನ್ಯಾಕುಮಾರಿ - ಸ್ತ್ರೀ ದೈವ. ದಿನ ಕಳೆದಂತೆ ಅರ್ಚಕರು ಗುಡಿಯಲ್ಲಿ ಶಿವಲಿಂಗವನ್ನು ಪ್ರತಿಷ್ಠಾಪಿಸುವಂತೆ ಭೀಮಣ್ಣನವರಿಗೆ ಸಲಹೆಯಿತ್ತರು. ಇದರಂತೆ ಧರ್ಮದೇವತೆಗಳೂ ಕೂಡ ಕದ್ರಿಯಲ್ಲಿರುವ ಶ್ರೀಮಂಜುನಾಥನ ಲಿಂಗವನ್ನು ತಂದು ಪ್ರತಿಷ್ಠಾಪಿಸುವಂತೆ ತಿಳಿಸಿದರು ಹಾಗೂ ಈ ಕಾರ್ಯ ಸಂಪನ್ನಗೊಳಿಸಲು ತಮ್ಮ ಪ್ರತಿನಿಧಿಯಾಗಿ ಅಣ್ಣಪ್ಪಸ್ವಾಮಿಯನ್ನು ಕಳುಹಿಸಿದರು. ಧರ್ಮಸ್ಥಳದಲ್ಲಿರುವ ಶಿವನ ಒಂದು ಪ್ರತಿಮೆ.

ಚಿತ್ರಕೃಪೆ: Gopal Venkatesan

ಧರ್ಮಸ್ಥಳ ಹಾಗೂ ಶ್ರೀಕ್ಷೇತ್ರ ಕುಕ್ಕೆ:

ಧರ್ಮಸ್ಥಳ ಹಾಗೂ ಶ್ರೀಕ್ಷೇತ್ರ ಕುಕ್ಕೆ:

ಅಣ್ಣಪ್ಪಸ್ವಾಮಿಯವರು ಕದ್ರಿಗೆ ತೆರಳಿ ಅಲ್ಲಿಂದ ಶಿವಲಿಂಗವನ್ನು ಇಲ್ಲಿಗೆ ತರುವುದರೊಳಗೆ ಧರ್ಮಸ್ಥಳದ ಶ್ರೀಮಂಜುನಾಥನ ದೇವಾಲಯ ನಿರ್ಮಾಣವಾಗಿತ್ತೆಂದು ಹೇಳುತ್ತದೆ ಇಲ್ಲಿನ ಪ್ರತೀತಿ. ಮತ್ತೊಂದು ದಂತಕಥೆಯ ಪ್ರಕಾರ, 16 ನೇಯ ಶತಮಾನದಲ್ಲಿ ದೇವಾರಜ ಹೆಗ್ಗಡೆಯವರು ಉಡುಪಿಯ ವಾದಿರಾಜರಿಗೆ ಇಲ್ಲಿಗೆ ಭೇಟಿ ನೀಡಲು ಅಹ್ವಾನಿಸಿದ್ದರು. ಮೊದಲೆ ದಾನ ಧರ್ಮಗಳಿಗೆ ಹೆಸರಾಗಿದ್ದ ಕುಡುಮ ಕ್ಷೇತ್ರಕ್ಕೆ ವಾದಿರಾಜರು ಭೇಟಿ ನೀಡಲು ಸಂತೋಷದಿಂದ ಒಪ್ಪಿದರು ಹಾಗೂ ಭೇಟಿಯೂ ನೀಡಿದರು. ಧರ್ಮಸ್ಥಳದಲ್ಲಿರುವ ಬಾಹುಬಲಿ ಪ್ರತಿಮೆ.

ಚಿತ್ರಕೃಪೆ: Abdulla Al Muhairi

ಧರ್ಮಸ್ಥಳ ಹಾಗೂ ಶ್ರೀಕ್ಷೇತ್ರ ಕುಕ್ಕೆ:

ಧರ್ಮಸ್ಥಳ ಹಾಗೂ ಶ್ರೀಕ್ಷೇತ್ರ ಕುಕ್ಕೆ:

ನಂತರ ಧರ್ಮದೂಟ ಸ್ವೀಕರಿಸಲು ಒಪ್ಪಲಿಲ್ಲ. ಕಾರಣವೆಂದರೆ ಅಲ್ಲಿರುವ ಶಿವಲಿಂಗವು ವೈದಿಕ ಸಂಪ್ರದಾಯದಂತೆ ಪ್ರತಿಷ್ಠಾಪಿಸಲಾಗಿರಲಿಲ್ಲ ಎನ್ನುವುದು ಅವರ ಅಭಿಪ್ರಾಯವಾಗಿತ್ತು. ಈ ಸಂದರ್ಭದಲ್ಲಿ ಸ್ವತಃ ದೇವರಾಜ ಹೆಗ್ಗಡೆಯವರೆ ವಾದಿರಾಜರನ್ನು ಕುರಿತು ನಿಯಮಗಳಿಗನುಸಾರವಾಗಿ ಲಿಂಗವನ್ನು ತಾವೆ ಮರುಪ್ರತಿಷ್ಠಾಪಿಸಬೇಕೆಂದು ವಿನಂತಿಸಿಕೊಂಡರು. ಅವರ ವಿನಯತೆ, ದಾನ ಧಾರ್ಮಗಳ ಮನೋಭಾವದಿಂದ ಪ್ರಸನ್ನರಾದ ಯತಿಗಳು ಸ್ವತಃ ತಾವೆ ದೈವಿಕ ವಿಧಿ ವಿಧಾನಗಳ ಮೂಲಕ ಶಿವಲಿಂಗವನ್ನು ಪ್ರತಿಷ್ಠಾಪಿಸಿದರು ಹಾಗೂ ನೈತಿಕತೆ, ಸರಳತೆ, ಧರ್ಮ ನೆಲೆಯೂರಿರುವ ಈ ಕ್ಷೇತ್ರಕ್ಕೆ ಧರ್ಮಸ್ಥಳ ಎಂಬ ನಾಮಕರಣ ಮಾಡಿದರು. ಧರ್ಮಸ್ಥಳದಲ್ಲಿರುವ ಚಂದ್ರನಾಥ ಬಸದಿ

ಚಿತ್ರಕೃಪೆ: Naveenbm

ಧರ್ಮಸ್ಥಳ ಹಾಗೂ ಶ್ರೀಕ್ಷೇತ್ರ ಕುಕ್ಕೆ:

ಧರ್ಮಸ್ಥಳ ಹಾಗೂ ಶ್ರೀಕ್ಷೇತ್ರ ಕುಕ್ಕೆ:

ಅಂದಿನಿಂದ ಈ ಕ್ಷೇತ್ರವು ಶ್ರೀಕ್ಷೇತ್ರ ಧರ್ಮಸ್ಥಳವಾಗಿ ಜನಪ್ರಿಯವಾಗಿದೆ. ವಿಶೇಷವೆಂದರೆ ಈ ದೇವಸ್ಥಾನವು ಮೊದಲಿನಿಂದಲೂ ಜೈನ ಸಮುದಾಯದವರಿಂದ ನಡೆಸಲ್ಪಡುತ್ತಿದೆ. ಆಡಳಿತ ಮಂಡಳಿಯು ಜೈನ ಸಮುದಾಯವಾಗಿದ್ದರೂ ಸಹ ಇಲ್ಲಿನ ಪೂಜೆ ವಿಧಿ ವಿಧಾನಗಳು ಬ್ರಾಹ್ಮಣ ಸಮುದಾಯದಂತೆ ಬ್ರಹ್ಮಣ ಅರ್ಚಕರಿಂದ ನಡೆಯುತ್ತದೆ. ಇದು ಮೊದಲಿನಿಂದಲೂ ನಡೆದುಕೊಂಡು ಬಂದ ಪದ್ಧತಿಯಾಗಿದೆ. ಧರ್ಮಸ್ಥಳದ ಪ್ರವೇಶದ್ವಾರ ಗೋಪುರ.

ಚಿತ್ರಕೃಪೆ: Gnanapiti

ಧರ್ಮಸ್ಥಳ ಹಾಗೂ ಶ್ರೀಕ್ಷೇತ್ರ ಕುಕ್ಕೆ:

ಧರ್ಮಸ್ಥಳ ಹಾಗೂ ಶ್ರೀಕ್ಷೇತ್ರ ಕುಕ್ಕೆ:

ಸುಬ್ರಹ್ಮಣ್ಯ:


ಜಾತಕಗಳಲ್ಲಿರುವ ದೋಷ, ಬಹು ಮುಖ್ಯವಾಗಿ ಸರ್ಪ ದೋಷ ನಿವಾರಣೆಗೆ ಅತಿ ಪ್ರಮುಖ ಸ್ಥಳವಾಗಿ ಶ್ರೀ ಸುಬ್ರಹ್ಮಣ್ಯ ದೇವರು ನೆಲೆಸಿರುವ ಕುಕ್ಕೆಯು ದೇಶದಲ್ಲೆ ಅತಿ ಜನಪ್ರಿಯ ಹಾಗೂ ಹೆಸರುವಾಸಿಯಾದಂತಹ ಸರ್ಪದೋಷ ನಿವಾರಣಾ ಕ್ಷೇತ್ರವಾಗಿದೆ.

