Search
  • Follow NativePlanet
Share
» »ಅಪರೂಪದ ಹಾಗೂ ವಿಶಿಷ್ಟ ಬ್ರಹ್ಮನ ದೇವಸ್ಥಾನಗಳು

ಅಪರೂಪದ ಹಾಗೂ ವಿಶಿಷ್ಟ ಬ್ರಹ್ಮನ ದೇವಸ್ಥಾನಗಳು

By Vijay

ಹಿಂದೂ ನಂಬಿಕೆಯ ಪ್ರಕಾರ, ತ್ರಿಮೂರ್ತಿಗಳಲ್ಲಿ ಒಬ್ಬನಾದ ಬ್ರಹ್ಮ ದೇವನನ್ನು ಸೃಷ್ಟಿಯ ಕರ್ತೃ ಎನ್ನಲಾಗಿದೆ. ಇಡೀ ಬ್ರಹ್ಮಾಂಡವೆ ಬ್ರಹ್ಮದೇವನಿಂದ ನಿರ್ಮಿಸಲ್ಪಟ್ಟಿದೆ ಎಂದು ನಂಬಲಾಗುತ್ತದೆ. ಇನ್ನುಳಿದಂತೆ ಮಿಕ್ಕ ಇಬ್ಬರು ಪ್ರಮುಖ ದೇವತೆಗಳೆಂದರೆ ವಿಷ್ಣು ಹಾಗೂ ಶಿವ. ಒಬ್ಬನು ಲೋಕ ಪರಿಪಾಲಕನಾಗಿದ್ದರೆ, ಶಿವ ವಿನಾಶಕ/ಪರಿವರ್ತಕನೆಂದೆ ಹೇಳಲಾಗುತ್ತದೆ.

ಸಾಮಾನ್ಯವಾಗಿ ತ್ರಿಮೂರ್ತಿಗಳಲ್ಲಿಬ್ಬರಾದ ಶಿವ ಹಾಗೂ ವಿಷ್ಣುವಿಗೆ ಮುಡಿಪಾದ ಸಹಸ್ರಾರು ದೇವಾಲಯಗಳನ್ನು, ಕ್ಷೇತ್ರಗಳನ್ನು ಭಾರತದಾದ್ಯಂತ ಕಾಣಬಹುದಾಗಿದೆ. ಆದರೆ ಸೃಷ್ಟಿಕರ್ತನೆಂದೆ ಹೇಳಲಾಗುವ ಬ್ರಹ್ಮಮನಿಗೆ ಸಂಂಬಂಧಿಸಿದಂತೆ ಅವನಿಗೆ ಮುಡಿಪಾದ ದೇವಾಲಯಗಳು ಬಹಳ ವಿರಳ. ಇದಕ್ಕೆ ಒಂದು ಹಿನ್ನಿಲೆಯಿದ್ದು ಅದು ಕೌತುಕಮಯವಾಗಿದೆ.

ವಿಶೇಷ ಲೇಖನ : ವಿಷ್ಣುವಿಗೆ ಮುಡಿಪಾದ ವಿಶಿಷ್ಟ ದೇವಾಲಯಗಳು

ಸಂಕ್ಷಿಪ್ತವಾಗಿ ಹೇಳಬೇಕೆಂದರೆ, ಒಂದೊಮ್ಮೆ ವಿಷ್ಣು ಹಾಗೂ ಬ್ರಹ್ಮ ದೇವರ ಮಧ್ಯೆ ತಮ್ಮಲ್ಲಿ ಮಹಾನರಾರು...ಎಂಬುದರ ಕುರಿತು ಪೈಪೋಟಿ ಎದ್ದು ಅದಕ್ಕೆ ಸಂಬಂಧಿಸಿದಂತೆ ನಡೆಯುವ ಒಂದು ಸ್ಪರ್ಧೆಯಲ್ಲಿ ಬ್ರಹ್ಮನು ತಮ್ಮ ಪ್ರಭುತ್ವಕ್ಕಾಗಿ ಸುಳ್ಳು ಹೇಳುತ್ತಾರೆ. ಈ ರೀತಿ ಸುಳ್ಳು ಹೇಳಿರುವುದರಿಂದ ಬ್ರಹ್ಮನು ಶಾಪವೊಂದಕ್ಕೆ ತಗುಲಿಕೊಂಡು ಅದರ ಪ್ರಕಾರ, ಲೊಕದಲ್ಲಿ ಬ್ರಹ್ಮನ ಕುರಿತು ಪೂಜೆ ನಿಷಿದ್ಧವಾಗುತ್ತವೆ.

ಈ ಒಂದು ಕಾರಣದಿಂದ ಇಂದಿಗೂ ಭಾರತದಲ್ಲಿ ಬ್ರಹ್ಮನಿಗೆ ಕುರಿತಾದ ದೇವಾಲಯಗಳಿರುವುದು ಅತಿ ಅತಿ ವಿರಳ ಎಂದೆ ಹೇಳಬಹುದು. ಇರುವ ಕೆಲವೆ ಕೆಲವು ದೇವಾಲಯಗಳು ಒಂದು ರೀತಿಯಲ್ಲಿ ಕುತೂಹಲ ಕೆರಳಿಸಿ ಸಾಕಷ್ಟು ಜನರಿಂದ ಭೇಟಿ ನೀಡಲ್ಪಡುತ್ತವೆ. ಪ್ರಸ್ತುತ ಲೇಖನದ ಮೂಲಕ ಬ್ರಹ್ಮನಿಗೆ ಮುಡಿಪಾದ ಕೆಲವೆ ಕೆಲವು ಅಪರೂಪದ ದೇವಾಲಯಗಳ ಕುರಿತು ತಿಳಿಯಿರಿ.

