Search
  • Follow NativePlanet
Share
» »ಅದ್ಭುತ ಮೈಮಾಟದಿಂದ ಮನಸೆಳೆವ ಗೂಟಿ ಕೋಟೆ

ಅದ್ಭುತ ಮೈಮಾಟದಿಂದ ಮನಸೆಳೆವ ಗೂಟಿ ಕೋಟೆ

By Vijay

ರಾಷ್ಟ್ರೀಯ ಹೆದ್ದಾರಿ ಏಳರಲ್ಲಿ ಬೆಂಗಳೂರಿನಿಂದ ಹೈದರಾಬಾದ್ ಕಡೆಗೆ ಸಾಗುವಾಗ ವಿಶಾಲ ಬಯಲು ಪ್ರದೇಶದಲ್ಲಿ ಎಂಟೆದೆಯ ಬಂಟನಂತೆ ಸೆಟೆದುಉ ನಿಂತಿರುವ ಒಂದು ರಮಂಅಣಿಯ ಬೆಟ್ಟ ನೋಟವು ಸಾಮಾನ್ಯವಾಗಿ ಎಲ್ಲರಿಗೂ ಕಂಡುಬರುತ್ತದೆ. ದೂರದಿಂದ ಅದು ಒಂದು ಬೆಟ್ಟ ಅಂತೆನಿಸಿದರೂ ಹತ್ತಿರ ಹೋದಾಗ ಮಾತ್ರ ಗೊತ್ತಾಗುವುದು ಅದೊಂದು ಬೆಟ್ಟ ಕೋಟೆಯೆಂದು.

ಅದ್ಭುತ ಹಿನ್ನಿಲೆಯ ಹರಿಶ್ಚಂದ್ರಗಡ್

ಅದ್ಭುತ ಮೈಮಾಟದಿಂದ ಮನಸೆಳೆವ ಗೂಟಿ ಕೋಟೆ

ಚಿತ್ರಕೃಪೆ: Imrx100

ಇದು ಕೇವಲ ಒಂದು ಬೃಹತ್ ಕೋಟೆಯಲ್ಲ. ಒಂದು ಕೋಟೆಯೊಳಗೆ ಹಲವು ಚಿಕ್ಕ ಪುಟ್ಟ ಕೋಟೆಗಳನ್ನು ಹೊಂದಿರುವ ವಿಶಾಲವಾದ ರಚನೆ. ಯಾವ ಕಾಲದಲ್ಲಾದರೂ ಭೇಟಿ ಮಾಡುವಂತಿದ್ದರೂ ಮಳೆಗಾಲದ ಸಮಯ ಈ ಕೋಟೆಯ ವಾತಾವರಣ ಅತಿ ವಿಶೇಷವಾಗಿ ಕಂಡುಬರುತ್ತದೆ. ಮೇಲಿನಿಂದ ಸುಂದರವಾಗಿ ಕಾಣುವ ರಸ್ತೆ, ಹೊಲ-ಗದ್ದೆಗಳು, ಗ್ರಾಮದ ಮನೆಗಳೆಲ್ಲವೂ ಸುಂದರವಾಗಿ ಕಂಡುಬರುತ್ತವೆ.

ಅದ್ಭುತ ಮೈಮಾಟದಿಂದ ಮನಸೆಳೆವ ಗೂಟಿ ಕೋಟೆ

ಚಿತ್ರಕೃಪೆ: Ravi Aparanji

ಈ ಸುಂದರವಾದ, ಪ್ರವಾಸಿ ಮಹತ್ವ ಪಡೆದ ಬೆಟ್ಟ ಕೋಟೆಯನ್ನು ಗೂಟಿ ಕೋಟೆ ಎಂದು ಕರೆಯುತ್ತಾರೆ. ಶ್ರೀಮಂತವಾದ ಇತಿಹಾಸ ಹೊಂದಿರುವ ಈ ವಿಶಾಲ ಕೋಟೆಯು ಆಂಧ್ರಪ್ರದೇಶ ರಾಜ್ಯದ ಅನಂತಪುರ ಜಿಲ್ಲೆಯಲ್ಲಿರುವ ಗೂಟಿ ಪಟ್ಟಣದ ಬಳಿಯಲ್ಲಿ ಸ್ಥಿತವಿದೆ.

ಅದ್ಭುತ ಮೈಮಾಟದಿಂದ ಮನಸೆಳೆವ ಗೂಟಿ ಕೋಟೆ

ಚಿತ್ರಕೃಪೆ: Ravi Aparanji

ಸುಮಾರು ಏಳನೇಯ ಶತಮಾನದಲ್ಲಿ ಕಾಕತೀಯ ರಾಜರಿಂದ ನಿರ್ಮಿಸಲ್ಪಟ್ಟ ಈ ಕೋಟೆಯು ಕಾಕತೀಯರ ಅದ್ಭುತ ಶಿಲಾ ಶಿಲ್ಪ ಕಲೆಗೆ ಉತ್ತಮವಾದ ಉದಾಹರಣೆಯಾಗಿದ್ದು ಸಾಕಷ್ಟು ಇತಿಹಾಸಪ್ರಿಯ ಪ್ರವಾಸಿಗರನ್ನು ಆಕರ್ಷಿಸುತ್ತದೆ ಅಲ್ಲದೆ ಚಾರಣದಂತಹ ಚಟುವಟಿಕೆ ಇಷ್ಟಪಡುವ ಯುವ ಪ್ರವಾಸಿಗರಲ್ಲೂ ಸಾಕಷ್ಟು ಹೆಸರುವಾಸಿಯಾಗಿದೆ ಈ ಕೋಟೆ.