ಧರ್ಮಸ್ಥಳ ಹಾಗೂ ಶ್ರೀಕ್ಷೇತ್ರ ಕುಕ್ಕೆ:

ಧರ್ಮಸ್ಥಳ ಹಾಗೂ ಶ್ರೀಕ್ಷೇತ್ರ ಕುಕ್ಕೆ:

ಸಾಕ್ಷಾತ್ ಸುಬ್ರಹ್ಮಣ್ಯನೆ ಇಲ್ಲಿ ನೆಲೆಸಿರುವುದರಿಂದ ಈ ಸ್ಥಳವನ್ನು ಕುಕ್ಕೆ ಸುಬ್ರಹ್ಮಣ್ಯ ಎಂಬ ಹೆಸರಿನಿಂದ ಕರೆಯಲಾಗುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನಲ್ಲಿರುವ ಈ ದೇವಸ್ಥಾನವು ಮಂಗಳೂರಿನ ಅತಿ ಮುಖ್ಯ ದೇವಾಲಯವೂ ಸಹ ಆಗಿದೆ.

ಧರ್ಮಸ್ಥಳ ಹಾಗೂ ಶ್ರೀಕ್ಷೇತ್ರ ಕುಕ್ಕೆ:

ಧರ್ಮಸ್ಥಳ ಹಾಗೂ ಶ್ರೀಕ್ಷೇತ್ರ ಕುಕ್ಕೆ:

ಕುಕ್ಕೆ ದೇವಸ್ಥಾನಕ್ಕೆ ಭೇಟಿ ನೀಡುವ ಯಾತ್ರಾರ್ಥಿ ಅಥವಾ ಭಕ್ತಾದಿಗಳು ಶ್ರೀಕ್ಷೇತ್ರದಲ್ಲಿ ಹರಿದಿರುವ ಕುಮಾರಧಾರಾ ನದಿಗೆ ಭೇಟಿ ನೀಡಿ, ನದಿಯ ನೀರಿನಿಂದ ಶುಚಿರ್ಭುತರಾಗಿ ನಂತರ ಸುಬ್ರಹ್ಮಣ್ಯ ದೇವರ ದರುಶನ ಕೋರಿ ದೇವಸ್ಥಾನಕ್ಕೆ ಪ್ರವೇಶಿಸುತ್ತಾರೆ. ದೇವಸ್ಥಾನವನ್ನು ಹಿಂಭಾಗದಿಂದ ಪ್ರವೇಶಿಸಲಾಗುತ್ತದೆ.

ಧರ್ಮಸ್ಥಳ ಹಾಗೂ ಶ್ರೀಕ್ಷೇತ್ರ ಕುಕ್ಕೆ:

ಧರ್ಮಸ್ಥಳ ಹಾಗೂ ಶ್ರೀಕ್ಷೇತ್ರ ಕುಕ್ಕೆ:

ದೇವಸ್ಥಾನದ ಗರ್ಭಗೃಹದ ಎದುರು ಗರುಡಗಂಭವನ್ನು ಕಾಣಬಹುದು. ಇಲ್ಲಿ ವಾಸಿಸುತ್ತಿರುವ ವಾಸುಕಿ ಎಂಬ ವಿಷಕಾರಿ ಸರ್ಪದ ಜ್ವಾಲೆಯಂತಹ ಉಸಿರುಗಳಿಂದ ಜನರನ್ನು ಇದು ರಕ್ಷಿಸುತ್ತದೆ ಎನ್ನಲಾಗಿದೆ. ಆದ್ದರಿಂದ ಈ ಖಂಬಕ್ಕೂ ಸಹ ಪ್ರದಕ್ಷಿಣೆ ಹಾಕಲಾಗುತ್ತದೆ.

ಚಿತ್ರಕೃಪೆ: Raghu Jana

ಧರ್ಮಸ್ಥಳ ಹಾಗೂ ಶ್ರೀಕ್ಷೇತ್ರ ಕುಕ್ಕೆ:

ಧರ್ಮಸ್ಥಳ ಹಾಗೂ ಶ್ರೀಕ್ಷೇತ್ರ ಕುಕ್ಕೆ:

ಇಲ್ಲಿ ಮುಖ್ಯವಾಗಿ ಮೂರು ಸೇವೆಗಳನ್ನು ದೋಷವಿರುವವರು ಅಥವಾ ಭೇಟಿ ನೀಡುವ ಭಕ್ತಾದಿಗಳು ಮಾಡಬಹುದು. ಆ ಮೂರು ಮುಖ್ಯ ಪೂಜೆಗಳೆಂದರೆ ಒಂದು ಅಶ್ಲೇಷ ಬಲಿ ಪೂಜೆ, ನಾಗಪ್ರತಿಷ್ಠೆ ಹಾಗೂ ಇನ್ನೊಂದು ಸರ್ಪ ಸಂಸ್ಕಾರ/ಸರ್ಪದೋಷ. ಮುಖ್ಯ ದೇವಾಲಯದಿಂದ ಆದಿ ಸುಬ್ರಹ್ಮಣ್ಯ ದೇಗುಲಕ್ಕೆ ಹೋಗುವ ದಾರಿ ಹಾಗೂ ಪ್ರವೇಶ ಕಮಾನು.

