Search
  • Follow NativePlanet
Share
» »ಅಂದು ರಾರಾಜಿಸುತ್ತಿದ್ದ ಇಂದಿನ ಮಾಜಿ ರಾಜಧಾನಿಗಳು

ಅಂದು ರಾರಾಜಿಸುತ್ತಿದ್ದ ಇಂದಿನ ಮಾಜಿ ರಾಜಧಾನಿಗಳು

By Vijay

ಭಾರತವು, ಬ್ರಿಟೀಷರಾಳುತ್ತಿದ್ದ ಸಮಯದಿಂದ ಹಿಡಿದು ಸ್ವಾತಂತ್ರ್ಯ ಪಡೆಯುವವರೆಗೆ ಸಾಕಷ್ಟು ಬದಲಾವಣೆಗೊಳಪಟ್ಟಿದ್ದಿರುವುದಲ್ಲದೆ ಸ್ವಾತಂತ್ರ್ಯ ಸಿಕ್ಕ ನಂತರವೂ ಕೆಲ ಸಮಯದವರೆಗೆ ನಿರಂತರ ಆಡಳಿತಾತ್ಮಕ ಬದಲಾವಣೆ ಕಂಡಿದೆ. ಇಂತಹ ಬದಲಾವಣೆಗಳಲ್ಲಿ ರಾಜಧಾನಿಗಳ ಬದಲಾವಣೆಯೂ ಒಂದು.

ಹೌದು, ಭಾರತದ ಕೆಲವು ಸ್ಥಳಗಳು ಒಂದು ಕಾಲದಲ್ಲಿ ಆಯಾ ರಾಜ್ಯಗಳ ರಾಜಧಾನಿಗಳಾಗಿ ಮೆರೆದು ತದ ನಂತರ ಆ ಸ್ಥಾನಮಾನಗಳನ್ನು ತ್ಯಜಿಸಬೇಕಾದ ಅನಿವಾರ್ಯತೆ ಉಂಟಾಗಿ ಮಾಜಿ ರಾಜಧಾನಿ ಎಂಬ ಪಟ್ಟವನ್ನು ಹೊತ್ತುಕೊಂಡು ನಿಲ್ಲ ಬೇಕಾಯಿತು. ಮಾಜಿಗಳಾದರೂ ಈ ನಗರಗಳ ಗಮ್ಮತ್ತೇನೂ ಕಡಿಮೆಯಾಗಿಲ್ಲ.

ನಿಮಗಿಷ್ಟವಾಗಬಹುದಾದ : ಭಾರತದ ಮೊದಲ 25 ಸ್ವಚ್ಛ ನಗರಗಳು

ಹಿಂದೊಮ್ಮೆ ರಾಜಧಾನಿಗಳಾಗಿದ್ದರಿಂದ ಸಾಕಷ್ಟು ಅಭಿವೃದ್ಧಿಗಳನ್ನು ಕಂಡಿರುವ ಈ ನಗರಗಳು ಪ್ರಮುಖ ಪ್ರವಾಸಿ ಕೇಂದ್ರಗಳಾಗಿಯೂ ಹೆಸರುಗಳಿಸಿವೆ. ಅಲ್ಲದೆ, ಅದೆಷ್ಟೊ ಜನರಿಗೆ ಈ ಸ್ಥಳಗಳು ಹಿಂದೆ ರಾಜಧಾನಿಗಳಾಗಿತ್ತೆಂಬ ಸಂಗತಿಯೂ ಗೊತ್ತಿರಲಿಕ್ಕಿಲ್ಲ.

ಪ್ರಸ್ತುತ ಲೇಖನದಲ್ಲಿ ಹಿಂದೆ ಯಾವ್ಯಾವ ಸ್ಥಳಗಳು ಯಾವ್ಯಾವ ರಾಜ್ಯಗಳಿಗೆ ರಾಜಧಾನಿಗಳಾಗಿತ್ತೆಂಬುದರ ಕುರಿತು ತಿಳಿಯಿರಿ. ಈ ಸ್ಥಳಗಳಿಗೆ ಪ್ರವಾಸ ಹೋದಾಗ, ಹಿಂದೆ ಸ್ಥಳಗಳು ಯಾವ ರೀತಿ ವೈಭೋಗದಿಂದ ಮೆರೆದಿತ್ತೆಂಬ ಕಲ್ಪನೆಯನ್ನು ಕಲ್ಪಿಸಿಕೊಂಡು ಸಂತಸಪಡಿ.