ಅಪರೂಪದ ಬ್ರಹ್ಮನ ದೇವಾಲಯಗಳು:

ಅಪರೂಪದ ಬ್ರಹ್ಮನ ದೇವಾಲಯಗಳು:

ಭಾರತದಲ್ಲಿ ಜಗತ್ಪಿತ ಬ್ರಹ್ಮನಿಗೆಂದೆ ಮುಡಿಪಾದ ದೇವಾಲಯಗಳಿರುವುದೆ ಅಪರೂಪ. ಅದರಲ್ಲೂ ಇರುವ ಕೆಲವೆ ಕೆಲವು ವಿರಳವಾದ ದೇವಸ್ಥಾನಗಳ ಪೈಕಿ ರಾಜಸ್ಥಾನ ರಾಜ್ಯದ ಪುಷ್ಕರ್ ನಲ್ಲಿರುವ ಬ್ರಹ್ಮನ ದೇವಸ್ಥಾನ ದೇಶದಲ್ಲೆ ಹೆಚ್ಚು ಜನಪ್ರೀಯತೆಗಳಿಸಿರುವ ದೇವಸ್ಥಾನವಾಗಿದೆ. ಪವಿತ್ರವಾದ ಪುಷ್ಕರ್ ಸರೋವರದ ತಟದಲ್ಲಿ ನೆಲೆಸಿರುವ ಈ ದೇವಸ್ಥಾನ ಅದ್ಭುತವಾದ ದಂತಕಥೆಯನ್ನೊಳಗೊಂಡಿದೆ.

ಚಿತ್ರಕೃಪೆ: commons.wikimedia

ಅಪರೂಪದ ಬ್ರಹ್ಮನ ದೇವಾಲಯಗಳು:

ಅಪರೂಪದ ಬ್ರಹ್ಮನ ದೇವಾಲಯಗಳು:

ಪ್ರಸ್ತುತ ದೇವಸ್ಥಾನದ ರಚನೆಯು 14 ನೆಯ ಶತಮಾನಕ್ಕೆ ಸಂಬಂಧಿಸಿದ್ದಾಗಿದ್ದರೂ, ಈ ದೇವಾಲಯ ಏನಿಲ್ಲವೆಂದರೂ ಸುಮಾರು ಎರಡು ಸಾವಿರ ವರ್ಷಗಳಷ್ಟು ಪುರಾತನವಾದುದೆಂದು ನಂಬಲಾಗಿದೆ. ಕಲ್ಲು ಹಾಗೂ ಅಮೃತ ಶಿಲೆಗಳನ್ನುಪಯೋಗಿಸಿ ಈ ಭವ್ಯ ದೇವಾಲಯದ ನಿರ್ಮಾಣ ಮಾಡಲಾಗಿದೆ.

ಚಿತ್ರಕೃಪೆ: Rashmi.parab

ಅಪರೂಪದ ಬ್ರಹ್ಮನ ದೇವಾಲಯಗಳು:

ಅಪರೂಪದ ಬ್ರಹ್ಮನ ದೇವಾಲಯಗಳು:

ಈ ದೇವಾಲಯವು ನೋಡಲು ಬಹಳ ಆಕರ್ಷಕವಾಗಿ ಕಂಡುಬರುತ್ತದೆ ಕಾರಣ ಇದು ಒಂದು ವಿಶಿಷ್ಟವಾದ ಕೆಂಪು ಬಣ್ಣದ ಶಿಖರಗಳನ್ನೊಳಗೊಂಡಿರುವುದು ಮತ್ತು ಅದರ ಮೇಲೆ ಹಂಸ ಪಕ್ಷಿಯ ಸುಂದರವಾದ ಕಲಾಕೃತಿಗಳನ್ನು ಕೆತ್ತಲಾಗಿರುವುದು.

ಚಿತ್ರಕೃಪೆ: commons.wikimedia

ಅಪರೂಪದ ಬ್ರಹ್ಮನ ದೇವಾಲಯಗಳು:

ಅಪರೂಪದ ಬ್ರಹ್ಮನ ದೇವಾಲಯಗಳು:

ದೇವಸ್ಥಾನದ ಮುಖ್ಯ ಭಾಗವೆಂದು ಹೇಳಲಾಗುವ ಗರ್ಭ ಗೃಹದಲ್ಲಿ ಮೂಲ ದೇವರಾಗಿ ಬ್ರಹ್ಮ ಹಾಗೂ ಆತನ ಎರಡನೆಯ ಮಡದಿಯಾದ ಗಾಯತ್ರಿ ದೇವಿಯ ಪ್ರತಿಮೆಗಳನ್ನು ಕಾಣಬಹುದು. ಈ ದೇವಾಲಯವು ಸನ್ಯಾಸಿ ಸಮುದಾಯದ ಅರ್ಚಕರಿಂದ ನಿರ್ವಹಿಸಲ್ಪಡುತ್ತದೆ.

ಚಿತ್ರಕೃಪೆ: Redtigerxyz

ಅಪರೂಪದ ಬ್ರಹ್ಮನ ದೇವಾಲಯಗಳು:

ಅಪರೂಪದ ಬ್ರಹ್ಮನ ದೇವಾಲಯಗಳು:

ಪ್ರತಿ ವರ್ಷ ಕಾರ್ತಿಕ ಪೌರ್ಣಮಿಯ ಸಂದರ್ಭದಂದು ಬ್ರಹ್ಮ ದೇವರಿಗೆ ಗೌರವ ಸೂಚಕವಾಗಿ ಅದ್ದೂರಿಯಾದ ಉತ್ಸವವೊಂದನ್ನು ಇಲ್ಲಿ ಆಚರಿಸಲಾಗುತ್ತದೆ. ಈ ಉತ್ಸವ ನಡೆಯುತ್ತಿರುವ ಸಂದರ್ಭದಲ್ಲಿ ಬ್ರಹ್ಮನ ಕುರಿತು ಭಕ್ತಿ ಇರುವವರು, ಕುತೂಹಲ ಇರುವವರು, ಪ್ರವಾಸಿಗರು ದೇಶದ ನಾನಾ ಭಾಗಗಳಿಂದ ಇಲ್ಲಿಗೆ ಭೇಟಿ ನೀಡುತ್ತಾರೆ. ವಿಶೇಷವಾಗಿ ಭಕ್ತಾದಿಗಳು ಪವಿತ್ರವಾದ ಪುಷ್ಕರ್ ಸರೋವರದಲ್ಲಿ ಮಿಂದು ಬ್ರಹ್ಮನ ದರ್ಶನ ಪಡೆಯುತ್ತಾರೆ.

