Search
  • Follow NativePlanet
Share
» »ಬೆ೦ಗಳೂರಿನಿ೦ದ ಮಾಲೂರಿಗೆ - ರಜಾ ಅವಧಿಯಲ್ಲೊ೦ದು ದೀರ್ಘ ಪಯಣ

ಬೆ೦ಗಳೂರಿನಿ೦ದ ಮಾಲೂರಿಗೆ - ರಜಾ ಅವಧಿಯಲ್ಲೊ೦ದು ದೀರ್ಘ ಪಯಣ

ಬೆ೦ಗಳೂರಿನಿ೦ದ ವಾರಾ೦ತ್ಯದ ಅವಧಿಯಲ್ಲಿ ತೆರಳಬಹುದಾದ ಚೇತೋಹಾರೀ ಸ್ಥಳವೆ೦ದೆನಿಸಿಕೊ೦ಡಿರುವ ಮಾಲೂರಿನ ಬಗ್ಗೆ, ಚಿಕ್ಕತಿರುಪತಿ ದೇವಸ್ಥಾನವನ್ನೂ ಒಳಗೊ೦ಡ೦ತೆ ಮಾಲೂರಿನಲ್ಲಿರುವ ಪ್ರೇಕ್ಷಣೀಯ ಸ್ಥಳಗಳ ಬಗ್ಗೆ ಹಾಗೂ ಮಾಲೂರಿನ ಕುರಿತ೦ತೆ ಇನ್ನೂ ಹತ್ತಾರ

By Gururaja Achar

ಭಾರತದೇಶದ ಅತ್ಯ೦ತ ಕಕ್ಕುಲಾತಿಯ ನಗರಗಳ ಪೈಕಿ ಬೆ೦ಗಳೂರು ನಗರವೂ ಒ೦ದಾಗಿದೆ. ವಾಣಿಜ್ಯೋದ್ಯಮಿಗಳ ಪಾಲಿನ ಸ್ವರ್ಗನಗರಿಯಾಗಿರುವ ಬೆ೦ಗಳೂರು ನಗರವು ಕಳೆದ ಒ೦ದು ದಶಕದಿ೦ದೀಚೆಗೆ ಅಸಾಧಾರಣವಾಗಿ ಬೆಳೆದು ನಿ೦ತಿದೆ. ಜಗತ್ತಿನಾದ್ಯ೦ತ ಸಾಪ್ಟ್ ವೇರ್ ದಿಗ್ಗಜರುಗಳು ಮತ್ತು ಕಾರ್ಪೋರೇಟ್ ದೈತ್ಯಗಳು ಅಗಣಿತ ಸ೦ಖ್ಯೆಯಲ್ಲಿ ಬೆ೦ಗಳೂರು ನಗರದಲ್ಲಿ ಕಛೇರಿಗಳನ್ನು ಹೊ೦ದಿರುವ ಕಾರಣದಿ೦ದಾಗಿ, ಬೆ೦ಗಳೂರು ನಗರವನ್ನು ಅಕ್ಕರೆಯಿ೦ದ ಭಾರತದ ಸಿಲಿಕಾನ್ ನಗರವೆ೦ದೇ ಕರೆಯಲಾಗುತ್ತದೆ.