ಧರ್ಮಸ್ಥಳ ಹಾಗೂ ಶ್ರೀಕ್ಷೇತ್ರ ಕುಕ್ಕೆ:

ಧರ್ಮಸ್ಥಳ ಹಾಗೂ ಶ್ರೀಕ್ಷೇತ್ರ ಕುಕ್ಕೆ:

ಅಶ್ಲೇಷ ಬಲಿ ಪೂಜೆಯನ್ನು ಪ್ರತಿ ತಿಂಗಳು ಅಶ್ಲೇಷ ನಕ್ಷತ್ರದ ಸಂದರ್ಭದಲ್ಲಿ ನೆರವೇರಿಸಲಾಗುತ್ತದೆ. ಒಂದೆ ದಿನದಲ್ಲಿ ಸಮಾಪ್ತಗೊಳ್ಳುವುದರಿಂದ ಭೇಟಿ ನೀಡಿದ ದಿನದಲ್ಲೆ ಸೇವಾ ಕೌಂಟರಿಗೆ ತೆರಳಿ ಅದರ ನಿಗದಿತ ಶುಲ್ಕ ಪಾವತಿಸಿ ರಸೀದಿ ಪಡೆದು ಈ ಸೇವೆಯಲ್ಲಿ ಭಾಗವಹಿಸಬಹುದು. ನೆನಪಿರಲಿ ಈ ಪೂಜೆಯು ಬೆಳಿಗ್ಗೆ 7 ಹಾಗೂ 9 ಘಂಟೆಗೆ ಮಾತ್ರ ನೆರವೇರಿಸಲಾಗುತ್ತದೆ. ಆದಿ ಸುಬ್ರಹ್ಮಣ್ಯನ ದೇವಸ್ಥಾನ.

ಧರ್ಮಸ್ಥಳ ಹಾಗೂ ಶ್ರೀಕ್ಷೇತ್ರ ಕುಕ್ಕೆ:

ಧರ್ಮಸ್ಥಳ ಹಾಗೂ ಶ್ರೀಕ್ಷೇತ್ರ ಕುಕ್ಕೆ:

ಇನ್ನುಳಿದಂತೆ ನಾಗಪ್ರತಿಷ್ಠೆ ಹಾಗೂ ಸರ್ಪ ಸಂಸ್ಕಾರವನ್ನು ಏಕಾದಶಿ, ದಶಮಿ, ಗೋಕುಲಾಷ್ಟಮಿ, ಗ್ರಹಣ, ಶಿವರಾತ್ರಿ ದಿನಗಳನ್ನು ಹೊರತುಪಡಿಸಿ ಮಿಕ್ಕೆಲ್ಲ ದಿನಗಳಲ್ಲಿ ಮಾಡಲಾಗುತ್ತದೆ. ನಾಗಪ್ರತಿಷ್ಠೆ ಮಾಡಲಿಚ್ಛಿಸುವವರು ಅದೆ ದಿನ ಅಥವಾ ಹಿಂದಿನ ದಿನ ಸೇವಾ ಕೌಂಟರಿನಲ್ಲಿ ನಿಗದಿತ ಶುಲ್ಕ (ನಾಲ್ಕು ನೂರು ರೂಪಾಯಿ) ಕಟ್ಟಿ ಈ ಸೇವೆಯನ್ನು ಪಡೆಯಬಹುದು. ಆದಿ ಸುಬ್ರಹ್ಮಣ್ಯ ದೇಗುಲದ ಬಳಿ ಇರುವ, ಸಾಮೂಹಿಕವಾಗಿ ಸರ್ಪ ಸಂಸ್ಕಾರ ಕ್ರಿಯೆ ನಡೆಯುವ ಯಾಗ ಶಾಲೆ.

