Search
  • Follow NativePlanet
Share
» »ಚಿಂತೆಯಿಲ್ಲದೆ ತೇಲಿ... ಈ ದ್ವೀಪದಲ್ಲಿ...

ಚಿಂತೆಯಿಲ್ಲದೆ ತೇಲಿ... ಈ ದ್ವೀಪದಲ್ಲಿ...

ಅವು ಹವಳದ ದಿಬ್ಬಗಳಿಂದ ಕೂಡಿದ ದ್ವೀಪ ಸಮೂಹ... ಸುತ್ತಲೂ ಎಲ್ಲೆಲ್ಲೂ ನೀರಿನ ರಾಶಿ... ಒಮ್ಮೆ ಭೂಮಿಯ ಮೇಲೆ ಇದ್ದೇನೋ ಇಲ್ಲೆವೋ ಎನ್ನುವ ಗೊಂದಲ... ಅಬ್ಬ! ನೆನೆದುಕೊಂಡರೇ ಇಷ್ಟು ರೋಮಾಂಚನವಾಗುವ ಈ ಸ್ಥಳಕ್ಕೆ ಭೇಟಿ ನೀಡಿದರೆ ಹೇಗಿರಬಹುದು ಅಲ್ಲವಾ

By Divya

ಅವು ಹವಳದ ದಿಬ್ಬಗಳಿಂದ ಕೂಡಿದ ದ್ವೀಪ ಸಮೂಹ... ಸುತ್ತಲೂ ಎಲ್ಲೆಲ್ಲೂ ನೀರಿನ ರಾಶಿ... ಒಮ್ಮೆ ಭೂಮಿಯ ಮೇಲೆ ಇದ್ದೇನೋ ಇಲ್ಲೆವೋ ಎನ್ನುವ ಗೊಂದಲ... ಅಬ್ಬ! ನೆನೆದುಕೊಂಡರೇ ಇಷ್ಟು ರೋಮಾಂಚನವಾಗುವ ಈ ಸ್ಥಳಕ್ಕೆ ಭೇಟಿ ನೀಡಿದರೆ ಹೇಗಿರಬಹುದು ಅಲ್ಲವಾ? ನಿಜಾ, ಕೇರಳ ಕರಾವಳಿ ತೀರದಲ್ಲಿ ಬರುವ ಈ ತಾಣ ಅರಬ್ಬೀ ಸಮುದ್ರದಲ್ಲಿದೆ. ಲಕ್ಷದ್ವೀಪ ಸಮೂಹ ಎಂದು ಕರೆಯಲ್ಪಡುವ ಈ ತಾಣದಲ್ಲಿ ಹೆಸರಿಗೆ ತಕ್ಕಂತೆ ಲಕ್ಷಗಟ್ಟಲೇ ದ್ವೀಪ ಸಮೂಹಗಳೇನು ಇಲ್ಲ. 36 ದ್ವೀಪಗಳ ಸಮೂಹವಿದೆಯಷ್ಟೆ.

ಈ ದ್ವೀಪ ಸಮೂಹದ ವಿಸ್ತೀರ್ಣ 32 ಚದರ ಕಿ.ಮೀ. ಅದರಲ್ಲಿ 12 ಹವಳ ದ್ವೀಪಗಳು, 5 ಆಳ ಸಾಗರ ಎಂದು ಕರೆಯಲಾಗುತ್ತದೆ. 11 ಜನ ನಿಬಿಡ ದ್ವೀಪಗಳಿವೆ. ಜನ ವಾಸ ದ್ವೀಪಗಳೆಂದರೆ ಅಗಟ್ಟಿ, ಅಮಿನಿ, ಅನ್ಡ್ರೋಟ್, ಬಂಗಾರಂ, ಚಿತ್ರ, ಚೆತ್ಲಾತ್, ಕದ್ಮತ್ ಕಲ್ವೇನಿ, ಕವರಟ್ಟಿ, ಕಿಲ್ತಾನ್ ಮತ್ತು ಮನಿಕಾಯ್. ಪ್ರವಾಸೋದ್ಯಮ ಹಾಗೂ ಮೀನುಗಾರಿಕೆಯೇ ಇಲ್ಲಿಯ ಜನರ ಮುಖ್ಯ ಉದ್ಯೋಗ. ಈ ದ್ವೀಪ ಸಮೂಹದಲ್ಲಿ ಬಂಗಾರಂ, ಕವರಟ್ಟಿ, ಅಗಟ್ಟಿ ಮನಿಕಾಮ್ ಹಾಗೂ ಕದ್ಮತ್ ಬಹಳ ಆಕರ್ಷಕ ಪ್ರವಾಸತಾಣ ಎಂದು ಗುರುತಿಸಲಾಗಿದೆ.

ಲಕ್ಷದ್ವೀಪದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ!