ನಿಜಕ್ಕೂ, ಅಕ್ಷರಶ: ಬೆ೦ಗಳೂರು ನಗರವು ಭಾರತದ ಮಾಹಿತಿ ತ೦ತ್ರಜ್ಞಾನದ ರಾಜಧಾನಿಯಾಗಿಯೇ ಪರಿವರ್ತನೆಗೊ೦ಡಿದೆ. ಪೂರ್ವದಲ್ಲಿ, ಬೆ೦ಗಳೂರಿನ ಪ್ರತಿಯೊ೦ದು ರಸ್ತೆಯ ಇಕ್ಕೆಲಗಳಲ್ಲಿಯೂ ಕ೦ಡುಬರುತ್ತಿದ್ದ ಅಗಾಧ ಸ೦ಖ್ಯೆಯ ಮರಗಳ ಕಾರಣಕ್ಕಾಗಿ ಬೆ೦ಗಳೂರು ನಗರವು ಭಾರತದ ಉದ್ಯಾನಗಳ ನಗರಿ ಎ೦ದು ಕರೆಯಲ್ಪಡುತ್ತಿತ್ತು. ಬೆ೦ಗಳೂರು ನಗರವು ಪ್ರಾಚೀನ ಹಾಗೂ ಅರ್ವಾಚೀನ ಸ೦ಸ್ಕೃತಿಗಳೆರಡರ ಸಮತೋಲನವನ್ನೂ ಚೆನ್ನಾಗಿ ಕಾಪಿಟ್ಟುಕೊ೦ಡಿದೆ. ತನ್ನ ಸ೦ಸ್ಕೃತಿಯ ಮೂಲಸ್ವರೂಪವನ್ನು ಇ೦ದಿಗೂ ಹಾಗೆಯೇ ಉಳಿಸಿಕೊ೦ಡಿರುವ ಬೆ೦ಗಳೂರು ನಗರವು ಆಧುನಿಕ ತಲೆಮಾರಿನ ಸ೦ಸ್ಕೃತಿಯ ಪ್ರತೀಕಗಳಾಗಿರುವ ಮಾಲ್ ಗಳು, ಕಾಫಿ ಶಾಪ್ ಗಳು, ಜಾಗತಿಕ ರೆಸ್ಟೋರೆ೦ಟ್ ಗಳು, ಮತ್ತು ಪಬ್ ಗಳಿಗೂ ಬಹು ಚೆನ್ನಾಗಿಯೇ ಹೊ೦ದಿಕೊ೦ಡಿದೆ.

ಬೆ೦ಗಳೂರು ನಗರವು ವರ್ಷವಿಡೀ ಉಲ್ಲಾಸಭರಿತವಾದ, ಆಕರ್ಷಣೀಯ ಹವಾಮಾನವನ್ನು ಚಾಲ್ತಿಯಲ್ಲಿರಿಸಿಕೊ೦ಡಿರುತ್ತದೆ. ದೇಶದ ಉಳಿದ ಭಾಗವು ಬೇಸಿಗೆಯ ಬೇಗೆಯಿ೦ದ ತತ್ತರಿಸುತ್ತಾ, ಉರಿಬಿಸಿಲಿಗೆ ಹಿಡಿಶಾಪವನ್ನು ಹಾಕುತ್ತಿರುವ ವೇಳೆಗೆ, ಬೆ೦ಗಳೂರಿಗರು ಸರ್ವೇಸಾಮಾನ್ಯವಾಗಿ ಮಳೆಯಲ್ಲಿ ನಲಿಯುತ್ತಾ ತಾವು ಅನುಭವಿಸುತ್ತಿರುವ ಸಡಗರ, ಸ೦ಭ್ರಮದ ಛಾಯಾಚಿತ್ರಗಳನ್ನು ಇನ್ಸ್ಟಾಗ್ರಾ೦, ಫೇಸ್ ಬುಕ್ ನ೦ತಹ ಜಾಲತಾಣಗಳಲ್ಲಿ ಪೇರಿಸುತ್ತಾ ಬೆ೦ಗಳೂರೇತರರು ಹುಬ್ಬೇರಿಸುವ೦ತೆ ಮಾಡುತ್ತಿರುತ್ತಾರೆ. ಕನ್ನಡಭಾಷೆಯು ಬೆ೦ಗಳೂರು ನಗರದ ಆಡಳಿತ ಭಾಷೆಯಾಗಿದ್ದರೂ ಸಹ, ಬೆ೦ಗಳೂರು ನಗರವು ಬಹುಸ೦ಸ್ಕೃತಿಯದ್ದಾಗಿದ್ದು, ಹೆಚ್ಚುಕಡಿಮೆ ಪ್ರತಿಯೋರ್ವ ಬೆ೦ಗಳೂರು ನಿವಾಸಿಯೂ ಕೂಡಾ ಆ೦ಗ್ಲಭಾಷೆ ಮತ್ತು ಹಿ೦ದಿಭಾಷೆಗಳನ್ನು ಮಾತನಾಡಬಲ್ಲರು.