ಧರ್ಮಸ್ಥಳ ಹಾಗೂ ಶ್ರೀಕ್ಷೇತ್ರ ಕುಕ್ಕೆ:

ಧರ್ಮಸ್ಥಳ ಹಾಗೂ ಶ್ರೀಕ್ಷೇತ್ರ ಕುಕ್ಕೆ:

ಆದರೆ ಸರ್ಪ ಸಂಸ್ಕಾರ ಮಾಡಬಯಸುವವರು ಎರಡು ದಿನಗಳ ಕಾಲ ಕ್ಷೇತ್ರದಲ್ಲಿ ಉಳಿಯಬೇಕಾಗುತ್ತದೆ. ಎರಡು ದಿನಗಳವರೆಗೆ ಧಾರ್ಮಿಕ ವಿಧಿ ವಿಧಾನಗಳನ್ನು ನಿರ್ದೇಶನದಂತೆ ಆಚರಿಸಿ ದೇವಸ್ಥಾನದಿಂದಲೆ ಒದಗಿಸಲಾಗುವ ಊಟೋಪಹಾರಗಳನ್ನು (ಗರಿಷ್ಠ ನಾಲ್ಕು ಮನೆ ಮಂದಿ ಪಾಲ್ಗೊಳ್ಳಬಹುದು) ಸೇವಿಸಬೇಕಾಗುತ್ತದೆ. ಇದರ ವಿಧಿ ವಿಧಾನಗಳ ಕುರಿತು ಮುಂಚಿತವಾಗಿಯೆ ದೇವಸ್ಥಾನದಲ್ಲಿ ವಿಚಾರಿಸಬೇಕು. ಇನ್ನೊಂದು ವಿಷಯವೆಂದರೆ ಸರ್ಪ ಸಂಸ್ಕಾರ ಸೇವೆಯನ್ನು ಮುಂಚಿತವಾಗಿಯೆ ಆನ್ ಲೈನ್ ನಲ್ಲಿ ಅಥವಾ ಕ್ಷೇತ್ರದ ಆಡಳಿತ ಕಚೇರಿಗೆ ಫೋನಾಯಿಸಿ ಕಾಯ್ದಿರಿಸಿಕೊಂಡಿರಬೇಕು. ದಿನನಿತ್ಯ ಎರಡು ಬಾರಿ ನಡೆಯುವ ಅನ್ನ ಸಂತರ್ಪಣೆಯ ಸಭಾಂಗಣ. ಇದನ್ನು ಶಣ್ಮುಖ ಹಾಲ್ ಎಂದು ಕೆರೆಯುತ್ತಾರೆ.

ಧರ್ಮಸ್ಥಳ ಹಾಗೂ ಶ್ರೀಕ್ಷೇತ್ರ ಕುಕ್ಕೆ:

ಧರ್ಮಸ್ಥಳ ಹಾಗೂ ಶ್ರೀಕ್ಷೇತ್ರ ಕುಕ್ಕೆ:

ಸುಬ್ರಹ್ಮಣ್ಯಕ್ಕೆ ತೆರಳಲು ಬೆಂಗಳೂರಿನಿಂದ ರಾತ್ರಿ ಹಾಗೂ ಬೆಳಿಗ್ಗೆ ಎರಡು ಸಮಯದಲ್ಲೂ ರೈಲು ದೊರೆಯುತ್ತದೆ. ಆದರೆ ನೀವು ಪ್ರವಾಸಕ್ಕೆ ತೆರಳುವಾಗ ಹೆಚ್ಚಿನ ಸಂಖ್ಯೆಯಲ್ಲಿದ್ದರೆ ಬೆಳಿಗ್ಗೆಯ ರೈಲಿನಲ್ಲಿ ಪ್ರಯಾಣಿಸುವುದು ಸ್ಮರಣೀಯ. ಏಕೆಂದರೆ ಸಕಲೇಶಪುರದಿಂದ ರೈಲು ಪ್ರಯಾಣವು ಹಸಿರು ಪಥವಾಗಿದ್ದು ಅತ್ಯದ್ಭುತ ಪರ್ವತ, ಪ್ರಪಾತಗಳ ನೋಟಗಳನ್ನು ಕರುಣಿಸುತ್ತದೆ. ಅಲ್ಲದೆ 50 ಕ್ಕೂ ಹೆಚ್ಚಿನ ಸುರಂಗ ಮಾರ್ಗಗಳು ನಿಮ್ಮನ್ನು ರೋಮಾಂಚಿತಗೊಳಿಸುತ್ತವೆ. ಸಕಲೇಶಪುರ ರೈಲು ನಿಲ್ದಾಣ. ಇದರ ನಂತರ ರೈಲು ಪ್ರಯಾಣವು ಹೆಚ್ಚಿನ ರೋಮಾಂಚಕತೆಯಿಂದ ಕೂಡಿರುತ್ತದೆ.

ಧರ್ಮಸ್ಥಳ ಹಾಗೂ ಶ್ರೀಕ್ಷೇತ್ರ ಕುಕ್ಕೆ:

ಧರ್ಮಸ್ಥಳ ಹಾಗೂ ಶ್ರೀಕ್ಷೇತ್ರ ಕುಕ್ಕೆ:

ರೈಲಿನಲ್ಲಿ ಚಲಿಸುವಾಗ ವೈವಿಧ್ಯಮಯ ಹೂವಿನ ಗಿಡಗಳು ನಿಮ್ಮನ್ನು ಮೂಕವಿಸ್ಮಿತರನ್ನಾಗಿಸುತ್ತದೆ. ಎತ್ತರದ ಬೆಟ್ಟಗುಡ್ಡಗಳು, ಪ್ರಪಾತಗಳು ರೋಮಾಂಚನಗೊಳಿಸುತ್ತವೆ.