ಚಿತ್ರಕೃಪೆ: Fulvio Spada

ಅಪರೂಪದ ಬ್ರಹ್ಮನ ದೇವಾಲಯಗಳು:

ಅಪರೂಪದ ಬ್ರಹ್ಮನ ದೇವಾಲಯಗಳು:

ಬ್ರಹ್ಮನಿಗೇಕೆ ಪೂಜೆ ಮಾಡಲಾಗುವಿದಿಲ್ಲ ಎಂದು ಈಗಾಗಲೆ ನಿಮಗೆ ತಿಳಿದಿದ್ದರೂ ಇದಕ್ಕೆ ಇನ್ನೊಂದು ಕಥೆಯ ಚಾಲ್ತಿಯಲ್ಲಿದೆ. ಅದು ವಿಶೇಷವಾಗಿ ಪುಷ್ಕರ್ ಸರೋವರದೊಂದಿಗೆ ನಂಟು ಹಾಕಿಕೊಂಡಿದೆ. ಮುಂದಿನ ಸ್ಲೈಡುಗಳಲ್ಲಿ ಈ ಕೌತುಕವಾದ ಕಥೆಯನ್ನು ಓದಿರಿ.

ಚಿತ್ರಕೃಪೆ: LRBurdak

ಅಪರೂಪದ ಬ್ರಹ್ಮನ ದೇವಾಲಯಗಳು:

ಅಪರೂಪದ ಬ್ರಹ್ಮನ ದೇವಾಲಯಗಳು:

ಹಿಂದೂ ಗ್ರಂಥ "ಪದ್ಮ ಪುರಾಣ"ದ ಪ್ರಕಾರ, ಒಂದೊಮ್ಮೆ ರಾಕ್ಷಸನಾದ ವಜ್ರನಾಭ (ಇನ್ನೊಂದು ಅವತರಿಣಿಕೆಯಲ್ಲಿ ವಜ್ರನಾಶ ಎನ್ನಲಾಗಿದೆ) ಎಂಬವವನು ಬ್ರಹ್ಮನು ಸೃಷ್ಟಿಸಿದ್ದ ಅವನ ಮಕ್ಕಳನ್ನು ಕೊಲ್ಲಲು ಹಾಗೂ ಜನರನ್ನು ಹಿಂಸಿಸಲು ಪ್ರಯತ್ನಿಸುತ್ತಿರುವುದನ್ನು ಬ್ರಹ್ಮ ದೇವರು ನೋಡಿದರು. ಪುಷ್ಕರ್ ನಗರ, ಬೀದಿ, ಪರಿಸರಗಳ ಸುಂದರ ನೋಟ.

ಚಿತ್ರಕೃಪೆ: 4ocima

ಅಪರೂಪದ ಬ್ರಹ್ಮನ ದೇವಾಲಯಗಳು:

ಅಪರೂಪದ ಬ್ರಹ್ಮನ ದೇವಾಲಯಗಳು:

ಇದರಿಂದ ಕೋಪಗೊಂಡ ಬ್ರಹ್ಮ ದೇವನು ತನ್ನಲ್ಲಿರುವ ಕಮಲದ ಹೂವನ್ನು ಆಯುಧದಂತೆ ಬಳಸಿ, ವಜ್ರನಾಭ ರಾಕ್ಷಸನನ್ನು ವಧಿಸಿದನು. ಈ ಸಂದರ್ಭದಲ್ಲಿ ಬ್ರಹ್ಮನ ಕಮಲದ ಹೂವಿನ ಮೂರು ದಳ ಅಥವಾ ಪಕಳೆಗಳು ಭೂಮಿಯ ಮೂರು ಭಾಗಗಳಲ್ಲಿ ಬಿದ್ದು ಸರೋವರಗಳಾಗಿ ಪರಿವರ್ತಿತವಾದವು. ಪುಷ್ಕರ್ ನಗರ, ಬೀದಿ, ಪರಿಸರಗಳ ಸುಂದರ ನೋಟ.

ಚಿತ್ರಕೃಪೆ: Alena Getman

ಅಪರೂಪದ ಬ್ರಹ್ಮನ ದೇವಾಲಯಗಳು:

ಅಪರೂಪದ ಬ್ರಹ್ಮನ ದೇವಾಲಯಗಳು:

ಹೀಗೆ ಬ್ರಹ್ಮನ ಕೈಯಲ್ಲಿದ್ದ ಕಮಲದ "ಪುಷ್ಪ"ವು ಅವನ "ಕರ" ಅಂದರೆ ಕೈಯಿಂದ ಕೆಳಗೆ ಬಿದ್ದಿದುದರಿಂದ ಬ್ರಹ್ಮನು ಆ ದಳಗಳು ಬಿದ್ದ ಆ ಸ್ಥಳವನ್ನು "ಪುಷ್ಕರ" ಎಂದು ನಾಮಕರಣ ಮಾಡಿದನು. ಹೀಗಾಗಿ ಇಲ್ಲಿ ಜೇಷ್ಠ ಪುಷ್ಕರ, ಮಧ್ಯ ಪುಷ್ಕರ ಹಾಗೂ ಕನಿಷ್ಠ ಪುಷ್ಕರಗಳೆಂಬ ಮೂರು ಭಾಗಗಳನ್ನು ಕಾಣಬಹುದು. ಪುಷ್ಕರ್ ನಗರ, ಬೀದಿ, ಪರಿಸರಗಳ ಸುಂದರ ನೋಟ.

ಚಿತ್ರಕೃಪೆ: Arian Zwegers

ಅಪರೂಪದ ಬ್ರಹ್ಮನ ದೇವಾಲಯಗಳು:

ಅಪರೂಪದ ಬ್ರಹ್ಮನ ದೇವಾಲಯಗಳು:

ಇದಾದ ತರುವಾಯ ಬ್ರಹ್ಮನು ಇಲ್ಲಿ ಯಜ್ಞವೊಂದನ್ನು ಮಾಡಲು ನಿರ್ಧರಿಸಿದನು. ಆದರೆ ಅದಕ್ಕೆ ರಾಕಷಸರಿಂದ ಯಾವ ರೀತಿಯಲ್ಲೂ ಧಕ್ಕೆ ಅಥವಾ ಅಡೆ ತಡೆ ಉಂಟಾಗಬಾರದೆಂಬ ಉದ್ದೇಶದಿಂದ ಪುಷ್ಕರದ ನಾಲ್ಕು ದಿಕ್ಕುಗಳಲ್ಲಿ ಅಂದರೆ ಪೂರ್ವಕ್ಕೆ ಸೂರಗಿರಿ, ಪಷ್ಚಿಮಕ್ಕೆ ಸಂಚೂರ, ಉತ್ತರಕ್ಕೆ ನೀಲ್ಗಿರಿ ಹಾಗೂ ದಕ್ಷಿಣಕ್ಕೆ ರತ್ನಗಿರಿ ಎಂಬ ಪರ್ವತಗಳನ್ನು ಸೃಷ್ಟಿಸಿ, ಕಾಯುವುದಕ್ಕೆ ದೇವತೆಯಾದಿಗಳನ್ನು ನೇಮಿಸಿದನು. ಪುಷ್ಕರ್ ನಗರ, ಬೀದಿ, ಪರಿಸರಗಳ ಸುಂದರ ನೋಟ.

ಚಿತ್ರಕೃಪೆ: Fulvio Spada

ಅಪರೂಪದ ಬ್ರಹ್ಮನ ದೇವಾಲಯಗಳು:

ಅಪರೂಪದ ಬ್ರಹ್ಮನ ದೇವಾಲಯಗಳು:

ನಂತರ ಬ್ರಹ್ಮನು ಯಜ್ಞವನ್ನು ಪ್ರಾರಂಭಿಸಿ ದಂಪತಿ ಸಮೇತರಾಗಿ ಅಗ್ನಿ ಹವಿಸ್ಸನ್ನು ನೀಡುವ ಸಂದರ್ಭ ಬಂದೊದಗಿದಾಗ ಅವನ ಮಡದಿಯಾದ ಸಾವಿತ್ರಿ (ಸರಸ್ವತಿ)ಯು ಇನ್ನೂ ಬರದಿರುವುದನ್ನು ಗಮನಿಸಿದನು. ಇತ್ತ ಸರಸ್ವತಿ ದೇವಿಯು ಆ ಯಜ್ಞಕ್ಕೆ ಹೊರಡಲು ಲಕ್ಷ್ಮಿ, ಇಂದ್ರ ಮುಂತಾದ ದೇವತೆಯರಿಗಾಗಿ ಕಾದಿದ್ದಳು. ಪುಷ್ಕರ್ ನಗರ, ಬೀದಿ, ಪರಿಸರಗಳ ಸುಂದರ ನೋಟ.

ಚಿತ್ರಕೃಪೆ: Eduardo Sciammarella

ಅಪರೂಪದ ಬ್ರಹ್ಮನ ದೇವಾಲಯಗಳು:

ಅಪರೂಪದ ಬ್ರಹ್ಮನ ದೇವಾಲಯಗಳು:

ಇನ್ನೇನು, ಸಮಯ ಮೀರಿ ಹೋಗುತ್ತದೆಂದಾದ ಬ್ರಹ್ಮನು ವಿಧಿಯಿಲ್ಲದೆ ಆ ಸ್ಥಳದಲ್ಲೆ ಇದ್ದ ಗುರ್ಜರ ಸಮುದಾಯದ ಗಾಯತ್ರಿ ಎಂಬುವವಳನ್ನು ಮದುವೆಯಾಗಿ, ಅವನ ಪಕ್ಕ್ದಲ್ಲಿ ಕುಳ್ಳಿರಿಸಿ ಆಚರಣೆ ಮುಂದುವರೆಸಿದನು. ಇದು ನಡೆದು ಹೋದ ಕೆಲ ಸಮಯದ ನಂತರ ಸರಸ್ವತಿ ದೇವಿಯು ಅಲ್ಲಿ ಬಂದು ತನ್ನ ಪತಿಯ ಪಕ್ಕದಲ್ಲಿ ಇನ್ನೊಬ್ಬಳು ಕುಳಿತಿರುವುದನ್ನು ಸಹಿಸಲಾರದೆ ಕೋಪಗೊಂಡಳು. ಪುಷ್ಕರ್ ನಗರ, ಬೀದಿ, ಪರಿಸರಗಳ ಸುಂದರ ನೋಟ.

ಚಿತ್ರಕೃಪೆ: Mahatma4711

ಅಪರೂಪದ ಬ್ರಹ್ಮನ ದೇವಾಲಯಗಳು:

ಅಪರೂಪದ ಬ್ರಹ್ಮನ ದೇವಾಲಯಗಳು:

ಕೋಪಗೊಂಡ ಸಾವಿತ್ರಿ (ಸರಸ್ವತಿ)ಯು ಬ್ರಹ್ಮನನ್ನು ಕುರಿತು ಇನ್ನೂ ಮುಂದೆ ಜಗತ್ತಿನಲ್ಲಿ ನಿನ್ನನ್ನು ಯಾರೂ ಪೂಜಿಸದಿರಲಿ ಎಂದು ಶಾಪವನ್ನು, ಕಾಯಿಸಿದ್ದಕ್ಕೆ ಇಂದ್ರನನ್ನು ಕುರಿತು ನೀನು ಪ್ರತಿ ಯುದ್ಧಗಳಲ್ಲಿ ಸೋಲು ಎಂದು ಹಾಗೂ ಲಕ್ಷ್ಮಿಯನ್ನು ಕುರಿತು ನೀನು ಪತಿಯ ವಿರಹ ಅನುಭವಿಸು ಎಂತಲೂ ಶಾಪವಿತ್ತಳು. ಪುಷ್ಕರ್ ನಗರ, ಬೀದಿ, ಪರಿಸರಗಳ ಸುಂದರ ನೋಟ.