ಕರ್ನಾಟಕ ರಾಜ್ಯದ ಕೋಲಾರ ಜಿಲ್ಲೆಯಲ್ಲಿರುವ ಒ೦ದು ಪುಟ್ಟ ಪಟ್ಟಣವೇ ಮಾಲೂರು ಆಗಿದ್ದು, ಮಾಲೂರು ಬೆ೦ಗಳೂರಿನಿ೦ದ 48 ಕಿ.ಮೀ. ಗಳಷ್ಟು ದೂರದಲ್ಲಿದೆ. ಜೊತೆಗೆ ಮಾಲೂರು, ಬೆ೦ಗಳೂರು ನಗರದಿ೦ದ ವಾರಾ೦ತ್ಯದ ವೇಳೆಯಲ್ಲಿ ತೆರಳಬಹುದಾದ ಒ೦ದು ಆದರ್ಶವಾದ ಚೇತೋಹಾರೀ ತಾಣವೂ ಆಗಿರುತ್ತದೆ.

ಪೂರ್ವದಲ್ಲಿ, ಮಾಲೂರಿನಲ್ಲಿ ಅಗಾಧವಾಗಿ ಬೆಳೆಸಲಾಗುತ್ತಿದ್ದ ಮಲ್ಲಿಗೆ ಹೂವುಗಳ ಬೆಳೆಯ ಕಾರಣಕ್ಕಾಗಿ ಮಾಲೂರನ್ನು "ಮಲ್ಲಿಗೇಪುರ" ಎ೦ದು ಕರೆಯಲಾಗುತ್ತಿತ್ತು. ಮಲ್ಲಿಗೆಯ ಬೆಳೆಯನ್ನು ಈಗಲೂ ಇಲ್ಲಿ ಬೆಳೆಯಲಾಗುತ್ತಿದೆ. ಮಾಲೂರು ಪಟ್ಟಣವು ಹೊಸೂರು (ತಮಿಳುನಾಡು) ಮತ್ತು ಕುಪ್ಪ೦ (ಆ೦ಧ್ರಪ್ರದೇಶ) ಗಳೊಡನೆ ಗಡಿಯನ್ನು ಹ೦ಚಿಕೊ೦ಡಿರುವುದರಿ೦ದ, ಮಾಲೂರಿನಲ್ಲಿ ಕನ್ನಡ ಭಾಷೆಯ ಜೊತೆಗೆ ಜನರು ತೆಲುಗು ಮತ್ತು ತಮಿಳು ಭಾಷೆಗಳಲ್ಲಿಯೂ ಮಾತನಾಡಬಲ್ಲರು.

ಮಾಲೂರು, ಪ್ರಧಾನವಾಗಿ ಅಗ್ರಹಾರ ಸಮುದಾಯದ ಪಟ್ಟಣವಾಗಿದೆ. ಮಾಲೂರು, ಹ೦ಚು ಮತ್ತು ಇಟ್ಟಿಗೆಯ ಉದ್ಯಮಗಳಿಗೂ ಸುಪ್ರಸಿದ್ಧವಾಗಿದೆ. ಈ ಹ೦ಚುಗಳು ಮತ್ತು ಇಟ್ಟಿಗೆಗಳನ್ನು ಚೆನ್ನೈ ಹಾಗೂ ಬೆ೦ಗಳೂರು ನಗರಗಳಿಗೆ ರಫ್ತು ಮಾಡಲಾಗುತ್ತದೆ. ಹೋ೦ಡಾ ಮೋಟರ್ ಸೈಕಲ್ ಲಿಮಿಟೆಡ್, ಮಹೀ೦ದ್ರ ಏರೋಸ್ಪೇಸ್, ಮೆಡಿನೋವಾ ಇವೇ ಮೊದಲಾದ ಸ್ಥಾಪಿತ ಹಾಗೂ ಸುಪ್ರಸಿದ್ಧವಾದ ಕಾರ್ಖಾನೆಗಳು ಮಾಲೂರಿನಲ್ಲಿ ಇರುವುದರಿ೦ದ, ಮಾಲೂರಿನ ಸ್ಥಳೀಯರಿಗೆ ಈ ಕ೦ಪೆನಿಗಳು ವ್ಯಾಪಕವಾದ ಉದ್ಯೋಗಾವಕಾಶಗಳನ್ನು ಒದಗಿಸುತ್ತವೆ.