ಗಮನಿಸಿ : ಕೆಲವು ನಗರಗಳು ಕೆಲವು ಪ್ರದೇಶಗಳಿಗೆ ಮಾಜಿ ರಾಜಧಾನಿಯಾದರೂ ಪ್ರಸ್ತುತ ನಿರ್ದಿಷ್ಟ ರಾಜ್ಯಗಳ ಹಾಲಿ ರಾಜಧಾನಿಯಾಗಿವೆ.

ಮಾಜಿ ರಾಜಧಾನಿಗಳು :

ಮಾಜಿ ರಾಜಧಾನಿಗಳು :

ಶಿಲ್ಲಾಂಗ್ : ಮೋಡಗಳು ಹಾಗೂ ಮಳೆಗಳ ತವರೂರೆಂದೆ ಹೇಳಬಹುದಾದ ಮೇಘಾಲಯ ರಾಜ್ಯದ ರಜಧಾನಿ ನಗರ ಶಿಲ್ಲಾಂಗ್ 1971 ರವರೆಗೆ ಆಸ್ಸಾಂ ಹಾಗೂ ಮೇಘಾಲಯ ರಾಜ್ಯಗಳಿಗೆ ಜಂಟಿಯಾಗಿ ರಾಜಧಾನಿಯಾಗಿತ್ತು. ದಿಸ್ಪುರ್ ರೂಪಗೊಂಡ ನಂತರ ಶಿಲ್ಲಾಂಗ್ ಮೇಘಾಲಯದ ಪಾಲಾಯಿತು. ಶಿಲ್ಲಾಂಗ್ ಕುರಿತು ಸಮಗ್ರವಾಗಿ ತಿಳಿಯಲು ಕ್ಲಿಕ್ ಮಾಡಿ ಶಿಲ್ಲಾಂಗ್ ಕೈಪಿಡಿ

ಚಿತ್ರಕೃಪೆ: Prateek Rungta

ಮಾಜಿ ರಾಜಧಾನಿಗಳು :

ಮಾಜಿ ರಾಜಧಾನಿಗಳು :

ಕೊಲ್ಕತ್ತಾ : ಕೇವಲ ಭಾರತಕ್ಕೆ ಮಾತ್ರವಲ್ಲದೆ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ರಾಜಧಾನಿಯಾಗಿ ಕೊಲ್ಕತ್ತಾ ಕಾರ್ಯನಿರ್ವಹಿಸಿದೆ. ನಂತರ ಪೋರ್ಟ್ ಬ್ಲೇರ್ ಅನ್ನು1956 ರಲ್ಲಿ ಈ ದ್ವೀಪ ಸಮೂಹಗಳ ಅಧಿಕೃತ ರಾಜಧಾನಿಯನ್ನಾಗಿ ಘೋಷಿಸಲಾಯಿತು. ಆದಾಗ್ಯೂ ಕೊಲ್ಕತ್ತಾ ನ್ಯಾಯಾಂಗ ವಿಷಯಕ್ಕೆ ಸಂಬಂಧಿಸಿದಂತೆ ರಾಜಧಾನಿಯಾಗಿ ಮುಂದುವರೆದಿದೆ. ಅಂಡಮಾನ್ ಮತ್ತು ನಿಕೋಬಾರ್ ಸತ್ಯಗಳು

ಚಿತ್ರಕೃಪೆ: Abhijit Kar Gupta

ಮಾಜಿ ರಾಜಧಾನಿಗಳು :

ಮಾಜಿ ರಾಜಧಾನಿಗಳು :