Lakshadweep Islands Tourism

PC: flickr.com

ಬಂಗಾರಂ ದ್ವೀಪ
ಬಿಳಿ ಬಣ್ಣದ ಅಲೆಗಳಿಂದ ಮನ ಸೆಳೆಯುವ ಈ ದ್ವೀಪ ತೆಂಗಿನ ಮರಗಳಿಂದ ಆವೃತ್ತವಾಗಿದೆ. ಇದು ಸುಮಾರು 120 ಎಕರೆ ಪ್ರದೇಶವನ್ನು ಆವರಿಸಿದೆ. ಅಲ್ಲದೆ ವಿವಿಧ ಬಗೆಯ ಪಕ್ಷಿಗಳು, ಮೀನು, ಮುಳ್ಳಂದಿ ಮತ್ತು ಗಿಳಿಗಳ ಸಮೂಹ ಪ್ರವಾಸಿಗರ ಮನ ಸೆಳೆಯುತ್ತವೆ.

Lakshadweep Islands Tourism

PC: flickr.com

ಕವರಟ್ಟಿ ದ್ವೀಪ
ಲಕ್ಷದ್ವೀಪದ ಸಮೂಹದಲ್ಲಿಯೇ ಹೆಚ್ಚು ಗಮನ ಸೆಳೆಯುವ ಕವರಟ್ಟಿ ಲಕ್ಷದ್ವೀಪ ಕೇಂದ್ರಾಡಳಿ ಪ್ರದೇಶದ ರಾಜಧಾನಿ. ಪಾರಂಪರಿಕ ಪ್ರವಾಸ ತಾಣ, ಮ್ಯೂಸಿಯಂ ಹಾಗೂ ಮಸೀದಿಗಳು ಇಲ್ಲಿವೆ. ಬೆಳ್ಳನೆಯ ಮರಳು ತೀರವೂ ಇಲ್ಲಿಯ ಪ್ರಮುಖ ಆಕರ್ಷಣೆ ಎಂದು ಹೇಳಬಹುದು.

Lakshadweep Islands Tourism

PC: wikimedia.com

ಅಗಟ್ಟಿ ದ್ವೀಪ
ಸ್ಥಳೀಯ ವಿಮಾನ ನಿಲ್ದಾಣವನ್ನು ಹೊಂದಿರುವ ಈ ದ್ವೀಪಕ್ಕೆ ಲಕ್ಷದ್ವೀಪದ ಪ್ರವೇಶದ್ವಾರ ಎಂದು ಕರೆಯುತ್ತಾರೆ. ಲಕ್ಷದ್ವೀಪಕ್ಕೆ ವಿಮಾನ ಸಂಪರ್ಕ ಕಲ್ಪಿಸಿರುವ ಏಕೈಕ ದ್ವೀಪ ಇದು.

Lakshadweep Islands Tourism

PC: flickr.com

ಮನಿಕಾಯ್ ದ್ವೀಪ
ಇಲ್ಲಿರುವ ದ್ವೀಪಗಳಲ್ಲಿಯೇ ಎರಡನೇ ಅತಿದೊಡ್ಡ ದ್ವೀಪ ಎಂದು ಕರೆಯುತ್ತಾರೆ. ಇಲ್ಲಿಯ ಜನರ ಸಂಪ್ರದಾಯ ದಕ್ಷಿಣ ಭಾರತದ ಸಂಪ್ರದಾಯ ಮಿಶ್ರಣದಿಂದ ಕೂಡಿದೆ ಎಂದು ಹೇಳಬಹುದು. ಇಲ್ಲಿಯ ಕಲೆಯು ಹೆಚ್ಚು ಸಾಂಪ್ರದಾಯಿಕ ಮಹತ್ವವನ್ನು ಪಡೆದುಕೊಂಡಿದೆ.

Lakshadweep Islands Tourism

PC: wikipedia.com

ಕದ್ಮತ್ ದ್ವೀಪ
ಈ ದ್ವೀಪವು ಹೆಚ್ಚು ಶುಭ್ರತೆಯಿಂದ ಕೂಡಿದೆ. ಪ್ರವಾಸಿಗರನ್ನು ಹೆಚ್ಚು ಆಕರ್ಷಿಸುವ ಈ ದ್ವೀಪದಲ್ಲಿ ಸೂರ್ಯ ಕಿರಣದ ಸ್ನಾನ ಮಾಡಬಹುದು. ಅಲ್ಲದೆ ಅನೇಕ ಜಲಕ್ರೀಡೆಯನ್ನು ಆಡಲು ಅವಕಾಶವಿದೆ.

Lakshadweep Islands Tourism

PC: wikipedia.com

ಬೇಕಾದಂತೆ ಇದೆ.
ಇಲ್ಲಿ ಎಲ್ಲಾ ಬಗೆಯ ಊಟ-ತಿಂಡಿಗಳು ದೊರೆಯುತ್ತವೆ. ವಸತಿ ವ್ಯವಸ್ಥೆಗಾಗಿ ರೆಸಾರ್ಟ್, ಕುಟೀರಗಳು ಹಾಗೂ ಸರಕಾರಿ ವಸತಿಗೃಹಗಳ ಸೌಲಭ್ಯವಿದೆ. ಅನುಕೂಲಕರ ದರದಲ್ಲೇ ಎಲ್ಲವೂ ಲಭ್ಯವಿರುವುದರಿಂದ ಪ್ರವಾಸಕ್ಕೆ ಯಾವ ಚಿಂತೆಯಿಲ್ಲದೆಯೇ ಬರಬಹುದು.

ಲಕ್ಷದ್ವೀಪಿಗೆ ಹೋಗುವ ಮಾರ್ಗ

Read more about: kerala
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X