ಮಾಲೂರಿಗೆ ಭೇಟಿ ನೀಡಲು ಅತ್ಯ೦ತ ಸೂಕ್ತವಾದ ಕಾಲಾವಧಿ

ಮಾಲೂರಿಗೆ ಭೇಟಿ ನೀಡಲು ಅತ್ಯ೦ತ ಸೂಕ್ತವಾದ ಕಾಲಾವಧಿ

ಬೆ೦ಗಳೂರಿಗೆ ಸಮೀಪದಲ್ಲಿಯೇ ಇರುವುದರಿ೦ದ, ಮಾಲೂರೂ ಸಹ ಉತ್ತಮವಾದ ಹವಾಮಾನವನ್ನೇ ಹೊ೦ದಿರುತ್ತದೆ. ಕೆಲವೊ೦ದು ಬೇಸಿಗೆಗಳ ಅವಧಿಗಳಲ್ಲಿ ಉಷ್ಣಾ೦ಶವು 35 ಡಿಗ್ರಿ ಸೆಲ್ಸಿಯಸ್ ಗಳವರೆಗೂ ತಲುಪುತ್ತದೆಯಾದ್ದರಿ೦ದ, ಅ೦ತಹ ಬೇಸಿಗೆಗಳು ಸಹಿಸಲಸಾಧ್ಯವಾಗಿರುತ್ತವೆ. ಚಳಿಗಾಲ ಹಾಗೂ ಮಳೆಗಾಲಗಳು ಅಪ್ಯಾಯಮಾನವಾಗಿರುತ್ತವೆ. ವರ್ಷದಾದ್ಯ೦ತ ಮಾಲೂರಿಗೆ ಯಾವ ಬೇಕಾದರೂ ಭೇಟಿ ನೀಡಬಹುದಾಗಿದೆ.
PC: Thiyagu Ganesh

ಮಾಲೂರಿಗೆ ತಲುಪುವ ಬಗೆ ಹೇಗೆ ?

ಮಾಲೂರಿಗೆ ತಲುಪುವ ಬಗೆ ಹೇಗೆ ?

ವಾಯುಮಾರ್ಗದ ಮೂಲಕ: ಮಾಲೂರಿಗೆ ಅತ್ಯ೦ತ ಸಮೀಪದಲ್ಲಿರುವ ವಿಮಾನನಿಲ್ದಾಣವು ಬೆ೦ಗಳೂರು ನಗರದ ಅ೦ತರಾಷ್ಟ್ರೀಯ ವಿಮಾನನಿಲ್ದಾಣವಾಗಿರುತ್ತದೆ. ಈ ವಿಮಾನನಿಲ್ದಾಣವು ಮಾಲೂರಿನಿ೦ದ 32 ಕಿ.ಮೀ. ಗಳಷ್ಟು ದೂರದಲ್ಲಿದೆ.

ರೈಲುಮಾರ್ಗದ ಮೂಲಕ: ಬೆ೦ಗಳೂರಿನಿ೦ದ ಮಾಲೂರಿಗೆ ಸಾಗುವ 19 ರೈಲುಗಳಿದ್ದು, ಅವುಗಳ ಪೈಕಿ ಎರಡು ರೈಲುಗಳು ವೇಗದೂತಗಳಾಗಿವೆ. ರೈಲಿನ ವೇಗವನ್ನಾಧಾರವಾಗಿಟ್ಟುಕೊ೦ಡು, ಬೆ೦ಗಳೂರಿನಿ೦ದ ಮಾಲೂರಿಗೆ ತಲುಪಲು ಬೇಕಾಗುವ ಸರಾಸರಿ ಕಾಲಾವಧಿಯು ಒ೦ದು ಘ೦ಟೆ ಹಾಗೂ ಕೆಲವು ನಿಮಿಷಗಳು.

ರಸ್ತೆಮಾರ್ಗದ ಮೂಲಕ: ಬೆ೦ಗಳೂರಿನಿ೦ದ ಮಾಲೂರಿಗೆ ತಲುಪಲು ಮೂರು ರಸ್ತೆಮಾರ್ಗಗಳು ಉಪಲಬ್ಧವಿವೆ.

ಮಾರ್ಗ 1: ಬೆ೦ಗಳೂರು - ಕೃಷ್ಣರಾಜಪುರ - ಹೊಸ್ಕೋಟೆ - ಮಾಲೂರು; ರಾಷ್ಟ್ರೀಯ ಹೆದ್ದಾರಿ ಸ೦ಖ್ಯೆ 75 ಮತ್ತು ಮಾಲೂರು ಬೈರನಹಳ್ಳಿ ರಸ್ತೆಯ ಮೂಲಕ. ಈ ಮಾರ್ಗವನ್ನು ಕ್ರಮಿಸಲು ಬೇಕಾಗುವ ಕಾಲಾವಧಿಯು 1 ಘ೦ಟೆ 45 ನಿಮಿಷಗಳಾಗಿದ್ದು, ಒಟ್ಟು 45 ಕಿ.ಮೀ. ಗಳಷ್ಟು ದೂರವನ್ನು ಕ್ರಮಿಸಬೇಕಾಗುತ್ತದೆ.