ಚಿತ್ರಕೃಪೆ: Uzi Yachin

ಅಪರೂಪದ ಬ್ರಹ್ಮನ ದೇವಾಲಯಗಳು:

ಅಪರೂಪದ ಬ್ರಹ್ಮನ ದೇವಾಲಯಗಳು:

ಆದರೆ ಗಾಯಿತ್ರಿ ದೇವಿಯು ತಾನು ಕೈಯಲ್ಲಿ ಹಿಡಿದಿದ್ದ ಅಮ್ರ್‍ತವನ್ನು ಅಗ್ನಿಗೆ ಅರ್ಪಿಸಿ, ಸರಸ್ವತಿಯ ಶಾಪವು ಕರಗಿ ಹೋಗುವಂತೆ ಮಾಡಿದಳು. ಅದರ ಫಲವಾಗಿ ಬ್ರಹ್ಮನ ಪೂಜೆ ಪುಷ್ಕರಿಗಷ್ಟೆ ಸೀಮಿತವಾಗುವಂತೆಯೂ, ವಿಷ್ಣು ಮಾನವ ರೂಪದಲ್ಲಿ ರಾಮನಾಗಿ ಅವತರಿಸಿ ಸೀತೆಯನ್ನು ಸೇರಿ ವಿರಹ ವೇದನೆ ಹೋಗುವಂತೆಯೂ ಹಾಗೂ ಇಂದ್ರನಿಗೆ ಸ್ವರ್ಗ ಶಾಶ್ವತ ಸ್ಥಾನವಾಗಿರುವಂತೆಯೂ ಮಾಡಿದಳು. ಪುಷ್ಕರ್ ನಗರ, ಬೀದಿ, ಪರಿಸರಗಳ ಸುಂದರ ನೋಟ.

ಚಿತ್ರಕೃಪೆ: amanderson2

ಅಪರೂಪದ ಬ್ರಹ್ಮನ ದೇವಾಲಯಗಳು:

ಅಪರೂಪದ ಬ್ರಹ್ಮನ ದೇವಾಲಯಗಳು:

ಕೊನೆಗೆ ಇವೆಲ್ಲವುಗಳಿಂದ ಪಶ್ಚಾತಾಪಪಟ್ಟ ಸಾವಿತ್ರಿ (ಸರಸ್ವತಿ) ದೇವಿಯು ರತ್ನಗಿರಿ ಪರ್ವತಕ್ಕೆ ಹೋಗಿ ತನ್ನನ್ನು ತಾನು ಸಾವಿತ್ರಿ ನೀರಿನ ತೊರೆ ಅಥವಾ ಬುಗ್ಗೆಯಾಗಿ ಹರಿದು ಪುಷ್ಕರದ ಒಂದು ಭಾಗವಾಗಿ ಹೋದಳು. ಇಂದಿಗೂ ಸಾವಿತ್ರಿ ದೇವಿಗೆ ಮುಡಿಪಾದ ದೇವಾಲಯವಿರುವುದನ್ನು ರತ್ನಗಿರಿ ಪರ್ವತದಲ್ಲಿ ಕಾಣಬಹುದು. ಪುಷ್ಕರ್ ನಗರ, ಬೀದಿ, ಪರಿಸರಗಳ ಸುಂದರ ನೋಟ.

ಚಿತ್ರಕೃಪೆ: Koen

ಅಪರೂಪದ ಬ್ರಹ್ಮನ ದೇವಾಲಯಗಳು:

ಅಪರೂಪದ ಬ್ರಹ್ಮನ ದೇವಾಲಯಗಳು:

ಬ್ರಹ್ಮ ದೇವರು ಇಲ್ಲಿ ಯಜ್ಞ ಮಾಡಿದ ತರುವಾಯ ವಿಶ್ವಾಮಿತ್ರ ಮುನಿಗಳು, ಬ್ರಹ್ಮನಿಗೆ ಮುಡಿಪಾಗಿ ಪ್ರಪ್ರಥಮವಾಗಿ ಈ ದೇವಾಲಯದ ನಿರ್ಮಾಣ ಮಾಡಿದರೆನ್ನಲಾಗಿದೆ. ಅಲ್ಲದೆ ಸ್ವತಃ ಬ್ರಹ್ಮನೆ ಈ ದೇವಾಲಯ ನಿರ್ಮಾಣವಾಗಬೇಕಾಗಿರುವ ಸ್ಥಳವನ್ನು ಸೂಚಿಸಿದನೆಂದೂ ಸಹ ಹೇಳಲಾಗುತ್ತದೆ. ಆನಂತರ ಎಂಟನೇಯ ಶತಮಾನದಲ್ಲಿ ಆದಿ ಗುರು ಶಂಕರಾಚಾರ್ಯರು ಈ ದೇವಾಲಯದ ನವೀಕರಣ ಮಾಡಿದರೆನ್ನಲಾಗಿದೆ. ಪುಷ್ಕರ್ ನಗರ, ಬೀದಿ, ಪರಿಸರಗಳ ಸುಂದರ ನೋಟ.

ಚಿತ್ರಕೃಪೆ: Pablo Nicolás Taibi Cicare

ಅಪರೂಪದ ಬ್ರಹ್ಮನ ದೇವಾಲಯಗಳು:

ಅಪರೂಪದ ಬ್ರಹ್ಮನ ದೇವಾಲಯಗಳು:

ಚತುರ್ಮುಖ ಬ್ರಹ್ಮಲಿಂಗೇಶ್ವರಸ್ವಾಮಿ ದೇವಸ್ಥಾನ : ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಚೆಬ್ರೋಲು ಎಂಬ ಗ್ರಾಮದಲ್ಲಿ ಚತುರ್ಮುಖ ಬ್ರಹ್ಮನ ಈ ಪುರಾತನ ದೇವಾಲಯವಿದೆ. ಮೂಲತಃ ಚೆಬ್ರೋಲು ದೇವಾಲಯಗಳ ಗ್ರಾಮವಾಗಿದ್ದು ಇಲ್ಲಿ ನೂರಕ್ಕೂ ಅಧಿಕ ಸಂಖ್ಯೆಯಲ್ಲಿ ಐತಿಹಾಸಿಕ ಮಹತ್ವವಿರುವ ದೇವಾಲಯಗಳಿರುವುದನ್ನು ಕಾಣಬಹುದು. ಅವುಗಳಲ್ಲಿ ಅಪರೂಪದ ಚತುರ್ಮುಖ ಬ್ರಹ್ಮನ ದೇವಸ್ಥಾನವೂ ಸಹ ಒಂದಾಗಿದ್ದು ವಿಶಿಷ್ಟವಾಗಿ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಗುಂಟೂರಿನಿಂದ ಚೆಬ್ರೋಲು ಕೇವಲ 18 ಕಿ.ಮೀ ಗಳಷ್ಟು ದೂರದಲ್ಲಿದ್ದು ಸುಲಭವಾಗಿ ತಲುಪಬಹುದಾಗಿದೆ.