ಧರ್ಮಸ್ಥಳ ಹಾಗೂ ಶ್ರೀಕ್ಷೇತ್ರ ಕುಕ್ಕೆ:

ಧರ್ಮಸ್ಥಳ ಹಾಗೂ ಶ್ರೀಕ್ಷೇತ್ರ ಕುಕ್ಕೆ:

ಕುಕ್ಕೆಯಲ್ಲಿ ತಂಗಲು ಸಾಕಷ್ಟು ವಸತಿ ಗೃಹಗಳು ಲಭ್ಯವಿದೆ. ನಿಮಗೆ ಮಿತವ್ಯಯದ ವಸತಿ ಗೃಹ ಬೇಕಾಗಿದ್ದಲ್ಲಿ ಬಹು ಮುಂಚಿತವಾಗಿ ಕೋಣೆಗಳನ್ನು ಕಾಯ್ದಿರಿಸಿಕೊಳ್ಳಬೇಕು. ಅಲ್ಲದೆ ಊಟ, ಉಪಹಾರಗಳಿಗಾಗಿ ಸಾಕಷ್ಟು ಹೋಟೆಲುಗಳು ದೇವಸ್ಥಾನದ ರಥ ಬೀದಿಯಲ್ಲೆ ಸ್ಥಿವಿದೆ.

ಧರ್ಮಸ್ಥಳ ಹಾಗೂ ಶ್ರೀಕ್ಷೇತ್ರ ಕುಕ್ಕೆ:

ಧರ್ಮಸ್ಥಳ ಹಾಗೂ ಶ್ರೀಕ್ಷೇತ್ರ ಕುಕ್ಕೆ:

ಕುಮಾರಕೃಪಾ ಎಂಬ ಮತ್ತೊಂದು ಹೋಟೆಲ್. ಮೈಸೂರು ನಿಯೋ ಕೆಫೆಯ ಎದುರು ಬದಿಯಲ್ಲೆ ಈ ಹೋಟೆಲ್ ಸ್ಥಿತವಿದೆ.

ಧರ್ಮಸ್ಥಳ ಹಾಗೂ ಶ್ರೀಕ್ಷೇತ್ರ ಕುಕ್ಕೆ:

ಧರ್ಮಸ್ಥಳ ಹಾಗೂ ಶ್ರೀಕ್ಷೇತ್ರ ಕುಕ್ಕೆ:

ಮುಖ್ಯ ದೇವಾಲಯದ ರಥ ಬೀದಿಯ ಎಡಗಡೆಗೆ ತಿರುಗಿ ಆದಿ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ತೆರಳಬಹುದು. ಈ ರಸ್ತೆಯಲ್ಲಿ ವಿವಿಧ ವಸ್ತುಗಳ, ಮಕ್ಕಳನ್ನು ಆಕರ್ಷಿಸುವ ಆಟಿಕೆಗಳ, ಕ್ಷೇತ್ರದ ಮಹಿಮೆ ಸಾರುವ ಚಿತ್ರಗಳ, ಸಂಗೀತಗಳ ವಿವಿಧ ವಸ್ತುಗಳು ದೊರೆಯುತ್ತವೆ.

ಧರ್ಮಸ್ಥಳ ಹಾಗೂ ಶ್ರೀಕ್ಷೇತ್ರ ಕುಕ್ಕೆ:

ಧರ್ಮಸ್ಥಳ ಹಾಗೂ ಶ್ರೀಕ್ಷೇತ್ರ ಕುಕ್ಕೆ:

ಸುಬ್ರಹ್ಮಣ್ಯದಲ್ಲಿ ದೇವಾಲಯದ ಹೊರತಾಗಿ ಕೆಲವು ಸ್ಮರಣೀಯ ಆಕರ್ಷಣೆಗಳನ್ನೂ ಸಹ ಕಾಣಬಹುದು. ದೇವಸ್ಥಾನದ ರಥ ಬೀದಿಯಿಂದ ಕೇವಲ ಎರಡು ಕಿ.ಮೀ ದೂರದಲ್ಲಿ ಬಿಲ ದ್ವಾರವನ್ನು ಕಾಣಬಹುದು.