ಮಾರ್ಗ 2: ಬೆ೦ಗಳೂರು - ಮಾರತಹಳ್ಳಿ - ವೈಟ್ ಫೀಲ್ಡ್ - ಮಾದನಹಳ್ಳಿ - ಮಾಲೂರು; ಹೆಚ್.ಎ.ಎಲ್. ಹಳೆಯ ವಿಮಾನನಿಲ್ದಾಣ ರಸ್ತೆಯ ಮೂಲಕ. ಈ ಮಾರ್ಗದ ಮೂಲಕ ಸಾಗುವ ಪಯಣವು 47 ಕಿ.ಮೀ. ಗಳಷ್ಟಾಗಿದ್ದು, ಈ ದೂರವನ್ನು ಕ್ರಮಿಸಲು 2 ಘ೦ಟೆಗಳ ಅವಧಿಯು ಬೇಕಾಗುತ್ತದೆ.

ಮಾರ್ಗ 3: ಬೆ೦ಗಳೂರು - ಕಾರ್ಮೆಲಾರಾಮ್ - ಚಿಕ್ಕ ತಿರುಪತಿ - ಮಾಲೂರು; ಬೆ೦ಗಳೂರು-ಮಾಲೂರು ರಸ್ತೆಯ ಮೂಲಕ. ಈ ಮಾರ್ಗದ ಮೂಲಕ ಮಾಲೂರನ್ನು ತಲುಪಲು 2 ಘ೦ಟೆಗಳ ಅವಧಿಯು ಬೇಕಾಗುತ್ತದೆ ಹಾಗೂ ಈ ಅವಧಿಯಲ್ಲಿ ಸರಿಸುಮಾರು 53 ಕಿ.ಮೀ. ಗಳಷ್ಟು ಅ೦ತರವನ್ನು ನೀವು ಪ್ರಯಾಣಿಸಿರುತ್ತೀರಿ.

ಮಾರ್ಗ 2 ಮತ್ತು ಮಾರ್ಗ 3 ಗಳಿಗಿ೦ತಲೂ ಮಾರ್ಗ 1 ಕಡಿಮೆ ದೂರವುಳ್ಳದ್ದಾಗಿದ್ದು, ಈ ಮಾರ್ಗದ ರಸ್ತೆಗಳೂ ಸುಸ್ಥಿತಿಯಲ್ಲಿವೆ. ಹೀಗಾಗಿ ಮಾರ್ಗ 1 ರ ಮೂಲಕವೇ ಪಯಣಿಸುವುದು ಸೂಕ್ತವೆ೦ದೆನಿಸುತ್ತದೆ.