ಮುಂಬೈ : ಮಹಾರಾಷ್ಟ್ರದ ರಾಜಧಾನಿನಗರವಾದ ಮುಂಬೈ ಕೇಂದ್ರಾಡಳಿತ ಪ್ರದೇಶವಾದ ದಾದ್ರಾ ಮತ್ತು ನಗರಹವೇಲಿಯ ರಾಜಧಾನಿಯಾಗಿ 1954 -1961 ರವರೆಗೆ ಕಾರ್ಯ ನಿರ್ವಹಿಸಿತ್ತು. ಮುಂಬೈನ ಜನಜೀವನ ಹೇಗಿದೆ ಗೊತ್ತೆ? ಇಲ್ಲಿ ಕ್ಲಿಕ್ ಮಾಡಿ ಮುಂಬೈ ಎಂಬ ಮಾಯಾಲೋಕ

ಚಿತ್ರಕೃಪೆ: Skye Vidur

ಮಾಜಿ ರಾಜಧಾನಿಗಳು :

ಮಾಜಿ ರಾಜಧಾನಿಗಳು :

ಪಣಜಿ : ಮುಂಬೈ ನಂತರ ಪಣಜಿ ಕೇಂದ್ರಾಡಳಿತ ಪ್ರದೇಶವಾದ ದದ್ರಾ ಮತ್ತು ನಗರಹವೇಲಿಗೆ 1961-1987 ರವರೆಗೆ ರಾಜಧಾನಿಯಾಗಿ ಕಾರ್ಯ ನಿರ್ವಹಿಸಿದೆ. ನಂತರ ಸಿಲ್ವಾಸಾ ಇದರ ರಾಜಧಾನಿಯಾಯಿತು. ಪ್ರಸ್ತುತ ಪಣಜಿಯು ಗೋವಾದ ರಾಜಧಾನಿ ಪಟ್ಟಣವಾಗಿದೆ. ಪಣಜಿ ಕುರಿತು ತಿಳಿಯಿರಿ

ಚಿತ್ರಕೃಪೆ: Scott Dexter

ಮಾಜಿ ರಾಜಧಾನಿಗಳು :

ಮಾಜಿ ರಾಜಧಾನಿಗಳು :

ಅಹ್ಮದಾಬಾದ್ : ಮತ್ತೊಂದು ಕೇಂದ್ರಾಡಳಿತ ಪ್ರದೇಶವಾದ ದಮನ್ ಮತ್ತು ದೀವ್ ಗೆ ಅಹ್ಮದಾಬಾದ್ 1961-1963 ರವರೆಗೆ ರಾಜಧಾನಿಯಾಗಿ ಕಾರ್ಯನಿರ್ವಹಿಸಿದೆ. ನಂತರ 1963 -1987 ರವರೆಗೆ ಪಣಜಿಯು ಇದರ ರಾಜಧಾನಿ ಪಟ್ಟಣವಾಗಿತ್ತು. ತರುವಾಯ ದಮನ್ ಇದರ ರಾಜಧಾನಿಯಾಗಿದೆ. ಮೋದಿಯ ಮೋಡಿ ಮಾಡುವ ಗುಜರಾತ್

ಚಿತ್ರಕೃಪೆ: wake4jake

ಮಾಜಿ ರಾಜಧಾನಿಗಳು :

ಮಾಜಿ ರಾಜಧಾನಿಗಳು :

ಬಿಲಾಸ್ಪುರ್ : 1950 -1956 ರವರೆಗೆ ಬಿಲಾಸ್ಪುರವು ಹಿಮಾಚಲ ಪ್ರದೇಶದ ರಾಜಧಾನಿ ಪಟ್ಟಣವಾಗಿತ್ತು. ಇಂದಿಗೂ ಇದು ಹಿಮಾಚಲದ ಪಾರಂಪರಿಕ ಮಹತ್ವವುಳ್ಳ ಪ್ರದೇಶವಾಗಿದೆ. ಶಿಮ್ಲಾ ಪ್ರಸ್ತುತ ಹಿಮಾಚಲದ ರಾಜಧಾನಿಯಾಗಿದೆ. ಬಿಲಾಸಪುರದ ಕುರಿತು ಸ್ವಲ್ಪ ತಿಳಿದುಬಿಡಿ