ಧರ್ಮಸ್ಥಳ ಹಾಗೂ ಶ್ರೀಕ್ಷೇತ್ರ ಕುಕ್ಕೆ:

ಧರ್ಮಸ್ಥಳ ಹಾಗೂ ಶ್ರೀಕ್ಷೇತ್ರ ಕುಕ್ಕೆ:

ಸ್ಕಂದ ಪುರಾಣದಲ್ಲಿ ಉಲ್ಲೇಖಿಸಿರುವಂತೆ ಜನಮೇಜಯನ ಯಜ್ಞದಲ್ಲಿ ಗರುಡನಿಂದ ಸರ್ಪಗಳು ನಾಶವಾಗುತ್ತಿರಲು ಎಲ್ಲ ಸರ್ಪಗಳು ಭಯದಿಂದ ಹುತ್ತಗಳಲ್ಲಿ ಅಡಗತೊಡಗಿದವು. ಇದೆ ರೀತಿಯಾಗಿ ಇಲ್ಲಿರುವ ಬಿಲ ದ್ವಾರದಲ್ಲಿ ವಾಸುಕಿಯು ಸೇರಿಕೊಂಡಿತು. ಗರುಡನು ವಾಸುಕಿಯನ್ನು ಕಂಡುಹಿಡಿದು ಹೋರಾಡಲು ಪ್ರಾರಂಭಿಸಿದರೂ ಯಶ ಪಡೆಯಲಿಲ್ಲ. ಏಕೆಂದರೆ ವಾಸುಕಿಯು ಅತ್ಯಂತ ಶಕ್ತಿಶಾಲಿ ಸರ್ಪವಾಗಿರುವುದರೊಂದಿಗೆ ಶಿವನ ಪರಮ ಭಕ್ತವಾಗಿತ್ತು.

ಧರ್ಮಸ್ಥಳ ಹಾಗೂ ಶ್ರೀಕ್ಷೇತ್ರ ಕುಕ್ಕೆ:

ಧರ್ಮಸ್ಥಳ ಹಾಗೂ ಶ್ರೀಕ್ಷೇತ್ರ ಕುಕ್ಕೆ:

ಇದನ್ನು ಕಂಡ ಕಶ್ಯಪ ಮಹಾಮುನಿಯು, ಗರುಡನನ್ನು ಕುರಿತು ಈ ಸರ್ಪವು ಸಾಮಾನ್ಯವಾದುದಲ್ಲವೆಂದೂ ಅದನ್ನೂ ಸೆದೆ ಬಡಿಯಲು ಸಾಧ್ಯವಿಲ್ಲವೆಂದು ಮನದಟ್ಟು ಮಾಡಿದನು. ನಂತರ ವಾಸುಕಿಯನ್ನು ಕುರಿತು ಈ ಬಿಲದಿಂದ ತೆರಳಲು ಕೇಳಿದನು. ಈಗಲೂ ಸಹ ವಾಸುಕಿಯಿದ್ದ ಆ ಬಿಲದ್ವಾರವನ್ನು ಇಲ್ಲಿ ಕಾಣಬಹುದು.

ಧರ್ಮಸ್ಥಳ ಹಾಗೂ ಶ್ರೀಕ್ಷೇತ್ರ ಕುಕ್ಕೆ:

ಧರ್ಮಸ್ಥಳ ಹಾಗೂ ಶ್ರೀಕ್ಷೇತ್ರ ಕುಕ್ಕೆ:

ಇನ್ನೂ ಈ ಬಿಲದ್ವಾರದಿಂದ ಸುಮಾರು ಮುಂದೆ ಹೋದಂತೆ ಕೇವಲ ಐದು ನಿಮಿಷಗಳ ಕಾಲ್ನಡಿಗೆಯ ಅವಧಿಯಲ್ಲಿ ಕಾಶಿಕಟ್ಟೆಯ ದೊಡ್ಡ ಗಣಪನ ದೇವಸ್ಥಾನವನ್ನು ಕಾಣಬಹುದು. ಇಲ್ಲಿರುವ ಗಣಪ ಏಕಶಿಲೆಯಲ್ಲಿ ಕೆತ್ತಲಾದ ದೊಡ್ಡ ಗಣಪನಾಗಿದ್ದಾನೆ.

ಧರ್ಮಸ್ಥಳ ಹಾಗೂ ಶ್ರೀಕ್ಷೇತ್ರ ಕುಕ್ಕೆ:

ಧರ್ಮಸ್ಥಳ ಹಾಗೂ ಶ್ರೀಕ್ಷೇತ್ರ ಕುಕ್ಕೆ:

ಈ ದೇವಸ್ಥಾನ ನೋಡಿದ ಬಳಿಕ ನಿಮಗೆ ಸಮಯಾವಕಾಶವಿದ್ದರೆ ಖಂಡಿತವಾಗಿಯೂ ಮರಕತದ ದುರ್ಗಾ ಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಬಹುದು. ಕುಕ್ಕೆಯಿಂದ ಜಾಲ್ಸೂರು ಮಾರ್ಗದಲ್ಲಿ ಸುಮಾರು ಎಂಟು ಕಿ.ಮೀ ದೂರದಲ್ಲಿ ಮುಖ್ಯ ರಸ್ತೆಯಿಂದ ಬಲ ಬದಿಗೆ ತಿರುವು ಪಡೆಯುವುದರ ಮೂಲಕ ಈ ದೇವಸ್ಥಾನಕ್ಕೆ ತಲುಪಬಹುದು. ಈ ಒಟ್ಟಾರೆ ಪ್ರಯಾಣ ಆಕರ್ಷಕ ಘಟ್ಟ ರಸ್ತೆಗಳಿಂದ ಕೂಡಿದೆ.

ಧರ್ಮಸ್ಥಳ ಹಾಗೂ ಶ್ರೀಕ್ಷೇತ್ರ ಕುಕ್ಕೆ:

ಧರ್ಮಸ್ಥಳ ಹಾಗೂ ಶ್ರೀಕ್ಷೇತ್ರ ಕುಕ್ಕೆ:

ದುರ್ಗಾ ಪರಮೇಶ್ವರಿ ದೇವಸ್ಥಾನವು ಪ್ರಶಾಂತವಾದ ಸ್ಥಳದಲ್ಲಿ ನೆಲೆಗೊಂಡಿದ್ದು ಸುತ್ತಲೂ ಆಕರ್ಷಕವಾದ ದಟ್ಟನೆಯ ಗಿಡ ಮರಗಳು ಮನಸ್ಸನ್ನು ಪ್ರಫುಲ್ಲಿತಗೊಳಿಸುತ್ತವೆ. ನದಿಯ ಝುಳು ಝುಳು ಹರಿಯುವ ನೀರು, ಪಕ್ಷಿಗಳ ಚಿಲಿಪಿಲಿ ಕಲರವ, ಶಾಂತ ಪರಿಸರ ನೆಮ್ಮದಿಯ ಭಾವವನ್ನು ಮೂಡಿಸುತ್ತದೆ.

ಧರ್ಮಸ್ಥಳ ಹಾಗೂ ಶ್ರೀಕ್ಷೇತ್ರ ಕುಕ್ಕೆ:

ಧರ್ಮಸ್ಥಳ ಹಾಗೂ ಶ್ರೀಕ್ಷೇತ್ರ ಕುಕ್ಕೆ:

ಇನ್ನೊಂದು ವಿಶೇಷವೆಂದರೆ ಶೃಂಗೇರಿಯಲ್ಲಿರುವ ಹಾಗೆ ಇಲ್ಲಿಯೂ ಸಹ ನದಿಯ ತಟಕ್ಕೆ ಕಟ್ಟೆ ಹಾಗೂ ಮೆಟ್ಟಿಲುಗಳನ್ನು ನಿರ್ಮಿಸಲಾಗಿದ್ದು ಇಲ್ಲಿಯೂ ಸಹ ಮೀನುಗಳು ಅಪಾರವಾದ ಸಂಖ್ಯೆಯಲ್ಲಿ ದಂಡೆಯಲ್ಲಿ ಕಂಡುಬರುತ್ತವೆ.

ಧರ್ಮಸ್ಥಳ ಹಾಗೂ ಶ್ರೀಕ್ಷೇತ್ರ ಕುಕ್ಕೆ:

ಧರ್ಮಸ್ಥಳ ಹಾಗೂ ಶ್ರೀಕ್ಷೇತ್ರ ಕುಕ್ಕೆ:

ಈ ದೇವರು ಮೀನುಗಳನ್ನು ಹಿಡಿಯುವಂತಿಲ್ಲ ಆದರೆ ಇವುಗಳಿಗೆ ನೀವು ಅಕ್ಕಿ ಕಾಳುಗಳನ್ನು ಆಹಾರವಾಗಿ ನೀಡಬಹುದು. ಈ ಅಕ್ಕಿಕಾಳುಗಳನ್ನು ದುರ್ಗಾ ಪರಮೇಶ್ವರಿ ದೇವಸ್ಥಾನದ ಸೇವಾ ಕೌಂಟರಿನಲ್ಲಿ ಶುಲ್ಕ ಕಟ್ಟಿ ಪಡೆಯಬಹುದು. ಅಕ್ಕಿಗಳನ್ನು ನೀರಿನಲ್ಲಿ ಎಸೆಯುವಾಗ ಮೀನುಗಳು ಗುಂಪು ಗುಂಪಾಗಿ ಒಂದರ ಮೇಲೊಂದು ಹಾರುತ್ತ ತಿನ್ನುವುದನ್ನು ನೋಡಿದಾಗ ಆನಂದ ಉಂಟಾಗದೆ ಇರಲಾರದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X