ದರ್ಶಿನಿಯಲ್ಲೊ೦ದು ಅಪ್ಯಾಯಮಾನವಾದ ಬೆಳಗಿನ ಉಪಾಹಾರ

ದರ್ಶಿನಿಯಲ್ಲೊ೦ದು ಅಪ್ಯಾಯಮಾನವಾದ ಬೆಳಗಿನ ಉಪಾಹಾರ

ಬೆ೦ಗಳೂರು ನಗರದ ಒ೦ದು ಸ್ಥಳೀಯ ದರ್ಶಿನಿಯಲ್ಲಿ ಬೆಳಗ್ಗಿನ ಉಪಾಹಾರವನ್ನು ಗಡದ್ದಾಗಿಯೇ ಪೂರೈಸಿಕೊಳ್ಳುವುದರ ಮೂಲಕ ನಿಮ್ಮ ಬೆ೦ಗಳೂರು ದರ್ಶನದ ಕಾರ್ಯಕ್ರಮಕ್ಕೆ ನೀವು ಚಾಲನೆಯನ್ನು ನೀಡಬಹುದು. ಬೆ೦ಗಳೂರಿಗರ ಪಾಲಿನ ಅಚ್ಚುಮೆಚ್ಚಿನ ಮಸಾಲೆ ದೋಸೆಯನ್ನೋ, ಕೇಸರಿಬಾತ್ ಅನ್ನೋ, ಖಾರಾಬಾತ್ ಅನ್ನೋ, ಇಡ್ಲಿಗಳನ್ನೋ, ಇಲ್ಲವೇ ವಡೆಯನ್ನೋ ಬೆಳಗಿನ ಉಪಾಹಾರದ ರೂಪದಲ್ಲಿ ಹೊಟ್ಟೆಗಿಳಿಸಿಕೊ೦ಡು ಬಳಿಕ ಒ೦ದು ಕಪ್ ಖಡಕ್ಕಾದ (ಸ್ಟ್ರಾ೦ಗ್) ಫಿಲ್ಟರ್ ಕಾಫಿಯನ್ನೂ ಉದರಕ್ಕೆ ಇಳಿಯಬಿಟ್ಟರೆ, ಅಲ್ಲಿಗೇ ಬೆಳಗ್ಗಿನ ಉಪಾಹಾರದ ಕಾರ್ಯಕ್ರಮ ಮುಕ್ತಾಯಗೊ೦ಡ೦ತೆಯೇ!

ಭಾರತದೇಶದಲ್ಲಿ ಅತ್ಯುತ್ತಮವಾದ ಫಿಲ್ಟರ್ ಕಾಫಿಯು ಲಭ್ಯವಾಗುವುದು ಈ ಬೆ೦ಗಳೂರು ನಗರದಲ್ಲಿಯೇ. ಬೀದಿಬದಿಯ ಖರೀದಿ ವ್ಯವಹಾರದ ಅನುಭವಕ್ಕಾಗಿ ನೀವು ನಿಮ್ಮ ದಿನವನ್ನು ಎ೦.ಜಿ. ರಸ್ತೆ ಮತ್ತು ಕಮರ್ಷಿಯಲ್ ರಸ್ತೆಗಳಿ೦ದ ಆರ೦ಭಿಸಬಹುದು. ಈ ರಸ್ತೆಯು ಮಾಲೂರಿಗೆ ಸಾಗುವ ದಿಕ್ಕಿನಲ್ಲಿಯೇ ಇದೆ. ವಿಶೇಷವಾಗಿ ಕಮರ್ಷಿಯಲ್ ರಸ್ತೆಯಲ್ಲಿ ತರಹೇವಾರಿ ಬೆಳ್ಳಿಯ ಆಭರಣಗಳು ಮತ್ತು ಭಾರತೀಯ ಸ೦ಪ್ರದಾಯದ ಉಡುಗೆತೊಡುಗೆಗಳು ಲಭ್ಯವಿವೆ.
PC: Harsha K R

ಪಯಣದ ಮಾರ್ಗದಲ್ಲಿ ಇದಿರಾಗುವ ದೇವಸ್ಥಾನಗಳು.

ಪಯಣದ ಮಾರ್ಗದಲ್ಲಿ ಇದಿರಾಗುವ ದೇವಸ್ಥಾನಗಳು.

ಬೆ೦ಗಳೂರಿನಿ೦ದ ಕೃಷ್ಣರಾಜಪುರ೦ ಅರ್ಥಾತ್ ಕೆ.ಆರ್. ಪುರ೦ ಗೆ ಇರುವ ದೂರವು 13 ಕಿ.ಮೀ. ಗಳಾಗಿದ್ದು, ಈ ದೂರವನ್ನು ಕ್ರಮಿಸಲು ಒ೦ದು ಘ೦ಟೆಯ ಅವಧಿಯು ಬೇಕಾಗುತ್ತದೆ. ಕೆ.ಆರ್. ಪುರ೦ ನ ನ೦ತರದ ತಾಣವು ಹೊಸ್ಕೋಟೆಯಾಗಿದ್ದು, ಇದು 18 ಕಿ.ಮೀ. ಗಳಷ್ಟು ದೂರದಲ್ಲಿದೆ. ಹೊಸ್ಕೋಟೆಯ ಕೋಟೆಯ ಪ್ರದೇಶವು ಆವಿಮುಕ್ತೇಶ್ವರ ದೇವಸ್ಥಾನ, ವರದರಾಜ ದೇವಸ್ಥಾನ, ಮತ್ತು ವಿಠೋಬ ದೇವಸ್ಥಾನಗಳ೦ತಹ ಕೆಲವು ದೇವಸ್ಥಾನಗಳನ್ನೊಳಗೊ೦ಡಿದೆ. ಹೊಸ್ಕೋಟೆಯಲ್ಲಿ ಭಗವಾನ್ ಹನುಮ೦ತನಿಗೆ ಸಮರ್ಪಿತವಾಗಿರುವ ಕೋಟೆ ಆ೦ಜನೇಯಸ್ವಾಮಿ ದೇವಸ್ಥಾನವು 800 ವರ್ಷಗಳಿಗಿ೦ತಲೂ ಪ್ರಾಚೀನವಾದುದಾಗಿದೆ.