ಅದ್ಭುತ ಮೈಮಾಟದಿಂದ ಮನಸೆಳೆವ ಗೂಟಿ ಕೋಟೆ

ಚಿತ್ರಕೃಪೆ: Ravi Aparanji

ಸಮುದ್ರ ಮಟ್ಟದಿಂದ ಸುಮಾರು 350 ಮೀ. ಎತ್ತರವಿರುವ ಈ ಕೋಟೆ ಭಾರತದಲ್ಲೆ ಒಂದು ಅಪರೂಪದ ಕೋಟೆ ಎನ್ನಬಹುದಾಗಿದೆ ಕಾರಣ, ಈ ಕೋಟೆಯನ್ನು ನಿರ್ಮಿಸಲಾದ ರೀತಿ. ಕೇವಲ ಒಂದು ವಿಶಾಲ ಕೋಟೆ ರಚನೆಯಾಗಿರದೆ ಇದರೊಳಗೆ ಹದಿನೈದು ಇತರೆ ಕೋಟೆಗಳು ಹಾಗೂ ಅವುಗಳಿಗಿರುವ ಪ್ರತ್ಯೇಕ ದ್ವಾರಗಳನ್ನು ಕಾಣಬಹುದಾಗಿದೆ.

ಅದ್ಭುತ ಮೈಮಾಟದಿಂದ ಮನಸೆಳೆವ ಗೂಟಿ ಕೋಟೆ

ಚಿತ್ರಕೃಪೆ: Ravi Aparanji

ಅಲ್ಲದೆ, ಕಾಕತೀಯರು ಏಕಶಿಲಾ ಬಂಡೆಗಳಲ್ಲಿ ಶಿಲ್ಪಕಲೆ, ಕೆತ್ತನೆ ಕೆಲಸಗಳಿಗೆ ಹೆಸರುವಾಸಿಯಾದವರು, ಹೀಗಾಗಿ ಅವರ ರೀತಿಯ ವಾಸ್ತು ಶೈಲಿಗೆ ಸಾಕ್ಷಿಯಾಗಿ ನಿಂತಿದೆ ಈ ಕೋಟೆ. ಆಂಧ್ರಪ್ರದೇಶದ ಸಾಮ್ಪ್ರದಾಯಿಕ ಸ್ಥಳಗಳ ಪಟ್ಟಿಯಲ್ಲಿ ಈ ಕೋಟೆಯ ಹೆಸರನ್ನು ಉಲ್ಲೇಖಿಸಲಾಗಿದ್ದು, ಭಾರತ ಸರ್ಕಾರದ ರಕ್ಷಿಸಲ್ಪಟ್ಟ ಸ್ಮಾರಕಗಳಲ್ಲಿ ಇದೂ ಸಹ ಒಂದಾಗಿದೆ.

ಅದ್ಭುತ ಮೈಮಾಟದಿಂದ ಮನಸೆಳೆವ ಗೂಟಿ ಕೋಟೆ

ಚಿತ್ರಕೃಪೆ: Chittichanu

ಕೋಟೆಯ ಆವರಣದಲ್ಲಿ ಲಕ್ಷ್ಮಣ ತೀರ್ಥ ಎಂಬ ಕೊಳವಿದೆ. ಇದರಲ್ಲಿನ ನೀರು ಯಾವ ಸಮಯದಲ್ಲೂ ಬತ್ತುವುದಿಲ್ಲ ಎನ್ನಲಾಗಿದೆ. ಆದರೆ ಇದಕ್ಕೆ ನೀರುಣಿಸುವ ಮುಖ್ಯ ನೀರಿನ ಮೂಲ ಯಾವುದೆಂದು ಇಂದಿಗೂ ತಿಳಿದಿಲ್ಲವಂತೆ. ಅಲ್ಲದೆ ನಾಗೇಶ್ವರಸ್ವಾಮಿ, ರಾಮಸ್ವಾಮಿ ಹಾಗೂ ಲಕ್ಷ್ಮಿ ನರಸೀಹರ ದೇವಾಲಯಗಳನ್ನು ಇಲ್ಲಿ ಕಾಣಬಹುದಾಗಿದೆ.

ಭಾರತದಲ್ಲಿ ನೋಡಬಹುದಾದ ಕೆಲವು ಅತ್ಯದ್ಭುತ ಕೋಟೆಗಳು

ಆಂಧ್ರಪ್ರದೇಶ ಪ್ರವಾಸೋದ್ಯಮವು ಈ ತಾಣಕ್ಕೆ ತಲುಪಲು ಗೂಟಿಯಿಂದ ಬಸ್ಸುಗಳ ಸೇವೆ ಒದಗಿಸಿದೆ. ಅಲ್ಲದೆ ದಕ್ಷಿಣ ಕೇಂದ್ರೀಯ ರೈಲ್ವೇಯ ಐದು ಡಿಸೆಲ್ ಲೋಕೋಮೋಟಿವ್ ಡಿಪೋಗಳ ಪೈಕಿ ಗೂಟಿಯೂ ಸಹ ಒಂದಾಗಿದೆ ಅಲ್ಲದೆ ಗೂಟಿ ಜಂಕ್ಷನ್ ರೈಲು ನಿಲ್ದಾಣವು ಭಾರತದ ಪ್ರಮುಖ ನಗರಗಳೊಂದಿಗೆ ಸುಲಲಿತವಾದ ಸಂಪರ್ಕ ಹೊಂದಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X