ಚಿತ್ರಕೃಪೆ: Adityamadhav83

ಅಪರೂಪದ ಬ್ರಹ್ಮನ ದೇವಾಲಯಗಳು:

ಅಪರೂಪದ ಬ್ರಹ್ಮನ ದೇವಾಲಯಗಳು:

ಈ ದೇವಸ್ಥಾನದಲ್ಲಿ ಬ್ರಹ್ಮನು ಚತುರ್ಮುಖಗಳ ಸಮೇತನಾಗಿ ಪ್ರತಿಷ್ಠಾಪಿಸಲ್ಪಟ್ಟಿದ್ದಾನೆ. ಅಲ್ಲದೆ ಪ್ರತಿನಿತ್ಯ ಶಿವನ ಜೊತೆಗೆ ಬ್ರಹ್ಮನು ಇಲ್ಲಿ ಪೂಜಿಸಲ್ಪಡುತ್ತಾನೆ. ಸುಮಾರು 200 ವರ್ಷಗಳ ಹಿಂದೆ ರಾಜಾ ವಾಸಿರೆಡ್ಡಿ ವೆಂಕಟಾದ್ರಿ ಎಂಬುವವರಿಂದ ಈ ದೇವಾಲಯವು ನಿರ್ಮಿಸಲ್ಪಟ್ಟಿದೆ. ಇಲ್ಲಿರುವ ಸ್ಥಳ ಪುರಾಣದಂತೆ ಜಗತ್ಪಿತ ಬ್ರಹ್ಮನು ಭೃಗು ಮಹರ್ಷಿಯಿಂದ ಭೂಮಿಯ ಮೇಲೆ ಎಂದಿಗೂ ಪೂಜಿಸಲ್ಪಡದ ಹಾಗೆ ಶಾಪವನ್ನು ಪಡೆದಿರುವುದರಿಂದ ಶಿವಲಿಂಗವೊಂದರಲ್ಲಿ ನಾಲ್ಕು ತಲೆ, ಶರೀರವುಳ್ಳ ಬ್ರಹ್ಮನ ಮೂರ್ತಿಯನ್ನು ಕೆತ್ತಿ ಪೂಜಿಸಲಾಗುತ್ತದೆ.

ಚಿತ್ರಕೃಪೆ: Adityamadhav83

ಅಪರೂಪದ ಬ್ರಹ್ಮನ ದೇವಾಲಯಗಳು:

ಅಪರೂಪದ ಬ್ರಹ್ಮನ ದೇವಾಲಯಗಳು:

ಸುಂದರವಾದ ಕಲ್ಯಾಣಿಯೊಂದರ ಮಧ್ಯದಲ್ಲಿ ಬ್ರಹ್ಮನಿಗೆ ಮುಡಿಪಾದ ಈ ದೇವಾಲಯ ಸ್ಥಿತವಿದೆ. ಕಲ್ಯಾಣಿಯ ನಾಲ್ಕು ದಿಕ್ಕುಗಳಲ್ಲಿ ಅಂದರೆ ಪೂರ್ವ ಹಾಗೂ ಪಶ್ಚಿಮಗಳಲ್ಲಿ ಶಿವನಿಗೆ ಮುಡಿಪಾದ, ಉತ್ತರ ಮತ್ತು ದಕ್ಷಿಣಗಳಲ್ಲಿ ವಿಷ್ಣುವಿಗೆ ಮುಡಿಪಾದ ಚಿಕ್ಕ ದೇಗುಲಗಳಿವೆ. ಅಲ್ಲದೆ ಶಕ್ತಿ ದೇವತೆಗಳ ಚಿಕ್ಕ ಸನ್ನಿಧಿಗಳಿರುವುದನ್ನೂ ಸಹ ಕಾಣಬಹುದು.

ಚಿತ್ರಕೃಪೆ: Pavandpr

ಅಪರೂಪದ ಬ್ರಹ್ಮನ ದೇವಾಲಯಗಳು:

ಅಪರೂಪದ ಬ್ರಹ್ಮನ ದೇವಾಲಯಗಳು:

ಓಚಿರಾ ಪರಬ್ರಹ್ಮ ದೇವಾಲಯ : ಇಲ್ಲಿ ಪರಬ್ರಹ್ಮನ ನಿರ್ವಿಕಾರ ರೂಪವನ್ನು ಅದ್ಭುತವಾಗಿ ಸಂರಕ್ಷಿಸಲ್ಪಟ್ಟ ಗಿಡಗಳ ಮಧ್ಯೆ ಹಾಗೂ ಗೋಡೆಗಳಿಲ್ಲದ ಕೇವಲ ಖಂಬ ಹಾಗೂ ಛಾವಣಿಯಿರುವ ದೇವಾಲಯದ ಮಧ್ಯೆ ಪೂಜಿಸಲಾಗುತ್ತದೆ. ಓಚಿರಾ ಕೇರಳದ ಕೊಲ್ಲಂ ಜಿಲ್ಲೆಯಲ್ಲಿರುವ ಒಂದು ಸಣ್ಣ ಪಟ್ಟಣವಾಗಿದೆ. ಇದು ಕೇರಳದ ಪ್ರಖ್ಯಾತ ಹಾಗೂ ಅತಿ ಪುರಾತನ ಕ್ಷೇತ್ರಗಳ ಪೈಕಿ ಒಂದಾಗಿದೆ.