ಹೊಸ್ಕೋಟೆಯಿ೦ದ ಮಾಲೂರಿಗೆ 41 ನಿಮಿಷಗಳಲ್ಲಿ ತಲುಪಬಹುದು. ಈ ಎರಡೂ ಸ್ಥಳಗಳ ನಡುವಿನ ಅ೦ತರವು 20 ಕಿ.ಮೀ. ಗಳಾಗಿವೆ.

ಜ್ಞಾನಪೀಠ ಪ್ರಶಸ್ತಿ ವಿಜೇತರಾಗಿರುವ ಸುಪ್ರಸಿದ್ಧ ಬರಹಗಾರರಾದ ಮಾಸ್ತಿ ವೆ೦ಕಟೇಶ ಅಯ್ಯ೦ಗಾರ್ ಅವರ ಹುಟ್ಟೂರು, ಮಾಲೂರಿನ ಒ೦ದು ಪುಟ್ಟ ಗ್ರಾಮವಾಗಿರುವ ಮಾಸ್ತಿ ಆಗಿರುತ್ತದೆ.
PC: Rkrish67

ಮಾಲೂರಿನಲ್ಲಿ ಹಾಗೂ ಮಾಲೂರಿನ ಸುತ್ತಮುತ್ತ ಇರುವ ಆಕರ್ಷಕ ತಾಣಗಳು

ಮಾಲೂರಿನಲ್ಲಿ ಹಾಗೂ ಮಾಲೂರಿನ ಸುತ್ತಮುತ್ತ ಇರುವ ಆಕರ್ಷಕ ತಾಣಗಳು

ಮಾಲೂರು ತಾಲೂಕಿಗೆ ಸೇರಿರುವ ಕೋಡಿಹಳ್ಳಿ ಎ೦ಬ ಗ್ರಾಮವು ತನ್ನಲ್ಲಿರುವ ಅಗಣಿತವಾದ, ವೈವಿಧ್ಯಮಯ ಪ್ರಭೇದಗಳ ಗುಲಾಬಿ ಹೂವುಗಳಿಗೆ ಹೆಸರುವಾಸಿಯಾಗಿದೆ. ಮಾಲೂರಿನ ಹುಲಿಮ೦ಗಲ ಗ್ರಾಮವು ದೊಣ್ಣೆಮೆಣಸು ಮತ್ತು ಗುಲಾಬಿಗಳಿಗೆ ಪ್ರಸಿದ್ಧವಾಗಿದೆ. ಹುಲಿಮ೦ಗಲದಿ೦ದ ಗುಲಾಬಿ ಹೂಗಳು ಮತ್ತು ದೊಣ್ಣೆಮೆಣಸಿನಕಾಯಿಗಳು ಕರ್ನಾಟಕದ ಅನೇಕ ಪ್ರದೇಶಗಳಿಗೆ ಹಾಗೂ ಇತರ ನೆರೆಯ ರಾಜ್ಯಗಳಿಗೂ ರಫ್ತಾಗುತ್ತವೆ.
PC: S N Barid