ಚಿತ್ರಕೃಪೆ: Jini.ee06b056

ಮಾಜಿ ರಾಜಧಾನಿಗಳು :

ಮಾಜಿ ರಾಜಧಾನಿಗಳು :

ಮೈಸೂರು : ಕರ್ನಾಟಕ ರಾಜ್ಯದ ಸಾಂಸ್ಕೃತಿಕ ನಗರ ಎಂದೆ ಖ್ಯಾತಿಪಡೆದಿರುವ ಮೈಸೂರು ನಗರವು ಹಿಂದೆ ಕರ್ನಾಟಕದ ರಾಜಧಾನಿ ಪಟ್ಟಣವಾಗಿತ್ತು. ಆ ಸಮಯದಲ್ಲಿ ಕರ್ನಾಟಕ ಮೈಸೂರು ಸಂಸ್ಥಾನ ಎಂದೆ ಗುರುತಿಸಲ್ಪಡುತ್ತಿತ್ತು. ನಂತರ 1940 ರ ಸಮಯದಲ್ಲಿ ಬೆಂಘಳೂರು ರೂಪಗೊಂಡು ಅಖಂಡ ಕರ್ನಾಟಕದ ರಾಜಧಾನಿಯಾಗಿ ವೈಭವಗಳಿಸಿತು. ಮನಸೆಳೆವ ಮೈಸೂರು ಹಾಗೂ ಅದರ ಸುತ್ತಮುತ್ತಲು

ಚಿತ್ರಕೃಪೆ: Ashwin Kumar

ಮಾಜಿ ರಾಜಧಾನಿಗಳು :

ಮಾಜಿ ರಾಜಧಾನಿಗಳು :

ನಾಗಪುರ್ : 1861-1956 ರವರೆಗೆ ಮಧ್ಯಪ್ರದೇಶ ರಾಜ್ಯದ ರಾಜಧಾನಿ ನಗರವಾಗಿ ನಾಗಪುರ್ ಸೇವೆ ಸಲ್ಲಿಸಿದೆ. ನಂತರ ವಿದರ್ಭ ಪ್ರದೇಶವನ್ನು ಮಧ್ಯಪ್ರದೇಶದಿಂದ ಬೇರ್ಪಡಿಸಿ ಬಾಂಬೆ (ಇಂದಿನ ಮಹಾರಾಷ್ಟ್ರ) ಸಂಸ್ಥಾನದಲ್ಲಿ ಸೇರಿಸಿದ ತರುವಾಯ ನಾಗಪುರವು ತನ್ನ ಸ್ಥಾನಮಾನ ಕಳೆದುಕೊಂಡಿತಾದರೂ ಮಹಾರಾಷ್ಟ್ರದ ಎರಡನೇಯ ರಾಜಧಾನಿಯಾಗಿ ಮುಂದುವರೆಯಿತು. ನಾಗಪುರದ ಕುರಿತು ತಿಳಿಯ ಬೇಕಾದ ವಿಷಯಗಳು

ಚಿತ್ರಕೃಪೆ: anurag peshne

ಮಾಜಿ ರಾಜಧಾನಿಗಳು :

ಮಾಜಿ ರಾಜಧಾನಿಗಳು :

ಕಟಕ್ : 1936 -1948 ರವರೆಗೆ ಒಡಿಶಾ ರಾಜ್ಯದ ರಾಜಧಾನಿಯಾಗಿತ್ತು. ನಂತರ ಭುವನೇಶ್ವರವು ಒಡಿಶಾ ರಾಜ್ಯದ ರಾಜಧಾನಿಯಾಯಿತು. ಸಂಕ್ಷಿಪ್ತ ಕಟಕ್ ಪ್ರವಾಸಿ ಕೈಪಿಡಿ

ಚಿತ್ರಕೃಪೆ: vivek jena

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X