ಚಿತ್ರಕೃಪೆ: Fotokannan

ಅಪರೂಪದ ಬ್ರಹ್ಮನ ದೇವಾಲಯಗಳು:

ಅಪರೂಪದ ಬ್ರಹ್ಮನ ದೇವಾಲಯಗಳು:

ಈ ಕ್ಷೇತ್ರ ಹಾಗೂ ದೇವಾಲಯಕ್ಕೆ ಹೊಂದಿಕೊಂಡಂತೆ ಸಾಕಷ್ಟು ದಂತ ಕಥೆಗಳು ಚಾಲ್ತಿಯಲ್ಲಿವೆ. ನಿರ್ವಿಕಾರ ಪರಬ್ರಹ್ಮನಿಗೆ ಸಂಬಂಧಿಸಿದಂತೆ 36 ಎಕರೆಗಳಷ್ಟು ವಿಶಾಲವಾದ ಸ್ಥಳದಲ್ಲಿ ವ್ಯಾಪಿಸಿರುವ ಈ ದೇವಾಲಯ ತಾಣವು ಕೇರಳದ ಅತಿ ಪುರಾತನ ಪುಣ್ಯ ಕ್ಷೇತ್ರಗಳ ಪೈಕಿ ಒಂದಾದ ದೇವಾಲಯ ಕ್ಷೇತ್ರವಾಗಿದೆ. ಅಲಪುಳ ಮತ್ತು ಕೊಲ್ಲಂ ಜಿಲ್ಲೆಗಳ ಗಡಿಯ ಬಳಿ ಈ ಕ್ಷೇತ್ರವು ನೆಲೆಸಿದ್ದು ಕೊಲ್ಲಂ ಹಾಗೂ ಅಲಪುಳಾದಿಂದ ಇಲ್ಲಿಗೆ ಸುಲಭವಾಗಿ ತಲುಪಬಹುದಾಗಿದೆ.

ಚಿತ್ರಕೃಪೆ: Neon

ಅಪರೂಪದ ಬ್ರಹ್ಮನ ದೇವಾಲಯಗಳು:

ಅಪರೂಪದ ಬ್ರಹ್ಮನ ದೇವಾಲಯಗಳು:

ಇನ್ನೊಂದು ವಿಶೇಷವೆಂದರೆ ಇಲ್ಲಿ ಅತ್ಯದ್ಭುತವಾಗಿ ಆಚರಿಸಲ್ಪಡುವ ಉತ್ಸವಗಳು. ಓಚಿರಕ್ಕಾಲಿ ಉತ್ಸವ ಎಂಬ ಉತ್ಸವವು ಜೂನ್ ಸಮಯದಲ್ಲಿ ಹಾಗೂ ಓಚಿರಾ ವೃಷ್ಚಿಕ ಉತ್ಸವ ಡಿಸೆಂಬರ್ ಅಥವಾ ಜನವರಿಗಳಲ್ಲಿ ಅದ್ದೂರಿಯಾಗಿ ಆಚರಿಸಲ್ಪಡುತ್ತವೆ.

ಚಿತ್ರಕೃಪೆ: Neon

ಅಪರೂಪದ ಬ್ರಹ್ಮನ ದೇವಾಲಯಗಳು:

ಅಪರೂಪದ ಬ್ರಹ್ಮನ ದೇವಾಲಯಗಳು:

ಓಚಿರಕ್ಕಾಲಿ ಉತ್ಸವವು ಕೆಸರಿನಲ್ಲಿ ಪರಿಣಿತರು ಯುದ್ಧ ಕಲಾ ನೈಪುಣ್ಯತೆಯನ್ನು ಪ್ರದರ್ಶಿಸುವ ಉತ್ಸವವಾಗಿದೆ. ಹಿಂದೆ ಯೋಧರು ಹೀಗೆ ಈ ರೀತಿಯ ಉತ್ಸವದಲ್ಲಿ ಪಾಲ್ಗೊಂಡು ಹೆಚ್ಚಿನ ಯುವಕರನ್ನು ಸೆಳೆಯುತ್ತಿದ್ದರು ಅಲ್ಲದೆ ತಮ್ಮ ಯುದ್ಧ ಕಲೆಯನ್ನು ಅಭಿವೃದ್ಧಿಪಡಿಸಿಕೊಳ್ಳುತ್ತಿದ್ದರು.

ಚಿತ್ರಕೃಪೆ: Fotokannan|Kannanshanmugam

ಅಪರೂಪದ ಬ್ರಹ್ಮನ ದೇವಾಲಯಗಳು:

ಅಪರೂಪದ ಬ್ರಹ್ಮನ ದೇವಾಲಯಗಳು:

ಮತ್ತೊಂದು ಸಡಗರದ ಆಚರಣೆಯಾದ "ಇರುಪತಾಟ್ಟಂ ಓಣಂ" ಎಂಬ ಉತ್ಸವವನ್ನು ಪರಬ್ರಹ್ಮನ ದೇಗುಲದ ಈ ಕ್ಷೇತ್ರದಲ್ಲಿ ಕೇರಳದ ಪ್ರಮುಖ ಉತ್ಸವವಾದ ಓಣಂ ಆದ 28 ದಿನಗಳ ಬಳಿಕ ಅದ್ದೂರಿಯಾಗಿ ಆಚರಿಸಲಾಗುತ್ತದೆ.

ಚಿತ್ರಕೃಪೆ: Vaishni

ಅಪರೂಪದ ಬ್ರಹ್ಮನ ದೇವಾಲಯಗಳು:

ಅಪರೂಪದ ಬ್ರಹ್ಮನ ದೇವಾಲಯಗಳು:

ಇದರ ವಿಶೇಷತೆ ಎಂದರೆ ಇದೊಂದು ಹೈನುಗಳಿಗೆ (ಆಕಳು, ದನ, ಎತ್ತುಗಳು) ಮುಡಿಪಾದ ಅದ್ಭುತ ಉತ್ಸವವಾಗಿದೆ. ಈ ಸಂದರ್ಭದಲ್ಲಿ ಎಡುಪ್ಪು ಕಲಾ ಎಂಬ ಬೃಹತ್ ಗಾತ್ರದ ಎತ್ತು, ಹೋರಿಗಳ ಪ್ರತಿಮೆಗಳನ್ನು ಜೇಡಿ ಮಣ್ಣಿನಲ್ಲಿ ನಿರ್ಮಿಸಿ ಅಲಂಕರಿಸಲಾಗುತ್ತದೆ. ನಂತರ ಆ ಪ್ರತಿಮೆಗಳನ್ನು ಓಚಿರಾ ದೇವಾಲಯಕ್ಕೆ ಮೆರವಣಿಗೆಯ ಮೂಲಕ ತರಲಾಗುತ್ತದೆ.