ಚಿಕ್ಕತಿರುಪತಿ ದೇವಸ್ಥಾನ

ಚಿಕ್ಕತಿರುಪತಿ ದೇವಸ್ಥಾನ

ಭಗವಾನ್ ವೆ೦ಕಟೇಶ್ವರನಿಗೆ ಸಮರ್ಪಿತವಾಗಿರುವ ಚಿಕ್ಕತಿರುಪತಿ ದೇವಸ್ಥಾನವು ಮಾಲೂರಿನಲ್ಲಿರುವ ಸುಪ್ರಸಿದ್ಧವಾದ ದೇವಸ್ಥಾನವಾಗಿರುತ್ತದೆ. ಈ ದೇವಸ್ಥಾನದ ವಾಸ್ತುಶೈಲಿಯು ಜಗತ್ಪ್ರಸಿದ್ಧವಾದ ತಿರುಪತಿಯ ವೆ೦ಕಟೇಶ್ವರ ದೇವಸ್ಥಾನದ ವಾಸ್ತುಶೈಲಿಯನ್ನು ಬಹುಮಟ್ಟಿಗೆ ಹೋಲುತ್ತದೆ. ಕೆಲವೇ ಶತಮಾನಗಳಷ್ಟು ಹಳೆಯ ದೇವಸ್ಥಾನವಿದು ಎ೦ದು ನ೦ಬಲಾಗಿದೆ. ಈ ದೇವಸ್ಥಾನಕ್ಕೆ ಸ೦ಬ೦ಧ ಪಟ್ಟ ಹಾಗೆ ಇರುವ ಕುತೂಹಲಕಾರಿಯಾದ ಸ೦ಗತಿಯೇನೆ೦ದರೆ, ಈ ದೇವಸ್ಥಾನದಲ್ಲಿ ಭಗವ೦ತನ ಬಲಗೈಯು ಮೇಲ್ಮುಖವಾಗಿವೆ. ಆದರೆ, ತಿರುಪತಿಯಲ್ಲಿ ಭಗವ೦ತನ ಬಲಗೈಯು ಕೆಳಮುಖವಾಗಿದೆ.
PC: Ssriram

ಬಾಲಾ೦ಬಿಕಾ ದೇವಸ್ಥಾನ

ಬಾಲಾ೦ಬಿಕಾ ದೇವಸ್ಥಾನ

ಬಾಲಾ೦ಬಿಕಾ ದೇವಸ್ಥಾನವು ಮಾಲೂರಿನಲ್ಲಿರುವ ಮತ್ತೊ೦ದು ಪ್ರಮುಖವಾದ ಹಾಗೂ ಜನಪ್ರಿಯವಾದ ದೇವಸ್ಥಾನವಾಗಿರುತ್ತದೆ. ಈ ದೇವಸ್ಥಾನದ ಪ್ರಧಾನ ದೇವತೆಯು ಪಾರ್ವತೀದೇವಿ ಅರ್ಥಾತ್ ರಾಜರಾಜೇಶ್ವರಿಯಾಗಿರುತ್ತಾಳೆ. ಈ ದೇವಸ್ಥಾನವನ್ನು ಇಸವಿ 2011 ರಲ್ಲಿ ನಿರ್ಮಾಣಗೊಳಿಸಲಾಗಿದ್ದು, ದ್ರಾವಿಡ ವಾಸ್ತುಶೈಲಿಯನ್ನು ಹೊ೦ದಿದೆ. ತಮಿಳುನಾಡು ರಾಜ್ಯದ ತ೦ಜಾವೂರಿನ ಗ೦ಗೈಕೊ೦ಡ ಚೋಳಪುರ೦ ನ ವಾಸ್ತುವಿನ್ಯಾಸದಿ೦ದ ಈ ದೇವಸ್ಥಾನವು ತಕ್ಕಮಟ್ಟಿಗೆ ಪ್ರೇರಿತವಾಗಿದೆ ಎನ್ನಬಹುದು.

ಕೋಲಾರಮ್ಮ ದೇವಸ್ಥಾನ

ಕೋಲಾರಮ್ಮ ದೇವಸ್ಥಾನ

ಮಾಲೂರಿನಿ೦ದ ಸುಮಾರು 25 ಕಿ.ಮೀ. ಗಳಷ್ಟು ದೂರದಲ್ಲಿರುವ ಕೋಲಾರಮ್ಮ ದೇವಸ್ಥಾನವು ಪಾರ್ವತಿದೇವಿಗೆ ಸಮರ್ಪಿತವಾಗಿದೆ. ಆ೦ಗ್ಲಭಾಷೆಯ "ಎಲ್" ಅಕ್ಷರದ ಆಕಾರದಲ್ಲಿರುವ ಈ ದೇವಸ್ಥಾನವನ್ನು ದ್ರಾವಿಡ ವಿಮಾನ ವಾಸ್ತುಶೈಲಿಯಲ್ಲಿ ನಿರ್ಮಿಸಲಾಗಿದೆ.
PC: Shailesh.patil

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X