ಚಿತ್ರಕೃಪೆ: Vaishni

ಅಪರೂಪದ ಬ್ರಹ್ಮನ ದೇವಾಲಯಗಳು:

ಅಪರೂಪದ ಬ್ರಹ್ಮನ ದೇವಾಲಯಗಳು:

ಪರಬ್ರಹ್ಮ ದೇವಾಲಯ ಹಾಗೂ ಈ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಅತ್ಯಂತ ದೊಡ್ಡ ಉತ್ಸವ ಇದಾಗಿದ್ದು ಕ್ಷೇತ್ರದ ಎಲ್ಲ ಜನರು ಭಕ್ತಿ ಶೃದ್ಧೆಗಳಿಂದ ಈ ಉತ್ಸವದಲ್ಲಿ ಪಾಲ್ಗೊಳ್ಳುತ್ತಾರೆ.

ಚಿತ್ರಕೃಪೆ: Neon

ಅಪರೂಪದ ಬ್ರಹ್ಮನ ದೇವಾಲಯಗಳು:

ಅಪರೂಪದ ಬ್ರಹ್ಮನ ದೇವಾಲಯಗಳು:

ಪರಬ್ರಹ್ಮನಿಗೆಂದು ಸಾಂಕೇತಿಕವಾಗಿ ಪ್ರತಿಷ್ಠಾಪಿಸಲಾಗಿರುವ ಓಂಕಾರ ಮೂರ್ತಿ. ಪರ ಬ್ರಹ್ಮನೆಂದೂ ಸಹ ಇದನ್ನು ಈ ಮೂರ್ತಿಯನ್ನು ಉತ್ಸವ ಇತ್ಯಾದಿ ಸಂದರ್ಭಗಳಲ್ಲಿ ಪೂಜಿಸಲಾಗುತ್ತದೆ.

ಚಿತ್ರಕೃಪೆ: Vaishni

ಅಪರೂಪದ ಬ್ರಹ್ಮನ ದೇವಾಲಯಗಳು:

ಅಪರೂಪದ ಬ್ರಹ್ಮನ ದೇವಾಲಯಗಳು:

ಅಸೋತ್ರಾ ಬ್ರಹ್ಮನ ದೇವಾಲಯ : ರಾಜಸ್ಥಾನದ ಬಾರ್ಮರ್ ಜಿಲ್ಲೆಯ ಬಲೋತ್ರಾ ನಗರದ ಬಳಿ ಇರುವ ಅಸೋತ್ರಾ ಎಂಬ ಗ್ರಾಮದಲ್ಲಿ ಬ್ರಹ್ಮನ ಈ ದೇವಸ್ಥಾನವಿದೆ. ಬ್ರಹ್ಮರ್ಷಿ ಸಂತ ಖೇತಾರಾಂ ಜೀ ಮಹಾರಾಜ್ ಅವರಿಂದ ಈ ದೇವಾಲಯ ನಿರ್ಮಿಸಲ್ಪಟ್ಟಿದೆ. ಜೈಸಲ್ಮೇರಿನಲ್ಲಿ ದೊರೆಯುವ ಸುವರ್ಣ ಬಣ್ಣದ ಶಿಲೆಗಳಿಂದ ದೇವಾಲಯದ ಪ್ರವೇಶ ಕೋಣೆಯನ್ನು ನಿರ್ಮಿಸಲಾಗಿದ್ದರೆ, ಉಳಿದ ಭಾಗಗಳನ್ನು ನಿರ್ಮಿಸಲು ಜೋಧಪುರದ ಶಿಲೆಗಳನ್ನು ಬಳಸಲಾಗಿದೆ. ಮಾರ್ಬಲ್ ಶಿಲೆಯಲ್ಲಿ ಬ್ರಹ್ಮನ ಹಾಗೂ ಗಾಯಿತ್ರಿ ದೇವಿಯ ಶಿಲ್ಪಗಳನ್ನು ಕೆತ್ತಲಾಗಿದ್ದು ಪ್ರತಿಷ್ಠಾಪಿಸಲಾಗಿದೆ. ಅಲ್ಲದೆ ಸಪ್ತರ್ಷಿಗಳ ಹಾಗೂ ಇತರೆ ಸಾಧು ಸಂತರ ಪ್ರತಿಮೆಗಳನ್ನೂ ಕಾಣಬಹುದು.

ಚಿತ್ರಕೃಪೆ: wikipedia

ಅಪರೂಪದ ಬ್ರಹ್ಮನ ದೇವಾಲಯಗಳು:

ಅಪರೂಪದ ಬ್ರಹ್ಮನ ದೇವಾಲಯಗಳು:

ಆದಿ ಬ್ರಹ್ಮ ದೇವಾಲಯ : ಹಿಮಾಚಲ ಪ್ರದೇಶ ರಾಜ್ಯದ ಕುಲ್ಲು ಕುಲ್ಲು ಕಣಿವೆಗೆ ಸನೀಹದಲ್ಲಿರುವ ಭುಂತರ್ ಎಂಬ ಪ್ರದೇಶದಿಂದ ನಾಲ್ಕು ಕಿ.ಮೀ ಗಳಷ್ಟು ದೂರದಲ್ಲಿ ಖೊಂಖನ್ ಎಂಬ ಸ್ಥಳದಲ್ಲಿ ಆದಿ ಬ್ರಹ್ಮನ ಈ ದೇವಸ್ಥಾನವಿದೆ. ಕಟ್ಟಿಗೆಗಳನ್ನು ಬಳಸಿ ನಿರ್ಮಾಣ ಮಾಡಲಾಗಿರುವ ಈ ದೇವಸ್ಥಾನ ನೋಡಲು ಆಕರ್ಷಕವಾಗಿದೆ. ದೇವಸ್ಥಾನದ ಎರಡೂ ಬದಿಗಲ್ಲಿ ಇತರೆ ಎರಡು ದೇಗುಲಗಳಿದ್ದು ಮಧ್ಯದಲ್ಲಿ ಬ್ರಹ್ಮನಿಗೆ ಮುಡಿಪಾದ ಈ ದೇವಾಲಯವಿದೆ. ಎಡಕ್ಕೆ ಗಡ್ ಜೋಗಿಣಿಯ ಹಾಗೂ ಬಲಕ್ಕೆ ಮಣಿಕರಣ ಜೋಗಿಣಿಯ ದೇಗುಲಗಳಿವೆ.

ಚಿತ್ರಕೃಪೆ: kullutourism.com

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X